'ಕಠಿಣ ಹೋರಾಟದ ಹೊರತಾಗಿಯೂ ಆತನಿಗೆ ಶರಣಾದೆ' : ಕೆಕೆಆರ್‌ ವೇಗಿಯನ್ನು ಶ್ಲಾಘಿಸಿದ ಸ್ಮಿತ್!

ದುಬೈ: ವಿರುದ್ಧ 37 ರನ್‌ಗಳಿಂದ ಸೋಲು ಅನುಭವಿಸಿದ ಬಳಿಕ ಪ್ರತಿಕ್ರಿಯಿಸಿದ ರಾಜಸ್ಥಾನ್‌ ರಾಯಲ್ಸ್ ತಂಡದ ನಾಯಕ ಸ್ಟೀವನ್‌ ಸ್ಮಿತ್‌, ಪಂದ್ಯದಲ್ಲಿ ತಮಗೂ ಹಾಗೂ ವೇಗಿ ನಡುವೆ ಉಂಟಾಗಿದ್ದ ಹೋರಾಟವನ್ನು ಬಹಿರಂಗಪಡಿಸಿದರು. ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತಾ ನೈಟ್‌ ರೈಡರ್ಸ್ ತಂಡ ನಿಗದಿತ 20 ಓವರ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು 174 ರನ್‌ಗಳನ್ನು ಗಳಿಸಿತು. 47 ರನ್‌ಗಳನ್ನು ಗಳಿಸಿದ ಶುಭಮನ್‌ ಗಿಲ್‌, ಕೆಕೆಆರ್‌ನ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಇನಿಂಗ್ಸ್‌ ಕೊನೆಯ ಹಂತದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಇಯಾನ್‌ ಮಾರ್ಗನ್‌ 23 ಎಸೆತಗಳಲ್ಲಿ 34 ರನ್‌ಗಳನ್ನು ಗಳಿಸಿದರು. ರಾಜಸ್ಥಾನ್‌ ರಾಯಲ್ಸ್ ಪರ ಅತ್ಯುತ್ತಮವಾಗಿ ಬೌಲಿಂಗ್‌ ಮಾಡಿದ ಜೋಫ್ರಾ ಆರ್ಚರ್‌ 18 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಬಳಿಕ ಗುರಿ ಹಿಂಬಾಲಿಸಿದ ರಾಜಸ್ಥಾನ್‌ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 137 ರನ್‌ಗಳಿಗೆ ಸೀಮಿತವಾಯಿತು. ಅಂತಿಮವಾಗಿ ಕೆಕೆಆರ್‌ 37 ರನ್‌ಗಳಿಂದ ಸೋಲು ಅನುಭವಿಸಿತ್ತು. ರಾಜಸ್ಥಾನ್‌ ರಾಯಲ್ಸ್ ಪರ ಟಾಮ್‌ ಕರನ್‌ 34 ಎಸೆತಗಳಲ್ಲಿ 56 ರನ್‌ಗಳನ್ನು ಗಳಿಸಿದರು. ಕೆಕೆಆರ್‌ ಪರ ಅದ್ಭುತ ಬೌಲಿಂಗ್‌ ಪ್ರದರ್ಶನ ತೋರಿದ ಕಮಲೇಶ್‌ ನಾಗರಕೋಟಿ, ಶಿವಮ್‌ ಮಾವಿ ಹಾಗೂ ವರುಣ್ ಚಕ್ರವರ್ತಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು. ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದ ರಾಜಸ್ಥಾನ್‌ ರಾಯಲ್ಸ್ ನಾಯಕ ಸ್ಟೀವನ್‌ ಸ್ಮಿತ್‌ ಎರಡನೇ ಓವರ್‌ನಲ್ಲಿ ಪ್ಯಾಟ್‌ ಕಮಿನ್ಸ್ ಎಸೆತದಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿದರು. ಏಳು ಎಸೆತಗಳನ್ನು ಆಡಿದ ಸ್ಮಿತ್‌ ಕೇವಲ ಮೂರು ರನ್‌ಗಳನ್ನು ಮಾತ್ರ ಗಳಿಸಿದರು. ಪಂದ್ಯ ಮುಗಿದ ಬಳಿಕ ಸ್ಟಾರ್‌ ಸ್ಪೋರ್ಟ್ಸ್‌ ಜತೆ ಮಾತನಾಡಿದ ಸ್ಟೀವನ್‌ ಸ್ಮಿತ್‌, "ಪ್ಯಾಟ್‌ ಕಮಿನ್ಸ್ ವಿರುದ್ಧ ಕಠಿಣ ಹೋರಾಟ ನಡೆಸಿದೆ, ಆದರೆ, ಅಂತಿಮವಾಗಿ ಅವರೇ ಗೆಲುವು ಸಾಧಿಸಿದರು. ಅವರ ಬಳಿ ನಾನು ಮಾತನಾಡಿದಾಗ, ಅವರು ಹೇಳಿದ್ದು, ಇಂತಹ ಎಸೆತಗಳಿಗೆ ಸಹಜವಾಗಿ ಹೊಡೆಯಬೇಕು ಎಂದಿದ್ದರು. ಕೆಲವೊಮ್ಮೆ ಒಳ್ಳೆಯ ಎಸೆತಗಳಿದ್ದಾಗ ನೀವು ಹೊಡೆಯಲು ಯತ್ನಿಸಬಾರದು," ಎಂದು ಹೇಳಿದರು. ಸಂಜು ಸ್ಯಾಮ್ಸನ್‌ ಹಾಗೂ ಜೋಸ್‌ ಬಟ್ಲರ್‌ ಅವರ ವಿಕೆಟ್‌ಗಳನ್ನು ಶಿವಮ್‌ ಮಾವಿ ಕಬಳಿಸಿದರೆ, ರಾಬಿನ್‌ ಉತ್ತಪ್ಪ ಹಾಗೂ ರಿಯಾನ್‌ ಪರಾಗ್‌ ಅವರ ವಿಕೆಟ್‌ಗಳನ್ನು ನಾಗರಕೋಟಿ ಪಡೆದರು. ಇಯಾನ್‌ ಮಾರ್ಗನ್‌ ಅವರನ್ನು ಸಾಮಾನ್ಯವಾಗಿ 4 ಅಥವಾ 5 ನೇ ಕ್ರಮಾಂಕದಲ್ಲಿ ಕಳುಹಿಸಬೇಕಾಗಿತ್ತು. ಆದರೆ, ಈ ಪಂದ್ಯದಲ್ಲಿ ಅವರು 6ನೇ ಕ್ರಮಾಂಕದಲ್ಲಿ ಆಡಿದ್ದರು. ರಾಜಸ್ಥಾನ್‌ ರಾಯಲ್ಸ್ ಅಕ್ಟೋಬರ್‌ 3 ರಂದು ರಾಜಸ್ಥಾನ್‌ ರಾಯಲ್ಸ್ ವಿರುದ್ಧ ಸೆಣಸಲಿದೆ. ಕೋಲ್ಕತಾ ನೈಟ್‌ ರೈಡರ್ಸ್ ಇದೇ ದಿನ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಕಾದಾಟ ನಡೆಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2SfigXW

ಹೆದ್ದಾರಿಯಲ್ಲಿ ಟ್ಯಾಂಕರ್‌ ಅಪಘಾತ: ಎಚ್ಚೆತ್ತುಕೊಳ್ಳಲಿ ಪೆಟ್ರೋಲಿಯಂ ಕಂಪನಿ, ಸಾರ್ವಜನಿಕರ ಆಕ್ರೋಶ

ಗುರುದತ್ತ ಭಟ್‌ ಕಾರವಾರ ಕಾರವಾರ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಮೇಲೆ ಗ್ಯಾಸ್‌ ಟ್ಯಾಂಕರ್‌ಗಳು ಅಪಘಾತಕ್ಕೆ ಒಳಗಾದಾಗ ತ್ವರಿತ ಕಾರ್ಯಾಚರಣೆ ನಡೆಸಿ ಸುರಕ್ಷತಾ ವ್ಯವಸ್ಥೆ ಕಲ್ಪಿಸುವ ಯೋಜನೆ ಕಂಪನಿಗಳ ನಿರ್ಲಕ್ಷ್ಯದಿಂದ ನನೆಗುದಿಗೆ ಬಿದ್ದಿದೆ. ಬರ್ಗಿ ಅಗ್ನಿ ಅನಾಹುತದ ಕರಾಳ ಘಟನೆ ನಡೆದು ಐದು ವರ್ಷ ಕಳೆದರೂ ಈ ಕುರಿತು ಕ್ರಮ ವಹಿಸದಿರುವ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕುಮಟಾ ತಾಲೂಕಿನ ಬರ್ಗಿಯಲ್ಲಿ ಗ್ಯಾಸ್‌ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿ ಭಾರಿ ಅಗ್ನಿ ಅನಾಹುತ ಸಂಭವಿಸಿ ಐದು ವರ್ಷಗಳೇ ಕಳೆದಿವೆ. ಆ ಬಳಿಕವೂ ಸಹ ಜಿಲ್ಲೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ಟ್ಯಾಂಕರ್‌ಗಳು ಅಪಘಾತಕ್ಕೊಳಗಾದ ಘಟನೆ ಆಗಾಗ ನಡೆಯುತ್ತಿದ್ದು ಅದೃಷ್ಟವಶಾತ್‌ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಈ ನಡುವೆ ಕಳೆದ ಎರಡು ದಿನಗಳಲ್ಲಿ ಕುಮಟಾ ಮತ್ತು ಯಲ್ಲಾಪುರ ಬಳಿ ಟ್ಯಾಂಕರ್‌ಗಳು ಅಪಘಾತಕ್ಕೊಳಗಾದ ಎರಡು ಪ್ರತ್ಯೇಕ ಪ್ರಕರಣಗಳು ನಡೆದಿವೆ. ಈ ಪೈಕಿ ತಾಲೂಕಿನಲ್ಲಿ ಹೆದ್ದಾರಿಯ ಮೇಲೆ ಬಿದ್ದ ಟ್ಯಾಂಕರ್‌ನಿಂದ ಅನಿಲವೂ ಸೋರಿಕೆಯಾಗಿದ್ದು ಸಾರ್ವಜನಿಕರು ಹೌಹಾರುವಂತಾಗಿತ್ತು. ತಕ್ಷಣವೇ ಮುನ್ನೆಚ್ಚರಿಕೆ ತೆಗೆದುಕೊಂಡ ಪರಿಣಾಮ ಅನಾಹುತ ತಪ್ಪಿದೆ. ಮತ್ತೊಮ್ಮೆ ಬರ್ಗಿ ದುರಂತದಂತಹ ಅನಾಹುತ ನಡೆಯುವ ಮೊದಲು ಪೆಟ್ರೋಲಿಯಂ ಕಂಪನಿಗಳು ಜಿಲ್ಲಾಡಳಿತದೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಒಪ್ಪಂದವೇನು? ಬರ್ಗಿ ದುರಂತದ ಬಳಿಕ ಜಿಲ್ಲಾಡಳಿತ ಮತ್ತು ಪೆಟ್ರೋಲಿಯಂ ಕಂಪನಿಗಳ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದರು. ಜಿಲ್ಲೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ಪ್ರತಿ 30 ಕಿಮೀ ದೂರಕ್ಕೆ ಒಂದು ಕ್ಷಿಪ್ರ ಕಾರ್ಯಾಚರಣೆ ವ್ಯವಸ್ಥೆ ಅಳವಡಿಸಬೇಕು. ಇದರಲ್ಲಿ ಅಗ್ನಿಶಾಮಕ ಯಂತ್ರ, ಬಿದ್ದ ಟ್ಯಾಂಕರ್‌ಗಳನ್ನು ಮೇಲೆತ್ತಲು ಕ್ರೇನ್‌, ನುರಿತ ಸಿಬ್ಬಂದಿ ಇತ್ಯಾದಿ ವ್ಯವಸ್ಥೆ ಇರಬೇಕು. ಇನ್ನು ರಾತ್ರಿ ವೇಳೆ ಟ್ಯಾಂಕರ್‌ಗಳ ಸಂಚಾರ ನಿರ್ಬಂಧಿಸಬೇಕು ಮತ್ತು ಪ್ರತಿ ಟ್ಯಾಂಕರ್‌ನಲ್ಲಿ ಇಬ್ಬರು ಚಾಲಕರು ಇರಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಬರ್ಗಿ ದುರಂತ ಕುಮಟಾ ತಾಲೂಕಿನ ಬರ್ಗಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ 2015ರ ಸೆ. 1ರಂದು ಗ್ಯಾಸ್‌ ಟ್ಯಾಂಕರ್‌ ಉರುಳಿ ಬಿದ್ದು ಅನಿಲ ಸೋರಿಕೆಯಾಗಿತ್ತು. ಬಳಿಕ ಬರ್ಗಿಯ ಹಲವಾರು ಮನೆಗಳಲ್ಲಿ ಬೆಂಕಿ ಹೊತ್ತಿಕೊಂಡಿತು. ಈ ಕರಾಳ ಅನಾಹುತದಲ್ಲಿ 13 ಜನ ಮೃತಪಟ್ಟಿದ್ದರು. ಪಕ್ಕದ ಜಿಲ್ಲೆಯಲ್ಲಿದೆ ವ್ಯವಸ್ಥೆದಕ್ಷಿಣ ಕನ್ನಡದ ಉಪ್ಪುಂದದಲ್ಲಿ ಈಗಾಗಲೇ ಸರಕಾರದ ವತಿಯಿಂದ ಕ್ಷಿಪ್ರ ಕಾರ್ಯಾಚರಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಪದೇ ಪದೆ ಟ್ಯಾಂಕರ್‌ ಅಪಘಾತವಾಗುವ ಉತ್ತರ ಕನ್ನಡದ ವ್ಯಾಪ್ತಿಯಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಟ್ಯಾಂಕರ್‌ ಅಪಘಾತಕ್ಕೊಳಗಾದಾಗ ಸುರಕ್ಷತೆಯ ಸಲುವಾಗಿ ಕ್ಷಿಪ್ರ ಕಾರ್ಯಚರಣೆ ವ್ಯವಸ್ಥೆ ಒದಗಿಸುವ ಬಗ್ಗೆ ಪೆಟ್ರೋಲಿಯಂ ಕಂಪನಿಗಳಿಂದ ಯಾವುದೇ ಮಾಹಿತಿ ಒದಗಿಸಿಲ್ಲ. ಸರಕಾರಕ್ಕೆ ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಡಾ. ಹರೀಶ್‌ಕುಮಾರ ಕೆ.ಜಿಲ್ಲಾಧಿಕಾರಿ


from India & World News in Kannada | VK Polls https://ift.tt/3cSzGTx

ಶಿರಾ, ಆರ್‌.ಆರ್‌ ನಗರ ಬೈಎಲೆಕ್ಷನ್: ಅಭ್ಯರ್ಥಿ ಆಯ್ಕೆ ಕುರಿತಾಗಿ ಗುರುವಾರ ಬಿಜೆಪಿ ಪ್ರಮುಖರ ಸಭೆ

ಬೆಂಗಳೂರು: ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರಮುಖರ ಸಭೆ ಗುರುವಾರದಂದು ನಡೆಯಲಿದೆ. ಎರಡು ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬಹುದು ಎಂಬ ನಿಟ್ಟಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ವಿಧಾನಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೂ ಅಭ್ಯರ್ಥಿ ಆಯ್ಕೆ ಕುರುತಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಠರ ಒಪ್ಪಿಗೆಗಾಗಿ ಕೇಂದ್ರಕ್ಕೆ ಕಳಿಸಿಕೊಡಲಾಗುತ್ತದೆ. ಆರ್‌.ಆರ್‌ ನಗರ ಬಿಜೆಪಿ ಅಭ್ಯರ್ಥಿ ಯಾರು? ಆರ್‌. ಆರ್‌ ನಗರ ವಿಧಾನಸಭಾ ಕ್ಷೇತ್ರ ಅತ್ಯಂತ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಆಪರೇಷನ್‌ ಕಮಲದಿಂದ ಬಿಜೆಪಿಗೆ ಸೇರ್ಪಡೆಯಾಗಿರುವ ಮುನಿರತ್ನ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ ಟಿಕೆಟ್‌ಗಾಗಿ ತುಳಸಿ ಮುನಿರಾಜು ಗೌಡ ಹಾಗೂ ಮುನಿರತ್ನ ನಡುವೆ ಪೈಪೋಟಿ ನಡೆಯುತ್ತಿದೆ. ತುಳಸಿ ನಾನೂ ಟಿಕೆಟ್ ಆಕಾಂಕ್ಷಿ ಎಂದಿದ್ದು ಇದು ಕಮಲ ಪಾಳಯದಲ್ಲಿ ಆಂತರಿಕ ಭಿನ್ನಮತ ಸೃಷ್ಟಿಗೂ ಕಾರಣವಾಗಲಿದೆ. ಮುನಿರಾಜು ಸಂಘದ ಹಿನ್ನೆಲೆಯನ್ನು ಹೊಂದಿದವರಾಗಿದ್ದು ಈ ನಿಟ್ಟಿನಲ್ಲಿ ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುವುದು ಕುತೂಹಲ ಕೆರಳಿಸಿದೆ. ಇನ್ನು ಶಿರಾ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದು ಇನ್ನು ಅಧಿಕೃತಗೊಂಡಿಲ್ಲ. ಶಿರಾದಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯಲಿದ್ದು ಬಿಜೆಪಿ ಅಲ್ಲಿ ಅಷ್ಟೊಂದು ಪ್ರಬಲವಾಗಿಲ್ಲ. ಈ ನಿಟ್ಟಿನಲ್ಲಿ ಗುರುವಾರದ ಸಭೆ ಮಹತ್ವ ಪಡೆದುಕೊಂಡಿದ್ದು ಅಭ್ಯರ್ಥಿಗಳ ಹೆಸರುಗಳು ಬಹುತೇಕ ಅಂತಿಮಗೊಳ್ಳುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/3cMvSDf

ಉತ್ತರ ಪ್ರದೇಶ: ಹತ್ರಾಸ್‌ ಬೆನ್ನಲ್ಲೇ ಮತ್ತೊಂದು ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ದಾರುಣ ಸಾವು!

ಲಖನೌ: ಉತ್ತರ ಪ್ರದೇಶದ ಹತ್ರಾಸ್ ಯುವತಿಯೊಬ್ಬಳ ಹಾಗೂ ಸಾವಿನ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಇಂಥಹದೇ ಮತ್ತೊಂದು ಅತ್ಯಾಚಾರ ಪ್ರಕರಣ ವರದಿಯಾಗಿದೆ. ಹತ್ರಾಸ್‌ನ ಸಂತ್ರಂಸ್ತ ಯುವತಿ ನಿಧನದ ಸಂದರ್ಭ ದೇಶದ ಗಮನವೆಲ್ಲ ಅತ್ತ ಕಡೆಯಿತ್ತು. ರಾತ್ರೋರಾತ್ರಿ ಯುವತಿಯ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ, ಇದೇ ಸಮಯದಲ್ಲಿ ಹತ್ರಾಸ್ ನಿಂದ 500 ಕಿ.ಮೀ. ದೂರದ ಬಲರಾಮ್ ಪುರ ಗ್ರಾಮದಲ್ಲಿ ಮತ್ತೊಂದು ದಾರುಣ ಘಟನೆ ನಡೆದಿದೆ. ಮಂಗಳವಾರ ಸಂಜೆ 22 ವರ್ಷದ ದಲಿತ ಯುವತಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದಾರೆ. ಬಳಿಕ ಆಕೆಯನ್ನು ಅವಳ ಮನೆ ಬಾಗಿಲಿಗೆ ತಂದು ಎಸೆಯುವ ಕ್ರೌರ್ಯ ಮೆರೆದಿದ್ದಾರೆ. ಅವರ ಕುಟುಂಬದವರು ಯುವತಿಯನ್ನು ಲಖನೌನ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಯುವತಿಗೆ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಾಲೇಜಿಗೆ ಪ್ರವೇಶಾತಿ ಪಡೆಯಲು ಬೆಳಗ್ಗೆ ಹೋಗಿದ್ದ ಯುವತಿಯನ್ನು ಅಪಹರಣ ಮಾಡಲಾಗಿತ್ತು. ಆಕೆ ಸಂಜೆಯಾದರೂ ಮನೆಗೆ ವಾಪಸ್ಸಾಗದಿದ್ದಾಗ ಕುಟುಂಬದವರಿಗೆ ದಿಗಿಲಾಗಿದೆ. ಶೋಧ ಕಾರ್ಯ ನಡೆಸುತ್ತಿದ್ದಾಗ ಸಂಜೆ 7 ಗಂಟೆ ಸುಮಾರಿಗೆ ಹಲ್ಲೆಕೋರರು ಇ- ರಿಕ್ಷಾದಲ್ಲಿ ಆಕೆಯನ್ನು ಮನೆಯ ಮುಂದೆ ಎಸೆದು ಹೋಗಿದ್ದರು. ಆಕೆಯ ಕಾಲು, ಬೆನ್ನಿನ ಮೇಲೆ ಹಲ್ಲೆ ನಡೆಸಲಾಗಿತ್ತು. ಆಟೋ ರಿಕ್ಷಾ ಚಾಲಕ ಮನೆಯ ಮುಂಭಾಗ ಆಕೆಯನ್ನು ಎಸೆದು ಹೋಗಿದ್ದ.ಆಕೆಗೆ ಎದ್ದು ನಿಲ್ಲುಲು ಅಥವಾ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಅತ್ಯಾಚಾರಕ್ಕೊಳಗಾದ ಯುವತಿಯ ತಾಯಿ ಕಣ್ಣೀರು ಹಾಕಿದ್ದಾರೆ. ನಂತರ ಸ್ಥಳೀಯ ಆಸ್ಪತ್ರೆಗೆ ಆಕೆಯನ್ನು ಸಾಗಿಸಲಾಯಿತು. ಆದರೆ, ಆಕೆಯ ಸ್ಥಿತಿ ಗಂಭೀರವಾಗಿದ್ದು, ಲಖನೌ ಆಸ್ಪತ್ರೆಗೆ ಕೊಂಡೊಯ್ಯುವಂತೆ ಡಾಕ್ಟರ್ ಸಲಹೆ ನೀಡಿದರು. ಆದರೆ, ಲಖನೌ ಆಸ್ಪತ್ರೆಗೆ ಕೊಂಡೊಯ್ಯುವ ಸಿದ್ಧತೆ ಸುಡೆಸುವಾಗಲೇ, ಬಲರಾಮಪುರದಲ್ಲಿಯೇ ಯುವತಿ ಸಾವನ್ನಪ್ಪಿದ್ದಾಗಿ ತಾಯಿ ತಿಳಿಸಿದರು. ಮೃತದೇಹವನ್ನು ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸಿದ ಬಳಿಕ ಬುಧವಾರ ಅಂತ್ಯಕ್ರಿಯೆ ನಡೆಸಲಾಗಿದೆ. ಈ ಪ್ರಕರಣ ಸಂಬಂಧ ಯೋಗಿ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ದಾಳಿ ನಡೆಸಿದ್ದು, 'ಈ ಪ್ರಕರಣವನ್ನೂ ಹತ್ರಾಸ್‌ ಪ್ರಕರಣದಂತೆ ಮಾಡಬೇಡಿ, ಕ್ಷಿಪ್ರಗತಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಎಸ್ ಪಿ ವರಿಷ್ಠೆ ಮಾಯಾವತಿ ತೀವ್ರವಾಗಿ ಯೋಗಿ ಆದಿತ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ವಿರುದ್ಧ ದಾಳಿ ನಡೆಸಿರುವ ಸೋನಿಯಾಗಾಂಧಿ, ರಾಜ್ಯಸರ್ಕಾರದಿಂದ ವರದಿ ಪಡೆದು ಸಿಬಿಐ ತನಿಖೆಗೆ ನಡೆಸಲು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.


from India & World News in Kannada | VK Polls https://ift.tt/3l3gzZI

ಶಿವಮೊಗ್ಗದಲ್ಲಿ ಇಂದಿರಾ ಕ್ಯಾಂಟೀನ್‌ ಮುಚ್ಚೋ ಭೀತಿ: ಆರು ಕ್ಯಾಂಟೀನ್‌ ಸೇರಿ 48 ಲಕ್ಷ ರೂ. ಬಿಲ್‌ ಬಾಕಿ

ಆತೀಶ್‌ ಬಿ. ಕನ್ನಾಳೆ ಶಿವಮೊಗ್ಗ: ಇಂದಿರಾ ಕ್ಯಾಂಟೀನ್‌ಗಳ ಸ್ಥಿತಿ ಗಂಭೀರವಾಗಿದೆ. ಜಿಲ್ಲೆಯಲ್ಲಿ ಆರು ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಎರಡು ತಿಂಗಳು ಸೇರಿ ಒಟ್ಟು 48 ಲಕ್ಷ ರೂ. ಬಿಲ್‌ ಬಾಕಿ ಇದೆ. ಮೊದಲೇ ಕೋವಿಡ್‌ನಿಂದಾಗಿ ಕ್ಯಾಂಟೀನ್‌ ಉಸ್ತುವಾರಿ ವಹಿಸಿಕೊಂಡಿರುವವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ತಿಂಗಳುಗಟ್ಟಲೇ ಹಣ ಬಾರದೇ ಸೇವೆ ನೀಡುವುದು ಅವರ ಪಾಲಿಗೂ ಕಷ್ಟಕರವಾಗಿದೆ. ಶಿವಮೊಗ್ಗ ನಗರದಲ್ಲಿರುವ ನಾಲ್ಕು ಕ್ಯಾಂಟೀನ್‌ ಸೇರಿ ನಿತ್ಯ ಬೆಳಗ್ಗೆ 1600, ಮಧ್ಯಾಹ್ನ 1200 ಮತ್ತು ಸಂಜೆ 400 ಊಟಕ್ಕೆ ಬೇಡಿಕೆ ಇದೆ. ಅದರಂತೆ ನಿತ್ಯ ಹಸಿದು ಬಂದವರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವ ಕೆಲಸ ಮಾಡಲಾಗುತ್ತಿದೆ. ಭದ್ರಾವತಿಯಲ್ಲಿ ಕ್ಯಾಂಟೀನ್‌ ಆರಂಭಗೊಂಡು ಒಂದು ವರ್ಷ ಗತಿಸಿದ್ದು, ಎಂಟು ತಿಂಗಳ 28 ಲಕ್ಷ ರೂ. ಬಾಕಿ ಇದೆ. ಅಲ್ಲಿ ನಿತ್ಯ ಬೆಳಗ್ಗೆ 650-700, ಮಧ್ಯಾಹ್ನ 350 ಮತ್ತು ಸಂಜೆ 100 ಊಟಕ್ಕೆ ಬೇಡಿಕೆ ಇದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಹೆಚ್ಚೆಂದರೆ ಆರೇಳು ತಿಂಗಳು ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸಲು ಸಾಧ್ಯ ಎನ್ನುವುದು ನಿರ್ವಹಣೆ ಹೊತ್ತವರ ಅಭಿಪ್ರಾಯವಾಗಿದೆ. ಕಡಿಮೆ ದರದಲ್ಲಿ ಊಟ ಕಲ್ಪಿಸುವ ಕ್ಯಾಂಟೀನ್‌ಗಳು ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಪ್ರಯಾಣಿಕರು ಸೇರಿದಂತೆ ಹಲವರ ಪಾಲಿಗೆ ಕಾಮಧೇನುವಿನಂತೆ ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ಕೋವಿಡ್‌ ಕಷ್ಟ ಕಾಲದಲ್ಲಿ ಹೋಟೆಲ್‌ಗಳನ್ನು ಹಲವು ತಿಂಗಳುಗಳ ಕಾಲ ಬಂದ್‌ ಮಾಡಲಾಗಿತ್ತು. ಈ ವೇಳೆ, ಬಸ್‌ ನಿಲ್ದಾಣ, ಎಪಿಎಂಸಿ ಮತ್ತಿತರ ಕಡೆ ಕೆಲಸ ಮಾಡುವ ಕಾರ್ಮಿಕರಿಗೆ ಅನ್ನ ನೀಡಿದ್ದೇ ಈ ಕ್ಯಾಂಟೀನ್‌ಗಳು. ಆದರೆ, ಬಿಲ್‌ಗಳನ್ನು ಸಲ್ಲಿಸಿದರೂ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ. ಇನ್ನೂ ಶುರುವಾಗದ ಕ್ಯಾಟೀನ್‌ ಸಾಗರದಲ್ಲಿ ಇಂದಿರಾ ಕ್ಯಾಂಟೀನ್‌ ಕಟ್ಟಡ ಸಿದ್ಧಗೊಂಡು ಒಂದು ವರ್ಷ ಗತಿಸಿದೆ. ಆದರೆ, ಇದುವರೆಗೆ ಅದನ್ನು ಹಸ್ತಾಂತರ ಮಾಡದೇ ಇರುವುದರಿಂದ ಸಾರ್ವಜನಿಕರಿಗೆ ಇದರ ಸೌಲಭ್ಯ ಪ್ರಾಪ್ತವಾಗಿಲ್ಲ. ಇನ್ನುಳಿದಂತೆ, ಶಿಕಾರಿಪುರ, ಸೊರಬದಲ್ಲಿ ತಲಾ ಒಂದು ಕ್ಯಾಂಟೀನ್‌ ನಿರ್ಮಾಣ ಹಂತದಲ್ಲಿವೆ. ತೀರ್ಥಹಳ್ಳಿಯಲ್ಲಿ ಇನ್ನೂ ಸ್ಥಳ ಹುಡುಕಾಟ ನಡೆದಿದೆ. ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ನಿಂದ ಬಡವರಿಗೆ ಪ್ರಯೋಜನವಾಗುತ್ತಿದೆ. ಆದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೂ ಹಲವು ಶಿವಮೊಗ್ಗ, ಭದ್ರಾವತಿ ಹೊರತು ಎಲ್ಲಿಯೂ ಈ ಸೇವೆಯೇ ಜನರಿಗೆ ಸಿಗುತ್ತಿಲ್ಲ. ಭದ್ರಾವತಿಯದ್ದು ಕಳೆದ 8 ತಿಂಗಳ 28 ಲಕ್ಷ ರೂ. ಹಾಗೂ ಶಿವಮೊಗ್ಗದ ನಾಲ್ಕು ಕ್ಯಾಂಟೀನ್‌ ಸೇರಿ ಎರಡು ತಿಂಗಳ ಒಟ್ಟು 20 ಲಕ್ಷ ರೂ. ಹಣ ಬರುವುದು ಬಾಕಿ ಇದೆ. ಮಹಾನಗರ ಪಾಲಿಕೆಗೆ ಬಿಲ್‌ ನೀಡಲಾಗಿದೆ. ಶರತ್‌ ಎಸ್‌. ವ್ಯವಸ್ಥಾಪಕರು, ಇಂದಿರಾ ಕ್ಯಾಂಟೀನ್‌, ಶಿವಮೊಗ್ಗ


from India & World News in Kannada | VK Polls https://ift.tt/30nVykz

ಕೆಕೆಆರ್‌ ವಿರುದ್ಧ ಸ್ಟನ್ನಿಂಗ್‌ ಕ್ಯಾಚ್‌ ಹಿಡಿದ ಸಂಜುಗೆ ವಿಶೇ‍ಷ ಸಂದೇಶ ಕಳುಹಿಸಿದ ತೆಂಡೂಲ್ಕರ್‌!

