ಬೆಂಗಳೂರು: ಸದ್ಯ ಎಲ್ಲೆಲ್ಲೂ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋದ ಬಗ್ಗೆ ಭಾರೀ ಚರ್ಚೆಗಳು ನಡೆತಿದೆ. ಒಂದೆಡೆ ರಮೇಶ್ ರಾಜೀನಾಮೆಗೆ ಭಾರೀ ಒತ್ತಾಯ ಕೇಳಿಬರುತ್ತಿದೆ. ಇದೀಗ ಸುಪ್ರೀಂ ಕೋರ್ಟ್ ವಕೀಲ ಸಂಕೇತ ಏಣಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಿಡಿಯೋದಲ್ಲಿ ಬೆಳಗಾವಿ ಪ್ರತ್ಯೇಕ ರಾಜ್ಯ ಅಂತ ರಮೇಶ್ ಎನ್ನುತ್ತಾರೆ. ಇದು ಕರ್ನಾಟಕ ಅಖಂಡತೆ ವಿರುದ್ಧ ಮಾತನಾಡಿದ್ದಾರೆ. ಈ ನಿಟ್ಟಿನಲ್ಲಿ ರಮೇಶ್ ಜಾರಕಿಹೊಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಅಲ್ಲದೆ ಬೆಳಗಾವಿ ಕನ್ನಡ ಪರ ಹೋರಾಟಗಾರರ ಬಗ್ಗೆಯೂ ಅವರು ಕೆಟ್ಟದಾಗಿ ಮಾತನಾಡಿದ್ದಾರೆ. ಈ ನಿಟ್ಟಿನಲ್ಲಿ ಅವರ ಕ್ಷಮೆ ಕೇಳಬೇಕು. ಅಲ್ಲದೆ ವಿಧಾನಸೌಧಕ್ಕೆ ರಮೇಶ್ ಜಾರಕಿಹೊಳಿ ಬರದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಇನ್ನು ರಮೇಶ್ ಅವರ ಸರಸಾಟ ಬಿಟ್ಟು ಕೂಡ ಬೇರೆ ನಾಲ್ಕು ಸಂಭಾಷಣೆ ಇದರಲ್ಲಿದೆ. ರಮೇಶ್ ಜಾರಕಿಹೊಳಿ ಅತಿ ಭ್ರಷ್ಟ ಸಿಎಂ ಯಡಿಯೂರಪ್ಪ ಎಂದು ಹೇಳಿದ್ದಾರೆ. ಒಬ್ಬ ಸಂಪುಟ ದರ್ಜೆ ಮಂತ್ರಿ ಸಿಎಂ ಬಗ್ಗೆ ಇಷ್ಟು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸಚಿವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ತಮ್ಮ ತೃಷೆ ತೀರಿಸಲು ಬಲೆ ಬೀಸಿದ್ದಾರೆ. ಸರ್ಕಾರದಲ್ಲಿ ತಮ್ಮ ಪ್ರಭಾವ ಬಳಸಿಕೊಂಡು ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನ್ಯಾಯಾಂಗ ತನಿಖೆ ಆಗಬೇಕು. ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಮೇಶ್ ಅಧಿಕಾರದಲ್ಲಿ ಇರುವ ವರೆಗೆ ಸಂತ್ರಸ್ತೆಗೆ ನ್ಯಾಯ ಸಿಗುವ ಸಾಧ್ಯತೆ ಇಲ್ಲ. ರಾಜೀನಾಮೆ ಪಡೆಯದೆ ಇದ್ದರೆ ರಾಷ್ಟ್ರಪತಿ ಭೇಟಿ ಮಾಡಿ ಮನವಿ. ಕರ್ನಾಟಕ ಭವನದ ಘನತೆಗೂ ಧಕ್ಕೆ ಉಂಟಾಗಿದೆ. ಸರ್ಕಾರಿ ಕಟ್ಟಡದಲ್ಲಿ ಇಂತಹ ವರ್ತನೆ ಅಸಹನೀಯ ಎಂದು ಅವರು ತಿಳಿಸಿದರು. ಬ್ರಿಜೇಶ್ ಕಾಳಪ್ಪ ಕಿಡಿ! ಇನ್ನೊಂದೆಡೆ ಸಚಿವ ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಂಡಲದಿಂದ ಕೈಬಿಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ವಕ್ತಾರ ಬೃಜೇಶ್ ಕಾಳಪ್ಪ ಮಾತನಾಡಿ, ಲೈಂಗಿಕ ವ್ಯವಹಾರ, ಹಾಗೂ ಕೊಟ್ಟ ಆಶ್ವಾಸನೆ ನಡೆಸಿಕೊಳ್ಳದೇ ಇರುವುದು ರಮೇಶ್ ಜಾರಕಿಹೊಳಿ ಮೇಲಿರುವ ಆರೋಪವಾಗಿದೆ. ಎಲ್ಲ ಗೌಪ್ಯ ಮಾಹಿತಿಯನ್ನು ರಮೇಶ್ ಬಿಟ್ಟುಕೊಟ್ಟಿದ್ದಾರೆ. ಹಾಗೂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು. ಸಚಿವರು ಹೇಗೆ ನಡೆದುಕೊಳ್ಳಬೇಕು ಎಂಬ ಮಾನದಂಡಕ್ಕೆ ವಿರುದ್ಧವಾಗಿ ಅವರು ನಡೆದುಕೊಂಡಿದ್ದಾರೆ. ಅರವಿಂದ್ ಲಿಂಬಾವಳಿ, ಲಕ್ಷ್ಮಣ ಸವದಿ, ಸಿಸಿ ಪಾಟೀಲ್ ವಿರುದ್ದ ಕೂಡ ಆರೋಪ ಇದೆ. ಬಿಜೆಪಿ ಮುಖಂಡರಾಗಿದ್ದ ಸಂಜಯ್ ಜೋಶಿ ವಿರುದ್ಧವೂ ಇಂತಹ ಆರೋಪ ಇತ್ತು. ಈ ನಿಟ್ಟಿನಲ್ಲಿ ಅವರಿಗೆ ಯಾವುದೇ ಹುದ್ದೆ ಕೊಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿ ಇಂತಹ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧವೂ ಕ್ರಮವಾಗಬೇಕು ಎಂದು ಆಗ್ರಹಿಸಿದ್ದಾರೆ. ಸಿ.ಡಿ ನಕಲಿ ಆಗಿದ್ದರೆ, ರಾಜಕೀಯ ಉದ್ದೇಶ ಇದ್ದರೆ ತನಿಖೆ ನಡೆಯಲಿ. ತನಿಖೆಯ ವರದಿ ಬರುವರೆಗೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲಿ. ಅರವಿಂದ ಲಿಂಬಾಳಿ ವಿರುದ್ದ ಲೈಂಗಿಕ ಕಿರುಕುಳ ಪ್ರಕರಣ ಇದ್ರೂ ಅವರು ಸಚಿವರಾಗಿದ್ದಾರೆ. ಕರ್ನಾಟಕ ಭವನ ದೆಹಲಿಯಲ್ಲಿರುವ ವಿಧಾನಸೌಧದ ರೀತಿ ಆದರೆ ರಮೇಶ್ ಜಾರಕಿಹೊಳಿ ಎಲ್ಲರೂ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
from India & World News in Kannada | VK Polls https://ift.tt/3b8GGwb