ಬೆಂಗಳೂರು: ರಾಜ್ಯ ಏನೋ ಆಗೋಯ್ತು. ಆದರೆ ಸಂಪುಟ ವಿಸ್ತರಣೆ ಬಳಿಕ ಪಡೆಯಲು ಮೂವರು ಸಚಿವರ ನಡುವೆ ‘ತ್ರಿಕೋನ ಸರಣಿ’ ಪ್ರಾರಂಭವಾಗಿದೆ. ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಅರವಿಂದ ಲಿಂಬಾವಳಿ ಅವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಲು ಸಿಎಂ ಯೋಚಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರೂ ಬೆಂಗಳೂರು ಅಭಿವೃದ್ಧಿ ಖಾತೆ ಬಯಸಿದ್ದಾರೆ. ಇದರೊಂದಿಗೆ ಮೂವರ ನಡುವೆ ಪೈಪೋಟಿ ಶುರುವಾಗಿದೆ ಎನ್ನಲಾಗಿದೆ. ಈ ಹಿಂದೆಯೂ ಅಶ್ವತ್ಥನಾರಾಯಣ ಮತ್ತು ಅಶೋಕ್ ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಪ್ರಯತ್ನ ನಡೆಸಿದ್ದರು. ಈ ಪೈಕಿ ಯಾರಿಗೇ ಈ ಜವಾಬ್ದಾರಿ ನೀಡಿದರೂ ಮತ್ತೊಬ್ಬರಿಗೆ ಬೇಸರವಾಗುತ್ತದೆ. ಹಾಗಾಗಿ ಬೆಂಗಳೂರು ಖಾತೆಯನ್ನು ಸಿಎಂ ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಬಿಬಿಎಂಪಿ ಚುನಾವಣೆ ಇರುವುದರಿಂದ ಈ ಖಾತೆಯನ್ನು ಸ್ಥಳೀಯರಿಗೆ ಹಸ್ತಾಂತರಿಸಲು ಸಿಎಂ ಅಪೇಕ್ಷಿಸಿದ್ದಾರೆ. ಅಶ್ವತ್ಥನಾರಾಯಣ, ಅಶೋಕ್, ಲಿಂಬಾವಳಿ ಪೈಕಿ ಒಬ್ಬರಿಗೆ ಈ ಅದೃಷ್ಟ ಒಲಿಯಬಹುದು. ಒಂದು ವೇಳೆ ಸಂಘರ್ಷದ ವಾತಾವರಣ ನಿರ್ಮಾಣವಾದರೆ ಖಾತೆಯನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವ ನಿರ್ಧಾರವನ್ನೂ ಸಿಎಂ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
from India & World News in Kannada | VK Polls https://ift.tt/2N7Z8M7