ಹೊಸದಿಲ್ಲಿ: ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್‌ ಪಂಜಾಬ್‌ ವಿರುದ್ಧ ಸಿಡಿಸಿದ ಎರಡು ಸ್ಪೋಟಕ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ನ ಆರಂಭಿಕ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಅದೇ ರೀತಿ ಬುಧವಾರ ರಾತ್ರಿ ವಿರುದ್ಧ ಸಂಜು ಸ್ಯಾಮ್ಸನ್‌ ಅವರಿಂದ ಅದೇ ಆಟವನ್ನು ನಿರೀಕ್ಷಿಸಲಾಗಿತ್ತು. ಆದರೆ, ಅವರು ನಿರೀಕ್ಷೆ ಹುಸಿಗೊಳಿಸಿದರು. ಬಲಗೈ ಬ್ಯಾಟ್ಸ್‌ಮನ್‌ ಕೇವಲ 9 ರನ್‌ಗಳಿಗೆ ಸೀಮಿತರಾದರು. ಕೇರಳ ಬ್ಯಾಟ್ಸ್‌ಮನ್‌ ಮೂಲತಃ ವಿಕೆಟ್‌ ಕೀಪರ್ ಆಗಿದ್ದು, ಒಳ್ಳೆಯ ಫೀಲ್ಡರ್‌ ಆಗದ್ದಾರೆ. ಕೋಲ್ಕತಾ ನೈಟ್‌ ರೈಡರ್ಸ್ ಇನಿಂಗ್ಸ್‌ನಲ್ಲಿ ಪ್ಯಾಟ್‌ ಕಮಿನ್ಸ್ ಅವರ ಕ್ಯಾಚ್‌ ಅನ್ನು ಸಂಜು ಸ್ಯಾಮ್ಸನ್‌ ಅದ್ಭುತವಾಗಿ ಹಿಡಿದಿದ್ದರು. ಇಯಾನ್‌ ಮಾರ್ಗನ್‌ ಜತೆ ಸೇರಿ ಪ್ಯಾಟ್‌ ಕಮಿನ್ಸ್ 34 ರನ್‌ಗಳ ಜತೆಯಾಟವಾಡಿದ್ದರು. 18ನೇ ಓವರ್‌ನಲ್ಲಿ ಟಾಮ್‌ ಕರನ್‌ ಎಸೆತದಲ್ಲಿ ಪ್ಯಾಟ್‌ ಕಮಿನ್ಸ್ ಬೌಂಡರಿಯತ್ತ ಹೊಡೆದ ಚೆಂಡನ್ನು ಸಂಜು ಸ್ಯಾಮ್ಸನ್‌ ಅದ್ಭುತವಾಗಿ ಹಿಡಿದಿದ್ದರು. ಕ್ಯಾಚ್‌ ಹಿಡಿಯುವ ವೇಳೆ ಸಂಜು ಸ್ಯಾಮ್ಸನ್‌ ಚೆಂಡನ್ನು ಸರಿಯಾದ ವಿಧಾನವನ್ನು ಅನುಸರಿಸುವಲ್ಲಿ ವಿಫಲರಾಗಿದ್ದರು. ಹಾಗಾಗಿ, ಕ್ಯಾಚ್‌ ಹಿಡಿದ ಬಳಿಕ ನಿಯಂತ್ರಣ ತಪ್ಪಿ ನೆಲಕ್ಕೆ ಉರುಳಿದರು. ತಲೆ ನೆಲಕ್ಕೆ ಜೋರಾಗಿ ತಾಗಿತು. ಇದರ ಹೊರತಾಗಿಯೂ ಅವರು ಇನಿಂಗ್ಸ್‌ನ ಇನ್ನುಳಿದ ಭಾಗದಲ್ಲಿ ಫೀಲ್ಡಿಂಗ್‌ ಮಾಡಿದ್ದರು. ಸಂಜು ಸ್ಯಾಮ್ಸನ್‌ ಅವರ ಕ್ಯಾಚ್‌ಗೆ ಕೂಡ ಶ್ಲಾಘಿಸಿದ್ದಾರೆ. "ಸಂಜು ಸ್ಯಾಮ್ಸನ್ ಕ್ಯಾಚ್‌ ಹಿಡಿಯುತ್ತಿದ್ದ ವೇಳೆ ಅವರ ತಲೆಗೆ ಎಷ್ಟರ ಪ್ರಮಾಣದಲ್ಲಿ ನೋವಾಗಿದೆ ಎಂಬ ಬಗ್ಗೆ ನನಗೆ ಅರಿವಿದೆ. 1992 ವಿಶ್ವಕಪ್‌ ಟೂರ್ನಿಯ ವೆಸ್ಟ್ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ನಾನೂ ಇದೇ ರೀತಿ ಕ್ಯಾಚ್‌ ಹಿಡಿದಿದ್ದೆ. ಇದೇ ಅನುಭವ ನನಗೂ ಆಗಿದೆ," ಎಂದು ಸಂಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿದ್ದಾರೆ. ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತಾ ನೈಟ್‌ ರೈಡರ್ಸ್ ತಂಡ ನಿಗದಿತ 20 ಓವರ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು 174 ರನ್‌ಗಳನ್ನು ಗಳಿಸಿತು. ಶುಭಮನ್‌ ಗಿಲ್‌ 47 ರನ್‌ಗಳು ಕೆಕೆಆರ್‌ನ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಇನಿಂಗ್ಸ್‌ ಕೊನೆಯ ಹಂತದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಇಯಾನ್‌ ಮಾರ್ಗನ್‌ 23 ಎಸೆತಗಳಲ್ಲಿ 34 ರನ್‌ಗಳನ್ನು ಗಳಿಸಿದರು. ಪರ ಅತ್ಯುತ್ತಮವಾಗಿ ಬೌಲಿಂಗ್‌ ಮಾಡಿದ ಜೋಫ್ರಾ ಆರ್ಚರ್‌ 18 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಬಳಿಕ ಗುರಿ ಹಿಂಬಾಲಿಸಿದ ರಾಜಸ್ಥಾನ್‌ ರಾಯಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 137 ರನ್‌ಗಳಿಗೆ ಸೀಮಿತವಾಯಿತು. ಅಂತಿಮವಾಗಿ ಕೆಕೆಆರ್‌ 37 ರನ್‌ಗಳಿಂದ ಸೋಲು ಅನುಭವಿಸಿತ್ತು. ರಾಜಸ್ಥಾನ್‌ ರಾಯಲ್ಸ್ ಪರ 34 ಎಸೆತಗಳಲ್ಲಿ 56 ರನ್‌ಗಳನ್ನು ಗಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Se5GIf

ಕೋವಿಡ್‌: ದೇಶದಲ್ಲಿ ಎರಡನೇ ಸ್ಥಾನದಲ್ಲಿ ಕರ್ನಾಟಕ, ರಾಜ್ಯ ಸರ್ಕಾರ ಎಡವಿದ್ದೆಲ್ಲಿ?

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ -19 ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗುತ್ತಿದ್ದು ದೇಶದಲ್ಲಿ ಎರಡನೇ ಸ್ಥಾನದಲ್ಲಿ ಕರ್ನಾಟಕವಿದೆ. ಲಾಕ್‌ಡೌನ್‌ ತೆರವು ಬಳಿಕ ಪ್ರತಿನಿತ್ಯ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಜನರ ನಿರ್ಲಕ್ಷ್ಯತನ, ಸರ್ಕಾರದ ನಿಗಾ ಕ್ರಮದಲ್ಲಾದ ಬದಲಾವಣೆ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗುತ್ತಿದೆ. ಈ ನಡುವೆ ಅನ್‌ಲಾಕ್‌ 5 ಜಾರಿಗೆ ಬಂದಿದ್ದು ಸೋಂಕು ನಿಯಂತ್ರಣ ಮಾಡುವುದು ರಾಜ್ಯ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಸೆಪ್ಟಂಬರ್ 30 ರ ವರದಿ ಪ್ರಕಾರ ರಾಜ್ಯದಲ್ಲಿ ಒಟ್ಟು ಸಕ್ರೀಯ ಪ್ರಕರಣಗಳು 107616 ರಷ್ಟಿವೆ. ಬುಧವಾರದಂದು 8856 ಪ್ರಕರಣಗಳು ವರದಿಯಾಗಿವೆ. ಇದುವರೆಗೆ ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 601767 ಕ್ಕೆ ಏರಿಕೆಯಾಗಿದೆ. ಈ ಪೈಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 4,85,268 ಮಂದಿ ಗುಣಮುಖರಾಗಿದ್ದಾರೆ. ಇನ್ನು ಸಾವಿನ ಪ್ರಮಾಣದಲ್ಲೂ ಏರಿಕೆಯಾಗುತ್ತಿದೆ. ಸೆ. 30 ರಂದು 87 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 8864 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇನ್ನು ಕೋವಿಡ್‌ ಸೋಂಕಿಗೆ ತುತ್ತಾಗಿ ಐಸಿಯುನಲ್ಲಿ 821 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜನರ ನಿರ್ಲಕ್ಷದಿಂದ ಕೋವಿಡ್‌ ಹೆಚ್ಚಳ ? ಕೋವಿಡ್‌ ಪ್ರಕರಣಗಳು ತೀವ್ರ ಸ್ವರೂಪದಲ್ಲಿ ಇದ್ದಾಗ ಜನರು ಕೊಂಚ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಜನರಲ್ಲೂ ನಿರ್ಲಕ್ಷ್ಯತನ ಹೆಚ್ಚಾಗಿ ಕಂಡುಬರುತ್ತಿದೆ. ಕೋವಿಡ್‌ಗೆ ಆತಂಕ, ಭಯ ಪಡಬೇಕಾದ ಅಗತ್ಯ ಇಲ್ಲ ನಿಜ. ಆದರೆ ಕನಿಷ್ಠ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ. ಆದರೆ ಈ ಬಗ್ಗೆ ಅರಿವು ಮೂಡಿಸಿದರೂ ಅದು ಪಾಲನೆ ಆಗುತ್ತಿಲ್ಲ. ನಗರ ಭಾಗಗಳಲ್ಲಿ ಮಾಸ್ಕ್ ಧರಿಸುತ್ತಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಮಾಸ್ಕ್‌ ಧರಿಸುವುದು ತೀರಾ ವಿರಳ. ಜನಪ್ರತಿನಿಧಿಗಳು ಮಾದರಿಯಾಗಲಿ ಕೋವಿಡ್ ನಿಯಂತ್ರಣ ಮಾಡುವಲ್ಲಿ ಸಹಕಾರ ನೀಡುವುದು ಜನರ ಕರ್ತವ್ಯ ಮಾತ್ರವಲ್ಲ ಜನಪ್ರತಿನಿಧಿಗಳು ಕೂಡಾ ಇದಕ್ಕೆ ಮಾದರಿಯಾಗಬೇಕು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಜನಪ್ರತಿನಿಧಿಗಳು ನಡೆದುಕೊಳ್ಳುತ್ತಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ ನಂತಹ ರಾಜಕೀಯ ಪಕ್ಷಗಳ ಮುಖಂಡರ ಬೇಜಾವಾಬ್ದಾರಿತನ ನಡವಳಿಕೆ ಇದಕ್ಕೆ ಸಾಕ್ಷಿಯಾಗಿದೆ. ಮೆರವಣಿಗೆ ನಡೆಸಲು ಅವಕಾಶ ಇಲ್ಲದೆ ಇದ್ದರೂ ಜಾವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ತೇಜಸ್ವಿ ಸೂರ್ಯ ಅವರನ್ನು ಬುಧವಾರ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಕ್ಷದ ಕಚೇರಿಗೆ ಕರೆತಂದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಕಾಂಗ್ರೆಸ್ ಜೆಡಿಎಸ್ ಪಕ್ಷದ ಮುಖಂಡರು ಇದಕ್ಕೆ ಹೊರತಾಗಿಲ್ಲ. ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಕೋವಿಡ್‌ ತೀವ್ರ ಸ್ವರೂಪದಲ್ಲಿ ಹರಡುತ್ತಿರುವುದರಿಂದ ಅದರ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈಗಾಗಲೇ ಕೆಲವೊಂದು ಸೂಚನೆಗಳನ್ನು ಸರ್ಕಾರ ನೀಡಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದೆ. ಆದರೆ ಇಷ್ಟೇ ಸಾಲದು, ಅನ್‌ಲಾಕ್‌ ನಡುವೆಯೂ ಕೋವಿಡ್‌ ಹರಡದಂತೆ ತಡೆಯುವ ನಿಟ್ಟಿನಲ್ಲಿ ಕೆಲವೊಂದು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸಾರ್ವಜನಿಕರಲ್ಲಿ ಈ ಕುರಿತಾಗಿ ಸೂಕ್ತ ಅರಿವು ಮೂಡಿಸಬೇಕಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಹೊಟೇಲ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕಾಗಿದೆ. ರಾಜಕೀಯ ಸಭೆ ಸಮಾರಂಭಗಳಿಗೂ ನಿಯಂತ್ರಣ ಹೇರಬೇಕಾಗಿದೆ. ಇಲ್ಲದೇ ಹೋದರೆ ಪರಿಣಾಮ ದುಬಾರಿಯಾಗಿ ಪರಿಣಮಿಸಬಹುದು.


from India & World News in Kannada | VK Polls https://ift.tt/2Sgy8ta

ಅಕ್ಟೋಬರ್ 31ರವರೆಗೆ ಅಂತರಾಷ್ಟ್ರೀಯ ವಿಮಾನ ಸಂಚಾರ ನಿಷೇಧ: ಡಿಜಿಸಿಎ

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದು ಭಾರೀ ಕಳವಳ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಇದೀಗ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನ ಸೇವೆಗಳ ಸಂಚಾರದ ಮೇಲಿನ ನಿರ್ಬಂಧವನ್ನು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯವು () ಅಕ್ಟೋಬರ್ 31ರವರೆಗೂ ವಿಸ್ತರಿಸಿ ಆದೇಶಿಸಿದೆ. ಬುಧವಾರ ಅನ್‌ಲಾಕ್ 5ರ ಮಾರ್ಗಸೂಚಿಗಳನ್ನು ಗೃಹ ಸಚಿವಾಲಯ ಬಿಡುಗಡೆಗೊಳಿಸಿದ ಬೆನ್ನಲ್ಲೆ ಡಿಜಿಸಿಎ ತನ್ನ ಆದೇಶವನ್ನು ಹೊರಡಿಸಿದೆ. ಇನ್ನು ಪ್ರಯಾಣಿಕರ ವೈಮಾನಿಕ ಪ್ರಯಾಣಕ್ಕೆ ಅನ್‌ಲಾಕ್‌ ಮಾರ್ಗಸೂಚಿಯಂತೆ ಅನುಮತಿ ಇರುವುದಿಲ್ಲ. ಅದಾಗ್ಯೂ ಗೃಹ ಸಚಿವಾಲಯದಿಂದ ಅನುಮತಿ ಪಡೆದವರು ಮಾತ್ರವೇ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ ಎಂದು ಡಿಜಿಸಿಎ ತಿಳಿಸಿದೆ. ಇನ್ನು ಸರಕು ಸಾಗಣೆ ವಿಮಾನಗಳ ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಕೂಡ ಸಂಸ್ಥೆ ತಿಳಿಸಿದೆ. ಈಗಾಗಲೇ ವಿವಿಧ ದೇಶಗಳ ನಡುವೆ ವಿಮಾನ ಸಂಚಾರ ನಡೆಸುವ ಏರ್ ಬಬಲ್ ಒಪ್ಪಂದಗಳನ್ನು ಭಾರತ ಮಾಡಿಕೊಂಡಿದ್ದು, ಅದು ಮುಂದುವರಿಯಲಿದೆ. ಈ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಯಾವುದೆ ತೊಡಕು ಇರುವುದಿಲ್ಲ ಎಂದು ಡಿಜಿಸಿಎ ಹೇಳಿದೆ. ಕೊರೊನಾ ಆರಂಭವಾದ ನಂತರ ಅಂತರಾಷ್ಟ್ರೀಯ ವಿಮಾನ ಸಂಚಾರಕ್ಕೆ ಬ್ರೇಕ್‌ ಹಾಕಲಾಗಿತ್ತು. ಬಳಿಕ ವಂದೇ ಭಾರತ್‌ ಮಿಷನ್‌ ಮೂಲಕ ಅನೇಕ ಭಾರತೀಯರನ್ನು ವಿದೇಶಗಳಿಂದ ಕರೆ ತರಲಾಯಿತು. ಇದೀಗ ಅನ್‌ಲಾಕ್‌ ಬಳಿಕ ಕೆಲವು ದೇಶಗಳಿಗೆ ವಿಮಾನ ಸಂಚಾರವಿದೆ.


from India & World News in Kannada | VK Polls https://ift.tt/33jJkLC

'ಅಂದು ಜೆಸ್ಸಿಕಾಳನ್ನು ಯಾರು ಕೊಂದಿಲ್ಲ, ಇಂದು ಯಾರೂ ಮಸೀದಿಯನ್ನು ಕೆಡವಿಲ್ಲ': ಚಿದಂಬರಂ ಟಾಂಗ್‌

ಹೊಸದಿಲ್ಲಿ: ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಜೆಸ್ಸಿಕಾಳ ಸಾವಿನ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಬಾಬ್ರಿ ಮಸೀದಿ ಧ್ವಂಸ ತೀರ್ಪಿಗೆ ತನ್ನದೆ ರೀತಿಯಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವ್ಯಾಖ್ಯಾನ ನೀಡಿದ್ದಾರೆ. "ಅಂದು ನೋ ವನ್‌ ಕಿಲ್ಲ್‌ಡ್‌ ಜೆಸ್ಸಿಕಾ(ಯಾರೂ ಜೆಸ್ಸಿಕಾಳನ್ನು ಕೊಂದಿಲ್ಲ) ಎನ್ನುವ ಬೇಗುದಿಯ ಕೂಗು ಇಡೀ ದೇಶವ್ಯಾಪಿ ಕೇಳಿ ಬರುತ್ತಿತ್ತು. ಇಂದು ನೋ ವನ್‌ ಡೆಮಾಲಿಷ್‌ಡ್‌ ಮಾಸ್ಕ್(ಯಾರು ಮಸೀದಿ ಕೆಡವಿಲ್ಲ) ಅನ್ನುವ ಬೇಗುದಿಯ ಕೂಗು ಇದೀಗ ದೇಶ ವ್ಯಾಪಿಯಾಗಿ ಕೇಳಿಬರುತ್ತಿದೆ ಎಂದು ಕೋರ್ಟ್‌ ತೀರ್ಪು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಚಾರಣಾ ನ್ಯಾಯಾಲಯದ ತೀರ್ಪು ತರ್ಕ ಮತ್ತು ಸಾಮಾನ್ಯ ಜ್ಞಾನಕ್ಕೆ ಸವಾಲು ಒಡ್ಡಿದಂತಿದೆ. ಅಲ್ಲದೆ ಸುಪ್ರೀಂಕೋರ್ಟ್‌ ನಿರ್ಣಯಗಳನ್ನು ಇದು ತಳ್ಳಿಹಾಕಿದೆ ಎಂದು ಹೇಳಿದ್ದಾರೆ. ಮತ್ತೆ ನಮಸ್ತೆ ಟ್ರಂಪ್‌ ಮಾಡುತ್ತೀರಾ? ಇನ್ನು ಟ್ರಂಪ್‌ ವಿಚಾರವನ್ನು ಪ್ರಸ್ತಾಪಿಸಿ ಕೇಂದ್ರ ಸರಕಾರಕ್ಕೆ ಟಾಂಗ್‌ ನೀಡಿದ ಚಿದಂಬರಂ, ಡೊನಾಲ್ಡ್ ಟ್ರಂಪ್ ಭಾರತವನ್ನು ಚೀನಾ ಮತ್ತು ರಷ್ಯಾದೊಂದಿಗೆ ಸೇರಿಸಿ ಈ ಮೂರು ದೇಶಗಳು ಕೊರೊನಾ ಸಾವಿನ ಸಂಖ್ಯೆಯನ್ನು ಮರೆಮಾಡಿದೆ ಎಂದು ಆರೋಪಿಸಿದ್ದಾರೆ. ಈ ಮೂರು ದೇಶಗಳು ಹೆಚ್ಚು ವಾಯುಮಾಲಿನ್ಯಕ್ಕೆ ಕಾರಣವಾಗಿವೆ ಎಂದು ಕೂಡ ಟ್ರಂಪ್‌ ಆರೋಪಿಸಿದ್ದಾರೆ. ಮೋದಿಯವರೇ ಈಗ ತಮ್ಮ ಆತ್ಮೀಯ ಸ್ನೇಹಿತನನ್ನು ಗೌರವಿಸಲು ಮತ್ತೊಂದು ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತೀರಾ? ಎಂದು ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಬುಧವಾರ ಟ್ರಂಪ್‌ ಹಾಗೂ ಬಿಡೆನ್‌ ಅವರ ನಡುವೆ ಬಹಿರಂಗ ಚರ್ಚೆ ನಡೆದಿತ್ತು. ಈ ವೇಳೆ ಭಾರತವನ್ನು ಟ್ರಂಪ್‌ ಪ್ರಸ್ತಾಪಿಸಿದ್ದಾರೆ.


from India & World News in Kannada | VK Polls https://ift.tt/2HG6bZv

ರೈತ ಬೆಳೆ ಸಮೀಕ್ಷೆ ಆ್ಯಪ್ ಯಶಸ್ವಿ! ಪ್ರಾಯೋಗಿಕ ಹಂತದದಲ್ಲೇ ಶೇ.88ರಷ್ಟು ಪ್ರಗತಿ

ಬೆಂಗಳೂರು: “ನನ್ನ ಬೆಳೆ ನನ್ನ ಹಕ್ಕು” ಎಂದು ಹೆಮ್ಮೆಯಿಂದ ಹೇಳುವ ಕೃಷಿ ಸಚಿವ ಬಿ.ಸಿ.ಪಾಟೀಲರ ಮಹತ್ತರ ಯೋಜನೆಯಾದ ರೈತ ಬೆಳೆ ಸಮೀಕ್ಷೆ ಆ್ಯಪ್ ಸಮೀಕ್ಷೆ ಸೆ.23 ಕ್ಕೆ ಅಂತ್ಯಗೊಂಡಿದ್ದು, ಯಶಸ್ವಿಯಾಗಿದೆ. ಪ್ರಾಯೋಗಿಕ ಹಂತದಲ್ಲಿಯೇ ಶೇ.88 ಕ್ಕೂ ಹೆಚ್ಚಿನ ಪ್ರಗತಿ ಸಾಧಿಸಿರುವುದು ಕೇಂದ್ರದ ಗಮನ ಸೆಳೆದಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ. ರೈತರೇ ಮೊಬೈಲ್ ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಈ ಯೋಜನೆ ಕಡಿಮೆ ಅವಧಿಯಲ್ಲಿಯೇ ಇಡೀ ದೇಶದ ಗಮನ ಸೆಳೆದಿದೆ. ರೈತರೇ ಬೆಳೆ ಸಮೀಕ್ಷೆ ನಡೆಸುವ ಪ್ರಾಯೋಗಿಕ ಹಂತವನ್ನು ಈ ಬಾರಿ ಪರಿಚಯಿಸಲಾಗಿದ್ದು ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಮೊದಲ ಬಾರಿಗೆ ರೈತರೇ ಸ್ವತಃ ಬೆಳೆ ಸಮೀಕ್ಷೆ ನಡೆಸಿ ತಾವೇ ಪ್ರಮಾಣಪತ್ರ ನೀಡುವ ರೈತಬೆಳೆ ಸಮೀಕ್ಷೆ ಇದಾಗಿದ್ದು, ಕೇವಲ 1 ತಿಂಗಳು 15 ದಿನಗಳೊಳಗೆ ಕಳೆದ 2 ವರ್ಷ ಇತಿಹಾಸವನ್ನೇ ಈ ಸಮೀಕ್ಷೆ ಬದಲಿಸಿದೆ. ಅಂದಹಾಗೆ ಕಳೆದ ಆಗಸ್ಟ್ 15 ರಂದು ಇದಕ್ಕೆ ಚಾಲನೆ ನೀಡಲಾಗಿತ್ತಾದರೂ ಆಗಸ್ಟ್ ಅಂತ್ಯದಿಂದ ಇದು ಪರಿಣಾಮಕಾರಿಯಾಗಿ ಜಾರಿಯಾಗಿತ್ತು.ಮಳೆ, ನೆಟ್ವರ್ಕ್ ಸಮಸ್ಯೆ ಆರಂಭಿಕ ಹಂತದಲ್ಲಿ ಕಂಡುಬಂದಿತ್ತಾದರೂ ಇವೆಲ್ಲವನ್ನು ಸರಿಪಡಿಸಿಕೊಂಡು ಹಾಗೂ ರಾಜ್ಯದ್ಯಾಂತ ಬೆಳೆ ಸಮೀಕ್ಷೆಯನ್ನು ಉತ್ಸವದಂತೆ ಪರಿಗಣಿಸಿದ್ದರಿಂದ ಹಾಗೂ ಕೃಷಿ ಸಚಿವರು ಮತ್ತು ಇಲಾಖೆ ರೈತ ಬೆಳೆ ಸಮೀಕ್ಷೆ ಆ್ಯಪ್ ಗೆ ಹೆಚ್ಚಿನ ಒತ್ತು ನೀಡಿದ್ದರು. 2017 ರಿಂದ ರಾಜ್ಯದಲ್ಲಿ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಪ್ರಾರಂಭವಾಗಿದ್ದು, ಬರೀ 3 ಸಾವಿರ ಪ್ಲಾಟ್ ಗಳು ಸಮೀಕ್ಷೆಯಾಗಿದ್ದವು. ಮುಂಗಾರುಹಂಗಾಮಿಗೆ ಸರ್ಕಾರಿ ಅಧಿಕಾರಿಗಳನ್ನು ಉಪಯೋಗಿಸಿ ಸಮೀಕ್ಷೆ ಮಾಡಲಾಗುತ್ತಿತ್ತು. 2018 ರಲ್ಲಿ ಖಾಸಗಿ ವ್ಯಕ್ತಿಗಳ ಮೂಲಕ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿತ್ತು. 2019 ರಲ್ಲಿ ಪೂರ್ವ ಮುಂಗಾರು, ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಂಡು 2 ಕೋಟಿ 5 ಲಕ್ಷ ಪ್ಲಾಟ್ ಗಳ ಸರ್ವೆ ಮಾಡಲಾಗಿತ್ತು.ಇದಕ್ಕಾಗಿ 4 ತಿಂಗಳ ಸಮಯಾವಾಕಾಶ ನೀಡಲಾಗಿತ್ತು. ಆದರೆ ಈ ಬಾರಿ ರೈತರೇ ಸ್ವತಃ ತಾವೇ ಬೆಳೆ ಸಮೀಕ್ಷೆ ನಡೆಸುವ ಯೋಜನೆ ಇದಾಗಿದ್ದು, 1 ಕೋಟಿ 83 ಲಕ್ಷಕ್ಕೂ ಹೆಚ್ಚಿನ ಪ್ಲಾಟ್ ಗಳನ್ನು ರೈತರೇ ಅಪ್ಲೋಡ್ ಮಾಡಿದ್ದಾರೆ. 2 ಕೋಟಿ 1 0 ಲಕ್ಷ ಗುರಿಯಿದ್ದು, ಕಡಿಮೆ ಅವಧಿಯಲ್ಲಿಯೇ 1 ಕೋಟಿ 83 ಲಕ್ಷಕ್ಕೂ ಹೆಚ್ಚಿನ ಪ್ಲಾಟ್ ಗಳು ಅಂದರೆ ನಿಗದಿತ ಕಡಿಮೆ ಅವಧಿಯಲ್ಲಿ ಶೇ.88 ಕ್ಕೂ ಪ್ಲಾಟ್ ಸಮೀಕ್ಷೆಯಲ್ಲಿ ಅಪ್ಲೋಡ್ ಆಗಿ ಸಾಧನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮುಂಗಾರು, ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಂಡು 2 ಕೋಟಿ 5 ಲಕ್ಷ ಪ್ಲಾಟ್ ಗಳ ಸರ್ವೆ ಮಾಡಲಾಗಿತ್ತು. ಕಳೆದ ಬಾರಿ ಬೆಳೆ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶದಿಂದ ಕೋವಿಡ್ 19 ಸಂದರ್ಭದಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ತಲಾ 5 ಸಾವಿರದಂತೆ 7 ಲಕ್ಷದ 29 ಸಾವಿರ ರೈತರಿಗೆ ನೇರವಾಗಿ ಅವರ ಖಾತೆಗೆ ಪರಿಹಾರ ನೀಡಲು ಅನುಕೂಲವಾಗಿದೆ. ಕಳೆದ ಬಾರಿಯ ದತ್ತಾಂಶ ಉಪಯೋಗಿಸಿಕೊಂಡು 5ಲಕ್ಷದ 81 ಸಾವಿರದ 896 ರೈತ ಫಲಾನುಭವಿಗಳಿಗೆ 3 164.27 ಕೋಟಿ ಮೌಲ್ಯದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬತ್ತ, ರಾಗಿ, ತೊಗರಿ, ಬಿಳಿಜೋಳ ಖರೀದಿ ಮಾಡಿ ರೈತರ ಖಾತೆಗೆ ನೇರವಾಗಿ ಹಣವರ್ಗಾಯಿಸಲಾಗಿದೆ. ತೋಟಗಾರಿಕಾ ಬೆಳೆಗಳಾದ 20,292 ಹೂಬೆಳೆಗಾರರಿಗೆ 14.50 ಕೋಟಿ ರೂ. 35,819 ತರಕಾರಿ ಬೆಳೆಗಾರರಿಗೆ 31.04 ಕೋಟಿ ರೂ. 35,959 ಹಣ್ಣುಬೆಳೆಗಾರರಿಗೆ 26.55 ಕೋಟಿ ರೂ. ಒಟ್ಟು 92,070 ಫಲಾನುಭವಿಗಳಿಗೆ 72.09 ಕೋಟಿ ರೂ. ಮೌಲ್ಯದ ಪರಿಹಾರ ನೀಡಲು ಸಾಧ್ಯವಾಗಿತ್ತು.2019 ರ ಬೆಳೆ ವಿಮೆ ಯೋಜನೆಗೆ 1,33,717 ರೈತರಿಗೆ ಬೆಳೆ ಸಮೀಕ್ಷೆ ದತ್ತಾಂಶವನ್ನು ತಾಳೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಈ ಬಾರಿಯ ದತ್ತಾಂಶವನ್ನು ಬೆಳೆ ವಿಮೆ ಯೋಜನೆ ಇತ್ಯರ್ಥಪಡಿಸಲು, ಪ್ರಾಕೃತಿಕ ವಿಕೋಪ ಹಾನಿ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಹಾರ ಪಡೆಯಲು, ರಾಜ್ಯ ಹಾಗೂ ಕೇಂದ್ರ ಬೆಳೆ ಆಧಾರಿತ ಪ್ರೋತ್ಸಾಹ ಧನ ನೀಡಲು, ರಾಜ್ಯದ ಬೆಳೆ ವಿಸ್ತೀರ್ಣ ಮರುಹೊಂದಾಣಿಕೆ ಹಾಗೂ ಬೆಳೆ ಉತ್ಪಾದನೆ ಲೆಕ್ಕಹಾಕಲು ಬಳಸಿಕೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.


from India & World News in Kannada | VK Polls https://ift.tt/3kYPpDt

ನಗರದಲ್ಲಿ ಮತ್ತೆ ಪ್ಲಾಸ್ಟಿಕ್‌ ಕಿರಿಕಿರಿ: ಪಾಲಿಕೆ ಅಧಿಕಾರಿಗಳು ಕೋವಿಡ್‌ ನಿಯಂತ್ರಣದಲ್ಲಿ ಬ್ಯುಸಿ!

ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರು: ರಾಜಧಾನಿಗೆ ಕೊರೊನಾ ಸೋಂಕು ಲಗ್ಗೆ ಇಟ್ಟ ಬಳಿಕ ಬಿಬಿಎಂಪಿಯು ಪ್ಲಾಸ್ಟಿಕ್‌ ವಸ್ತುಗಳ ತಯಾರಕರು, ಮಾರಾಟಗಾರರು ಮತ್ತು ಬಳಕೆದಾರರ ವಿರುದ್ಧದ ಕಾರ್ಯಾಚರಣೆಗೆ ಇತಿಶ್ರೀ ಹಾಡಿದೆ. ಪರಿಣಾಮ, ನಗರದೆಲ್ಲೆಡೆ ಪ್ಲಾಸ್ಟಿಕ್‌ ಹಾವಳಿ ಮಿತಿಮೀರಿದೆ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು ಪ್ಲಾಸ್ಟಿಕ್‌ ವಸ್ತುಗಳ ತಯಾರಿಕೆ, ಮಾರಾಟ, ದಾಸ್ತಾನು, ಸಾಗಣೆ ಮತ್ತು ಬಳಕೆಯನ್ನು ನಿಷೇಧಿಸಿ 2016ರ ಮಾ.11ರಂದು ಅಧಿಸೂಚನೆ ಹೊರಡಿಸಿತು. ಪ್ಲಾಸ್ಟಿಕ್‌ ನಿಷೇಧದ ಕಾನೂನು ಜಾರಿಗೊಂಡು 4 ವರ್ಷ ಕಳೆದರೂ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ತಯಾರಕರು ಮತ್ತು ವ್ಯಾಪಾರಿಗಳು ದಾಳಿ, ದಂಡಕ್ಕೂ ಜಗ್ಗುತ್ತಿಲ್ಲ. ಹೀಗಾಗಿ, ಪ್ಲಾಸ್ಟಿಕ್‌ ವಸ್ತುಗಳಿಗೆ ಕಡಿವಾಣವೇ ಬೀಳದಂತಾಗಿದೆ. 2019ರಲ್ಲಿ ಆಗಿನ ಮೇಯರ್‌ ಗಂಗಾಂಬಿಕೆ ಅವರು ಪ್ಲಾಸ್ಟಿಕ್‌ ವಿರುದ್ಧ ಸಮರ ಸಾರಿದ್ದರು. ಪ್ಲಾಸ್ಟಿಕ್‌ ತಯಾರಿಸುತ್ತಿದ್ದ ಘಟಕಗಳ ಮೇಲೆ ದಾಳಿ ನಡೆಸಿ, ಮುಚ್ಚಿಸಲಾಯಿತು. ದಂಡವನ್ನೂ ವಸೂಲು ಮಾಡಲಾಯಿತು. ಇದಲ್ಲದೆ, ಪ್ಲಾಸ್ಟಿಕ್‌ ಹಾಳೆ, ತಟ್ಟೆ, ಚಮಚ, ಪಾಲಿಥೀನ್‌ ಚೀಲ ಸೇರಿದಂತೆ ಇತರೆ ವಸ್ತುಗಳನ್ನು ಮಾರುತ್ತಿದ್ದವರಿಗೆ ದಂಡದ ಜತೆಗೆ ಪರವಾನಗಿ ರದ್ದುಗೊಳಿಸಿ ಬಿಸಿ ಮುಟ್ಟಿಸಲಾಯಿತು. ಈ ಎಲ್ಲ ಕ್ರಮಗಳಿಂದಾಗಿ ಕೊಂಚಮಟ್ಟಿಗೆ ಪ್ಲಾಸ್ಟಿಕ್‌ ಪೆಡಂಭೂತವನ್ನು ಹಿಮ್ಮೆಟ್ಟಿಸಲಾಯಿತು. ನಗರದಲ್ಲಿ ಒಂದೇ ಒಂದು ಪ್ಲಾಸ್ಟಿಕ್‌ ಕೈಚೀಲ ಕಂಡರೂ ಬಿಬಿಎಂಪಿ ವಿರುದ್ಧ ಕಠಿಣ ಕ್ರಮಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ(ಎನ್‌ಜಿಟಿ) ವರದಿ ನೀಡಲಾಗುವುದು ಎಂದು ಎನ್‌ಜಿಟಿ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಾಗಿದ್ದ ನಿವೃತ್ತ ನ್ಯಾ.ಸುಭಾಷ್‌ ಬಿ.ಅಡಿ 2019ರಲ್ಲಿಎಚ್ಚರಿಕೆ ನೀಡಿದ್ದರು. ಅಲ್ಲದೆ, ನಿಷೇಧಿತ ಪ್ಲಾಸ್ಟಿಕ್‌ ತಯಾರಿಸುವ ಕಾರ್ಖಾನೆಗಳು, ಪ್ಲಾಸ್ಟಿಕ್‌ ಬಳಸುತ್ತಿರುವ ಅಂಗಡಿಗಳ ಉದ್ದಿಮೆ ಪರವಾನಗಿ ರದ್ದು ಮಾಡಿ, ಅಧಿಕ ದಂಡ ವಿಧಿಸಲು 2018ರ ಜುಲೈನಲ್ಲಿ ಬಿಬಿಎಂಪಿ ಕೌನ್ಸಿಲ್‌ ಸಭೆಯು ನಿರ್ಣಯ ತೆಗೆದುಕೊಂಡಿತು. ಇಷ್ಟಾದರೂ, ಸಿಲಿಕಾನ್‌ ಸಿಟಿಯಿಂದ ಪ್ಲಾಸ್ಟಿಕ್‌ ತೊಲಗುತ್ತಿಲ್ಲ. ಇದರಿಂದ ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿಸುವ ಕನಸು ಕನಸಾಗಿಯೇ ಉಳಿಯುವಂತಾಗಿದೆ. ನಗರದಲ್ಲಿನ ಮಾರುಕಟ್ಟೆಗಳು, ವಾಣಿಜ್ಯ ಕಾಂಪ್ಲೆಕ್ಸ್‌ಗಳು, ಬಡಾವಣೆಗಳಲ್ಲಿನ ಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಅವ್ಯಾಹತವಾಗಿ ಪ್ಲಾಸ್ಟಿಕ್‌ ಬಳಕೆಯಾಗುತ್ತಿದೆ. ದಿನಸಿ, ಹೂವು, ಹಣ್ಣು, ತರಕಾರಿ ವ್ಯಾಪಾರಸ್ಥರು ಪ್ಲಾಸ್ಟಿಕ್‌ ಕವರ್‌ಗಳಲ್ಲಿಯೇ ಸಾಮಾನು-ಸರಂಜಾಮುಗಳನ್ನು ಕಟ್ಟಿಕೊಡುತ್ತಿದ್ದಾರೆ. ಬೀದಿಬದಿಯ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್‌ ಹಾಳೆಗಳನ್ನು ಎಗ್ಗಿಲ್ಲದೆ ಬಳಸಲಾಗುತ್ತಿದೆ. ಇಡ್ಲಿ ಬೇಯಿಸಲು ಮತ್ತು ಊಟ ಕಟ್ಟಿಕೊಡಲು ಪ್ಲಾಸ್ಟಿಕ್‌ ಉಪಯೋಗಿಸುತ್ತಿದ್ದು, ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತಮಿಳುನಾಡಿನ ಹೊಸೂರು, ಹೈದರಾಬಾದ್‌ ಸೇರಿದಂತೆ ಹಲವು ಪ್ರದೇಶಗಳಿಂದ ಪ್ಲಾಸ್ಟಿಕ್‌ ಕೈಚೀಲ ಸೇರಿದಂತೆ ಇನ್ನಿತರೆ ವಸ್ತುಗಳು ನಗರಕ್ಕೆ ಪೂರೈಕೆಯಾಗುತ್ತವೆ. ಅಲ್ಲದೆ, ನಗರದ ಹೊರವಲಯಗಳಲ್ಲೂ ಕದ್ದು ಮುಚ್ಚಿ ಪ್ಲಾಸ್ಟಿಕ್‌ ವಸ್ತುಗಳನ್ನು ತಯಾರಿಸಲಾಗುತ್ತಿದೆ. ನಿತ್ಯ 200 ಟನ್‌ ತ್ಯಾಜ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ 5 ಸಾವಿರ ಟನ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ ಸುಮಾರು 200 ಟನ್‌ನಷ್ಟು ಪ್ಲಾಸ್ಟಿಕ್‌ ವಸ್ತುಗಳೇ ಸಿಗುತ್ತವೆ. ತ್ಯಾಜ್ಯ ವಿಲೇವಾರಿಯು ದೊಡ್ಡ ಸವಾಲಾಗಿ ಪರಿಣಮಿಸಿದೆ. 4.67 ಲಕ್ಷ ಕೆ.ಜಿ ಜಪ್ತಿ ಪಾಲಿಕೆಯು 2015-16ರಿಂದ 2020ರ ಫೆಬ್ರವರಿವರೆಗೆ 4.67 ಲಕ್ಷ ಕೆ.ಜಿ ಪ್ಲಾಸ್ಟಿಕ್‌ ಜಪ್ತಿ ಮಾಡಿ, 4.17 ಕೋಟಿ ರೂ. ದಂಡ ವಸೂಲಿ ಮಾಡಿದೆ. ಕೆಲ ತಿಂಗಳ ಹಿಂದೆ ಜಪ್ತಿ ಮಾಡಿದ್ದ ಪ್ಲಾಸ್ಟಿಕ್‌ ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ರಸ್ತೆ ನಿರ್ಮಾಣಕ್ಕಾಗಿ ಹಸ್ತಾಂತರಿಸಲಾಯಿತು. ಮಾರಾಟಗಾರರಿಗೆ 1 ಲಕ್ಷ ರೂ.ವರೆಗೆ ದಂಡ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳ ಸಗಟು, ಚಿಲ್ಲರೆ ಮಾರಾಟಗಾರರಿಗೆ ಮೊದಲ ಸಲ 50 ಸಾವಿರ ರೂ., ಎರಡನೇ ಬಾರಿ ಮತ್ತು ಪುನರಾವರ್ತಿತ ಅಪರಾಧಕ್ಕೆ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಪ್ಲಾಸ್ಟಿಕ್‌ ವಸ್ತುಗಳ ತಯಾರಕರಿಗೆ ಮೊದಲ ಬಾರಿ 2 ಲಕ್ಷ ರೂ., ಆನಂತರ 5 ಲಕ್ಷ ರೂ., ಗೋದಾಮಿನಲ್ಲಿ ದಾಸ್ತಾನು ಇಟ್ಟುಕೊಳ್ಳುವವರಿಗೆ ಮೊದಲ ಅಪರಾಧಕ್ಕೆ 1 ಲಕ್ಷ ರೂ., ಬಳಿಕ 2 ಲಕ್ಷ ರೂ., ವಾಣಿಜ್ಯ ಬಳಕೆದಾರರಿಗೆ ಕ್ರಮವಾಗಿ 25 ಸಾವಿರ ರೂ., 50 ಸಾವಿರ ರೂ. ಹಾಗೂ ಗೃಹ ಬಳಕೆದಾರರಿಗೆ 500 ರೂ. ಮತ್ತು 1000 ರೂ. ದಂಡ ವಿಧಿಸಲು ಕಾನೂನಿನಲ್ಲಿಅವಕಾಶ ಕಲ್ಪಿಸಲಾಗಿದೆ. ಆರೋಗ್ಯ ಸಿಬ್ಬಂದಿ, ಮಾರ್ಷಲ್‌ಗಳು ಕೊರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಹೀಗಾಗಿ, ಪ್ಲಾಸ್ಟಿಕ್‌ ವಸ್ತುಗಳ ಮಾರಾಟಗಾರರು, ಬಳಕೆದಾರರ ಮೇಲೆ ದಾಳಿ ನಡೆಸಿ ಕ್ರಮ ಜರುಗಿಸಲು ಆಗುತ್ತಿಲ್ಲ. ಮಾರ್ಷಲ್‌ಗಳು ಕಸ ವಿಂಗಡಿಸದವರು ಮತ್ತು ಮಾಸ್ಕ್‌ ಧರಿಸದವರನ್ನು ಪತ್ತೆ ಮಾಡಿ ದಂಡ ಹಾಕುತ್ತಿದ್ದಾರೆ. ಸದ್ಯದಲ್ಲೇ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು, ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಲಾಗುವುದು. ಡಾ.ವಿಜಯೇಂದ್ರ ಮುುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ


from India & World News in Kannada | VK Polls https://ift.tt/348iANy

ದೇಶದ ಮಹಾನಗರಗಳಲ್ಲಿ ಗುರುವಾರ ಪೆಟ್ರೋಲ್‌, ಡೀಸೆಲ್‌ ದರ ಎಷ್ಟಿದೆ? ಇಲ್ಲಿದೆ ಮಾಹಿತಿ!

ಬೆಂಗಳೂರು: ಅಕ್ಟೋಬರ್‌ ತಿಂಗಳ ಆರಂಭ ದಿನವಾದ ಗುರುವಾರ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಎಲ್ಲಾ ನಗರಗಳಲ್ಲಿಯು ಪೆಟ್ರೋಲ್‌, ಸ್ಥಿರವಾಗಿದೆ. ಕಳೆದ ಕೆಲವು ದಿನಗಳಿಂದ ಡೀಸೆಲ್‌ ದರದಲ್ಲಿ ಇಳಿಕೆಯಾಗುತ್ತಲೆ ಇತ್ತು. ಇಂದು ಮತ್ತೆ ಸ್ಥಿರವಾಗಿದೆ. ಇನ್ನು ಪೆಟ್ರೋಲ್ ದರದಲ್ಲಿ ವಾರಗಳ ಹಿಂದೆ ಇಳಿಕೆಯಾಗಿತ್ತು. ಇನ್ನು ದೇಶದ ಎಲ್ಲಾ ನಗರಗಳಲ್ಲಿಯು 80ರ ಗಡಿ ದಾಟಿದೆ. ಹೀಗಾಗಿ ಇನ್ನಷ್ಟು ದರ ಇಳಿಯುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಹಾಗಾದರೆ ಅಕ್ಟೋಬರ್‌ 1ರ ಗುರುವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ. ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ. ಸಿಲಿಕಾನ್ ಸಿಟಿ ಪೆಟ್ರೋಲ್: 83.69 ರೂ. ಡೀಸೆಲ್: 74.81 ರೂ. ರಾಷ್ಟ್ರ ರಾಜಧಾನಿ ನವದೆಹಲಿ ಪೆಟ್ರೋಲ್: 81.06 ರೂ. ಡೀಸೆಲ್: 70.63 ರೂ. ಮಹಾರಾಷ್ಟ್ರ ರಾಜಧಾನಿ ಮುಂಬಯಿ ಪೆಟ್ರೋಲ್: 87.74 ರೂ. ಡೀಸೆಲ್: 77.04 ರೂ. ತಮಿಳುನಾಡು ರಾಜಧಾನಿ ಚೆನ್ನೈ ಪೆಟ್ರೋಲ್:84.14 ರೂ. ಡೀಸೆಲ್: 76.10 ರೂ.


from India & World News in Kannada | VK Polls https://ift.tt/34g5UnF

ಶಬರಿಮಲೆ ಯಾತ್ರೆ ಕೈಗೊಳ್ಳಲು ಹೊರರಾಜ್ಯದ ಭಕ್ತರಿಗೂ ಅವಕಾಶ: ಕೇರಳ ಸರ್ಕಾರ ನಿರ್ಧಾರ

ತಿರುವನಂತಪುರಂ: ಹೊರರಾಜ್ಯದ ಮಾಲಾಧಾರಿಗಳಿಗೂ ಯಾತ್ರೆ ಕೈಗೊಳ್ಳಲು ಅವಕಾಶ ನೀಡುವ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದು, ಕರ್ನಾಟಕದ ಭಕ್ತರಿಗೆ ಅನುಕೂಲವಾಗಿದೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಈ ಬಾರಿ ಹೊರ ರಾಜ್ಯದ ಭಕ್ತರಿಗೆ ನಿಷೇಧ ಹೇರಲಾಗುತ್ತದೆ ಎಂಬ ವದಂತಿ ಹರಡಿತ್ತು. ಎರಡು ತಿಂಗಳ ವಾರ್ಷಿಕ ಮಂಡಲ ಪೂಜೆ ಮಹೋತ್ಸವ ಮತ್ತು ಮಕರವಿಳಕ್ಕು ಉತ್ಸವ ನ. 16ರಿಂದ ಆರಂಭವಾಗಲಿದೆ. ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಹೊರ ರಾಜ್ಯದ ಭಕ್ತರಿಗೂ ಅವಕಾಶ ನೀಡಲು ನಿರ್ಧರಿಸಲಾಗಿದೆ. ಆದರೆ, ಹಿಂದಿನಂತೆ ಬಯಸಿದವರಿಗೆಲ್ಲ ಅವಕಾಶ ಸಿಗುವ ಖಾತ್ರಿ ಇಲ್ಲ. ಯಾಕೆಂದರೆ, ಕೇರಳ ಸರಕಾರ ನಿಗದಿಪಡಿಸಿದಷ್ಟು ಸಂಖ್ಯೆಯ ಮಾತ್ರ ಶಬರಿಮಲೆಗೆ ಹೋಗಬಹುದು. ಸಂಖ್ಯೆಯ ಮಿತಿಯ ವಿವರ ಸದ್ಯವೇ ಪ್ರಕಟವಾಗಲಿದೆ. ಈ ಬಾರಿ ಭಕ್ತರಿಗೆ ದೇವಸ್ಥಾನ ಹೊರತುಪಡಿಸಿ ಬೇರೆಲ್ಲೂ ಹೋಗಲು ಮತ್ತು ಗೆಸ್ಟ್‌ಹೌಸ್‌ನಲ್ಲಿ ಉಳಿದುಕೊಳ್ಳಲು ಹಾಗೂ ಅಯ್ಯಪ್ಪ ಸನ್ನಿಧಾನದ ಇನ್ನಿತರೆ ಪ್ರದೇಶಗಳಲ್ಲಿ ಸುತ್ತಾಡಲು ಭಕ್ತರಿಗೆ ಅವಕಾಶ ನೀಡದೇ ಇರಲು ತೀರ್ಮಾನಿಸಲಾಗಿದೆ.


from India & World News in Kannada | VK Polls https://ift.tt/3cJHxTv

ಸರಕಾರಿ ಶಾಲೆ ಪುನಶ್ಚೇತನಕ್ಕಿದು ಸಕಾಲ: ಮೂಲ ಸೌಕರ್ಯ ಒದಗಿಸಲು ಸಾರ್ವಜನಿಕರ ಒತ್ತಾಯ!

ಪ್ರಮೋದ ಹರಿಕಾಂತ ಬೆಳಗಾವಿಬೆಂಗಳೂರು: ಕೊರೊನಾವೂ ಸೇರಿದಂತೆ ನಾನಾ ಕಾರಣಗಳಿಗಾಗಿ ಸರಕಾರಿ ಶಾಲೆಗಳು ಮತ್ತೊಮ್ಮೆ ಬೇಡಿಕೆ ಪಡೆಯುತ್ತಿವೆ. ಈ ನಡುವೆ ಜನರಲ್ಲಿ ಹೆಚ್ಚುತ್ತಿರುವ ನಂಬಿಕೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಸರಕಾರಿ ಶಾಲೆಗಳು ಹಾಗೂ ಶಿಕ್ಷಣ ವ್ಯವಸ್ಥೆಗೆ ಪುನಶ್ಚೇತನ ನೀಡಬೇಕಾದ ಅಗತ್ಯವೂ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಈಗಾಗಲೇ ರಾಜ್ಯಾದ್ಯಂತ 50,000ಕ್ಕೂ ಅಧಿಕ ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬಿಟ್ಟು ಸರಕಾರಿ ಶಾಲೆಗಳಲ್ಲಿ ದಾಖಲಾಗಿದ್ದಾರೆ. ರಾಜ್ಯದಲ್ಲಿ ಮುಚ್ಚಿದ್ದ 80ಕ್ಕೂ ಹೆಚ್ಚು ಶಾಲೆಗಳನ್ನು ಮರು ಆರಂಭಿಸಲು ಪೋಷಕರು ಅಧಿಕೃತ ಬೇಡಿಕೆ ಸಲ್ಲಿಸಿದ್ದಾರೆ. ಇದು ಕೊರೊನಾ ಕಾರಣದಿಂದಾಗಿ ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಎಂದು ಹೇಳಲಾಗುತ್ತಿದೆಯಾದರೂ ಸರಕಾರಿ ಶಾಲೆಗಳಲ್ಲಿ ಸಿಗುತ್ತಿರುವ ಸವಲತ್ತು ಮತ್ತಿತರ ಕಾರಣಗಳೂ ಇದರ ಹಿಂದಿವೆ. ಒಂದು ಕಾಲದಲ್ಲಿ ಉತ್ತುಂಗದಲ್ಲಿದ್ದ ಸರಕಾರಿ ಶಾಲೆಗಳು ಬಳಿಕ ಖಾಸಗಿ ಶಾಲೆಗಳ ಆಕರ್ಷಣೆ ಮತ್ತು ಇಂಗ್ಲಿಷ್‌ ಮಾಧ್ಯಮದ ಅಬ್ಬರದಲ್ಲಿ ಬೇಡಿಕೆ ಕಳೆದುಕೊಳ್ಳುತ್ತಾ ಸಾಗಿದವು. ಕೆಲವು ವರ್ಷಗಳಲ್ಲಿ ಸಾವಿರಾರು ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚಿಹೋದವು. 400ರಷ್ಟು ವಿದ್ಯಾರ್ಥಿಗಳೊಂದಿಗೆ ವೈಭವ ಮೆರೆದಿದ್ದ ಶಾಲೆಗಳೂ ಕನಿಷ್ಠ 10 ಮಂದಿಯನ್ನು ಉಳಿಸಿಕೊಳ್ಳಲೂ ಆಗದ ಹತಾಶ ಸ್ಥಿತಿಗೆ ತಲುಪಿದ್ದವು. ಈ ನಡುವೆ, ರಾಜ್ಯದ 1000 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮವನ್ನು ಆರಂಭ ಮಾಡಿದ್ದು ಮತ್ತೆ ಜನ ಇವುಗಳತ್ತ ತಿರುಗಿ ನೋಡಲು ಕಾರಣವಾಗಿತ್ತು. ಇಂಥ ಶಾಲೆಗಳಲ್ಲಿಇದೀಗ ಸಂಚಲನ ಸೃಷ್ಟಿಯಾಗಿರುವುದರಿಂದ ಶಿಕ್ಷಣ ಇಲಾಖೆಯ ಜವಾಬ್ದಾರಿ ಹೆಚ್ಚಿದೆ. 12 ಸಾವಿರ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಾಜ್ಯದಲ್ಲಿರುವ ಸುಮಾರು 22 ಸಾವಿರ ಕಿರಿಯ ಪ್ರಾಥಮಿಕ ಶಾಲೆಗಳ ಪೈಕಿ 12 ಸಾವಿರದಷ್ಟು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕ ಇದ್ದಾರೆ. ಏಕೋಪಾಧ್ಯಾಯ ಶಾಲೆಗಳೆಲ್ಲವೂ ಗ್ರಾಮೀಣ ಭಾಗದಲ್ಲಿಯೇ ಇವೆ. ಅಂಥ ಶಾಲೆಗಳಲ್ಲಿ ಕನಿಷ್ಠ ಇಬ್ಬರು ಶಿಕ್ಷಕರು ಇರಬೇಕು. 1-5ನೇ ತರಗತಿವರೆಗಿನ ಎಲ್ಲ ಮಕ್ಕಳಿಗೆ ಒಂದೇ ಕೊಠಡಿಯೊಳಗೆ ಬೋಧಿಸುವ ರೂಢಿ ಬದಲಾಗಿ ಕನಿಷ್ಠ ಎರಡು ಕೊಠಡಿಗಳಾದರೂ ಇರಬೇಕು. ಶಿಕ್ಷಕರು ಶಿಕ್ಷಕರಾಗಿರಲಿಖಾಸಗಿ ಶಾಲೆಗಳಿಗೆ ಹೋಲಿಸಿದರೆ ಶಿಕ್ಷಕರಿಗೆ ಬೋಧನೆಗಿಂತ ಇತರೆ ಕೆಲಸಗಳೇ ಹೆಚ್ಚು. ಗುಣಮಟ್ಟದ ಶಿಕ್ಷಕರು, ಉತ್ತಮ ಶಿಕ್ಷಣ ಪದ್ಧತಿ ಇದ್ದರೂ ಜಾರಿ ಮಾಡಲು ಶಿಕ್ಷಕರಿಗೆ ಸಮಯವೇ ಸಿಗುತ್ತಿಲ್ಲ. ಹಾಗಾಗಿ ಬೋಧನೆಗೆ ಹೆಚ್ಚು ಅವಕಾಶ ಕಲ್ಪಿಸಬೇಕು. ಏಕೋಪಾಧ್ಯಾಯ ಶಾಲೆಗಳಲ್ಲಂತೂ ಒಂದು ದಿನ ಶಿಕ್ಷಕರು ಶಿಕ್ಷಣ ಇಲಾಖೆ ಕಚೇರಿಗೆ ಹೋದರೆ ಆ ದಿನ ಶಾಲೆಗೆ ರಜೆ ಎನ್ನುವ ಭಾವನೆ ಊರುಗಳಲ್ಲಿ ಮೂಡುತ್ತಿದೆ. ಸರಕಾರಿ ಶಾಲೆಗಳ ಸಮಸ್ಯೆಗಳು
  • ಡಿಜಿಟಲೀಕರಣ ಶಿಕ್ಷಣದ ಅನಿವಾರ್ಯವಾಗಿರುವ ಕಾಲದಲ್ಲಿ ಕೆಲವು ಶಾಲೆಗಳಲ್ಲಿ ವಿದ್ಯುತ್ತೇ ಇಲ್ಲ.
  • ವಿದ್ಯುತ್‌ ಸಂಪರ್ಕವಿದ್ದರೂ ಕೆಲವು ಶಾಲೆಗಳು ಬಿಲ್‌ ಪಾವತಿಸದೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಕಂಪ್ಯೂಟರ್‌, ಟಿವಿ ಬಳಕೆ ಸಾಧ್ಯವಾಗಿಲ್ಲ.
  • ನೀರಿನ ಸಂಪರ್ಕಕ್ಕೂ ಪರದಾಡುವ ಮತ್ತು ಕೆಲವೆಡೆ ನೀರಿನ ಬಿಲ್‌ ಶಿಕ್ಷಕರೇ ಪಾವತಿಸುವ ಸ್ಥಿತಿ ಇದೆ.
  • 2 ವರ್ಷಗಳಿಂದ ಹಣ ಬಾರದೆ ಸಣ್ಣ ಪುಟ್ಟ ದುರಸ್ತಿಯೂ ನಿಂತು ಹೋಗಿದೆ.
ತುರ್ತು ಅಗತ್ಯಗಳೇನು?
  • ಅತ್ಯುತ್ತಮ ಕಟ್ಟಡ, ಆಕರ್ಷಕ ಶಾಲಾ ವಾತಾವರಣ.
  • ಉತ್ತಮ ಶೌಚಾಲಯ ಮತ್ತು ಶುದ್ಧೀಕರಿಸಿದ ನೀರು
  • ತರಗತಿಗೊಬ್ಬ ಶಿಕ್ಷಕ ಹಾಗೂ ವಿಷಯಕ್ಕೊಬ್ಬ ಶಿಕ್ಷಕ
  • ಚಿತ್ರಕಲೆ, ಸಂಗೀತ, ದೈಹಿಕ ಶಿಕ್ಷಣ, ಕೃಷಿ ಪಾಠಕ್ಕೆ ಶಿಕ್ಷಕರು
  • ಕಲಿಕಾ ಗುಣಮಟ್ಟ ಸುಧಾರಣೆಗೆ ನೆರವಾಗುವ ಕಲಿಕೋಪಕರಣಗಳು
  • ಗಣಿತ ಲ್ಯಾಬ್‌, ಜ್ಞಾನ ಲ್ಯಾಬ್‌, ಗ್ರಂಥಾಲಯ ಇರಬೇಕು.
  • ಸ್ಮಾರ್ಟ್‌ ಕ್ಲಾಸ್‌, ಕಂಪ್ಯೂಟರ್‌ ಶಿಕ್ಷಣ ಸೌಲಭ್ಯ ಒದಗಿಸಬೇಕು.
ಸರಕಾರಿ ಶಾಲೆಗಳಿಗೆ ವಿದ್ಯುತ್‌, ನೀರು, ಕಟ್ಟಡ ದುರಸ್ತಿ, ಗೋಡೆಗಳಿಗೆ ಬಣ್ಣ ಮತ್ತು ಶಿಕ್ಷಕರಿಗೆ ಬೋಧನೆಗೆ ಸಮಯ ಒದಗಿಸಿದರೆ ಉತ್ತಮ ಶೈಕ್ಷಣಿಕ ಚಟುವಟಿಕೆ ನಡೆಸಬಹುದು. ಎರಡು ವರ್ಷಗಳಿಂದ ಶಾಲಾ ನಿರ್ವಹಣೆಗೆ ಹಣವೇ ಬಂದಿಲ್ಲ. ಹಾಗಾಗಿ ಡಿಜಿಟಲ್‌ ಕ್ಲಾಸ್‌ ಇರಲಿ ಇರುವ ಕಂಪ್ಯೂಟರ್‌ ಆನ್‌ ಮಾಡುವುದಕ್ಕೂ ವಿದ್ಯುತ್‌ ಇಲ್ಲ. ವಿ.ಎಂ. ನಾರಾಯಣ ಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಗುಣಮಟ್ಟದ ಕಲಿಕೋಪಕರಣ, ಉತ್ತಮ ಲ್ಯಾಬ್‌ಗಳು ಬೇಕು. ಶಿಕ್ಷಕರ ನೂತನ ಪ್ರಯತ್ನಗಳಿಗೆ ಪ್ರೋತ್ಸಾಹ ಸಿಗಬೇಕು. ಸೋಮು ಕುದರಿಹಾಳ, ಶಿಕ್ಷಕರು, ಸ.ಕಿ.ಪ್ರಾ. ಶಾಲೆ ಲಕ್ಷ್ಮೇ ಕ್ಯಾಂಪ್‌ ಕುಂಟೋಜಿ ಕೊರೊನಾ ಕಾರಣದಿಂದ ಬಹಳಷ್ಟು ಪೋಷಕರು ತೊಂದರೆ ಅನುಭವಿಸಿ ಊರಿಗೆ ಮರಳಿದ್ದಾರೆ. ಅವರು ಹಣವಿಲ್ಲದೆ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಕಷ್ಟಪಡುತ್ತಿದ್ದಾರೆ. ಆದ್ದರಿಂದ ವಿಜಯ ಕರ್ನಾಟಕ ಪತ್ರಿಕೆಯು ಮತ್ತೊಮ್ಮೆ ದಾಖಲಾತಿ ಆಂದೋಲನ ಆರಂಭಿಸುವಂತೆ ಶಿಕ್ಷಣ ಸಚಿವರ ಮೇಲೆ ವರದಿಗಳ ಮೂಲಕ ಒತ್ತಡ ಹೇರಬೇಕು. ಈ ರೀತಿ ಆದರೆ, ಸಾವಿರಾರು ಮಕ್ಕಳು ಸರಕಾರಿ ಶಾಲೆ ಕಡೆ ಮರಳಲು ನೆರವಾಗುತ್ತದೆ. ಪೋಷಕರ ಮತ್ತು ಮಕ್ಕಳ ಹಿತದೃಷ್ಟಿಯಿಂದ ವಿಕ ಕ್ರಮ ಕೈಗೊಳ್ಳುವುದೆಂದು ಭಾವಿಸುತ್ತೇನೆ. ಆರ್‌. ಕಿಶೋರ್‌, ಚೆನ್ನಗಿರಿ


from India & World News in Kannada | VK Polls https://ift.tt/36sTZFM

ಅಂಚೆ ಇಲಾಖೆ ವಿಶಿಷ್ಟ ದಾಖಲೆ: ಒಂದೇ ದಿನ ಲಕ್ಷ ಖಾತೆ ಓಪನ್‌, ಡಿಜಿಟಲ್‌ ಪರಿವರ್ತನೆಯ ಮೊದಲ ಹೆಜ್ಜೆ!

ಸ್ಟೀವನ್‌ ರೇಗೊ ಮಂಗಳೂರು ಮಂಗಳೂರು: ಮಹಾನ್‌ ಲಾಗಿನ್‌ ಡೇ ಎನ್ನುವ ಅಭಿಯಾನದ ಮೂಲಕ ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ವೃತ್ತದಲ್ಲಿಒಂದೇ ದಿನ ಅಂದರೆ ಮಂಗಳವಾರ ಈ ಕಾರ‍್ಯಕ್ರಮಕ್ಕೆ ಚಾಲನೆ ನೀಡಿತ್ತು. ಇದರ ಪರಿಣಾಮ ಕರ್ನಾಟಕದೊಳಗಿನ ಎಲ್ಲಅಂಚೆ ಕಚೇರಿಗಳಲ್ಲಿ 1,22,631ರಷ್ಟು ಸಾರ್ವಜನಿಕರು ತೆರೆಯುವ ಕಾರ‍್ಯಕ್ಕೆ ಮುಂದಾದರು. ಬೆಳಗ್ಗೆ 8ರಿಂದ ಆರಂಭವಾದ ಈ ಖಾತೆಯ ಅಭಿಯಾನದಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ಎಷ್ಟು ಮಂದಿ ಖಾತೆ ತೆರೆದಿದ್ದಾರೆ ಎನ್ನುವ ಮಾಹಿತಿ ಸಂಗ್ರಹಿಸುವ ಕಾರ‍್ಯ ಕೂಡ ಸಾಗಿದೆ. ಅಂಚೆ ಅಣ್ಣನ ಕೈಗೆ ಮೊಬೈಲ್‌ ಹಾಗೂ ಬೆರಳಚ್ಚು ಸಾಮಗ್ರಿ ನೀಡಿದ ಪರಿಣಾಮ ಅವರು ಕಚೇರಿಗೆ ಬರುವ ಬದಲು ಎಲ್ಲಿಂದ ಸಾಧ್ಯವಿದೆಯೋ ಅಲ್ಲಿಯೇ ನಿಂತು ಖಾತೆ ತೆರೆಯುವ ವಿಶಿಷ್ಟ ಅವಕಾಶ ಕೂಡ ನೀಡಲಾಗಿತ್ತು. ಇದರ ಪರಿಣಾಮ ರಾತ್ರಿ 10ರವರೆಗೂ ಖಾತೆ ತೆರೆಯುವ ಕಾರ‍್ಯ ಸಾಗಿದೆ. ಐಪಿಪಿಬಿಗೆ ಭರ್ಜರಿ ಸ್ಪಂದನೆಕರ್ನಾಟಕ ವೃತ್ತದಡಿ ಬರುವ ನಾನಾ ವಲಯಗಳ ಲೆಕ್ಕಾಚಾರದಲ್ಲಿ ಹೇಳುವುದಾದರೆ ಅಂಚೆ ಕಚೇರಿಯಲ್ಲಿರುವ 12,639 ಮಂದಿ ಈ ಖಾತೆ ತೆರೆಯುವ ಕಾರ‍್ಯದಲ್ಲಿ ನಿಯೋಜನೆಗೊಂಡಿದ್ದರು. ಅವರಿಗೆ ಲಾಗಿನ್‌ ಐಡಿ ನೀಡಲಾಗಿತ್ತು. ಇದರಲ್ಲಿ ಮಂಗಳೂರಿನಲ್ಲಿ 923 ಮಂದಿಗೆ ಅವಕಾಶ ನೀಡಲಾಗಿತ್ತು. ಕರ್ನಾಟಕ ವೃತ್ತದಲ್ಲಿ ಬೆಳಗ್ಗೆ 8ಕ್ಕೆ 2,511 ಮಂದಿಯ ಖಾತೆ ತೆರೆದಿದ್ದರೆ, ಸಂಜೆ 4.30ರ ಹೊತ್ತಿಗೆ 99,495 ಮಂದಿ ಖಾತೆ ತೆರೆದಿದ್ದಾರೆ. ಬೆಳಗಾವಿಯಲ್ಲಿ 12,473, ಚಿಕ್ಕೋಡಿಯಲ್ಲಿ8,156, ಇಟ್ಟಿಗೆಗುಡ್ಡೆ-9,383, ಮಂಡ್ಯ-8,449, ಚಾಮರಾಜನಗರ-7957 ಹಾಗೂ ಮಂಗಳೂರು-7,253 ಮಂದಿ ಐಪಿಪಿಬಿ ಖಾತೆ ಮಾಡಿಸಿಕೊಂಡಿದ್ದಾರೆ. ಬ್ಯಾಕಿಂಗ್‌ ಮನೆ ಬಾಗಿಲಿಗೆ ಎನ್ನುವ ಉದ್ದೇಶದಲ್ಲಿ ಕೇಂದ್ರ ಸರಕಾರದ ಐಪಿಪಿಬಿ ಖಾತೆಯ ಮೂಲಕ ಮನೆಯಲ್ಲಿಇದ್ದುಕೊಂಡೇ ನಾನಾ ಬಿಲ್‌ ಪಾವತಿ, ಬ್ಯಾಂಕ್‌ಗಳಿಗೆ ದಿನದ 24 ಗಂಟೆಯೂ ಹಣ ಕಳುಹಿಸುವ ಹಾಗೂ ಇತರ ಬ್ಯಾಂಕ್‌ಗಳಿಂದ ಹಣ ವರ್ಗಾವಣೆ ಮಾಡುವ ಜತೆಗೆ ಅಂಚೆ ಇಲಾಖೆಯ ನಾನಾ ಯೋಜನೆಗಳಿಗೆ ಇದರ ಮೂಲಕವೇ ಪಾವತಿಸಲು ಐಪಿಪಿಬಿ ನೆರವಾಗುತ್ತದೆ. ಅಂಚೆ ಕಚೇರಿಯಲ್ಲಿ ಆಧಾರ್‌ ಸಂಖ್ಯೆ, ನಿಮ್ಮ ಬೆರಳಚ್ಚು, ಮೊಬೈಲ್‌ ಫೋನ್‌ ನಂಬರ್‌ ಹಾಗೂ ಆರಂಭಿಕ ಖಾತೆ ತರೆಯಲು 100 ರೂ. ಕಟ್ಟಿದರೆ ಸಾಕು, ಐಪಿಪಿಬಿ ಖಾತೆ ಹೊಂದಲು ಅವಕಾಶವಿದೆ. ಕರ್ನಾಟಕ ವೃತ್ತದಲ್ಲಿ ಐಪಿಪಿಬಿ ಖಾತೆ ತೆರೆಯಲು 1 ಲಕ್ಷದಷ್ಟು ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ಅದಕ್ಕಿಂತ ಜಾಸ್ತಿ ಖಾತೆ ತೆರೆಯುವ ಮೂಲಕ ರಾಜ್ಯದ ವಲಯಗಳು ಉತ್ತಮ ಸಾಧನೆ ತೋರಿಸಿವೆ. ಗ್ರಾಮೀಣ ಭಾಗದ ಹಾಗೂ ನಗರದ ಜನರ ಆರ್ಥಿಕತೆಗೆ ನೆರವಾಗುವ ದೃಷ್ಟಿಯಿಂದ ಇಂತಹ ಐಪಿಪಿಬಿ ಖಾತೆ ತೆರೆಯುವ ಅಭಿಯಾನ ಮಾಡಿದ್ದೆವು. ಇದು ಪ್ರಧಾನಿ ಅವರ ಡಿಜಿಟಲ್‌ ಪರಿವರ್ತನೆಯ ಕನಸಿಗೆ ಮೊದಲ ಹೆಜ್ಜೆಯಾಗಿದೆ. ಶಾರದಾ ಸಂಪತ್‌, ಕರ್ನಾಟಕ ವೃತ್ತದ ಚೀಫ್‌ ಪೋಸ್ಟ್‌ ಜನರಲ್‌


from India & World News in Kannada | VK Polls https://ift.tt/36kwfnm

ಕೋವಿಡ್‌ನಿಂದ ಎಚ್‌ಐವಿ ತಪಾಸಣೆ ಕುಂಠಿತ: ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಿಬ್ಬಂದಿಗಳೇ ಇಲ್ಲ!

