ಐಪಿಎಲ್‌ 2020: ಮುಂದಿನ ಮೂರು ವರ್ಷಗಳ ಐಪಿಎಲ್‌ಗೆ 'ಸಿಆರ್‌ಇಡಿ' ಅಧಿಕೃತ ಪಾಲುದಾರ

ಹೊಸದಿಲ್ಲಿ: ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮುಂದಿನ ಮೂರು ಆವೃತ್ತಿಗಳಿಗೆ ಕ್ರೆಡಿಟ್‌ ಕಾರ್ಡ್‌ ಪೇಮೆಂಟ್‌ ಪ್ಲ್ಯಾಟ್‌ಫಾರ್ಮ್‌ ಆದ '' ಯನ್ನು ಅಧಿಕೃತ ಪಾಲುದಾರರನ್ನಾಗಿ ಐಪಿಎಲ್‌ ಆಡಳಿತ ಮಂಡಳಿ ಬುಧವಾರ ಪ್ರಕಟಿಸಿದೆ. "ಐಪಿಎಲ್‌ ಮುಂದಿನ ಮೂರು ಆವೃತ್ತಿಗಳಿಗೆ ಅಂದರೆ 2022ರವರೆಗೂ 'ಸಿಆರ್‌ಇಡಿ' ಪಾಲುದಾರಿಕೆಯಾಗಿ ಕಾರ್ಯ ನಿರ್ವಹಿಸಲಿದೆ,'' ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೆ.19 ರಿಂದ ಆರಂಭಗೊಂಡು ನವೆಂಬರ್‌ 10ವರೆಗೆ ನಡೆಯಲಿದೆ. "2020 ರಿಂದ 2022ರವರೆಗೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ 'ಅಧಿಕೃತ ಪಾಲುದಾರ' ರಾಗಿ ಇರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಐಪಿಎಲ್ ವಿಶ್ವದ ಅತ್ಯಂತ ನವೀನ ಕ್ರೀಡಾ ಲೀಗ್‌ಗಳಲ್ಲಿ ಒಂದಾಗಿದೆ ಮತ್ತು ಸಿಆರ್‌ಇಡಿ ಪಾಲುದಾರನಂತೆ ಅನನ್ಯ ಮತ್ತು ನವೀನತೆಯಂತಹ ಬ್ರ್ಯಾಂಡ್ ಅನ್ನು ಹೊಂದಲು ನಾವು ಸಂತೋಷಪಡುತ್ತೇವೆ. ನಾವು ಈ ರೋಮಾಂಚಕಾರಿ ಪ್ರಯಾಣವನ್ನು ಕೈಗೊಳ್ಳುವಾಗ ದೇಶಾದ್ಯಂತ ಹೆಚ್ಚಿನ ಜನರು ಅವರನ್ನು ಗಮನಿಸುತ್ತಾರೆ ಎಂದು ನನಗೆ ಖಾತ್ರಿಯಿದೆ," ಎಂದು ಐಪಿಎಲ್‌ ಚೇರ್‌ಮನ್‌ ತಿಳಿಸಿದ್ದಾರೆ. "ವಿಶ್ವ ಕ್ರಿಕೆಟ್‌ ಕ್ಯಾಲೆಂಡರ್‌ನಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅಗ್ರ ಸ್ಪರ್ಧೆಯಾಗಿರುವ ಬಗ್ಗೆ ಎರಡು ಪ್ರಶ್ನೆ ಇಲ್ಲ ಹಾಗಾಗಿ ಐಪಿಎಲ್‌ನೊಂದಿಗೆ ಸಹಭಾಗಿತ್ವ ಪಡೆದಿರುವುದು ತುಂಬಾ ಸಂತೋಷವಾಗಿದೆ. ಸುಧಾರಿತ ಕ್ರೆಡಿಟ್ ಸ್ಟ್ಯಾಂಡಿಂಗ್, ವಿಶ್ವಾಸಾರ್ಹ ಸಮುದಾಯ ಮತ್ತು ವಿಶೇಷ ಅನುಭವಗಳ ಮೂಲಕ ಲಕ್ಷಾಂತರ ಜನರಿಗೆ ಉತ್ತಮ ಜೀವನದ ಪ್ರವೇಶವನ್ನು ನೀಡುವ ಉದ್ದೇಶವನ್ನು ಸಿಆರ್‌ಇಡಿ ಹೊಂದಿದೆ," ಎಂದು ಸಿಆರ್‌ಇಡಿ ಸಿಇಓ ಕುನಾಲ್‌ ಶಾ ತಿಳಿಸಿದ್ದಾರೆ. ಐಪಿಎಲ್ ಗ್ರಾಹಕರ ಅನುಭವಗಳ ಪರಾಕಾಷ್ಠೆಯನ್ನು ಪ್ರತಿನಿಧಿಸುತ್ತದೆ, ಇದು ಕ್ರಿಕೆಟಿಗರು, ಅಭಿಮಾನಿಗಳು ಮತ್ತು ಉತ್ಸಾಹಿಗಳ ಜಾಗತಿಕ ಸಮುದಾಯದಿಂದ ನಡೆಸಲ್ಪಡುತ್ತದೆ. ವ್ಯಕ್ತಿ, ತಂಡ ಮತ್ತು ಸಮುದಾಯಕ್ಕಾಗಿ ಗರಿಷ್ಠ ಪ್ರದರ್ಶನವನ್ನು ಆಚರಿಸುವ ಈ ಕ್ರೀಡಾ ಉತ್ಸವದಲ್ಲಿ ಭಾಗವಹಿಸಲು ನಾವು ಎದುರು ನೋಡುತ್ತಿದ್ದೇವೆ," ಎಂದು ಹೇಳಿದರು. ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಸೆ.19ರಿಂದ ಯುಎಇಯಲ್ಲಿ ಆರಂಭವಾಗಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ದುಬೈಗೆ ತೆರಳಿ ಪೂರ್ವ ತಯಾರಿಯಲ್ಲಿ ತೊಡಗಿವೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಶನಿವಾರ ಹೊರ ಬೀಳುವ ಸಾಧ್ಯತೆ ಇದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34V6nha

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...