ಅಲ್ಯೂಮಿನಿಯಂ ಏಣಿಯೇ ಕಂಟಕ; 5 ವರ್ಷದಲ್ಲಿ 30 ಮಂದಿ ಬಲಿ, ವಿರಾಜಪೇಟೆಯಲ್ಲೆ 20 ಮಂದಿ ಸಾವು!

ಉದಿಯಂಡ ಜಯಂತಿ ಮಂದಣ್ಣ ಮಡಿಕೇರಿ: ಕೊಡಗುಜಿಲ್ಲೆಯಲ್ಲಿ ತೋಟ ಕೆಲಸಕ್ಕೆ ಬಳಸುತ್ತಿರುವ '' ಕಾರ್ಮಿಕರ ಜೀವಕ್ಕೆ ಸಂಚಕಾರ ತರುತ್ತಿದೆ. ತೋಟದ ಕೆಲಸಗಳಿಗೆ ಈ ಏಣಿ ಬಳಕೆ ಬೇಡ ಎಂದು ಜಿಲ್ಲಾಡಳಿತ ಆಗಿಂದಾಗ್ಗೆ ಎಚ್ಚರಿಸುತ್ತಿದೆಯಾದರೂ ಈ ಬಗ್ಗೆ ಸಂಪೂರ್ಣ ಜಾಗೃತಿ ಮೂಡದೇ ಇರುವುದು ಕಂಟಕವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಈ ಹಿಂದಿನಿಂದಲೂ 'ಅಲ್ಯೂಮಿನಿಯಂ ಏಣಿ'ಯಿಂದಾಗಿ 30ಕ್ಕೂ ಅಧಿಕ ಜೀವಹಾನಿಯಾಗಿದೆಯಾದರೂ ಇನ್ನೂ ಕೂಡ ಕಾಳು ಮೆಣಸು, ಮರಗಳ ರೆಂಬೆಕೊಂಬೆ ಕತ್ತರಿಸಲು ಹೆಚ್ಚಾಗಿ ಈ ಏಣಿಗಳನ್ನು ಒಳಸಲಾಗುತ್ತಿದೆ. ಕಾರ್ಮಿಕರು ತೋಟದಲ್ಲಿ ಏಣಿ ಹೊತ್ತು ಸಾಗುವ ಸಂದರ್ಭದಲ್ಲಿ ವಿದ್ಯುತ್‌ ತಂತಿಗಳ ಅರಿವಿಲ್ಲದೆ ಅಥವಾ ಏಣಿಗೆ ಬಾಗಿ ನಿಂತಿರುವ ವಿದ್ಯುತ್‌ ತಂತಿಗಳು ಸ್ಪರ್ಶಿಸಿ ಸ್ಥಳದಲ್ಲಿ ಕಾರ್ಮಿಕರು ಮೃತಪಡುತ್ತಿದ್ದಾರೆ. ವಿರಾಜಪೇಟೆ ತಾಲೂಕಿನಲ್ಲಿ ಹೆಚ್ಚು 5 ವರ್ಷದಲ್ಲಿ ಮೂರು ತಾಲೂಕಿಗೆ ಹೋಲಿಸಿದರೆ ವಿರಾಜಪೇಟೆ ತಾಲೂಕಿನಲ್ಲಿ 20 ಜನ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ 7 ಜನ ಪ್ರಾಣ ಕಳೆದುಕೊಂಡರೆ, ಮಡಿಕೇರಿ ತಾಲೂಕಿನಲ್ಲಿ ಮೊದಲ ಬಾರಿಗೆ 2019ರಲ್ಲಿ 3 ಜನ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು. 5 ವರ್ಷದಲ್ಲಿ 30 2016-17ರಲ್ಲಿ 6, 2017-18ರಲ್ಲಿ 7, 2018-19ರಲ್ಲಿ 9, 2019-20ರಲ್ಲಿ 7 ಹಾಗೂ 2020-21ನೇ ಸಾಲಿನಲ್ಲಿ 1 ಕಾರ್ಮಿಕರು ಅಲ್ಯೂಮಿನಿಯಂ ಏಣಿಗೆ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ಈ ಅವಘಡದಿಂದ ಪ್ರಾಣ ಕಳೆದುಕೊಳ್ಳುತ್ತಿರುವವರಲ್ಲಿ ಬಹುತೇಕರು ಕಾರ್ಮಿಕರೇ ಆಗಿದ್ದಾರೆ. ಬಿದಿರಿನ ಏಣಿ ಮಾಯ ಹಿಂದಿನ ಕಾಲದಲ್ಲಿ ತೋಟ ಕೆಲಸಗಳಿಗೆ 20ಕ್ಕೂ ಹೆಚ್ಚಿನ ಅಡಿ ಎತ್ತರಕ್ಕಿರುವ ಬಿದಿರಿನ ಏಣಿಗಳನ್ನು ಬಳಸಲಾಗುತ್ತಿತ್ತು. ಕೆಲವು ತೋಟದ ಮಾಲೀಕರು ಇಂದಿಗೂ ಕೂಡ ಬಿದಿರಿನ ಏಣಿ ಬಳಸಿ ಕಾಳುಮೆಣಸು, ಮರ ಕೆಲಸಗಳನ್ನು ಮಾಡಿಸುತ್ತಾರೆ. ಇದರಿಂದ ಯಾವುದೇ ರೀತಿಯ ವಿದ್ಯುತ್‌ ಅವಘಡಗಳು ಸಂಭವಿಸುವುದಿಲ್ಲ. ಆದರೆ ಇಂದು ಬಿದಿರು ನಾಶವಾಗಿರುವುದರಿಂದ ಬಿದಿರಿನ ಏಣಿಯ ಬಳಕೆಯೂ ಕ್ಷೀಣಗೊಂಡಿದೆ. ಬಿದಿರು ಅವನತಿಯತ್ತ ಸಾಗುತ್ತಾ ಏಣಿಗಳು ಮಾಯವಾಗಿದ್ದು, ಅಗತ್ಯಕ್ಕೆ ತಕ್ಕಂತೆ ಬಿದಿರಿನ ಏಣಿಗಳು ದೊರೆಯದ ಕಾರಣ ಅಲ್ಯೂಮಿನಿಯಂ ಏಣಿಗಳು ಕಾರ್ಮಿಕರ ಬಾಳಿಗೆ ಯಮಪಾಶವಾಗಿದೆ. ಕಾರ್ಮಿಕರಲ್ಲಿ ಅರಿವು ಕಾರ್ಯಕ್ರಮ ಕಾರ್ಮಿಕರ ಸಾವು ಹೆಚ್ಚುತ್ತಿರುವ ಪರಿಣಾಮವಾಗಿ ವಿದ್ಯುತ್‌ ಸರಬರಾಜು ಇಲಾಖೆ ವತಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತ್ತು ಗ್ರಾಮ ಸಭೆಗಳಲ್ಲಿ ಅಲ್ಯೂಮಿನಿಯಂ ಏಣಿ ಬಳಸುವುದರಿಂದ ಉಂಟಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪತ್ರಿಕೆಗಳಲ್ಲಿ ಪ್ರಕಟಣೆ ನೀಡುತ್ತಾ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಆಯಾ ವಿಭಾಗದ ಸೆಕ್ಷನ್‌ ಅಧಿಕಾರಿಗಳು ಸೇರಿದಂತೆ ಇಲಾಖೆ ಅಧಿಕಾರಿಗಳು ಅರಿವು ಕಾರ್ಯಕ್ರಮದ ಮೂಲಕ ಅಲ್ಯೂಮಿನಿಯಂ ಏಣಿ ಬಳಸದಂತೆ ಸೂಚಿಸುತ್ತಿದ್ದಾರೆ.


from India & World News in Kannada | VK Polls https://ift.tt/2NYxUs1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...