ಮುಹಮ್ಮದ್‌ ಆರಿಫ್‌ ಮಂಗಳೂರು ಮಂಗಳೂರು: ಬಹುತೇಕ ಜಿಲ್ಲೆಗಳಲ್ಲಿ ಎಚ್‌ಐವಿ , ಚಿಕಿತ್ಸೆ ಶೂನ್ಯ ಪ್ರಗತಿ ಸಾಧಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್ಶನ್‌ ಸೊಸೈಟಿ ಹಾಗೂ ಹಿರಿಯ ಅಧಿಕಾರಿಗಳಿಂದ ವರ್ಷಾತ್ಯದೊಳಗೆ ಗುರಿ ಸಾಧಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ರಾಜ್ಯಮಟ್ಟದಿಂದ ಆಯಾ ಅಧಿಕಾರಿಗಳು ಏಡ್ಸ್‌, ಕ್ಷಯ, ಮಲೇರಿಯಾ ನಿಯಂತ್ರಣ ಇತ್ಯಾದಿ ಕೆಲಸ ಮಾಡಲು ಹೇಳುತ್ತಿದ್ದರೆ, ಡಿಸಿ, ಡಿಎಚ್‌ಒಗಳು ಕೋವಿಡ್‌ ನಿರ್ವಹಣೆಗೆ ಪ್ರಥಮ ಆದ್ಯತೆ ನೀಡಲು ತಾಕೀತು ಮಾಡುತ್ತಿದ್ದಾರೆ. ಇದರಿಂದ ಜಿಲ್ಲಾಮಟ್ಟದ ಅಧಿಕಾರಿಗಳು ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 19 ಐಸಿಟಿಸಿ ಕೇಂದ್ರಗಳಲ್ಲಿ ಹಿಂದೆ ಪ್ರತೀ ತಿಂಗಳು ಐದು ಸಾವಿರ ಮಂದಿಯ ತಪಾಸಣೆಯಲ್ಲಿ 100ರಷ್ಟು ಪಾಸಿಟಿವ್‌ ಪ್ರಕರಣ ಪತ್ತೆಯಾಗುತ್ತಿತ್ತು. ವೆನ್ಲಾಕ್‌ ಆಸ್ಪತ್ರೆಯಲ್ಲಿ 500 ತಪಾಸಣೆಯಲ್ಲಿ 50ರಷ್ಟು ಪಾಸಿಟಿವ್‌ ಕೇಸು ಬರುತ್ತಿತ್ತು. ನಂತರ ಪಾಸಿಟಿವ್‌ ಸಂಖ್ಯೆ ಕಡಿಮೆಯಾಗಿತ್ತು. ಜಿಲ್ಲೆಯಲ್ಲಿ 2016ರಲ್ಲಿ45,040 ತಪಾಸಣೆಯಲ್ಲಿ 629 ಮಂದಿ ಪಾಸಿಟವ್‌ ಆಗಿದ್ದರು. 2017ರಲ್ಲಿ56,029ರಲ್ಲಿ595 ಪಾಸಿಟಿವ್‌, 2018ರಲ್ಲಿ65,632ರಲ್ಲಿ530 ಪಾಸಿಟಿವ್‌, 2019ರಲ್ಲಿ56,110ರಲ್ಲಿ422 ಪಾಸಿಟಿವ್‌ ಆಗಿತ್ತು. ಈ ವರ್ಷ ಏಳು ತಿಂಗಳಲ್ಲಿ8,937 ಮಂದಿಯ ತಪಾಸಣೆ ನಡೆಸಿದ್ದು, 76 ಮಾತ್ರ ಪಾಸಿಟಿವ್‌ ಬಂದಿದೆ. ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಪಾಸಿಟಿವ್‌ ದೃಢಪಟ್ಟು ಚಿಕಿತ್ಸೆಗೆ ನೋಂದಣಿ ಮಾಡುವವರ ಸಂಖ್ಯೆ ಮಾಸಿಕ ಸರಾಸರಿ 25 ಇರುತ್ತಿತ್ತು. ಜನವರಿ-29, ಫೆಬ್ರವರಿ-23, ಮಾರ್ಚ್-15, ಏಪ್ರಿಲ್‌-7, ಮೇ- 6, ಜೂನ್‌- 16, ಜುಲೈ-12, ಆಗಸ್ಟ್‌- 12, ಸೆಪ್ಟೆಂಬರ್‌-15 ಹೀಗೆ ಇಳಿಮುಖವಾಗಿದೆ. ಮಾರ್ಚ್ ನಿಂದ ಎಚ್‌ಐವಿ ವಿಭಾಗದ ಎಲ್ಲ ಸಿಬ್ಬಂದಿಯನ್ನು ಕೋವಿಡ್‌ ತಪಾಸಣೆ ವಿಭಾಗಕ್ಕೆ ನಿಯೋಜಿಸಲಾಗಿದೆ. ಆರಂಭದಲ್ಲಿ ಐಸಿಟಿಸಿ ಕೇಂದ್ರ ಮುಚ್ಚಲಾಗಿತ್ತು. ಮುಂದೆ ಅರ್ಧ ದಿನ ಇತ್ತು. ನಂತರ ರೋಗಿಗಳ ದಾಖಲಾತಿ ನಿಲ್ಲಿಸಲಾಗಿದೆ. ಕೆಲವರು ಲಾಕ್‌ಡೌನ್‌ ಬಳಿಕ ಊರಿಗೆ ಮರಳಿದ್ದಾರೆ. ಕೆಲವರು ಮಾತ್ರೆ ತೆಗೆಯುವುದನ್ನೇ ಬಿಟ್ಟಿದ್ದಾರೆ. ಆಸ್ಪತ್ರೆಗೆ ಬರಲು ಹೆದರುತ್ತಿದ್ದಾರೆ. ಪತ್ತೆ ವಿಳಂಬ ಮಾರಣಾಂತಿಕ ಎಚ್‌ಐವಿ ತಪಾಸಣೆ ವಿಭಾಗದ ಸಿಬ್ಬಂದಿಯನ್ನು ಕೋವಿಡ್‌ ವಿಭಾಗಕ್ಕೆ ನಿಯೋಜಿಸಿದ್ದರಿಂದ ಮತ್ತು ಜನರು ಕೋವಿಡ್‌ಗೆ ಹೆದರಿ ಆಸ್ಪತ್ರೆಗೆ ಬಾರದ ಹಿನ್ನೆಲೆಯಲ್ಲಿಎಚ್‌ಐವಿ ತಪಾಸಣೆ ಕುಂಠಿತಗೊಂಡಿದೆ. ಇದು ಮಾರಣಾಂತಿಕ ಎನ್ನುತ್ತಾರೆ ತಪಾಸಣೆ ವಿಭಾಗದ ಅಧಿಕಾರಿಗಳು. ಎಚ್‌ಐವಿ/ಏಡ್ಸ್‌ ಸೋಂಕು ಪ್ರಥಮ ಹಂತದಲ್ಲಿ ಪತ್ತೆಯಾದರೆ, ಆಹಾರ ಪದ್ಧತಿ ಮತ್ತು ಜೀವನಶೈಲಿ ಬದಲಾವಣೆಯಿಂದ ಹೆಚ್ಚು ಕಾಲ ಬದುಕಬಹುದು. ಪತ್ತೆಯೇ ವಿಳಂಬವಾದರೆ ಬದುಕಿಸುವುದು ಕಷ್ಟ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.


from India & World News in Kannada | VK Polls https://ift.tt/3jiPYY5

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸಿಬಿಐ ಕೋರ್ಟ್‌ಗೆ ಆಗಮಿಸಿದ ಆರೋಪಿಗಳು, ಕೆಲವೇ ಕ್ಷಣದಲ್ಲಿ ತೀರ್ಪು!

ಲಖನೌ: ಬಹು ನಿರೀಕ್ಷಿತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು ವಿಶೇಷ ನ್ಯಾಯಾಲಯ ಕೆಲವೇ ಕ್ಷಣಗಳಲ್ಲಿ ನೀಡಲಿದೆ. ಉತ್ತರ ಪ್ರದೇಶದ ಲಖನೌನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್‌.ಕೆ.ಯಾದವ್‌ ಅವರು ತೀರ್ಪು ಪ್ರಕಟಿಸಲಿದ್ದಾರೆ. ಈ ಹಿನ್ನೆಲೆ ಈ ಕೇಸ್‌ನ ಪ್ರಮುಖ ಆರೋಪಿಗಳಾಗಿರುವ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ಸತೀಶ್ ಪ್ರಧಾನ್ ಮತ್ತು ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಒಟ್ಟು 26 ಮಂದಿ ಕೋರ್ಟ್‌ಗೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅತ್ಯಂತ ಸೂಕ್ಷ್ಮ ವಿಚಾರದ ಪ್ರಕರಣವಾಗಿರುವುದರಿಂದ ವಿಶೇಷ ನ್ಯಾಯಾಲಯದ ಸುತ್ತಲೂ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಗಿದೆ. ಅಲ್ಲದೆ ಬೆಂಬಲಿಗರನ್ನು ಬ್ಯಾರಿಕೇಡ್‌ ಹಾಕಿ ತಡೆದು ನಿಲ್ಲಿಸಲಾಗಿದೆ. ಇದೀಗ ಇಡೀ ದೇಶದ ಚಿತ್ತ ಸಿಬಿಐ ಕೋರ್ಟ್‌ನತ್ತ ನೆಟ್ಟಿದೆ.


from India & World News in Kannada | VK Polls https://ift.tt/33gs9uB

ಅಧ್ಯಕ್ಷೀಯ ಚುನಾವಣೆ: ಟ್ರಂಪ್‌, ಬಿಡನ್‌ ಮೊದಲ ಬಹಿರಂಗ ಚರ್ಚೆ; ವೇದಿಕೆಯಲ್ಲಿ ಕಿತ್ತಾಟ, ಭಾರತ-ಚೀನಾ ಜಪ!

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಸ್ಥಾನದ ಚುನಾವಣೆಗೆ ರಂಗೇರಿದೆ. ಎಲೆಕ್ಷನ್‌ಗೆ 35 ದಿನಗಳಷ್ಟೇ ಬಾಕಿ ಇದ್ದು ಭಾರೀ ರೀತಿಯಲ್ಲಿ ಉಭಯ ಪಕ್ಷಗಳ ನಾಯಕರು ಪ್ರಚಾರಗಳು ನಡೆಸುತ್ತಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಡೊನಾಲ್ಡ್‌ ಟ್ರಂಪ್‌ ಮತ್ತು ಜೋ ಬಿಡನ್‌ ನಡುವೆ ಬಹಿರಂಗ ಚರ್ಚೆ ನಡೆದಿದ್ದು, ಮಾತಿನ ಮೂಲಕ ಉಭಯ ನಾಯಕರು ಕಿತ್ತಾಡಿಕೊಂಡಿದ್ದಾರೆ. ಟಿವಿಯಲ್ಲಿ ನೇರಪ್ರಸಾರವಾಗುವ ಈ ಚರ್ಚೆಯಲ್ಲಿ ಉಭಯ ನಾಯಕರು ಅಕ್ಷರಶಃ ಕಿಡಿಕಾರಿಕೊಂಡಿದ್ದಾರೆ. ಕೊರೊನಾ ವೈರಸ್‌, ಆರ್ಥಿಕತೆ, ಕಪ್ಪು ವರ್ಣೀಯರು ಸೇರಿ ಹಲವು ವಿಚಾರಗಳ ಬಗ್ಗೆ ಸವಾಲು ಉತ್ತರಗಳ ಸಮ್ಮಿಲನವು ವೇದಿಕೆಯಲ್ಲಿ ನಡೆಯಿತು.

ಅಮೆರಿಕದಲ್ಲಿ ಕೊರೊನಾ ತಾಂಡವ ಆಡುತ್ತಿದೆ. ಸರಕಾರಕ್ಕೆ ಸರಿಯಾಗಿ ಮಾಹಿತಿಯು ಇಲ್ಲ ಎಂದು ಸರಕಾರ ಹಾಗೂ ಟ್ರಂಪ್‌ ವಿರುದ್ಧ ಜೋ ಬಿಡನ್‌ ಕಿಡಿಕಾರಿದರು. ಇದಕ್ಕೆ ಉತ್ತರ ನೀಡುವ ವೇಳೆ ಭಾರತ ಚೀನಾವನ್ನು ಎಳೆದು ತಂದ ಟ್ರಂಪ್‌, ಚೀನಾ, ರಷ್ಯಾ, ಭಾರತದಲ್ಲಿ ಕೋವಿಡ್ -19 ನಿಂದ ಎಷ್ಟು ಜನರು ಸತ್ತರು ಎಂಬುದು ನಮಗೆ ತಿಳಿದಿಲ್ಲ ಎಂದರು.


ಅಧ್ಯಕ್ಷೀಯ ಚುನಾವಣೆ: ಟ್ರಂಪ್‌, ಬಿಡನ್‌ ಮೊದಲ ಬಹಿರಂಗ ಚರ್ಚೆ; ವೇದಿಕೆಯಲ್ಲಿ ಕಿತ್ತಾಟ, ಭಾರತ-ಚೀನಾ ಜಪ!

ವಾಷಿಂಗ್ಟನ್‌:

ಅಮೆರಿಕ ಅಧ್ಯಕ್ಷೀಯ ಸ್ಥಾನದ ಚುನಾವಣೆಗೆ ರಂಗೇರಿದೆ. ಎಲೆಕ್ಷನ್‌ಗೆ 35 ದಿನಗಳಷ್ಟೇ ಬಾಕಿ ಇದ್ದು ಭಾರೀ ರೀತಿಯಲ್ಲಿ ಉಭಯ ಪಕ್ಷಗಳ ನಾಯಕರು ಪ್ರಚಾರಗಳು ನಡೆಸುತ್ತಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಡೊನಾಲ್ಡ್‌ ಟ್ರಂಪ್‌ ಮತ್ತು ಜೋ ಬಿಡನ್‌ ನಡುವೆ ಬಹಿರಂಗ ಚರ್ಚೆ ನಡೆದಿದ್ದು, ಮಾತಿನ ಮೂಲಕ ಉಭಯ ನಾಯಕರು ಕಿತ್ತಾಡಿಕೊಂಡಿದ್ದಾರೆ. ಟಿವಿಯಲ್ಲಿ ನೇರಪ್ರಸಾರವಾಗುವ ಈ ಚರ್ಚೆಯಲ್ಲಿ ಉಭಯ ನಾಯಕರು ಅಕ್ಷರಶಃ ಕಿಡಿಕಾರಿಕೊಂಡಿದ್ದಾರೆ. ಕೊರೊನಾ ವೈರಸ್‌, ಆರ್ಥಿಕತೆ, ಕಪ್ಪು ವರ್ಣೀಯರು ಸೇರಿ ಹಲವು ವಿಚಾರಗಳ ಬಗ್ಗೆ ಸವಾಲು ಉತ್ತರಗಳ ಸಮ್ಮಿಲನವು ವೇದಿಕೆಯಲ್ಲಿ ನಡೆಯಿತು.



ಕೊರೊನಾ ಚರ್ಚೆ!
ಕೊರೊನಾ ಚರ್ಚೆ!

ಅಮೆರಿಕದಲ್ಲಿ ಕೊರೊನಾ ತಾಂಡವ ಆಡುತ್ತಿದೆ. ಸರಕಾರಕ್ಕೆ ಸರಿಯಾಗಿ ಮಾಹಿತಿಯು ಇಲ್ಲ ಎಂದು ಸರಕಾರ ಹಾಗೂ ಟ್ರಂಪ್‌ ವಿರುದ್ಧ ಜೋ ಬಿಡನ್‌ ಕಿಡಿಕಾರಿದರು. ಇದಕ್ಕೆ ಉತ್ತರ ನೀಡುವ ವೇಳೆ ಭಾರತ, ಚೀನಾವನ್ನು ಎಳೆತಂದ ಡೊನಾಲ್ಡ್‌ ಟ್ರಂಪ್‌, ಚೀನಾ, ರಷ್ಯಾ, ಭಾರತದಲ್ಲಿ ಕೋವಿಡ್ -19 ನಿಂದ ಎಷ್ಟು ಜನರು ಸತ್ತರು ಎಂಬುದು ನಮಗೆ ತಿಳಿದಿಲ್ಲ. ಏಕೆಂದರೆ ಅವರು ಸರಿಯಾದ ಉತ್ತರಗಳನ್ನು ನೀಡುತ್ತಿಲ್ಲ. ಅವರು ಸರಿಯಾದ ಸಂಖ್ಯೆಗಳನ್ನು ನೀಡುವುತ್ತಿಲ್ಲ ಎಂದು ಪ್ರಶ್ನೆಯನ್ನು ತಿರುಗಿಸುವ ಯತ್ನ ನಡೆಸಿದರು. ಅಲ್ಲದೆ ಮತ್ತೆ ಚೀನಾ ವಿರುದ್ಧ ಕಿಡಿಕಾರಿದ ಅವರು, ನಮ್ಮ ದೇಶದಲ್ಲಾಗುವ ಈ ಎಲ್ಲಾ ಸಾವು ನೋವುಗಳಿಗೆ ಚೀನಾವೇ ಕಾರಣ ಎಂದು ಕಿಡಿಕಾರಿದರು.

ಗಿಲ್ಗಿಟ್‌-ಬಾಲ್ಟಿಸ್ತಾನದಲ್ಲಿ ಚುನಾವಣೆ, ಪಾಕ್‌ ನಡೆಗೆ ಪ್ರತಿಭಟನೆ ದಾಖಲಿಸಿದ ಭಾರತ



ಚೀನಾ ಅಸ್ತ್ರಕ್ಕೆ ರಷ್ಯಾ ಅಸ್ತ್ರ!
ಚೀನಾ ಅಸ್ತ್ರಕ್ಕೆ ರಷ್ಯಾ ಅಸ್ತ್ರ!

ಚೀನಾದಂತೆ ರಷ್ಯಾವು ಅಮೆರಿಕದ ಸಾಂಪ್ರಾದಯಕ ವಿರೋಧಿ ಅನ್ನುವ ಮಾತುಗಳು ಆಗಾಗೇ ಕೇಳಿ ಬರುತ್ತಲೆ ಇರುತ್ತದೆ. ಇದೀಗ ರಷ್ಯಾ ಹಾಗೂ ಟ್ರಂಪ್‌ ನಡುವೆ ಯಾವ ರೀತಿಯ ಸಂಬಂಧ ಇದೆ ಎನ್ನುವುದನ್ನು ಜೋ ಬಿಡೆನ್‌ ಅಮೆರಿಕದ ಜನರಿಗೆ ತೋರಿಸಿ ಕೊಡುವ ಕೆಲಸ ಮಾಡಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಎದುರಿಸಲು ಡೊನಾಲ್ಡ್‌ ಟ್ರಂಪ್‌ಗೆ ಸಾಧ್ಯವಾಗಿಲ್ಲ ಎಂದು ಬಿಡನ್‌ ಆರೋಪಿಸಿದ್ದು, ಟ್ರಂಪ್‌ ಅಧ್ಯಕ್ಷ ಪುಟಿನ್‌ನ 'ಪಪ್ಪಿ' ( ಮರಿ ಶ್ವಾನ) ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ಟ್ರಂಪ್‌, ಬಿಡೆನ್‌ ಅವರನ್ನು ಚೀನಾದ ಕೈಗೊಂಬೆ ಎಂದಿದ್ದರು.

ಕೊರೊನಾದಿಂದ ನಲುಗುತ್ತಿರುವ ಮಹಾರಾಷ್ಟ್ರದಲ್ಲೀಗ ಕಾಂಗೊ ಜ್ವರದ ಭೀತಿ! ಏನಿದು ಹೊಸ ರೋಗ?



ಚರ್ಚೆಗೆ ಕುಟುಂಬದವರನ್ನು ಎಳೆತಂದರು!
ಚರ್ಚೆಗೆ ಕುಟುಂಬದವರನ್ನು ಎಳೆತಂದರು!

ಇನ್ನು ಚರ್ಚೆ ವೇಳೆ ಉಭಯ ನಾಯಕರು ಪರಸ್ಪರ ಕುಟುಂಬದವರನ್ನು ಎಳೆ ತಂದ ಘಟನೆಯು ನಡೆಯಿತು. ಜೋ ಬಿಡನ್‌ ಪುತ್ರ ಹಂಟರ್‌ ಬಿಡೆನ್‌ ಬಗ್ಗೆ ಪ್ರಸ್ತಾಪಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ಹಂಟರ್ ಬಿಡೆನ್ ಚೀನಾ ಮತ್ತು ಇತರ ಸಾಗರೋತ್ತರ ಹಿತಾಸಕ್ತಿಗಳಿಂದ ಲಕ್ಷಾಂತರ ಲಾಭವನ್ನು ಗಳಿಸಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಬಿಡೆನ್‌ ಇದು ಯಾವುದೂ ನಿಜವಲ್ಲ. ಟ್ರಂಪ್‌ ಅವರ ಕುಟುಂಬದ ಸಾಹಸಗಾಥೆಗಳ ಬಗ್ಗೆ ಮಾತನಾಡುವುದಾದರೆ ನಾವು ರಾತ್ರಿಯಿಡಿ ಮಾತನಾಡಬಹುದು ಎಂದು ಕಾಲೆಳೆದರು. ಹೀಗೆ ಕುಟುಂಬದ ಬಗ್ಗೆ ಇನ್ನಷ್ಟು ಚರ್ಚೆ ನಡೆಯಿತು.





from India & World News in Kannada | VK Polls https://ift.tt/3jh5fZG

ಉತ್ತರಪ್ರದೇಶ ಅತ್ಯಾಚಾರ ಪ್ರಕರಣ: ಯೋಗಿ ಆದಿತ್ಯನಾಥ್ ವಿರುದ್ಧ ಸಿದ್ದರಾಮಯ್ಯ ಗರಂ

ಬೆಂಗಳೂರು: ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿ ಅತ್ಯಾಚಾರ ಪ್ರಕರಣಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಯ ಹೊಣೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಮಾತ್ರವಲ್ಲ, ಅವರನ್ನು ಬೆಂಬಲಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಸಮಸ್ತ ಸಂಘ ಪರಿವಾರ ಕೂಡಾ ಹೊರಬೇಕಾಗುತ್ತದೆ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕಿತ್ತುಹಾಕಿ ಉತ್ತರಪ್ರದೇಶವನ್ನು ರಕ್ಷಿಸಿ. ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಉತ್ತರಪ್ರದೇಶದ ದಲಿತ ಯುವತಿಗೆ ಗೌರವಪೂರ್ವಕ ಅಂತ್ಯಕ್ರಿಯೆಗೂ ಅವಕಾಶ ನೀಡದೆ, ಹೆತ್ತವರನ್ನು ಗೋಳಾಡಿಸಿದ ಯೋಗಿ ಆದಿತ್ಯನಾಥ ಕಾವಿಧಾರಿಗಳ ಪಾಲಿನ ಕಳಂಕ. ಇವರ ಆಡಳಿತದಲ್ಲಿ ಉತ್ತರಪ್ರದೇಶದ ಯಾವ ಹೆಣ್ಣು ಮಕ್ಕಳೂ ಸುರಕ್ಷಿತರಲ್ಲ.ಮೊದಲು ಇವರನ್ನು ವಜಾ ಮಾಡಿ ಎಂದು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಾಲ್ವರ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಭೀಕರವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾಳೆ. ಈ ಪ್ರಕರಣದ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ ಕೊಲೆಯಾದ ಯುವತಿಯ ಶವವನ್ನು ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸದೆ ರಾತ್ರೋ ರಾತ್ರಿ ಅಂತ್ಯಕ್ರಿಯೆ ನಡೆಸಿರುವುದಕ್ಕೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.


from India & World News in Kannada | VK Polls https://ift.tt/36mbVlw

ಅಮ್ಮ-ಮಗಳ ಸಾಹಿತ್ಯ ಕೃಷಿ: ಫೇಸ್ ಬುಕ್ ನಲ್ಲಿ ಸುಧಾ ಸರನೋಬತ್, ಆರತಿ ಘಟಿಕಾರ್ ರವರ ಪುಸ್ತಕ ಬಿಡುಗಡೆ!

ಶ್ರೀಪಾದರಾವ್ ಮಂಜುನಾಥ್ ಹಿರಿಯ ಹಾಸ್ಯ ಬರಹಗಾರ್ತಿ ಶ್ರೀಮತಿ ರವರ " ಹೆಸರಲ್ಲೇನಿದೆ ಮಹಾ" ಹಾಸ್ಯ ಲೇಖನ ಸಂಕಲನ, ಮತ್ತು ಅವರ ಪುತ್ರಿ ಶ್ರೀಮತಿ ರವರ "ಮಾತ್ರೆದೇವೊ ಭವ" ಹಾಸ್ಯಪ್ರಬಂಧಗಳ ಸಂಕಲನ ಮತ್ತು ಅವರ ಎರಡನೆಯ ಹನಿಗವನ ಸಂಕಲನ " ಭಾವದ ಹಕ್ಕಿ" ಫೇಸ್ ಬುಕ್ ಆನ್ ಲೈನ್ ಲೈವ್ ಕಾರ್ಯಕ್ರಮದ ಮೂಲಕ ಭಾನುವಾರ ಬಿಡುಗಡೆ ಮಾಡಲಾಯಿತು. ಅಗಲಿದ ಎಸ್.ಪಿ.ಬಾಲಸುಬ್ರಮಣ್ಯಂ ರವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಸುಧಾ ಸರನೋಬತ್ ರವರ ಹಿರಿಯ ಪುತ್ರಿ ಶ್ರೀಮತಿ ಅಂಜಲಿ ಹಳಿಯಾಳ್ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹನಿ ಚಕ್ರವರ್ತಿ ದುಂಡಿರಾಜ್ ಫೇಸ್ ಬುಕ್ ಲೈವ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀಮತಿ ಆರತಿರವರ ಹಾಸ್ಯಪ್ರಜ್ಞೆಯನ್ನು ಪ್ರಶಂಸಿಸಿ ಅವರ ಭಾವದ ಹಕ್ಕಿ ಹನಿಗವನಗಳ ಬಗ್ಗೆ ವಿಶ್ಲೇಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಜನಪ್ರಿಯ ಹಾಸ್ಯ ಭಾಷಣಕಾರರು, ಹಾಸ್ಯ ಸಾಹಿತಿ, ಅಂಕಣಕಾರರು, ಅಣಕು ರಾಮನಾಥ್ ಈ ಕಾರ್ಯಕ್ರಮದ ಸಾರಥ್ಯವನ್ನು ವಹಿಸಿ ಈ ಬಿಡುಗಡೆಯ ಸಂಚಾಲನೆಯನ್ನು ಮಾಡಿದರು. ತಾಯಿ ಮತ್ತು ಮಗಳು ಹಾಸ್ಯ ಬರಹದಲ್ಲಿ ತೊಡಗಿಸಿಕೊಳ್ಳುವುದು ಅಪರೂಪವೆಂದು ಶ್ಲಾಘಿಸಿದರು. ಶ್ರೀಮತಿ ಸುಧಾ ಸರ್ನೋಬತ್ ರವರ ಸಹೋದರಿ ಖ್ಯಾತ ಲೇಖಕಿ, ಕಾದಂಬರಿಗಾರ್ತಿ ಶ್ರೀಮತಿ ಜಯಶ್ರೀ ದೇಶಪಾಂಡೆಯವರು ಅಕ್ಕ ಸುಧಾ ಮತ್ತು ಅಕ್ಕನ ಮಗಳು ಆರತಿಯ ಹಾಸ್ಯಪ್ರಜ್ಞೆಯನ್ನು ಮತ್ತು ತಮ್ಮ ಬಾಲ್ಯದ ದಿನಗಳನ್ನೂ ಮೆಲುಕು ಹಾಕುತ್ತಾ, ಈ ಕೃತಿಗಳಲ್ಲಿ ಅಡಗಿರುವ ಹಾಸ್ಯದ ತಿರುಳನ್ನು ವಿವರಿಸಿದರು. ಪುಸ್ತಕವನ್ನು ವಿದ್ಯುಕ್ತವಾಗಿ ಬಿಡುಗಡೆ ಮಾಡಿದ ನಾಡಿನ ಹೆಸರಾಂತ ಪ್ರಬಂಧ ಬರಹಗಾರ್ತಿ, ಖ್ಯಾತ ಹಾಸ್ಯ ಸಾಹಿತಿ ಶ್ರೀಮತಿ ಭುವನೇಶ್ವರಿ ಹೆಗಡೆಯವರು ಸುಧಾ ಸರನೋಬತ್ ಅವರ " ಹೆಸರಿನಲ್ಲೇನಿದೆ ಮಹಾ " ಆರತಿ ಘಟಿಕಾರ್ ಅವರ "ಮಾತ್ರೆ ದೇವೋ ಭವ " ಪುಸ್ತಕದ ಪರಿಚಯವನ್ನು ಮಾಡಿ, ಸಾಮಾನ್ಯ ಸನ್ನಿವೇಶಗಳನ್ನೂ ಹಾಸ್ಯಕ್ಕೆ ವಸ್ತುವಾಗಿ ಬಳಸಿಕೊಂಡು ಸ್ವಾರಸ್ಯಕರವಾಗಿ, ಮನರಂಜನೀಯವಾಗಿ ಲಘು ಲೇಖನಗಳ ಬರೆದ ರೀತಿ ಮತ್ತು ತಮ್ಮ ಮತ್ತು ಸುಧಾಸರ್ನೋಬತ್ ಕುಟುಂಬದವರ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ನೆನೆಸಿಕೊಂಡರು ಶ್ರೀಮತಿ ಆರತಿ ತಾವು ದುಬೈ ದೇಶದಲ್ಲಿದ್ದಾಗ ಅಲ್ಲಿ ಕಂಡ ಹಾಸ್ಯ ಸನ್ನಿವೇಷಗಳನ್ನು, ಅರಬ್ ನಾಡಿನ ಸುತ್ತ ಮುತ್ತಲ ಜನ ಜೀವನ, ಭಾರತೀಯ ಕ್ಲಿಷ್ಟ ಹೆಸರುಗಳನ್ನು ಅರೇಬಿಕ್ ಜನರ ಉಚ್ಚಾರಣೆ ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ಅಷ್ಟೇ ಅಲ್ಲದೆ ತಮ್ಮ ನೋವಿನ ಕಿರಿ ಕಿರಿ ಅನುಭವಗಳನ್ನು ಕೂಡಾ ಮುಂದೆ ಮೋಜಿನ ಬರಹಗಳಿಗೆ ಸ್ಫೂರ್ತಿಯಾದ ಬಗ್ಗೆ ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಅಂಜಲಿ ಹಳಿಯಾಳ್ ವಂದನಾರ್ಪಣೆ ಮಾಡಿದರು .


from India & World News in Kannada | VK Polls https://ift.tt/3n6aM7u

'ನಮ್ಮ ಯೋಜನೆ ಮಣ್ಣು ಪಾಲು ಮಾಡಿದ್ದು ರಶೀದ್‌ ಖಾನ್‌' : ಸೋಲಿಗೆ ಕಾರಣ ಬಹಿರಂಗಪಡಿಸಿದ ಡೆಲ್ಲಿ ಕೋಚ್‌!

