ಉತ್ತರ ಕರ್ನಾಟಕ ಬಳಗ ಕತಾರ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ!

ಕತಾರ್‌: ಉತ್ತರ ಕರ್ನಾಟಕ ಬಳಗ ಕತಾರ್ ನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಸ್ತುತಃ ಕಾರ್ಯಕ್ರಮವು ದಿನಾಂಕ 19-03-2021 ರಂದು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಶ್ರೀಮತಿ ಪ್ರೀತಿ ಉಪಾಧ್ಯರವರು ವಹಿಸಿಕೊಂಡಿದ್ದರು. ಸ್ವಾಗತ ಭಾಷಣ ಮತ್ತು ವಂದನಾರ್ಪಣೆಯನ್ನು ಶ್ರೀಮತಿ ಪ್ರತಿಕ್ಷಾ ದಿವಾಕರ್ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಅತಿಥಿಗಳ ಮತ್ತು ಸಾಧಕ ಮಹಿಳಾಮಣಿಗಳ ಪರಿಚಯವನ್ನು ಅನ್ನಪೂರ್ಣ ಮುತ್ತುರಾಜ್ ರವರು ವಹಿಸಿಕೊಂಡಿದ್ದರು. ಈಗಿನ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದಾರೆ ಆದರೆ ಮನ್ನಣೆ ಸಿಗುವುದು ಮಾತ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವರಿಗೆ. ದೇಶದ ಯಶಸ್ಸಿನ ಹಿಂದೆ ಎಷ್ಟೋ ಕೋಟಿ ಹೆಣ್ಣುಮಕ್ಕಳ ಶ್ರಮವಿದೆ. ಅಂತಹ ಪರಿಶ್ರಮಕ್ಕೆ ಬೆಲೆ ನೀಡುತ್ತಿರುವದು ಉತ್ತರ ಕರ್ನಾಟಕ ಬಳಗ , ಕತಾರ್. ಸ್ತ್ರೀ ಪುರುಷರಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಅನ್ನುವದು ಈಗಾಗಲೇ ಸಾಬೀತಾಗಿದೆ, ಆದರೂ ಪುರುಷ ಪ್ರದಾನ ಸಮಾಜದಲ್ಲಿ ಎಷ್ಟೋ ಪ್ರತಿಭಾನ್ವಿತ ಮಹಿಳೆಯರು ಮೂಲೆಗುಂಪಾಗುತ್ತಿದ್ದಾರೆ. ಆದರೂ ಇಂತಹ ಸಮಾಜದ ಮುಂದೆ ಬಳಗ ಸಾಧಕ ಮಹಿಳೆಯರನ್ನು ಗುರುತಿಸಿ ಆತ್ಮ ಸ್ಥೈರ್ಯವನ್ನು ತುಂಬಿಸುವ ಕಾರ್ಯ ಉತ್ತರ ಕರ್ನಾಟಕ ಬಳಗ ಕತಾರ್ ದಿಂದ ನಡೆಯುತ್ತಿದೆ. ಇದರ ಜೊತೆಗೆ ಇನ್ನಿತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ ಮಹಿಳೆಯರನ್ನು ಗುರುತಿಸಿ ಉತ್ತರ ಕರ್ನಾಟಕ ಬಳಗ ಕತಾರ್ ವತಿಯಿಂದ ಸನ್ಮಾನವನ್ನು ಮಾಡಲಾಯಿತು ಅಂತಹ ಸಾಧಕ ಮಹಿಳಾ ಮಣಿಗಳೆಂದರೆ. 1. ಶ್ರೀಮತಿ ಶೋಭಾ ಎಂ ಸಿ (ಬೆಂಗಳೂರು) ಸುದ್ದಿ‌ವಾಹಿನಿ.- ಸುವರ್ಣ ನ್ಯೂಸ್ ವಿಶ್ವ ಮಹಿಳಾ ದಿನಕ್ಕೆ ರಾಜ್ಯದ ಅತ್ಯುತ್ತಮ ಸುದ್ದಿವಾಹಿನಿಯಾದ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಉತ್ತಮವಾದ ಸೇವೆ ಸಲ್ಲಿಸಿದ್ದಕ್ಕಾಗಿ ಮಹಿಳಾ ಸಾಧಕಿ ಸುವರ್ಣ ನ್ಯೂಸ್ ಸುದ್ದಿ ಮನೆಯ ತೆರೆ ಹಿಂದಿನ ಸ್ತ್ರೀ ಶಕ್ತಿ ಔಟ್ ಪುಟ್ ಎಡಿಟರ್ ಶ್ರೀ ಮತಿ ಎಂ ಸಿ ಶೋಭಾ ಅವರನ್ನು ಸನ್ಮಾನಿಸಲಾಯಿತು. 2. ಶ್ರೀಮತಿ ಜಯಾಮೂರ್ತಿ (ಇಟಲಿ) ಕನ್ನಡ ಭಾಷೆ ಮತ್ತು ಸಾಹಿತ್ಯ 35 ವರ್ಷಗಳಿಂದ ಇಟಲಿಯಲ್ಲಿರುವ ಇವರು ಕನ್ನಡದ ಹಲವಾರು ಕತೆ ಕಾದಂಬರಿಗಳನ್ನು ಇಟಾಲಿಯನ್ ಭಾಷೆಗೆ ಭಾಷಾಂತರ ಮಾಡಿದ್ದಾರೆ ಅದರ ಜೊತೆಗೆ 35ಕ್ಕೂ ಹೆಚ್ಷು ಪುಸ್ತಕಗಳನ್ನು ಬರೆದ ಇವರು ಅನಿವಾಸಿ ಕನ್ನಡಿಗರಾಗಿದ್ದಾರೆ. 3. ಶ್ರೀಮತಿ ವಿಧೂಷಿ ಶೃತಿ ಕುಲಕರ್ಣಿ (ಧಾರವಾಡ ) ಸಂಗೀತ ಕ್ಷೇತ್ರದಲ್ಲಿ ಗಾಯಕಿಯಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಸಂಗೀತ ಕ್ಷೇತ್ರದಲ್ಲಿನ ಅವರ ಸೇವೆಯನ್ನು ಗುರುತಿಸಿ ಬಳಗದಿಂದ ಸನ್ಮಾನಿಸಲಾಯಿತು. 4. ಶ್ರೀಮತಿ ಜಯಂತಿ ನಾಯಕ್ (ಓಬವ್ವ ಪೋಲಿಸ್ ಪಡೆ ವಿಜಯಪುರ) ಓಬವ್ವ ಪಡೆಯ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಇಲ್ಲಿಯವರೆಗೆ ಸುಮಾರು 15000 ಕ್ಕೂ ಹೆಚ್ಚು ಶಾಲಾ ಕಾಲೆಜು ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆಯ ತರಬೇತಿಯನ್ನು ನೀಡುತ್ತಾ ಸಾಗುತ್ತಿದ್ದಾರೆ.ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. 5. ಶ್ರೀಮತಿ ಜಸ್ಸಿಂತಾ. ಎಸ್. (ವಾಣಿ -ವಿಲಾಸ ಆಸ್ಪತ್ರೆ ಬೆಂಗಳೂರು ) ಕೋವಿಡ್ ನ‌ ಮಹಾಮಾರಿ ಸಂಧರ್ಭದಲ್ಲಿ ಕರೋನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಎಲ್ಲ ಮಹಿಳಾಮಣಿಗಳ ಸಾಧನೆಯನ್ನು ಗುರುತಿಸಿ ಉತ್ತರ ಕರ್ನಾಟಕ ಬಳಗ ಕಾತಾರ್ ನ ಸಂಸ್ಥಾಪಕ ಅಧ್ಯಕ್ಷರಾದ ಶಶಿಧರ ಹೆಬ್ಬಾಳರವರು ಅವರಿಗೆ ಸನ್ಮಾನ ಮತ್ತು ಪ್ರಮಾಣ ಪತ್ರವನ್ನು ವಿತರಿಸಿದರು. ಮುಖ್ಯ ಅತಿಥಿಗಳಾಗಿ ಮತ್ತು ಅವರ ಮಾತು 1. ಶ್ರೀಮತಿ ಅಭಿನಯ ಚಲನಚಿತ್ರ ನಾಯಕಿ ನಟಿ ಯವರು ಮಾತನಾಡಿ ಇಂತಹ ಮಹಿಳಾ ಸಾಧಕಿಯರಿರುವ ವೇದಿಕೆಯಲ್ಲಿ ಭಾಗವಹಿಸಿದ್ದಕ್ಕೆ ಸಂತೋಷ ಆಗುತ್ತಿದೆ ಹೆಣ್ಣು ಯಾವುದರಲ್ಲಿಯೂ ಕಡಿಮೆ ಇಲ್ಲ ಅಂತ ಹೇಳಿದರು. 2. ಶ್ರೀಮತಿ ಪ್ರಿಯದರ್ಶಿನಿ. ಡಿವೈಎಸ್ ಲೋಕಾಯುಕ್ತ ಚಾಮರಾಜನಗರ ರವರು ಮಾತನಾಡಿ ಮನೋಸ್ಥೈರ್ಯವನ್ನು ಹೆಚ್ಚಿಸುವ ಮಾತನಾಡಿ ಏನೇ ಕೆಲಸವಿದ್ದರೂ ಸಂಪರ್ಕಿಸಲು ಕರೆ ಕೊಟ್ಟರು. 3. . ಡಾ. ವಿಜಯಾ ಸರಸ್ವತಿ. ಉಪಕುಲಪತಿಗಳು ಸೇಂಟ್ ಮದರ್ ತೆರೆಸಾ ವಿಶ್ವವಿದ್ಯಾಲಯ ಆಸ್ಟ್ರೇಲಿಯಾ ಅವರು ತುಂಬಾ ಕ್ರಿಯಾಶೀಲರಾಗಿ ಮಾತನಾಡಿ ನಾವು ಎಲ್ಲ ಕ್ಷೇತ್ರದಲ್ಲಿ ಮುನ್ನುಗ್ಗಬೇಕು ಅಂತ ಹೇಳಿದರು. 4 . ಡಾ. ಆಶಾ ಬೆನಕಪ್ಪ. ಮಕ್ಕಳ ತಜ್ಞೆ. ಮತ್ತು ಸಲಹೆಗಾರರು ಮಾತನಾಡಿ ಒಬ್ಬ ತಾಯಿ ಮಗುವನ್ನು ಭೂಮಿಗೆ ತರಲು ಎಷ್ಟು ಶ್ರಮ ಪಡುತ್ತಾಳೆ ಅಂದು ಎಳೆ ಎಳೆಯಾಗಿ ವಿಡಿಯೋ ಮುಖಾಂತರ ವಿವರಿಸಿದರು. 5 . ಶ್ರೀಮತಿ ಆಶಾ ಶಿಜು. ಪ್ರಾಂಶುಪಾಲರು. ಬ್ರಿಲಿಯಂಟ್ ಇಂಟರ್ ನ್ಯಾಷನಲ್ ಸ್ಕೂಲ್ ಕತಾರ್ ಮಾತನಾಡಿ ಶಿಕ್ಷಣದ ಬಗ್ಗೆ ವಿವರಿಸಿ ಇಂತಹ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿದ್ದು ಸಂತೋಷವಾಗುತ್ತಿದೆ ಅಂತ ವಿವರಿಸಿದರು. 6 . ಡಾ.ಜ್ಯೋತಿ ಕುಲಕರ್ಣಿ.ಸಿಂಡಿಕೇಟ್ ಸದಸ್ಯರು, ಸೇಂಟ್ ಮದರ್ ತೆರೇಸಾ ವಿಶ್ವವಿದ್ಯಾಲಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಶಶಿಧರ ರವರು ಮಾತನಾಡಿ , ನಾವೆಲ್ಲರೂ ಹೆಣ್ಣು ಮಕ್ಕಳನ್ನು ತಾಯಿಯಂತೆ ಸಹೋದರಿಯರಂತೆ ಕಂಡಾಗ ಮಾತ್ರ ಗಾಂಧೀಜಿಯವರು ಕನಸಿಗೆ ಅರ್ಥ ಬಂದಂತಾಗುತ್ತದೆ. ನಾವು 21ನೆಯ ಶತಮಾನದಲ್ಲಿದ್ದಾಗಲೂ ಮಹಿಳೆಯರನ್ನು ಶೋಷಿಸುವ ಕಾರ್ಯ ನಡೆಯುತ್ತಿದೆ. ಮಹಿಳೆ ಸಮಾಜದ ಶಕ್ತಿ, ಮತೃ ರೂಪದ ಅವಳನ್ನು ನಾವೇಲ್ಲರೂ ಗೌರವಿಸಿ ಅವಳನ್ನು ಸನ್ಮಾನಿಸಬೇಕು ಎಂದರು. ಸುಮಾರು 3 ಘಂಟೆಗಳ ವರೆಗೆ ನಡೆದ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯವಾಯಿತು..


from India & World News in Kannada | VK Polls https://ift.tt/3wgG7cn

ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಿ ಮುಖ್ಯಮಂತ್ರಿಯವರನ್ನು ವಜಾಗೊಳಿಸಿ! ಸಿದ್ದರಾಮಯ್ಯ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ವಿರುದ್ಧ ಸಚಿವ ಕೆ.ಎಸ್‌ ಈಶ್ವರಪ್ಪ ಪತ್ರದ ಮೂಲಕ ದೂರು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಮುಖ್ಯಮಂತ್ರಿಯನ್ನು ವಜಾಗೊಳಿಸುವಂತೆ ವಿರೋಧ ಪಕ್ಷದ ನಾಯಕ ಆಗ್ರಹ ಮಾಡಿದ್ದಾರೆ. ಈ ಕುರಿತಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿಗಳ ವಿರುದ್ಧ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು ರಾಜ್ಯದ ಆಡಳಿತ ಕುಸಿದು ಬಿದ್ದಿರುವುಕ್ಕೆ ಸಾಕ್ಷಿಯಾಗಿದೆ. ರಾಜ್ಯಪಾಲರು ತಕ್ಷಣ ಮಧ್ಯೆಪ್ರವೇಶಿಸಿ ಮುಖ್ಯಮಂತ್ರಿಯವರನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಕ್ರಮಗಳ ಬಗ್ಗೆ ವಿರೋಧ ಪಕ್ಷದ ನಾಯಕನಾಗಿ ನಾನು ಮಾಡುತ್ತಾ ಬಂದಿರುವ ಆರೋಪಗಳಿಗೆ ಈಶ್ವರಪ್ಪ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಮಾತಿಗೆ ಬದ್ದರಾಗಿ ಉಳಿಯಬೇಕು. ಈಶ್ವರಪ್ಪನವರಿಂದ ಮೊದಲ ಬಾರಿ ಒಳ್ಳೆಯ ಕೆಲಸ! ಈಶ್ವರಪ್ಪನವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜಕೀಯ ಹಿತಾಸಕ್ತಿಗಿಂತ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಸಾರಿದ್ದಾರೆ ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಕ್ರಮಗಳು ಕೇವಲ ಗ್ರಾಮೀಣ ಅಭಿವೃದ್ದಿ ಇಲಾಖೆಯೊಂದಕ್ಕೆ ಸಂಬಂಧಿಸಿದ್ದಲ್ಲ, ಇದು ಸರ್ಕಾರದ ಪ್ರತಿಯೊಂದು ಇಲಾಖೆಯೊಳಗಿನ ಕರ್ಮಕಾಂಡ. ಬಿಜೆಪಿ ವರಿಷ್ಠರು ಈಶ್ವರಪ್ಪನವರ ಬಾಯಿಮುಚ್ಚಿಸಲು ಪ್ರಯತ್ನಿಸದೆ ಇತರ ಸಚಿವರೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಬೇಕು. ಮುಖ್ಯಮಂತ್ರಿಗಳ ವಿರುದ್ಧ ಈಶ್ವರಪ್ಪನವರು ರಾಜ್ಯಪಾಲರಿಗೆ ‌ಮಾತ್ರ ಆರೋಪ ಪಟ್ಟಿ ಸಲ್ಲಿಸದೆ, ಅದರ ಪ್ರತಿಯನ್ನು ಪ್ರಧಾನಿ ಮೋದಿ ಮತ್ತು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ಕಳಿಸಿದ್ದಾರೆ. ಅವರೆಲ್ಲರೂ ಆರೋಪ ಪಟ್ಟಿ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿ ಆಂತರಿಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯ ಮಾಡಿದ್ದಾರೆ. ರಾಜ್ಯ ಸರ್ಕಾರದ‌ ಖಜಾನೆ ಖಾಲಿಯಾಗಿರುವುದಕ್ಕೆ ಕೊರೊನಾ ವೈರಸ್ ಕಾರಣ ಅಲ್ಲ, ಈ ಸರ್ಕಾರಕ್ಕೆ ಅಂಟಿರುವ ಭ್ರಷ್ಟಾಚಾರದ ವೈರಸ್ ಕಾರಣ ಎನ್ನುವುದನ್ನು ಈಶ್ವರಪ್ಪನವರ ತನ್ನ ಸಂಶೋಧನೆ‌ ಮೂಲಕ ಬಹಿರಂಗ ಗೊಳಿಸಿದ್ದಾರೆ. ನಮ್ಮ ಸರ್ಕಾರ 10% ಸರ್ಕಾರ ಎಂದು ಆರೋಪಿಸಿದ್ದ ಪ್ರಧಾನಮಂತ್ರಿಯವರೇ, ನಿಮ್ಮದೇ ಸಚಿವರು ನಿಮಗೆ ಕಳಿಸಿರುವ ನಿಮ್ಮ ಸರ್ಕಾರದ ಜಾತಕಪತ್ರವನ್ನು ಪರಿಶೀಲಿಸಿ ನೀವೇ ರಾಜ್ಯಸರ್ಕಾರಕ್ಕೆ ಭ್ರಷ್ಟಾಚಾರದ ರೇಟಿಂಗ್ ಕೊಟ್ಟುಬಿಡಿ ಎಂದು ವ್ಯಂಗ್ಯವಾಗಿ ಟೀಕಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ, "ನಾ ಖಾವುಂಗಾ, ನಾ ಖಾನೆ ದೂಂಗಾ" ಎಂಬ ನಿಮ್ಮ ಜಗದ್ವಿಖ್ಯಾತ ಘೋಷಣೆಯನ್ನು ಬ "ಮೈ ಬಿ ಖಾವೂಂಗಾ, ತುಮ್ ಬಿ ಖಾವೋ" ಎಂದು ಬದಲಿಸಿ ಬಿಡಿ. ಆಪರೇಷನ್ ಕಮಲ‌ ಪ್ರಕರಣದ ತನಿಖೆಗೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ನೀಡಿರುವುದು, ರಾಜ್ಯದ ಬಿಜೆಪಿ ಸರ್ಕಾರ ಆಪರೇಷನ್ ಕಮಲ ಎಂಬ‌ ಅನೈತಿಕ ಚಟುವಟಿಕೆಯ ಅಕ್ರಮ ಶಿಶು ಎನ್ನುವ ನಮ್ಮ ಆರೋಪವನ್ನು ಪುಷ್ಠೀಕರಿಸಿದೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಇಲಾಖೆಯಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿ ಸಚಿವ ಕೆ.ಎಸ್.ಈಶ್ವರಪ್ಪ ರಾಜ್ಯಪಾಲ ವಜುಭಾಯ್ ವಾಲಾ ಸೇರಿ ಬಿಜೆಪಿ ಹೈಕಮಾಂಡ್ಗೆ ಪತ್ರದ ಮೂಲಕ ದೂರು ನೀಡಿದ್ದಾರೆ. ತಮ್ಮ ಇಲಾಖೆಗೆ ಬಿಡುಗಡೆಯಾದ 1,200 ಕೋಟಿ ರೂ.ಅನುದಾನ ಕುರಿತು ಹಸ್ತಕ್ಷೇಪ ಮಾಡುತ್ತಿದ್ದು, ಕೂಡಲೇ ಮಧ್ಯಪ್ರವೇಶ ಮಾಡಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.


from India & World News in Kannada | VK Polls https://ift.tt/2PM7iLk

ಸಿ.ಡಿ ಪ್ರಕರಣ: ಸಂತ್ರಸ್ತೆ ಯುವತಿ ವಾಸವಾಗಿದ್ದ ಪಿ.ಜಿ ಮಹಜರು ನಡೆಸಿದ ಎಸ್‌ಐಟಿ ಅಧಿಕಾರಿಗಳು!

ಬೆಂಗಳೂರು: ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿ ವಾಸವಾಗಿದ್ದ ಪಿಜಿಯನ್ನು ಎಸ್‌ಐಟಿ ಅಧಿಕಾರಿಗಳು ಗುರುವಾರ ಮಹಜರು ನಡೆಸಿದರು. ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದ ಯುವತಿ ಬೆಂಗಳೂರಿನ ಆರ್‌.ಟಿ ನಗರದಲ್ಲಿರುವ ಪಿಜಿಯಲ್ಲಿ ವಾಸವಾಗಿದ್ದರು. ಇಲ್ಲೇ ಇದ್ದು ರಮೇಶ್ ಜಾರಕಿಹೊಳಿ ಜೊತೆಗೆ ಫೋನ್ ಸಂಭಾಷಣೆಯನ್ನು ನಡೆಸಿದ್ದರು. ಸಂಭಾಷಣೆಯಲ್ಲಿ ತಾನು ಆರ್‌ಟಿ ನಗರದಲ್ಲಿರುವ ಪಿಜಿಯಲ್ಲಿ ವಾಸವಾಗಿರುವುದಾಗಿ ಯುವತಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಗುರುವಾರ ಯುವತಿಯೊಂದಿಗೆ ತೆರಳಿ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ಅಷ್ಟೇ ಅಲ್ಲದೆ ಈ ಹಿಂದೆ ಪಿಜಿ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದ ಹಣ ದೊರಕಿತ್ತು. ಈ ಹಣ ಯಾರಿಗೆ ಸೇರಿದ್ದು ಎಂಬುವುದು ಇನ್ನೂ ಅಧಿಕೃತಗೊಂಡಿಲ್ಲ. ಯುವತಿ ಈ ಬಗ್ಗೆ ಏನು ಹೇಳಿಕೆಯನ್ನು ಇನ್ನೂ ನೀಡಿಲ್ಲ. ಈಗಾಗಲೇ ಯುವತಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಎಸ್‌ಐಟಿ ಅಧಿಕಾರಿಗಳು ಒಂದು ಹಂತದ ವಿಚಾರಣೆಯನ್ನು ನಡೆಸಿದ್ದಾರೆ. ಗುರುವಾರ ಕೂಡಾ ವಿಚಾರಣೆಯನ್ನು ಮುಂದುವರಿಸಲಿದ್ದಾರೆ. ಯುವತಿಗೆ ವಿಶೇಷ ಭದ್ರತೆ ಇನ್ನು ಸಂತ್ರಸ್ತೆ ಯುವತಿ ತನಗೆ ಜೀವ ಬೆದರಿಕೆ ಇದೆ ಎಂದು ಆರೋಪ ಮಾಡಿರುವುದರಿಂದ ಪೊಲೀಸರು ವಿಶೇಷ ಭದ್ರತೆಯನ್ನು ನೀಡಿದ್ದಾರೆ. ನಗರ ಪೊಲೀಸ್ ವಿಶೇಷ ತಂಡವನ್ನು ಯುವತಿಯ ಭದ್ರತೆಗಾಗಿ ನಿಯೋಜಿಸಲಾಗಿದೆ. ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ಅತ್ಯಾಚಾರದ ಆರೋಪ ಮಾಡಿದ್ದರು. ಕೆಲಸ ಕೊಡಿಸುವುದಾಗಿ ರಮೇಶ್ ವಂಚನೆ ಮಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಹಿಂದೆ ಅಜ್ಞಾತ ಸ್ಥಳದಿಂದ ವಿಡಿಯೋ ಮೂಲಕ ಆರೋಪ ಮಾಡುತ್ತಿದ್ದ ಯುವತಿ ಇದೀಗ ನ್ಯಾಯಾಧೀಶರ ಮುಂದೆ ಹಾಜರಾಗಿ 164 ಅಡಿಯಲ್ಲಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಹಾಗೂ ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದಾರೆ. ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರಾದ ಯುವತಿ ವಿವರವಾಗಿ ತಮ್ಮ ಹೇಳಿಕೆಯನ್ನು ದಾಖಲು ಮಾಡಿದ್ದರು. ಇದಾದ ಬಳಿಕ ಎಸ್‌ಐಟಿ ಮುಂದೆ ಹಾಜರಾಗಿ ವಿವರಗಳನ್ನು ನೀಡಿದ್ದರು. ಅಲ್ಲದೆ ತಾನು ರಮೇಶ್ ಜಾರಕಿಹೊಳಿ ವಿರುದ್ಧ ಮಾಡಿರುವ ಆರೋಪಕ್ಕೆ ಪೂರಕವಾಗಿ ಹಲವು ಸಾಕ್ಷಿಗಳನ್ನು ನೀಡಿದ್ದಾರೆ. ಇದೀಗ ಎಸ್‌ಐಟಿ ಅಧಿಕಾರಿಗಳು ವಿಚಾರಣೆಯನ್ನು ಮುಂದುವರಿಸಿದ್ದು ತನಿಖೆಯ ಮುಂದುವರಿದ ಭಾಗವಾಗಿ ಆರ್‌.ಟಿ ನಗರದಲ್ಲಿರುವ ಪಿಜಿಯಲ್ಲಿ ಯುವತಿಯೊಂದಿಗೆ ಸ್ಥಳ ಮಹಜರು ನಡೆಸಿದ್ದಾರೆ.


from India & World News in Kannada | VK Polls https://ift.tt/31BMiJT

ಸುಳ್ಯದ ಮೋಹನ್ ಜ್ಯುವೆಲ್ಲರಿಯಿಂದ ಲಕ್ಷಾಂತರ ಮೌಲ್ಯದ ಚಿನ್ನ ಕಳವು, ಸಿಸಿ ಕ್ಯಾಮೆರಾ ಹೊತ್ತೊಯ್ದ ಖದೀಮರು

: ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಗೆ ಕಳೆದ ರಾತ್ರಿ ಕಳ್ಳರು ನುಗ್ಗಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವುಗೈದ ಘಟನೆ ನಡೆದಿದೆ. ಇಂದು ಮುಂಜಾನೆ ಪೇಪರ್ ಏಜೆಂಟ್ ಸತೀಶ್ ಭಟ್ ರವರು ಈ ಚಿನ್ನದ ಅಂಗಡಿಗೆ ಪತ್ರಿಕೆ ಹಾಕುವಾಗ ಬೀಗ ಒಡೆದಿರುವುದು ಕಂಡುಬಂತು. ವಿಷಯ ತಿಳಿದು ಅಂಗಡಿ ಮಾಲಕರು , ಪೋಲೀಸರು ಸ್ಥಳಕ್ಕೆ ಧಾವಿಸಿದರು. ಬಾಗಿಲು ತೆರೆದು ಪರಿಶೀಲಿಸಿದಾಗ ಸುಮಾರು 50 ಸಾವಿರ ನಗದು ಮತ್ತು 10 ಲಕ್ಷಕ್ಕೂ ಅಧಿಕ ಮೊತ್ತದ ಚಿನ್ನ ಕಳವಾಗಿರುವುದು ಗೊತ್ತಾಗಿದೆ. ಕಳವಿನ ಸರಿಯಾದ ಲೆಕ್ಕಾಚಾರ ಇನ್ನಷ್ಟೇ ಆಗಬೇಕಾಗಿದೆ. ಫಿಂಗರ್ ಪ್ರಿಂಟ್ ತಜ್ಞರನ್ನು ಕರೆಸಲು ಪೋಲೀಸರು ನಿರ್ಧರಿಸಿದ್ದಾರೆ. ಅಂಗಡಿಯೊಳಗಿದ್ದ ಸಿ.ಸಿ.ಕ್ಯಾಮರ ಹಾಗೂ ಅದರ ಡಿ.ವಿ.ಆರ್. ಬಾಕ್ಸ್ ಸಮೇತ ಕಳ್ಳರು ಹೊತ್ತೊಯ್ದಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದೆ.


from India & World News in Kannada | VK Polls https://ift.tt/3cBtuRj

45 ವರ್ಷ ಮೇಲ್ಪಟ್ಟ ಎಲ್ಲ ನಾಗರೀಕರಿಗೂ ಕೊರೊನಾ ಲಸಿಕೆ, ರಾಜ್ಯದಲ್ಲಿರುವ ಫಲಾನುಭವಿಗಳ ಸಂಖ್ಯೆ ಎಷ್ಟು?

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ತೀವ್ರವಾಗಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗಿದೆ. ಗುರುವಾರದಿಂದ ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲ ನಾಗರೀಕರಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ.ಕೆ ಸುಧಾಕರ್‌, ಇಂದಿನಿಂದ 45 ವರ್ಷ ಮೇಲ್ಪಟ್ಟ ಎಲ್ಲ ನಾಗರೀಕರಿಗೂ ಕೊರೊನಾ ಲಸಿಕೆಲಭ್ಯವಿದ್ದು, ರಾಜ್ಯದಲ್ಲಿ ಸುಮಾರು 1.66 ಕೋಟಿ ಫಲಾನುಭವಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ 13.5 ಲಕ್ಷ ಕೋವಿಶೀಲ್ಡ್, 1.5 ಲಕ್ಷ ಕೋವ್ಯಾಕ್ಸಿನ್ ಸೇರಿದಂತೆ ಒಟ್ಟು 15 ಲಕ್ಷ ಡೋಸ್ ಲಸಿಕೆ ಲಭ್ಯವಿದ್ದು, ಅಗತ್ಯಕ್ಕನುಗುಣವಾಗಿ ಜಿಲ್ಲೆಗಳಿಗೆ ಹಂಚಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನು ಕೋವಿಡ್‌ ನಿಯಂತ್ರಣಕ್ಕಾಗಿ ಎರಡು ವಾರಗಳ ಕಾಲ ಕೆಲವೊಂದು ಟಫ್ ರೂಲ್ಸ್‌ಗಳು ಜಾರಿಯಲ್ಲಿವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರು ಕೂಡಾ ಜನರಲ್ಲಿ ವಿನಂತಿ ಮಾಡಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಎಚ್ಚರಿಕೆಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಕೋವಿಡ್ ಅಪಾಯವನ್ನು ನಿರ್ಲಕ್ಷಿಸದಿರಿ. ಎಲ್ಲ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ. ಕೊರೋನಾ ವಿರುದ್ಧ ಲಸಿಕೆಯೇ ನಮ್ಮ ಸುರಕ್ಷಾ ಕವಚ. 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಇಂದಿನಿಂದ ಲಸಿಕೆ ಪಡೆಯಬಹುದು, ನಿಮ್ಮ ಹತ್ತಿರದ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದುಕೊಳ್ಳಿ. ಜೊತೆಯಾಗಿ ನಾವೆಲ್ಲರೂ ಕೊರೋನಾ ಹಿಮ್ಮೆಟ್ಟಿಸೋಣ ಎಂದು ಟ್ವೀಟ್ ಮೂಲಕ ಸಿಎಂ ಮನವಿ ಮಾಡಿದ್ದಾರೆ.


from India & World News in Kannada | VK Polls https://ift.tt/3rB6o1D

ಇಸ್ರೇಲ್ ವೆಸ್ಟ್ ಬ್ಯಾಂಕ್‌ನ್ನು ಅಕ್ರಮಿಸಿದೆ: ಜಾಗತಿಕ ಪ್ರಭಾವ ಬೀರಲಿದೆಯಾ ಅಮೆರಿಕ ವರದಿ?

ವಾಷಿಂಗ್ಟನ್: ಹಾಗೂ ಪ್ಯಾಲಿಸ್ಟೈನ್ ನಡುವಿನ ವಿವಾದಾತ್ಮಕ ಪ್ರದೇಶವನ್ನು ಇಸ್ರೇಲ್ ಆಕ್ರಮಿಸಿಕೊಂಡಿದೆ ಎಂದು ಅಮೆರಿಕದ ವರದಿಯೊಂದು ಉಲ್ಲೇಖಿಸಿದೆ. ಮಾನವ ಹಕ್ಕುಗಳ ಕುರಿತು ಸ್ಟೇಟ್ ಡಿಪಾರ್ಟ್‌ಮೆಂಟ್‌ನ ವಾರ್ಷಿಕ ವರದಿಯಲ್ಲಿ, ಇಸ್ರೇಲ್ ವೆಸ್ಟ್ ಬ್ಯಾಂಕ್‌ನ್ನು ಆಕ್ರಮಿಸಿಕೊಂಡಿದೆ ಎಂದು ಉಲ್ಲೇಖಿಸಲಾಗಿದೆ. ಇದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿದೆ. ಈ ಕುರಿತು ಮಾತನಾಡಿರುವ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್ ಪ್ರೈಸ್, ಪ್ರಸ್ತುತ ಸನ್ನಿವೇಶವನ್ನು ಪರಿಗಣಿಸಿದರೆ ವೆಸ್ಟ್ ಬ್ಯಾಂಕ್ ಮೇಲೆ ಇಸ್ರೇಲ್ ಆಕ್ರಮಣ ಮಾಡಿದೆ ಎಂದೇ ಅರ್ಥೈಸಬೇಕಾಗುತ್ತದೆ ಎಂದು ಹೇಳಿದ್ದಾರೆ. ವೆಸ್ಟ್ ಬ್ಯಾಂಕ್ ಮೇಲೆ ಇಸ್ರೇಲ್ ಆಕ್ರಮಣ ಮಾಡಿದ್ದು, ಅದನ್ನು ಬಲಪ್ರಯೋಗದ ಮೂಲಕ ವಶಪಡಿಸಿಕೊಂಡಿದೆ ಎಂದು ಅಮೆರಿಕದ ಮಾನವ ಹಕ್ಕುಗಳ ಕುರಿತು ಸ್ಟೇಟ್ ಡಿಪಾರ್ಟ್‌ಮೆಂಟ್‌ನ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ. ಈ ವರದಿ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತಾತ್ಮಕ ನಿಲುವುಗಳ ಪ್ರತಿರೂಪ ಎಂದೇ ವಿಶ್ಲೇಷಿಸಲಾಗಿದ್ದು, ಇದರಿಂದ ಟ್ರಂಪ್ ಅವಧಿಯಲ್ಲಿ ಅಮೆರಿಕ-ಇಸ್ರೇಲ್ ನಡುವೆ ಹೆಚ್ಚಿದ್ದ ರಾಜತಾಂತ್ರಿಕ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಟ್ರಂಪ್ ಆಡಳಿತ ವೆಸ್ಟ್ ಬ್ಯಾಂಕ್ ಕುರಿತು ಬಿಡುಗಡೆ ಮಾಡಿದಗ್ದ ವರದಿಯಲ್ಲಿ ಆಕ್ರಮಣ ಶಬ್ಧ ಬಳಸಿರಲಿಲ್ಲ. ಬದಲಾಗಿ ವಿವಾದಾತ್ಮಕ ಪ್ರದೇಶವನ್ನು ಇಸ್ರೇಲ್, ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಎಂದಷ್ಟೇ ಉಲ್ಲೇಖಿಸಿತ್ತು. ತಮ್ಮ ಆಡಳಿತಾವಧಿಯಲ್ಲಿ ಇಸ್ರೇಲ್ ಪರ ಒಲವು ತೋರಿದ್ದ ಡೊನಾಲ್ಡ್ ಟ್ರಂಪ್, ಜೆರುಸಲೇಂನ್ನು ಇಸ್ರೇಲ್ ರಾಜಧಾನಿ ಎಂದು ಒಪ್ಪಿಕೊಳ್ಳುವುದಾಗಿಯೂ ಘೋಷಣೆ ಮಾಡಿದ್ದರು. ಟ್ರಂಪ್ ಅವಧಿಯಲ್ಲಿ ಅಮೆರಿಕ-ಇಸ್ರೇಲ್ ನಡುವೆ ಘನಿಷ್ಠ ರಾಜತಾಂತ್ರಿಕ ಸಂಬಂಧ ಬೆಸೆದಿತ್ತು. ಆದರೆ ಬೈಡೆನ್ ಆಡಳಿತದ ನಿಲುವುಗಳು ಈ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿವೆ.


from India & World News in Kannada | VK Polls https://ift.tt/3sB5TWx

ಸಿ.ಡಿ ಪ್ರಕರಣ: ರಮೇಶ್ ಜಾರಕಿಹೊಳಿಗೆ ಕುತ್ತಾಗಲಿದ್ಯಾ ಸಂತ್ರಸ್ತೆ ಯುವತಿ ಹೇಳಿಕೆ?

