ಪುತ್ತೂರು: ಹೊಸ ಮನೆಯಲ್ಲಿ ಕರೆಂಟ್‌ ಶಾಕ್‌ನಿಂದ ಮಾಲೀಕ ಸಾವು, ಗೃಹ ಪ್ರವೇಶಕ್ಕೆ 2 ದಿನ ಬಾಕಿ ಇರುವಾಗ ಅವಘಡ!

ಪುತ್ತೂರು: ಇನ್ನೆರಡು ದಿನಗಳಲ್ಲಿ ಗೃಹ ಪ್ರವೇಶ ನಡೆಯಬೇಕಿದ್ದ ಹೊಸ ಮನೆಯಲ್ಲಿ ನಡೆದ ವಿದ್ಯುತ್‌ ದುರಂತದಲ್ಲಿ ಆ ಮನೆಯ ಯಜಮಾನನೇ ದಾರುಣವಾಗಿ ಮೃತಪಟ್ಟ ಘಟನೆ ಹೊರವಲಯದ ಸಂಪ್ಯದ ಉದಯಗಿರಿ ಎಂಬಲ್ಲಿ ನಡೆದಿದೆ. ವೆಂಕಪ್ಪ ನಾಯ್ಕ್‌ ಎಂಬವರ ಪುತ್ರ, ಉದಯಗಿರಿ ನಿವಾಸಿ ಕೃಷ್ಣಪ್ಪ ನಾಯ್ಕ್ (45) ಎಂಬವರೇ ಮೃತಪಟ್ಟವರು. ಇವರು ಉದಯಗಿರಿಯಲ್ಲಿ ಕಟ್ಟಿಸಿದ ನೂತನ ಮನೆಯಲ್ಲಿ ಜನವರಿ 16ರಂದು ಗೃಹಪ್ರವೇಶ ಸಮಾರಂಭ ನಡೆಯಬೇಕಿತ್ತು. ಈ ಸಂಬಂಧ ಮನೆಯಲ್ಲಿ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದವು. ಬುಧವಾರ ರಾತ್ರಿ ಹೊಸ ಮನೆಯಲ್ಲಿ ಕುತ್ತಿ ಪೂಜೆ ನಡೆಯುವುದಿತ್ತು. ಇದಕ್ಕೂ ಮುನ್ನ ಅಪರಾಹ್ನ ವಿದ್ಯುತ್‌ ಸಂಪರ್ಕಕ್ಕೆ ಸಂಬಂಧಿಸಿದ ಅಂತಿಮ ಕೆಲಸ ನಡೆಯುತ್ತಿದ್ದು, ಪ್ಲಗ್‌ ಸಿಕ್ಕಿಸುವ ಕಾರ್ಯದಲ್ಲಿ ಕೃಷ್ಣಪ್ಪ ತೊಡಗಿಸಿಕೊಂಡಿದ್ದರು. ಈ ಸಂದರ್ಭ ಹಠಾತ್‌ ವಿದ್ಯುತ್‌ ಶಾಕ್‌ ಉಂಟಾಗಿದ್ದು, ಗಂಭೀರ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿಗಿತ್ತು. ಆದರೆ ಅಷ್ಟರಲ್ಲಿ ಕೃಷ್ಣಪ್ಪ ಅವರು ಕೊನೆಯುಸಿರೆಳೆದಿದ್ದಾರೆ. ಪುತ್ತೂರು ಪರ್ಲಡ್ಕದಲ್ಲಿ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣಪ್ಪ ಅವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.


from India & World News in Kannada | VK Polls https://ift.tt/3qk4rX0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...