ಈ ದಿಗ್ಗಜನ ವಿಡಿಯೋಗಳನ್ನು ವೀಕ್ಷಿಸಿ ಸಾಕಷ್ಟು ತಪ್ಪುಗಳನ್ನು ತಿದ್ದಿಕೊಂಡಿದ್ದೇನೆಂದ ಕುಲ್ದೀಪ್‌ ಯಾದವ್‌!

ಹೊಸದಿಲ್ಲಿ: ಪ್ರಸ್ತುತ ಭಾರತ ಕ್ರಿಕೆಟ್‌ ತಂಡದ ಪ್ರಮುಖ ಸ್ಪಿನ್ನರ್‌ಗಳಲ್ಲಿ ಚೈನಾಮನ್‌ ಖ್ಯಾತಿಯ ಕೂಡ ಒಬ್ಬರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಕುಲ್ದೀಪ್‌ ತಮ್ಮ ಕೌಶಲ್ಯಭರಿತ ಬೌಲಿಂಗ್‌ ಮೂಲಕ ವಿಶ್ವದ ಸ್ಪಿನ್‌ ದಿಗ್ಗಜರ ಗಮನವನ್ನು ಸೆಳೆದಿದ್ದಾರೆ. 2014ರಲ್ಲಿ ಯುಎಇಯಲ್ಲಿ ಜರುಗಿದ್ದ 19 ವಯೋಮಿತಿ ವಿ‍ಶ್ವಕಪ್‌ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಭಾರತದ ಎಡಗೈ ಸ್ಪಿನ್ನರ್‌ ಅನ್ನು ಆಸ್ಟ್ರೇಲಿಯಾ ಸ್ಪಿನ್‌ ದಂತಕತೆ ಶೇನ್‌ ವಾರ್ನ್‌ ಸೇರಿದಂತೆ ವಿಶ್ವದ ಬಹುತೇಕರು ಶ್ಲಾಘಿಸಿದ್ದರು. ಇದೀಗ ಅವರು ಸೆ.19 ರಿಂದ ಆರಂಭವಾಗುವ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ರಾಷ್ಟ್ರೀಯ ತಂಡದಲ್ಲೂ ಹಾಗೂ ಐಪಿಎಲ್‌ ಟೂರ್ನಿಯಲ್ಲೂ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ತಮ್ಮ ಕೋಚ್‌ಗೆ ಸಾಕಷ್ಟು ತೊಂದರೆ ನೀಡಿದ್ದೇನೆ ಆದರೆ, ವಿಡಿಯೋಗಳನ್ನು ನೋಡಿದ ಬಳಿಕ ನನ್ನ ಬೌಲಿಂಗ್‌ ಆಕ್ಷನ್‌ ಅನ್ನು ಸರಿಪಡಿಸಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. "ನನ್ನ ಕೋಚ್‌ಗೆ ಸಾಕಷ್ಟು ತೊಂದರೆ ನೀಡಿದ್ದೇನೆ ಆದರೆ ಇದೀಗ ಶೇನ್‌ವಾರ್ನ್‌ ವಿಡಿಯೋಗಳನ್ನು ನೋಡುವ ಮೂಲಕ ಬೌಲಿಂಗ್‌ ಆಕ್ಷನ್‌ ಅನ್ನು ಸರಿಪಡಿಸಿಕೊಂಡಿದ್ದೇನೆ," ಎಂದು ಕೋಲ್ಕತ್ತಾ ನೈಟ್‌ ರೈಡರ್ಸ್ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿ ಕುಲ್ದೀಪ್‌ ಯಾದವ್‌ ತಿಳಿಸಿದ್ದಾರೆ. "2005ರ ಆಶಷ್‌ ಸರಣಿಯಲ್ಲಿ ಶೇನ್‌ವಾರ್ನ್‌ ಅವರನ್ನು ನೋಡಿದ್ದೆ ಹಾಗೂ ಅವರ ರೀತಿಯ ಸ್ಪಿನ್ನರ್‌ ಆಗಬೇಕೆಂದು ಅಂದೇ ನಿರ್ಧರಿಸಿದೆ. ಅವರೇ ನನಗೆ ಮಾದರಿ. ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯ ಆಡುವ ವೇಳೆ ಮೊದಲ ಬಾರಿ ಅವರನ್ನು ಭೇಟಿಯಾಗಿದ್ದೆ. ಸ್ಪಿನ್‌ ಬಗ್ಗೆ ಸಾಕಷ್ಟು ಮಾತನಾಡಿದ್ದೆ ಹಾಗೂ ಅವರು ನೀಡಿದ್ದ ಸಲಹೆಗಳು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ನೆರವಾಗಿತ್ತು," ಎಂದು ಸ್ಮರಿಸಿಕೊಂಡರು. "ಅಂದು ಶೇನ್‌ವಾರ್ನ್‌ ನನಗೆ ತಿಳಿಸಿದ ವಿಷಯಗಳನ್ನು ನನಗೆ ಅರ್ಥ ಮಾಡಿಸಲು ರವಿ ಸರ್‌ ಹಾಗೂ ಭರತ್‌ ಅರುಣ್‌ ಸರ್‌ ಸಹಾಯ ಮಾಡಿದ್ದರು. ಪ್ರತಿ ದಿನ ಬೆಳಗ್ಗೆ ಹೊಸ ಯೋಚನೆಯೊಂದಿಗೆ ದಿನವನ್ನು ಆರಂಭಿಸುತ್ತಿದ್ದೆ, ಇದರಿಂದ ನಾನು ಮಾನಸಿಕವಾಗಿ ಬಲಿಷ್ಠವಾಗಲು ಸಹಾಯವಾಯಿತು. ಇದೀಗ ಅವರು ನನಗೆ ತುಂಬಾ ಆಪ್ತರಾಗಿದ್ದು, ವ್ಯಾಟ್ಸಾಪ್‌ನಲ್ಲಿ ನಿತ್ಯ ಸಂಪರ್ಕದಲ್ಲಿದ್ದೇನೆ," ಎಂದು ಕುಲ್ದೀಪ್‌ ಯಾದವ್‌ ಹಿಂದೂಸ್ಥಾನ್‌ ಟೈಮ್ಸ್‌ಗೆ ತಿಳಿಸಿದ್ದಾರೆ. ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ಸಮಯದಲ್ಲಿ ಅಂದಿನ ಕೋಚ್‌ ಸಹಾಯದಿಂದ ಕುಲ್ದೀಪ್‌ ಯಾದವ್‌, ಸ್ಪಿನ್‌ ದಿಗ್ಗಜನನ್ನು ಮೊದಲ ಬಾರಿ ಭೇಟಿಯಾಗಿ 10 ನಿಮಿಷಗಳ ಸಂವಹನ ನಡೆಸಿದ್ದರು. ಆ ವೇಳೆ ಏನೂ ಮಾತನಾಡಬೇಕೆಂಬಂತೆ ಗೊತ್ತೇ ಆಗದೆ, ಮೌನವಾಗಿಯೇ ಇದ್ದೆ ಎಂಬುದನ್ನು ಕುಲ್ದೀಪ್‌ ಯಾದವ್‌ ಈ ಹಿಂದೆ ಹೇಳಿಕೊಂಡಿದ್ದಾರೆ. 2017ರಲ್ಲಿ ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಕುಲ್ದೀಪ್‌ ಯಾದವ್‌ ಪದಾರ್ಪಣೆ ಮಾಡಿದ್ದರು. ಅನಿಲ್‌ ಕಂಬ್ಳೆ ವೀಕ್ಷಣೆಯಲ್ಲಿ ಕಣಕ್ಕೆ ಇಳಿದಿದ್ದ ಕುಲ್ದೀಪ್‌, ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಅವರನ್ನು ಮೊದಲನೇ ವಿಕೆಟ್‌ಗೆ ಬಲಿ ಪಡೆದಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gShcTq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...