ಬೆಂಗಳೂರು: ಮಾಜಿ ಸಚಿವ ಸಿ.ಡಿ ಪ್ರಕರಣ ರೋಚಕ ಘಟ್ಟಕ್ಕೆ ತಲುಪಿದೆ. ಈಗಾಗಲೇ ಯುವತಿ ನ್ಯಾಯಾಧೀಶರು ಹಾಗು ಎಸ್‌ಐಟಿ ಮುಂದೆ ಹೇಳಿಕೆಯನ್ನು ನೀಡಿದ್ದು ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ನೀಡುರುವ ದೂರಿಗೆ ಬದ್ಧ ಆಗಿರುವುದಾಗಿ ಹೇಳಿದ್ದರಿಂದ ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಕುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ, ವಂಚನೆ ಪ್ರಕರಣ ದಾಖಲಾಗಿದೆ. ಇನ್ನು ಯುವತಿ ಹಲವು ಸಾಕ್ಷಿಗಳನ್ನು ಎಸ್‌ಐಟಿಗೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ನೀಡಿರುವ ಗಿಫ್ಟ್‌ಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಎಸ್‌ಐಟಿ ತನಿಖಾಧಿಕಾರಿಗಳ ಮುಂದೆ ನೀಡಿದ್ದಾರೆ. ಯುವತಿ ನೀಡಿರುವ ಸಮಗ್ರ ದಾಖಲೆಗಳು ಪ್ರಕರಣವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿ ಆಗಬಲ್ಲದು. ಲ್ಯಾಪ್‌ಟಾಪ್, ಚಿನ್ನಾಭರಣ ರಶೀದಿ, ಮೊಬೈಲ್‌ ಮುಂದಾದ ಹಲವು ದಾಖಲೆಗಳನ್ನು ಯುವತಿ ಎಸ್‌ಐಟಿ ತನಿಖಾಧಿಕಾರಿ ಮುಂದೆ ನೀಡಿದ್ದಾರೆ. ಗುರುವಾರ ಮತ್ತೆ ಸಂತ್ರಸ್ತೆ ಯುವತಿಯ ವಿಚಾರಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಪುರಾವೆಗಳನ್ನು ನೀಡುವ ಸಾಧ್ಯತೆ ಇದೆ. ಹೀಗಾದರೂ ರಮೇಶ್ ಜಾರಕಿಹೊಳಿ ಪಾಲಿಗೆ ಇದು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಸ್ವತಃ ಸಂತ್ರಸ್ತೆ ಯುವತಿ ಮಾಡಿರುವ ಆರೋಪ ಕಾನೂನಿನ ಅಡಿಯಲ್ಲಿ ಗಟ್ಟಿಗೊಳ್ಳುತ್ತಾ ಹೋದರೆ ರಮೇಶ್ ಜಾರಕಿಹೊಳಿ ಬಂಧನ ಆಗುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಮಗಳ ಹೇಳಿಕೆ ಪರಿಗಣಿಸದಂತೆ ಪೋಷಕರ ಅರ್ಜಿ ಪರಿಣಾಮ ಬೀರುತ್ತಾ? ತಮ್ಮ ಪುತ್ರಿ ನ್ಯಾಯಾಧೀಶರ ಮುಂದೆ ನೀಡಿರುವ ಹೇಳಿಕೆಯನ್ನು ಪುರಸ್ಕರಿಸದಂತೆ ಯುವತಿ ಫೋಷಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದು ಪ್ರಕರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಇದೆ ಎಂಬುವುದು ಸಂತ್ರಸ್ತೆ ಪರ ವಕೀಲರ ವಾದವಾಗಿದೆ. ಯುವತಿ ಪ್ರಬುದ್ಧರಾಗಿದ್ದಾರೆ. ಅವರ ಮೇಲೆ ಅತ್ಯಾಚಾರ ಆಗಿದೆ ಎಂದು ಸ್ವಯಂಪ್ರೇರಣೆಯಿಂದ ದೂರು ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಯುವತಿಯ ಹೇಳಿಕೆ ಮಹತ್ವ ಪಡೆದುಕೊಳ್ಳುತ್ತದೆ ಹೊರತು ಅವರ ಪೋಷಕರ ಹೇಳಿಕೆ ಇಲ್ಲ. ಈ ನಿಟ್ಟಿನಲ್ಲಿ ಪೋಷಕರು ಯುವತಿಯ ಹೇಳಿಕೆಯನ್ನು ಪರಿಗಣಿಸದಂತೆ ಸಲ್ಲಿಸಿರುವ ಅರ್ಜಿ ಪ್ರಕರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ರಮೇಶ್ ವಿಚಾರಣೆ ಸಾಧ್ಯತೆ ಇನ್ನು ಯುವತಿ ಸ್ವತಃ ನ್ಯಾಯಾಲಯಕ್ಕೆ ಹಾಗೂ ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆಗೆ ಒಳಗಾಗಿರುವುದರಿಂದ ಈ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಯುವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಾಕ್ಷಿಗಳನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಆರೋಪಕ್ಕೆ ಮತ್ತಷ್ಟು ಬಲ ಬಂದಿದೆ. ಯುವತಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಸ್ಥಳ ಮಹಜರು ಮಾಡುತ್ತಿದ್ದಾರೆ. ಈ ನಡುವೆ ರಮೇಶ್ ಜಾರಕಿಹೊಳಿಯನ್ನು ಎಸ್‌ಐಟಿ ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/3doTTkz

2021ರ ಐಪಿಎಲ್‌ ಆರಂಭವಾಗುವ ಮೊದಲೇ ಸಿಎಸ್‌ಕೆಗೆ ಆಘಾತ!

ಹೊಸದಿಲ್ಲಿ: ಪ್ರಸಕ್ತ 2021ರ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟೂರ್ನಿಯಿಂದ ತಂಡದ ವೇಗಿ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಟೂರ್ನಿ ಆರಂಭಕ್ಕೂ ಮೊದಲೇ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆಗೆ ಭಾರಿ ಹಿನ್ನಡೆಯಾಗಿದೆ. ಕಳೆದ 2020ರ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಐಪಿಎಲ್‌ ಇತಿಹಾಸದಲ್ಲಿಯೇ ಮೊದಲ ಬಾರಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಆದರೆ, ಇದೀಗ ಬಲಿಷ್ಠ ತಂಡದೊಂದಿಗೆ ಸಜ್ಜಾಗುತ್ತಿರುವ ಎಂಎಸ್‌ ಧೋನಿ ಪಡೆ, ಏಪ್ರಿಲ್ 10 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲು ಎದುರು ನೋಡುತ್ತಿದೆ. ಇದೇ ವರ್ಷ ಇಂಗ್ಲೆಂಡ್‌ ವಿರುದ್ಧ ಆಶಸ್ ಟ್ರೋಫಿ ಟೆಸ್ಟ್ ಸರಣಿ ಹಾಗೂ ಭಾರತದಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಇರುವ ಹಿನ್ನೆಲೆಯಲ್ಲಿ ಹದಿನಾಲ್ಕನೇ ಆವೃತ್ತಿಯ ಐಪಿಎಲ್‌ನಿಂದ ಹೊರಗುಳಿಯಲು ಜಾಶ್‌ ಹೇಝಲ್‌ವುಡ್‌ ನಿರ್ಧರಿಸಿದ್ದಾರೆ. ಅಲ್ಲದೆ, ಈ ಎರಡು ತಿಂಗಳ ಅವಧಿಯಲ್ಲಿ ಆಸೀಸ್ ವೇಗಿ ತನ್ನ ಕುಟುಂಬದ ಜತೆ ಸಮಯ ಕಳೆಯಲು ನಿರ್ಧರಿಸಿದ್ದಾರೆ. "ಕಳೆದ 10 ತಿಂಗಳಿಂದ ವಿಭಿನ್ನ ಸಮಯಗಳಲ್ಲಿ ಬಯೋ ಬಬಲ್ ಹಾಗೂ ಕ್ವಾರಂಟೈನ್‌ನಲ್ಲಿ ಹೆಚ್ಚಿನ ಅವಧಿ ಕಳೆದಿದ್ದೇನೆ. ಹಾಗಾಗಿ, ಮುಂದಿನ ಎರಡು ತಿಂಗಳು ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದು ಆಸ್ಟ್ರೇಲಿಯಾದಲ್ಲಿ ತಮ್ಮ ಕುಟುಂಬದ ಜತೆ ಸಮಯ ಕಳೆಯಲು ನಿರ್ಧರಿಸಿದ್ದೇನೆ," ಎಂದು ಹೇಝಲ್‌ವುಡ್‌ ಕ್ರಿಕೆಟ್‌.ಕಾಮ್‌.ಎಯುಗೆ ಸ್ಪಷ್ಟಪಡಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಜಾಶ್‌ ಹೇಝಲ್‌ವುಡ್‌ ಅವರನ್ನು ಚೆನ್ನೈ ಫ್ರಾಂಚೈಸಿ ಖರೀದಿಸಿತ್ತು. ಅದರಂತೆ ಬಲಗೈ ವೇಗಿ ಎಂಎಸ್‌ ಧೋನಿ ನಾಯಕತ್ವದ ಸಿಎಸ್‌ಕೆ ಪರ ಯುಎಇಯಲ್ಲಿ 2020ರ ಐಪಿಎಲ್‌ ಟೂರ್ನಿಯ ಹಲವು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. "ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ನಮ್ಮ ಮುಂದೆ ಇದೆ. ನಂತರ ಬಲಿಷ್ಠ ಇಂಗ್ಲೆಂಡ್‌ ವಿರುದ್ಧ ಪ್ರತಿಷ್ಠಿತ ಆಶಸ್‌ ಟ್ರೋಫಿ ಟೆಸ್ಟ್ ಸರಣಿ ಆಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಂಪೂರ್ಣ ಫಿಟ್‌ ಆಗಿ, ನನ್ನ ಕಡೆಯಿಂದ ಆಸ್ಟ್ರೇಲಿಯಾದ ತಂಡಕ್ಕೆ ಉತ್ತಮ ಕೊಡುಗೆ ನೀಡಲು ಬಯಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಐಪಿಎಲ್‌ನಿಂದ ಹೊರಗುಳಿಯುತ್ತಿದ್ದೇನೆ," ಎಂದು ಹೇಳಿದ್ದಾರೆ. ಕೋವಿಡ್‌-19 ಲಾಕ್‌ಡೌನ್ ಬಳಿಕ 2020ರ ಜುಲೈನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪುನಾರಂಭ ದಿನದಿಂದ ಜಾಶ್‌ ಹೇಝಲ್‌ವುಡ್ ದೀರ್ಘ ಕಾಲ ಬಯೋ ಬಬಲ್‌ನಲ್ಲಿ ಸಮಯ ಕಳೆದಿದ್ದರು. ಇದೀಗ ಅವರ ಕ್ವಾರಂಟೈನ್‌ ಜೀವನದಿಂದ ಮುಕ್ತಿ ಪಡೆದು ಮನೆಯಲ್ಲಿ ತಮ್ಮ ಕುಟುಂಬದ ಜತೆ ಎರಡು ತಿಂಗಳು ಕಳೆಯಲು ನಿರ್ಧರಿಸಿದ್ದಾರೆ. ಟೂರ್ನಿಯ ಯಾವುದೇ ಸಮಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಹೇಝಲ್‌ವುಡ್‌ ಸ್ಥಾನಕ್ಕೆ ಯಾವುದೇ ಆಟಗಾರನನ್ನು ತರಬಹುದು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟೂರ್ನಿಯ ತಮ್ಮ ಆರಂಭಿಕ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡದ ವೇಗಿ ಲುಂಗಿ ಎನ್‌ಗಿಡಿ ಅಲಭ್ಯರಾಗುತ್ತಿದ್ದಾರೆಂದು ಈಗಾಗಲೇ ಚೆನ್ನೈ ಫ್ರಾಂಚೈಸಿಯ ಸಿಇಓ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಯಾಮ್ ಕರ್ರನ್‌ ಹಾಗೂ ಡ್ವೇನ್‌ ಬ್ರಾವೊ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QQRWpj

ಸಿ.ಡಿ ಪ್ರಕರಣ: ಸಂತ್ರಸ್ತೆ ಪರ ವಕೀಲರ ಫೋನ್‌ ಕದ್ದಾಲಿಕೆ! ಸೂರ್ಯ ಮುಕುಂದರಾಜ್ ಆರೋಪ

ಬೆಂಗಳೂರು: ಸಿ.ಡಿ ಪ್ರಕರಣದಲ್ಲಿ ಸಂತ್ರಸ್ತೆ ಯುವತಿ ಪರವಾಗಿ ಕೆಲಸ ಮಾಡುತ್ತಿರುವ ವಕೀಲರ ಫೋನ್‌ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲರಾದ ಸೂರ್ಯ ಮುಕುಂದರಾಜ್ ಆರೋಪ ಮಾಡಿದ್ದಾರೆ. ಈ ಕುರಿತಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು ಪ್ರಭಾವಿಯನ್ನು ಬಚಾವು ಮಾಡಲು ಹೊರಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಕೀಲನಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ರಮೇಶ್ ಜಾರಕಿಹೊಳಿ ಆರೋಪಿ ಆದರೆ ಅವರನ್ನು ರಕ್ಷಣೆ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ. ಅವರಿಗೆ ಕಾನೂನಿನ ಪಾಠವನ್ನು ಕೊಟ್ಟೇ ಕೊಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿರುವ ಯುವತಿ ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಕಾಂಗ್ರೆಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಉಪಸ್ಥಿತರಿದ್ದರು. ಈ ವಿಡಿಯೋವನ್ನು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ ಟ್ವೀಟ್‌ ಮಾಡಿತ್ತು. ಇದರ ಬೆನ್ನಲ್ಲೇ ಯುವತಿ ಪರ ವಕೀಲರಾದ ಜಗದೀಶ್ ಕುಮಾರ್ ಅವರು ಎಸ್‌ಐಟಿ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ವಿರುದ್ಧ ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು. ಅಲ್ಲದೆ, ಎಸ್‌ಐಟಿ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ನಿರ್ಭಯಾ ಪ್ರಕರಣದ ಗೈಡ್‌ಲೈನ್ಸ್ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪ ಮಾಡಿದ್ದರು. ಇದೀಗ ಇದರ ಬೆನ್ನಲ್ಲೇ ವಕೀಲರ ಫೋನ್ ಕದ್ದಾಲಿಕೆ ಆರೋಪ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.


from India & World News in Kannada | VK Polls https://ift.tt/3u9dg80

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತದ ಆದೇಶ ಹಿಂಪಡೆದ ಕೇಂದ್ರ ಸರಕಾರ: ಸೀತಾರಾಮನ್‌ ಸ್ಪಷ್ಟನೆ

ಹೊಸದಿಲ್ಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಕಡಿಮೆ ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಕೇಂದ್ರ ಸರಕಾದ ಹಿಂಪಡೆದಿದೆ. ಈ ಕುರಿತು ಹಣಕಾಸು ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಪಿಪಿಎಫ್‌, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ ಖಾತೆ , ಕಿಸಾನ್‌ ವಿಕಾಸ ಪತ್ರದ ಉಳಿತಾಯ ಖಾತೆ ಸೇರಿದಂತೆ ಬಹುತೇಕ ಎಲ್ಲ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಇಳಿಕೆ ಮಾಡಿ ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ಆದೇಶ ಹೊರಡಿಸಿತ್ತು. ಪರಿಷ್ಕೃತ ಬಡ್ಡಿ ದರಗಳು ಏಪ್ರಿಲ್‌ 1ರಿಂದ ಅಂದರೆ ಇಂದಿನಿಂದ ಅನ್ವಯ ಆಗಲಿದ್ದು, ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ (2021ರ ಜೂನ್‌ 30ರವರೆಗೆ) ಜಾರಿಯಲ್ಲಿ ಇರಲಿವೆ ಎಂದು ಹಣಕಾಸು ಇಲಾಖೆ ತಿಳಿಸಿತ್ತು. ಇದೀಗ ಇಂದು(ಗುರುವಾರ) ಮುಂಜಾನೆ ಟ್ವೀಟ್‌ ಮಾಡಿರುವ ನಿರ್ಮಲಾ ಸೀತಾರಾಮನ್, "ಭಾರತ ಸರಕಾರದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು 2020–21ರ ನಾಲ್ಕನೇ ತ್ರೈಮಾಸಿಕದಲ್ಲಿ, ಅಂದರೆ 2021ರ ಮಾರ್ಚ್‌ ವರೆಗೆ ಇದ್ದ ದರಗಳು ಮುಂದುವರಿಯಲಿವೆ' ಎಂದಿದ್ದಾರೆ. 'ಬಡ್ಡಿದರ ಪರಿಷ್ಕೃತಗೊಳಿಸಿ ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆಯಲಾಗಿದೆ' ಎಂದು ತಿಳಿಸಿದ್ದಾರೆ. ಎಷ್ಟು ಬಡ್ಡಿ ದರ ಇಳಿಕೆ? ಸಾರ್ವಜನಿಕ ಭವಿಷ್ಯನಿಧಿ () ಬಡ್ಡಿ ದರ ಶೇ.7.1ರಿಂದ ಶೇ.6.4ಕ್ಕೆ ಇಳಿಸಲಾಗಿತ್ತು. ಇದು ಕಳೆದ 46 ವರ್ಷಗಳಲ್ಲಿಯೇ ಪಿಪಿಎಫ್‌ನ ಕನಿಷ್ಠ ಬಡ್ಡಿ ದರ ಇದಾಗಿತ್ತು. ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿ ದರ ಶೇ.7.4ರಿಂದ ಶೇ.6.5ಕ್ಕೆ ಇಳಿಸಿತ್ತು. ಸುಕನ್ಯಾ ಸಮೃದ್ಧಿ ಖಾತೆ ಬಡ್ಡಿ ದರ ಶೇ.7.6ರಿಂದ ಶೇ.6.9ಕ್ಕೆ ತಗ್ಗಿತ್ತು. ಕಿಸಾನ್‌ ವಿಕಾಸ ಪತ್ರದ ಬಡ್ಡಿ ದರ ಶೇ.6.9ರಿಂದ ಶೇ.6.2ಕ್ಕೆ ಕಡಿತವಾಗಿತ್ತು. ಮಾಸಿಕ ಆದಾಯ ಖಾತೆ ಯೋಜನೆಯ ಬಡ್ಡಿ ಶೇ.6.6ರಿಂದ ಶೇ.5.7ಕ್ಕೆ ಇಳಿದಿತ್ತು. ರಾಷ್ಟ್ರೀಯ ಉಳಿತಾಯ ಯೋಜನೆ ಬಡ್ಡಿ ದರ ಶೇ.6.8ರಿಂದ ಶೇ.5.9ಕ್ಕೆ ತಗ್ಗಿತ್ತು.ಅಂಚೆ ಇಲಾಖೆಯ ಠೇವಣಿ ಉಳಿತಾಯ ಯೋಜನೆಗಳಲ್ಲಿ1 ವರ್ಷ ಅವಧಿಯ ಟಮ್‌ರ್‍ ಡೆಪಾಸಿಟ್‌ನ ಬಡ್ಡಿ ದರ ಶೇ.4ರಿಂದ ಶೇ.3.5ಕ್ಕೆ, 2 ವರ್ಷದ ಠೇವಣಿಗೆ ಶೇ.5.5ರಿಂದ ಶೇ.4.4ಕ್ಕೆ, 3 ವರ್ಷದ ಠೇವಣಿಗೆ ಶೇ.5.5ರಿಂದ ಶೇ.5ಕ್ಕೆ, 5 ವರ್ಷಗಳ ಠೇವಣಿಗೆ ಶೇ.5.8ರಿಂದ ಶೇ.5.3ಕ್ಕೆ ಬಡ್ಡಿ ದರ ಇಳಿದಿತ್ತು. ಆದರೆ ಇದೀಗ ಈ ಹಿಂದೆ ಇದ್ದ ಬಡ್ಡಿ ದರ ಮುಂದುವರಿಯಲಿದೆ ಎಂದು ಸರಕಾರ ಸ್ಪಷ್ಟನೆ ನೀಡಿದೆ. ಸರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ ಉಳಿತಾಯಗಳ ಬಡ್ಡಿ ಪರಿಷ್ಕರಿಸುತ್ತದೆ.


from India & World News in Kannada | VK Polls https://ift.tt/3fxuBnc

ಸಣ್ಣ ಉಳಿತಾಯಕ್ಕೆ ಹೊಡೆತ ನೀಡಿದ ಕೇಂದ್ರ ಹಣಕಾಸು ಇಲಾಖೆ: ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತ!

ಹೊಸದಿಲ್ಲಿ: ಹಣಕಾಸು ಇಲಾಖೆಯು ನಾನಾ ಸಣ್ಣ ಉಳಿತಾಯಗಳ ಬಡ್ಡಿ ದರಗಳನ್ನು ಬುಧವಾರ ಗಣನೀಯ ಕಡಿತಗೊಳಿಸಿದ್ದು, ಸಣ್ಣ ಉಳಿತಾಯವನ್ನೇ ಅವಲಂಬಿಸಿರುವ ಜನತೆಗೆ ನಿರಾಸೆಯಾಗಿದೆ. 2021-22ರ ಮೊದಲ ತ್ರೈಮಾಸಿಕ ಅವಧಿಗೆ (ಏಪ್ರಿಲ್‌-ಜೂನ್‌) ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಇಳಿಕೆಯಾಗಿದೆ. ಸಾರ್ವಜನಿಕ ಭವಿಷ್ಯನಿಧಿ () ಬಡ್ಡಿ ದರ ಶೇ.7.1ರಿಂದ ಶೇ.6.4ಕ್ಕೆ ಇಳಿದಿದೆ. ಕಳೆದ 46 ವರ್ಷಗಳಲ್ಲಿಯೇ ಪಿಪಿಎಫ್‌ನ ಕನಿಷ್ಠ ಬಡ್ಡಿ ದರ ಇದಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿ ದರ ಶೇ.7.4ರಿಂದ ಶೇ.6.5ಕ್ಕೆ ಇಳಿದಿದೆ. ಸುಕನ್ಯಾ ಸಮೃದ್ಧಿ ಖಾತೆ ಬಡ್ಡಿ ದರ ಶೇ.7.6ರಿಂದ ಶೇ.6.9ಕ್ಕೆ ತಗ್ಗಿದೆ. ಕಿಸಾನ್‌ ವಿಕಾಸ ಪತ್ರದ ಬಡ್ಡಿ ದರ ಶೇ.6.9ರಿಂದ ಶೇ.6.2ಕ್ಕೆ ಕಡಿತವಾಗಿದೆ. ಮಾಸಿಕ ಆದಾಯ ಖಾತೆ ಯೋಜನೆಯ ಬಡ್ಡಿ ಶೇ.6.6ರಿಂದ ಶೇ.5.7ಕ್ಕೆ ಇಳಿದಿದೆ. ರಾಷ್ಟ್ರೀಯ ಉಳಿತಾಯ ಯೋಜನೆ ಬಡ್ಡಿ ದರ ಶೇ.6.8ರಿಂದ ಶೇ.5.9ಕ್ಕೆ ತಗ್ಗಿದೆ. ಅಂಚೆ ಇಲಾಖೆಯ ಠೇವಣಿ ಉಳಿತಾಯ ಯೋಜನೆಗಳಲ್ಲಿ 1 ವರ್ಷ ಅವಧಿಯ ಟೈಮ್‌ ಡೆಪಾಸಿಟ್‌ನ ಬಡ್ಡಿ ದರ ಶೇ.4ರಿಂದ ಶೇ.3.5ಕ್ಕೆ, 2 ವರ್ಷದ ಠೇವಣಿಗೆ ಶೇ.5.5ರಿಂದ ಶೇ.4.4ಕ್ಕೆ, 3 ವರ್ಷದ ಠೇವಣಿಗೆ ಶೇ.5.5ರಿಂದ ಶೇ.5ಕ್ಕೆ, 5 ವರ್ಷಗಳ ಠೇವಣಿಗೆ ಶೇ.5.8ರಿಂದ ಶೇ.5.3ಕ್ಕೆ ಬಡ್ಡಿ ದರ ಇಳಿದಿದೆ. ಸರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ ಉಳಿತಾಯಗಳ ಬಡ್ಡಿ ಪರಿಷ್ಕರಿಸುತ್ತದೆ. ಪರಿಣಾಮವೇನು?* ಸಣ್ಣ ಉಳಿತಾಯಕ್ಕೆ ಹೊಡೆತ ನಂಬಿದವರಿಗೆ ನಿರಾಸೆ * ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಡ್ಡಿ ಶೇ.6.5ಕ್ಕೆ ಕಡಿತ * ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ ದರವೂ ಶೇ.6.9ಕ್ಕೆ ಇಳಿಕೆ


from India & World News in Kannada | VK Polls https://ift.tt/3maI45F

2021ರ ಐಪಿಎಲ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಯುವ ತಾರೆಗಳು!

ವೈಷ್ಣವಿ ಪ್ರಕಾಶ್‌ ಬೆಂಗಳೂರು: ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಎಂದು ಖ್ಯಾತಿ ಪಡೆದಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆರಂಭವಾದಾಗಿನಿಂದಲೂ ವಿಶ್ವದ ಹಲವು ಯುವ ತಾರೆಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೆಲೆ ಕಂಡುಕೊಂಡುಕೊಳ್ಳುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಪ್ರತಿ ವರ್ಷ ಐಪಿಎಲ್‌ ಮುಗಿದ ಬಳಿಕ ಹಲವು ಉದಯೋನ್ಮುಖ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. 2008ರ ಉದ್ಘಾಟನಾ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಬೆಳಕಿಗೆ ಬಂದ ವಿರಾಟ್ ಕೊಹ್ಲಿ ಇಂದು ಟೀಮ್‌ ಇಂಡಿಯಾ ನಾಯಕನಾಗಿ ಬೆಳೆದಿರುವುದಲ್ಲದೆ, ವಿಶ್ವ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ, ಹಲವಾರು ದಾಖಲೆಗಳನ್ನು ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 5878 ರನ್‌ಗಳೊಂದಿಗೆ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತ ಕಲೆ ಹಾಕಿದ ಬ್ಯಾಟ್ಸ್‌ಮನ್‌ ಎಂಬ ಖ್ಯಾತಿಗೂ ಆರ್‌ಸಿಬಿ ನಾಯಕ ಭಾಜನರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯವಾಗಿದ್ದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಸರಣಿಗಳಲ್ಲಿ ವೀರಾವೇಶದಿಂದ ಹೋರಾಡಿ ಭಾರತ ತಂಡವನ್ನು ಚಾಂಪಿಯನ್ಸ್ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ರಿಷಭ್ ಪಂತ್‌, ಸೂರ್ಯಕುಮಾರ್ ಯಾದವ್, ಕೃಣಾಲ್‌ ಪಾಂಡ್ಯ, ಇಶಾನ್ ಕಿಶಾನ್, ಪ್ರಸಿಧ್‌ ಕೃಷ್ಣ, ಟಿ.ನಟರಾಜನ್‌ ಅವರಂಥ ಯುವ ಪ್ರತಿಬೆಗಳು ಬೆಳಕಿಗೆ ಬಂದಿದ್ದು ಕೂಡ ಐಪಿಎಲ್ ಟೂರ್ನಿಯಿಂದಲೇ. ಎಂದಿನಂತೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಆಟ ಪ್ರದರ್ಶಿಸಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಕನಸನ್ನು ಹಲವು ಯುವ ಆಟಗಾರರು ಹೊಂದಿದ್ದಾರೆ. ಇದರಲ್ಲಿ ನಮ್ಮ ಭಾರತದ ಯುವ ಪ್ರತಿಭೆಗಳು ಕೂಡ ಇದ್ದಾರೆ.

ಏಪ್ರಿಲ್ 9 ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಹಲವು ಯುವ ಆಟಗಾರರು ಫ್ರಾಂಚೈಸಿ ಲೀಗ್‌ಗೆ ಪದಾರ್ಪಣೆ ಮಾಡುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದ್ದಾರೆ.


2021ರ ಐಪಿಎಲ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಯುವ ತಾರೆಗಳು!

ವೈಷ್ಣವಿ ಪ್ರಕಾಶ್‌
ಬೆಂಗಳೂರು

: ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಎಂದು ಖ್ಯಾತಿ ಪಡೆದಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆರಂಭವಾದಾಗಿನಿಂದಲೂ ವಿಶ್ವದ ಹಲವು ಯುವ ತಾರೆಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೆಲೆ ಕಂಡುಕೊಂಡುಕೊಳ್ಳುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಪ್ರತಿ ವರ್ಷ ಐಪಿಎಲ್‌ ಮುಗಿದ ಬಳಿಕ ಹಲವು ಉದಯೋನ್ಮುಖ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ.

2008ರ ಉದ್ಘಾಟನಾ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಬೆಳಕಿಗೆ ಬಂದ ವಿರಾಟ್ ಕೊಹ್ಲಿ ಇಂದು ಟೀಮ್‌ ಇಂಡಿಯಾ ನಾಯಕನಾಗಿ ಬೆಳೆದಿರುವುದಲ್ಲದೆ, ವಿಶ್ವ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ, ಹಲವಾರು ದಾಖಲೆಗಳನ್ನು ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 5878 ರನ್‌ಗಳೊಂದಿಗೆ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತ ಕಲೆ ಹಾಕಿದ ಬ್ಯಾಟ್ಸ್‌ಮನ್‌ ಎಂಬ ಖ್ಯಾತಿಗೂ ಆರ್‌ಸಿಬಿ ನಾಯಕ ಭಾಜನರಾಗಿದ್ದಾರೆ.

ಇತ್ತೀಚೆಗೆ ಮುಕ್ತಾಯವಾಗಿದ್ದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಸರಣಿಗಳಲ್ಲಿ ವೀರಾವೇಶದಿಂದ ಹೋರಾಡಿ ಭಾರತ ತಂಡವನ್ನು ಚಾಂಪಿಯನ್ಸ್ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ರಿಷಭ್ ಪಂತ್‌, ಸೂರ್ಯಕುಮಾರ್ ಯಾದವ್, ಕೃಣಾಲ್‌ ಪಾಂಡ್ಯ, ಇಶಾನ್ ಕಿಶಾನ್, ಪ್ರಸಿಧ್‌ ಕೃಷ್ಣ, ಟಿ.ನಟರಾಜನ್‌ ಅವರಂಥ ಯುವ ಪ್ರತಿಬೆಗಳು ಬೆಳಕಿಗೆ ಬಂದಿದ್ದು ಕೂಡ ಐಪಿಎಲ್ ಟೂರ್ನಿಯಿಂದಲೇ.

ಎಂದಿನಂತೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಆಟ ಪ್ರದರ್ಶಿಸಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಕನಸನ್ನು ಹಲವು ಯುವ ಆಟಗಾರರು ಹೊಂದಿದ್ದಾರೆ. ಇದರಲ್ಲಿ ನಮ್ಮ ಭಾರತದ ಯುವ ಪ್ರತಿಭೆಗಳು ಕೂಡ ಇದ್ದಾರೆ.



​ಕೈಲ್ ಜೇಮಿಸನ್‌ (ಆರ್‌ಸಿಬಿ)
​ಕೈಲ್ ಜೇಮಿಸನ್‌ (ಆರ್‌ಸಿಬಿ)

ಇತ್ತೀಚೆಗೆ ನ್ಯೂಜಿಲೆಂಡ್‌ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಯುವ ಆಲ್‌ರೌಂಡರ್‌ ಕೈಲ್ ಜೇಮಿಸನ್‌ ಈ ಬಾರಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ. ಅನುಭವಿ ವೇಗಿಗಳ ಕೊರತೆ ಇರುವ ಆರ್‌ಸಿಬಿಯಲ್ಲಿ ಮೊಹಮ್ಮದ್‌ ಸಿರಾಜ್‌, ನವದೀಪ್‌ ಸೈನಿಗೆ ಕಿವೀಸ್‌ ವೇಗಿ ಸಾಥ್ ನೀಡಲಿದ್ದಾರೆ. ಆರು ಅಡಿ ಎಂಟು ಇಂಚು ಎತ್ತರವಿರುವ ವೇಗಿ ಜೇಮಿಸನ್‌ ಅವರನ್ನು ಬೆಂಗಳೂರು ಫ್ರಾಂಚೈಸಿ ಹರಾಜಿನಲ್ಲಿ 15 ಕೋಟಿ ರೂ. ಗಳಿಗೆ ಖರೀದಿ ಮಾಡಿತ್ತು. ಕ್ರಿಸ್‌ ಮಾರಿಸ್‌, ಡೆಲ್‌ ಸ್ಟೇನ್‌ ಅವರಂಥ ವೇಗಿಗಳ ಕೊರತೆ ನಿಭಾಯಿಸುವ ಜವಾಬ್ದಾರಿ ಕೈಲ್ ಜೇಮಿಸನ್ ಹೆಗಲ ಮೇಲಿದೆ.

ಇನ್ನು ಮುಂಬೈ ಇಂಡಿಯನ್ಸ್ ಪರ ಆಡಲಿರುವ ಮಾರ್ಕೊ ಜಾನ್ಸನ್‌, 14 ಕೋಟಿ ರೂ. ಗಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಾಗಿರುವ ಜೇ ರಿಚರ್ಡ್ಸನ್ ಮತ್ತು ರಿಲೀ ಮೆರಿಡಿತ್, ಆರ್ಸಿಬಿಯ ಫಿನ್ ಅಲೆನ್ ಹಾಗೂ ರಜತ್ ಪಾಟಿದರ್ ಸೇರಿದಂತೆ ಇನ್ನು ಹಲವು ಯುವ ಪ್ರತಿಭೆಗಳು ಗಮನಾರ್ಹ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಗುರುತಿಸಿಕೊಳ್ಳಲು ಹೊರಟಿದ್ದಾರೆ.

ಭಾರತ ಓಡಿಐ ತಂಡಕ್ಕೆ ಆಯ್ಕೆಯಾಗದ ಬಗ್ಗೆ ಮೌನ ಮುರಿದ ಪಡಿಕ್ಕಲ್‌!