ಅಬುಧಾಬಿ: ಸತತ ಎರಡು ಪಂದ್ಯಗಳಲ್ಲಿ ಗೆದ್ದು ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ತಮ್ಮ ಮೂರನೇ ಪಂದ್ಯದಲ್ಲಿ ವಿರುದ್ಧ 15 ರನ್‌ಗಳಿಂದ ಸೋಲು ಅನುಭವಿಸಿತು. ಪಂದ್ಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್‌ , "ಸನ್‌ ರೈಸರ್ಸ್ ಹೈದರಾಬಾದ್‌ ಎಲ್ಲಾ ವಿಭಾಗಗಳಲ್ಲೂ ನಮ್ಮನ್ನು ಮೀರಿದ ಪ್ರದರ್ಶನ ತೋರಿದೆ. ಆದ್ದರಿಂದ ಮತ್ತೊಮ್ಮೆ ನಾವು ಕೌಶಲದ ಮೇಲೆ ಇನ್ನಷ್ಟು ಕಾರ್ಯನಿರ್ವಹಿಸುವ ಅಗತ್ಯವಿದೆ," ಎಂದು ಹೇಳಿದ್ದಾರೆ. ಹೈದರಾಬಾದ್‌ ಐದನೇ ಬೌಲರ್‌ ಅಭಿಷೇಕ್‌ ಶರ್ಮಾ ಅವರ ಮೇಲೆ ದಾಳಿ ಮಾಡುವಲ್ಲಿ ನಾವು ಎಲ್ಲಿ ವಿಫಲವಾದೆವು ಎಂದು ಬಗ್ಗೆ ರಿಕಿ ಪಾಂಟಿಂಗ್‌ ವಿವರಿಸಿದರು. "ಪಂದ್ಯದಲ್ಲಿ ನಾವು ಅಭಿಷೇಕ್‌ ವರ್ಮಾ ಅವರನ್ನು ಗುರಿ ಮಾಡಲಾಗಿತ್ತು. ಆದರೆ, ನಮ್ಮ ನಿರೀಕ್ಷೆ ತಲೆ ಕೆಳಗಾಯಿತು. ರಶೀದ್‌ ಖಾನ್‌ ಎಂಟನೇ ಓವರ್‌ನಲ್ಲಿ ಶ್ರೇಯಸ್‌ ಅಯ್ಯರ್‌ ಅವರ ವಿಕೆಟ್‌ ಅನ್ನು ಕಬಳಿಸಿದರು. ಇದರಿಂದಾಗಿ ಮುಂದಿನ ಓವರ್‌ ಬೌಲಿಂಗ್‌ ಮಾಡಿದ ಅಭಿಷೇಕ್‌ ಶರ್ಮಾ ಬಚಾವ್ ಆದರು. ಅಭಿಷೇಕ್‌ ವರ್ಮಾ ಅವರ 3 ಹಾಗೂ 4ನೇ ಓವರ್‌ಗಳ ಮೇಲೆ ನಾವು ಗುರಿ ಮಾಡಲಾಗಿತ್ತು. ಆದರೆ, ಅವರ ಮೂರನೇ ಓವರ್‌ನಲ್ಲಿ ಹೆಚ್ಚಿನ ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ನಾವು ನಿರೀಕ್ಷೆ ಮಾಡಿದ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ, ಹಾಗಾಗಿ, ಮತ್ತೊಮ್ಮೆ ನಮ್ಮ ಕೌಶಲದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ," ಎಂದು ತಿಳಿಸಿದರು. 163 ರನ್‌ಗಳ ಗುರಿ ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಪಡೆಯಲು ಸಾಧ್ಯವಾಗಿಲ್ಲ. ಪೃಥ್ವಿ ಶಾ ಬೇಗ ವಿಕೆಟ್‌ ಒಪ್ಪಿಸಿದರು. ಶಿಖರ್‌ ಧವನ್ ಹಾಗೂ ಶ್ರೇಯಸ್‌ ಅಯ್ಯರ್ ಸ್ಟ್ರೈಕ್ ರೇಟ್‌ ಕಡಿಮೆ ಇತ್ತು. ಈ ಇಬ್ಬರ ಪ್ರದರ್ಶನದ ಬಗ್ಗೆ ಮಾತನಾಡಿ, "ಧವನ್‌ ಹಾಗೂ ಅಯ್ಯರ್‌ ಅವರ ಸ್ಟ್ರೈಕ್‌ ರೇಟ್‌ ನಮಗೆ ಬೇಸರ ತರಿಸಿಲ್ಲ. ಈ ಇಬ್ಬರಲ್ಲಿ ಒಬ್ಬರು ವೈಯಕ್ತಿಕ 60 ರನ್‌ಗಳನ್ನು ಗಳಿಸಿದ್ದರೆ, ಖಂಡಿತಾ ನಾವು ಪಂದ್ಯವನ್ನು ಗೆಲ್ಲಬಹುದಿತ್ತು. ಏಕೆಂದರೆ ನಾವು ಸೋತಿದ್ದು ಕೇವಲ 15 ರನ್‌ಗಳಿಂದ ಮಾತ್ರ," ಎಂದು ಹೇಳಿದರು. "ಪವರ್‌ ಪ್ಲೇ ನಲ್ಲಿ ನಾವು ಹೆಚ್ಚಿನ ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಇದು ಸ್ವಲ್ಪ ಹಿನ್ನಡೆಗೆ ಕಾರಣವಾಯಿತು. ಸೋಲಿನಲ್ಲಿ ವೈಯಕ್ತಿಕವಾಗಿ ಯಾರನ್ನೂ ಟೀಕಿಸುವ ಅಗತ್ಯವಿಲ್ಲ. ಒಟ್ಟಾರೆ, ಸನ್‌ ರೈಸರ್ಸ್ ಹೈದರಾಬಾದ್‌ ವಿರುದ್ಧ ನಾವು ಸೋಲು ಅನುಭವಿಸಿದ್ದೇವೆ" ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ತಿಳಿಸಿದರು. ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ ರೈಸರ್ಸ್ ಹೈದರಾಬಾದ್‌ ನಿಗದಿತ 20 ಓವರ್‌ಗಳಿಗೆ 4ವಿಕೆಟ್‌ಗಳನ್ನು ಕಳೆದುಕೊಂಡು 162 ರನ್‌ಗಳನ್ನು ದಾಖಲಿಸಿತ್ತು. ಡೇವಿಡ್‌ ವಾರ್ನರ್‌ ಹಾಗೂ ಜಾನಿ ಬೈರ್‌ಸ್ಟೋವ್‌ 77 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಅತ್ಯುತ್ತಮ ಲಯದಲ್ಲಿರುವ ಜಾನಿ ಬೈರ್‌ಸ್ಟೋವ್‌ ಅರ್ಧಶತಕ ಸಿಡಿಸಿದ ಬಳಿಕ ವಿಕೆಟ್‌ ಒಪ್ಪಿಸಿದರು. ನಂತರ, ಕ್ರೀಸ್‌ನಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿದ ಕೇನ್‌ ವಿಲಿಯಮ್ಸನ್‌ ಕೇವಲ 26 ಎಸೆತಗಳಲ್ಲಿ 41 ರನ್‌ ಗಳಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಲು ನೆರವಾದರು. ಕಗಿಸೋ ರಬಾಡ ಡೆಲ್ಲಿ ಪರ ಅದ್ಭುತ ಬೌಲಿಂಗ್‌ ಮಾಡಿದರು. ಮತ್ತೊಮ್ಮೆ ಆಫ್ರಿಕಾ ಸ್ಟಾರ್‌ ವೇಗಿ ನಾಲ್ಕು ಓವರ್‌ಗಳಿಗೆ 21 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. "ದುಬೈಗಿಂತ ಈ ಅಂಗಣ ವಿಭಿನ್ನವಾಗಿಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ಬೌಂಡರಿಗಳು ಸ್ವಲ್ಪ ಸ್ಕೈರ್‌ ಮಾದರಿಯಲ್ಲಿದೆ, ಆದರೆ ನಾವು ಸನ್‌ ರೈಸರ್ಸ್ ಹೈದರಾಬಾದ್‌ ತಂಡವನ್ನು ಮೀರಿಸುವಲ್ಲಿ ವಿಫಲವಾಗಿದ್ದೇವೆ. ಅವರು ಬ್ಯಾಟಿಂಗ್‌ ತುಂಬಾ ಚೆನ್ನಾಗಿ ಮಾಡಿದ್ದಾರೆ. ನಮ್ಮ ಕಡೆ ಕಗಿಸೋ ರಬಾಡ ಅದ್ಭುತವಾಗಿ ಬೌಲಿಂಗ್‌ ಮಾಡಿದ್ದಾರೆ. ಅವರು ತಮ್ಮ ಆಟದ ಮೇಲೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದು, ವಿಶ್ವದ ಅಗ್ರ ಆಟಗಾರರ ಮೇಲೆ ಆಡುವುದನ್ನು ಆಹ್ಲಾದಿಸುತ್ತಾರೆ. ಸಣ್ಣ ಸಂಗತಿಗಳನ್ನು ಸರಿ ಮಾಡಿಕೊಂಡಿರುವ ರಬಾಡ, ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ," ಎಂದು ರಿಕಿ ಪಾಂಟಿಂಗ್‌ ಕಗಿಸೋ ರಬಾಡ ಅವರನ್ನು ಶ್ಲಾಘಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3l3fmlp

ಆರ್‌. ಆರ್‌ ನಗರ ಉಪಚುನಾವಣೆ: ಡಿ.ಕೆ ಶಿವಕುಮಾರ್‌ ಪಾಲಿಗೆ ಪ್ರತಿಷ್ಠೆಯ ಕಣ!

ಬೆಂಗಳೂರು: ನವೆಂಬರ್‌ 3 ರಂದು ಶಿರಾ ಹಾಗೂ ಆರ್‌.ಆರ್‌ ನಗರ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿದೆ. ಮೂರು ಪಕ್ಷಗಳಿಗೆ ಈ ಉಪಚುನಾವಣೆ ಮಹತ್ವದ್ದಾಗಿದ್ದು ಅದರಲ್ಲೂ ನೂತನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಾಲಿಗೆ ಆರ್‌.ಆರ್‌ ನಗರ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಆಪರೇಷನ್‌ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಮುನಿರತ್ನ ಪಾಲಿಗೆ ರಾಜಕೀಯ ಭವಿಷ್ಯದ ಪ್ರಶ್ನೆಯಾಗಿದೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿದ ಬಳಿಕ ಡಿಕೆ ಶಿವಕುಮಾರ್ ಪಾಲಿಗೆ ಇದು ಮೊದಲ ಚುನಾವಣೆಯಾಗಿದೆ. ಈ ನಿಟ್ಟಿನಲ್ಲಿ ಇದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಲೋಕಸಭೆ ಹಾಗೂ ಉಪಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಏರಿರುವ ಡಿಕೆಶಿ ನಾಯಕತ್ವದಲ್ಲಿ ಉಪಚುನಾವಣೆಗಳನ್ನು ಎದುರಿಸಲು ಕಾಂಗ್ರೆಸ್ ಹೊರಟಿದೆ. ಈಗಾಗಲೇ ಶಿರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಆದರೆ ಆರ್‌.ಆರ್‌ ನಗರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುವುದು ಇನ್ನು ಅಧಿಕೃತಗೊಂಡಿಲ್ಲ. ಆರ್‌ ಆರ್‌ ನಗರದಲ್ಲಿ ಒಕ್ಕಲಿಗ ಮತಗಳು ದೊಡ್ಡ ಮಟ್ಟದಲ್ಲಿದೆ. ಈ ಕ್ಷೇತ್ರದಲ್ಲಿ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತಲೂ ಮುನಿರತ್ನ ವೈಯಕ್ತಿಕ ವರ್ಚಸ್ಸು ಕೆಲಸ ಮಾಡಿದೆ. ಈ ಬಾರಿಯೂ ಸಾಧ್ಯಾಸಾಧ್ಯತೆಗಳು ಮುನಿರತ್ನ ಪಾಲಿಗೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಮುನಿರತ್ನಗೆ ಸರಿಸಾಟಿಯಾಗಿ ನಿಲ್ಲುವ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುವುದು ಸದ್ಯದ ಕುತೂಹಲವಾಗಿದೆ. ಈ ನಡುವೆ ಕಾಂಗ್ರೆಸ್‌ನಿಂದ ರಾಜುಕುಮಾರ್‌, ಮಾಗಡಿ ಬಾಲಕೃಷ್ಣ, ಡಿ.ಕೆ ರವಿ ಪತ್ನಿ ಕುಸುಮ ಹೆಸರುಗಳು ಚಾಲ್ತಿಯಲ್ಲಿವೆ. ಆದರೆ ಅಭ್ಯರ್ಥಿ ಆಯ್ಕೆಯ ಕುರಿತಾಗಿ ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಎರಡು ಕ್ಷೇತ್ರಗಳ ಪೈಕಿ ಒಂದನ್ನಾದರೂ ಗೆಲ್ಲುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ನಡೆಸುತ್ತಿದೆ.


from India & World News in Kannada | VK Polls https://ift.tt/2GlmdaC

ಮುಚ್ಚಿದ್ದ ಸರಕಾರಿ ಶಾಲೆ ರಿಓಪನ್‌: 80ಕ್ಕೂ ಅಧಿಕ ಶಾಲೆಗಳ ಆರಂಭಕ್ಕೆ ಪೋಷಕರ ಒತ್ತಾಯ, ಅಧಿಕಾರಿಗಳಿಗೆ ಪತ್ರ!

ನಾಗರಾಜ್‌ ನವೀಮನೆ ಮೈಸೂರು ಬೆಂಗಳೂರು: ರಾಜ್ಯದ ಹಲವೆಡೆ ವಿದ್ಯಾರ್ಥಿಗಳಿಲ್ಲ ಎಂದು ಮುಚ್ಚಿದ್ದ ಸರಕಾರಿ ಶಾಲೆಗಳನ್ನು ಜನರೇ ಮುಂದೆ ನಿಂತು ತೆರೆಯುತ್ತಿದ್ದಾರೆ. ಸುಮಾರು 80ರಷ್ಟು ಶಾಲೆಗಳ ಮರು ಆರಂಭಕ್ಕೆ ಪೋಷಕರೇ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ಪತ್ರ ಬರೆದಿದ್ದು, ಶಿಕ್ಷಣ ಇಲಾಖೆಯೂ ಈ ನಿಟ್ಟಿನಲ್ಲಿ ಭರವಸೆಯನ್ನು ನೀಡಿದೆ. ಕೆಲವು ಕಡೆ ಆಗಲೇ ಶಾಲೆಗಳ ಮರು ಆರಂಭಕ್ಕೆ ಆದೇಶವೇ ಹೊರಬಿದ್ದಿದೆ. ಮೈಸೂರು ಭಾಗದಲ್ಲಿ ಅತಿ ಹೆಚ್ಚು ಶಾಲೆಗಳ ಮರು ಆರಂಭಕ್ಕೆ ಬೇಡಿಕೆ ಬಂದಿದೆ. ಹಾಸನ ಒಂದರಲ್ಲೇ 24 ಶಾಲೆಗಳು ಮತ್ತೆ ತೆರೆದುಕೊಳ್ಳಲಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಆರಂಭ, ಆಂಗ್ಲಮಾಧ್ಯಮ ಶಿಕ್ಷಣದ ಬಯಕೆಯಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಸರಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ್ದವು. ಇದೀಗ ಸರಕಾರಿ ಶಾಲೆಗಳಲ್ಲಿ ಸಿಗುತ್ತಿರುವ ಸವಲತ್ತುಗಳು, ಕೊರೊನಾದಿಂದಾಗಿ ಹದಗೆಟ್ಟಿರುವ ಆರ್ಥಿಕ ಸ್ಥಿತಿಯಿಂದಾಗಿ ಮತ್ತೆ ಸರಕಾರಿ ಶಾಲೆಗಳ ಆಕರ್ಷಣೆ ಹೆಚ್ಚಿದೆ. ಹೀಗಾಗಿ ಮುಚ್ಚಿದ ಶಾಲೆಗಳಿಗೂ ಬೇಡಿಕೆ ಬಂದಿದೆ. ಪೋಷಕರು ಮರು ತೆರೆಯುವಂತೆ ಡಿಡಿಪಿಐಗಳಿಗೆ ಮನವಿ ಸಲ್ಲಿಸುತ್ತಿದ್ದು, ನಿರ್ದಿಷ್ಟ ಪ್ರಕರಣಗಳನ್ನು ಪರಿಗಣಿಸಿ ಅಧಿಕಾರಿಗಳು ನಿರ್ಧಾರ ಕೈಗೊಳ್ಳುತ್ತಿರುವುದು ಕಂಡುಬಂದಿದೆ. 10 ಮಕ್ಕಳ ದಾಖಲಾತಿ ಇದ್ದರೆ ಶಾಲೆಯನ್ನು ಮರು ತೆರೆಯಲು ಅವಕಾಶವಿದೆ. ಟಿಸಿ ಕೊಡಲು ಶಾಲೆಗಳ ಹಿಂದೇಟು ಕೋಲಾರ ಜಿಲ್ಲೆಯಲ್ಲಿನ ಕೆಲವೊಂದು ಶಾಲೆಗಳು ಶುಲ್ಕ ಪಾವತಿಸುವಂತೆ ಪೋಷಕರ ಬೆನ್ನುಬಿದ್ದಿದ್ದಾರೆ. ಇದರಿಂದ ಬೇಸತ್ತಿರುವ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ. ಆದರೆ, ಖಾಸಗಿ ಶಾಲೆಗಳು ಮಕ್ಕಳ ವರ್ಗಾವಣೆ ಪ್ರಮಾಣ ಪತ್ರ ನೀಡದೆ ಸತಾಯಿಸುತ್ತಿರುವುದು ಕಂಡುಬಂದಿದೆ. ದಾಖಲಾತಿ ಮಾಡಿಕೊಳ್ಳಲು ಆನ್‌ಲೈನ್‌ನಲ್ಲಿ ಟಿಸಿ ಮಾಹಿತಿ ನಮೂದಿಸಬೇಕಾಗಿರುವ ಹಿನ್ನೆಲೆಯಲ್ಲಿ ಸಮಸ್ಯೆಯಾಗುತ್ತಿದೆ. ಖಾಸಗಿ ಶಾಲೆಗಳು ಟಿಸಿ ನೀಡದಂತಹ ಸಂದರ್ಭದಲ್ಲಿ ಬಿಇಒ ಅವರು ಅನುಮತಿ ನೀಡಲು ಸರಕಾರ ಅವಕಾಶ ಕಲ್ಪಿಸಲು ಚಿಂತನೆ ನಡೆಸುತ್ತಿದೆ ಎಂದು ಡಿಡಿಪಿಐ ಜಯರಾಮರೆಡ್ಡಿ ತಿಳಿಸಿದ್ದಾರೆ. ಜನರೇ ಮುಂದೆ ನಿಂತು ತೆರೆದರು ಎಚ್‌.ಡಿ.ಕೋಟೆಯ ನಿಂಗೇನಹಳ್ಳಿಯ ಪೋಷಕರೇ ನನ್ನ ಬಳಿ ಬಂದು ಮುಚ್ಚಿರುವ ಸರಕಾರಿ ಶಾಲೆಯನ್ನು ತೆರೆಯುವಂತೆ ಮನವಿ ಮಾಡಿದರು. ನಂತರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಶಾಲೆಯನ್ನು ಪುನಃ ತೆರೆಯಲಾಯಿತು. ಪೋಷಕರೇ ಇಡೀ ಶಾಲೆ ಆವರಣವನ್ನು ಗುಡಿಸಿ ಸ್ವಚ್ಛಗೊಳಿಸಿದರು. ಅದೇ ರೀತಿ ತಾಳೆಗೌಡನಹುಂಡಿ, ತಾರಕದಲ್ಲೂಕಳೆದ ಎರಡು ವರ್ಷದಿಂದ ಮುಚ್ಚಿದ್ದ ಎರಡು ಶಾಲೆಗಳನ್ನು ತೆರೆಯಲಾಗಿದೆ ಎಂದು ಎಚ್‌.ಡಿ. ಕೋಟೆ ಬಿಇಒ ರೇವಣ್ಣ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು. ಮರು ಆಸಕ್ತಿಗೆ ಕಾರಣವೇನು?
  • ಕೊರೊನಾದಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ.
  • ಸರಕಾರಿ ಶಾಲೆಗಳಲ್ಲಿಆಂಗ್ಲಮಾಧ್ಯಮ ಆರಂಭ
  • ಶುಲ್ಕ, ಪುಸ್ತಕ, ಊಟದ ಚಿಂತೆ ಇರುವುದಿಲ್ಲ.
  • ಆನ್‌ಲೈನ್‌ ತರಗತಿ ಮೇಲೆ ನಂಬಿಕೆ ಕಡಿಮೆ
  • ವಿದ್ಯಾಗಮ ಯೋಜನೆ ಸಮರ್ಪಕ ಅನುಷ್ಠಾನ.
  • ಉತ್ತಮ ಫಲಿತಾಂಶ ಮತ್ತು ನುರಿತ ಬೋಧಕ ವರ್ಗ
  • ಪಂಚಾಯಿತಿ ಮತ್ತು ಊರಿನವರ ಪ್ರಯತ್ನ
ಯಾವ ಜಿಲ್ಲೆಯಲ್ಲಿ ಎಷ್ಟು ಶಾಲೆ?
  • ಶೈಕ್ಷಣಿಕ ಜಿಲ್ಲೆ ಶಾಲೆ
  • ಹಾಸನ 24
  • ಮಂಡ್ಯ 10
  • ತುಮಕೂರು 6
  • ಕೊಡಗು 5
  • ಮೈಸೂರು 4
  • ವಿಜಯಪುರ 3
  • ಶಿರಸಿ 3
  • ಚಾಮರಾಜನಗರ 2
  • ದಕ್ಷಿಣ ಕನ್ನಡ 1
  • ಮಧುಗಿರಿ 1
  • ಚಿಕ್ಕಬಳ್ಳಾಪುರ 1
ಬಹುತೇಕರು ಖಾಸಗಿ ಶಾಲೆಗಳಿಂದ ಪುನಃ ಸರಕಾರಿ ಶಾಲೆಗೆ ಬಂದಿದ್ದಾರೆ. 'ವಿದ್ಯಾಗಮ' ಯೋಜನೆ ನಮ್ಮನ್ನು ಮತ್ತೊಮ್ಮೆ ಕೈಹಿಡಿದಿದೆ. ಕನಿಷ್ಠ 10 ಮಕ್ಕಳಿದ್ದರೆ ತೆರೆಯಲು ಅವಕಾಶವಿದೆ. ಹಾಗಾಗಿ ಈ ವರ್ಷ ಮೈಸೂರು ಜಿಲ್ಲೆಯಲ್ಲಿ ಮುಚ್ಚಿದ್ದ 4 ಸರಕಾರಿ ಶಾಲೆಯನ್ನು ಪುನಃ ತೆರೆಯಲಾಗಿದೆ. ಡಾ.ಪಾಂಡುರಂಗ, ಡಿಡಿಪಿಐ ಮೈಸೂರು ಮಡಿಕೇರಿ ತಾಲೂಕಿನ ಮದನಾಡು, ಸೋಮವಾರ ಪೇಟೆ ತಾಲೂಕಿನ ಎರಡು ಸರಕಾರಿ ಶಾಲೆ ಸೇರಿ ಒಟ್ಟು 5 ಶಾಲೆ ತೆರೆಯಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ದಾಖಲಾತಿ ಮುಗಿದಿದ್ದು, ಈ ವರ್ಷದಿಂದ ಮತ್ತೆ ಬಾಗಿಲು ತೆರೆದು ಮಕ್ಕಳಿಗೆ ಕಲಿಕೆ ಶುರು ಮಾಡಲಾಗುವುದು. ಪಿ.ಎಸ್‌.ಮಚ್ಚಾಡೋ, ಡಿಡಿಪಿಐ ಕೊಡಗು. ಖಾಸಗಿಯಿಂದ ಸರಕಾರಿಗೆ ರಾಜ್ಯಾದ್ಯಂತ ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗೆ ಶಿಫ್ಟ್‌ ಆಗುವ ಪ್ರಕ್ರಿಯೆಯೂ ಬಿರುಸು ಪಡೆದಿದೆ. ಇದುವರೆಗೆ ಸುಮಾರು 5000ಕ್ಕೂ ಅಧಿಕ ಮಕ್ಕಳು ದಾಖಲಾತಿ ಮಾಡಿಕೊಂಡಿದ್ದಾರೆ. ಹಾವೇರಿ(4424), ಗದಗ(4000), ವಿಜಯಪುರ(4000), ಬಾಗಲಕೋಟೆ(3800), ಚಿಕ್ಕೋಡಿ(3500), ತುಮಕೂರು (3455) ಗರಿಷ್ಠ ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ.


from India & World News in Kannada | VK Polls https://ift.tt/34bf8ld

ಆರ್‌. ಆರ್‌ ನಗರ ಬೈ ಎಲೆಕ್ಷನ್: ಮುನಿರತ್ನಗೆ ಸ್ವಪಕ್ಷೀಯರ ಕಾಟ!

ಬೆಂಗಳೂರು: ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಆರ್‌.ಆರ್‌ ನಗರ ವಿಧಾನಸಭಾ ಕ್ಷೇತ್ರ ಕುತೂಹಲದ ಕೇಂದ್ರ ಬಿಂದುವಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ ಪರಿಣಾಮ ತೆರವಾಗಿರುವ ಕ್ಷೇತ್ರದಲ್ಲಿ ಇದೀಗ ಬಿಜೆಪಿಯಿಂದ ಸ್ಪರ್ಧೆ ನಡೆಸಲು ಸಜ್ಜಾಗುತ್ತಿದ್ದಾರೆ. ಆದರೆ ಈ ಬಾರಿ ಮುನಿರತ್ನ ಅವರಿಗೆ ಸ್ವಪಕ್ಷೀಯರಿಂದಲೇ ಕಾಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ನಡೆಸಿದ್ದ ಮುನಿರತ್ನ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಅವರ ವಿರುದ್ಧ ಗೆಲುವು ಕಂಡಿದ್ದರು. ಆದರೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಮುನಿರಾಜು ಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣ ಇನ್ನು ವಿಚಾರಣೆಯ ಹಂತದಲ್ಲಿದೆ. ಈ ನಡುವೆ ಬಿಜೆಪಿಯಿಂದ ಮುನಿರತ್ನಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತವಾಗಿದೆ. ಆಪರೇಷನ್‌ ಕಮಲದ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆಯಲು ಬಿಎಸ್‌ವೈ ನಿರ್ಧರಿಸಿದ್ದಾರೆ. ಆದರೆ ಮುನಿರಾಜು ಗೌಡ ಕೂಡಾ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೆ ನೀಡಿರುವುದು ಕುತೂಹಲ ಕೆರಳಿಸಿದೆ. ಮುನಿರಾಜು ಗೌಡಗೆ ಸಂಘಪರಿವಾರದ ಹಿನ್ನೆಲೆ ಇದ್ದು ಹೈಕಮಾಂಡ್‌ ಮಟ್ಟದಲ್ಲಿರುವ ರಾಜ್ಯ ನಾಯಕರ ಜೊತೆಗೆ ಉತ್ತಮ ನಂಟು ಹೊಂದಿದ್ದಾರೆ. ಆದರೆ ಪಕ್ಷದ ನಿರ್ಧಾರ ಏನು ಎಂಬುವುದು ಇನ್ನೂ ಅಧಿಕೃತಗೊಂಡಿಲ್ಲ. ಬಿಜೆಪಿ ಮೂಲಗಳ ಪ್ರಕಾರ ಮುನಿರತ್ನಗೆ ಟಿಕೆಟ್‌ ಸಿಗುವ ಸಾಧ್ಯತೆ ಬಹುತೇಕ ಹೆಚ್ಚಾಗಿದೆ. ಸದ್ಯ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಪಕ್ಷದ ತೀರ್ಮಾನವೇ ಅಂತಿಮ ಎಂದು ಮುನಿರಾಜು ಗೌಡ ಹೇಳುತ್ತಿದ್ದರೂ ಆಂತರಿಕವಾಗಿ ಭಿನ್ನಮತ ಬಿಗಡಾಯಿಸುವ ಲಕ್ಷಣಗಳು ಗೋಚರಿಸುತ್ತಿವೆ. ಇದು ಉಪಚುನಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುವುದು ಸದ್ಯದ ಕುತೂಹಲ.


from India & World News in Kannada | VK Polls https://ift.tt/34q3yTF

ದಸರಾ ಮೆರವಣಿಗೆಗೆ ಕೇವಲ 5 ಸ್ತಬ್ಧಚಿತ್ರ, 200 ಕಲಾವಿದರು!

ನಾಗರಾಜ್‌ ನವೀಮನೆ ಮೈಸೂರು: ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಐದು ಸ್ತಬ್ಧಚಿತ್ರಗಳು ಮಾತ್ರ ಪ್ರದರ್ಶನಗೊಳ್ಳಲಿದ್ದು, 200 ಕಲಾವಿದರು ಹೆಜ್ಜೆ ಹಾಕಲಿದ್ದಾರೆ! ಕೋವಿಡ್‌ ಕಾರಣದಿಂದ ಈ ವರ್ಷ ಸರಳ ದಸರಾ ಆಚರಣೆಗೆ ಸರಕಾರ ಮುಂದಾಗಿರುವುದರಿಂದ ಜಂಬೂ ಸವಾರಿಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಜನದಟ್ಟಣೆಯಾಗಬಾರದು ಎಂಬ ಉದ್ದೇಶದಿಂದ ಮುಂಜಾಗ್ರತ ಕ್ರಮವಾಗಿ ಸ್ತಬ್ಧಚಿತ್ರಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಪ್ರತಿ ಸ್ತಬ್ಧಚಿತ್ರದ ಹಿಂದೆ 40 ಕಲಾವಿದರ ತಂಡ ಸಾಗಲಿದೆ. ಪ್ರತಿವರ್ಷ ಪ್ರತಿ ಜಿಲ್ಲೆಯಿಂದ ಒಂದೊಂದು ಲೆಕ್ಕದಲ್ಲಿ 40ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದ್ದವು. ಇದಕ್ಕಾಗಿ ಮೂರು ತಿಂಗಳ ಮುಂಚಿನಿಂದಲೇ ತಯಾರಿ ನಡೆಯುತ್ತಿತ್ತು. ಆದರೆ, ಕೊರೊನಾ ಈ ಬಾರಿ ಎಲ್ಲವನ್ನೂ ಸೀಮಿತಗೊಳಿಸುವಂತೆ ಮಾಡಿದೆ. ಯಾವ ರೀತಿಯ ?: ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಬಿಂಬಿಸುವ ಎರಡು ಸ್ತಬ್ಧಚಿತ್ರಗಳು, ಜಾಗತಿಕ ತಲ್ಲಣ ಮೂಡಿಸಿರುವ ಕೋವಿಡ್‌ ಜಾಗೃತಿಯ ಮತ್ತೊಂದು ಸ್ತಬ್ಧಚಿತ್ರ, ಮೈಸೂರು ಸಂಸ್ಕೃತಿಯ ಮಹತ್ವ ಸಾರುವ ಮತ್ತು ಆನೆಬಂಡಿ ಬಗ್ಗೆ ಮಾಹಿತಿ ನೀಡುವ ಎರಡು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿಬರಲಿವೆ. ಸ್ತಬ್ಧಚಿತ್ರಗಳ ನಿರ್ಮಾಣಕ್ಕೆ ಪರಿಕಲ್ಪನೆ ಹಾಗೂ ವಿನ್ಯಾಸವನ್ನು ಈಗಾಗಲೇ ಕಲಾವಿದರಿಗೆ ನೀಡಲಾಗಿದೆ. ಕಲಾವಿದರಿಗೆ ಎರಡು ಬಾರಿ ಪರೀಕ್ಷೆ: ಜಂಬೂಸವಾರಿ ಮೆರವಣಿಗೆಯಲ್ಲಿಗುಂಪಾಗಿ ಕಾರ‍್ಯಕ್ರಮ ನೀಡುವುದರಿಂದ ಎರಡು ಬಾರಿ ಕಲಾವಿದರಿಗೆ ಕೋವಿಡ್‌ ಟೆಸ್ಟ್‌ ಮಾಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಐದು ದಿನಗಳ ಮುಂಚೆ ಹಾಗೂ ಜಂಬೂಸವಾರಿ ಹಿಂದಿನ ದಿನ ಸೇರಿದಂತೆ ಎರಡು ಬಾರಿ ಕೊರೊನಾ ಟೆಸ್ಟ್‌ ಮಾಡಿಸಲಾಗುತ್ತದೆ. ಯಾರಿಗಾದರೂ ಪಾಸಿಟಿವ್‌ ವರದಿ ಬಂದರೆ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಜಂಬೂಸವಾರಿ ನೋಡಲು ಬರುವವರಿಗೆ ಕೂಡ ಆರೋಗ್ಯ ತಪಾಸಣೆ ನಂತರವೇ ಒಳಗೆ ಬಿಡಲಾಗುತ್ತದೆ. ಯಾರಿಗಾದರೂ ರೋಗ ಲಕ್ಷಣಗಳಿದ್ದರೆ ಅವರನ್ನು ಕೂಡಲೇ ಹೋಂ ಐಸೋಲೇಷನ್‌ ಮಾಡಲಾಗುತ್ತದೆ. 7 ದಿನ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ‍್ಯಕ್ರಮ ''ಕೊರೊನಾ ಹಿನ್ನೆಲೆಯಲ್ಲಿ ನವರಾತ್ರಿ ವೇಳೆ ಅರಮನೆ ಆವರಣದಲ್ಲಿ 7 ದಿನ ಮಾತ್ರ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯುತ್ತದೆ. ನಿತ್ಯ ಒಂದು ತಂಡದವರು ಮಾತ್ರ ಕಾರ‍್ಯಕ್ರಮ ನೀಡುವರು. ಪೊಲೀಸ್‌ ಬ್ಯಾಂಡ್‌ ಕಾರ‍್ಯಕ್ರಮ ಹಾಗೂ ಆಯುಧಪೂಜೆ ದಿನ ಯಾವುದೇ ಪ್ರದರ್ಶನ ಇರುವುದಿಲ್ಲ,'' ಎಂದು ಜಿಪಂ ಸಿಇಒ ಭಾರತಿ ಡಿ. ವಿಜಯ ಕರ್ನಾಟಕಕ್ಕೆ ತಿಳಿಸಿದರು. ಜಂಬೂಸವಾರಿ ದಿನ 2 ಸಾವಿರ ಜನರಿಗೆ ದಸರಾ ನೋಡಲು ಅವಕಾಶ ನೀಡಬೇಕೆಂದು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇನ್ನೂ ಅನುಮತಿ ಸಿಕ್ಕಿಲ್ಲ. ದಸರಾ ವೀಕ್ಷಣೆಗೆ ಬರುವವರಿಗೆ ಹೆಲ್ತ್‌ ಟೆಸ್ಟ್‌ ಕಡ್ಡಾಯವಾಗಿ ಮಾಡಲಾಗುವುದು. - ಬಿ.ಶರತ್‌, ಜಿಲ್ಲಾಧಿಕಾರಿ ಖಾದಿ ಗ್ರಾಮೋದ್ಯೋಗ, ಉಪ ಸಮಿತಿ, ಡಿಡಿಪಿಐ, ಮೈಸೂರು ವಿವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಿಗೆ ಸ್ತಬ್ಧಚಿತ್ರದ ಪರಿಕಲ್ಪನೆ ಕಳುಹಿಸಲಾಗಿದೆ. ಆಯಾ ಇಲಾಖೆಯವರು ಕಲಾವಿದರ ಕೈಯಲ್ಲಿಸ್ತಬ್ಧಚಿತ್ರ ತಯಾರಿಸುತ್ತಾರೆ. - ಡಿ.ಕೆ.ಲಿಂಗರಾಜು, ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ


from India & World News in Kannada | VK Polls https://ift.tt/3igZxpa

ಡ್ರಗ್ಸ್‌ ಮಾಫಿಯಾ ನಾಲ್ವರ ಬಂಧನ: ವೆಬ್‌ ಸೀರೀಸ್‌ ನೋಡಿ ಡ್ರಗ್ಸ್‌ ಆರ್ಡರ್‌ ಕಲಿತ ಆರೋಪಿ, ಮಣಿಪಾಲಕ್ಕೂ ಸಪ್ಲೈ!

