ಬಂದೇ ಬಿಡ್ತು ಸಂಜೀವಿನಿ: ಮಂಗಳೂರು ತಲುಪಿದ ಕೋವಿಶೀಲ್ಡ್‌ ಕೊರೊನಾ ಲಸಿಕೆ

ಮಂಗಳೂರು: ಪುಣೆಯ ಸೇರಂ ಇನ್ಸ್ಟಿಟ್ಯೂಟ್ ತಯಾರಿಸಿರುವ ಕೋವಿಶೀಲ್ಡ್ ಗುರುವಾರ ಮುಂಜಾನೆ ಮಂಗಳೂರಿನ ಜಿಲ್ಲಾ ಲಸಿಕೆ ಸಂಗ್ರಹಣಾಕ್ಕೆ ತಲುಪಿದೆ. ಪ್ರಾದೇಶಿಕ ಲಸಿಕಾ ಸಂಗ್ರಹಣಾ ಕೇಂದ್ರವಾದ ಕಾರಣಕ್ಕೆ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ಇಲ್ಲಿಂದ ಲಸಿಕೆ ಸಾಗಾಟವಾಗಲಿದೆ. ಬೆಂಗಳೂರಿನಿಂದ ಹೊರಟ ಆರೋಗ್ಯ ಇಲಾಖೆಯ ವಾಹನ‌ ಮೈಸೂರು ಜಿಲ್ಲೆಗೆ ತಲುಪಿ, ಆ ಬಳಿಕ ಮಂಗಳೂರಿಗೆ‌ ಮುಂಜಾನೆ ಹೊತ್ತು ತಲುಪಿದೆ. ಇಂದು ಉಡುಪಿ ಹಾಗೂ‌ ಚಿಕ್ಕಮಗಳೂರು ಜಿಲ್ಲೆಗೆ ಲಸಿಕೆ‌ ವಿತರಣೆ ಮಾಡಿದ ಬಳಿಕ ದ.ಕ.ಜಿಲ್ಲೆಯ ಆರು ಕೇಂದ್ರಗಳಿಗೆ ಲಸಿಕೆ ಮುಟ್ಟಿ ಸುವ ಕಾರ್ಯ ಸಂಜೆಯೊಳಗೆ ಮುಗಿಸುವ ಕೆಲಸ ಸಾಗಲಿದೆ. ಜ.16 ರಂದು ಜಿಲ್ಲಾ ಮಟ್ಟದಲ್ಲಿ ಇದರ ಉದ್ಘಾಟನೆ ಜತೆಗೆ ಈ ಬಳಿಕ ನಿರಂತರ‌ ಲಸಿಕೆಯನ್ನು‌ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನೀಡುವ ಕಾರ್ಯವಾಗಲಿದೆ. ಜನವರಿ 12ರಂದು ಬೆಂಗಳೂರಿಗೆ ಪುಣೆಯಿಂದ ವಿಮಾನದ ಮೂಲಕ ಲಸಿಕೆ ಆಗಮಿಸಿತ್ತು. ಇದೀಗ ಬೆಂಗಳೂರಿನಿಂದ ಕೆಲವು ಜಿಲ್ಲೆಗೆ ಟ್ರಕ್‌ ಮೂಲಕ ಲಸಿಕೆ ಸಾಗಿಸಲಾಗುತ್ತಿದೆ. ಜನವರಿ 16ರಿಂದ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಲಿದೆ.


from India & World News in Kannada | VK Polls https://ift.tt/2LLL6ir

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...