​ಮೊಹಮ್ಮದ್ ಅಝರುದ್ದೀನ್ (ಆರ್‌ಸಿಬಿ)
​ಮೊಹಮ್ಮದ್ ಅಝರುದ್ದೀನ್ (ಆರ್‌ಸಿಬಿ)

ಭಾರತ ತಂಡದ ರಿಷಭ್‌ ಪಂತ್‌ ರೀತಿಯಲ್ಲೇ ಕೇರಳದ ಮೊಹಮ್ಮದ್ ಅಜರುದ್ದೀನ್ ಕೂಡ ಉತ್ತಮ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಲು ಹೊರಟಿದ್ದಾರೆ. 2020/21ರ ಆವೃತ್ತಿಯ ಸೈಯದ್‌ ಮುಷ್ತಾಕ್‌ ಅಲಿ ಟ್ರೊಫಿ ಟಿ20 ಟೂರ್ನಿಯಲ್ಲಿ ಮುಂಬೈ ವಿರುದ್ಧ ಸ್ಪೋಟಕ ಶತಕ ಸಿಡಿಸಿದ್ದ ಮೊಹಮ್ಮದ್‌ ಅಝರುದ್ದೀನ್ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದರು. ಮುಂಬೈ ವಿರುದ್ಧದ ಲೀಗ್‌ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ 137 ರನ್ ಸಿಡಿಸಿದ್ದ ಮೊಹಮ್ಮದ್‌ ಅಝರುದ್ದೀನ್, 2021ರ ಐಪಿಎಲ್‌ಗೆ ಆರ್‌ಸಿಬಿ ಗಮನ ಸೆಳೆದಿದ್ದರು. ಮೂಲಬೆಲೆ 20 ಲಕ್ಷ ರೂ. ಗಳಿಗೆ ಬೆಂಗಳೂರು ಫ್ರಾಂಚೈಸಿಯು ಕೇರಳ ಆಟಗಾರನನ್ನು ಖರೀದಿಸಿತ್ತು. ಈ ಆವೃತ್ತಿಗೆ ಜಾಶ್‌ ಫಿಲಿಪ್‌ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ ಆರ್‌ಸಿಬಿ ಪರ ಅಝರುದ್ದೀನ್ ವಿಕೆಟ್‌ ಕೀಪಿಂಗ್‌ ಪ್ಯಾಡ್‌ ಕಟ್ಟುವ ಎಲ್ಲಾ ಸಾಧ್ಯತೆ ಇದೆ. ಆ ಮೂಲಕ ಎಬಿ ಡಿವಿಲಿಯರ್ಸ್ ಮೇಲಿನ ಒತ್ತಡವನ್ನು ಸ್ವಲ್ಪ ಕಡಿಮೆ ಮಾಡಲಿದ್ದಾರೆ.

2020ರ ಐಪಿಎಲ್‌ನಲ್ಲಿ ಕೊಹ್ಲಿ-ಎಬಿಡಿ ಮಾಡಿದ್ದ ಸಹಾಯ ಸ್ಮರಿಸಿದ ಕನ್ನಡಿಗ!



​ಶಾರೂಖ್ ಖಾನ್‌ (ಕಿಂಗ್ಸ್ ಇಲೆವೆನ್ ಪಂಜಾಬ್)
​ಶಾರೂಖ್ ಖಾನ್‌ (ಕಿಂಗ್ಸ್ ಇಲೆವೆನ್ ಪಂಜಾಬ್)

ದೇಶಿ ಟಿ20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅರಳಿದ ಮತ್ತೊಂದು ಅಪ್ಪಟ ಪ್ರತಿಭೆ ತಮಿಳುನಾಡಿನ ಶಾರೂಖ್ ಖಾನ್‌. 2020/21ರ ಆವೃತ್ತಿಯ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ತಮಿಳುನಾಡು ತಂಡ ಚಾಂಪಿಯನ್‌ ಆಗುವಲ್ಲಿ ಬ್ಯಾಟಿಂಗ್‌ ಆಲ್‌ರೌಂಡರ್‌ ಶಾರೂಖ್‌ ಖಾನ್‌ ಕೂಡ ನೆರವಾಗಿದ್ದರು. ಹಿಮಾಚಲ ಪ್ರದೇಶ ವಿರುದ್ಧ ಕ್ವಾಟರ್ ಫೈನಲ್‌ ಕಾದಾಟದಲ್ಲಿ ಕೇವಲ 19 ಎಸೆತಗಳಲ್ಲಿ 40 ರನ್‌ ಗಳಿಸಿದ್ದ ಶಾರೂಖ್‌ ಖಾನ್‌, ಫೈನಲ್‌ ಹಣಾಹಣಿಯಲ್ಲಿ ಕೇವಲ 7 ಎಸೆತಗಳಲ್ಲೇ 18 ರನ್ ಗಳಿಸುವ ಮೂಲಕ ತಮಿಳುನಾಡು ಚಾಂಪಿಯನ್ಸ್ ಪಟ್ಟ ಅಲಂಕರಿಸಲು ತಮ್ಮದೇ ಆದ ಕೊಡುಗೆ ನೀಡಿದ್ದರು. ಆ ಮೂಲಕ ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡದ ಗಮನ ಸೆಳೆದು 5.25 ಕೋಟಿ ರೂ. ಗಳಿಗೆ ಖರೀದಿಯಾಗಿದ್ದರು. ದೇಶಿ ಟೂರ್ನಿಗಳಂತೆ ಐಪಿಎಲ್‌ ವೇದಿಕೆಯಲ್ಲೂ ಸ್ಫೋಟಕ ಬ್ಯಾಟಿಂಗ್‌ ಮಾಡುವ ಉದ್ದೇಶವನ್ನು ಯುವ ಆಲ್‌ರೌಂಡರ್‌ ಹೊಂದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ದಾಖಲಾದ 5 ಮಿಂಚಿನ ಶತಕಗಳಿವು!



ಲುಕ್ಮನ್ ಮೆರಿವಾಲ (ಡೆಲ್ಲಿ ಕ್ಯಾಪಿಟಲ್ಸ್)
ಲುಕ್ಮನ್ ಮೆರಿವಾಲ (ಡೆಲ್ಲಿ ಕ್ಯಾಪಿಟಲ್ಸ್)

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಅತ್ಯುತ್ತಮ ಆಲೌಂಡರ್ ಪ್ರದರ್ಶನ ತೋರಿದ್ದ ಯುವ ಆಟಗಾರ ಲುಕ್ಮನ್ ಮೆರಿವಾಲ ಅವರು 2021ರ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಮೂಲ ಬೆಲೆ 20 ಲಕ್ಷ ರೂ. ಗಳಿಗೆ ಡೆಲ್ಲಿಕ್ಯಾಪಿಟಲ್ಸ್ ಪಾಲಾಗಿದ್ದಾರೆ. ದೇಶಿ ಚುಟುಕು ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿರುವ ಎಡಗೈ ವೇಗಿ ಬರೋಡಾ ಪರ 15 ವಿಕೆಟ್ ಕಬಳಿಸಿದ್ದರು. ಅಲ್ಲದೆ, ಪಂಜಾಬ್‌ ವಿರುದ್ಧ ಸೆಮಿಫೈನಲ್‌ನಲ್ಲಿ ಹಣಾಹಣಿಯಲ್ಲಿ ಮಿಂಚಿನ ಬೌಲಿಂಗ್ ಪ್ರದರ್ಶಿಸಿ 28 ರನ್‌ಗಳಿಗೆ 3 ವಿಕೆಟ್ ಕಬಳಿಸುವ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಇದೀಗ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ರಾಷ್ಟ್ರೀಯ ತಂಡದ ಕದ ತಟ್ಟಲು ಎದುರು ನೋಡುತ್ತಿದ್ದಾರೆ.

ಐಪಿಎಲ್‌ 2021 ಆರಂಭಕ್ಕೂ ಮೊದಲೇ ಸನ್‌ರೈಸರ್ಸ್‌ಗೆ ಆಘಾತ, ಮಾರ್ಷ್‌ ಔಟ್!





from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3wao9bo

ಸುರತ್ಕಲ್: ಅನ್ಯಕೋಮಿನ ಯುವಕನ ಜೊತೆ ತೆರಳುತ್ತಿದ್ದ ಯುವತಿಯನ್ನು ಪೊಲೀಸರಿಗೆ ಒಪ್ಪಿಸಿದ ಬಜರಂಗದಳ

ಸುರತ್ಕಲ್‌: ಅನ್ಯಕೋಮಿನ ಯುವಕನೊಂದಿಗೆ ಉಡುಪಿಯಿಂದ ಮಂಗಳೂರಿಗೆ ಬರುವ ಬಸ್ಸಿನಲ್ಲಿ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಬಳಿ ಬಸ್‌ ತಡೆದು ಬಜರಂಗದಳದ ಕಾರ್ಯಕರ್ತರು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ. ಯುವಕನು ಖಾಸಗಿ ಎಕೆಎಂಎಸ್‌ ಬಸ್‌ನ ಕಂಡಕ್ಟರ್‌ ಆಗಿದ್ದು, ಅದೇ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಪರಿಚಯವಾಗಿದೆ. ನಂತರ ಕಾಲೇಜು ವಿದ್ಯಾರ್ಥಿಯನ್ನು ಪುಸಲಾಯಿಸಿದ ಕಂಡಕ್ಟರ್‌ ನಂತರ ಆಕೆಯನ್ನು ಸುತ್ತಾಟಕ್ಕೆ ಕರೆದುಕೊಂಡು ಹೋಗುತ್ತಿದ್ದನಂತೆ. ಇದೀಗ ಒಟ್ಟಾಗಿ ಬಸ್ಸಿನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಜೋಡಿಗಳನ್ನು ಪತ್ತೆಹಚ್ಚಿ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. ದಕ್ಷಿಣ ಕನ್ನಡದಲ್ಲಿ ಲವ್‌ ಜಿಹಾದ್‌ ಹೆಚ್ಚುತ್ತಿದೆ, ಮುಂದಿನ ದಿನಗಳಲ್ಲಿ ಇಂತಹ ಲವ್‌ ಜಿಹಾದ್‌ ಪ್ರಕರಣ ಕಂಡು ಬಂದರೆ ಮತ್ತೆ ನೇರ ಕಾರ್ಯಾಚರಣೆಯ ನಡೆಸುತ್ತೇವೆ ಎಂದು ಬಜರಂಗದಳ ಎಚ್ಚರಿಕೆ ನೀಡಿದೆ.


from India & World News in Kannada | VK Polls https://ift.tt/39xiwue

ಪಶ್ಚಿಮ ಬಂಗಾಳ,ಅಸ್ಸಾಂನ 2ನೇ ಹಂತದ ಮತದಾನ ಆರಂಭ: ನಂದಿಗ್ರಾಮದಲ್ಲಿ ಸುವೇಂದು ಮತ ಚಲಾವಣೆ

ಹೊಸದಿಲ್ಲಿ: ಪಂಚರಾಜ್ಯ ಚುನಾವಣೆಯ ಭಾಗವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭೆಗೆ ಇಂದು (ಗುರುವಾರ) ಎರಡನೇ ಸುತ್ತಿನ ನಡೆಯಲಿದೆ. ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ನಡುವಿನ ತೀವ್ರ ಹಣಹಾಣಿಗೆ ವೇದಿಕೆಯಾಗಿರುವ ನಂದಿಗ್ರಾಮದಲ್ಲೂ ಈ ಸುತ್ತಿನಲ್ಲಿ ಮತದಾನ ನಡೆಯುತ್ತಿರುವುದು ಕುತೂಹಲ ಹೆಚ್ಚಿಸಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ವ್ಯಾಪಕ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಇನ್ನು ಬೆಳಗ್ಗೆಯಿಂದಲೇ ಜನರು ಮತಗಟ್ಟೆ ಬಂದು ಭಾರೀ ಉತ್ಸುಕತೆಯಿಂದ ಮತ ಚಲಾಯಿಸುತ್ತಿದ್ದಾರೆ. ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಕೂಡ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಇನ್ನು ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಕೆಲವು ಮತಗಟ್ಟೆಗಳಲ್ಲಿ ದೋಷಪೂರಿತ ಇವಿಎಂ ಮಷಿನ್‌ಗಳಿಂದಾಗಿ ಮತದಾನ ಪ್ರಕ್ರಿಯೆ ವಿಳಂಬವಾದ ಘಟನೆ ಕೂಡ ನಡೆದಿದೆ. ಅಸ್ಸಾಂನ 13 ಜಿಲ್ಲೆಗಳಲ್ಲಿನ 39 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಇನ್ನು ಪಶ್ಚಿಮ ಬಂಗಾಳದ 30 ಕ್ಷೇತ್ರಗಳಲ್ಲಿ ಮತದಾನ ನಿಗದಿಯಾಗಿದೆ. ಈ ಮಧ್ಯೆ, ಮತದಾನಕ್ಕೆ ಕೆಲವೆ ತಾಸುಗಳು ಬಾಕಿ ಉಳಿದಿರವಾಗಲೇ ಬಿಜೆಪಿಯೇತರ ಸಮಾನಮನಸ್ಕ ಪಕ್ಷಗಳ ನಾಯಕರ ಒಗ್ಗೂಡಿಕೆಗೆ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ. ಸೋನಿಯಾ ಗಾಂಧಿ, ಶರದ್‌ ಪವಾರ್‌, ಉದ್ಧವ್‌ ಠಾಕ್ರೆ, ಕೇಜ್ರಿವಾಲ್‌, ಕೆಸಿಆರ್‌, ಜಗನ್‌ ಸೇರಿದಂತೆ ಹತ್ತು ಮುಖಂಡರಿಗೆ ಈ ಸಂಬಂಧ ಮಮತಾ ಪತ್ರ ಬರೆದು ಒಗ್ಗಟ್ಟು ಪ್ರದರ್ಶಿಸುವಂತೆ ಮನವಿ ಮಾಡಿಕೊಂಡಿದ್ದಾರೆ.


from India & World News in Kannada | VK Polls https://ift.tt/39yH9GV

ಮಂಗಳೂರು ಮೂಲದ ದಂಪತಿ ನ್ಯೂಜಿಲ್ಯಾಂಡ್‌ನಲ್ಲಿ ದುರ್ಮರಣ: ಮಗನಿಂದಲೇ ಹೆತ್ತವರ ಭೀಕರ ಹತ್ಯೆ!

ಮಂಗಳೂರು: ದೇಶದ ಆಕ್ಲಂಡ್‌ ನಗರದಲ್ಲಿ ಮೂಲದ ದಂಪತಿಯನ್ನು ಅವರ ಮಗನೇ ಚೂರಿಯಿಂದ ಇರಿದು ಭೀಕರವಾಗಿ ಕೊಲೆಗೈದಿದ್ದಾನೆ. ಮಂಗಳೂರಿನ ಬಲ್ಮಠ ನಿವಾಸಿಗಳಾಗಿದ್ದ ಎಲ್ಸಿ ಬಂಗೇರ ಮತ್ತು ಅವರ ಪತಿ ಹರ್ಮನ್‌ ಬಂಗೇರ ಕೊಲೆಯಾದವರು. ಎಂಜಿನಿಯರಿಂಗ್‌ ಓದುತ್ತಿರುವ ಪುತ್ರ ಶೀಯಲ್‌(23) ಎಂಬಾತ ತನ್ನ ಮನೆಯಲ್ಲೇ ಮಾಡಿದ್ದಾನೆ ಎಂದು ಆರೋಪಿಸಲಾಗಿದ. ಐದು ದಿನಗಳ ಹಿಂದೆ ಘಟನೆ ನಡೆದಿದ್ದು, ಹೆತ್ತವರಿಗೆ ಚೂರಿಯಿಂದ ಇರಿದ ಬಳಿಕ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಸ್ಥಳೀಯರು ಗಮನಿಸಿ, ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಎಲ್ಸಿ ಮತ್ತು ಹರ್ಮನ್‌ ಮಂಗಳೂರಿನವರು. ಎಲ್ಸಿಯ ತಂದೆ ಎಡ್ವರ್ಡ್‌ ಅಮ್ಮನ್ನ ಅವರು ಬಲ್ಮಠದ ಶಾಂತಿ ಕೆಥಡ್ರಲ್‌ನ ಸಂಡೇ ಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದರು. ಹರ್ಮನ್‌ ಅವರು ಮುಂಬಯಿಯ ಶಾಲೆಯೊಂದರಲ್ಲಿಆಡಳಿತಾಧಿಕಾರಿಯಾಗಿದ್ದರು. ಮುಂಬಯಿಯಲ್ಲಿ ಗೋದ್ರೆಜ್‌ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಎಲ್ಸಿ ಅವರೊಂದಿಗೆ ಹರ್ಮನ್‌ ಅವರ ಮದುವೆಯಾದ ಬಳಿಕ ಗೋವಾದಲ್ಲಿ ನೆಲೆಸಿದ್ದರು. ಮಗನ ಉನ್ನತ ಮತ್ತು ಉತ್ತಮ ವಿದ್ಯಾಭ್ಯಾಸಕ್ಕಾಗಿ ದಂಪತಿ 2007ರಲ್ಲಿ ನ್ಯೂಜಿಲ್ಯಾಂಡ್‌ ತೆರಳಿದ್ದರು. 2014ರಲ್ಲಿ ಮಗ ಪದವಿ ಮುಗಿಸಿದ್ದ. ಕೊಲೆಗೆ ಕಾರಣವೇನು? ಇತ್ತೀಚಿನ ದಿನಗಳಲ್ಲಿಅವರ ಮಗ ಹೆತ್ತವರಿಂದ ದೂರವಿರಲು ಬಯಸಿದ್ದ. ತನ್ನಿಚ್ಛೆಗೆ ಸರಿಕಂಡಂತೆ ವರ್ತಿಸುತ್ತಿದ್ದ. ಇದೇ ಕಾರಣಕ್ಕೆ ಹೆತ್ತವರ ಜತೆ ಜಗಳ ಮಾಡುತ್ತಿದ್ದ. ಕಳೆದ ಶುಕ್ರವಾರ ಕೂಡಾ ಇದೇ ವಿಚಾರದಲ್ಲಿ ಜಗಳ ನಡೆದಿದ್ದು, ಶೀಯಲ್‌. ಹೆತ್ತವರ ಮೇಲೆ ಚೂರಿಯಿಂದ ಇರಿದಿದ್ದ. ಹೆತ್ತವರು ಸತ್ತರೆಂದು ಗೊತ್ತಾಗಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಸ್ಥಳೀಯರು ಕಂಡು ಆಕ್ಲಂಡ್‌ ಆಸ್ಪತ್ರೆಗೆ ದಾಖಲಿಸಿದ್ದು, ಆತ ಜೀವನ್ಮರಣ ಸ್ಥಿತಿಯಲ್ಲಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.


from India & World News in Kannada | VK Polls https://ift.tt/3sHXEb5

ರಾಸಲೀಲೆ ನಡೆದಿದ್ದು ಕಾಂಗ್ರೆಸ್‌ ಮುಖಂಡನ ಫ್ಲ್ಯಾಟ್‌ನಲ್ಲಿ? ಶೀಘ್ರದಲ್ಲೇ ಎಸ್‌ಐಟಿಯಿಂದ ಫ್ಲ್ಯಾಟ್‌ ಮಹಜರು!

ಬೆಂಗಳೂರು: ಜಾರಕಿಹೊಳಿ ಮತ್ತು ಯುವತಿ ಲೈಂಗಿಕ ಕ್ರಿಯೆ/ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ನಗರದ ಪ್ರತಿಷ್ಠಿತ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ ಮುಖಂಡರೊಬ್ಬರಿಗೆ ಸೇರಿದ್ದು ಎಂದು ಹೇಳಲಾಗಿದೆ. ಧಾರವಾಡ ಮೂಲದ ಈ ಕಾಂಗ್ರೆಸ್‌ ಮುಖಂಡ ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಾರಕಿಹೊಳಿ ಅವರಿಗೆ ಹಲವಾರು ವರ್ಷಗಳಿಂದ ಪರಿಚಿತರು, ಆಪ್ತರಾಗಿದ್ದಾರೆ. ಕರ್ನಾಟಕ ಮತ್ತು ಹೊರ ರಾಜ್ಯದಲ್ಲಿ ಈ ಇಬ್ಬರು ಸಾಕಷ್ಟು ಬಾರಿ ಭೇಟಿ ಮಾಡಿದ್ದರು.ಆತ್ಮೀಯರಾಗಿದ್ದ ಕಾರಣ ಜಾರಕಿಹೊಳಿ ಉಳಿದುಕೊಳ್ಳಲು ಫ್ಲ್ಯಾಟ್‌ ಕೀ ನೀಡಲಾಗಿತ್ತು ಎಂದು ಹೇಳಲಾಗಿದೆ. ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ ಸಂಕೀರ್ಣಕ್ಕೆ ಯುವತಿಯನ್ನು ಜಾರಕಿಹೊಳಿ ಕರೆಸಿಕೊಂಡಿದ್ದರು ಎನ್ನಲಾಗಿದೆ. ಕೆಲಸ ಕೊಡಿಸುತ್ತೇನೆ ಎಂದಿದ್ದ ಕಾರಣಕ್ಕಾಗಿ ಎರಡು ಬಾರಿ ಫ್ಲ್ಯಾಟ್‌ಗೆ ತೆರಳಿ ಜಾರಕಿಹೊಳಿ ಅವರಿಗೆ ಸಹಕರಿಸಿದ್ದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ಮಾಡಬೇಕಾಗಿರುವ ಕಾರಣ ಒಂದೆರಡು ದಿನಗಳಲ್ಲಿ ಯುವತಿಯನ್ನು ಆ ಫ್ಲ್ಯಾಟ್‌ಗೆ ಎಸ್‌ಐಟಿ ತಂಡ ಕರೆದೊಯ್ಯಲಿದೆ.


from India & World News in Kannada | VK Polls https://ift.tt/3mkZigN

ರಮೇಶ್‌ 8 ತಿಂಗಳ ಹಿಂದೆ ಪರಿಚಯ, ಕೆಲಸ ಕೊಡಿಸುವುದಾಗಿ ದೈಹಿಕ ಸಂಪರ್ಕ: ಎಸ್‌ಐಟಿಯ ಪ್ರಶ್ನೆಗಳಿಗೆ ಸಿ.ಡಿ ಲೇಡಿಯ ಉತ್ತರ ಹೀಗಿದೆ

ಬೆಂಗಳೂರು: ಬೆಂಗಳೂರು: ರಮೇಶ್‌ ಜಾರಕಿಹೊಳಿ ಅವರಿಂದ ಅನ್ಯಾಯಕ್ಕೆ ಒಳಗಾಗಿದ್ದೇನೆ ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿರುವ ಯುವತಿಯನ್ನು ಗುರುವಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ತೀವ್ರ ವಿಚಾರಣೆಗೆ ಗುರಿಪಡಿಸಿತು. ಮಾಜಿ ಸಚಿವರಿಂದ ನಡೆದಿದೆ ಎನ್ನಲಾದ ಅತ್ಯಾಚಾರದ ಮೂಲ ಪ್ರಕರಣದ ಜತೆಗೆ, ವಿಡಿಯೊ ಬಿಡುಗಡೆ ಬಳಿಕ ಯುವತಿಯ ಓಡಾಟ, ಅವರಿಗೆ ಸಹಕರಿಸಿದ ಸ್ನೇಹಿತರು, ಉದ್ಯಮಿಗಳ ಬಗ್ಗೆಯೂ ಯುವತಿಯನ್ನು ಪ್ರಶ್ನಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಈಗಾಗಲೇ ಆಕಾಶ್‌ ಎಂಬ ಯುವಕ ನೀಡಿರುವ ದಾಖಲೆ ಮತ್ತು ಮಾಹಿತಿಗಳನ್ನು ಆಧರಿಸಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಆಕಾಶ್‌ಗೆ ಯುವತಿ ಹಣ ನೀಡಿದ್ದಾಳೆ ಎನ್ನಲಾಗಿರುವುದು, ಯುವತಿ ಜೊತೆಗಿನ ಒಡನಾಟ, ಭೇಟಿಗೆ ಸಂಬಂಧಿಸಿ ಇಬ್ಬರು ನೀಡುವ ಹೇಳಿಕೆಗಳನ್ನು ತಾಳೆ ಹಾಕಿಕೊಂಡು ವಿಚಾರಣೆ ಮುಂದುವರಿಸಲಾಗುತ್ತಿದ. ಎಂಟು ತಿಂಗಳ ಹಿಂದೆ ಪರಿಚಯ!ರಮೇಶ್‌ ಜಾರಕಿಹೊಳಿ ಅವರ ಪರಿಚಯ ಆಗಿದ್ದು 2020ರ ಜುಲೈನಲ್ಲಿ. ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ಬಳಸಿಕೊಂಡರು ಎಂದು ಎಸ್‌ಐಟಿ ತಂಡದ ಮಾಹಿತಿ ಸಂಗ್ರಹದ ವೇಳೆ ಯುವತಿ ತಿಳಿಸಿದ್ದಾಳೆ. ಮಂಗಳವಾರ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ಧ ಯುವತಿಯನ್ನು ಬುಧವಾರ ಬೆಳಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಎಸ್‌ಐಟಿ ತಂಡ ಪ್ರಶ್ನಾವಳಿಗಳ ಮೂಲಕ ವಿಚಾರಣೆಗೆ ಒಳಪಡಿಸಿದೆ. ಅತ್ಯಾಚಾರ ಆರೋಪದ ಜತೆಗೆ ವಿಡಿಯೊ ಬಹಿರಂಗವಾದ ಬಳಿಕದ ಯುವತಿಯ ಚಲನವಲನಗಳಿಗೆ ಸಂಬಂಧಿಸಿ ಒಟ್ಟು 84 ಪ್ರಶ್ನೆಗಳನ್ನು ಕೇಳಲಾಗಿದೆ. ಇದರಲ್ಲಿ, ಸಿ.ಡಿ ಬಹಿರಂಗವಾದ ಮಾ.2ರಂದು ಚರ್ಚ್‌ ಸ್ಟ್ರೀಟ್‌ನ ಎಂಪೈರ್‌ ಹೋಟೆಲ್‌ ಬಳಿ ಉದ್ಯಮಿ ಶಿವಕುಮಾರ್‌ ಎಂಬುವರಿಂದ ಹಣ ಪಡೆದು ಗೋವಾಗೆ ಹೋಗಿದ್ದೇಕೆ ಎಂಬ ಪ್ರಶ್ನೆಯೂ ಪ್ರಮುಖವಾಗಿದೆ. ಕೆಲವು ಪ್ರಶ್ನೆಗಳಿಗೆ ಉತ್ತರಿಸಿರುವ ಯುವತಿ, ಕೆಲವು ಪ್ರಶ್ನೆಗಳಿಗೆ ತಡಕಾಡಿ ಉತ್ತರಿಸಿದ್ದಾರೆಂದು ಹೇಳಲಾಗಿದೆ. ಇಂದು ಕೂಡ ತನಿಖೆ ಮುಂದುವರಿಯಲಿದೆ. ಎಸ್‌ಐಟಿ ಪ್ರಶ್ನೆಗಳಿಗೆ ಯುವತಿ ಉತ್ತರ * ಮೊದಲು ಭೇಟಿ ಮಾಡಿದ್ದು ಯಾವಾಗ? ಸಚಿವರಾಗಿರುವ ಅವರ ಪೋನ್‌ ನಂಬರ್‌ ಯಾರಿಂದ ಸಿಕ್ಕಿತು ಮತ್ತು ಎಲ್ಲಿಂದ ಸಿಕ್ಕಿತು? - ಫೋನ್‌ ನಂಬರ್‌ ನೀಡಿದ ಬಳಿಕ 'ಮಲ್ಲೇಶ್ವರಂ ಪಿಜಿ' ಎಂದು ಮೊಬೈಲ್‌ನಲ್ಲಿ ಸೇವ್‌ ಮಾಡಿಸಿದ್ದರು. * ದೈಹಿಕ ಸಂಬಂಧ ಆಗಿದ್ದು ಹೇಗೆ? ಕೆಲಸದ ವಿಚಾರವಾಗಿ ಭರವಸೆ ನೀಡಿದ್ದ ಕಾರಣ ಎರಡ್ಮೂರು ಬಾರಿ ಆಗಿದೆ. * ದೈಹಿಕ ಸಂಬಂಧ ವಿರೋಧಿಸಿಲ್ಲವೇಕೆ? - ಉತ್ತರ ಕರ್ನಾಟಕದಲ್ಲಿ ಪ್ರಭಾವಿಯಾಗಿದ್ದರಿಂದ ಬೆದರಿಕೆ ಹಾಕುತ್ತಾರೆ, ನಿಂದಿಸುತ್ತಾರೆ ಎಂಬ ಭಯದಿಂದ ಸಹಕರಿಸಿದೆ. ನನಗೆ ಭಯ ಮತ್ತು ಜಿಗುಪ್ಸೆ ಆಗುತ್ತಿತ್ತು. * ಈ ವಿಚಾರವನ್ನು ನಿಮ್ಮ ತಾಯಿಗೆ ತಿಳಿಸಿದ್ರಾ? - ಇಂತಹ ವಿಚಾರಗಳನ್ನು ಯಾರು ಪಾಲಕರ ಎದುರು ಹೇಳಿಕೊಳ್ಳುತ್ತಾರೆ. ಅದೂ ಅಲ್ಲದೇ ಜಾರಕಿಹೊಳಿಯವರೇ ವಿಡಿಯೊ ಮಾಡಿಕೊಂಡಿದ್ದರು. ಹೀಗಾಗಿ, ತಾಯಿ ಬಳಿ ಹೇಳಿಕೊಂಡಿರಲಿಲ್ಲ. * ಎಲ್ಲಿ ಭೇಟಿ ಮಾಡುತ್ತಿದ್ದರು? ಕರೆದಿದ್ದು ಎಲ್ಲಿ? - ಫೋನ್‌ ಮಾಡಿ ಕರೆಯುತ್ತಿದ್ದರು. ಅಶ್ಲೀಲವಾಗಿ ಮಾತನಾಡುತ್ತಿದ್ದರು. ಇಂತಹ ಮಾತುಗಳಿಂದ ಹಿಂಸೆಯಾಗಿ ಶ್ರವಣ್‌ ಬಳಿ ಹೇಳಿಕೊಂಡಿದ್ದೆ. * ಶ್ರವಣ್‌ ಪರಿಚಯವಾಗಿದ್ದು ಹೇಗೆ ಮತ್ತು ಎಲ್ಲಿ? - ಶ್ರವಣ್‌ ನನ್ನ ಕಾಲೇಜು ಸ್ನೇಹಿತ. ಒಮ್ಮೆ ಪ್ರತಿಭಟನೆ ನಡೆಸುವ ವೇಳೆ ಪರಿಚಯವಾಗಿದ್ದ. ಆತನೇ ನರೇಶ್‌ನ ಪರಿಚಯ ಮಾಡಿಸಿದ್ದು. ನನಗಾದ ಅನ್ಯಾಯದ ಕುರಿತು ಹೇಳಿಕೊಂಡಿದ್ದೆ. ಅವರು ಡಾಕ್ಯುಮೆಂಟ್ಸ್‌ ಇಲ್ಲದೇ ಆಗುವುದಿಲ್ಲ ಎಂದಿದ್ದರು. ಹೀಗಾಗಿ, ನಾನು ವಿಡಿಯೋ ಮಾಡಿಕೊಂಡಿದ್ದೆ. ವಿಡಿಯೊ ರೆಕಾರ್ಡ್‌ ಮಾಡಿದ್ದೆ. ಒಂದು ಕಾಪಿ ಪಿ.ಜಿಯಲ್ಲಿ ಹಾಗೂ ಮತ್ತೊಂದನ್ನು ನರೇಶಣ್ಣನಿಗೆ ಕೊಟ್ಟಿದ್ದೆ. ಆದರೆ, ಆ ವಿಡಿಯೊ ಹೊರಗೆ ಬಂದಿದ್ದು ಹೇಗೆ ಎಂಬುದು ತಿಳಿದಿಲ್ಲ. * ಕಿರುಚಿತ್ರ ನಿರ್ಮಿಸಲು ಸಂಪರ್ಕ ಮಾಡಿದ್ದೀರಿ ಎನ್ನುವಿರಿ, ಹಾಗಿದ್ದರೆ ಯಾವ ಕಿರುಚಿತ್ರಕ್ಕಾಗಿ ಸಂಪರ್ಕಿಸಲಾಗಿತ್ತು? - ಡ್ಯಾಮ್‌ಗಳ ಕಿರುಚಿತ್ರ ವಿಚಾರ * ವಿಧಾನಸೌಧಕ್ಕೆ ಹೋಗಿದ್ದು ಹೇಗೆ? ಯಾರ ಮುಖಾಂತರ? - ಮಧ್ಯಾಹ್ನ 3.30ಕ್ಕೆ ವಿಸಿಟರ್‌ ಪಾಸ್‌ ಪಡೆದು ಹೋಗಿದ್ದೆ. * ದೂರು ನೀವೇ ಬರೆದುಕೊಟ್ಟಿದ್ದಾ? ವಕೀಲರನ್ನು ಸಂಪರ್ಕಿಸಿದ್ದು ಹೇಗೆ? ದೂರು ಬರೆದಿದ್ದು ನಾನೇ ಆದರೆ, ವಕೀಲರ ಸಂಪರ್ಕ ಇನ್ನಿತರ ವಿಚಾರ ತಿಳಿಸುವುದಿಲ್ಲ. ==================== ಸೂಕ್ತ ಉತ್ತರ ಸಿಗದ ಪ್ರಶ್ನೆಗಳು ಅಪಾರ್ಟ್‌ಮೆಂಟ್‌ನಿಂದ ಹೊರಡುವ ವೇಳೆ ಕೆಲಸ ಆಗಿದೆ ಎಂದು ಹೇಳಿದ್ದು ಯಾರಿಗೆ? ವ್ಯಾನಿಟಿ ಬಾಗ್‌ಲ್ಲಿ ಕ್ಯಾಮೆರಾ ಇಟ್ಟುಕೊಂಡಿದ್ದು ಏಕೆ? ಪೋನ್‌ ಚಾರ್ಜರ್‌ನಲ್ಲೂ ಕ್ಯಾಮೆರಾ ಇಟ್ಟುಕೊಂಡಿದ್ದು ಏಕೆ ? - ವಿಡಿಯೋ ರೆಕಾರ್ಡಿಂಗ್‌ ಮಾಡಿಕೊಂಡಿದ್ದ ದಿನ ಅಪಾರ್ಟ್‌ಮೆಂಟ್‌ ಬಳಿ ಶ್ರವಣ್‌ ನಿಮಗಾಗಿ ಕಾಯುತ್ತಿದ್ದುದು ಏಕೆ? ಮೊದಲ ಬಾರಿಯೇ ವಿಡಿಯೋ ಮಾಡಿಕೊಳ್ಳಲಿಲ್ಲವೇಕೆ? - ಮಾ.2ರಂದು ಸಿಡಿ ಬಹಿರಂಗ ಬಳಿಕ ಚರ್ಚ್‌ ಸ್ಟ್ರೀಟ್‌ನಲ್ಲಿ ಯಾವ ಉದ್ಯಮಿಯನ್ನು ಭೇಟಿ ಮಾಡಿದ್ದಿರಿ? ಅವರು ನಿಮಗೆ ಹಣ ಕೊಟ್ಟು ಖಾಸಗಿ ಬಸ್‌ನಲ್ಲಿಗೋವಾಗೆ ಹೋಗಲು ವ್ಯವಸ್ಥೆ ಮಾಡಿದ್ದು ಏಕೆ? ನಿಮ್ಮ ಜೊತೆಗೆ ಬಂದವರು ಯಾರು ? ನರೇಶ್‌ ಹಾಗೂ ಶ್ರವಣ್‌ ಸೇರಿದಂತೆ ಇನ್ನಿತರರು ಎಲ್ಲಿದ್ದಾರೆ? - ಮಾ.1ರಂದು ನರೇಶ್‌, ಶ್ರವಣ್‌, ನಿಮ್ಮ ಸ್ನೇಹಿತ ಸೇರಿದಂತೆ ಕೆಲವರು ಸೇರಿ ಕಾರಿನಲ್ಲಿ ಸುಮಾರು ಹೊತ್ತು ಕುಳಿತು ಏನು ಮಾತನಾಡಿದ್ದಿರಿ? ಈ ಕುರಿತು ಸಿಸಿ ಕ್ಯಾಮೆರಾ ವಿಡಿಯೊ ಇದೆಯಲ್ವಾ?


from India & World News in Kannada | VK Polls https://ift.tt/2PpKRf1

'ಸದ್ಯ ನಾಯಕನ ಸ್ಥಾನ ಖಾಲಿ ಇಲ್ಲ' : ಸ್ಮಿತ್‌ ಆಸೆಗೆ ತಣ್ಣೀರೆರಚಿದ ಲ್ಯಾಂಗರ್‌!