ಬೆಂಗಳೂರು: ಮಾದಕ ವಸ್ತುಗಳಿಗೆ ಕಡಿವಾಣ ಹಾಕುತ್ತಿರುವ ಮಾದಕವಸ್ತು ನಿಯಂತ್ರಣ ದಳ(ಎನ್‌ಸಿಬಿ) ಅಧಿಕಾರಿಗಳು ಇದೀಗ ಭರ್ಜರಿ ಬೇಟೆಯೊಂದನ್ನು ಮಾಡಿದ್ದಾರೆ. ಡಾರ್ಕ್‌ನೆಟ್‌ ಮೂಲಕ ಆರ್ಡರ್‌ ಮಾಡಿ, ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿಸಿ, ನೆದರ್‌ಲ್ಯಾಂಡ್‌ನಿಂದ ಕೊರಿಯರ್‌ ಮೂಲಕ ತರಿಸಲಾಗಿದ್ದ 750 ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಿರುವ ಮಾದಕವಸ್ತು ನಿಯಂತ್ರಣ ದಳ(ಎನ್‌ಸಿಬಿ) ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.

ಮಾದಕವಸ್ತು ಜಾಲದ ಆರೋಪಿ ಕೆ.ಪ್ರಮೋದ್‌ ಎಂಬಾತ ಮೊದಲು ಸಿಕ್ಕಿಬಿದ್ದಿದ್ದಾನೆ. ನಂತರ ಜಾಲದ ಮಾಸ್ಟರ್‌ಮೈಂಡ್‌ ಫಾಹೀಂ ಮತ್ತು ಆತನ ಸಹಚರರಾದ ಎ.ಹಶೀರ್‌ ಮತ್ತು ಎಸ್‌.ಎಸ್‌.ಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯಾಗಿರುವ ಫಾಹೀಂ ವೆಬ್‌ ಸೀರೀಸ್‌ನಿಂದ ಪ್ರೇರಿತನಾಗಿ ಡಾರ್ಕ್ನೆಟ್‌ ಮೂಲಕ ಮಾದಕವಸ್ತುಗಳನ್ನು ಅರ್ಡರ್‌ ಮಾಡುವ ಐಡಿಯಾ ಕಲಿತಿದ್ದ.


ಡ್ರಗ್ಸ್‌ ಮಾಫಿಯಾ ನಾಲ್ವರ ಬಂಧನ: ವೆಬ್‌ ಸೀರೀಸ್‌ ನೋಡಿ ಡ್ರಗ್ಸ್‌ ಆರ್ಡರ್‌ ಕಲಿತ ಆರೋಪಿ, ಮಣಿಪಾಲಕ್ಕೂ ಸಪ್ಲೈ!

ಬೆಂಗಳೂರು:

ಮಾದಕ ವಸ್ತುಗಳಿಗೆ ಕಡಿವಾಣ ಹಾಕುತ್ತಿರುವ ಮಾದಕವಸ್ತು ನಿಯಂತ್ರಣ ದಳ(ಎನ್‌ಸಿಬಿ) ಅಧಿಕಾರಿಗಳು ಇದೀಗ ಭರ್ಜರಿ ಬೇಟೆಯೊಂದನ್ನು ಮಾಡಿದ್ದಾರೆ. ಡಾರ್ಕ್‌ನೆಟ್‌ ಮೂಲಕ ಆರ್ಡರ್‌ ಮಾಡಿ, ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿಸಿ, ನೆದರ್‌ಲ್ಯಾಂಡ್‌ನಿಂದ ಕೊರಿಯರ್‌ ಮೂಲಕ ತರಿಸಲಾಗಿದ್ದ 750 ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಿರುವ ಮಾದಕವಸ್ತು ನಿಯಂತ್ರಣ ದಳ(ಎನ್‌ಸಿಬಿ) ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.



ಸುಳಿವು ನೀಡಿದ ಕೊರಿಯರ್‌!
ಸುಳಿವು ನೀಡಿದ ಕೊರಿಯರ್‌!

2020ರ ಜು.30ರಂದು ನೆದರ್‌ಲ್ಯಾಂಡ್‌ನ ವಿದೇಶಿ ಅಂಚೆ ಕಚೇರಿಯಿಂದ ಭಾರತಕ್ಕೆ ಪಾರ್ಸೆಲ್‌ವೊಂದನ್ನು ರವಾನಿಸಲಾಗಿತ್ತು. ಆದರೆ, ಪಾರ್ಸೆಲ್‌ ಸ್ವೀಕರಿಸಬೇಕಿದ್ದ ಸಂಸ್ಥೆ ಅಥವಾ ವ್ಯಕ್ತಿಯ ಹೆಸರು, ವಿಳಾಸ ನಮೂದು ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಮಾಹಿತಿ ಸಹಿತ ಎನ್‌ಸಿಬಿ ತಂಡಗಳು ವಿವರವಾಗಿ ತನಿಖೆ ನಡೆಸಿದಾಗ ಪಾರ್ಸೆಲ್‌ ಸ್ವೀಕರಿಸಬೇಕಿದ್ದ ಮಾದಕವಸ್ತು ಜಾಲದ ಆರೋಪಿ ಕೆ.ಪ್ರಮೋದ್‌ ಎಂಬಾತ ಸಿಕ್ಕಿಬಿದ್ದಿದ್ದಾನೆ. ನಂತರ ಜಾಲದ ಮಾಸ್ಟರ್‌ಮೈಂಡ್‌ ಫಾಹೀಂ ಮತ್ತು ಆತನ ಸಹಚರರಾದ ಎ.ಹಶೀರ್‌ ಮತ್ತು ಎಸ್‌.ಎಸ್‌.ಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯಾಗಿರುವ ಫಾಹೀಂ ವೆಬ್‌ ಸೀರೀಸ್‌ನಿಂದ ಪ್ರೇರಿತನಾಗಿ ಡಾರ್ಕ್ನೆಟ್‌ ಮೂಲಕ ಮಾದಕವಸ್ತುಗಳನ್ನು ಅರ್ಡರ್‌ ಮಾಡುವ ಐಡಿಯಾ ಕಲಿತಿದ್ದ.

ಅಶ್ಲೀಲ ವೆಬ್‌ಸೈಟ್‌ಗೆ ಶಿಕ್ಷಕಿ, ಸಹಪಾಠಿಗಳ ಫೋಟೋ ಅಪ್‌ಲೋಡ್‌ ಮಾಡಿದ ಕಾನೂನು ವಿದ್ಯಾರ್ಥಿ; ಮತ್ತೇನಾಯ್ತು?



ವಿವಿಗಳು, ಕಾಲೇಜುಗಳಿಗೆ ಸರಬರಾಜು!
ವಿವಿಗಳು, ಕಾಲೇಜುಗಳಿಗೆ ಸರಬರಾಜು!

ಆರೋಪಿ ಫಾಹೀಂ ದೇಶದ ವಿವಿಧ ಸ್ಥಳಗಳಿಗೆ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ. ಉಡುಪಿಯ ಮಣಿಪಾಲ್‌ ವಿವಿ, ಎನ್‌ಎಂಎಎಂಐಟಿ ಕಾಲೇಜು, ಮಣಿಪಾಲದಲ್ಲಿನ ಕ್ಲಬ್‌ಗಳು, ಚೆನ್ನೈನ ಎಸ್‌ಆರ್‌ಎಂ ವಿವಿ ಸೇರಿದಂತೆ ಹಲವು ಸ್ಥಳಗಳಿಗೆ ಮಾದಕವಸ್ತುಗಳನ್ನು ಪೂರೈಸುತ್ತಿದ್ದ.ಈ ಮಾದಕವಸ್ತುಗಳ ಜಾಲ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಬಂಧಿತ ಫಾಹೀಂ ಮತ್ತು ಪ್ರಮೋದ್‌ ಕೇರಳ ಮೂಲದವರಾಗಿದ್ದಾರೆ. ಎ.ಹಶೀರ್‌ ಮತ್ತು ಎಸ್‌.ಎಸ್‌.ಶೆಟ್ಟಿ ಕರ್ನಾಟಕದವರಾಗಿದ್ದಾರೆ. ಜಾಲದೊಂದಿಗೆ ನಂಟು ಹೊಂದಿರುವವರಿಗಾಗಿ ಶೋಧ ಮುಂದುವರಿದಿದೆ ಎಂದು ಎನ್‌ಸಿಬಿ ತಿಳಿಸಿದೆ.

ಅ.1ರಂದು ಹಸಿರು ಮಾರ್ಗದಲ್ಲಿ ಮೆಟ್ರೋ ಸೀಮಿತ ಸಂಚಾರ, ಜಕ್ಕೂರು ವಾಯುನೆಲೆ ಬಳಿ ಕಾಮಗಾರಿಗೆ ಹೈಕೋರ್ಟ್‌ ನಿರ್ಬಂಧ



ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿ
ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿ

ಪ್ರಮುಖ ಆರೋಪಿಯಾಗಿರುವ ಫಾಹೀಂ, ಡ್ರಗ್ಸ್‌ ಕುರಿತಾದ ಜನಪ್ರಿಯ ವೆಬ್‌ ಸೀರೀಸ್‌ ನೋಡಿ ಪ್ರೇರಿತನಾಗಿ ಡಾರ್ಕ್‌ನೆಟ್‌ ಮೂಲಕ ಮಾದಕವಸ್ತುಗಳನ್ನು ಆರ್ಡರ್‌ ಮಾಡುವ ಐಡಿಯಾ ಕಲಿತಿದ್ದ. ಮೊದಲು ಕ್ರಿಪ್ಟೋ ಕರೆನ್ಸಿ ಖರೀದಿಸುವುದು, ಆ ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿಸಿ ಡಾರ್ಕ್‌ನೆಟ್‌ನಲ್ಲಿ ಮಾದಕವಸ್ತುಗಳಿಗೆ ಆರ್ಡರ್‌ ಮಾಡುತ್ತಿದ್ದ ಎಂದು ಎನ್‌ಸಿಬಿ ತಿಳಿಸಿದೆ.





from India & World News in Kannada | VK Polls https://ift.tt/3jhNBEX

ರಾಮನಗರದಲ್ಲಿ ಚೇತರಿಕೆ ಕಾಣದ ಕೆಎಸ್‌ಆರ್‌ಟಿಸಿ: ಸರಾಸರಿ 50 ಲಕ್ಷದಿಂದ 30 ಲಕ್ಷಕ್ಕೆ ಕುಸಿದ ಆದಾಯ!

ಆರ್‌.ಶ್ರೀಧರ್‌ ರಾಮನಗರ: ಲಾಕ್‌ಡೌನ್‌ನಿಂದಾಗಿ ಸತತ ಆರು ತಿಂಗಳು ಕಾಲ ರಸ್ತೆಗಿಳಿಯದ ಬಸ್ಸುಗಳು, ಈಗ ರಸ್ತೆಗಿಳಿದಿದ್ದರೂ, ನಷ್ಟದ ಹಾದಿಯಿಂದ ಹೊರಬಂದಿಲ್ಲ ಎಂಬುದು ವಿಶೇಷ. ಇದರಿಂದ ಬಸ್‌ ಚಾಲಕರು ಹಾಗು ನಿರ್ವಾಹಕರು ಆತಂಕದಲ್ಲಿ ದಿನ ದೂಡುವಂತಾಗಿದೆ. ಅರ್ಧದಷ್ಟು ಕುಸಿದ ಆದಾಯಅನ್‌ಲಾಕ್‌ ಬಳಿಕ ಬಸ್ಸುಗಳ ಓಡಾಟ ಹೆಚ್ಚಿದ್ದರೂ ಆದಾಯ ಮಾತ್ರ ಅರ್ಧದಷ್ಟು ಕುಸಿದಿದೆ. ಲಾಕ್‌ಡೌನ್‌ನಿಂದಾಗಿ ಸುಮಾರು ಎರಡು ತಿಂಗಳ ಕಾಲ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ನಂತರದಲ್ಲಿ ಹಂತಹಂತವಾಗಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಿತ್ತು. ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗದಲ್ಲಿ ಲಾಕ್‌ಡೌನ್‌ ಮುನ್ನ ನಿತ್ಯ 49-40 ಲಕ್ಷದಷ್ಟಿದ್ದ ಆದಾಯ ಸಂಪೂರ್ಣ ಕುಸಿದಿತ್ತು. ಈಗ ನಿತ್ಯ 30 ಲಕ್ಷದಷ್ಟು ಆದಾಯ ಸಂಗ್ರಹ ಆಗುತ್ತಿದ್ದು, ದಿನಕ್ಕೆ ಇನ್ನೂ 20 ಲಕ್ಷದಷ್ಟು ಆದಾಯ ಕೈ ತಪ್ಪುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಜಿಲ್ಲೆಗೆ ಆರು ಡಿಪೋಗಳುರಾಮನಗರ ಘಟಕದ ವ್ಯಾಪ್ತಿಯಲ್ಲಿ ರಾಮನಗರ, ಚನ್ನಪಟ್ಟಣ. ಮಾಗಡಿ, ಕನಕಪುರ, ಆನೇಕಲ್‌ ಸೇರಿದಂತೆ ಒಟ್ಟು 6 ಡಿಪೊಗಳಿವೆ. ಲಾಕ್‌ಡೌನ್‌ಗೆ ಮುನ್ನ ಇವುಗಳಲ್ಲಿ ನಿತ್ಯ 500 ಬಸ್ಸುಗಳು ಸಂಚರಿಸುತ್ತಿದ್ದವು. ದಿನವೊಂದಕ್ಕೆ ಸರಾಸರಿ 2.10 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಈಗ ಕೇವಲ 360 ಬಸ್ಸುಗಳು ಮಾತ್ರ ಪ್ರತಿ ದಿನ ರಸ್ತೆಗೆ ಇಳಿಯುತ್ತಿವೆ. ಇನ್ನೂ 140 ಬಸ್ಗಳು ಡಿಪೊನಲ್ಲೇ ಉಳಿದಿವೆ. ಸದ್ಯ ಮೈಸೂರು-ಬೆಂಗಳೂರು ಮಾರ್ಗದಲ್ಲಿ ಪ್ರಮಾಣಿಕರ ಸಂಖ್ಯೆ ಹೆಚ್ಚಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಬಸ್ಸುಗಳು ಸಂಚಾರ ನಡೆಸಿವೆ. ಆದರೆ, ಉಳಿದ ಭಾಗಗಳಲ್ಲಿ ಪರಿಸ್ಥಿತಿ ಬೇರೆಯಾಗಿದೆ. ಕನಕಪುರ, ಮಾಗಡಿ, ರಾಮನಗರ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸೇವೆಗೆ ಬೇಡಿಕೆ ಕಡಿಮೆಯಾಗಿದೆ. ಸಿಬ್ಬಂದಿ ಮಾತ್ರವೇ ಹಾಜರುಸಾರಿಗೆ ಸಂಸ್ಥೆಯ ಶೇ.85 ರಷ್ಟು ಸಿಬ್ಬಂದಿ ಈಗಾಗಲೇ ಸೇವೆಗೆ ಮರಳಿದ್ದಾರೆ. ಅವರಿಗೆ ಪಾಳಿ ಆಧಾರದಲ್ಲಿ ಕರ್ತವ್ಯ ನಿಯೋಜಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಒಂದಿಷ್ಟು ಮಂದಿ ಮಾತ್ರ ಬರಬೇಕಿದೆ. ರಜೆಯಲ್ಲಿ ತೆರಳಿದವರು ಸೇವೆಗೆ ಮರಳುವ ಮುನ್ನ ಕೋವಿಡ್‌ ಪರೀಕ್ಷೆ ಪ್ರಮಾಣಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಮೂರ್ನಾಲ್ಕು ದಿನದ ಬಳಿಕಷ್ಟೇ ಅಂತಹವರು ಕೆಲಸಕ್ಕೆ ಬರಬೇಕಿದೆ. ಹೊರರಾಜ್ಯಗಳ ಗಡಿ ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಕೆಲವು ಕಡೆ ನಿರ್ಬಂಧ ಮುಂದುವರಿದಿರುವುದು ಸಂಸ್ಥೆಯ ಆದಾಯ ಕುಸಿಯಲು ಕಾರಣವಾಗಿದೆ. ರಾಮನಗರ ವಿಭಾಗದಿಂದ ಒಟ್ಟು 88 ಶೆಡ್ಯುಲ್‌ಗಳಲ್ಲಿ ಹೊರ ರಾಜ್ಯಗಳಿಗೆ ಬಸ್‌ಗಳು ಸಂಚರಿಸುತ್ತವೆ. ಈ ಪೈಕಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನ ಕೆಲವು ಭಾಗಗಳಿಗೆ ಓಡಾಟಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ತಮಿಳುನಾಡಿನ ಹೊಸೂರು ಗಡಿ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಸದ್ಯ ಕೇವಲ ಅತ್ತಿಬೆಲೆವರೆಗೆ ಸಂಚರಿಸಿ ಬಸ್‌ಗಳು ವಾಪಸ್‌ ಆಗುತ್ತಿವೆ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು. ಗ್ರಾಮೀಣ ಭಾಗದಲ್ಲಿ ಹಿನ್ನಡೆ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸೇವೆಗೆ ಮೊದಲಿನಂತೆ ಬೇಡಿಕೆ ಇಲ್ಲ. ಒಂದು ರೂಟ್‌ನಲ್ಲಿ ಕೆಲವೊಮ್ಮೆ 4-5 ಪ್ರಯಾಣಿಕರಷ್ಟೇ ಇರುತ್ತಾರೆ. ಇಂತಹ ಕಡೆಗಳಲ್ಲಿ ಸಮರ್ಪಕ ಸೇವೆ ಒದಗಿಸಲು ಕೆಎಸ್‌ಆರ್‌ಟಿಸಿಗೆ ಸಾಧ್ಯವಾಗುತ್ತಿಲ್ಲ ಎನ್ನಬಹುದು. ಹಳ್ಳಿಗಳಲ್ಲಿ ಇನ್ನೂ ಕೋವಿಡ್‌ ಭಯ ದೂರವಾಗಿಲ್ಲ. ಜನರು ಬಸ್‌ಗಳಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಎಕ್ಸ್‌ಪ್ರೆಸ್‌ ಮಾರ್ಗಗಳಲ್ಲಿಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿಅದೇ ಪರಿಸ್ಥಿತಿ ಇರುವುದರಿಂದ ಬಸ್ಸುಗಳ ಆದಾಯ ನಷ್ಟವಾಗುತ್ತಿದೆ.
  • 6-ಕೆಎಸ್‌ಆರ್‌ಟಿಸಿ ರಾಮನಗರ ಘಟಕ ವ್ಯಾಪ್ತಿಯ ಬಸ್‌ ಡಿಪೊಗಳು
  • 360- ಸದ್ಯ ನಿತ್ಯ ಸಂಚಾರ ಕೈಗೊಂಡಿರುವ ಬಸ್ಸುಗಳು
  • 50 ಲಕ್ಷ- ಲಾಕ್‌ಡೌನ್‌ಗು ಮುನ್ನ ದಿನವೊಂದರ ಸರಾಸರಿ ಗಳಿಕೆ
  • 30 ಲಕ್ಷ- ಸದ್ಯದ ಸರಾಸರಿ ಗಳಿಕೆ
  • 2250-ರಾಮನಗರ ಘಟಕ ವ್ಯಾಪ್ತಿಯಲ್ಲಿನ ಒಟ್ಟು ಸಿಬ್ಬಂದಿ
ನಮ್ಮಲಿರುವ 500 ಬಸ್ಸುಗಳಲ್ಲಿ, 360 ಬಸ್ಸುಗಳು ಮಾತ್ರ ಪ್ರತಿ ದಿನ ರಸ್ತೆಗೆ ಇಳಿಯುತ್ತಿವೆ. ಇನ್ನೂ 140 ಬಸ್ಗಳು ಡಿಪೊನಲ್ಲೇ ಉಳಿದಿವೆ. ಗ್ರಾಮೀಣ ಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಜತೆಗೆ, ಗಡಿ ಪ್ರವೇಶ ಮಾಡುತ್ತಿಲ್ಲ. ಹೀಗಾಗಿ ನಿತ್ಯ 20ಲಕ್ಷದಷ್ಟು ಆದಾಯ ಕಡಿಮೆಯಾಗಿದೆ. ಮಹೇಶ್‌, ವಿಭಾಗೀಯ ನಿಯಂತ್ರಕ, ಕೆಎಸ್‌ಆರ್‌ಟಿಸಿ


from India & World News in Kannada | VK Polls https://ift.tt/30k6gsk

ಆಂಧ್ರದ ಮಹಿಳೆಗಾಗಿ ಕನ್ನಡಿಗನಿಗೆ ಅವಮಾನ, ಜಿಲ್ಲಾಧಿಕಾರಿ ಶರತ್‌ ವರ್ಗಾವಣೆಗೆ ಸಾರಾ ಮಹೇಶ್‌ ಆಕ್ರೋಶ

ಕೊರೊನಾ ಎಫೆಕ್ಟ್‌: 28,000 ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯಲಿದೆ ಮನರಂಜನಾ ಕ್ಷೇತ್ರದ ದಿಗ್ಗಜ ಡಿಸ್ನಿ!

ಕ್ಯಾಲಿಫೋರ್ನಿಯಾ: ಮನರಂಜನಾ ಕ್ಷೇತ್ರದ ದಿಗ್ಗಜ ಸಂಸ್ಥೆಯು ಅಮೆರಿಕದಲ್ಲಿರುವ ಥೀಮ್‌ ಪಾರ್ಕ್‌ನ 28,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಮಂಗಳವಾರ ತಿಳಿಸಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕದಿಂದ ಬಿಕ್ಕಟ್ಟು ಎದುರಾಗಿದ್ದು, ನೌಕರರನ್ನು ಕೆಲಸದಿಂದ ತೆಗೆಯಲು ಡಿಸ್ನಿ ನಿರ್ಧರಿಸಿದೆ ಎಂದು ಸಂಸ್ಥೆ ತಿಳಿಸಿದೆ. ಈ ಬಗ್ಗೆ ದಿ ನ್ಯೂ ಯಾರ್ಕ್‌ ಟೈಮ್ಸ್‌ಗೆ ಪ್ರತಿಕ್ರಿಯೆ ನೀಡಿರುವ ಡಿಸ್ನಿ ಪಾರ್ಕ್‌ನ ಮುಖ್ಯಸ್ಥ ಜೋಶ್‌ ಡಿ ಅಮೆರೊ, ಈ ರೀತಿಯ ಕ್ರಮಕೈಗೊಳ್ಳುವುದು ನಿಜಕ್ಕೂ ನೋವುಂಟು ಮಾಡಿದೆ. ಆದರೆ ಸಾಂಕ್ರಾಮಿಕದ ಅವಧಿ ಅನಿಶ್ಚಿತತೆಯಿಂದ ಇದ್ದು ಹಾಗೂ ದೀರ್ಘಕಾಲದವರೆಗೆ ಇದರ ಪರಿಣಾಮ ಮುಂದುವರಿಯಲಿದ್ದು ಇದೊಂದೆ ಆಯ್ಕೆಯು ನಮಗೆ ಉಳಿದಿದೆ. ಅಂತರ ಕಾಯ್ದುಕೊಳ್ಳಬೇಕಾದ ಅವಶ್ಯಕತೆಯಿಂದಾಗಿ ಕಾರ್ಯನಿರ್ವಹಿಸಬಹುದಾದ ಸಿಬ್ಬಂದಿ ಪ್ರಮಾಣದಲ್ಲೂ ಇಳಿಕೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ. ಥೀಮ್‌ ಪಾರ್ಕ್‌ನಲ್ಲಿ ನಾಲ್ಕನೇ ಒಂದು ಭಾಗ ನೌಕರರು ಅಥವಾ 28,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದಾಗಿ ಕಂಪನಿ ಹೇಳಿದೆ. ಕೋವಿಡ್‌ಗೂ ಮುನ್ನ ಕ್ಯಾಲಿಫೋರ್ನಿಯಾ ಮತ್ತು ಫ್ಲೋರಿಡಾದಲ್ಲಿರುವ ಡಿಸ್ನಿ ಥೀಮ್‌ ಪಾರ್ಕ್‌ಗಳಲ್ಲಿ ಸುಮಾರು 1,10,000 ಜನರು ಕಾರ್ಯನಿರ್ವಹಿಸುತ್ತಿದ್ದರು. ಉದ್ಯೋಗ ಕಡಿತದಿಂದ ಆ ಪ್ರಮಾಣ 82,000ಕ್ಕೆ ಇಳಿಯಲಿದೆ. ಜಾನ್‌ ಹಾಪ್ಕಿನ್ಸ್ ಯೂನಿವರ್ಸಿಟಿ ಪ್ರಕಾರ, ಅಮೆರಿಕದಲ್ಲಿ ಒಟ್ಟು 71,80,411 ಪ್ರಕರಣಗಳು ದಾಖಲಾಗಿದ್ದು, 2,05,774 ಮಂದಿ ಸಾವಿಗೀಡಾಗಿದ್ದಾರೆ.


from India & World News in Kannada | VK Polls https://ift.tt/345bPMs

ಐಪಿಎಲ್‌ 2020: ಸೋಲಿನ ಬೇಸರದಲ್ಲಿದ್ದ ಶ್ರೇಯಸ್‌ ಅಯ್ಯರ್‌ಗೆ ಪಂದ್ಯದ ಬಳಿಕ ಮತ್ತೊಂದು ಆಘಾತ!

ಹೊಸದಿಲ್ಲಿ: ಸತತ ಎರಡು ಪಂದ್ಯಗಳಲ್ಲಿ ಗೆದ್ದು ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ತಮ್ಮ ಮೂರನೇ ಪಂದ್ಯದಲ್ಲಿ ವಿರುದ್ಧ 15 ರನ್‌ಗಳಿಂದ ಸೋಲು ಅನುಭವಿಸಿತು. ಟೂರ್ನಿಯ ಮೊದಲ ಸೋಲಿನೆ ಬೇಸರದಲ್ಲಿದ್ದ ಡೆಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ಗೆ ಪಂದ್ಯದ ಬಳಿಕ ಮತ್ತೊಂದು ಆಘಾತ ಉಂಟಾಯಿತು. ನಿಗದಿತ 20 ಓವರ್‌ಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯವನ್ನು ತೆಗೆದುಕೊಂಡಿತ್ತು. 20 ಓವರ್‌ಗಳನ್ನು ಮುಗಿಸಲು ಹೆಚ್ಚುವರಿ 23 ನಿಮಿಷಗಳನ್ನು ತೆಗೆದುಕೊಂಡಿದೆ. 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಮೊದಲ ಬಾರಿ ನಿಧಾನಗತಿಯ ಓವರ್‌ ರೇಟ್‌ ಅಪರಾಧಕ್ಕೆ ಒಳಗಾಯಿತು. ಈ ಹಿನ್ನಲೆಯಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ಗೆ 12 ಲಕ್ಷ ರೂ.ಗಳನ್ನು ದಂಡ ವಿಧಿಸಲಾಗಿದೆ. "ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿ ಟೂರ್ನಿಯ ಮೊದಲ ಸಲ ನಿಧಾನಗತಿಯ ಓವರ್‌ಗಳ ಅಪರಾಧಕ್ಕೆ ಒಳಗಾಗಿದೆ. ತಂಡದ ನಾಯಕ ಅವರಿಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ," ಎಂದು ಐಪಿಎಲ್‌ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಿಂದ ತಿಳಿದುಬಂದಿದೆ. ಪಂದ್ಯದ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿದಿದೆ. ಇದೀಗ ರಾಜಸ್ಥಾನ್‌ ರಾಯಲ್ಸ್ ಅಗ್ರ ಸ್ಥಾನಕ್ಕೇರಿದೆ. ಅಕ್ಟೋಬರ್‌ 3 ರಂದು ಶಾರ್ಜಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಸೆಣಸಲಿದೆ. ಪ್ರಸ್ತುತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಮೊದಲ ಸೋಲು ಇದಾದರೆ, ಸನ್‌ ರೈಸರ್ಸ್ ಹೈದರಾಬಾದ್‌ಗೆ ಮೊದಲ ಗೆಲುವು ಇದಾಗಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ ರೈಸರ್ಸ್ ಹೈದರಾಬಾದ್‌ ನಿಗದಿತ 20 ಓವರ್‌ಗಳಿಗೆ 4ವಿಕೆಟ್‌ಗಳನ್ನು ಕಳೆದುಕೊಂಡು 162 ರನ್‌ಗಳನ್ನು ದಾಖಲಿಸಿತ್ತು. ಡೇವಿಡ್‌ ವಾರ್ನರ್‌ ಹಾಗೂ ಜಾನಿ ಬೈರ್‌ಸ್ಟೋವ್‌ 77 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಅತ್ಯುತ್ತಮ ಲಯದಲ್ಲಿರುವ ಜಾನಿ ಬೈರ್‌ಸ್ಟೋವ್‌ ಅರ್ಧಶತಕ ಸಿಡಿಸಿದ ಬಳಿಕ ವಿಕೆಟ್‌ ಒಪ್ಪಿಸಿದರು. ನಂತರ, ಕ್ರೀಸ್‌ನಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿದ ಕೇನ್‌ ವಿಲಿಯಮ್ಸನ್‌ ಕೇವಲ 26 ಎಸೆತಗಳಲ್ಲಿ 41 ರನ್‌ ಗಳಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಲು ನೆರವಾದರು. ಕಗಿಸೋ ರಬಾಡ ಡೆಲ್ಲಿ ಪರ ಅದ್ಭುತ ಬೌಲಿಂಗ್‌ ಮಾಡಿದರು. ಮತ್ತೊಮ್ಮೆ ಆಫ್ರಿಕಾ ಸ್ಟಾರ್‌ ವೇಗಿ ನಾಲ್ಕು ಓವರ್‌ಗಳಿಗೆ 21 ರನ್‌ಗಳನ್ನು ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು 147 ರನ್‌ಗಳಿಗೆ ಸೀಮಿತವಾಯಿತು. 34 ರನ್‌ಗಳನ್ನು ಗಳಿಸಿದ ಶಿಖರ್ ಧವನ್‌ ಡೆಲ್ಲಿ ಪರ ವೈಯಕ್ತಿಕ ಗರಿಷ್ಠ ಸ್ಕೋರರ್‌ ಆದರು. ಸನ್‌ ರೈಸರ್ಸ್ ಹೈದರಾಬಾದ್‌ ಪರ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದ ರಶೀದ್‌ ನಾಲ್ಕು ಓವರ್‌ಗಳಿಗೆ 14 ರನ್‌ ಗಳನ್ನು ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/349ax38

ರಾಮನಗರದಲ್ಲಿ ಚೇತರಿಕೆ ಕಾಣದ ಕೆಎಸ್‌ಆರ್‌ಟಿಸಿ: ಸರಾಸರಿ 50 ಲಕ್ಷದಿಂದ 30 ಲಕ್ಷಕ್ಕೆ ಕುಸಿದ ಆದಾಯ!