ಹೊಸದಿಲ್ಲಿ: ಪ್ರಸ್ತುತ ಆಸ್ಟ್ರೇಲಿಯಾ ಟೆಸ್ಟ್ ತಂಡ ಟಿಮ್‌ ಪೇಯ್ನ್‌ ಹಾಗೂ ಸೀಮಿತ ಓವರ್‌ಗಳ ತಂಡ ಅವರ ಕೈಯಲ್ಲಿ ಸುರಕ್ಷಿತವಾಗಿದೆ ಎಂದು ಹೇಳಿದ ಆಸೀಸ್‌ ಹೆಡ್‌ ಕೋಚ್ , ರಾಷ್ಟ್ರೀಯ ತಂಡದ ನಾಯಕತ್ವಕ್ಕೆ ಮರಳಲು ಸಿದ್ದ ಎಂದಿದ್ದ ಬಯಕೆಗೆ ತಣ್ಣೀರೆರಚಿದ್ದಾರೆ. "ನಮ್ಮಲ್ಲಿ ಈಗಾಗಲೇ ಇಬ್ಬರು ಅದ್ಭುತ ನಾಯಕರಿದ್ದಾರೆ ಹಾಗೂ ಮುಂದೆ ನಮಗೆ ಆಶಷ್‌ ಟ್ರೋಫಿ ಹಾಗೂ ಟಿ20 ವಿಶ್ವಕಪ್ ಎರಡು ಕಠಿಣ ಸ್ಪರ್ಧೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರಿಂದ ನಮ್ಮ ಭವಿಷ್ಯ ಉತ್ತಮವಾಗಿ ಕಾಣುತ್ತಿದೆ," ಎಂದು ಲ್ಯಾಂಗರ್‌ ಎಬಿಸಿಗೆ ನಾಯಕತ್ವದ ಬದಲಾವಣೆ ಇಲ್ಲವೇ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವೊಂದರಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಸ್ಮಿತ್‌ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ 12 ತಿಂಗಳು ಕಾಲ ಅಮಾನತುಗೊಳಿಸಲಾಗಿತ್ತು ಹಾಗೂ ತಂಡದ ನಾಯಕತ್ವದಿಂದ ಬಲಗೈ ಬ್ಯಾಟ್ಸ್‌ಮನ್ ಅನ್ನು ಕೆಳಗೆ ಇಳಿಸಲಾಗಿತ್ತು. ಈ ಘಟನೆ ಆಧುನಿಕ ಕ್ರಿಕೆಟ್‌ನ ಸ್ಟಾರ್‌ ಕ್ರಿಕೆಟಿಗನಿಗೆ ಭಾರಿ ಹಿನ್ನಡೆಯಾಗಿತ್ತು. 12 ತಿಂಗಳ ನಿಷೇಧ ಶಿಕ್ಷೆ ಮುಗಿಸಿಕೊಂಡು 2019ರ ಜೂನ್‌ ತಿಂಗಳಲ್ಲಿ ಸ್ಟೀವನ್‌ ಸ್ಮಿತ್‌ ಆಸ್ಟ್ರೇಲಿಯಾ ತಂಡಕ್ಕೆ ಮರಳಿಸಿದ್ದರು. ಈ ವೇಳೆ ಟಿಮ್‌ ಪೇನ್‌ ಹಾಗೂ ಆರೋನ್‌ ಫಿಂಚ್‌ ಕ್ರಮವಾಗಿ ಟೆಸ್ಟ್ ಹಾಗೂ ಓಡಿಐ ತಂಡಗಳನ್ನು ಮುನ್ನಡೆಸುತ್ತಿದ್ದರು. ಈಗಲೂ ಕೂಡ ಈ ಇಬ್ಬರು ತಂಡದ ಸಾರಥ್ಯ ಮುಂದುವರಿಸಿದ್ದಾರೆ. ಸೋಮವಾರ ನ್ಯೂಸ್‌ ಕಾರ್ಪ್‌ ಜೊತೆ ಮಾತನಾಡಿದ್ದ ಸ್ಟೀವನ್‌ ಸ್ಮಿತ್‌, "ಚೆಂಡು ವಿರೂಪ ಪ್ರಕರಣದಿಂದ 12 ತಿಂಗಳ ಶಿಕ್ಷೆ ಅನುಭವಿಸಿದ್ದರಿಂದ ನಾನು ನನ್ನ ಬಗ್ಗೆ ಸಾಕಷ್ಟು ಕಲಿತಿದ್ದೇನೆ ಹಾಗೂ ಉತ್ತಮ ಮನುಷ್ಯನಾಗಿ ಬೆಳೆದಿದ್ದೇನೆ," ಎಂದು ಹೇಳಿದ್ದರು. ಸ್ಟೀವ್ ಸ್ಮಿತ್ ತನ್ನ ಎರಡು ವರ್ಷಗಳ ನಾಯಕತ್ವ ನಿಷೇಧವನ್ನು ಪೂರ್ಣಗೊಳಿಸಿದ ನಂತರ ಆಸ್ಟ್ರೇಲಿಯಾ ತಂಡದ ನಾಯಕತ್ವದ ಬಗ್ಗೆ ಊಹಾಪೋಹಗಳು ಗಾಳಿಯಲ್ಲಿ ತೇಲಾಡುತ್ತಿವೆ. ಸ್ಮಿತ್ ಅವರನ್ನು ಮತ್ತೆ ನಾಯಕನನ್ನಾಗಿ ನೇಮಿಸಬೇಕು ಎಂದು ಹಲವರು ನಂಬಿದರೆ, ಇತರರು ಈ ವಿಚಾರವನ್ನು ಬಲವಾಗಿ ತಿರಸ್ಕರಿಸಿದ್ದರು. "ನಾನು ಖಂಡಿತವಾಗಿಯೂ ನಾಯಕತ್ವದ ಬಗ್ಗೆ ಯೋಚಿಸಲು ಸಾಕಷ್ಟು ಸಮಯವನ್ನು ಹೊಂದಿದ್ದೇನೆ. ಈಗ ನಾನು ಒಂದು ಹಂತಕ್ಕೆ ತಲುಪಿದ್ದೇನೆ, ಅವಕಾಶ ಸಿಕ್ಕರೆ ತಂಡವನ್ನು ಮುನ್ನಡೆಸಲು ಉತ್ಸುಕನಾಗಿದ್ದೇನೆ. ನಾನು ನಾಯಕತ್ವ ವಹಿಸಿಕೊಳ್ಳುವುದು ಕ್ರಿಕೆಟ್‌ ಆಸ್ಟ್ರೇಲಿಯಾಗೆ ಇಷ್ಟವಾಗಿದ್ದರೆ, ತಂಡಕ್ಕೆ ಇದು ಸರಿಯಾದ ಸಮಯ ಎನಿಸಿದರೆ, ಈ ಬಗ್ಗೆ ನಾನು ಆಸಕ್ತಿಯನ್ನು ಹೊಂದಿದ್ದೇನೆ," ಎಂದು ಸ್ಮಿತ್‌ ಹೇಳಿದ್ದರು. "ಅವಕಾಶ ಬಂದರೆ ನಾನು ಉತ್ತಮ ಸ್ಥಾನದಲ್ಲಿರುತ್ತೇನೆ ಎಂದು ಭಾವಿಸುತ್ತೇನೆ. ಒಂದು ವೇಳೆ ಇದು ಸಾಧ್ಯವಾಗದೇ ಹೋದರೆ ಪರವಾಗಿಲ್ಲ. ಟಿಮ್ ಪೇನ್‌ ಹಾಗೂ ಆರೋನ್‌ ಫಿಂಚ್‌ ಅವರನ್ನು ಸಹಕರಿಸಿದ ರೀತಿಯಲ್ಲಿಯೇ ಉಸ್ತುವಾರಿ ವಹಿಸುವವರನ್ನು ನಾನು ಬೆಂಬಲಿಸುತ್ತೇನೆ," ಸ್ಟೀವನ್‌ ಸ್ಮಿತ್ ತಿಳಿಸಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3mbcDrF

ವೈದ್ಯಕೀಯ ಪರೀಕ್ಷೆ ಹಿನ್ನೆಲೆ ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆಗೆ ಸಿ.ಡಿ ಲೇಡಿ: ತನಿಖೆಗೆ ಖಡಕ್‌ ಅಧಿಕಾರಿ ಕವಿತಾ ನೇಮಕ

ಬೆಂಗಳೂರು: ರಮೇಶ್‌ ಜಾರಕಿಹೊಳಿಯವರದ್ದು ಎನ್ನಲಾದ ಸಿ.ಡಿ. ಪ್ರಕರಣ ಸಂಬಂಧ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿರುವ ಯುವತಿ, ಇಂದು ವಿಶೇಷ ತನಿಖಾ ತಂಡದ (ಎಸ್ಐಟಿ) ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಮಂಗಳವಾರ ಮಧ್ಯಾಹ್ನ ಹಾಜರಾದ ನಂತರ ಯುವತಿಯ ಧ್ವನಿ ಮಾದರಿ‌ ಸಂಗ್ರಹಿಸಲಾಗಿತ್ತು. ಜೊತೆಗೆ, ಬುಧವಾರ ಬೆಳಿಗ್ಗೆ ವಿಚಾರಣೆಗೆ ಬರುವಂತೆ ಎಸ್ಐಟಿ, ನೋಟಿಸ್ ಸಹ ನೀಡಿತ್ತು. ಅದರನ್ವಯ, ಇಂದು ಎಸ್‌ಐಟಿ ಮುಂದೆ ಬಂದಿರುವ ಯುವತಿಯನ್ನು ನಡೆಸುವ ಹಿನ್ನೆಲೆ ಶಿವಾಜಿನಗರದಲ್ಲಿರುವ ಬೌರಿಂಗ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಇನ್ನು ವೈದ್ಯಕೀಯ ಪರೀಕ್ಷೆ ಬಳಿಕ ಸಿ.ಡಿ ಯುವತಿಯನ್ನು ರಾಸಲೀಲೆ ನಡೆದ ಸ್ಥಳಕ್ಕೆ ಮಹಜರಿಗೆ ಕರೆದುಕೊಂಡು ಹೋಗಲಾಗುತ್ತೆ. ಮಹಜರಿನ ಬಳಿಕ ಎಸ್‌ಐಟಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಖಡಕ್‌ ತನಿಖಾಧಿಕಾರಿ ನೇಮಕಇನ್ನು ಯುವತಿ ನೀಡಿರುವ ದೂರು ಆಧರಿಸಿ ದಾಖಲಾಗಿರುವ ಎಫ್‌ಐಆರ್‌ ಸಂಬಂಧಿಸಿದಂತೆ ತನಿಖಾಧಿಕಾರಿಯಾಗಿ ಖಡಕ್‌ ಅಧಿಕಾರಿ ಕವಿತಾ ಅವರನ್ನು ನೇಮಿಸಲಾಗಿದೆ. ಬೆಂಗಳೂರು ನಗರ ಟ್ರಾಫಿಕ್‌ ಎಸಿಪಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಕವಿತಾ ಅವರು, ತಮ್ಮ ಸೇವಾವಧಿಯಲ್ಲಿಪ್ರತಿಷ್ಠಿತ ತನಿಖಾ ಸಂಸ್ಥೆಯಾಗಿರುವ ರಾಷ್ಟ್ರೀಯ ತನಿಖಾ ದಳದಲ್ಲಿ(ಎನ್‌ಐಎ) ಕಾರ್ಯ ನಿರ್ವಹಿಸಿದ್ದಾರೆ. ಕಾನೂನು ಪದವಿಧರರಾಗಿರುವ ಕವಿತಾ ಅವರು, 2011ರಲ್ಲಿ ಪ್ರಧಾನಮಂತ್ರಿಯಿಂದ ಇ ಗವರ್ನೆನ್ಸ್‌ ಅವಾರ್ಡ್‌ ಪಡೆದಿದ್ದಾರೆ. ಅಲ್ಲದೇ, ಮುಖ್ಯಮಂತ್ರಿಗಳ ಪದಕಕ್ಕೂ ಭಾಜನರಾಗಿದ್ದಾರೆ. 2020ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರು ಸಂಚಾರ ಪೂರ್ವ ವಿಭಾಗದಲ್ಲಿ ಎಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಅವರನ್ನು ಯುವತಿ ನೀಡಿದ ದೂರಿನ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. 8 ಪೊಲೀಸರ ಭದ್ರತೆಸಂತ್ರಸ್ತ ಯುವತಿ ಪ್ರಾಣ ಬೆದರಿಕೆ ಇದೆ ಎಂದು ಹೇಳಿಕೆ ನೀಡಿರುವ ಕಾರಣ ಇನ್ಸ್‌ಪೆಕ್ಟರ್‌ ಮಟ್ಟದ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡಂತೆ ಒಟ್ಟು 8 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ವಿಚಾರಣೆ ಸಂಬಂಧ ಯುವತಿ ಓಡಾಡುವ ವೇಳೆ ಆಕೆಯ ಕಾರಿನ ಮುಂದೆ ಮತ್ತು ಹಿಂದೆ ಪೊಲೀಸ್‌ ಜೀಪ್‌ಗಳಲ್ಲಿ ಬೆಂಗಾವಲಾಗಿ ಭದ್ರತೆ ಒದಗಿಸಲಿವೆ. ಇದಲ್ಲದೆ ಯುವತಿ ವಿಚಾರಣೆಗೆ ಹೋದ ಕಡೆಗಳಲ್ಲೆಲ್ಲಾ ನೂರಾರು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.


from India & World News in Kannada | VK Polls https://ift.tt/3m7I4TF

ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮಗೆ ಕೋವಿಡ್‌ ಪಾಸಿಟಿವ್‌

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರಿಗೆ ಕೋವಿಡ್‌ ಪಾಸಿಟಿವ್‌ ಆಗಿದೆ. ಈ ವಿಚಾರವನ್ನು ಖದ್ದಾಗಿ ಎಚ್‌ಡಿ ದೇವೇಗೌಡರು ಟ್ವೀಟ್‌ ಮಾಡುವ ಮೂಲಕ ಧೃಡಪಡಿಸಿದ್ದಾರೆ. ನನ್ನ ಹೆಂಡತಿ ಚೆನ್ನಮ್ಮ ಮತ್ತು ನಾನು ಕೋವಿಡ್‌ ತಪಾಸಣೆಗೆ ಒಳಪಟ್ಟಾಗ ಪಾಸಿಟಿವ್‌ ಎಂದು ತಿಳಿದುಬಂದಿದೆ. ಈ ಕಾರಣಕ್ಕಾಗಿ ನಾವು ಇತರ ಕುಟುಂಬ ಸದಸ್ಯರೊಂದಿಗೆ ಸ್ವಯಂ-ಪ್ರತ್ಯೇಕಗೊಂಡಿರುತ್ತೇವೆ. ಕಳೆದ ಕೆಲವು ದಿನಗಳಿಂದ ನಮ್ಮೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳು ಭಯಭೀತರಾಗದಂತೆ ನಾನು ವಿನಂತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಇದೇ ವಿಚಾರವಾಗಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ ಕೂಡಾ ಟ್ವೀಟ್ ಮಾಡಿದ್ದು, ಹಿರಿಯರು, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಹಾಗೂ ಅವರ ಧರ್ಮಪತ್ನಿ ಅವರಿಗೆ ಕೊರೊನಾ ಸೋಂಕು ಧೃಢಪಟ್ಟಿರುವ ಸುದ್ದಿ ತಿಳಿಯಿತು. ವೈದ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಅವರ ಆರೋಗ್ಯದ ಬಗ್ಗೆ ಖುದ್ದಾಗಿ ಮಾಹಿತಿ ಪಡೆಯಲಿದ್ದೇನೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಇನ್ನು ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಕೂಡಾ ಟ್ವೀಟ್ ಮಾಡಿದ್ದು, ಹಿರಿಯ ರಾಜಕಾರಣಿಗಳು ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ದೇವೇಗೌಡರು ಮತ್ತು ಅವರ ಪತ್ನಿ ಚೆನ್ನಮ್ಮನವರು ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಲಿ, ಶೀಘ್ರದಲ್ಲಿ ಚೇತರಿಸಿಕೊಂಡು ಎಂದಿನಂತೆ ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.


from India & World News in Kannada | VK Polls https://ift.tt/3m8pYkD

ಬೆಂಗಳೂರು: ಸಾಲದಿಂದ ಬೇಸತ್ತು ಏರ್‌ಪೋರ್ಟ್ ಬಳಿ ಕ್ಯಾಬ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಸಾವು

ದೇವನಹಳ್ಳಿ: ಕೆಂಪೇಗೌಡ ವಿಮಾನ ನಿಲ್ಧಾಣ ಬಳಿ ಕ್ಯಾಬ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮುಂಜಾನೆ ಮೃತಪಟ್ಟಿದ್ದಾರೆ. ಪ್ರತಾಪ್ ಆತ್ಮಹತ್ಯೆ ಮಾಡಿಕೊಂಡ ಚಾಲಕ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನದ ದ್ವಾರದ ಮುಂಭಾಗ ಮಾರ್ಚ್ 30ರಂದು ಚನ್ನಪಟ್ಟಣ ಮೂಲದ ಪ್ರತಾಪ್ ಏರ್‌ಪೋರ್ಟ್‌ ಟರ್ಮಿನಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕ್ಯಾಬ್‌ನಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಆಗ ಭದ್ರತಾಪಡೆ ಕ್ಯಾಬ್ ಗಾಜು ಒಡೆದು ಗಂಭೀರ ಗಾಯಗೊಂಡಿದ್ದ ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದರು. ಆದ್ರೆ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಚಾಲಕ ಪ್ರತಾಪ್ ಮೃತಪಟ್ಟಿದ್ದಾರೆ. ಚಾಲಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಏರ್‌ರ್ಪೋಟ್ ಟ್ಯಾಕ್ಸಿಗಳನ್ನ ನಿಲ್ಲಿಸಿ ಧರಣಿ ನಡೆಸಲು ಇತರೆ ಚಾಲಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂದೂ ಸಹ ಏರ್ಪೋಟ್ ಪ್ರಯಾಣಿಕರಿಗೆ ಟ್ಯಾಕ್ಸಿ ಬಿಸಿ ತಟ್ಟಲಿದೆ. ಮಂಗಳವಾರ ಸಂಜೆಯಿಂದ ಒಲಾ, ಉಬರ್ ಮತ್ತು ಏರ್‌ಪೋರ್ಟ್‌ ಟ್ಯಾಕ್ಸಿ ಚಾಲಕರು ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನು? ಕೊರೊನಾದ ಬಳಿಕ ಬಾಡಿಗೆ ದೊರೆಯುದು ಕಡಿಮೆಯಾಗಿದೆ. ಇದರಿಂದಾ ಸಾಲ ಪಾವತಿಸಲಾಗದೆ ಪ್ರತಾಪ್‌ ಖಿನ್ನತೆಗೊಳಗಾಗಿದ್ದರು.ಈ ಹಿನ್ನೆಲೆ ಪೆಟ್ರೋಲ್‌ ಸುರಿದುಕೊಂಡು ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದಿದೆ. ಬದಲಿ ಸಂಚಾರ ವ್ಯವಸ್ಥೆ ಮಾಡಿಕೊಳ್ಳಿ! ಇನ್ನು ಸಹದ್ಯೋಗಿಯ ಆತ್ಮಹತ್ಯೆ ಹಿನ್ನೆಲೆ ಇತರ ಚಾಲಕರು ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಸಂಜೆಯಿಂದಲೇ ಒಲಾ, ಉಬರ್ ಮತ್ತು ಏರ್‌ಪೋರ್ಟ್‌ ಟ್ಯಾಕ್ಸಿ ಚಾಲಕರು ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ವಿಮಾನ ನಿಲ್ಧಾಣದ ಪ್ರಾಧಿಕಾರ, ಪ್ರತಿಭಟನೆಯಿಂದಾಗಿ ಟ್ಯಾಕ್ಸಿ ವಾಹನಗಳ ಪ್ರಯಾಣದಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಬಿಎಂಟಿಸಿ ಬಸ್‌ಗಳನ್ನು ಪ್ರಯಾಣಿಕರು ಬಳಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಅಥವಾ ಸ್ವಂತ ವಾಹನ ಬಳಸುವಂತೆ ಮನವಿ ಮಾಡುತ್ತಿದ್ದೇವೆ ಎಂದು ಪ್ರ್ರಾಧಿಕಾರ ತಿಳಿಸಿದೆ.


from India & World News in Kannada | VK Polls https://ift.tt/3rCr2yq

ಐಪಿಎಲ್ 2021: ಸಿಎಸ್‌ಕೆಗೆ ಎದುರಾಗಿರುವ ಸವಾಲು ಬಹಿರಂಗಪಡಿಸಿದ ಚೋಪ್ರಾ!

ಹೊಸದಿಲ್ಲಿ: ಕಳೆದ 2020ರ ಆವೃತ್ತಿಯ ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಎಎಸ್‌ ಧೋನಿ ನಾಯಕತ್ವದ ಏಪ್ರಿಲ್‌ 9 ರಿಂದ ಆರಂಭವಾಗಲಿರುವ ಹದಿನಾಲ್ಕನೇ ಆವೃತ್ತಿಯ ಟೂರ್ನಿಗೆ ಸಜ್ಜಾಗುತ್ತಿದೆ. ಏ. 10 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಮೊದಲನೇ ಪಂದ್ಯದಲ್ಲಿ ಸೆಣಸಲಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ತರಬೇತಿ ಶಿಬಿರ ಮುಗಿಸಿದ್ದ ಸಿಎಸ್‌ಕೆ, ಇದೀಗ ಮುಂಬೈನಲ್ಲಿ ಟೂರ್ನಿಯ ಸಿದ್ದತೆಯಲ್ಲಿ ತೊಡಗಿದೆ. ಹದಿಮೂರನೇ ಆವೃತ್ತಿಯನ್ನು 7 ಅಂಕಗಳೊಂದಿಗೆ ಮುಗಿಸಿದ್ದ ಧೋನಿ ಪಡೆ, ಇದೀಗ ಹೊಸ ಹುಮ್ಮಸ್ಸಿನಲ್ಲಿ 14ನೇ ಆವೃತ್ತಿಯನ್ನು ಶರು ಮಾಡಲು ಎದುರು ನೋಡುತ್ತಿದೆ. 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಡಲು ಸಜ್ಜಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎದುರಿಸಬೇಕಾದ ಕೆಲ ಸವಾಲುಗಳನ್ನು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿವರಿಸಿದ್ದಾರೆ. ಫೇಸ್‌ಬುಕ್‌ ವಿಡಿಯೋದಲ್ಲಿ ಮಾತನಾಡಿದ ಅವರು, ಅಗ್ರ ನಾಲ್ಕು ಆಟಗಾರರಾದ ಸುರೇಶ್‌ ರೈನಾ, ಅಂಬಾಟಿ ರಾಯುಡು, ಹಾಗೂ ರವೀಂದ್ರ ಜಡೇಜಾ ಅವರ ಫಾರ್ಮ್‌ ತಂಡದ ಪ್ರಮುಖ ಸಂಗತಿಯಾಗಿರುತ್ತದೆ. "ಸುರೇಶ್‌ ರೈನಾ, ಅಂಬಾಟಿ ರಾಯುಡು, ಮಹೇಂದ್ರ ಸಿಂಗ್‌ ಧೋನಿ ಪ್ರಸ್ತುತ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಅಥವಾ ಸ್ಪರ್ಧಾತ್ಮಕ ಕ್ರಿಕೆಟ್‌ ಆಡಿ ಬಂದಿಲ್ಲ. ಇನ್ನು ರವೀಂದ್ರ ಜಡೇಜಾ ಗಾಯದಿಂದಾಗಿ ಹಲವು ದಿನಗಳಿಂದ ಆಟದಿಂದ ಹೊರಗುಳಿದಿದ್ದಾರೆ. ಹಾಗಾಗಿ ತಂಡದ ಏಳು ಅಗ್ರ ದರ್ಜೆಯ ಆಟಗಾರರ ಪೈಕಿ ನಾಲ್ಕು ಮಂದಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಸದ್ಯ ಫಾರ್ಮ್‌ನಲ್ಲಿ ಇಲ್ಲ," ಎಂದು ಹೇಳಿದರು. "ಇನ್ನು ಆರಂಭಿಕರಾದ ರಾಬಿನ್‌ ಉತ್ತಪ್ಪ ಹಾಗೂ ಋತುರಾಜ್‌ ಗಾಯಕ್ವಾಡ್‌ ಅವರು ದೇಶಿ ಕ್ರಿಕೆಟ್‌ನಲ್ಲಿ ಯೋಗ್ಯ ಪ್ರದರ್ಶನ ತೋರಿ ವಿಶ್ವಾಸದಲ್ಲಿ ಕಾಣುತ್ತಿದ್ದಾರೆ. ಫಾಫ್‌ ಡು ಪ್ಲೇಸಿಸ್‌ ಕೂಡ ಒಂದು ಮಟ್ಟದಲ್ಲಿ ಓಕೆ. ಆದರೆ, ಇನ್ನುಳಿದ ನಾಲ್ಕ ಆಟಗಾರರ ಪ್ರದರ್ಶನ ಇದೀಗ ಸವಾಲುದಾಯಕವಾಗಿದೆ," ಎಂದು ಹೇಳಿದರು. "ನೀವು ಮುಂಬೈನಲ್ಲಿ ಆಡುತ್ತಿರುವಾಗ ನಿಮ್ಮದೇ ಸಮಯ ತೆಗೆದುಕೊಂಡು ಆಡಲು ಸಮಯ ಲಭ್ಯವಿರುವುದಿಲ್ಲ. ತಂಡ ದೊಡ್ಡ ಮೊತ್ತ ಅಂದರೆ 180ಕ್ಕೂ ಹೆಚ್ಚಿನ ಮೊತ್ತವನ್ನು ನಿರೀಕ್ಷಿಸುತ್ತದೆ. ಆಗ ಆರಂಭದಿಂದಲೂ ಎಲ್ಲಾ ಬ್ಯಾಟ್ಸ್‌ಮನ್‌ಗಳಿಗೆ ಆಕ್ರಮಣಕಾರಿಯಾಗಿ ಆಡಬೇಕಾದ ಅಗತ್ಯವಿರುತ್ತದೆ," ಎಂದು ತಿಳಿಸಿದರು. "ರವೀಂದ್ರ ಜಡೇಜಾ ಅವರನ್ನು ಸಿಎಸ್‌ಕೆ ಮೇಲಿನ ಕ್ರಮಾಂಕಕ್ಕೆ ಬಡ್ತಿ ನೀಡಬೇಕೆಂದು ಸಲಹೆ ನೀಡಲು ಬಯಸುತ್ತೇನೆ. ಮಹೇಂದ್ರ ಸಿಂಗ್‌ ಧೋನಿ ಕೂಡ ಉತ್ತಮ ಪ್ರದರ್ಶನ ತೋರುವ ಅಗತ್ಯವಿದೆ. ಆದರೆ, ಸುರೇಶ್‌ ರೈನಾ ತಂಡದಲ್ಲಿ ನಿರ್ಣಾಯಕವಾಗಿದ್ದಾರೆ. ಅವರು ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರೆ ಸಿಎಸ್‌ಕೆ ಸ್ಥಾನ ಉತ್ತಮವಾಗಿರುತ್ತದೆ. ದೀರ್ಘ ಅವಧಿಯಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಸುರೇಶ್‌ ರೈನಾ ಒಂದು ವೇಳೆ ಚೆನ್ನಾಗಿ ಆಡಲಿಲ್ಲವಾದರೆ, ಚೆನ್ನೈ ಫ್ರಾಂಚೈಸಿಗೆ ಖಂಡಿತಾ ಹಿನ್ನಡೆಯಾಗಲಿದೆ, ಇದು ತಂಡದ ಪಾಲಿಗೆ ಒಳ್ಳೆಯ ಸಂಗತಿ ಅಲ್ಲ," ಎಂದು ಚೋಪ್ರಾ ಉಲ್ಲೇಖಿಸಿದರು. ಈ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್, ಮುಂಬೈನಲ್ಲಿ 5 ಪಂದ್ಯಗಳು, ದಿಲ್ಲಿಯಲ್ಲಿ 4, ಬೆಂಗಳೂರಿನಲ್ಲಿ 3 ಮತ್ತು ಕೋಲ್ಕತಾದಲ್ಲಿ ಎರಡು ಪಂದ್ಯಗಳಾಡಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3sCNdFL

ಸಿ.ಡಿ ಪ್ರಕರಣ: ಎಸ್‌ಐಟಿ ತನಿಖೆ ಕ್ರಮಬದ್ಧವಾಗಿ ನಡೆಯುತ್ತಿದೆ, ಬಸವರಾಜ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಕ್ರಮಬದ್ಧವಾಗಿ ನಡೆಯುತ್ತಿದೆ ಎಂದು ಗೃಹ ಸಚಿವ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, ಎಸ್‌ಐಟಿ ತನ್ನ ಕಾರ್ಯವನ್ನು ಸಂಪೂರ್ಣವಾಗಿ ಕ್ರಮ ಬದ್ಧವಾಗಿ ಮಾಡುತ್ತಿದೆ. ಕ್ರಿಮಿನಲ್ ನಿಯಮಾವಳಿ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಇದರಲ್ಲಿ ಮಧ್ಯಪ್ರವೇಶ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದರು. ಇನ್ನು ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ಗೆ ಏನು ನೈತಿಕತೆ ಇದೆ. ಮೇಟಿ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲು ಮಾಡಿದ್ದರಾ? ವಿಚಾರಣೆ ಮಾಡಿದ್ರಾ? ಕ್ಲೀನ್ ಚಿಟ್ ಕೊಟ್ಟರು. ತಮ್ಮ ಅಧಿಕಾರ ಅವಧಿಯಲ್ಲಿ ಏನು ಮಾಡಿದ್ದಾರೆ ಎಂದು ಕಾಂಗ್ರೆಸ್ ಒಮ್ಮೆ ತಿರುಗಿ ನೋಡಲಿ ಎಂದು ತಿರುಗೇಟು ನೀಡಿದರು. ಸರಣಿ ಟ್ವೀಟ್‌, ಪ್ರತಿಭಟನೆ ಯಾವುದೇ ಭಾಗದಿಂದ ಆದರೂ ತನಿಖೆಗೆ ಪ್ರಭಾವ ಬೀರಲ್ಲ. ಎಸ್‌ಐಟಿ ಯಾರ ಪರ ವಿರೋಧ ಇಲ್ಲ, ಸತ್ಯ ಸಂಗತಿ ಹೊರಬರಲು ಎಸ್‌ಐಟಿ ರಚನೆರ ಮಾಡಲಾಗಿದೆ ಎಂದರು. ತನಿಖೆಯಲ್ಲಿ ಅನವಷ್ಯಕವಾಗಿ ಮಾತನಾಡಿ ಅದರ ಪ್ರಗತಿಗೆ ಅಡ್ಡಿ ಪಡಿಸುವ ಕೆಲಸ ಯಾರು ಮಾಡಬೇಡಿ. ಎಸ್‌ಐಟಿ ತನಿಖೆ ಮಾಡಲು ಮುಕ್ತವಾದ ಅವಕಾಶ ಇದೆ. ಅದರಂತೆ ಅವರು ಮಾಡುತ್ತಾರೆ. ಪೊಲೀಸರಿಗೆ ಏನೇನು ಅವಷ್ಯಕತೆ ಇದೆ ಅವರೇ ತೀರ್ಮಾನ ಮಾಡುತ್ತಾರೆ ಎಂದು ಇದೇ ವೇಳೆ ಮನವಿ ಮಾಡಿಕೊಂಡರು. ಬಸವಕಲ್ಯಾಣ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಶರಣು ಸಲಗಾರ ನಿಶ್ಚಿತವಾಗಿ 20,000ಕ್ಕು ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ.ಖೂಬಾ ನಮ್ಮ ಸ್ನೇಹಿತರೆ,ಅವರೂ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ನಾನು ,ಸೋಮಣ್ಣ ಮತ್ತು ಸವದಿಯವರು ಮಾತುಕತೆ ನಡೆಸಿದ್ದೇವೆ.ನಾಮಪತ್ರ ವಾಪಸ್ ಪಡೆಯಲು ಇನ್ನು ಸಮಯವಿದೆ.ನೋಡೋಣ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.


from India & World News in Kannada | VK Polls https://ift.tt/3woBgWK

ಅಕೋಂಲಾ: ಟೋಲ್‌ ಗೇಟ್‌ನಲ್ಲಿ ಜಗಳ ಬಿಡಿಸಲು ಬಂದ ಡಿಎಸ್ಪಿ ಮೇಲೆಯೇ ಕಾರು ಹತ್ತಿಸಲು ಯತ್ನ!

ಅಂಕೋಲಾ: ಟೋಲ್ ಗೇಟ್ ಸಿಬ್ಬಂದಿಗಳ ಜೊತೆ ಜಗಳ ಮಾಡಿಕೊಂಡು ಪೊಲೀಸ್‌ ಅಧಿಕಾರಿ ಮೇಲೆ ವಾಹನ ಚಲಾಯಿಸಲು ಯತ್ನಿಸಿದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ. ಸೋಮವಾರ ಮಧ್ಯಾಹ್ನದ ವೇಳೆ ಅಂಕೋಲಾ ಟೋಲ್ ಗೇಟ್‌ನಲ್ಲಿ ಸ್ಕಾರ್ಪಿಯೋ ಕಾರ್‌ನಲ್ಲಿ ಬಂದ ಪ್ರಯಾಣಿಕರು ಟೋಲ್‌ ಶುಲ್ಕ ಸಂಬಂಧ ಸಿಬ್ಬಂದಿಗಳೊಂದಿಗೆ ಜಗಳಕ್ಕೆ ಇಳಿದಿದ್ದಾರೆ. ಈ ವೇಳೆ ಇದೇ ಮಾರ್ಗವಾಗಿ ಬರುತ್ತಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಆರೋಪಿಗಳು ಮುಂದಾಗಿದ್ದಾರೆ.ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರ ಮೇಲೆ ಕಾರು ಹತ್ತಿಸಲೆತ್ನಿಸಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ನಡೆ ಕೂಡ ಸಂಶಯಕ್ಕೆ ಕಾರಣವಾಗಿದೆ. ಆರೋಪಿಗಳ ಮೇಲೆ ಕೊಲೆಯತ್ನ ಅಥವಾ ಅಧಿಕಾರಿಯ ಮೇಲೆ ಹಲ್ಲೆ ಪ್ರಕರಣ ದಾಖಲಿಸುವ ಬದಲು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಪ್ರಭಾವಿಗಳಾಗಿರುವ ಕಾರಣ ಈ ರೀತಿ ಪೊಲೀಸರು ನಡೆದುಕೊಂಡಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್ ನಾಯಕ, ಬೊಮ್ಮಯ್ಯ ನಾಯಕ, ಗೋಪಾಲ ನಾಯಕ ಮತ್ತು ಸುರೇಶ್ ನಾಯಕರ ಅಪ್ರಾಪ್ತ ಮಗನನ್ನೂ ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈತನಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.


from India & World News in Kannada | VK Polls https://ift.tt/3cDeEtO

ಬಿಜೆಪಿಯಿಂದ ಜೆಡಿಎಸ್‌ ಹಣ ಪಡೆದುಕೊಂಡಿದೆ ಎಂಬ ಜಮೀರ್‌ ಆರೋಪ! ಎಚ್‌ಡಿಕೆ ಕೊಟ್ಟ ತಿರುಗೇಟು ಏನು?

ಬೆಂಗಳೂರು: ಬಸವಕಲ್ಯಾಣದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಹಾಕಲು ಜೆಡಿಎಸ್‌ ಪಕ್ಷದ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ಜಮೀರ್‌ ಅಹಮ್ಮದ್ ಖಾನ್ ಆರೋಪಕ್ಕೆ ಮಾಜಿ ಸಿಎಂ ತಿರುಗೇಟು ನೀಡಿದ್ದಾರೆ. ಈ ಕುರಿತಾಗಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಎಚ್‌ಡಿಕೆ ಜಮೀರ್‌ ವಿರುದ್ಧ ಹರೊಹಾಯ್ದಿದ್ದಾರೆ. ಬಸವಕಲ್ಯಾಣದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಹಾಕಲು ನಾನು ಬಿಜೆಪಿಯಿಂದ ಹಣ ಪಡೆದಿರುವುದಾಗಿ ಮಿತ್ರರೊಬ್ಬರು ಹೇಳಿದ್ದಾರೆ. ಆಗಲಿ, 2005ರಲ್ಲಿ ಎಸ್‌ಎಂ ಕೃಷ್ಣ ಅವರಿಂದ ತೆರವಾಗಿದ್ದ ಚಾಮರಾಜಪೇಟೆ ಉಪಚುನಾವಣೆಗೆ ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಅವರ ಖರ್ಚು ವೆಚ್ಚಗಳಿಗೆ ಜೆಡಿಎಸ್‌ ಬಿಜೆಪಿಯಿಂದ ದುಡ್ಡು ತಂದಿತ್ತೇ? ಎಂದು ಪ್ರಶ್ನಿಸಿದ್ದಾರೆ. 2005ರ ಚಾಮರಾಜಪೇಟೆ ಉಪಚುನಾವಣೆಯ ಆ 'ಮುಸ್ಲಿಂ ಅಭ್ಯರ್ಥಿ'ಗಾಗಿ ಮಾಜಿ ಪ್ರಧಾನಿ ದೇವೇಗೌಡರು ಗಲ್ಲಿಗಲ್ಲಿಗಳಲ್ಲಿ ಸುತ್ತಿದ್ದರು. ಬೆವರು ಹರಿಸಿದ್ದರು. ದೇವೇಗೌಡರಂಥವರು ಅಂದು ಅಷ್ಟು ಕಷ್ಟಪಟ್ಟು ಉಪಚುನಾವಣೆ ನಡೆಸಿದ್ದೇಕೆ? ಬಿಜೆಪಿಯನ್ನು ಗೆಲ್ಲಿಸಲೇ? ಇದಕ್ಕೆ ಸನ್ಮಿತ್ರರು ಆತ್ಮಸಾಕ್ಷಿಯಿಂದ, ಮನದಾಳದಿಂದ, ಪ್ರಾಮಾಣಿಕ ಉತ್ತರ ಕೊಡಬಹುದೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಚಾಮರಾಜಪೇಟೆ ಉಪಚುನಾವಣೆಯ ಮತದಾನಕ್ಕೆ ಇನ್ನು 2 ದಿನಗಳು ಬಾಕಿ ಉಳಿದಿವೆ ಎನ್ನುವಾಗ ನಮ್ಮ 'ಮುಸ್ಲಿಂ ಅಭ್ಯರ್ಥಿ' ಏಕಾಏಕಿ ಕಾಣೆಯಾಗಿದ್ದರು. ಕಾರಣ ಹುಡುಕಿದಾಗ ಹಣದ ಕೊರತೆ ಎಂಬ ಅಂಶ ಗೊತ್ತಾಯಿತು. ಅಂದು ಶಿವಮೊಗ್ಗ ಪ್ರವಾಸದಲ್ಲಿದ್ದ ನಾನು ಓಡೋಡಿ ಬಂದು ಸಾಲ ಮಾಡಿ ಹಣ ಹೊಂದಿಸಿಕೊಟ್ಟಿದ್ದೆ. ಅಂದು ನಾನು ತಂದ ಸಾಲ ಬಿಜೆಪಿಯ ಹಣವಾಗಿತ್ತೇ? ಅಂದು ಚಾಮರಾಜಪೇಟೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಜೆಡಿಎಸ್‌ 'ಮುಸ್ಲಿಂ ಅಭ್ಯರ್ಥಿ'ಯನ್ನು ಗುರುತಿಸಿತ್ತೇ? ಅಂದು ಬಿಜೆಪಿಯನ್ನು ಗೆಲ್ಲಿಸಲೆಂದು ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದಿದ್ದರೆ ಇಂದು ನನ್ನ ವಿರುದ್ಧ ಆರೋಪ ಮಾಡಲು ಆ ನಾಯಕರೇ ಇರುತ್ತಿರಲಿಲ್ಲ. ಜೆಡಿಎಸ್‌ ಪಕ್ಷದ ತ್ಯಾಗಕ್ಕಾಗಿ ಕಿಂಚಿತ್ತು ಕೃತಜ್ಞತೆ ಉಳಿಯದಿದ್ದರೆ ಹೇಗೆ? ಎಂದು ಜಮೀರ್‌ ವಿರುದ್ಧ ಕಿಡಿಕಾರಿದ್ದಾರೆ. ಸನ್ಮಿತ್ರರು ನಮ್ಮಲ್ಲಿದ್ದಾಗ ಅವರನ್ನು ಬೆಂಗಳೂರು ಕೇಂದ್ರ ಲೋಕಸಭೆಗೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಅವರ ಸೋದರನನ್ನು ಚಿಕ್ಕಪೇಟೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಇದೆಲ್ಲ ಮಾಡಿದ್ದೇಕೆ? ಬಿಜೆಪಿಯನ್ನು ಗೆಲ್ಲಿಸಲೇ? ಜೆಡಿಎಸ್‌ ಪಕ್ಷ ಮತ್ತು ಇದರ ಕಾರ್ಯಕರ್ತರು ಎಲ್ಲರನ್ನೂ ಬೆಳೆಸಿದೆ. ಹೊರಗೆ ಹೋದವರನ್ನು ಹರಸಿದೆ. ಕೃತಜ್ಞತೆ ಇರಲಿ. 2008ರ ಆಪರೇಷನ್‌ ಕಮಲದ ನಂತರ ನಡೆದ 20ಕ್ಕೂ ಹೆಚ್ಚು ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಒಂದು ಸ್ಥಾನ ಗೆಲ್ಲದೇ ಮುಖಭಂಗ ಅನುಭವಿಸಿತ್ತು. ಅದರ ಹಿಂದೆ ಯಾವ ನಾಯಕರು ಇದ್ದರು? ಎಷ್ಟು ಹಣ ಪಡೆದಿದ್ದರು? ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂಬುದನ್ನು ಸನ್ಮಿತ್ರರು ತಿಳಿಯಲಿ. ಹೇಗೂ ಅವರ ಅಕ್ಕಪಕ್ಕದಲ್ಲೆ ಇದ್ದೀರಲ್ಲ... ಕೇಳಿ ನೋಡಿ ಎಂದು ಜಮೀರ್‌ ವಿರುದ್ಧ ಟ್ವೀಟ್‌ ಮೂಲಕ ವಾಗ್ದಾಳಿ ನಡೆಸಿದ್ದಾರೆ.


from India & World News in Kannada | VK Polls https://ift.tt/3wgv5UD

ಕೆಎಸ್‌ಟಿಡಿಸಿ ಕ್ಯಾಬ್‌ ಚಾಲಕ ಪ್ರತಾಪ್‌ ಆತ್ಮಹತ್ಯೆ: ರಾಜ್ಯ ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ

ಬೆಂಗಳೂರು:ಬಾಡಿಗೆ ದೊರೆಯದೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಕೆಎಸ್‌ಟಿಡಿಸಿ ಕ್ಯಾಬ್‌ ಚಾಲಕ ಪ್ರತಾಪ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಕಿಡಿಕಾರಿದ್ದಾರೆ. ಈ ಕುರಿತಾಗಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಚಾಲಕ ಪ್ರತಾಪ್ ಯತ್ನಿಸಿದ್ದರು. ಮಧ್ಯರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಪ್ರತಾಪ್‌ ಅವರ ಸಾವಿನೊಂದಿಗೆ ಕೆಎಸ್‌ಟಿಡಿಸಿ ಚಾಲಕರ ಸಮಸ್ಯೆಗಳು ತೆರೆದುಕೊಂಡಿವೆ ಎಂದಿದ್ದಾರೆ. ಕ್ಯಾಬ್‌ ಉದ್ಯಮದ ದರ ಸಮರ, ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರತಾಪ್‌ ಜೀವ ಬಲಿಯಾಗಿದೆ. ಟ್ಯಾಕ್ಸಿ, ಕ್ಯಾಬ್‌ಗಳಿಗೆ ಸರ್ಕಾರ 1 ಕಿ.ಮೀಗೆ ₹24 ದರ ನಿಗದಿ ಮಾಡಿದೆ. ಕೆಎಸ್‌ಟಿಡಿಸಿ ಚಾಲಕರು ಇದನ್ನು ಪಾಲಿಸುತ್ತಿದ್ದರೆ, ಖಾಸಗಿ ಕಂಪನಿಗಳು ನಿಯಮ ಗಾಳಿಗೆ ತೂರಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೆಎಸ್‌ಟಿಡಿಸಿ ಚಾಲಕರು ಸೊರಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಎಸ್‌ಟಿಡಿಸಿ ಕ್ಯಾಬ್‌ಗಳು ದರ ನಿಯಮ ಪಾಲಿಸುತ್ತಿದ್ದರೆ, ಖಾಸಗಿ ಕ್ಯಾಬ್‌ಗಳು ₹9ಕ್ಕೆ ಗ್ರಾಹಕರನ್ನು ಸೆಳೆಯುತ್ತಿವೆ. ಹೀಗಾಗಿ ಕೆಎಸ್‌ಟಿಡಿಸಿ ಕ್ಯಾಬ್‌ಗಳಿಗೆ ಗ್ರಾಹಕರೇ ಇಲ್ಲದಂತಾಗಿದೆ. ಚಾಲಕರು ಸಮಸ್ಯೆಗೆ ಸಿಲುಕಿದ್ದಾರೆ. ಇದರ ಜೊತೆಗೆ ವಿಮಾನ ನಿಲ್ದಾಣದ ಪಾರ್ಕಿಂಗ್‌ನಲ್ಲೂ ನಡೆಯುತ್ತಿರುವ ರಾಜಕೀಯ ಚಾಲಕರ ಕೊರಳು ಹಿಂಡುತ್ತಿದೆ ಎಂದು ಎಚ್‌ಡಿಕೆ ಕಿಡಿಕಾರಿದ್ದಾರೆ. ಸರ್ಕಾರ ದರ ಸಮರದತ್ತ ಕೂಡಲೇ ಗಮನಹರಿಸಬೇಕು. ನಿಯಮ ಪಾಲಿಸದೇ ಮಾರುಕಟ್ಟೆಯಲ್ಲಿ ಅನಗತ್ಯ ಪೈಪೋಟಿ ಸೃಷ್ಟಿ ಮಾಡುತ್ತಿರುವ, ಆ ಮೂಲಕ ಅಮಾಯಕ ಚಾಲಕರ ಪ್ರಾಣ ಕಸಿಯುತ್ತಿರುವ ಖಾಸಗಿ ಕಂಪನಿಗಳಿಗೆ ಎಚ್ಚರಿಕೆ ನೀಡಬೇಕು. ಅದರ ಮೂಲಕ ಅಮಾಯಕ, ಶ್ರಮಜೀವಿ ಕ್ಯಾಬ್‌ ಚಾಲಕರ ರಕ್ಷಣೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.


from India & World News in Kannada | VK Polls https://ift.tt/3u8AzyS

ಸ್ನೇಹ ಬಯಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌

ಹೊಸದಿಲ್ಲಿ: ರಾಷ್ಟ್ರೀಯ ದಿನಾಚರಣೆ ಸಂದರ್ಭ ಶುಭಾಶಯ ಕೋರಿ ಪ್ರಧಾನಿ ನರೇಂದ್ರ ಮೋದಿ ಬರೆದಿದ್ದ ಪತ್ರಕ್ಕೆ ಪಾಕ್‌ ಅವರಿಂದ ವಿನಮ್ರ ಸ್ನೇಹದ ಮರು ಪತ್ರ ಬಂದಿದೆ. ''ನೆರೆ ಹೊರೆಯ ದೇಶಗಳು ನಮಗೆ ಶತ್ರುಗಳಲ್ಲ. ಪಾಕಿಸ್ತಾನ ಸದಾ ಸ್ನೇಹವನ್ನು ಬಯಸುತ್ತದೆ.ಭಾರತ ಜತೆಗಿನ ಸ್ನೇಹ ನಮಗೆ ಮಹತ್ವದ್ದಾಗಿದೆ,'' ಎಂದು ಇಮ್ರಾನ್‌ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಮಾರ್ಚ್ 23ರಂದು ಪಾಕಿಸ್ತಾನ ರಾಷ್ಟ್ರೀಯ ದಿನ ಆಚರಿಸಿತ್ತು. ಈ ಅಂಗವಾಗಿ ಪತ್ರಬರೆದು ಇಮ್ರಾನ್‌ ಖಾನ್‌ ಅವರಿಗೆ ಶುಭಾಶಯ ಕೋರಿದ್ದರು. ''ಪಾಕಿಸ್ತಾನದ ಜನರ ಜತೆ ಉತ್ತಮ ಸ್ನೇಹವನ್ನು ಬಯಸುತ್ತದೆ. ಭಯೋತ್ಪಾದನೆ ಮುಕ್ತ ನಂಬಿಕೆಯ ವಾತಾವರಣವನ್ನು ನಿರ್ಮಾಣ ಮಾಡೋಣ,'' ಎಂದು ಮೋದಿ ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ ಇಮ್ರಾನ್‌, ಭಾರತದ ಜತೆ ಸ್ನೇಹ ಸೌಹಾರ್ದ ಸಾಧಿಸುವ ಹಂಬಲ ವ್ಯಕ್ತಪಡಿಸಿ ಪತ್ರಬರೆದಿದ್ದಾರೆ.


from India & World News in Kannada | VK Polls https://ift.tt/2O6Rdzl

ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ: ಕೆಲವೇ ಕ್ಷಣಗಳಲ್ಲಿ ಎಸ್‌ಐಟಿ ಮುಂದೆ ಯುವತಿ ಹಾಜರು ಸಾಧ್ಯತೆ

ಬೆಂಗಳೂರು: ಮಾಜಿ ಸಚಿವ ಸಿ.ಡಿ ಪ್ರಕರಣದ ಸಂತ್ರಸ್ತೆ ಯುವತಿ ಕೆಲವೇ ಕ್ಷಣಗಳಲ್ಲಿ ಎಸ್‌ಐಟಿ ಮುಂದೆ ಹಾಜರಾಗಿ ತನ್ನ ಹೇಳಿಕೆಯನ್ನು ನೀಡುವ ಸಾಧ್ಯತೆ ಇದೆ. ಮಂಗಳವಾರ ಬೆಂಗಳೂರಿಗೆ ಆಗಮಿಸಿ ನ್ಯಾಯಾಧೀಶರ ಮುಂದೆ ಹಾಜರಾದ ಯುವತಿ ಸುದೀರ್ಘವಾಗಿ ತನ್ನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಳು. ಈ ಹೇಳಿಕೆಯನ್ನು ಗೌಪ್ಯವಾಗಿ ದಾಖಲಿಸಿಕೊಂಡಿರುವ ನ್ಯಾಯಾಧೀಶರು ಅದನ್ನು ತನಿಖಾಧಿಕಾರಿಗಳಿಗೆ ಹಸ್ತಾಂತರ ಮಾಡಲಿದ್ದಾರೆ. ಇದೀಗ ಸಂತ್ರಸ್ತೆ ಯುವತಿ ನೀಡಿರುವ ದೂರು ವಿಚಾರಣೆಯ ಮುಂದುವರಿದ ಭಾಗವಾಗಿ ಯುವತಿಯ ವೈದ್ಯಕೀಯ ತಪಾಸಣೆ ನಡೆಯಲಿದೆ. ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಈ ವೈದ್ಯಕೀಯ ತಪಾಸಣೆ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಇದಾದ ಬಳಿಕ ಯುವತಿ ಮಾಡಿದ ಆರೋಪ, ಘಟನೆ ನಡೆದ ಸ್ಥಳದ ಮಹಜರು ಕೂಡಾ ನಡೆಯಬೇಕಾಗಿದೆ. ಎಸ್‌ಐಟಿ ಮುಂದೆ ಯುವತಿ ಹಾಜರು ಸಾಧ್ಯತೆ ಇನ್ನು ಯುವತಿ ಬುಧವಾರ ಎಸ್‌ಐಟಿ ಮುಂದೆ ಹಾಜರಾಗಲಿದ್ದಾರೆ. ಎಸಿಪಿ ಕವಿತಾ ಅವರ ನೇತೃತ್ವದಲ್ಲಿ ಯುವತಿಯ ವಿಚಾರಣೆ ನಡೆಯಲಿದೆ. ಈ ಸಂದರ್ಭದಲ್ಲಿ ಮೂರು ದೂರಿನ ಕುರಿತಾಗಿ ವಿಚಾರಣೆ ನಡೆಯಲಿದೆ. ಯುವತಿ ನೀಡಿದ ದೂರು ಹಾಗೂ ರಮೇಶ್ ಜಾರಕಿಹೊಳಿ ನೀಡಿರುವ ದೂರು ಜೊತೆಗೆ ಯುವತಿಯ ಪೋಷಕರ ದೂರು ಕೂಡಾ ವಿಚಾರಣೆಗೆ ಒಳಪಡುವ ಸಾಧ್ಯತೆ ಇದೆ. ಈಗಾಗಲೇ ನ್ಯಾಯಾಧೀಶರ ಮುಂದೆ ಯುವತಿ ಹಲವು ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ ಎಸ್‌ಐಟಿ ತನಿಖೆಯ ಸಂದರ್ಭದಲ್ಲಿ ಇದಕ್ಕೆ ಸಾಕ್ಷಿ ನೀಡಬೇಕಿದೆ. ಯುವತಿ ಫೋನ್‌ ಕಾಲ್‌, ವಿಡಿಯೋ ಕಾಲ್‌, ಹಾಗೂ ರಮೇಶ್ ಜಾರಕಿಹೊಳಿ ನಡೆಸಿರುವ ಚಾಟಿಂಗ್‌ ತನಿಖೆಗೆ ಒಳಪಡಲಿದೆ. ಒಟ್ಟಿನಲ್ಲಿ ಎಸ್‌ಐಟಿ ವಿಚಾರಣೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.


from India & World News in Kannada | VK Polls https://ift.tt/3m5Mqe9

2020ರ ಐಪಿಎಲ್‌ನಲ್ಲಿ ಕೊಹ್ಲಿ-ಎಬಿಡಿ ಮಾಡಿದ್ದ ಸಹಾಯ ಸ್ಮರಿಸಿದ ಕನ್ನಡಿಗ!

ಹೊಸದಿಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 2020ರ ಆವೃತ್ತಿಯಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಕರ್ನಾಟ ಆರಂಭಿಕ ಬ್ಯಾಟ್ಸ್‌ಮನ್‌ ಗಮನಾರ್ಹ ಪ್ರದರ್ಶನ ತೋರಿದ್ದರು. ಅವರು ಆಡಿದ್ದ 15 ಪಂದ್ಯಗಳಿಂದ 124.8 ಸ್ಟ್ರೈಕ್‌ ರೇಟ್‌ನೊಂದಿಗೆ 473 ರನ್‌ಗಳನ್ನು ಕಲೆ ಹಾಕಿದ್ದರು. ಐಪಿಎಲ್‌ ಪದಾರ್ಪಣೆ ಆವೃತ್ತಿಯಲ್ಲಿಯೇ ದೇವದತ್ ಪಡಿಕ್ಕಲ್‌ 'ಆವೃತ್ತಿಯ ಉದಯೋನ್ಮುಕ ಆಟಗಾರ' ಪ್ರಶಸ್ತಿಗೆ ಭಾಜನರಾಗಿದ್ದರು. ಹಿಂದೂಸ್ಥಾನ್‌ ಸಂದರ್ಶನದಲ್ಲಿ ಪಡಿಕ್ಕಲ್‌ ಚೊಚ್ಚಲ ಐಪಿಎಲ್‌ ಅನುಭವ ಹಾಗೂ ನಾಯಕ ಹಾಗೂ ಅವರೊಂದಿಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. "ವಿರಾಟ್‌ ಕೊಹ್ಲಿ ಹಾಗೂ ಡಿವಿಲಿಯರ್ಸ್ ಅವರೊಂದಿಗಿನ ಅನುಭವ ಅದ್ಭುತವಾಗಿತ್ತು. ಅವರಿಂದ ಸಾಕಷ್ಟು ಕಲಿತಿದ್ದೇನೆ. ಆಟದ ಬಗ್ಗೆ ಅವರು ತೋರುವ ಆಸಕ್ತಿ ಹಾಗೂ ಉತ್ಸಾಹ, ಆಡುವ ಹಾದಿ, ಟೂರ್ನಿಯುದ್ದಕ್ಕೂ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಸೇರಿದಂತೆ ಹಲವು ಅಂಶಗಳನ್ನು ನನ್ನ ಮೇಲೆ ಪ್ರಭಾವ ಬೀರಿದೆ. ತಂಡ ನಿಮ್ಮನ್ನು ನಂಬಿ ಜವಾಬ್ದಾರಿ ನೀಡಿದ ಬಳಿಕ ಆ ಒತ್ತಡವನ್ನು ನಿಭಾಯಿಸುವುದು ಸುಲಭವಲ್ಲ. ಇದೇ ರೀತಿಯ ಸನ್ನಿವೇಶವನ್ನು ಅವರು ಹೇಗೆ ನಿಭಾಯಿಸುತ್ತಾರೆಂಬುದನ್ನು ನಾನು ಕಲಿತುಕೊಂಡಿದ್ದೇನೆ," ಎಂದು ಹೇಳಿದರು. ಇತ್ತೀಚೆಗೆ ಮುಕ್ತಾಯವಾಗಿದ್ದ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕದ ಪರ 7 ಇನಿಂಗ್ಸ್‌ಗಳಲ್ಲಿ ಪಡಿಕ್ಕಲ್‌ 4 ಶತಕಗಳು ಹಾಗೂ 3 ಅರ್ಧಶತಕಗಳನ್ನು ಸಿಡಿಸಿದ್ದರು. ಆ ಮೂಲಕ ಟೂರ್ನಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ 147ರ ಸರಾಸರಿಯಲ್ಲಿ 723 ರನ್‌ ಕಲೆ ಹಾಕಿದ್ದರು. ಪೃಥ್ವಿ ಶಾ ಬಳಿಕ ಈ ಟೂರ್ನಿಯಲ್ಲಿ ಕಲೆಹಾಕಿದ ಎರಡನೇ ವೈಯಕ್ತಿಕ ಗರಿಷ್ಠ ಮೊತ್ತ ಇದಾಯಿತು. ಇತ್ತೀಚೆಗೆ ಮುಕ್ತಾಯವಾಗಿದ್ದ ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಓಡಿಐ ಸರಣಿಗೆ ಟೀಮ್‌ ಇಂಡಿಯಾದಲ್ಲಿ ದೇವದತ್‌ ಪಡಿಕ್ಕಲ್‌ಗೆ ಚೊಚ್ಚಲ ಅವಕಾಶ ಸಿಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಭಾರತ ತಂಡದಲ್ಲಿ ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಶುಭಮನ್‌ ಗಿಲ್‌ ಹಾಗೂ ಕೆ.ಎಲ್‌ ರಾಹುಲ್‌ ಅವರು ಓಪನಿಂಗ್‌ ಸ್ಥಾನಕ್ಕೆ ತೀವ್ರ ಪೈಪೋಟಿ ಇದ್ದ ಕಾರಣ ಕರ್ನಾಟಕ ಆಟಗಾರನಿಗೆ ಭಾರತ ತಂಡದ ಬಾಗಿಲು ತೆರೆಯಲಿಲ್ಲ. "ಕಳೆದ ಎರಡು ಅಥವಾ ಮೂರು ವರ್ಷಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ, ಹಾಗಾಗಿ ಭಾರತಕ್ಕೆ ಆಯ್ಕೆಯಾಗದ ಬಗ್ಗೆ ನನಗೆ ಬೇಸರವಿಲ್ಲ. ಅಷ್ಟಕ್ಕೂ ಇದು ನನ್ನ ನಿಯಂತ್ರಣದಲ್ಲಿಲ್ಲ. ಒಂದು ತಂಡದ ಸದಸ್ಯನಾಗಿ ಆಟವನ್ನು ದಿನದಿಂದ ದಿನಕ್ಕೆ ಬೆಳವಣಿಗೆ ಸಾಧಿಸುವ ಕಡೆ ನಾನು ಗಮನ ಹರಿಸುತ್ತಿದ್ದೇನೆ. ಕಳೆದ ಎರಡು ಅಥವಾ ಮೂರು ವರ್ಷಗಳ ಹಿಂದೆ ತಂಡದಲ್ಲಿದ್ದಾಗ ಆಯ್ಕೆಯ ಬಗ್ಗೆ ಸಾಕಷ್ಟು ಯೋಚಿಸುತ್ತಿದ್ದೆ. ಆದರೆ, ಈಗ ಆಟದ ಕಡೆ ಹೆಚ್ಚಿನ ಗಮನ ಹರಿಸಿ ರನ್‌ ಗಳಿಸುವುದು ತುಂಬಾ ಮುಖ್ಯವಾದ ಅಂಶ ಎಂಬುದನ್ನು ಅರಿತುಕೊಂಡಿದ್ದೇನೆ," ಎಂದರು. "ಯಾವ ತಂಡ, ಯಾವ ಫ್ರಾಂಚೈಸಿಗೆ ಅಥವಾ ದೇಶಿ ಕ್ರಿಕೆಟ್‌ ಇರಲಿ ಇದು ನನಗೆ ವಿಷಯವಾಗಿರುವುದಿಲ್ಲ. ಎಲ್ಲಿ, ಯಾವುದೇ ತಂಡಕ್ಕಾದರೂ ರನ್‌ ಗಳಿಸುವುದನ್ನು ಮುಂದುವರಿಸಿ ತಂಡವನ್ನು ಗೆಲ್ಲಿಸುವುದಷ್ಟೇ ನನ್ನ ಕೆಲಸ. ಒಂದು ದಿನ ಭಾರತ ತಂಡದಲ್ಲಿ ಅವಕಾಶ ಸಿಕ್ಕರೆ ಅದು ನನ್ನ ಪಾಲಿಗೆ ಅದ್ಭುತವಾಗಿರುತ್ತದೆ," ಎಂದು ಪಡಿಕ್ಕಲ್‌ ಹೇಳಿದರು. ಏಪ್ರಿಲ್‌ 9 ರಂದು ಚೆನ್ನೈ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QU0vzV

ಸಂಗಾತಿ ಅರಸಿ ಕಾಡೊಳಗೆ ಪ್ರೇಮಯಾತ್ರೆ ಹೊರಟ ರಸಿಕ ‘ಕುಶ’ ಕೊನೆಗೂ ಸಿಕ್ಕಿಬಿದ್ದ!

ಸುನಿಲ್‌ ಪೊನ್ನೇಟಿ ಕುಶಾಲನಗರ: ಕಾಡಿನ ಹೆಣ್ಣಾನೆಗಳ ಮೋಹದ ಬಲೆಗೆ ಬಿದ್ದು ಅರಣ್ಯದಲ್ಲಿ ಮಾವುತರ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಕುಶ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ದುಬಾರೆ ಸಾಕಾನೆ ಶಿಬಿರದಿಂದ ತಪ್ಪಿಸಿಕೊಂಡು ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಗಾತಿಗಳ ಜೊತೆಗೆ ಕಾಡೊಳಗೆಯೇ ಅಲೆದಾಡಿ ಕಾಡಾನೆಯಂತೆಯೇ ಆಗಿ ಹೋಗಿದ್ದ ಈ ರಸಿಕ, ಈಗ ಅರಣ್ಯ ಇಲಾಖೆ ಸಿಬ್ಬಂದಿ ಮುಂದೆ ಮಂಡಿಯೂರಿದ್ದಾನೆ. ಕಾವೇರಿ ನದಿಯ ತಣ್ಣನೆ ಸ್ನಾನ, ಬಿಸಿ ಬಿಸಿ ಹುರುಳಿಸಾಂಬಾರ್‌ ಮದ್ದೆಯೂಟ ನಂತರ ದುಬಾರೆ ಸಾಕಾನೆ ಶಿಬಿರದ ಆನೆಗಳನ್ನು ಮೇವಿಗಾಗಿ ಕಾಡಿಗಟ್ಟುವುದು ಸಾಮಾನ್ಯ. ಹೀಗೆ ಅರಣ್ಯದೊಳಗೆ ಹೋಗುತ್ತಿದ್ದ ಶಿಬಿರದ ಸಾಕಾನೆ ಕುಶನಿಗೆ ಕಾಡಿನ ಹೆಣ್ಣಾನೆಗಳ ಜೊತೆ ಗೆಳೆತನ ಶುರುವಾಯಿತು. ಗೆಳೆತನ ಪ್ರೀತಿಗೆ ತಿರುಗಿ ಪ್ರಣಯದ ಹಂತಕ್ಕೆ ಬಂದಾಗ 2019ರ ನವೆಂಬರ್‌ನ ಒಂದು ದಿನ ಶಿಬಿರದಿಂದ ಎಸ್ಕೇಪ್‌ ಆಗಿಬಿಟ್ಟಿದ್ದ. ಮೇವು ಮಾಡಲು ಹೋದವನಲ್ವಾ.. ಇವತ್ತಲ್ಲಾ, ನಾಳೆ ಬರ್ತಾನೆ.. ಎಂದು ಅರಣ್ಯ ಇಲಾಖೆ ಸಿಬ್ಬಂದಿ, ಕುಶನ ಮಾವುತರು, ಕಾವಾಡಿಗಳು ಕಾದಿದ್ದೇ ಕಾದಿದ್ದು, ಮೋಹಕ್ಕೆ ಬಿದ್ದವನಿಗೆ ಶಿಬಿರದ ನೆನಪಾಗಲೇ ಇಲ್ಲ. ಪ್ರಿಯತಮೆಯರಿಗೆ ಶಿಬಿರ ತೋರಿಸಲು ಕರೆದುಕೊಂಡು ಬಂದಂತೆ ಆರಂಭದಲ್ಲಿ ಒಂದೆರಡು ಬಾರಿ ಸಂಗಾತಿಗಳ ಜೊತೆಯಲ್ಲಿ ಶಿಬಿರದ ಬಳಿ ಸುಳಿದಾಡಿದ್ದ. ಆದರೆ ಅವರನ್ನು ಬಿಟ್ಟು ಬರುವ ಮನಸ್ಸು ಮಾಡಿರಲಿಲ್ಲ. ನಂತರದ ದಿನಗಳಲ್ಲಿ ಸಂಗಾತಿಗಳ ಜೊತೆಗೆ ಸೇರಿಕೊಂಡು ಕಾಡಾನೆಯಂತೆಯೇ ಆಗಿ ಹೋದ ಕುಶ ಮಾವುತರ ಕಣ್ಣಿಗೆ ಬೀಳುತ್ತಿದ್ದರೂ ಅವರ ಅಂಕೆಗೆ ಸಿಗುತ್ತಿರಲಿಲ್ಲ. ಕಣ್ಣಾಮುಚ್ಚಾಲೆ ಯಾಡಿ ತಪ್ಪಿಸಿಕೊಂಡು ಬಿಡುತ್ತಿದ್ದ. ಕಳೆದ ತಿಂಗಳು ಶ್ರೀಮಂಗಲ ಭಾಗದಲ್ಲಿ ಹುಲಿ ವಿರುದ್ಧದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಪಾಲ್ಗೊಂಡಿದ್ದರಿಂದ ಕುಶನನ್ನು ಹಿಡಿಯುವುದು ಸ್ವಲ್ಪ ನಿಧಾನವಾಗಿತ್ತು. ಕಳೆದ ವಾರ ಈತ ಸಂಗಾತಿಗಳ ಜೊತೆಗೆ ಮೀನುಕೊಲ್ಲಿ ಅರಣ್ಯದಲ್ಲಿರುವ ಮಾಹಿತಿ ಸಿಕ್ಕಿತ್ತು. ದುಬಾರೆ ಶಿಬಿರದ ಸಾಕಾನೆಗಳಾದ ಪ್ರಶಾಂತ್‌, ಧನಂಜಯ, ಸುಗ್ರೀವ ಮತ್ತು ಲಕ್ಷ್ಮಣ ಸಹಾಯದಿಂದ ಮಂಗಳವಾರ ಬೆಳಗ್ಗೆ 5 ಗಂಟೆಗೆ ಕುಶಾಲನಗರ ವಲಯದ ಮೀನುಕೊಲ್ಲಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳೊಂದಿಗೆ ಇದ್ದ ಕುಶನನ್ನು ಬೇರ್ಪಡಿಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್‌ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಮುಜೀಬ್‌, ಉಪ ವಲಯ ಅರಣ್ಯಾಧಿಕಾರಿ ಕೆ.ಪಿ.ರಂಜನ್‌, ಕೆ.ಎಸ್‌.ಸುಬ್ರಾಯ ನೇತೃತ್ವದಲ್ಲಿ ಸಾಕಾನೆ ಶಿಬಿರದ ಮಾವುತರು, ಕಾವಾಡಿಗರು ಹಾಗೂ ಮೀನುಕೊಲ್ಲಿ ಶಾಖೆಯ ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು. ನಾಲ್ಕು ವರ್ಷಗಳ ಹಿಂದೆ ಕಂಡೆಕೆರೆ ಭಾಗದಲ್ಲಿ ಉಪಟಳ ಮಾಡುತ್ತಿದ್ದ 2 ಕಾಡಾನೆಗಳನ್ನು ಸೆರೆಹಿಡಿದು ಲವ ಮತ್ತು ಕುಶ ಎಂದು ಹೆಸರಿಡಲಾಗಿತ್ತು. ಲವ ದುಬಾರೆ ಸಾಕಾನೆ ಶಿಬಿರದಲ್ಲೇ ಇದ್ದರೆ, ರಸಿಕ ಕುಶ ಮಾತ್ರ ತಪ್ಪಿಸಿಕೊಂಡುಬಿಟ್ಟಿದ್ದ.


from India & World News in Kannada | VK Polls https://ift.tt/3m4TRlX

ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ: ಕಾಂಗ್ರೆಸ್ ವರ್ಸಸ್‌ ಬಿಜೆಪಿ ಟ್ವೀಟ್‌ ವಾರ್‌

ಬೆಂಗಳೂರು: ಸಿ.ಡಿ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದ ಸಂತ್ರಸ್ತೆ ಯುವತಿ ನ್ಯಾಯಾಲಯಕ್ಕೆ ಹಾಜರಾದ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ಟ್ವಿಟ್ಟರ್‌ನಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದೆ. ರಮೇಶ್ ಜಾರಕಿಹೊಳಿ ಅನಗತ್ಯ ಆರೋಪ ಮಾಡಲಾಗಿದೆ ಎಂಬ ಸಿಎಂ ಬಿಎಸ್‌ ಯಡಿಯೂರಪ್ಪ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಹಾಗಿದ್ದರೆ ಕಣ್ಣಿನಲ್ಲಿ ನೋಡಲಾಗದಂತಹ ಸಿಡಿ ಇದೆ ಎಂದು ನಿಮ್ಮ ಬಗೆಗಿನ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆರೋಪ ನಿಜವೇ? ಅಥವಾ ಸುಳ್ಳೇ? ಎಂದು ಪ್ರಶ್ನಿಸಿದೆ. ನಿಜವಾಗಿದ್ದರೆ ನೀವೇಕೆ ಇನ್ನೂ ರಾಜೀನಾಮೆ ನೀಡಲಿಲ್ಲ?ಸುಳ್ಳಾಗಿದ್ದರೆ ನೀವೇಕೆ ಇನ್ನೂ ಯತ್ನಾಳ್‌ರನ್ನು ಪಕ್ಷದಿಂದ ಉಚ್ಛಾಟಿಸಲಿಲ್ಲ? ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನಿಸಿದೆ. ಮತ್ತೊಂದು ಕಡೆಯಲ್ಲಿ ಕಾಂಗ್ರೆಸ್ ಪ್ರಾಯೋಜಿತ ಎಂದು ಎಂದು ಬಿಜೆಪಿ ಟ್ವೀಟ್‌ ಮಾಡಿದೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಅವರು ಯುವತಿ ಹೇಳಿಕೆ ದಾಖಲು ಮಾಡುವ ಸಂದರ್ಭದಲ್ಲಿ ಹಾಜರಿದ್ದು ಸಹಾಯ ಮಾಡುತ್ತಾರೆ ಎಂದರೆ ಏನರ್ಥ? ಎಂದು ವಿಡಿಯೋವನ್ನು ಉಲ್ಲೇಖ ಮಾಡಿ ಬಿಜೆಪಿ ಪ್ರಶ್ನಿಸಿದೆ. ಕೆಪಿಸಿಸಿ ಕಚೇರಿಯಿಂದಲೇ ಈ ಪ್ರಕರಣ ನಿರ್ವಹಣೆಯಾಗುತ್ತಿದೆ ಎಂಬುದು ನಿಜವೇ? ಎಂದು ತರಾಟೆಗೆ ತೆಗೆದುಕೊಂಡಿದೆ. ಒಟ್ಟಿನಲ್ಲಿ ಸಿ.ಡಿ ಪ್ರಕರಣದ ಯುವತಿ ನ್ಯಾಯಾಲಯಕ್ಕೆ ಹಾಜರಾದ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಟಾಕ್‌ ವಾರ್ ತೀವ್ರಗೊಳ್ಳುತ್ತಿದೆ. ಈ ನಡುವೆ ಯುವತಿ ನ್ಯಾಯಾಧೀಶರ ಮುಂದೆ ಸುದೀರ್ಘ ಹೇಳಿಕೆ ನೀಡಿದ್ದು ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಷಯಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.


from India & World News in Kannada | VK Polls https://ift.tt/3rCY5SL

ರೈತರು ನೀಡುವ ಪ್ರತೀ ಲೀಟರ್‌ ಹಾಲಿಗೆ 2. ರೂ. ಹೆಚ್ಚಳ: ತುಮುಲ್‌ ನಿರ್ದೇಶಕ ಚಂದ್ರಶೇಖರ್‌

ಸಿರಾಜ್ ಅಹಮದ್ ಕೊಡಿಗೇನಹಳ್ಳಿ ಕೊಡಿಗೇನಹಳ್ಳಿ (ಮಧುಗಿರಿ ತಾ): ರೈತರಿಂದ ಒಕ್ಕೂಟ ಇಂದು ಬಲಿಷ್ಠವಾಗಿದ್ದು ಒಕ್ಕೂಟಕ್ಕೆ ಬಂದ ಲಾಭವನ್ನು ರೈತರಿಗೆ ಹಂಚಲು ತೀರ್ಮಾನಿಸಿ ಮಾ. 1 ರಿಂದ ಜಾರಿಗೆ ಬರುವಂತೆ ರೈತರು ಪೂರೈಸುವ ಲೀ. ಹಾಲಿಗೆ 2 ರೂ ಹೆಚ್ಚಿಸಲಾಗಿದೆ ಎಂದು ತುಮುಲ್ ನಿರ್ದೇಶಕ ತಿಳಿಸಿದರು. ಮಧುಗಿರಿ ಶೀಥಲೀಕರಣ ಕೇಂದ್ರದ ಕ್ಷೀರಭವನದಲ್ಲಿ ರೈತರ ಕಲ್ಯಾಣ ನಿಧಿ ಯೋಜನೆಯಡಿ ನಡೆದ ಅರ್ಹ ಫಲಾನುಭವಿಗಳಿಗೆ ಸುಮಾರು 60 ಲಕ್ಷ ರೂಗಳ ಚೆಕ್‌ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿ ಮಾತನಾಡಿದರು. ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಜಾರಿಗೊಳಿಸಿದ ಹತ್ತು ಹಲವು ಯೋಜನೆಗಳು ಇಂದು ರೈತರಿಗೆ ಸಹಕಾರಿಯಾಗಿದ್ದು ಇವೆಲ್ಲವೂ ನಿಮ್ಮ ಸಹಕಾರದಿಂದ ಸಾಧ್ಯವಾಗಿದೆ ಎಂದರು. ರಾಸುಗಳ ವಿಮಾ ಯೋಜನೆ, ಹಾಲು ಉತ್ಪಾದಕರಿಗೆ ಆರೋಗ್ಯ ವಿಮೆ, ಹಾಗೂ ಮೃತರಿಗೆ ಪರಿಹಾರ, ಮೃತ ರಾಸು-ಪಡ್ಡೆರಾಸುಗಳಿಗೆ ಪರಿಹಾರ, ಸಂಘದ ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಹಾಗೂ ಹೆಣ್ಣು ಮಕ್ಕಳಿಗೆ ಜಿಲ್ಲಾ ಕೇಂಧ್ರದಲ್ಲಿ ಉಚಿತ ಊಟ-ವಸತಿ ಯೋಜನೆ ಕಲ್ಪಿಸಿದ್ದು ನನ್ನ ಅಧ್ಯಕ್ಷತೆಯ ಅವಧಿ ತೃಪ್ತಿ ತಂದಿದೆ. ಸಂಘದ ಸಿಬ್ಬಂದಿಗಳ ಆರೋಗ್ಯ ವಿಮೆಗೆ ತಲಾ 25 ಸಾವಿರ ಹಣ ಮೀಸಲಿಟ್ಟಿದ್ದು, ಒಕ್ಕೂಟ ವಾರ್ಷಿಕ 9.5 ಕೋಟಿ ಹಣವನ್ನು ರಾಸುಗಳ ವಿಮೆಗಾಗಿ ಉಚಿತವಾಗಿ ಭರಿಸುತ್ತಿದೆ. ವ್ಯವಸಾಯ ನಂಬಿದ ರೈತರು ಕಷ್ಟದಲ್ಲಿದ್ದು, ಹೈನುಗಾರಿಕೆ ಮಾಡಿ ಹಾಲು ಪೂರೈಸುತ್ತಿದ್ದಾರೆ. ನಮ್ಮ ಒಕ್ಕೂಟವು ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದ್ದು, ಸಾರ್ವಜನಿಕರು ಅವುಗಳನ್ನೇ ಹೆಚ್ಚು ಬಳಸಿ ನಾಡಿನ ರೈತರನ್ನು ಹಾಗೂ ಒಕ್ಕೂಟವನ್ನು ಆರ್ಥಿಕವಾಗಿ ಕೈ ಹಿಡಿಯಬೇಕು ಎಂದರು ಮಾ 31 ರ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಕೋವಿಡ್-19 ನಿಯಮ ಅಡ್ಡವಾಗಿದ್ದು, ನಂತರ ಹಮ್ಮಿಕೊಳ್ಳಲಾಗುವುದು. ರೈತರಾದವರಿಗೆ ಮಾತ್ರ ರೈತರ ಸಂಕಷ್ಟ ಅರಿವಾಗುತ್ತದೆ. ಅದಕ್ಕಾಗಿ ಸ್ವತಃ ರೈತನಾಗಿದ್ದರಿಂದ ಈ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗಿದೆ. ಅದನ್ನು ಮುಂದುವರೆಸಲು ಸದಾ ನಿಮ್ಮ ಆಶೀರ್ವಾದ ನನಗಿರಲಿ ಎಂದರು. ಕಾರ್ಯಕ್ರಮದಲ್ಲಿ 2020-21 ನೇ ಸಾಲಿನಲ್ಲಿ 55 ರಾಸುಗಳಿಗೆ ತಲಾ 50 ಸಾವಿರದಂತೆ 31 ಲಕ್ಷ, ಮೃತ 47 ಹಾಲು ಉತ್ಪಾದಕರಿಗೆ 50 ಸಾವಿರದಂತೆ 27.5 ಲಕ್ಷ, ಬೆಂಕಿ ತಗುಲಿದ ಬಣವೆಗೆ 1 ಲಕ್ಷ, ಪಡ್ಡೆರಾಸುಗಳಿಗೆ 1 ಲಕ್ಷ, ವಿದ್ಯಾರ್ಥಿ ವೇತನವಾಗಿ 2.10 ಲಕ್ಷ ಪರಿಹಾರ, ಉತ್ಪಾದಕರ ಆರೋಗ್ಯ ವಿಮೆಗೆ ತಲಾ 10 ಸಾವಿರದ ಚೆಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಡೇರಿ ಉಪ ವ್ಯವಸ್ಥಾಪಕ ವೀರಣ್ಣ, ಉಪ ಸಹಾಯಕ ವ್ಯವಸ್ಥಾಪಕ ರವಿಕಿರಣ್, ತಾ.ಪಂ. ಮಾಜಿ ಅಧ್ಯಕ್ಷೆ ಸುನಂದಾ ಸಿದ್ದಪ್ಪ, ತಾಲೂಕು ವಿಸ್ತರಣಾಧಿಕಾರಿಗಳಾದ ಶಂಕರನಾಗ್, ಒಕ್ಕೂಟದ ವೈದ್ಯರು, ಡೇರಿ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಹಾಲು ಉತ್ಪಾದಕರು, ವಿದ್ಯಾರ್ಥಿಗಳು ಹಾಜರಿದ್ದರು.


from India & World News in Kannada | VK Polls https://ift.tt/3ubh1dg

ಭಾರತ ಓಡಿಐ ತಂಡಕ್ಕೆ ಆಯ್ಕೆಯಾಗದ ಬಗ್ಗೆ ಮೌನ ಮುರಿದ ಪಡಿಕ್ಕಲ್‌!

ಹೊಸದಿಲ್ಲಿ: ಕಳೆದ ಹಲವು ವರ್ಷಗಳಿಂದ ವಿಜಯ್‌ ಹಝಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ತೋರಿದ ಹೊರತಾಗಿಯೂ ಇತ್ತೀಚೆಗೆ ಮುಕ್ತಾಯವಾಗಿದ್ದ ಇಂಗ್ಲೆಂಡ್‌ ವಿರುದ್ಧದ ಓಡಿಐ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯದ ಬಗ್ಗೆ ಕರ್ನಾಟಕ ಆರಂಭಿಕ ಬ್ಯಾಟ್ಸ್‌ಮನ್‌ ಪ್ರತಿಕ್ರಿಯಿಸಿದ್ದಾರೆ. ‌ ದೇವದತ್‌ ಪಡಿಕ್ಕಲ್‌ ಕಳೆದ 2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬೆಳಕಿಗೆ ಬಂದ ಅದ್ಭುತ ಪ್ರತಿಭೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಂದಹಾಗೆ ಅವರು ದೇಶಿ ಟೂರ್ನಿಗಳಾದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಹಾಗೂ ವಿಜಯ್‌ ಹಝಾರೆ ಟ್ರೋಫಿಗಳಲ್ಲಿಯೂ ಅದ್ಭುತ ಪ್ರದರ್ಶನ ತೋರುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಮುಕ್ತಾಯವಾಗಿದ್ದ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕದ ಪರ 7 ಇನಿಂಗ್ಸ್‌ಗಳಲ್ಲಿ ಪಡಿಕ್ಕಲ್‌ 4 ಶತಕಗಳು ಹಾಗೂ 3 ಅರ್ಧಶತಕಗಳನ್ನು ಸಿಡಿಸಿದ್ದರು. ಆ ಮೂಲಕ ಟೂರ್ನಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ 147ರ ಸರಾಸರಿಯಲ್ಲಿ 723 ರನ್‌ ಕಲೆ ಹಾಕಿದ್ದರು. ಪೃಥ್ವಿ ಶಾ ಬಳಿಕ ಈ ಟೂರ್ನಿಯಲ್ಲಿ ಕಲೆಹಾಕಿದ ಎರಡನೇ ವೈಯಕ್ತಿಕ ಗರಿಷ್ಠ ಮೊತ್ತ ಇದಾಯಿತು. ಕಳೆದ ವರ್ಷ ತವರು ತಂಡ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಪದಾರ್ಪಣೆ ಮಾಡಿದ್ದ ದೇವದತ್‌ ಪಡಿಕ್ಕಲ್‌ ಅದ್ಭುತ ಪ್ರದರ್ಶನ ತೋರಿದ್ದರು. ನಾಯಕ ಹಾಗೂ ಎಬಿ ಡಿವಿಲಿಯರ್ಸ್ ಅವರಿಗೆ ಎಡಗೈ ಬ್ಯಾಟ್ಸ್‌ಮನ್‌ ಹೆಗಲು ನೀಡಿದ್ದರು. ಅಲ್ಲದೆ, ಜಸ್‌ಪ್ರಿತ್‌ ಬುಮ್ರಾ ಅವರಂಥ ವಿಶ್ವ ಅಗ್ರ ಶ್ರೇಯಾಂಕದ ಬೌಲರ್‌ಗಳಿಗೆ ಪಡಿಕ್ಕಲ್‌ ಸ್ಪೋಟಕ ಹೊಡೆತಗಳನ್ನು ಹೊಡೆದು ಗಮನ ಸೆಳೆದಿದ್ದರು. ಇತ್ತೀಚೆಗೆ ಮುಕ್ತಾಯವಾಗಿದ್ದ ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಓಡಿಐ ಸರಣಿಗೆ ಟೀಮ್‌ ಇಂಡಿಯಾದಲ್ಲಿ ದೇವದತ್‌ ಪಡಿಕ್ಕಲ್‌ಗೆ ಚೊಚ್ಚಲ ಅವಕಾಶ ಸಿಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಭಾರತ ತಂಡದಲ್ಲಿ ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಶುಭಮನ್‌ ಗಿಲ್‌ ಹಾಗೂ ಕೆ.ಎಲ್‌ ರಾಹುಲ್‌ ಅವರು ಓಪನಿಂಗ್‌ ಸ್ಥಾನಕ್ಕೆ ತೀವ್ರ ಪೈಪೋಟಿ ಇದ್ದ ಕಾರಣ ಕರ್ನಾಟಕ ಆಟಗಾರನಿಗೆ ಭಾರತ ತಂಡದ ಬಾಗಿಲು ತೆರೆಯಲಿಲ್ಲ. ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಅತ್ಯುತ್ತಮ ರನ್‌ಗಳನ್ನು ಗಳಿಸಿದ ಹೊರತಾಗಿಯೂ ಭಾರತ ಓಡಿಐ ತಂಡಕ್ಕೆ ಆಯ್ಕೆಯಾಗದ ಬಗ್ಗೆ ಹಿಂದೂಸ್ಥಾನ್‌ ಟೈಮ್ಸ್ ಸಂದರ್ಶನಲ್ಲಿ ದೇವದತ್‌ ಪಡಿಕ್ಕಲ್‌ ಪ್ರತಿಕ್ರಿಯಿಸಿದ್ದಾರೆ. "ಕಳೆದ ಎರಡು ಅಥವಾ ಮೂರು ವರ್ಷಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ, ಹಾಗಾಗಿ ಭಾರತಕ್ಕೆ ಆಯ್ಕೆಯಾಗದ ಬಗ್ಗೆ ನನಗೆ ಬೇಸರವಿಲ್ಲ. ಅಷ್ಟಕ್ಕೂ ಇದು ನನ್ನ ನಿಯಂತ್ರಣದಲ್ಲಿಲ್ಲ. ಒಂದು ತಂಡದ ಸದಸ್ಯನಾಗಿ ಆಟವನ್ನು ದಿನದಿಂದ ದಿನಕ್ಕೆ ಬೆಳವಣಿಗೆ ಸಾಧಿಸುವ ಕಡೆ ನಾನು ಗಮನ ಹರಿಸುತ್ತಿದ್ದೇನೆ. ಕಳೆದ ಎರಡು ಅಥವಾ ಮೂರು ವರ್ಷಗಳ ಹಿಂದೆ ತಂಡದಲ್ಲಿದ್ದಾಗ ಆಯ್ಕೆಯ ಬಗ್ಗೆ ಸಾಕಷ್ಟು ಯೋಚಿಸುತ್ತಿದ್ದೆ. ಆದರೆ, ಈಗ ಆಟದ ಕಡೆ ಹೆಚ್ಚಿನ ಗಮನ ಹರಿಸಿ ರನ್‌ ಗಳಿಸುವುದು ತುಂಬಾ ಮುಖ್ಯವಾದ ಅಂಶ ಎಂಬುದನ್ನು ಅರಿತುಕೊಂಡಿದ್ದೇನೆ," ಎಂದರು. "ಯಾವ ತಂಡ, ಯಾವ ಫ್ರಾಂಚೈಸಿಗೆ ಅಥವಾ ದೇಶಿ ಕ್ರಿಕೆಟ್‌ ಇರಲಿ ಇದು ನನಗೆ ವಿಷಯವಾಗಿರುವುದಿಲ್ಲ. ಎಲ್ಲಿ, ಯಾವುದೇ ತಂಡಕ್ಕಾದರೂ ರನ್‌ ಗಳಿಸುವುದನ್ನು ಮುಂದುವರಿಸಿ ತಂಡವನ್ನು ಗೆಲ್ಲಿಸುವುದಷ್ಟೇ ನನ್ನ ಕೆಲಸ. ಒಂದು ದಿನ ಭಾರತ ತಂಡದಲ್ಲಿ ಅವಕಾಶ ಸಿಕ್ಕರೆ ಅದು ನನ್ನ ಪಾಲಿಗೆ ಅದ್ಭುತವಾಗಿರುತ್ತದೆ," ಎಂದು ಪಡಿಕ್ಕಲ್‌ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2PcodHb

ಬಿಜೆಪಿಯಲ್ಲಿ17+13ರ ಮತ್ತೊಂದು ಗುಂಪು; ಅಭದ್ರತೆಯಲ್ಲಿರುವ ಮಿತ್ರಮಂಡಳಿಯಿಂದ ಅಸ್ತಿತ್ವಕ್ಕಾಗಿ ಗೇಮ್‌ ಪ್ಲಾನ್!

ಬೆಂಗಳೂರು: ಆಪರೇಷನ್‌ ಕಮಲದ ಮಿತ್ರಮಂಡಳಿಯ ಸದಸ್ಯರು ತಮ್ಮ ಅಸ್ತಿತ್ವ ಗಟ್ಟಿ ಮಾಡಿಕೊಳ್ಳುವುದರ ಜತೆಗೆ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಗಂಭೀರ ಯತ್ನದಲ್ಲಿದ್ದಾರೆ. ಇದರಿಂದಾಗಿ ಆಡಳಿತಾರೂಢ ಬಿಜೆಪಿಯಲ್ಲಿ17 ಪ್ಲಸ್‌ 13 ಎಂಬ ಮತ್ತೊಂದು ಗುಂಪು ರಚನೆಯಾಗಿದೆ. ಕಳೆದೊಂದು ವರ್ಷದಿಂದ ತಮ್ಮ ಪಾಡಿಗೆ ತಾವಿದ್ದ ಮಿತ್ರಮಂಡಳಿ ಸದಸ್ಯರು ಸಿ.ಡಿ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ತಮ್ಮಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಭವಿಷ್ಯ ಡೋಲಾಯಮಾನ ಆಗಬಹುದು ಎಂಬ ಆತಂಕಕ್ಕೆ ಒಳಗಾಗಿರುವ ಮಿತ್ರಮಂಡಳಿಯವರು ಪದೇಪದೆ ತಾವೆಲ್ಲಒಟ್ಟಿಗಿದ್ದೇವೆ ಎಂಬ ಹೇಳಿಕೆ ಕೊಡುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಮತ್ತಷ್ಟು ಶಾಸಕರನ್ನು ತಮ್ಮ ಟೀಮ್‌ಗೆ ಸೇರಿಸಿಕೊಳ್ಳಲು ಹೊರಟಿದ್ದಾರೆ. ಮಿತ್ರಮಂಡಳಿಯಂತೆಯೇ ಅಭದ್ರತಾ ಭಾವದಲ್ಲಿರುವ ಸುಮಾರು 13 ಶಾಸಕರು ಈಗ ಸಂಪರ್ಕಕ್ಕೆ ಬಂದಿದ್ದಾರೆ. ಹಾಗಾಗಿ ಮಿತ್ರಮಂಡಳಿಯ ಸದಸ್ಯ ಬಲ 30ಕ್ಕೆ (17 ಪ್ಲಸ್‌ 13) ಏರಿದೆ ಎಂದು ಗೊತ್ತಾಗಿದೆ. ಸಮ್ಮಿಶ್ರ ಸರಕಾರ ಪತನ ಸಂದರ್ಭದಲ್ಲಿ ಕಾಂಗ್ರೆಸ್‌, ಜೆಡಿಎಸ್‌ನ 17 ಶಾಸಕರು ರಾಜೀನಾಮೆ ನೀಡಿದ್ದರು. ಈ ಪೈಕಿ ಮಾಜಿ ಸಚಿವ ರೋಶನ್‌ ಬೇಗ್‌ ಅವರನ್ನು ಹೊರತುಪಡಿಸಿ ಇತರ ಎಲ್ಲರೂ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಹಾಲಿ ಸಚಿವ ಸಿ.ಪಿ. ಯೋಗೇಶ್ವರ್‌ ಕೂಡ ಮಿತ್ರಮಂಡಳಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಮಿತ್ರಮಂಡಳಿಯ 'ಸಂಸ್ಥಾಪಕ ಸದಸ್ಯ'ರಲ್ಲಿ17 ಮಂದಿ ಹಾಗೆಯೇ ಉಳಿದುಕೊಂಡಿದ್ದಾರೆ ಎನ್ನಲು ಅಡ್ಡಿಯಿಲ್ಲ. ಬಿಜೆಪಿಗೆ ಬಂದ ಬಳಿಕವೂ ತಮ್ಮನ್ನು ಹೊರಗಿನವರಂತೆ ನೋಡಲಾಗುತ್ತಿದೆ ಎಂಬ ಕೊರಗು ಮಿತ್ರಮಂಡಳಿಯದ್ದಾಗಿದೆ. ಹಾಗಾಗಿ ಮುಂಬರುವ ದಿನಗಳಲ್ಲಿಅಸ್ತಿತ್ವಕ್ಕಾಗಿ ಹೋರಾಡಲು ತೆರೆಮರೆಯಲ್ಲಿ ಕಾರ್ಯಸೂಚಿ ಸಿದ್ಧಪಡಿಸಲಾಗುತ್ತದೆ. ಅದಕ್ಕಾಗಿ ಸಮಾನ ಮನಸ್ಕರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಮಿತ್ರಮಂಡಳಿ ಭೀತಿಯೇನು?ಮಿತ್ರಮಂಡಳಿ ಸದಸ್ಯರು ಶಾಸಕ ಸ್ಥಾನದಿಂದ ಅನರ್ಹಗೊಂಡಾಗಲೇ ಕಂಗಾಲಾಗಿದ್ದರು. ನಂತರ ಕಾನೂನು ಹೋರಾಟ ನಡೆಸಿ ಉಪ ಚುನಾವಣೆಯಲ್ಲಿ ಗೆದ್ದು ಬಂದರೂ ಸಚಿವರಾಗಲು ಕಾಯುವ ಸನ್ನಿವೇಶ ನಿರ್ಮಾಣವಾಗಿತ್ತು. ಸಂಪುಟ ಸೇರ್ಪಡೆಯಾದ ಬಳಿಕ ಹೆಚ್ಚಿನವರಿಗೆ ಮೊದಲೇ ನಿಗದಿಯಾಗಿದ್ದ ಖಾತೆಗಳು ಸಿಕ್ಕಿರಲಿಲ್ಲ. ಇದಲ್ಲದೇ ಪಕ್ಷದಲ್ಲಿ ಮೂಲನಿವಾಸಿಗಳು, ವಲಸಿಗರು ಎಂಬ ಸಂಘರ್ಷವೂ ಶುರುವಾಗಿತ್ತು. ಇದೆಲ್ಲವನ್ನು ಸಹಿಸಿಕೊಂಡಿದ್ದರೂ ಮಿತ್ರಮಂಡಳಿ ಸಚಿವರು ನಿರ್ವಹಿಸುವ ಇಲಾಖೆಗಳಿಗೆ ಅನುದಾನವೂ ಬಿಡುಗಡೆಯಾಗಲಿಲ್ಲ. ಕೋವಿಡ್‌ನಿಂದ ಆರ್ಥಿಕ ಸಂಕಷ್ಟ ಎದುರಾದದ್ದನ್ನು ಇದಕ್ಕೆ ನೆಪವಾಗಿ ನೀಡಲಾಯಿತು. ಇದರಿಂದಾಗಿ ಸಚಿವರಾಗಿದ್ದೂ ಏನೂ ಮಾಡಲಾಗದ ಸ್ಥಿತಿಗೆ ಮಿತ್ರಮಂಡಳಿ ಸದಸ್ಯರು ಬಂದರು. ಆದರೆ, ಈ ಹಂತದಲ್ಲಿ ಮಿತ್ರಮಂಡಳಿಯ ಸದಸ್ಯರೇ ಪರಸ್ಪರ ದೂರವಾಗಿದ್ದರು. ಈ ಸಂದರ್ಭ ಬಳಸಿಕೊಂಡು ಇತ್ತೀಚಿನ ಸಂಪುಟ ವಿಸ್ತರಣೆ ವೇಳೆ ಮಿತ್ರಮಂಡಳಿ ಸಚಿವರ ಖಾತೆ ಬದಲಿಸಲಾಗಿತ್ತು. ಇದರಿಂದ ಈ ಟೀಮ್‌ನವರಿಗೆ ಶಾಕ್‌ ಆಗಿತ್ತು. ರಮೇಶ್‌ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಹೊರಬಿದ್ದಾಗ ತಮ್ಮ ವಿರುದ್ಧ ಏನೋ ಷಡ್ಯಂತ್ರ ನಡೆಯುತ್ತಿದೆಯೆಂದು ಮಿತ್ರಮಂಡಳಿಯವರು ಭಾವಿಸಿದರು. ಹಾಗಾಗಿ ಈ ಘಟನೆ ಬಳಿಕ ಏನೇ ಪರಿಸ್ಥಿತಿ ಬಂದರೂ ಒಟ್ಟಿಗೆ ಎದುರಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ನಾಯಕತ್ವ ಬದಲಾವಣೆ ಬಗ್ಗೆಯೂ ಪದೇಪದೆ ಚರ್ಚೆಯಾಗುತ್ತಿದೆ. ಕಳೆದ ವಾರ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಸುಮಾರು 60 ಶಾಸಕರು ತಮ್ಮ ಬೆಂಬಲ ಸೂಚಿಸಿ ಬಂದಿದ್ದಾರೆ. ಈಗ ಮಿತ್ರಮಂಡಳಿಯವರೂ ತಮ್ಮೊಂದಿಗೆ ಮತ್ತೆ 13 ಜನರನ್ನು ಸೇರಿಸಿಕೊಂಡಿದ್ದಾರೆ. ಈ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ. ಇವರು ಪ್ರತ್ಯೇಕವಾಗಿ ಗುರುತಿಸಿಕೊಳ್ಳಲಿದ್ದಾರೆ. ನಾಯಕತ್ವ ಬದಲಾವಣೆ ಹಾಗೂ ಇನ್ನಿತರ ಮಹತ್ವದ ವಿಚಾರ ಬಂದಾಗ ದಾಳವುರುಳಿಸುವುದು ಈ ಟೀಮ್‌ನ ಲೆಕ್ಕಾಚಾರ. ತಮ್ಮ ತಂಡದಲ್ಲಿ ಹೆಚ್ಚು ಜನರಿದ್ದರೆ ಮಾತ್ರ ಹೈಕಮಾಂಡ್‌ಗೂ ಗಮನ ಸೆಳೆಯಬಹುದು. ಇದರಿಂದ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಬಹುದು ಎನ್ನುವುದು ಇವರ ಯೋಚನೆ. ನಾನಾ ಕಾರಣದಿಂದ ಅತೃಪ್ತಿ ಹೊಂದಿರುವ ಇತರ ಕೆಲವು ಶಾಸಕರೂ ಈ ಟೀಮ್‌ನೊಂದಿಗೆ ಹೆಜ್ಜೆ ಹಾಕಲು ಮನಸ್ಸು ಮಾಡಿದ್ದಾರೆ. ಹಾಗಾಗಿ ಮಿತ್ರಮಂಡಳಿ ಪ್ರಾಬಲ್ಯ ಹೆಚ್ಚುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.


from India & World News in Kannada | VK Polls https://ift.tt/3sEDhvF

ಫರಂಗಿಪೇಟೆ: ಹೆಲ್ಮೆಟ್‌ ಧರಿಸಿ ಮಧ್ಯರಾತ್ರಿ ಮಸೀದಿಗೆ ನುಗ್ಗಿ ಧರ್ಮಗುರುವಿನ ಕೊಲೆಗೆ ಯತ್ನ!

ಮಂಗಳೂರು: ಹೆಲ್ಮೆಟ್ ಧರಿಸಿ ಮಸೀದಿಗೆ ನುಗ್ಗಿ ಧರ್ಮಗುರುವಿನ ಮೇಲೆ ಹಲ್ಲೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ನಡೆದಿದೆ. ಸರಿ ಸುಮಾರು ರಾತ್ರಿ 12 ಗಂಟೆಯ ಸಮಯದಲ್ಲಿ ಹೆಲ್ಮೆಟ್ ಧರಿಸಿ ಮಸೀದಿಗೆ ತಂಡವೊಂದು ನುಗ್ಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮ್ಮೆಮಾರ್ ರಸ್ತೆಯಲ್ಲಿರುವ ಬಿರ್ರುಲ್ ವಾಲಿದೈನ್ ಮಸೀದಿಗೆ ಮೂರು ಮಂದಿಯ ತಂಡ ಸುಮಾರು 12 ಗಂಟೆಗೆ ನುಗ್ಗಿದೆ. ಮಸೀದಿಯ ಧರ್ಮಗುರು ಕುಂದಾಪುರ ನಿವಾಸಿ ಮುಸ್ತಾಕ್ ಮಲಗಿದ್ದರು. ಈ ವೇಳೆ ಅವರ ಕೊಠಡಿಗೆ ನುಗ್ಗಿದ , ಮೊದಲು ಅವರ ಕತ್ತು ಹಿಡಿದುಕೊಂಡು ಹಲ್ಲೆ ನಡೆಸಿ ಕೊಲೆಗೆ ಯತ್ನ ನಡೆಸಿದ್ದಾರೆ. ಈ ವೇಳೆ ತಕ್ಷಣ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಧರ್ಮಗುರು ಮಸೀದಿಯ ಒಂದನೇ ಮಹಡಿಗೆ ಓಡಿಕೊಂಡು ಬಂದಿದ್ದಾರೆ. ಈ ವೇಲೆ ಅವರ ಕೈಕಾಲುಗಳಿಗೆ ಗಾಯಗಳಾಗಿದೆದೆ. ಇನ್ನು ಮಸೀದಿಯ ಸಿಸಿ ಕ್ಯಾಮಾರಾದಲ್ಲಿ ದುಷ್ಕರ್ಮಿಗಳು ಮಸೀದಿಯೊಳಗೆ ನುಗ್ಗಿರುವ ದೃಶ್ಯ ಸೆರೆಯಾಗಿದೆ. ಈ ಕುರಿತಂತೆ ಮಸೀದಿ ಅಧ್ಯಕ್ಷ ಸೈಯದ್ ಬಾವಾ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಘಟನೆಯನ್ನು ಹಲವರು ಖಂಡಿಸಿದ್ದಾರೆ.


from India & World News in Kannada | VK Polls https://ift.tt/2PjpP1C

ಹಣ ಪಡೆದು ವಂಚನೆ ಕೇಸ್; ಬಂಧಿತ ರಾಮಸೇನೆಯ ಸಂಸ್ಥಾಪಕನನ್ನು ಬೆಂಗಳೂರಿಗೆ ಕರೆತಂದ ಪೊಲೀಸ್

ಮಂಗಳೂರು: ಕುಲಪತಿಯನ್ನಾಗಿ ಮಾಡುವುದಾಗಿ ಹೇಳಿ ವಿವಿ ಪ್ರಾಧ್ಯಾಪಕರೊಬ್ಬರಿಂದ 17.5ಲಕ್ಷ ರೂ. ಹಣ ಪಡೆದು ವಂಚಿಸಿದ್ದಲ್ಲದೆ, ಜೀವ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ರಾಮಸೇನೆಯ ಸಂಸ್ಥಾಪಕ ಪ್ರಸಾದ್‌ ಅತ್ತಾವರನನ್ನು ಪೊಲೀಸರು ಮತ್ತಷ್ಟು ವಿಚಾರಣೆಗೆ ಮೂರು ದಿನಗಳ ಕಾಲ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಆರೋಪಿ ಬೆಂಗಳೂರಿನಲ್ಲಿ ನಡೆಸಿರುವ ವ್ಯವಹಾರ, ಇತರ ಚಟುವಟಿಕೆಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಪ್ರಸಾದ್‌ ಜತೆಗೆ ವಿವೇಕ್‌, ಗೋಪಾಲಕೃಷ್ಣ, ಭರತ್‌ ಮತ್ತು ಮಂಜು ಎಂಬವರ ವಿರುದ ಪ್ರಕರಣ ದಾಖಲಾಗಿದ್ದು ಅವರ ಬಂಧನ ಬಾಕಿ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಹಿಂದೂ ಸಂಘಟನೆಗಳ ಜೊತೆ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಪ್ರಸಾದ್ ಅತ್ತಾವರ್‌ಗೆ, ವಿವೇಕ್ ಆಚಾರ್ಯ ಮೂಲಕ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರೊಬ್ಬರ ಪರಿಚಯವಾಗಿತ್ತು. ಆರೋಪಿ ‘ತನಗೆ ಮುಖ್ಯಮಂತ್ರಿ ಸೇರಿದಂತೆ ದೇಶದ ಗಣ್ಯ ವ್ಯಕ್ತಿಗಳ ಪರಿಚಯವಿದೆ. ನಿಮಗೆ ರಾಯಚೂರು ವಿಶ್ವವಿದ್ಯಾನಿಲಯದ ಕುಲಪತಿಯನ್ನಾಗಿ ಮಾಡುತ್ತೇನೆ. ಇದಕ್ಕಾಗಿ 30ಲಕ್ಷ ರೂ. ಹಣ ಕೊಡಬೇಕೆಂದು ತಿಳಿಸಿ, ಒತ್ತಾಯವಾಗಿ 17.5ಲಕ್ಷ ರೂ. ಹಣ ಪಡೆದು ಉಳಿದ ಹಣಕ್ಕೆ 3 ಖಾಲಿ ಚೆಕ್ ಪಡೆದು ವಂಚಿಸಿದ್ದಾನೆ. ಮರಳಿ ಹಣ ಕೇಳಿದಾಗ ಹಣ ಕೊಡದೆ ಜೀವ ಬೆದರಿಕೆ ಹಾಕಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಂಕನಾಡಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಈತನ ವಿರುದ್ಧ ಮಂಗಳೂರು ಉತ್ತರ ಠಾಣೆ, ಮಂಗಳೂರು ಪೂರ್ವ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಕಂಕನಾಡಿ ನಗರ ಠಾಣೆಯಲ್ಲಿ ರೌಡಿಶೀಟರ್ ರಿಜಿಸ್ಟರ್ ಆಗಿದೆ.


from India & World News in Kannada | VK Polls https://ift.tt/3rD8y0G

ಕೋರ್ಟ್‌ಗೆ ಹಾಜರಿನ ವೇಳೆ ಸಿ.ಡಿ ಯುವತಿ ಜೊತೆ ಕೆಪಿಸಿಸಿ ಕಾರ್ಯದರ್ಶಿ ಪ್ರತ್ಯಕ್ಷ, ನಲಪಾಡ್‌ ಕಾರು ಬೆಂಗಾವಲು?

ಬೆಂಗಳೂರು: ನ್ಯಾಯಾಲಯದಲ್ಲಿ ಯುವತಿಯನ್ನು ಹಾಜರುಪಡಿಸಿದ ವೇಳೆ ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ಇರುವುದು ಬೆಳಕಿಗೆ ಬಂದಿದೆ. ಯುವತಿ ಕಾರು ಹತ್ತುವ ಸಂದರ್ಭದಲ್ಲಿ ಮುಕುಂದರಾಜ್‌ ಯುವತಿ ಕಾರು ಹತ್ತುವಾಗ ಕಾರಿನ ಬಾಗಿಲ ಬಳಿಗೆ ಬರುವುದು ವಿಡಿಯೊವೊಂದರಲ್ಲಿ ಸೆರೆಯಾಗಿದೆ. ಇದನ್ನು ಬಿಜೆಪಿ ಕರ್ನಾಟಕ ಪ್ರಶ್ನಿಸಿ ಟ್ವೀಟ್‌ ಮಾಡಿದೆ. ಬಿಜೆಪಿ ಕರ್ನಾಟಕ ಟ್ವೀಟ್‌: 'ಸಿ.ಡಿ ಪ್ರಕರಣ ಕರ್ನಾಟಕ ಪ್ರಾಯೋಜಿತ ಎಂದು ಸಾಬೀತಾಗುತ್ತಿದೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ಅವರು ಯುವತಿ ಹೇಳಿಕೆ ದಾಖಲು ಮಾಡುವ ಸಂದರ್ಭದಲ್ಲಿ ಹಾಜರಿದ್ದು ಸಹಾಯ ಮಾಡುತ್ತಾರೆ ಎಂದರೆ ಏನರ್ಥ? ಕೆಪಿಸಿಸಿ ಕಚೇರಿಯಿಂದಲೇ ಈ ಪ್ರಕರಣ ನಿರ್ವಹಣೆಯಾಗುತ್ತಿದೆ ಎಂಬುದು ನಿಜವೇ? ಎಂದು ಬಿಜೆಪಿ ಟ್ವೀಟ್‌ ಮಾಡಿದೆ. ಯುವತಿ ಕಾರು ಫಾಲೋ ಮಾಡಿದ ನಲಪಾಡ್‌ ಸ್ನೇಹಿತರ ಕಾರು ಬೆಂಗಳೂರು: ವಿಚಾರಣೆ ಮುಗಿಸಿಕೊಂಡು ಆಡುಗೋಡಿಯಿಂದ ಮನೆಗೆ ಮರಳುವ ವೇಳೆ ಯುವತಿ ಇದ್ದ ಕಾರನ್ನು ಪೊಲೀಸರ ಜತೆಯಲ್ಲೇ ಹಿಂಬಾಲಿಸಿ ಹೋದ ಕಾರಿನ ವಿಚಾರದಲ್ಲಿ ಅನುಮಾನ ಮೂಡಿಸತೊಡಗಿದೆ. ಪೊಲೀಸ್‌ ಬೆಂಗಾವಲು ವಾಹನಗಳ ಜತೆಗೆ ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಸ್ನೇಹಿತ ನಫಿಹ ಮೊಹಮ್ಮದ್‌ ನಾಸೀರ್‌ ಎಂಬುವರಿಗೆ ಸೇರಿದ ಫಾರ್ಚೂ್ಯನರ್‌ ಕಾರು ತೆರಳಿರುವುದು ಕಾರಿನ ನೋಂದಣಿ ಸಂಖ್ಯೆಯಿಂದ ಬಹಿರಂಗವಾಗಿದೆ. ಆಡುಗೋಡಿ ಟೆಕ್ನಿಕಲ್‌ ಸೆಲ್‌ನ ಒಳಭಾಗದಿಂದಲೇ ಯುವತಿ ಇದ್ದ ಕಾರನ್ನು ಕೆಎ 04 ಎಂಯು 9232 ನೋಂದಣಿ ಸಂಖ್ಯೆ ಕಾರು ಹಿಂಬಾಲಿಸಿದೆ. ನಫಿಹ ಮೊಹಮ್ಮದ್‌ ನಾಸೀರ್‌ ಶಾಂತಿನಗರ ಶಾಸಕರ ಜತೆ ಹಲವು ಫೋಟೋಗಳನ್ನು ತೆಗೆಸಿಕೊಂಡಿದ್ದು, ಫೇಸ್‌ಬುಕ್‌ನಲ್ಲಿ ಲಭ್ಯ ಇದೆ.


from India & World News in Kannada | VK Polls https://ift.tt/3mdH8xd

ಜೀತವಾಗಿ ಅಧ್ಯಕ್ಷ ಸ್ಥಾನವನ್ನು ಪಡೆದಿರುವ ನಳಿನ್ ಮೋದಿಯಿಂದ ಸುಳ್ಳುಗಳನ್ನು ಕಲಿತು ಅದನ್ನೇ ಕಕ್ಕುತ್ತಿದ್ದಾರೆ: ಯೂತ್‌ ಕಾಂಗ್ರೆಸ್

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ ಕಾವು ಏರುತ್ತಿದ್ದಂತೆ ಕಾಂಗ್ರೆಸ್‌ ಮತ್ತು ಪಕ್ಷಗಳ ಕೆಸರೆರಚಾಟ ಜೋರಾಗ್ತಿದೆ. ನಿನ್ನೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ಬಾಣ ಹೂಡಿದ್ದರು. ಇದೀಗ ಕಟೀಲ್‌ಗೆ ಯೂತ್‌ ಕಾಂಗ್ರೆಸ್‌ ತಿರುಗೇಟು ನೀಡಿದೆ. ಈ ಕುರಿತು ಕರ್ನಾಟಕ ಪ್ರದೇಶ ಯೂತ್‌ ಕಾಂಗ್ರೆಸ್‌ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಟ್ವೀಟ್‌ ಮಾಡಲಾಗಿದ್ದು, ‘ಪ್ರಧಾನಿ ಮತ್ತು ಗೃಹಮಂತ್ರಿಯ ಗುಲಾಮಗಿರಿಗೆ ಒಳಗಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಜೀತವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಪಡೆದಿರುವುದರ ಜೊತೆ, ಪ್ರಧಾನಿಯಿಂದ ಹಸಿ ಬಿಸಿ ಸುಳ್ಳುಗಳು, ಗೃಹ ಮಂತ್ರಿಯಿಂದ ಅಹಂಕಾರವನ್ನು ಕಲಿತು ಬೆಳಗಾವಿಯಲ್ಲಿ ಅದನ್ನೆ ಕಕ್ಕುತ್ತಿದ್ದಾರೆ’ ಎಂದು ವ್ಯಂಗ್ಯ ಮಾಡಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರದ ಜೊತೆ ರಾಜ್ಯದ ಸಮಸ್ಯೆಗಳ ಕುರಿತು ಧ್ವನಿಯೆತ್ತದ ಕರ್ನಾಟಕದ ಸಂಸದರ ವಿರುದ್ಧ ಕಿಡಿಕಾರಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸಂಸದರು ಕೇಂದ್ರ ಸರಕಾರದ ಗುಲಾಮರು ಎಂದು ಹೇಳಿದ್ದರು. ಇದಕ್ಕೆ ಮಂಗಳವಾರ ಬೆಳಗಾವಿಯಲ್ಲಿ ತಿರುಗೇಟು ನೀಡಿದ್ದ ನಳಿನ್ ಕುಮಾರ್ ಕಟೀಲ್, ‘ಸಿದ್ದರಾಮಯ್ಯ ಅವರು ಯಾರ ಗುಲಾಮರು ಎಂದು ದೇಶಕ್ಕೆ ಗೊತ್ತಿದೆ. ಅವರು ಯಾರು ಕಾಲು ಹಿಡಿದು ಸಿಎಂ ಆಗಿದ್ದಾರೆ ಅನ್ನೋದು ಗೊತ್ತಿದೆ. ಅವರಿಗೆ 65 ವರ್ಷ. ಅವರು ಹಿರಿಯರು. ರಾಹುಲ್ ಗಾಂಧಿ ಕಿರಿಯರು. ಅವರ ಕಾಲು ಹಿಡಿದು ಸಿಎಂ ಆಗಿದ್ದಾರೆ ಎಂದು ಹೇಳಿದ್ದರು.


from India & World News in Kannada | VK Polls https://ift.tt/3cC6YYt

ಇಲಾಖಾ ಅಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ ಕೊಳೆಯುತ್ತಿದೆ ಸರಕಾರದ ಕೋಟ್ಯಂತರ ಹಣ: ಸಿಎಜಿ ವರದಿ

ಶಿವಾನಂದ ಹಿರೇಮಠ ಬೆಂಗಳೂರು ಬೆಂಗಳೂರು: ವಿವಿಧ ಇಲಾಖಾ ಅಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ ಸರಕಾರದ ಕೋಟ್ಯಂತರ ರೂ. ಠೇವಣಿ ರೂಪದಲ್ಲಿ ಕೊಳೆಯುತ್ತಿರುವುದನ್ನು ಭಾರತೀಯ ನಿಯಂತ್ರಕರು ಹಾಗೂ ಮಹಾಲೇಖಪಾಲರ ವರದಿ ಬಹಿರಂಗಪಡಿಸಿದೆ. ಮೂರು ವರ್ಷಗಳಿಂದ ಅಧಿಕಾರಿಗಳು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಸುಮಾರು 7100 ಕೋಟಿ ರೂ.ಗಳಷ್ಟು ಹಣವನ್ನು ಠೇವಣಿ ರೂಪದಲ್ಲಿ ಇರಿಸಿಕೊಂಡಿದ್ದು, ಭ್ರಷ್ಟಾಚಾರದ ಶಂಕೆ ವ್ಯಕ್ತವಾಗುತ್ತಿದೆ ಎಂದು ವರದಿಯಲ್ಲಿ ಶಂಕಿಸಲಾಗಿದೆ. ಸಾರ್ವಜನಿಕ ಹಣದ ಮೇಲೆ ನಿಖರತೆ, ಪಾರದರ್ಶಕತೆ ಮತ್ತು ಸಂಪೂರ್ಣತೆ ಕಾಯ್ದುಕೊಳ್ಳಲು ಸರಕಾರ ವಿಫಲವಾಗಿದೆ. ಸಾಲದ ಸುಳಿಯಲ್ಲಿರುವ ಕೋಟ್ಯಂತರ ರೂ. ಹಣವನ್ನು ಅಧಿಕಾರಿಗಳ ಖಾತೆಗಳಲ್ಲಿ ಕೊಳೆಯಲು ಬಿಟ್ಟಿರುವುದು ಆಶ್ಚರ್ಯ ಹುಟ್ಟಿಸಿದೆ. ಹಲವು ಯೋಜನೆಗಳಿಗೆ ಅನುದಾನ ಕೊರತೆ ಎದುರಿಸುತ್ತಿದ್ದರೂ ಇರುವ ಹಣವನ್ನು ಸದ್ಬಳಕೆ ಮಾಡಿಕೊಳ್ಳಲು ವಿಫಲವಾಗಿದೆ. ವಿವಿಧ ಅಧಿಕಾರಿಗಳ 71 ವೈಯಕ್ತಿಕ ಖಾತೆಗಳಲ್ಲಿ 4421.56 ಕೋಟಿ ರೂ. ಮತ್ತು ಮೂರು ವರ್ಷಗಳಿಂದ ಬಳಕೆಯಾಗದೇ 490 ಖಾತೆಯಲ್ಲಿ ಊಳಿದಿರುವ 2741.52 ಕೋಟಿ ರೂ. ಹಣವನ್ನು ಮಹಾಲೇಖಪಾಲರ ವರದಿ ಬಹಿರಂಗಪಡಿಸಿದೆ. ಇತ್ತೀಚೆಗೆ ಸದನದಲ್ಲೂಈ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು. ಅಲ್ಲದೆ, 10,000 ಕೋಟಿ ರೂ.ಗಳಿಗೂ ಹೆಚ್ಚು ಹಣ ಇಲಾಖೆ ಹೊರತುಪಡಿಸಿ ಹೊರಗಿನ ಖಾತೆಗಳಲ್ಲಿದೆ ಎಂದು ಶಾಸಕ ಎಚ್‌.ಕೆ. ಪಾಟೀಲ ಆರೋಪಿಸಿದ್ದರು. ಅತಿವೃಷ್ಟಿ, ಅನವೃಷ್ಟಿ, ತುರ್ತು ಸಂದರ್ಭದಲ್ಲಿ ಮೂಲ ಸೌಕರ್ಯಗಳಿಗೆ ಅನುದಾನ ವಿನಿಯೋಗಿಸಲು ಅಧಿಕಾರಿಗಳು ತಮ್ಮ ವೈಯಕ್ತಿಕ ಖಾತೆಗಳಲ್ಲಿ ಹಣ ಮೀಸಲಿಟ್ಟಿರುತ್ತಾರೆ. ಸರಕಾರದ ಅನುಮತಿಯೂ ಇರುತ್ತದೆ. ಆಯಾ ಆರ್ಥಿಕ ವರ್ಷದಲ್ಲಿ ಉದ್ದೇಶಿತ ಯೋಜನೆಗಳಿಗೆ ಈ ಅನುದಾನವನ್ನು ಬಳಸಿ, ಉಳಿದ ಅನುದಾನವನ್ನು ಇಲಾಖಾ ಖಾತೆಗೆ ಜಮೆ ಮಾಡುವ ಜವಾಬ್ದಾರಿಯನ್ನು ಆಯಾ ಹೊಂದಿರುತ್ತಾರೆ. ಜವಾಬ್ದಾರಿ ಹೊತ್ತ ಅಧಿಕಾರಿಗಳೇ ತಮ್ಮ ಜವಾಬ್ದಾರಿ ಮರೆತಿರುವುದರಿಂದ ಭ್ರಷ್ಟಾಚಾರದ ಅನುಮಾನ ಹೊಗೆಯಾಡುತ್ತಿದೆ.


from India & World News in Kannada | VK Polls https://ift.tt/3cE1s7X

ಬಾಡಿಗೆ ದೊರೆಯದ ಕ್ಯಾಬ್‌ ಚಾಲಕ ಏರ್‌ಪೋರ್ಟ್‌ನಲ್ಲಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ!

: ಬಾಡಿಗೆ ದೊರೆಯದೆ ಖಿನ್ನತೆಗೊಳಗಾಗಿದ್ದ ಟ್ಯಾಕ್ಸಿ ಚಾಲಕನೊಬ್ಬ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಚನ್ನಪಟ್ಟಣ ಮೂಲದ ಪ್ರತಾಪ್‌ಕುಮಾರ್‌ (32) ಆತ್ಮಹತ್ಯೆಗೆ ಯತ್ನಿಸಿದ ಟ್ಯಾಕ್ಸಿ ಚಾಲಕ. ಕೋವಿಡ್‌ನಿಂದಾಗಿ ಬಾಡಿಗೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಪ್ರತಾಪ್‌ ಮಂಗಳವಾರ ಸಂಜೆ ವಿಮಾನ ನಿಲ್ದಾಣದ ಆಗಮನ ದ್ವಾರದ ಸಮೀಪ ಪೆಟ್ರೋಲ್‌ ಸುರಿದುಕೊಂಡು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಕಾರು ಬೆಂಕಿ ಹೊತ್ತುಕೊಂಡ ಕೂಡಲೇ ಸ್ಥಳದಲ್ಲಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಿ ಸಂತ್ರಸ್ತನನ್ನು ರಕ್ಷಿಸಿದ್ದಾರೆ. ಬಳಿಕ ಬಳಿಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆಗೆ ಒಳಪಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಕೊಳ್ಳಲಾಗಿದೆ. ಆತ್ಮಹತ್ಯೆಗೆ ಕಾರಣವೇನು?ಲಾಕ್‌ಡೌನ್‌ ಬಳಿಕ ಬಾಡಿಗೆ ದರ ಕಡಿಮೆಯಿದ್ದು, ಟ್ಯಾಕ್ಸಿ ಹಾಗೂ ಕ್ಯಾಬ್‌ಗಳಿಗೆ ಪ್ರಸ್ತುತ ಒಂದು ಕಿ.ಮೀ.ಗೆ 24 ರೂ. ದರ ನಿಗದಿ ಮಾಡಬೇಕು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿತ್ತು. ಫೆ.1ರಂದು ಕ್ಯಾಬ್‌, ಟ್ಯಾಕ್ಸಿ, ಓಲಾ, ಉಬರ್‌ಗಳಿಗೂ ಅನ್ವಯವಾಗುವಂತೆ 1 ಕಿ.ಮೀ.ಗೆ 24 ರೂ.ದರ ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ನೀಡಿತ್ತು ಎಂದು ಟ್ಯಾಕ್ಸಿ ಚಾಲಕ ರಮೇಶ್‌ಗೌಡ ತಿಳಿಸಿದರು. ಸರಕಾರ ನಿಗದಿ ಮಾಡಿದ ದರವನ್ನು ಕೆಎಸ್‌ಟಿಡಿಸಿ, ಮೆರು ಮತ್ತು ಮೇಘ ಕಂಪನಿಯ ಕ್ಯಾಬ್‌ ಚಾಲಕರು ಅಳವಡಿಸಿಕೊಂಡಿದ್ದರು. ಜತೆಗೆ ಮೀಟರ್‌ ಹಾಕುವ ಮೂಲಕ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿತ್ತು. ಆದರೆ, ಓಲಾ ಮತ್ತು ಉಬರ್‌ನ ವಾಹನಗಳು ವಿಮಾನ ನಿಲ್ದಾಣದಿಂದ ನಗರಕ್ಕೆ ಒಂದು ಕಿ.ಮೀ.ಗೆ ಕೇವಲ 9 ರೂ. ನಂತೆ ಓಡಿಸುತ್ತಿದ್ದವು. ವಾಪಸ್‌ ನಗರದಿಂದ ವಿಮಾನ ನಿಲ್ದಾಣಕ್ಕೆ ಬರುವಾಗ ಪ್ರತಿ ಕಿ.ಮೀ.ಗೆ 35ರೂ. ನಿಗದಿ ಮಾಡಿ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದರು. ಇದರಿಂದ 18 ಗಂಟೆ ಕಳೆದರೂ ಟ್ಯಾಕ್ಸಿ ಮತ್ತು ಕ್ಯಾಬ್‌ ಚಾಲಕರಿಗೆ ಒಂದು ಬಾಡಿಗೆಯೂ ದೊರೆಯುತ್ತಿರಲಿಲ್ಲ. ಓಲಾ ಮತ್ತು ಉಬರ್‌ನಲ್ಲಿ ದರ ಕಡಿಮೆಯಿದೆ ಎಂದು ಪ್ರಯಾಣಿಕರೆಲ್ಲ ಅತ್ತ ಹೋಗುತ್ತಿದ್ದರು. ಹೀಗಾಗಿ, ಕ್ಯಾಬ್‌ ಮತ್ತು ಟ್ಯಾಕ್ಸಿ ಚಾಲಕರು ಬೇಸರಗೊಂಡು, ಸರಕಾರ ನಿಗದಿ ಮಾಡಿರುವ ದರ ಅಳವಡಿಸಿಕೊಳ್ಳುವಂತೆ ಓಲಾ ಮತ್ತು ಉಬರ್‌ ಸಂಸ್ಥೆಗಳಿಗೆ ಒತ್ತಾಯಿಸಿದ್ದರೂ ಪ್ರಯೋಜನವಾಗಲಿಲ್ಲ. ಇದರಿಂದ ಕ್ಯಾಬ್‌ ಮತ್ತು ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದರು ಎಂದು ಆರೋಪಿಸಿದರು. ವಿಮಾನ ನಿಲ್ದಾಣದಲ್ಲಿ ಕ್ಯಾಬ್‌ ಮತ್ತು ಟ್ಯಾಕ್ಸಿಗಳಿಗೆ ಪಾರ್ಕಿಂಗ್‌ ಶುಲ್ಕ ಕಟ್ಟಬೇಕು. ದಿನಕ್ಕೆ ಒಂದೂ ಬಾಡಿಗೆ ಸಿಗದಿದ್ದಾಗ ಹೇಗೆ ಪಾರ್ಕಿಂಗ್‌ ಶುಲ್ಕ ಭರಿಸುವುದು ಹಾಗೂ ಸಂಸಾರ ನಿರ್ವಹಣೆ ಹೇಗೆ ಸಾಧ್ಯ? ಹೀಗಾಗಿ, ಹತಾಶೆಗೊಳಗಾದ ಪ್ರತಾಪ್‌ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಕ್ಕೆ ಸಂಜಯ್‌ ಜಯಚಂದ್ರ ಮತ್ತು ರಾಘವೇಂದ್ರ ಅವರೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.


from India & World News in Kannada | VK Polls https://ift.tt/39sgv2z

ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ: ಯುವತಿ ಹೇಳಿಕೆ ಪಡೆಯಲು ನ್ಯಾಯಾಲಯ ಅನುಮತಿ!

ಬೆಂಗಳೂರು: ಮಾಜಿ ಸಚಿವ ಸಿ.ಡಿ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ. ಮಂಗಳವಾರ 24 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಈ ಕುರಿತಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ಯುವತಿಯ ಹೇಳಿಕೆಯನ್ನು ಪಡೆದುಕೊಳ್ಳಲು ಒಪ್ಪಿಗೆ ಸೂಚಿಸಿದೆ. ಯುವತಿಯ ಪರವಾಗಿ ವಕೀಲ ಜಗದೀಶ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಸಿಆರ್‌ಪಿಸಿ 164 ಪ್ರಕಾರ ಹೇಳಿಕೆ ಪಡೆಯಲು ಅನುಮತಿ ನೀಡಿದೆ. ಮೊದಲು ಯುವತಿ ಹೇಳಿಕೆ ಪಡೆಯುತ್ತೇವೆ. ಬಳಿಕ ತನಿಖಾಧಿಕಾರಿಗಳು ಹೇಳಿಕೆ ಪಡೆಯಲಿ ಎಂದು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ. ನ್ಯಾಯಾಲಯದ ಅನುಮತಿಯ ಹಿನ್ನೆಲೆಯಲ್ಲಿ ಸಿ.ಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಎಷ್ಟು ಹೊತ್ತಿಗೆ ಹಾಜರಾಗುತ್ತಾರೆ ಎಂಬುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಯುವತಿ ಮಂಗಳವಾರವೇ ನ್ಯಾಯಾಧೀಶರ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲು ಮಾಡುತ್ತಾರಾ ಎಂಬುವುದು ಕುತೂಹಲ ಕೆರಳಿಸಿದೆ. ಯುವತಿ ಎಸ್‌ಐಟಿ ತಂಡದ ಮೇಲೆ ನಂಬಿಕೆ ಇಲ್ಲ ಈ ಕಾರಣಕ್ಕಾಗಿ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡುತ್ತೇನೆ ಎಂದು ವಿಡಿಯೋ ಮೂಲಕ ಹಾಗೂ ನ್ಯಾಯಾಧೀಶರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಯುವತಿ ಯಾವಾಗ ಹಾಜರಾಗುತ್ತಾರೆ ಎಷ್ಟು ಹೊತ್ತಿಗೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲಿದ್ದಾರೆ ಎಂಬುವುದು ಇನ್ನಷ್ಟೇ ಅಧಿಕೃತಗೊಳ್ಳಬೇಕಿದೆ. ಕೋರ್ಟ್‌ನಲ್ಲಿ ಯುವತಿ ಹೇಳಿಕೆ ದಾಖಲು ಮಾಡಲು ಪೊಲೀಸರಿಂದಲೂ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎಂದು ತಿಳಿದುಬಂದಿದೆ. ಇನ್ನು ಯುವತಿ ಯಾವಾಗ ಹಾಜರಾಗುತ್ತಾರೆ ಎಂದು ನ್ಯಾಯಾಲಯ ಯುವತಿಯ ಪರ ವಕೀಲರಿಗೆ ಕೇಳಿದೆ. ಈ ನಿಟ್ಟಿನಲ್ಲಿ ಸಮಯ ಹಾಗೂ ದಿನಾಂಕವನ್ನು ಲಿಖಿತ ರೂಪದಲ್ಲಿ ವಕೀಲರು ನೀಡಿದ್ದಾರೆ ಎಂದು ತಿಳಿದುಬಂದಿದೆ.


from India & World News in Kannada | VK Polls https://ift.tt/3fpqRUw

ಮ್ಯಾನ್ಮಾರ್ ನಾಗರಿಕರಿಗೆ ಆಶ್ರಯ ನೀಡದಿರುವ ಆದೇಶ ವಾಪಸ್ ಪಡೆದ ಮಣಿಪುರ ಸರ್ಕಾರ!

ಇಂಫಾಲ್: ಗಲಭೆಪೀಡಿತ ಮ್ಯಾನ್ಮಾರ್‌ನಿಂದ ಬರುವ ನಿರಾಶ್ರಿತರಿಗೆ ಆಶ್ರಯ ನೀಡದಿರುವಂತೆ ಹೊರಡಿಸಲಾಗಿದ್ದ ಆದೇಶವನ್ನು, ಹಿಂಪಡೆದಿದೆ. ಮ್ಯಾನ್ಮಾರ್‌ದಿಂದ ತಲೆಮರೆಸಿಕೊಂಡು ಮಣಿಪುರಕ್ಕೆ ಬರುವ ಅಲ್ಲಿನ ನಾಗರಿಕರಿಗೆ ಆಶ್ರಯ ನೀಡದಂತೆ ಮಣಿಪುರ ಸರ್ಕಾರ ಈ ಮೊದಲು ಆದೇಶ ಹೊರಡಿಸಿತ್ತು. ಆದರೆ ಈ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆದೇಶವನ್ನು ಹಿಂಪಡೆಯಲಾಗಿದೆ. ಸೇನಾಡಳಿತದ ಹಿಂಸಾಚಾರದಿಂದ ಬೇಸತ್ತು ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿನ ನಾಗರಿಕರು ಗಡಿ ದಾಟಿ ಮಣಿಪುರಕ್ಕೆ ಬರುತ್ತಿದ್ದಾರೆ. ಆದರೆ ಸರ್ಕಾರ ಇವರಿಗೆ ಆಶ್ರಯ ನೀಡದಂತೆ ಆದೇಶ ಮಾಡಿತ್ತು. ಮ್ಯಾನ್ಮಾರ್ ನಾಗರಿಕರಿಗೆ ಯಾರೂ ಆಶ್ರಯ, ಆಹಾರ ನೀಡಬಾರದು ಎಂದು ಮಣಿಪುರ ಸರ್ಕಾರ ಹೇಳಿತ್ತು. ಅಲ್ಲದೇ ಗಡಿಯಿಂದಲೇ ಅವರನ್ನು ಮರಳಿ ಕಳುಹಿಸುವಂತೆ ಸ್ಪಷ್ಟ ಸಂದೇಶ ನೀಡಿತ್ತು. ಆದರೆ ಈ ಆದೇಶಕ್ಕೆ ವಿರೋಧ ವ್ಯಕ್ತವಾದ ಬಳಿಕ ಮ್ಯಾನ್ಮಾರ್ ನಾಗರಿಕರನ್ನು ಮಣಿಪುರದೊಳಕ್ಕೆ ಬಿಟ್ಟುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲದೇ ನಿರಾಶ್ರಿತರಾಗಿ ಬರುವ ಮ್ಯಾನ್ಮಾರ್ ನಾಗರಿಕರಿಗೆ ಮಾನವೀಯ ನೆರವು ಒದಗಿಸುವಂತೆ ಮಣಿಪುರ ಗೃಹ ಸಚಿವಾಲಯ ಹೊಸ ಆದೇಶ ಹೊರಡಿಸಿದೆ. ಪ್ರಮುಖವಾಗಿ ಗಡಿ ಭಾಗಗಳಾದ ಚಾಂಡೆಲ್, ತೆಂಗ್ನುಪಾಲ್, ಕಾಮಜೊಂಗ್, ಉಕ್ರುಲ್, ಮತ್ತು ಚುರಾಚಂದಪುರಗಳಲ್ಲಿ ಮ್ಯಾನ್ಮಾರ್ ನಾಗರಿಕರಿಗೆ ಆಶ್ರಯ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಮ್ಯಾನ್ಮಾರ್‌ನ ಜುಂಟಾ ಸೇನಾಡಳಿತ ದೇಶದಲ್ಲಿ ಭಾರೀ ಹಿಂಸಾಚಾರ ನಡೆಸುತ್ತಿದ್ದು, ಪ್ರಜಾಪ್ರಭುತ್ವ ಪರ ಹೋರಾಟಗಾರರನ್ನು ಸಾಮೂಹಿಕವಾಗಿ ಕೊಲೆ ಮಾಡುತ್ತಿದೆ. ಮಕ್ಕಳು, ಮಹಿಳೆಯರು ಎನ್ನದೇ ಎಲ್ಲರ ಮೇಲೂ ಗುಂಡಿನ ಮಳೆ ಸುರಿಸುತ್ತಿರುವ ಮ್ಯಾನ್ಮಾರ್ ಸೇನೆ ವಿರುದ್ಧ ಜಾಗತಿಕವಾಗಿ ಆಕ್ರೋಶ ಭುಗಿಲೆದ್ದಿದೆ.


from India & World News in Kannada | VK Polls https://ift.tt/3cwToFM

ಈ ಬಾರಿ ಆರ್‌ಸಿಬಿಗೆ ಚೊಚ್ಚಲ ಪ್ರಶಸ್ತಿ ಗೆದ್ದು ಕೊಡುತ್ತೇವೆಂದ ಕ್ರಿಸ್ಟಿಯನ್‌!

ಬೆಂಗಳೂರು: ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್ ಎಂದೇ ಕರೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್ ಟೂರ್ನಿಯ‌ ಇತಿಹಾಸದಲ್ಲಿಯೇ ಇದುವರೆಗೂ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ ಎನ್ನುವುದು ಆಟಗಾರರ ಹಾಗೂ ಅಭಿಮಾನಿಗಳ ಪಾಲಿಗೆ ಬೇಸರದ ಸಂಗತಿ. ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಕ್ರಿಸ್‌ ಗೇಲ್‌, ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್ಸ್ ಸೇರಿದಂತೆ ಹಲವು ಸ್ಟಾರ್‌ ಆಟಗಾರರು ಆಡಿದ್ದರೂ ಎರಡು ಬಾರಿ ರನ್ನರ್‌ ಅಪ್‌ ತಲುಪಿದ್ದು ಬಿಟ್ಟರೆ ಒಮ್ಮೆಯೂ ಐಪಿಎಲ್‌ ಟ್ರೋಫಿ ಎತ್ತಿ ಹಿಡಿಯಲು ಇದುವರೆಗೂ ಸಾಧ್ಯವಾಗಲೇ ಇಲ್ಲ. ಆದರೂ ಮೇಲಿನ ಅಭಿಮಾನಿಗಳ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ. ಖಂಡಿತಾ ಒಂದಲ್ಲ ಒಂದು ದಿನ ಆರ್‌ಸಿಬಿ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ ಎಂಬ ನಂಬಿಕೆಯೊಂದಿಗೆ ಅಭಮಾನಿಗಳು ಕಾಯುತ್ತಿದ್ದಾರೆ. ಅದರಂತೆ ಹಲವು ವರ್ಷಗಳಿಂದ ಐಪಿಎಲ್‌ ಟ್ರೋಫಿ ಗೆಲ್ಲುವ ಬೆಂಗಳೂರು ಫ್ರಾಂಚೈಸಿಯ ಕನಸು 2021ರ ಟೂರ್ನಿಯಲ್ಲಿ ಈಡೇರಲಿದೆಯೇ ಎಂಬ ಪ್ರಶ್ನೆ ಎಲ್ಲರ ತಲೆಯಲ್ಲಿದೆ. ಆದರೆ, ಈ ಬಾರಿ ಅತ್ಯುತ್ತಮ ಸಂಯೋಜನೆಯೊಂದಿಗೆ ಕಣಕ್ಕೆ ಇಳಿಯಲಿರುವ ಆರ್‌ಸಿಬಿ, ಚೊಚ್ಚಲ ಪ್ರಶಸ್ತಿ ಗೆಲ್ಲುವ ವಿಶ್ವಾಸವನ್ನು ಇಟ್ಟುಕೊಂಡಿದೆ. ಅದರಂತೆ,ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಂಟು ವರ್ಷಗಳ ಬಳಿಕ ಮರಳಿರುವ ಈ ಬಾರಿ ಆರ್‌ಸಿಬಿ ಚೊಚ್ಚಲ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕ್ರಿಸ್ಟಿಯನ್‌ ಅವರನ್ನು 4.8 ಕೋಟಿ ರೂ.ಗಳಿಗೆ ಆರ್‌ಸಿಬಿ ಕಳೆದ ಹರಾಜಿನಲ್ಲಿ ಖರೀದಿಸಿತ್ತು. 2020-21ರ ಆವೃತ್ತಿಯ ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಡ್ಯಾನ್‌ ಕ್ರಿಸ್ಟಿಯನ್‌ ಅದ್ಭುತ ಪ್ರದರ್ಶನ ತೋರಿದ್ದರು. ಅದರಂತೆ ಅವರು ಪ್ರತಿನಿಧಿಸಿದ್ದ ಸಿಡ್ನಿ ಸಿಕ್ಸರ್‌ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ವಿಶ್ವದಾದ್ಯಂತ ಫ್ರಾಂಚೈಸಿ ಲೀಗ್‌ಗಲ್ಲಿ ಆಡಿರುವ ಕ್ರಿಸ್ಟಿಯನ್‌ ಪ್ರತ್ಯೇಕ ತಂಡಗಳೊಂದಿಗೆ ಒಟ್ಟು 11 ಟಿ20 ಟ್ರೋಫಿಗಳನ್ನು ಗೆದ್ದಿದ್ದಾರೆ. ಈ ಬಾರಿ ಆರ್‌ಸಿಬಿ 2021 ಐಪಿಎಲ್‌ ಗೆಲ್ಲಲಿದೆ ಎಂಬ ಬಗ್ಗೆ 37ರ ಪ್ರಾಯದ ಆಟಗಾರ ಬಲವಾದ ವಿಶ್ವಾಸವನ್ನು ಇಟ್ಟಿದ್ದಾರೆ. "ಈ ವರ್ಷ ಆರ್‌ಸಿಬಿಗೆ ಚೊಚ್ಚಲ ಐಪಿಎಲ್‌ ಟ್ರೋಫಿ ತಂದುಕೊಡುತ್ತೇವೆ. ನಾಯಕ ವಿರಾಟ್‌ ಕೊಹ್ಲಿ, ಎಬಿಡಿ ಡಿವಿಲಿಯರ್ಸ್ ಅವರೊಂದಿಗೆ ತಂಡದ ಗೆಲುವಿಗಾಗಿ ನಾನು ಕೈ ಜೋಡಿಸುತ್ತೇನೆ. ಅಲ್ಲದೆ, ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಇದ್ದಾರೆ. ನಾವಿಬ್ಬರೂ ಆಸ್ಟ್ರೇಲಿಯಾದಲ್ಲಿ ಅತ್ಯುತ್ತಮ ಕ್ರಿಕೆಟ್‌ ಆಡಿದ್ದೇವೆ," ಎಂದರು. "ವಿರಾಟ್‌, ಎಬಿಡಿ, ಮ್ಯಾಕ್ಸ್‌ವೆಲ್‌ ಸೇರಿದಂತೆ ಹಲವು ಆಟಗಾರರೊಂದಿಗೆ ಡ್ರೆಸ್ಸಿಂಗ್ ಕೊಠಡಿ ಶೇರ್ ಮಾಡುವುದು ಅದ್ಭುತ ಅನುಭವವನ್ನು ನೀಡುತ್ತದೆ. ಇದಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ. ನಮ್ಮದು ಅತ್ಯಂತ ಬಲಿಷ್ಠ ತಂಡವಾಗಿದೆ. ಹಾಗಾಗಿ ಈ ಬಾರಿ ಆರ್‌ಸಿಬಿಗೆ ಪ್ರಶಸ್ತಿ ಗೆದ್ದು ಕೊಡಲಿದ್ದೇವೆ," ಎಂದು ಇನ್‌ಸ್ಟಾಗ್ರಾಮ್‌ ಲೈವ್‌ ಸೆಷನ್‌ನಲ್ಲಿ ಆಲ್‌ರೌಂಡರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏಪ್ರಿಲ್‌ 9 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್‌ ಚಾಲೆಂಜರ್ಸ್ ಬೆಂಗಳೂರು 2021ರ ಐಪಿಎಲ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3sB6pUu

ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ: ಮಹಿಳಾ ಸಂಘಟನೆಗಳಿಂದ ಬಸವರಾಜ ಬೊಮ್ಮಾಯಿಗೆ ಬಹಿರಂಗ ಪತ್ರ

ಬೆಂಗಳೂರು: ಮಾಜಿ ಸಚಿವ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆಗಳು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಬಹಿರಂಗ ಪತ್ರವನ್ನು ಬರೆದಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಾಸಕರೇ ಮಹಿಳೆಯರು ಮತ್ತು ಯುವತಿಯರನ್ನು ಕೀಳಾಗಿ ಬಿಂಬಿಸುತ್ತಿರುವುದು, ಹಗುರವಾಗಿ ನಡೆದುಕೊಳ್ಳುತ್ತಿರುವುದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದ್ದು ಕಳಂಕ ತರುವಂತಿದೆ ಎಂದು ಮಹಿಳಾ ಸಂಘಟನೆಗಳು ಆರೋಪಿಸಿದೆ. ಪತ್ರದಲ್ಲಿ ಏನೆಲ್ಲಾ ಉಲ್ಲೇಖಿಸಲಾಗಿದೆ ಎಂಬುವುದರ ಸಂಪೂರ್ಣ ವಿವರ ಇಲ್ಲಿದೆ. ಮಹಿಳಾ ಸಂಘಟನೆಗಳಿಂದ ಬಹಿರಂಗ ಪತ್ರ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಅಸಂಬದ್ಧ ಘಟನೆಗಳಿಂದ ನಾವು ಆಕ್ರೋಶಿತರಾಗಿದ್ದೇವೆ. ರಾಜ್ಯದ ವಿವಿಧ ಮಹಿಳಾ ಮತ್ತು ಸಾಮಾಜಿಕ ಸಂಘಟನೆಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ, ನಾವೆಲ್ಲರೂ ಸೇರಿ ಈ ಕೆಳಗಿನ ಅಂಶಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ ಮತ್ತು ದೇಶದ ವಿಧಾನ ಹಾಗೂ ಕಾನೂನಿನ ಅನುಸಾರ ಸರಕಾರ ನಡೆದುಕೊಂಡು ನ್ಯಾಯಯುತ ಮಾರ್ಗದಲ್ಲಿ ನಡೆದು ಸತ್ಯವನ್ನೇ ಹೊರಹಾಕಬೇಕಾಗಿ ಆಗ್ರಹಿಸುತ್ತೇವೆ. ಕರ್ನಾಟಕ ರಾಜ್ಯ ಸರಕಾರದ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯವರು ಲೈಂಗಿಕ ಹಗರಣದ ಸಿ.ಡಿ. ಯೊಂದು ಸುದ್ದಿಗೆ ಬಂದ ಕಾರಣದಿಂದ ಒತ್ತಡಕ್ಕೆ ಒಳಗಾಗಿ ರಾಜೀನಾಮೆ ಕೊಡಬೇಕಾಗಿ ಬಂತು. ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ, ಅಧಿಕಾರದ ದುರ್ಬಳಕೆ, ಬ್ಲಾಕ್‍ಮೇಲ್, ಹನಿಟ್ರಾಪ್ ಎಂಬ ಹಲವು ಆಯಾಮಗಳು ಚರ್ಚೆಗೆ ಬಂದವು. ಈ ಹಂತದಲ್ಲಿ ಮೊದಲು ದೂರು ಟ್ಟವರು ರಾಜಕಾರಣಿಗಳ ಮಾತಿನ ನೆವ ಮುಂದುಮಾಡಿ ದೂರು ವಾಪಸ್ ತೆಗೆದುಕೊಂಡ ಘಟನೆಯೂ ನಡೆಯಿತು. ಮಾಧ್ಯಮಗಳಿಗೆ ರಸಗವಳ ಸಿಕ್ಕಂತೆ ಬಿತ್ತರಿಸಿದ ಸುದ್ದಿಗೆ ಜಾರಕಿಹೊಳಿಯವರ ಜೊತೆ ‘ಅನರ್ಹ ಶಾಸಕರು’ಎಂಬ ಹಣೆಪಟ್ಟಿ ಹೊತ್ತ ಇನ್ನಾರು ಸಚಿವರು ತಮ್ಮ ಬಗ್ಗೆ ಸಿ.ಡಿ. ಗಳನ್ನು ಪ್ರದರ್ಶಿಸಬಾರದಂತೆ ಮಾಧ್ಯಮಗಳಿಗೆ ತಡೆ ನೀಡಬೇಕೆಂದು ನ್ಯಾಯಾಲಯದ ಮೊರೆ ಹೋದ ಮತ್ತು ನ್ಯಾಯಾಲಯವೊಂದು ಲೈಂಗಿಕ ದೌರ್ಜನ್ಯದ ಆರೋಪ,ಅಧಿಕಾರ ದುರ್ಬಳಕೆಯ ಆರೋಪದ ಸಿ.ಡಿ. ಪ್ರಕರಣದಲ್ಲಿ ಸುದ್ದಿ ಪ್ರಕಟಿಸದಂತೆ ಸಾರಾಸಗಟಾಗಿ ಅನೇಕ ಮಾಧ್ಯಮಗಳ ಮೇಲೆ ಮಧ್ಯಂತರ ಆದೇಶ ಕೊಟ್ಟ ಗಾಬರಿಯ ಸಂಗತಿಯೂ ನಡೆದು ಹೋಗಿದೆ. ದೇಶದ ಸಂವಿಧಾನ ದೇಶದ ಎಲ್ಲ ಜನರಿಗೆ ಸಮಾನ ಅವಕಾಶ ಸಮಾನ ಅಧಿಕಾರ ಮತ್ತು ಘನತೆಯ ಬದುಕುನ್ನು ಖಾತ್ರಿಪಡಿಸುತ್ತದೆ. ಇದನ್ನು ಯಥಾವತ್ತಾಗಿ ಜಾರಿಗೆ ತರುವ ಮತ್ತು ಮಹಿಳೆಯರ ಸುರಕ್ಷೆಯನ್ನು ಖಾತ್ರಿ ಪಡಿಸುವ ಜವಾಬ್ದಾರಿ ಯಾವುದೇ ಸರಕಾರದ್ದಾಗಿರುತ್ತದೆ. ಮತ್ತು ಸರಕಾರದ ಸಚಿವರು, ಶಾಸಕರು ಈ ವಿಷಯಗಳಲ್ಲಿ ಮಾದರಿಗಳಾಗಿ ನಿಲ್ಲಬೇಕು. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳು ಅದಕ್ಕೆ ವ್ಯತಿರಿಕ್ತವಾಗಿವೆ. ಹಲವಾರು ಸಮಾಜ ಸುಧಾರಕರು, ಬ್ರಿಟಿಷರ ವಿರುದ್ಧ ಜೀವದ ಹಂಗು ತೊರೆದು ಸೆಣಸಿದ ರಾಣಿಯರೂ ಸೇರಿದಂತೆ ಸ್ವಾತಂತ್ರ ಹೋರಾಟಗಾರರು ಸಾಮಾಜಿಕ ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟ,ಕೊಡುತ್ತಿರುವ ಹಲವಾರು ಮಹಿಳೆಯರ ಶ್ರೀಮಂತ ಇತಿಹಾಸವಿದೆ. ಆದರೆ ಅವೆಲ್ಲವನ್ನು ಗೌರವಿಸಬೇಕಾದ ಶಾಸಕರೇ ಮಹಿಳೆಯರು ಮತ್ತು ಯುವತಿಯರನ್ನು ಕೀಳಾಗಿ ಬಿಂಬಿಸುತ್ತಿರುವುದು, ಹಗುರವಾಗಿ ನಡೆದುಕೊಳ್ಳುತ್ತಿರುವುದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದ್ದು ಕಳಂಕ ತರುವಂತಿದೆ. ಇದೇ ಸಂದರ್ಭದಲ್ಲಿ ಸರಕಾರವು ವಿಶೇಷ ತನಿಖಾ ತಂಡವೊಂದನ್ನು ನೇಮಿಸಿದೆ. ದುರಂತವೆಂದರೆ ಈ ತನಿಖಾ ತಂಡ ಒಂದು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯವನ್ನು ಬಯಲಿಗೆಳೆಯುವ ಸಂಭವ ಕಡಿಮೆ ಎನಿಸುತ್ತಿದೆ. ಈ ಪ್ರಕರಣವನ್ನು ಕಾನೂನಿನ ಚೌಕಟ್ಟಿನಲ್ಲಿ ತನಿಖೆ ಮಾಡಿ ಅಮೂಲಾಗ್ರ ಶೋಧನೆಯನ್ನು ಜನರ ಮುಂದಿಡುವ ಹೊಣೆಗಾರಿಕೆ ಎಸ್.ಐ.ಟಿ.ಯದಾಗಬೇಕು. ಆದರೆ ಮೊದಲ ದಿನದಿಂದಲೇ ಅದು ಹಿಡಿದ ಜಾಡು ಸತ್ಯ ಶೋಧನೆಯ ಬದಲು ಸಂಚು ಬಯಲು ಮಾಡುವ ದಾರಿಯಾಗಿ ಕಾಣುತ್ತಿದೆ. ಮಾಜಿ ಸಚಿವರ ಕೋರಿಕೆಯನ್ನಾಧರಿಸಿ, ಲಿಖಿತವಾಗಿ ದೂರು ಕೊಡುವ ಮೊದಲೇ ಗೃಹ ಸಚಿವರು ಕ್ರಮಕ್ಕೆ ಮುಂದಾದರು. ಪೋಲೀಸರು ಎಫ್.ಐ.ಆರ್. ದಾಖಲಿಸಿಕೊಂಡರು ಕೂಡಾ. ನಂತರ ಸತ್ಯದ ಹುಡುಕಾಟದ ಬದಲು ಸುಳ್ಳನ್ನು ಸಾಬೀತು ಮಾಡುವುದು ಹೇಗೆ ಎಂಬ ಎಂದಿನ ಮಹಿಳಾ ವಿರೋಧಿತನಕ್ಕೆ ಶರಣಾಗಿರುವುದು ಎದ್ದು ಕಾಣುತ್ತಿದೆ. ಮತ್ತು ಸಿ.ಡಿ. ಮಾಡಿದ್ದು ಯಾರು, ಅದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಆಯಿತು ಹೇಗೆ ಎಂಬುದರ ಸುತ್ತವೇ ಗಿರಕಿ ಹೊಡೆಯುತ್ತಿದೆ. ಸಾಲದೆಂಬಂತೆ ಯುವತಿಯು ಎಸ್.ಐ.ಟಿ.ಯ ಮುಂದೆ ಬರುತ್ತಿಲ್ಲವೆನ್ನುವುದೇ ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂಬುದಕ್ಕೆ ಪುರಾವೆ ಎಂಬಿತ್ಯಾದಿ ಮಾತುಗಳೂ ಕೇಳಿ ಬಂದಿವೆ. ಈಗ ಯುವತಿ ತನಗೆ ಮತ್ತು ತನ್ನ ಪೋಷಕರಿಗೆ ಜೀವ ಬೆದರಿಕೆ ಇದೆ ಎಂದು ತಿಳಿಸಿ ಸ್ವಹಸ್ತಾಕ್ಷರದ ದೂರನ್ನು ವಕೀಲರ ಮೂಲಕ ಕಳಿಸಿದ್ದಾರೆ ಮತ್ತು ಅದರ ಕಾರಣದಿಂದ ಎಫ್.ಐ.ಆರ್.ದಾಖಲಾಗಿದೆ. ಆದರೆ ಆರೋಪಿಯ ಸ್ಥಾನದಲ್ಲಿರುವ ಪ್ರಭಾವಿ ವ್ಯಕ್ತಿಯ ಠೇಂಕಾರವೇನೂ ಕಡಿಮೆಯಾಗಿಲ್ಲ. ಯುವತಿಯು ತನ್ನನ್ನು ನಂಬಿಸಿ ವಂಚಿಸಲಾಗಿದೆ ಎಂದು ಹೇಳುತ್ತಿದ್ದು ಅದನ್ನಾಧರಿಸಿ ತನಿಖೆಗಳು ನಡೆಯಬೇಕೇ ಹೊರತೂ ಆರೋಪಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಅಲ್ಲ.ಯುವತಿಯ ಎರಡು ವಿಡಿಯೋಗಳು ಹರಿದಾಡುತ್ತಿವೆ. ಈ ಹರಿದಾಡುತ್ತಿರುವ ವಿಡಿಯೋದಲ್ಲಿ ತನಗೆ ಮತ್ತು ತನ್ನ ಪೋಷಕರಿಗೆ ರಕ್ಷಣೆ ದೊರೆಯುವುದಾದರೆ ತಾನು ಎಸ್.ಐ.ಟಿ ಎದುರು ಬರಲು ಸಿದ್ಧವೆಂದು ವಿಡಿಯೋದಲ್ಲಿರುವ ಯುವತಿ ಹೇಳುತ್ತಿದ್ದಾರೆ.ಎಸ್.ಐ.ಟಿ.ಯು ಕಾನೂನಿನನ ಅನ್ವಯ ನಡೆದುಕೊಳ್ಳಬೇಕೇ ಹೊರತೂ ಅಧಿಕಾರದಲ್ಲಿರುವವರ ಆಣತಿಯಂತೆ ಅಲ್ಲ. ಇಂಥಹ ಪ್ರಕರಣಗಳಲ್ಲಿ ಬಲಾಢ್ಯರ,ಅಧಿಕಾರಸ್ಥರನ್ನು ಎದುರು ಹಾಕಿಕೊಂಡವರಿಗೆ ಜೀವ ಬೆದರಿಕೆಗಳೂ ಇರುತ್ತವೆ ಎಂಬುದು ತಿಳಿಯದ ಸಂಗತಿಯಲ್ಲ. ಅವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಎಸ್.ಐ.ಟಿ ಯು ಕಾರ್ಯೋನ್ಮುಖವಾಗಬೇಕು. ಬಹುಷಃ ಇಂಥಹ ಯಾವುದೇ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಳ್ಳುವ ಅಧಿಕಾರಿಗಳು ಜಸ್ಟೀಸ್ ವರ್ಮಾ ಸಮಿತಿ ನೀಡಿದ ವರದಿಯನ್ನೊಮ್ಮೆ ಓದಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ. ಈ ಸಮಾಜದಲ್ಲಿ ಆಳವಾಗಿ ಬೇರೂರಿರುವ ಮಹಿಳಾ ವಿರೋಧೀ,ಪಿತೃಪ್ರಧಾನ, ಪುರುಷಾಧಿಕಾರದ ಮೌಲ್ಯಗಳನ್ನು ಮತ್ತೆ ಮತ್ತೆ ಎತ್ತಿ ತೋರಿಸುವ ಈ ರೀತಿಯ ನಡೆ, ನಿಲುವುಗಳು ಖಂಡನೀಯ. ಇದಿಷ್ಟೇ ಸಾಲದೆಂಬಂತೆ ಮತ್ತೊಬ್ಬ ಸಚಿವರು, ನ್ಯಾಯಾಲಯದ ಮಧ್ಯಂತರ ಆದೇಶದ ಫಲಾನುಭವಿಗಳೂ ಆಗಿರುವ ಸುಧಾಕರ್ ಅರವರ 224 ಶಾಸಕರು ತನಿಖೆ ಎದುರಿಸಲಿ ಎಂಬ ಮಾತುಗಳು ಅವರ ಹೊಣೆಗೇಡಿತನವನ್ನು, ಮತ್ತು ಜನಪ್ರತಿನಿಧಿಗಳ ಲಂಪಟತನವನ್ನು ಎದುರಿಗಿರಿಸಿದೆ. ಇದನ್ನು ನಾವು ಖಂಡಿಸುತ್ತೇವೆ. ಇಷ್ಟು ಹಗುರವಾಗಿ ಮಾತನಾಡುವ ಇವರನ್ನು ತಮ್ಮ ಪ್ರತಿನಿಧಿಗಳೆಂದು ಯಾರಾದರೂ ಹೇಗೆ ಮತ್ತು ಯಾಕೆ ಭಾವಿಸಬೇಕು? ಸರಕಾರದ ಸಚಿವರಾಗಿದ್ದು ಸಭಾಧ್ಯಕ್ಷರನ್ನೂ ಒಳಗೊಂಡು ತಮ್ಮನ್ನೂ ಸೇರಿದಂತೆ ಇಡೀ ಸದನದ ಸಹೋದ್ಯೋಗಿಗಳೆಲ್ಲರೂ ಲಂಪಟರು,ವಿವಾಹೇತರ ಸಂಬಂಧ ಇಟ್ಟುಕೊಂಡವರು ಎಂದು ಬಹಿರಂಗವಾಗಿಯೇ ಮಾತುಗಳನ್ನಾಡಿದವರು ಆ ಸ್ಥಾನದಲ್ಲಿ ಮುಂದುವರೆಯಲು ಅರ್ಹರಲ್ಲವೆಂದು ನಾವು ಭಾವಿಸುತ್ತೇವೆ. ಮತ್ತು ಆ ಮಾತುಗಳು ಲೈಂಗಿಕ ದೌರ್ಜನ್ಯ, ಅಧಿಕಾರ ದುರ್ಬಳಕೆ ಮತ್ತು ಆಮಿಷದ ಮೂಲಕ ವಂಚನೆಯಂಥಹ ಗಂಭೀರ ವಿಷಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆದು ದಾರಿ ತಪ್ಪಿಸುವುದೇ ಆಗಿದೆ. ಆರೋಪಿಯೊಬ್ಬರನ್ನು ರಕ್ಷಣೆ ಮಾಡಲು ರಾಜ್ಯದ ಜನರೆದುರು ಇಡೀ ಶಾಸನ ಸಭೆಯೇ ತಲೆ ತಗ್ಗಿಸುವಂಥಹ ಮಾತನಾಡಿಯೂ ಬಚಾಯಿಸಿಕೊಳ್ಳುವುದು ರಾಜ್ಯದ ಜನತೆಗೆ ಮಾಡುತ್ತಿರುವ ಅವಮಾನವಾಗಿದೆ. ಯುವತಿಯು ಬೆದರಿದ್ದರೆ ಆಕೆಗೆ ಸೂಕ್ತ ರಕ್ಷಣೆ ನೀಡಿ ಕಾನೂನು ಪ್ರಕಾರ ವಿಚಾರಣಾ ಸಮಿತಿಗೆ ಹಾಜರಾಗಿ ತನ್ನ ಅಹವಾಲು ಹೇಳಿಕೊಳ್ಳಲುಅವಕಾಶವನ್ನು ಕಲ್ಪಿಸುವುದು ಯಾವುದೆ ಜವಾಬ್ದಾರಿಯುತ ಸರಕಾರದ ಹೊಣೆಯಾಗಿರುತ್ತದೆ. ರಾಜಕೀಯ ಪಕ್ಷಗಳು ತಮ್ಮ ರಾಜಕಾರಣಕ್ಕಾಗಿ ಕೆಸರೆರೆಚಿಕೊಳ್ಳುವುದನ್ನು ಬಿಟ್ಟು ಮಹಿಳೆಯರ ಘನತೆ ಮತ್ತು ಗೌರವಕ್ಕೆ ಕುಂದುಂಟಾಗದಂತೆ ಎಚ್ಚರ ವಹಿಸಬೇಕು. ನಿಷ್ಪಕ್ಷಪಾತ ತನಿಖೆ ಮತ್ತು ಹಣ, ಅಂತಸ್ಥು, ಅಧಿಕಾರ, ಪ್ರಭಾವಗಳಿಗೆ ಸೊಪ್ಪು ಹಾಕದೇ ಸತ್ಯವನ್ನು ಬಯಲಿಗೆಳೆಯಲು, ಸಾಧ್ಯವಾಗಬೇಕು. ಈ ಸಂದರ್ಭದಲ್ಲಿಯೂ ಹೊರಬರುತ್ತಿರುವ ಆರೋಪಿಯ ಹೇಳಿಕೆಗಳು ಯುವತಿಗೆ ಅಪಾಯವನ್ನು ತಂದೊಡ್ಡಬಹುದಾದ ಸೂಚನೆಯನ್ನು ನೀಡುತ್ತಿರುವುದು ನಮಗೆ ಇಂಥಹ ಅಭಿಪ್ರಾಯವನ್ನು ಮೂಡಿಸಿವೆ. ನ್ಯಾಯಾಲಯ ಇಂಥಹ ಪ್ರಕರಣಗಳನ್ನೆದುರಿಸುವ ಸಂಭವವನ್ನು ನಿವಾರಿಸಿಕೊಳ್ಳಲು ತಡೆಯಾಜ್ಞೆ ಕೇಳಿದವರಿಗೆ ಕೊಟ್ಟಿರುವುದು ಕೂಡ ಸಮಂಜಸವಲ್ಲವೆಂದು ನಾವು ಭಾವಿಸುತ್ತೇವೆ. ಕರ್ನಾಟಕ ಸರಕಾರ, ಗೃಹ ಸಚಿವರು ತಕ್ಷಣವೇ ಈ ಬಗ್ಗೆ ಗಮನ ಹರಿಸಿ ನಿಷ್ಪಕ್ಷಪಾತ ನ್ಯಾಯದ ಪರವಾಗಿ ನಿಲ್ಲಬೇಕು. ನ್ಯಾಯಾಲಯದಲ್ಲಿಕೊಟ್ಟಿರುವ ಮಧ್ಯಂತರ ಆದೇಶವನ್ನು ರದ್ದು ಮಾಡಲು ಅಗತ್ಯವಾದ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸುತ್ತೇವೆ. ಇಂಥಹ ಪ್ರಕರಣಗಳಲ್ಲಿ ಹೀಗೆ ಸಿಕ್ಕಿಬಿಡುವ ನ್ಯಾಯಾಲಯದ ಪರಿಹಾರಗಳು ಮುಂದಿನ ದಿನಗಳಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ ಎಂಬುದನ್ನು ಹಗುರವಾಗಿ ಪರಿಗಣಿಸಬಾರದು ಎಂದು ಹೇಳಬಯಸುತ್ತೇವೆ. ಜನರ ಸಮಸ್ಯೆಗಳ ಬಗ್ಗೆ ಮತ್ತು ಕೊವಿಡ್ ಸಂಕಷ್ಟಗಳಿಂದ ಬಾದಿತರಾದ ಜನರ ಕಷ್ಟಗಳಿಗೆ ಬಜೆಟ್ ಉತ್ತರ ನೀಡಬಹುದೇ ಎಂಬ ಚರ್ಚೆಗಳು ನಡೆಯಬೇಕಿದ್ದ ಅಧಿವೇಶನದಲ್ಲಿ ಚರ್ಚೆಯಿಲ್ಲದೇ ಹಣಕಾಸು ವಿಧೇಯಕ ಅಂಗೀಕಾರವಾಯಿತು. ಜನರ ಹಣದಿಂದ ನಡೆಯುವ ಅಧಿವೇಶನದಲ್ಲಿ ಇಲ್ಲಸಲ್ಲದ ವಿಷಯಗಳನ್ನೇ ಚರ್ಚೆ ಮಾಡುವ ಪೃವೃತ್ತಿ ಹೆಚ್ಚಿದ್ದು ಪ್ರಜಾಪ್ರಭುತ್ವದ ಆಶಯವನ್ನು ಮತ್ತು ಜನರ ನಿರೀಕ್ಷೆಯನ್ನು ಬುಡಮೇಲು ಮಾಡುತ್ತಿದೆ. ಇದು ನಿಲ್ಲಬೇಕು. ಜನರಿಂದ ಆಯ್ಕೆಯಾದ ಸೋ ಕಾಲ್ಡ್ ಪ್ರತಿನಿಧಿಗಳು ತಮ್ಮ ಹೊಣೆಯರಿತು ನಡೆಯಬೇಕು. ವಿಧಾನಸಭೆಯ ಅಧಿವೇಶನ ಮೊಟಕುಗೊಂಡ ರೀತಿಯಿಂದ ಜನಪ್ರತಿನಿಧಿಗಳಿಗೆ ಜನರ ದೈನಂದಿನ ಸಂಕಷ್ಟಗಳ ಕುರಿತು ಚರ್ಚೆ ನಡೆಸುವ ಆಸಕ್ತಿ ಇಲ್ಲದಿರುವುದನ್ನು ತೋರಿಸುತ್ತದೆ. ಹಾಗೆಯೇ ಸರಕಾರ ಕೂಡಾ ಬೀಸೋ ದೊಣ್ಣೇ ತಪ್ಪಿದರೆ ಸಾವಿರ ವರ್ಷ ಅಯಸ್ಸು ಎಂಬ ಗಾದೆಯ ಮಾತಿನಂತೆ ಕಾಯುತ್ತಿರುವಂತೆ ಸದನವನ್ನು ಮೊಟಕುಗೊಳಿಸಿದೆ.ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ ಮತ್ತು ಜನರ ಸಂಕಷ್ಟಗಳ ಅಪಹಾಸ್ಯವೇ ಆಗಿದೆ. ಶಾಸನಸಭೆಯ ಸಮಯದ ಕ್ರಿಮಿನಲ್ ವೇಸ್ಟ್ ಮಾಡಲಾಗಿದೆ ಎಂದು ನಾವು ಅಭಿಪ್ರಾಯಪಡುತ್ತೇವೆ. ಈ ಹಿನ್ನೆಲೆಯಲ್ಲಿ ನಾವು ಸರಕಾರವನ್ನು ಈ ಕೆಳಗಿನಂತೆ ಒತ್ತಾಯಿಸುತ್ತಿದ್ದೇವೆ. ಪ್ರಕರಣದ ಆರೋಪಿ ಮತ್ತು ಅವರ ಬೆಂಬಲಿಗರು ಆಳುವ ಪಕ್ಷದ ಭಾಗ ಮತ್ತು ಪ್ರಭಾವ ವ್ಯಕ್ತಿಯಾಗಿರುವುದರಿಂದ ಸರಕಾರದ ಅಧೀನದಲ್ಲಿ ಕೆಲಸ ಮಾಡಬೇಕಾಗಿರುವ ವಿಶೇಷ ತನಿಖಾ ತಂಡ ನಿಷ್ಪಕ್ಷಪಾತ ತನಿಖೆ ನಡೆಸಲಾರದು ಎಂಬ ಬಲವಾದ ಅನುಮಾನಗಳಿವೆ. ಈ ಕಾರಣದಿಂದ ಈ ಪ್ರಕರಣದ ತನಿಖೆಯನ್ನು ಉಚ್ಛ ನ್ಯಾಯಾಲಯದ ಸುಪರ್ದಿಯಲ್ಲಿ ನಡೆಸಬೇಕು. ನಿರ್ಭಯಾ ಕಾನೂನು/ಕ್ರಿಮಿನಲ್ ಲಾ ತಿದ್ದುಪಡಿಯ ಪ್ರಕಾರ ಅತ್ಯಾಚಾರದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ಕಡ್ಡಾಯವಾಗಿ ಅನ್ವಯಿಸಬೇಕು ಕಾನೂನು ದೇಶದ ಎಲ್ಲ ಜನರಿಗೆ ಒಂದೇ ಆಗಿರುವುದರಿಂದ ಈ ಪ್ರಕರಣದ ಆರೋಪಿಯನ್ನೂ ಕೂಡಾ ಕಟ್ಟುನಿಟ್ಟಾದ ಕಾನೂನು ಪ್ರಕ್ರಿಯೆಗೆ ಒಳಪಡಿಸಬೇಕು. ದೂರುದಾರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಪ್ರಕರಣವು ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿದ್ದು ರಾಜಕೀಯ ಮೇಲಾಟದಲ್ಲಿ ಮಹಿಳೆಯರನ್ನು ಕೀಳಾಗಿ ಬಳಸಿಕೊಳ್ಳುವುದಕ್ಕೆ ಲಗಾಮು ಹಾಕಬೇಕು. ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಸಚಿವರೊಬ್ಬರ ಮೇಲೆ ಬಂದ ಆರೋಪವನ್ನು ತಳ್ಳಿ ಹಾಕುವ ಮತ್ತದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮಹಿಳೆಯರ ಹಾಗೂ ಆ ಮೂಲಕ ಶಾಸನ ಸಭೆಯ ಘನತೆಗೆ ಕುಂದುಂಟು ಮಾಡುವಂತೆ ಮಾತನಾಡಿದ ಸಚಿವ ಡಾ.ಸುಧಾಕರ್ ರವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಕ್ಷೇತ್ರದಲ್ಲಿರುವವರು ಸಾರ್ವಜನಿಕರಿಗೆ ಉತ್ತರದಾಯಿತ್ವವನ್ನು ಹೊಂದಿರುತ್ತಾರೆ. ಅವರು ಶಾಸನಸಭೆಯ ಕಲಾಪಗಳನ್ನು ಜನರ ಪ್ರಶ್ನೆಗಳ ಆಧಾರದಲ್ಲಿ ಚರ್ಚೆಗೆ ಮೀಸಲಿಡದೇ ಮನ ಬಂದಂತೆಲ್ಲ ವರ್ತಿಸುವುದು ಸರಿಯಲ್ಲ. ಇದು ಅವರ ಖಾಸಗೀ ಸಂಗತಿಗಳಲ್ಲ. ಸುದ್ದಿ ಮಾಧ್ಯಮಗಳು ಮಹಿಳಾವಿರೋಧೀ, ಸೆಕ್ಸೀಸ್ಟ್ ನೆನೆಲೆಯಲ್ಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದನ್ನು ಪ್ರೆಸ್ ಕೌನ್ಸಿಲ್ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಲಾಗಿದೆ.


from India & World News in Kannada | VK Polls https://ift.tt/3czNXGk

ಸಿದ್ದರಾಮಯ್ಯ ಯಾರ ಕಾಲು ಹಿಡಿದು ಸಿಎಂ ಆಗಿದ್ದಾರೆ ಅನ್ನೋದು ಗೊತ್ತಿದೆ; ನಳಿನ್ ಕುಮಾರ್ ಕಟೀಲ್

ಬೆಳಗಾವಿ: ಅವರು ಯಾರ ಗುಲಾಮರು ಎಂದು ದೇಶಕ್ಕೆ ಗೊತ್ತಿದೆ. ಅವರು ಯಾರು ಕಾಲು ಹಿಡಿದು ಸಿಎಂ ಆಗಿದ್ದಾರೆ ಅನ್ನೋದು ಗೊತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹರಿಹಾಯ್ದರು. ಮಂಗಳವಾರ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ , ಬಿಜೆಪಿ ಸಂಸದರು ಕೇಂದ್ರ ಸರಕಾರ ಗುಲಾಮರು ಎಂಬ ಸಿದ್ದರಾಮಯ್ಯ ಹೇಳಿಕೆಯ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ರಾಮಣ್ಣ ಯಾರ ಕಾಲು ಹಿಡಿದು ಸಿಎಂ ಆಗಿದ್ದಾರೆ. ಅವರಿಗೆ 65 ವರ್ಷ. ಅವರು ಹಿರಿಯರು. ರಾಹುಲ್ ಗಾಂಧಿ ಕಿರಿಯರು. ಅವರ ಕಾಲು ಹಿಡಿದು ಸಿಎಂ ಆಗಿದ್ದಾರೆ ಎಂದು ಟಾಂಗ್ ಕೊಟ್ಟರು. ಮಾಜಿ‌ ಸಚಿವ ರಮೇಶ ಜಾರಕಿಹೊಳಿ ಸಿಡಿ ವಿಚಾರ ತನಿಖೆ ಹಂತದಲ್ಲಿದೆ, ಸಿದ್ದರಾಮಯ್ಯ ಅವರು ಸಿಎಂ ಇದ್ದಾಗ ಸಿಡಿ ಗಳು ಯಾವ ರೀತಿ ತನಿಖೆ ಆಗಿದೆ ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಅವರಿಗೆ ಸಿಬಿಐ, ಐಟಿ, ಎಸ್ ಐ ಟಿ, ಮೆಲೆ ನಂಬಿಕೆ ಇಲ್ಲ, ಅಷ್ಟಕ್ಕೂ ಅವರಿಗೇ ಅವರ ಮೆಲೆ ನಂಬಿಕೆನೆ ಇಲ್ಲ ಎಂದು ವ್ಯಂಗ್ಯವಾಡಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಉಮೇಶ ಕತ್ತಿ, ಶಾಸಕರಾದ ಅನಿಲ್ ಬೆನಕೆ, ಅಭಯ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


from India & World News in Kannada | VK Polls https://ift.tt/3rBnSuL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...