ಆರ್‌.ಶ್ರೀಧರ್‌ ರಾಮನಗರ: ಲಾಕ್‌ಡೌನ್‌ನಿಂದಾಗಿ ಸತತ ಆರು ತಿಂಗಳು ಕಾಲ ರಸ್ತೆಗಿಳಿಯದ ಬಸ್ಸುಗಳು, ಈಗ ರಸ್ತೆಗಿಳಿದಿದ್ದರೂ, ನಷ್ಟದ ಹಾದಿಯಿಂದ ಹೊರಬಂದಿಲ್ಲ ಎಂಬುದು ವಿಶೇಷ. ಇದರಿಂದ ಬಸ್‌ ಚಾಲಕರು ಹಾಗು ನಿರ್ವಾಹಕರು ಆತಂಕದಲ್ಲಿ ದಿನ ದೂಡುವಂತಾಗಿದೆ. ಅರ್ಧದಷ್ಟು ಕುಸಿದ ಆದಾಯಅನ್‌ಲಾಕ್‌ ಬಳಿಕ ಬಸ್ಸುಗಳ ಓಡಾಟ ಹೆಚ್ಚಿದ್ದರೂ ಆದಾಯ ಮಾತ್ರ ಅರ್ಧದಷ್ಟು ಕುಸಿದಿದೆ. ಲಾಕ್‌ಡೌನ್‌ನಿಂದಾಗಿ ಸುಮಾರು ಎರಡು ತಿಂಗಳ ಕಾಲ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ನಂತರದಲ್ಲಿ ಹಂತಹಂತವಾಗಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಿತ್ತು. ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗದಲ್ಲಿ ಲಾಕ್‌ಡೌನ್‌ ಮುನ್ನ ನಿತ್ಯ 49-40 ಲಕ್ಷದಷ್ಟಿದ್ದ ಆದಾಯ ಸಂಪೂರ್ಣ ಕುಸಿದಿತ್ತು. ಈಗ ನಿತ್ಯ 30 ಲಕ್ಷದಷ್ಟು ಆದಾಯ ಸಂಗ್ರಹ ಆಗುತ್ತಿದ್ದು, ದಿನಕ್ಕೆ ಇನ್ನೂ 20 ಲಕ್ಷದಷ್ಟು ಆದಾಯ ಕೈ ತಪ್ಪುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಜಿಲ್ಲೆಗೆ ಆರು ಡಿಪೋಗಳುರಾಮನಗರ ಘಟಕದ ವ್ಯಾಪ್ತಿಯಲ್ಲಿ ರಾಮನಗರ, ಚನ್ನಪಟ್ಟಣ. ಮಾಗಡಿ, ಕನಕಪುರ, ಆನೇಕಲ್‌ ಸೇರಿದಂತೆ ಒಟ್ಟು 6 ಡಿಪೊಗಳಿವೆ. ಲಾಕ್‌ಡೌನ್‌ಗೆ ಮುನ್ನ ಇವುಗಳಲ್ಲಿ ನಿತ್ಯ 500 ಬಸ್ಸುಗಳು ಸಂಚರಿಸುತ್ತಿದ್ದವು. ದಿನವೊಂದಕ್ಕೆ ಸರಾಸರಿ 2.10 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಈಗ ಕೇವಲ 360 ಬಸ್ಸುಗಳು ಮಾತ್ರ ಪ್ರತಿ ದಿನ ರಸ್ತೆಗೆ ಇಳಿಯುತ್ತಿವೆ. ಇನ್ನೂ 140 ಬಸ್ಗಳು ಡಿಪೊನಲ್ಲೇ ಉಳಿದಿವೆ. ಸದ್ಯ ಮೈಸೂರು-ಬೆಂಗಳೂರು ಮಾರ್ಗದಲ್ಲಿ ಪ್ರಮಾಣಿಕರ ಸಂಖ್ಯೆ ಹೆಚ್ಚಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಬಸ್ಸುಗಳು ಸಂಚಾರ ನಡೆಸಿವೆ. ಆದರೆ, ಉಳಿದ ಭಾಗಗಳಲ್ಲಿ ಪರಿಸ್ಥಿತಿ ಬೇರೆಯಾಗಿದೆ. ಕನಕಪುರ, ಮಾಗಡಿ, ರಾಮನಗರ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸೇವೆಗೆ ಬೇಡಿಕೆ ಕಡಿಮೆಯಾಗಿದೆ. ಸಿಬ್ಬಂದಿ ಮಾತ್ರವೇ ಹಾಜರುಸಾರಿಗೆ ಸಂಸ್ಥೆಯ ಶೇ.85 ರಷ್ಟು ಸಿಬ್ಬಂದಿ ಈಗಾಗಲೇ ಸೇವೆಗೆ ಮರಳಿದ್ದಾರೆ. ಅವರಿಗೆ ಪಾಳಿ ಆಧಾರದಲ್ಲಿ ಕರ್ತವ್ಯ ನಿಯೋಜಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಒಂದಿಷ್ಟು ಮಂದಿ ಮಾತ್ರ ಬರಬೇಕಿದೆ. ರಜೆಯಲ್ಲಿ ತೆರಳಿದವರು ಸೇವೆಗೆ ಮರಳುವ ಮುನ್ನ ಕೋವಿಡ್‌ ಪರೀಕ್ಷೆ ಪ್ರಮಾಣಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಮೂರ್ನಾಲ್ಕು ದಿನದ ಬಳಿಕಷ್ಟೇ ಅಂತಹವರು ಕೆಲಸಕ್ಕೆ ಬರಬೇಕಿದೆ. ಹೊರರಾಜ್ಯಗಳ ಗಡಿ ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಕೆಲವು ಕಡೆ ನಿರ್ಬಂಧ ಮುಂದುವರಿದಿರುವುದು ಸಂಸ್ಥೆಯ ಆದಾಯ ಕುಸಿಯಲು ಕಾರಣವಾಗಿದೆ. ರಾಮನಗರ ವಿಭಾಗದಿಂದ ಒಟ್ಟು 88 ಶೆಡ್ಯುಲ್‌ಗಳಲ್ಲಿ ಹೊರ ರಾಜ್ಯಗಳಿಗೆ ಬಸ್‌ಗಳು ಸಂಚರಿಸುತ್ತವೆ. ಈ ಪೈಕಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನ ಕೆಲವು ಭಾಗಗಳಿಗೆ ಓಡಾಟಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ತಮಿಳುನಾಡಿನ ಹೊಸೂರು ಗಡಿ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಸದ್ಯ ಕೇವಲ ಅತ್ತಿಬೆಲೆವರೆಗೆ ಸಂಚರಿಸಿ ಬಸ್‌ಗಳು ವಾಪಸ್‌ ಆಗುತ್ತಿವೆ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು. ಗ್ರಾಮೀಣ ಭಾಗದಲ್ಲಿ ಹಿನ್ನಡೆ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸೇವೆಗೆ ಮೊದಲಿನಂತೆ ಬೇಡಿಕೆ ಇಲ್ಲ. ಒಂದು ರೂಟ್‌ನಲ್ಲಿ ಕೆಲವೊಮ್ಮೆ 4-5 ಪ್ರಯಾಣಿಕರಷ್ಟೇ ಇರುತ್ತಾರೆ. ಇಂತಹ ಕಡೆಗಳಲ್ಲಿ ಸಮರ್ಪಕ ಸೇವೆ ಒದಗಿಸಲು ಕೆಎಸ್‌ಆರ್‌ಟಿಸಿಗೆ ಸಾಧ್ಯವಾಗುತ್ತಿಲ್ಲ ಎನ್ನಬಹುದು. ಹಳ್ಳಿಗಳಲ್ಲಿ ಇನ್ನೂ ಕೋವಿಡ್‌ ಭಯ ದೂರವಾಗಿಲ್ಲ. ಜನರು ಬಸ್‌ಗಳಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಎಕ್ಸ್‌ಪ್ರೆಸ್‌ ಮಾರ್ಗಗಳಲ್ಲಿಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿಅದೇ ಪರಿಸ್ಥಿತಿ ಇರುವುದರಿಂದ ಬಸ್ಸುಗಳ ಆದಾಯ ನಷ್ಟವಾಗುತ್ತಿದೆ.
  • 6-ಕೆಎಸ್‌ಆರ್‌ಟಿಸಿ ರಾಮನಗರ ಘಟಕ ವ್ಯಾಪ್ತಿಯ ಬಸ್‌ ಡಿಪೊಗಳು
  • 360- ಸದ್ಯ ನಿತ್ಯ ಸಂಚಾರ ಕೈಗೊಂಡಿರುವ ಬಸ್ಸುಗಳು
  • 50 ಲಕ್ಷ- ಲಾಕ್‌ಡೌನ್‌ಗು ಮುನ್ನ ದಿನವೊಂದರ ಸರಾಸರಿ ಗಳಿಕೆ
  • 30 ಲಕ್ಷ- ಸದ್ಯದ ಸರಾಸರಿ ಗಳಿಕೆ
  • 2250-ರಾಮನಗರ ಘಟಕ ವ್ಯಾಪ್ತಿಯಲ್ಲಿನ ಒಟ್ಟು ಸಿಬ್ಬಂದಿ
ನಮ್ಮಲಿರುವ 500 ಬಸ್ಸುಗಳಲ್ಲಿ, 360 ಬಸ್ಸುಗಳು ಮಾತ್ರ ಪ್ರತಿ ದಿನ ರಸ್ತೆಗೆ ಇಳಿಯುತ್ತಿವೆ. ಇನ್ನೂ 140 ಬಸ್ಗಳು ಡಿಪೊನಲ್ಲೇ ಉಳಿದಿವೆ. ಗ್ರಾಮೀಣ ಭಾಗದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಜತೆಗೆ, ಗಡಿ ಪ್ರವೇಶ ಮಾಡುತ್ತಿಲ್ಲ. ಹೀಗಾಗಿ ನಿತ್ಯ 20ಲಕ್ಷದಷ್ಟು ಆದಾಯ ಕಡಿಮೆಯಾಗಿದೆ. ಮಹೇಶ್‌, ವಿಭಾಗೀಯ ನಿಯಂತ್ರಕ, ಕೆಎಸ್‌ಆರ್‌ಟಿಸಿ


from India & World News in Kannada | VK Polls https://ift.tt/3inQlzH

ಡೀಸೆಲ್‌ ದರದಲ್ಲಿ ಮತ್ತೆ ಇಳಿಕೆ: ದೇಶದ ಮಹಾನಗರಗಳಲ್ಲಿ ಇಂಧನ ದರ ಎಷ್ಟಿದೆ?

ಬೆಂಗಳೂರು: ದೇಶದ ಮಹಾನಗರಗಳಲ್ಲಿ ಬುಧವಾರ ಮತ್ತೆ ಡೀಸೆಲ್‌ ದರದಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಡೀಸೆಲ್‌ ದರದಲ್ಲಿ ಕೊಂಚ ಕೊಂಚವಾಗೇ ಇಳಿಕೆ ಕಾಣುತ್ತಿದೆ. ಹೀಗಾಗಿ ಇದರ ನೇರ ಪರಿಣಾಮ ವಸ್ತುಗಳ ಮೇಲೆ ಬೀಳಲಿದೆ. ಮುಂದಿನ ದಿನಗಳಲ್ಲಿ ವಸ್ತುಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಬುಧವಾರ ದೇಶದ ಪ್ರಮುಖ ನಗರಗಳಲ್ಲಿ ಡೀಸೆಲ್‌ ದರದಲ್ಲಿ 08 ಪೈಸೆ ಇಳಿಕೆ ಕಂಡಿದೆ. ಆದರೆ ಕಳೆದ ಕೆಲವು ದಿನಗಳಿಂದ ಪೆಟ್ರೋಲ್‌ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ಇಂಧನ ದರ ಇಳಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ. ಹಾಗಾದರೆ ಸೆಪ್ಟೆಂಬರ್ 30ರ ಬುಧವಾರ ದೇಶದ ಮಹಾನಗರಗಳಲ್ಲಿ ತೈಲ ದರ ಎಷ್ಟಿದೆ? ಇಲ್ಲಿದೆ ಈ ಬಗ್ಗೆ ಮಾಹಿತಿ. ಬೆಲೆ ಪರಿಷ್ಕರಣೆಗೊಂಡ ಬಳಿಕ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ. ಸಿಲಿಕಾನ್ ಸಿಟಿ ಬೆಂಗಳೂರು ಪೆಟ್ರೋಲ್: 83.69 ರೂ. ಡೀಸೆಲ್: 74.81 ರೂ. (₹0.08 ಪೈಸೆ ಇಳಿಕೆ ) ರಾಷ್ಟ್ರ ರಾಜಧಾನಿ ನವದೆಹಲಿ ಪೆಟ್ರೋಲ್: 81.06 ರೂ. ಡೀಸೆಲ್: 70.63 ರೂ. (₹0.08 ಪೈಸೆ ಇಳಿಕೆ ) ಮಹಾರಾಷ್ಟ್ರ ರಾಜಧಾನಿ ಮುಂಬಯಿ ಪೆಟ್ರೋಲ್: 87.74 ರೂ. ಡೀಸೆಲ್: 77.04 ರೂ. (₹0.8 ಪೈಸೆ ಇಳಿಕೆ ) ತಮಿಳುನಾಡು ರಾಜಧಾನಿ ಚೆನ್ನೈ ಪೆಟ್ರೋಲ್:84.14 ರೂ. ಡೀಸೆಲ್: 76.10 ರೂ. (₹0.08 ಪೈಸೆ ಇಳಿಕೆ )


from India & World News in Kannada | VK Polls https://ift.tt/3cGxjD8

ಜೀರಿಗೆ ಮೆಣಸಿನತ್ತ ಯುವಕರ ಚಿತ್ತ: ಕೆಜಿಗೆ 4ರಿಂದ 5 ಸಾವಿರ ರೂ., ನಿರೀಕ್ಷೆ ಮೂಡಿಸಿದ ಕಾಡಂಚಿನ ಬೆಳೆ!

ವಿ.ಜೆ.ರಾಜೇಶ್‌ ಆಲ್ದೂರು (ಚಿಕ್ಕಮಗಳೂರು)ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವುದನ್ನು ಅರಿತ ಕೆಲವು ಉತ್ಸಾಹಿ ಯುವ ರೈತರು ಜೀರಿಗೆ ಮೆಣಸನ್ನು ವ್ಯವಸ್ಥಿತವಾಗಿ ಬೆಳೆಯಲು ಮುಂದಾಗಿದ್ದಾರೆ. ಮನೆ ಬಳಿ, ಕಾಫಿ, ಅಡಕೆ ತೋಟಗಳಲ್ಲಿನಾಲ್ಕೈದು ಗಿಡಗಳಿಗೆ ಸೀಮಿತವಾಗಿದ್ದ ಜೀರಿಗೆ ಮೆಣಸನ್ನು ಈಗ ಎಕರೆಗಟ್ಟಲೆ ಬೆಳೆಯಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಹಿತ್ತಿಲಿಗಷ್ಟೇ ಸೀಮಿತವಾಗಿದ್ದ, ಮಾಂಸಾಹಾರಿ ಅಡುಗೆ, ಉಪ್ಪಿನಕಾಯಿ ಹಾಕುವುದಕ್ಕೆ ಮಾತ್ರ ಉಪಯೋಗಿಸುತ್ತಿದ್ದ ಜೀರಿಗೆ ಮೆಣಸ್ಸಿನ ಮಹತ್ವ ಬಹುತೇಕ ಜನರಿಗೆ ಗೊತ್ತಿರಲಿಲ್ಲ. ವಿಪರೀತ ಖಾರ ಎಂಬ ಕಾರಣಕ್ಕೆ ಬಳಕೆ ಬಹಳ ಕಡಿಮೆ ಇತ್ತು. ಆದರೆ, ಜೀರಿಗೆ ಮೆಣಸು ಆರೋಗ್ಯವರ್ಧಕ ಎಂಬುದು ಗೊತ್ತಾಗುತ್ತಿದ್ದಂತೆ ಸಾಮಾನ್ಯ ಮೆಣಸಿಗಿಂತ ಜೀರಿಗೆ ಮೆಣಸಿಗೆ ಬೇಡಿಕೆ ಹೆಚ್ಚಾಗಿದೆ. ತಾನಾಗಿಯೇ ಹುಟ್ಟಿ ಬೆಳೆಯುವ ಜೀರಿಗೆ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ವಿಶೇಷ ಆರೈಕೆ, ಹೆಚ್ಚಿನ ನೀರಾವರಿ ಅಗತ್ಯವಿಲ್ಲದ ಬೆಳೆ. ಹಲವು ರೈತರು ಜೀರಿಗೆ ಮೆಣಸಿನ ಗಿಡಗಳನ್ನು ನೆಟ್ಟು ಬೆಳೆಸುವುದಿಲ್ಲ. ಹಕ್ಕಿಗಳು ತಿಂದು ಬೀಳಿಸಿದ ಬೀಜಗಳಿಂದ ಸಸಿಗಳು ತೋಟದಲ್ಲಿ ತಾವಾಗಿಯೇ ಹುಟ್ಟುತ್ತವೆ. ಅದರ ಪಾಡಿಗೆ ಬೆಳೆದು ಕಾಯಿ ಬಿಡುತ್ತವೆ.ಚೂರು ಮೆಣಸು, ಗಾಂಧಾರಿ ಮೆಣಸು, ನುಚ್ಚು ಮೆಣಸು, ಸಣ್ಣಮೆಣಸು, ಕಾಂತರಿ ಜೀರಿಗೆ ಮೆಣಸು, ಅಥವಾ ಬರ್ಡ್‌ ಐ ಚಿಲ್ಲಿ ಹೆಸರಿನಿಂದ ಕರೆಯುವ ಈ ಮೆಣಸಿನಕಾಯಿ ಮಲೆನಾಡಿನ ರೈತರ ಉಪ ಬೆಳೆಯಾಗಿ ಉತ್ತಮ ಆದಾಯ ಕೊಡುತ್ತಿದೆ.

ಕೋವಿಡ್‌ ಕಾರಣಕ್ಕೆ ಹಳ್ಳಿಗಳಿಗೆ ವಾಪಸಾಗಿರುವ ಯುವಜನರು ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ನಡೆಸುತ್ತಿದ್ದಾರೆ. ಲಾಭದಾಯಕ ಬೆಳೆಗಳತ್ತ ಗಮನಹರಿಸುತ್ತಿದ್ದಾರೆ. ಅಂತಹ ಲಾಭದಾಯಕ ಬೆಳೆಗಳಲ್ಲಿ ಜೀರಿಗೆ ಮೆಣಸು ಕೂಡ ಸೇರಿದೆ. ಹಿತ್ತಲಿನ ಗಿಡವಾಗಿ ಮನೆಯವರಿಗೆ ಮಾತ್ರ ಪರಿಚಿತವಾಗಿದ್ದ ಜೀರಿಗೆ ಮೆಣಸು ಅಧಿಕ ಬೇಡಿಕೆ ಪಡೆದುಕೊಳ್ಳಲು ಕಾರಣ ಅದರ ಖಾರ ಹಾಗೂ ಔಷಧೀಯ ಗುಣ. ಇತರೆ ಮೆಣಸಿನ ಕಾಯಿಗಳಿಗಿಂತ ಉತ್ತಮ ರುಚಿ ಮತ್ತು ಸುವಾಸನೆ ಹೊಂದಿರುವ ಜೀರಿಗೆ ಮೆಣಸು ಔಷಧೋಚಾರ, ಕೀಟನಾಶಕಗಳ ಸಿಂಪರಣೆಯಿಲ್ಲದೆ ನೈಸರ್ಗಿಕವಾಗಿ ಬೆಳೆಯುತ್ತದೆ. ಮಾಂಸಾಹಾರಿ ಅಡುಗೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹೆಚ್ಚು ಶ್ರಮ ಮತ್ತು ವೆಚ್ಚ ಬೇಡದ ಜೀರಿಗೆ ಮೆಣಸು ಕೃಷಿಯಿಂದ ಆರ್ಥಿಕ ಮತ್ತು ಆರೋಗ್ಯದ ಲಾಭಗಳಿವೆ. ಕಾಫಿ, ಅಡಕೆ ತೋಟ, ಮನೆಯ ಹಿತ್ತಿಲಿಗೆ ಸೀಮಿತವಾಗಿದ್ದ ಜೀರಿಗೆ ಮೆಣಸು ಇತ್ತೀಚೆಗೆ ಆರ್ಥಿಕ ಲಾಭ ತಂದುಕೊಡುವ ವಾಣಿಜ್ಯ ಬೆಳೆಯಾಗಿ ಪರಿವರ್ತನೆಯಾಗುತ್ತಿದೆ. ತಿಂಗಳಿಗೆ ಮೂರ್ನಾಲ್ಕು ಬಾರಿ ಜೀರಿಗೆ ಮೆಣಸಿನ ಕೊಯ್ಲು ಮಾಡಬಹುದು.


ಜೀರಿಗೆ ಮೆಣಸಿನತ್ತ ಯುವಕರ ಚಿತ್ತ: ಕೆಜಿಗೆ 4ರಿಂದ 5 ಸಾವಿರ ರೂ., ನಿರೀಕ್ಷೆ ಮೂಡಿಸಿದ ಕಾಡಂಚಿನ ಬೆಳೆ!

ವಿ.ಜೆ.ರಾಜೇಶ್‌ ಆಲ್ದೂರು (ಚಿಕ್ಕಮಗಳೂರು)

ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವುದನ್ನು ಅರಿತ ಕೆಲವು ಉತ್ಸಾಹಿ ಯುವ ರೈತರು ಜೀರಿಗೆ ಮೆಣಸನ್ನು ವ್ಯವಸ್ಥಿತವಾಗಿ ಬೆಳೆಯಲು ಮುಂದಾಗಿದ್ದಾರೆ. ಮನೆ ಬಳಿ, ಕಾಫಿ, ಅಡಕೆ ತೋಟಗಳಲ್ಲಿನಾಲ್ಕೈದು ಗಿಡಗಳಿಗೆ ಸೀಮಿತವಾಗಿದ್ದ ಜೀರಿಗೆ ಮೆಣಸನ್ನು ಈಗ ಎಕರೆಗಟ್ಟಲೆ ಬೆಳೆಯಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಹಿತ್ತಿಲಿಗಷ್ಟೇ ಸೀಮಿತವಾಗಿದ್ದ, ಮಾಂಸಾಹಾರಿ ಅಡುಗೆ, ಉಪ್ಪಿನಕಾಯಿ ಹಾಕುವುದಕ್ಕೆ ಮಾತ್ರ ಉಪಯೋಗಿಸುತ್ತಿದ್ದ ಜೀರಿಗೆ ಮೆಣಸ್ಸಿನ ಮಹತ್ವ ಬಹುತೇಕ ಜನರಿಗೆ ಗೊತ್ತಿರಲಿಲ್ಲ. ವಿಪರೀತ ಖಾರ ಎಂಬ ಕಾರಣಕ್ಕೆ ಬಳಕೆ ಬಹಳ ಕಡಿಮೆ ಇತ್ತು. ಆದರೆ, ಜೀರಿಗೆ ಮೆಣಸು ಆರೋಗ್ಯವರ್ಧಕ ಎಂಬುದು ಗೊತ್ತಾಗುತ್ತಿದ್ದಂತೆ ಸಾಮಾನ್ಯ ಮೆಣಸಿಗಿಂತ ಜೀರಿಗೆ ಮೆಣಸಿಗೆ ಬೇಡಿಕೆ ಹೆಚ್ಚಾಗಿದೆ. ತಾನಾಗಿಯೇ ಹುಟ್ಟಿ ಬೆಳೆಯುವ ಜೀರಿಗೆ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ವಿಶೇಷ ಆರೈಕೆ, ಹೆಚ್ಚಿನ ನೀರಾವರಿ ಅಗತ್ಯವಿಲ್ಲದ ಬೆಳೆ. ಹಲವು ರೈತರು ಜೀರಿಗೆ ಮೆಣಸಿನ ಗಿಡಗಳನ್ನು ನೆಟ್ಟು ಬೆಳೆಸುವುದಿಲ್ಲ. ಹಕ್ಕಿಗಳು ತಿಂದು ಬೀಳಿಸಿದ ಬೀಜಗಳಿಂದ ಸಸಿಗಳು ತೋಟದಲ್ಲಿ ತಾವಾಗಿಯೇ ಹುಟ್ಟುತ್ತವೆ. ಅದರ ಪಾಡಿಗೆ ಬೆಳೆದು ಕಾಯಿ ಬಿಡುತ್ತವೆ.ಚೂರು ಮೆಣಸು, ಗಾಂಧಾರಿ ಮೆಣಸು, ನುಚ್ಚು ಮೆಣಸು, ಸಣ್ಣಮೆಣಸು, ಕಾಂತರಿ ಜೀರಿಗೆ ಮೆಣಸು, ಅಥವಾ ಬರ್ಡ್‌ ಐ ಚಿಲ್ಲಿ ಹೆಸರಿನಿಂದ ಕರೆಯುವ ಈ ಮೆಣಸಿನಕಾಯಿ ಮಲೆನಾಡಿನ ರೈತರ ಉಪ ಬೆಳೆಯಾಗಿ ಉತ್ತಮ ಆದಾಯ ಕೊಡುತ್ತಿದೆ.



​ಪುಟ್ಟ ಮೆಣಸಿನ ಅಸಾಮಾನ್ಯ ಗುಣ
​ಪುಟ್ಟ ಮೆಣಸಿನ ಅಸಾಮಾನ್ಯ ಗುಣ

ಮಲೆನಾಡಿನ ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿ ಒಂದಾದರೂ ಜೀರಿಗೆ ಮೆಣಸಿನ ಗಿಡ ಇರುತ್ತದೆ. ಸಣ್ಣ ಸಣ್ಣ ಎಲೆಗಳೊಂದಿಗೆ ಉದ್ದವಾಗಿ ಬೆಳೆಯುವ ಗಿಡದಲ್ಲಿಕೆಜಿಗಟ್ಟಲೆ ಜೀರಿಗೆ ಮೆಣಸು ಬೆಳೆಯುತ್ತವೆ. ನೇರವಾಗಿ ಜೀರಿಗೆ ಮೆಣಸು ಕಚ್ಚಿದರೆ ವಿಪರೀತ ಖಾರ. ಇಂಗ್ಲಿಷ್‌ನಲ್ಲಿ ಇದನ್ನು ಬರ್ಡ್‌ ಐ ಚಿಲ್ಲಿ ಎಂದರೆ, ಕೆಲವು ಕಡೆ ಗಾಂಧಾರಿ ಮೆಣಸು ಎಂಬುದಾಗಿಯೂ ಕರೆಯಲಾಗುತ್ತದೆ.

ಆಹಾರಕ್ಕೆ ಅದ್ಭುತ ರುಚಿ ನೀಡುವ ಜೀರಿಗೆ ಮೆಣಸು ಅತಿಹೆಚ್ಚು ಔಷಧೀಯ ಗುಣ ಹೊಂದಿದೆ. ಗ್ಯಾಸ್ಟ್ರಿಕ್‌ ಸಮಸ್ಯೆ ದೂರ ಮಾಡುವ ಜತೆಗೆ ದೇಹದ ಬೊಜ್ಜನ್ನೂ ಕರಗಿಸುತ್ತದೆ. ಕಷಾಯ, ಮಾಂಸದ ಅಡುಗೆಯಲ್ಲಿ ಹೆಚ್ಚಾಗಿ ಜೀರಿಗೆ ಮೆಣಸು ಬಳಸಲಾಗುತ್ತದೆ. ಈಗೀಗ ಮಲೆನಾಡು ಭಾಗದಲ್ಲಿ ಚಟ್ನಿ ಸೇರಿದಂತೆ ಬಹುತೇಕ ಅಡುಗೆಗಳಲ್ಲಿ ಜೀರಿಗೆ ಮೆಣಸಿನ ಬಳಕೆ ಹೆಚ್ಚಾಗಿದೆ.



​ಉತ್ತಮ ಧಾರಣೆ
​ಉತ್ತಮ ಧಾರಣೆ

ಮನೆ ಬಳಕೆಗೆ ಸೀಮಿತವಾಗಿದ್ದ ಜೀರಿಗೆ ಮೆಣಸು ಈಗ ತನ್ನ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಒಣಗಿದ ಜೀರಿಗೆ ಮೆಣಸು ಆನ್‌ಲೈನ್‌ನಲ್ಲಿ ಕೆಜಿಗೆ 4-5 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಹಾವೇರಿ ಜಿಲ್ಲೆ ಬ್ಯಾಡಗಿ, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಹಲವು ಕಡೆ ಜೀರಿಗೆ ಮೆಣಸು ಪೂರೈಕೆಯಾಗುತ್ತಿದೆ. ಕೆಂಪು, ಹಸಿರು ಕಾಯಿಗಳನ್ನು ಬೇರ್ಪಡಿಸಿ, ಒಣಗಿಸಿ, ಪ್ಯಾಕ್‌ ಮಾಡಿದರೆ ಉತ್ತಮ ಧಾರಣೆ ಲಭ್ಯವಾಗುತ್ತದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್‌ ರಾಜ್ಯಗಳು, ಜಪಾನ್‌, ಅಮೆರಿಕ, ಅರಬ್‌ ದೇಶಗಳಿಗೂ ಜೀರಿಗೆ ಮೆಣಸು ರಫ್ತಾಗುತ್ತಿದೆ. ಬೆಂಗಳೂರಿನ ಫಲದ ಇಂಡಸ್ಟ್ರೀಸ್‌ ಸೇರಿದಂತೆ ಹಲವು ಕಂಪನಿಗಳು ಮಾರುಕಟ್ಟೆ ಒದಗಿಸುತ್ತಿವೆ. ಹಸಿ ಜೀರಿಗೆ ಮೆಣಸಿಗೆ ಸ್ಥಳೀಯವಾಗಿ 500 ರೂ.ಗಳವರೆಗೆ ಧಾರಣೆ ಇದೆ. ಹೊರ ರಾಜ್ಯಗಳಲ್ಲಿಒಂದು ಸಾವಿರ ರೂ.ಗೂ ಹೆಚ್ಚು ಧಾರಣೆ ಸಿಗುತ್ತದೆ. ಮಲೆನಾಡಿನಲ್ಲಿ ಜೀರಿಗೆ ಮೆಣಸನ್ನು ಉಪ ಬೆಳೆಯಾಗಿ ಬೆಳೆಯಬಹುದು. ಇದು ಹೆಚ್ಚು ಶ್ರಮ ಅಥವಾ ಪೋಷಕಾಂಶಗಳನ್ನು ಬೇಡದ, ಕಾಡು ಬೆಳೆಯಂತೆ ಬೆಳೆಯುವುದರಿಂದ ಹೆಚ್ಚು ವೆಚ್ಚವೂ ತಗಲುವುದಿಲ್ಲ



​ಲಾಭದಾಯಕ ಕೃಷಿ
​ಲಾಭದಾಯಕ ಕೃಷಿ

ಜೀರಿಗೆ ಮೆಣಸಿಗೆ ಉತ್ತಮ ಧಾರಣೆ ಇದ್ದ ಕಾರಣ ಒಂದು ಎಕರೆಯಲ್ಲಿ 1200 ಗಿಡ ಬೆಳೆಸಿದ್ದೆ. 5-6 ತಿಂಗಳಿಗೆ ಫಸಲು ಬಂದಿದ್ದು, 4.26 ಕ್ವಿಂಟಾಲ್‌ಗೆ 3.60 ಲಕ್ಷ ರೂ. ಸಿಕ್ಕಿತು. ಖರ್ಚು ಕಳೆದು 2 ಲಕ್ಷ ರೂ. ಆದಾಯ ಬಂದಿದೆ. ನೂರಾರು ತಳಿಗಳಿದ್ದು, ಉತ್ತಮ ತಳಿಗೆ ಉತ್ತಮ ಧಾರಣೆ ಇದೆ. ಈ ಬಾರಿ ಉತ್ತಮ ತಳಿಯ ಸಸಿ ಮಡಿ ಸಿದ್ಧಪಡಿಸಿ, 2 ಎಕರೆಯಲ್ಲಿ ಬೆಳೆಯಲು ನಿರ್ಧರಿಸಿದ್ದೇನೆ.

ಉದಯಕುಮಾರ್‌, ಸಿರವಾಸೆ





from India & World News in Kannada | VK Polls https://ift.tt/3kZR63m

ಅ.1ರಂದು ಹಸಿರು ಮಾರ್ಗದಲ್ಲಿ ಮೆಟ್ರೋ ಸೀಮಿತ ಸಂಚಾರ, ಜಕ್ಕೂರು ವಾಯುನೆಲೆ ಬಳಿ ಕಾಮಗಾರಿಗೆ ಹೈಕೋರ್ಟ್‌ ನಿರ್ಬಂಧ ​​

ಬೆಂಗಳೂರು: 2ನೇ ಹಂತದ ವಿಸ್ತರಿತ ಮಾರ್ಗ ಯಲಚೇನಹಳ್ಳಿಯಿಂದ ಅಂಜನಾಪುರದವರೆಗಿನ ಮಾರ್ಗದ ವಾಣಿಜ್ಯ ಕಾರ್ಯಾಚರಣೆಯ ಪೂರ್ವ ಸಿದ್ಧತೆ ಪರೀಕ್ಷೆ ಮತ್ತು ಟೆಸ್ಟಿಂಗ್ ನಡೆಯಲಿದ್ದು. ಈ ಹಿನ್ನೆಲೆಯಲ್ಲಿ ಅ.1ರಂದು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ನಾಗಸಂದ್ರದಿಂದ ಆರ್‌.ವಿ. ರಸ್ತೆ ನಿಲ್ದಾಣದವರೆಗೆ ಮಾತ್ರ ರೈಲು ಸಂಚರಿಸಲಿದೆ. ಆರ್‌.ವಿ. ರಸ್ತೆಯಿಂದ ಯಲಚೇನಹಳ್ಳಿವರೆಗೆ ರೈಲು ಸಂಚಾರ ಇರುವುದಿಲ್ಲ. ಅ.2ರಂದು ಎಂದಿನಂತೆ ರೈಲು ಸಂಚಾರ ಇರಲಿದೆ ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ. ಯಲಚೇನಹಳ್ಳಿ ಮತ್ತು ಅಂಜನಾಪುರ ನಡುವಿನ ಮಾರ್ಗದಲ್ಲಿ ಟೆಸ್ಟಿಂಗ್‌ ಮತ್ತು ಸುರಕ್ಷತಾ ಪ್ರಮಾಣಪತ್ರ ಪಡೆಯಲು ಇನ್ನೂ ಒಂದು ತಿಂಗಳಾಗಬಹುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಬಳಿ ಮೆಟ್ರೋ ರೈಲು ಕಾಮಗಾರಿ ಆರಂಭಕ್ಕೆ ಹೈಕೋರ್ಟ್‌ ನಿರ್ಬಂಧ: ಬೆಂಗಳೂರು: ನಗರದ ಜಕ್ಕೂರು ಏರೋಡ್ರಮ್‌ ಬಳಿ ಮೆಟ್ರೋ ರೈಲು ಕಾಮಗಾರಿ ಆರಂಭಕ್ಕೆ ಅ.21 ರವರೆಗೆ ಹೈಕೋರ್ಟ್‌ ನಿರ್ಬಂಧ ವಿಧಿಸಿದೆ. ವಕೀಲ ಅಜಯ್‌ ಕುಧಿಮಾರ್‌ ಪಾಟೀಲ್‌ ಸಲ್ಲಿಸಿದ್ದ ಪಿಐಎಲ್‌ ಸಿಜೆ ಎ.ಎಸ್‌. ಓಕ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತು. ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಾಲಯ, ಬಿಎಂಆರ್‌ಸಿಎಲ್‌ಗೆ ಅ.21ರವರೆಗೆ ಕಾಮಗಾರಿ ನಡೆಸದಂತೆ ಮಧ್ಯಂತರ ಆದೇಶ ನೀಡಿತು. ಅಲ್ಲದೆ, ರಾಜ್ಯ ಸರಕಾರ, ಸರಕಾರಿ ವೈಮಾನಿಕ ಶಾಲೆ, ಬಿಎಂಆರ್‌ಸಿಎಲ್, ಭಾರತೀಯ ವಾಯುಪಡೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ವಿಮಾನ ನಿಲ್ದಾಣ ಪ್ರಾಧಿಕಾರ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ನೀಡಿ ಆಕ್ಷೇಪಣೆಗಳನ್ನು ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮುಂದೂಡಿತು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ, ಜಕ್ಕೂರಿನಲ್ಲಿ ಸರಕಾರಿ ವಿಮಾನ ಹಾರಾಟ ತರಬೇತಿ ಶಾಲೆಯಿದೆ. ಏರೋಡ್ರಮ್‌ನ ರನ್‌ವೇಯ 60 ಮೀ.ವರೆಗೆ ಕಾಮಗಾರಿ ನಡೆಸುವಂತಿಲ್ಲ. ಅದನ್ನು ಯಾವುದೇ ನಿರ್ಮಾಣರಹಿತ ವಲಯವೆಂದು ಘೋಷಿಸಲಾಗಿದೆ. ಆದರೂ ಮೆಟ್ರೋ ರೈಲು ಎಲಿವೇಟೆಡ್‌ ಕಾಮಗಾರಿ ಯೋಚಿಸಲಾಗಿದೆ. ಇದು ಡಿಜಿಸಿಎ ನಿಯಮಾವಳಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಎಲಿವೇಟೆಡ್‌ ಹೆದ್ದಾರಿಯೇ ನಿಯಮಬಾಹಿರವಾಗಿದೆ. ಉದ್ದೇಶಿತ ಮೆಟ್ರೋ ಕಾಮಗಾರಿಯಿಂದ ಬಹುತೇಕ ಜಕ್ಕೂರು ವಾಯುನೆಲೆ ಬಂದ್‌ ಆಗಲಿದೆ. ಅಲ್ಲದೆ, ಐತಿಹಾಸಿಕ ವಾಯುನೆಲೆಯ ಪ್ರದೇಶ ರಿಯಲ್‌ ಎಸ್ಟೇಟ್‌ ಉದ್ದೇಶಕ್ಕೆ ಬಳಕೆಯಾಗುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ಗೆ ಜಕ್ಕೂರು ವಾಯುನೆಲೆ ವ್ಯಾಪ್ತಿಯಲ್ಲಿ ಮೆಟ್ರೋ ಮಾರ್ಗ ನಿರ್ಮಿಸದಂತೆ ಮಧ್ಯಂತರ ಆದೇಶ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.


from India & World News in Kannada | VK Polls https://ift.tt/30l0t5Y

ಕೊರೊನಾದಿಂದ ನಲುಗುತ್ತಿರುವ ಮಹಾರಾಷ್ಟ್ರದಲ್ಲೀಗ ಕಾಂಗೊ ಜ್ವರದ ಭೀತಿ! ಏನಿದು ಹೊಸ ರೋಗ?

ಕೊಡಿಗೇಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಂಗಡಿ ಮಳಿಗೆಗಳ ಹರಾಜು: ಬೀದಿಗೆ ಬೀಳುವ ಆತಂಕದಲ್ಲಿ ಬಾಡಿಗೆದಾರರು

ರಾಜೇಶ್‌.ಎಸ್‌.ಜಿ. ದೊಡ್ಡಬಳ್ಳಾಪುರ ದೊಡ್ಡಬಳ್ಳಾಪುರ: ಗ್ರಾಪಂ ವ್ಯಾಪ್ತಿಯ ಪಾಲನಜೋಗಿಹಳ್ಳಿ ಮಳಿಗೆಗಳನ್ನು ಅಧಿಕಾರಿಗಳು ಮಾಡುತ್ತಿರುವುದನ್ನು ಬಾಡಿಗೆದಾರರು ವಿರೋಧಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಜನ ಸಾಮಾನ್ಯರ ಬದುಕು ದುಸ್ಥರವಾಗಿದ್ದು, ಈ ಸಂದರ್ಭದಲ್ಲಿಅಂಗಡಿಗಳನ್ನು ಹರಾಜು ಮಾಡಲು ಹೊರಟರೆ ವ್ಯಾಪಾರವೂ ಇಲ್ಲ, ಕೈಯಲ್ಲಿ ಹಣವೂ ಇಲ್ಲ. ಸಾಲ ಕಟ್ಟಲು ಆಗುತ್ತಿಲ್ಲ. ಪಿಡಿಒ ಅವರದ್ದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ದೂರಿದ್ದಾರೆ. 9 ವರ್ಷಗಳ ಹಿಂದೆ ಪಂಚಾಯಿತಿ 14 ಅಂಗಡಿಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ನೀಡಿತ್ತು. ಪ್ರಾರಂಭದ 3-4 ವರ್ಷ ಹೇಳಿಕೊಳ್ಳುವ ವ್ಯಾಪಾರವೂ ಆಗುತ್ತಿರಲಿಲ್ಲ. ನಂತರ ವ್ಯಾಪಾರ ಉತ್ತಮ ಸ್ಥಿಗೆ ಬಂದಿತ್ತಾದರೂ. 2020ರಲ್ಲಿನ ಲಾಕ್‌ಡೌನ್‌ನಿಂದಾಗಿ ಸುಮಾರು ನಾಲ್ಕು ತಿಂಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದವು. ಇದರಿಂದ ಬದುಕು ಕಟ್ಟಿಕೊಂಡಿದ್ದ ವ್ಯಾಪಾರಸ್ಥರು ಮನೆ ವಿದ್ಯುತ್‌ ಬಿಲ್‌ ಪಾವತಿ ಮಾಡಲು ಪರದಾಡುವ ಪರಿಸ್ಥಿತಿಗೆ ಬಂದಿದ್ದರು. ಇನ್ನು ಮನೆ ನಿರ್ವಹಣೆಯೂ ಕಷ್ಟವಾಗಿದೆ. ನೋಟಿಸ್‌ ಜಾರಿ ಅಕ್ರಮಅ. 5ರಂದು ಹರಾಜು ಮಾಡುವುದಾಗಿ ಈಗಾಗಲೇ ಕರ ಪತ್ರ ಹೊರಡಿಸಿರುವ ಪಿಡಿಒ ಕ್ರಮಕ್ಕೆ ಬಾಡಿಗೆದಾರರು ಅಂಗಡಿಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈಗಾಗಲೇ ಅಂಗಡಿ ಮುಂದೆ ನೋಟಿಸ್‌ ಪ್ರದರ್ಶನ ಮಾಡಿದ್ದಾರೆ. ಬಾಡಿಗೆದಾರರು ಹಣ ಪಾವತಿ ಮಾಡಲು ಸಮಯ ಕೇಳಿದ್ದಾರೆ. ಹಣ ಕಟ್ಟುವುದಿಲ್ಲ ಎಂದು ಹೇಳಿಲ್ಲ. ಹೀಗಿದ್ದರೂ ನೋಟಿಸ್‌ ಜಾರಿ ಮಾಡಿರುವುದು ಕಾನೂನು ಉಲ್ಲಂಘನೆ ಎಂದು ದೂರಿದ್ದಾರೆ. ಮನವಿಗಳಿಗೆ ಮನ್ನಣೆ ಇಲ್ಲಕೋವಿಡ್‌-19 ಸಂಕಷ್ಟದಲ್ಲಿ ಬೀದಿಗೆ ಬಂದು ನಿಂತಿದ್ದೇವೆ. ಈ ಕುರಿತು ಜಿಪಂ ಮುಖ್ಯ ಕಾರ‍್ಯ ನಿರ್ವಹಣಾಧಿಕಾರಿ, ತಾಪಂ ಇಒಗೆ ಬಾಡಿಗೆ ಹಣ ಪಾವತಿ ಮಾಡಲು ಸಮಯ ನೀಡುವಂತೆ ಮನವಿ ಪತ್ರ ನೀಡಿದ್ದೇವೆ. ಇದರೊಂದಿಗೆ ಪಿಡಿಒಗೂ ಮನವಿ ಪತ್ರ ನೀಡಿದ್ದೇವೆ. ಈ ಕುರಿತು ಜನಗಳ ಹಿತ ಕಾಯಬೇಕಿದ್ದ ಯಾವೊಬ್ಬ ಅಧಿಕಾರಿಯೂ ಕನಿಷ್ಠ ಸಭೆ ಕರೆದು ನಮ್ಮ ಕಷ್ಟಗಳನ್ನು ಆಲಿಸದೆ ನಮ್ಮ ಬದುಕನ್ನು ಬೀದಿಗೆ ತಳ್ಳಿದ್ದಾರೆ ಎಂದು ಬಾಡಿಗೆದಾರರು ಆರೋಪಿಸಿದ್ದಾರೆ. ಕೋವಿಡ್‌-19 ಸಂಕಷ್ಟದ ಸಂದರ್ಭದಲ್ಲಿ ಗ್ರಾಪಂಗಳ ವ್ಯಾಪ್ತಿಯ ಅಂಗಡಿ ಮಳಿಗೆಗಳ ಹರಾಜು ಮಾಡುವುದಾಗಲಿ, ಉಳಿಕೆ ಬಾಡಿಗೆಗೆ ಒತ್ತಡ ತರುವುವಂತಿಲ್ಲ. ಈ ಕುರಿತು ಸರ್ಕಾರವೇ ರಿಲೀಪ್‌ ನೀಡುವಂತೆ ಹೇಳಿದೆ. ಹೀಗಾಗಿ ಈ ಕುರಿತು ತುರ್ತು ಸಭೆ ಕರೆದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಮಾತನಾಡುತ್ತೇನೆ. ಟಿ.ವೆಂಕಟರಮಣಯ್ಯ, ಶಾಸಕ ದೊಡ್ಡಬಳ್ಳಾಪುರ ಕೆಟಿಪಿಪಿ-1999 ಆ್ಯಕ್ಟ್ ಸ್ಪಷ್ಟವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಲ್ಲಂಘನೆ ಮಾಡಿದ್ದಾರೆ. ಕೋವಿಡ್‌-19 ಸಂಕಷ್ಟದ ಸಂದರ್ಭದಲ್ಲಿ ಯಾವುದೆ ಕುರಿತಂತೆ ತೆರವು ಕಾರ್ಯಾಚರಣೆ ಮಾಡುವಂತಿಲ್ಲ ಎಂದು ಉಚ್ಚನ್ಯಾಯಾಲಯದ ಆದೇಶವಿದ್ದು, ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಹರಾಜು ಪ್ರಕ್ರಿಯೆಗೆ ಮುಂದಾದರೆ ಉಗ್ರ ಹೋರಾಟಕ್ಕೂ ಮುಂದಾಗುತ್ತೇವೆ. ವಿ.ಹನುಮಂತರಾಯಪ್ಪ | ಕ್ರಾಂತಿ ದೀಪ ಸಂಘಟನೆ ತಾಲೂಕು ಅಧ್ಯಕ್ಷ ಹಾಗೂ ಆರ್‌ಟಿಐ ಕಾರ‍್ಯಕರ್ತ ಲಾಕ್‌ಡೌನ್‌ ಸಂದರ್ಭದಲ್ಲಿ ಐದಾರು ತಿಂಗಳಿಂದ ಅಂಗಡಿ ಬಾಗಿಲು ಹಾಕಿದ್ದು, ನಂತರ ಅಂಗಡಿ ತೆರೆದರೂ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಇದರಿಂದ ತೀರ ಆರ್ಥಿಕ ಸಂಕಷ್ಟದಲ್ಲಿ ಇದ್ದೇವೆ. ಈ ಸಂದರ್ಭದಲ್ಲಿ ಅಂಗಡಿ ಹರಾಜು ಹಾಕಿದರೆ ವಿಷ ಕುಡಿದು ಸಾಯುವುದೊಂದೇ ನಮಗೆ ದಾರಿ. ಉಮಾ ರಮೇಶ್‌, ಬಾಡಿಗೆದಾರರು


from India & World News in Kannada | VK Polls https://ift.tt/3n2zyWi

ಸೆ.30 ಬುಧವಾರ: ಇಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು!

ಕೊಂಕಣ ರೈಲ್ವೆ ಮೂಲಕ ಮುಂಬಯಿಗೆ ರಬ್ಬರ್‌ ಸಾಗಾಟ: ಉಜಿರೆಯಲ್ಲಿ ಚಾಲನೆ

ಉಜಿರೆ: ಸರಕಾರದ ಯೋಜನೆಗಳ ಸದುಪಯೋಗವನ್ನು ಸಂಘ ಸಂಸ್ಥೆಗಳು ಪಡೆದುಕೊಂಡರೆ ವೆಚ್ಚಗಳನ್ನು ಕಡಿಮೆ ಮಾಡಿಕೊಂಡು, ಅದರಿಂದ ಸಿಗುವ ಲಾಭದಿಂದ ಸದಸ್ಯರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ ಎಂದು ಬೆಳ್ತಂಗಡಿ ತಾಲೂಕು ರಬ್ಬರ್‌ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಜಿ. ಭಿಡೆ ಹೇಳಿದರು. ಲಾೖಲದಲ್ಲಿರುವ ಸಂಘದ ರಬ್ಬರ್‌ ಗೋದಾಮಿನಿಂದ ಮೂಲಕ ಮುಂಬಯಿಗೆ ರಬ್ಬರ್‌ ಸಾಗಾಟ ನಡೆಸುವ ಯೋಜನೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಯೋಗಿಕವಾಗಿ 16 ಟನ್‌ ರಬ್ಬರನ್ನು ಲಾೖಲ ಗೋದಾಮಿನಿಂದ ಮಂಗಳೂರಿನ ತೋಕೂರು ತನಕ ಕೊಂಕಣ ರೈಲ್ವೆ ಇಲಾಖೆಯ ಲಾರಿಗಳಲ್ಲಿ ಸಾಗಿಸಿ, ಅಲ್ಲಿಂದ ಕೊಂಕಣ ರೈಲಿನ ಮೂಲಕ ಅತಿ ಕಡಿಮೆ ಅವಧಿ ಹಾಗೂ ಅತಿ ಕಡಿಮೆ ವೆಚ್ಚದಲ್ಲಿ ಕೃಷಿ ಉತ್ಪನ್ನಗಳ ಸಾಗಾಟ ನಡೆಸುವ ಯೋಜನೆ ಇದಾಗಿದೆ. ಇದು ರೈತರಿಗೆ ಮತ್ತು ಸಂಘ-ಸಂಸ್ಥೆಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು. ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ, ರೈಲ್ವೆ ರೀಜನಲ್‌ ಟ್ರಾಫಿಕ್‌ ಮ್ಯಾನೇಜರ್‌ ವಿನಯಕುಮಾರ್‌, ಸೀನಿಯರ್‌ ಟಿಟಿಇ ಸತೀಶ್‌ ಕುಮಾರ್‌ ಆರ್‌. ಎನ್‌., ಸಂಘದ ನಿರ್ದೇಶಕರಾದ ಪಿ.ವಿ. ಅಬ್ರಹಾಂ, ಕೆ.ಜೆ. ಆಗಸ್ಟೀನ್‌, ಶಶಿಧರ ಡೋಂಗ್ರೆ, ಗ್ರೇಶಿಯಸ್‌ ವೇಗಸ್‌, ಇ.ಸುಂದರ ಗೌಡ, ಜಯಶ್ರೀ ಡಿ.ಎಂ., ಕೇರಿಮಾರು ಬಾಲಕೃಷ್ಣ ಗೌಡ, ಎಚ್‌.ಪದ್ಮ ಗೌಡ, ಪಾರ್ಸೆಲ್‌ ಅಗ್ರಿಗೇಟರ್ಸ್‌ಗಳಾದ ಹ್ಯಾರೀಸ್‌, ಸಿನಾನ್‌ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ಮಚ್ಚಿಮಲೆ ಅನಂತ ಭಟ್‌ ವಂದಿಸಿದರು. ಮಹತ್ವಾಕಾಂಕ್ಷೆಯ ಯೋಜನೆ ಕಿಸಾನ್‌ ಪಾರ್ಸೆಲ್‌ ಗೂಡ್ಸ್‌ ಟ್ರೈನ್‌ ಎಂಬ ಈ ಯೋಜನೆ ರೈತರ ಮನೆ ಬಾಗಿಲಿನಿಂದ ಕೃಷಿ ಉತ್ಪನ್ನಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಹೊರರಾಜ್ಯಗಳಿಗೆ ಸಾಗಾಟ ನಡೆಸುವ ಮಹತ್ವಾಕಾಂಕ್ಷೆ ಹೊಂದಿದೆ. ಯೋಜನೆಗೆ ರೈತರ ಮತ್ತು ಸಂಘ ಸಂಸ್ಥೆಗಳ ಬೆಂಬಲ ಬೇಕಾಗಿದೆ. ಈಗ ಪ್ರಾಯೋಗಿಕವಾಗಿ ಕೃಷಿ ಉತ್ಪನ್ನಗಳ ಸಾಗಾಟ ನಡೆಸುತ್ತಿದ್ದು, ಅಕ್ಟೋಬರ್‌ 3ರಂದು ಯೋಜನೆಯನ್ನು ಪುತ್ತೂರಿನಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಗುವುದು. ಸುಧಾ ಕೃಷ್ಣಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ, ಕೊಂಕಣ ರೈಲ್ವೆ ವಿಭಾಗ


from India & World News in Kannada | VK Polls https://ift.tt/3n1CfHy

ಮಂಗಳೂರಿನಲ್ಲಿ ಡ್ರಗ್ಸ್‌ ಜಾಲದ ಜತೆ ಬೆಟ್ಟಿಂಗ್‌ ನಂಟು: 18 ಮಂದಿ ಸೆರೆ, ಕಾರ್ಯಾಚರಣೆ ಮುಂದುವರಿಕೆ!

ಮಂಗಳೂರು: ನಗರದಲ್ಲಿ ಕಳೆದ ಸುಮಾರು 15 ದಿನಗಳಿಂದ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸ್‌ ಕಾರ್ಯಾಚರಣೆ ಬಿರುಸುಗೊಂಡಿದ್ದು ಮಂಗಳವಾರ ನಗರ ಪೊಲೀಸರು ಮತ್ತು ಅಬಕಾರಿ ಇಲಾಖೆ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಬೆಟ್ಟಿಂಗ್‌ ಹಾಗೂ ಡ್ರಗ್ಸ್‌ ಸೇವನೆಯಲ್ಲಿ ತೊಡಗಿದ 18 ಮಂದಿಯನ್ನು ಬಂಧಿಸಿದ್ದಾರೆ. ಶ್ರೀನಿವಾಸ್‌, ಜಗದೀಶ್‌, ಉನ್ನಿಕೃಷ್ಣನ್‌, ಸುಧಾಕರ್‌, ಪ್ರತಾಪ್‌ ಶೆಟ್ಟಿ, ಜಾನ್‌ ಕೊಯಲ್ಲೋ, ತಿಮ್ಮಪ್ಪ ಗೌಡ, ರಿಚರ್ಡ್‌ ಲೋಬೋ, ಮೊಹಿದ್ದೀನ್‌ ಕುಂಞಿ, ಕೆ. ಸುಬ್ರಹ್ಮಣ್ಯ ಶೇಟ್‌, ಗೌತಮ್‌ ಮಜಿ ಬಂಧಿತ ಆರೋಪಿಗಳು. ಆರೋಪಿಗಳಿಂದ 11 ಮೊಬೈಲ್‌, 15ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ. ಕಾರ್‌ಸ್ಟ್ರೀಟ್‌ನಲ್ಲಿ ಬೆಟ್ಟಿಂಗ್‌ ಆರೋಪಿಗಳು ನಗರದ ಕಾರ್‌ಸ್ಟ್ರೀಟ್‌ ಮಹಾಮ್ಮಾಯಿ ಕೆರೆ ಸಮೀಪದ ಪ್ಲೈವುಡ್‌ ಅಂಗಡಿಯೊಂದರಲ್ಲಿ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮತ್ತು ಬಂದರು ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ವಿಕಾಸ್‌ ಕುಮಾರ್‌ ನಿರ್ದೇಶನದಂತೆ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥಾ ವಿಭಾಗ ಡಿಸಿಪಿ ಅರುಣಾಂಶುಗಿರಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್‌ ಗಾಂವ್ಕರ್‌ ಅವರ ಮಾರ್ಗದರ್ಶನದಂತೆ ಬಂದರು ಠಾಣಾ ಇನ್‌ಸ್ಪೆಕ್ಟರ್‌ ಗೋವಿಂದರಾಜು, ಎಸ್‌ಐ ಗುರುಕಾಂತಿ ಮತ್ತು ಸಿಬ್ಬಂದಿ, ಸಿಸಿಬಿ ಸಬ್‌ಇನ್‌ಸ್ಪೆಕ್ಟರ್‌ ಕಬ್ಬಳ್‌ರಾಜ್‌ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 7ಮಂದಿ ಸೆರೆನಗರದ ನಾನಾ ಕಡೆ ಮಂಗಳವಾರ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಗಾಂಜಾ ಸೇವನೆ ಮಾಡುತ್ತಿದ್ದ 7 ಮಂದಿ ಆರೋಪಿಗಳನ್ನು ಬಂಧಿಸಿದ್ದು, 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಲಿಸ್ಟರ್‌, ಪ್ರಥಮ್‌ ಶೆಟ್ಟಿ, ಪ್ರಥಮ್‌ ದೇವಾಡಿಗ, ವಿಶ್ವಾಸ್‌, ಮಂಜುನಾಥ್‌, ಚಿರಾಗ್‌ ಹಾಗೂ ಕ್ರಿಸ್‌ ಬಂಧಿತರು. ದ.ಕನ್ನಡ ಅಬಕಾರಿ ಅಧೀಕ್ಷಕಿ ಶೈಲಜಾ ಎ.ಕೋಟೆ ಅವರ ನಿರ್ದೇಶನದಂತೆ ಮಂಗಳೂರು ವಿಭಾಗದ ಅಬಕಾರಿ ಅಧೀಕ್ಷಕ ವಿನೋದ್‌ ಕುಮಾರ್‌ ಮಾರ್ಗದರ್ಶನದಲ್ಲಿ ಹಾಗೂ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್‌ ಅವರ ನೇತೃತ್ವದಲ್ಲಿ ನಿರೀಕ್ಷಕಿ ಸೀಮಾ ಮರಿಯಾ ಸುವಾರೀಸ್‌, ಅಬಕಾರಿ ಉಪ ನಿರೀಕ್ಷಕರಾದ ಪ್ರತಿಭಾ.ಜಿ, ಕಮಲ ಎಚ್‌.ಎನ್‌. ಹಾಗೂ ಸಿಬ್ಬಂದಿ ಸಂತೋಷ್‌ ಕುಮಾರ್‌, ಸುನಿಲ್‌, ಉಮೇಶ್‌ ಎಚ್‌., ಸಂದೀಪ್‌ ಕುಮಾರ್‌ ಹಾಗೂ ಮನಮೋಹನ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಡ್ರಗ್ಸ್‌ ಜಾಲಕ್ಕೆ ಸಂಬಂಧಿಸಿ 6 ಮಂದಿ ಸೆರೆ ಮಂಗಳೂರಿನ ಡ್ರಗ್ಸ್‌ ಜಾಲದ ಹಿಂದೆ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯ ನಂಟು ಇರುವ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದ್ದು, ಈ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ. ಮಂಗಳೂರು ಡ್ರಗ್ಸ್‌ ಜಾಲಕ್ಕೆ ಸಂಬಂಧಿಸಿ ಇದುವರೆಗೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಕಿಶೋರ್‌ ಅಮನ್‌ ನೀಡಿದ ಮಾಹಿತಿ ಪ್ರಕಾರ ಡ್ರಗ್ಸ್‌ ಜಾಲಕ್ಕೆ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಜತೆ ನಂಟು ಹೊಂದಿರುವುದು ತಿಳಿದು ಬಂದಿದೆ. ಮಂಗಳೂರಿನಲ್ಲಿ ನಡೆದ ಪಾರ್ಟಿಯಲ್ಲಿ ಬುಕ್ಕಿಗಳು ಕೂಡಾ ಪಾರ್ಟಿ ಮಾಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಬಾಲಿವುಡ್‌ ಲಿಂಕ್‌? ಡ್ರಗ್ಸ್‌ ಸೇವನೆಯಲ್ಲಿ ಬಂಧಿತ ಮಣಿಪುರ ಮೂಲದ ಆಸ್ಕಾ ನೀಡಿದ ಮಾಹಿತಿಯಂತೆ ಆಕೆಯೂ ಬಾಲಿವುಡ್‌ನ ನಟನೊಬ್ಬನ ಜೊತೆ ನಂಟು ಹೊಂದಿರುವುದು ಗೊತ್ತಾಗಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ. ಗೋವಾ ಹಾಗೂ ಮುಂಬಯಿನಲ್ಲಿ ನಟನ ಜತೆ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ಆಸ್ಕಾ, ಸಿನಿಮಾ ನಟರ ಜತೆ ಸಂಪರ್ಕ ಇರಿಸಿಕೊಂಡಿದ್ದಾಳೆಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭಿಸಿಲ್ಲ.


from India & World News in Kannada | VK Polls https://ift.tt/2HJjqsz

ಮಂಗಳನಲ್ಲಿ ಉಪ್ಪುನೀರಿನ ಸರೋವರಗಳ ಜಾಡು ಹಿಡಿದ ಸಂಶೋಧಕರು!

ಕೇಪ್‌ ಕೆನವರಲ್: ಜೀವಿಗಳಿಗೆ ಭೂಮಿಯ ನಂತರದ ಆವಸಸ್ಥಾನ ಎಂದು ಹೇಳಲಾಗಿರುವ ಮಂಗಳನಲ್ಲಿ ಸರೋವರಗಳಿರುವ ಕುರುಹುಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅಂತಾರಾಷ್ಟ್ರೀಯ ಖಗೋಳ ವಿಜ್ಞಾನಿಗಳ ತಂಡ ಮಂಗಳ ಗ್ರಹದಲ್ಲಿ ಉಪ್ಪು ನೀರಿನ ಸರೋವರಗಳಿರುವುದನ್ನು ಪತ್ತೆ ಮಾಡಿದೆ. ಆದರೆ ಈ ಸರೋವರಗಳು ಮಂಗಳನ ನೆಲದಡಿ ಹುದುಗಿವೆ ಎಂದು ತಿಳಿಸಿದ್ದಾರೆ. ಈಗಾಗಲೇ ಎರಡು ವರ್ಷಗಳ ಹಿಂದೆಯೇ ಮಂಗಳನಲ್ಲಿ ದೊಡ್ಡ ಜಲಾಶಯ ಇರುವುದಾಗಿ ಸಂಶೋಧಕರು ತಿಳಿಸಿದ್ದರು. ಇದೀಗ ಮಂಗಳನ ನೆಲದಾಳದಲ್ಲಿ ಇನ್ನೂ ಮೂರು ಸರೋವರಗಳ ಉಪಸ್ಥಿತಿಯನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ಕುರಿತು 'ನೇಚರ್' ಖಗೋಳ ವಿಜ್ಞಾನ ನಿಯತಕಾಲಿಕೆ ಸೋಮವಾರ ಪ್ರಕಟಿಸಿದೆ. ರೋಮ್ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿಗಳು ಎರಡು ವರ್ಷದ ಹಿಂದೆಯೇ ಮಂಗಳ ನೆಲದಡಿ ಬೃಹತ್‌ ಸರೋವರಗಳು ಹುದುಗಿರುವ ಕುರಿತು ಅಂದಾಜಿಸಿದ್ದರು. ಆದರೆ, ಹಲವು ದತ್ತಾಂಶಗಳಿಂದ ಖಚಿತಪಡಿಸಿಕೊಂಡ ನಂತರ ಈ ವಿಚಾರವನ್ನು 'ನೇಚರ್‌' ನಿಯತಕಾಲಿಕೆಯಲ್ಲಿ ಪ್ರಕಟಿಸಿದ್ದಾರೆ. ಈ ವಿಜ್ಞಾನಿಗಳು 'ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿಯ' ರಾಡಾರ್‌ ಸೌಂಡರ್‌ನ ದತ್ತಾಂಶಗಳನ್ನು ಬಳಸಿ ಸಂಶೋಧನೆ ನಡೆಸಿದ್ದಾರೆ. ಮಂಗಳನ ನೆಲದಡಿ ಸುಮಾರು 20ರಿಂದ 30 ಕಿಲೋಮಿಟರ್‌ನಷ್ಟು ವಿಸ್ತಾರವಾಗಿ ಈ ಸರೋವರಗಳು ಹರಡಿಕೊಂಡಿವೆ. ಒಂದು ವಿಸ್ತಾರವಾಗಿದ್ದು, 30 ಕಿಮೀ ಅಗಲವಿದೆ. ಉಳಿದ ಎರಡು ಸರೋವರಗಳು ಕೂಡ ಹಲವು ಕಿಮೀ ಉದ್ದಕ್ಕೆ ಚಾಚಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಮಂಗಳನಲ್ಲಿ ಸರೋವರಗಳ ಇರುವಿಕೆಯನ್ನು ಸಾಬೀತುಪಡಿಸುವ ಹಲವು ಸಾಕ್ಷ್ಯಾಧಾರಗಳನ್ನು ಸಂಶೋಧಕರು ಒದಗಿಸಿದ್ದಾರೆ. ಮಂಗಳನಲ್ಲಿ ಜೀವಾಂಕುರ ಸಾಧ್ಯವೇ? ಒಂದು ವೇಳೆ ಮಂಗಳನಲ್ಲಿ ನೀರಿನ ಸೆಲೆ ಇರುವುದು ನಿಜವಾದರೆ, ಅದು ಜೀವಿಗಳ ಆವಿರ್ಭಾವಕ್ಕೆ ಕಾರಣವಾಗಲಿದೆ. ಜೀವಿಗಳ ಉಗಮಕ್ಕೆ ಸಿದ್ಧವಾಗುತ್ತಿದ್ದರೆ ಮುಂದೆ ಅಲ್ಲಿಯೋ ಜೀವಿಗಳ ಉಗಮವಾಗುವ ಸಾಧ್ಯತೆ ಇದೆ. ಸರೋವರಗಳಲ್ಲಿನ ಉಪ್ಪಿನ ಪ್ರಮಾಣವು ಇಲ್ಲಿ ನಿಜವಾದ ಸಮಸ್ಯೆಯಾಗಿದೆ. ಮಂಗಳ ಗ್ರಹದ ಯಾವುದೇ ಭೂಗತ ಸರೋವರಗಳು ನೀರು ದ್ರವವಾಗಿ ಉಳಿಯಲು ಸಮಂಜಸವಾಗಿ ಹೆಚ್ಚಿನ ಉಪ್ಪಿನಂಶವನ್ನು ಹೊಂದಿರಬೇಕು ಎಂದು ಹೇಳಲಾಗಿದೆ. ಮಂಗಳನಲ್ಲಿ ಶಾಖ ಕಡಿಮೆ: 'ಮಂಗಳನ ಒಳಭಾಗದಿಂದ ಅಲ್ಪ ಪ್ರಮಾಣದ ಶಾಖವಿರಬಹುದು. ಆದರೆ, ಮಂಜುಗಡ್ಡೆಯನ್ನು ಕರಗಿಸಲು ಇದು ಸಾಕಾಗದು. ಹೀಗಾಗಿ ಅಂತರ್ಗತ ಸರೋವರಗಳಲ್ಲಿ ನೀರು ದ್ರವರೂಪಕ್ಕೆ ಬರಲು ಉಪ್ಪಿನ ಅಂಶ ಹೆಚ್ಚಿರಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ.


from India & World News in Kannada | VK Polls https://ift.tt/34n8nx1

ಮತ ಧ್ರುವೀಕರಣಕ್ಕಾಗಿ ಬೆಂಗಳೂರನ್ನೇ ಅಪಮಾನಿಸುವ ಕ್ಷುಲ್ಲಕ ಹೇಳಿಕೆ ಅಪರಾಧವೇ ಸರಿ; ತೇಜಸ್ವಿ ಸೂರ್ಯ ವಿರುದ್ಧ ಎಚ್‌ಡಿಕೆ ಕಿಡಿ

: ಬೆಂಗಳೂರು ಭಯೋತ್ಪಾದನಾ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆಯೆಂದು ರಾಜಧಾನಿಯಲ್ಲಿ ಎನ್‌ಐಎ ಕಚೇರಿ ಸ್ಥಾಪನಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದ ಸಂಸದ , ರಾಜ್ಯಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ರಾಜ್ಯದ ರಾಜಕಾರಣಿಗಳು ಕಿಡಿಕಾರಿದ್ದರು. ಇದೀಗ ಮಾಜಿ ಮುಖ್ಯಮಂತ್ರಿ ಕೂಡ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಕೆಲ ಮಂದಿ ಡಿಜೆ ಹಳ್ಳಿ ಘಟನೆ ನಂತರ ಸಿಕ್ಕಿ ಬಿದ್ದಿದ್ದರು. ಹೀಗಾಗಿ ನಮ್ಮ ಟೀಕೆ ಉಗ್ರರ ವಿರುದ್ಧ ಇರಬೇಕು. ಆದರೆ, ಕೋಟ್ಯಂತರ ಜನರಿಗೆ ಅನ್ನ, ಆಶ್ರಯ, ಜೀವನ ನೀಡುತ್ತಿರುವ ತಾಯಿಯಂಥ ಊರಿನ ಬಗ್ಗೆ ಅಲ್ಲ. ಬೆಂಗಳೂರಿನಲ್ಲಿ ಉಗ್ರರು ಸಿಕ್ಕಿಬಿದ್ದ ಮಾತ್ರಕ್ಕೆ ಬೆಂಗಳೂರು ಅವರದ್ದಲ್ಲ. ಬೆಂಗಳೂರು ನಮ್ಮದು ಎಂದು ಹೇಳಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಎಚ್‌ಡಿಕೆ, ಬೆಂಗಳೂರು ಉಗ್ರರ ಕೇಂದ್ರವಾಗಿದೆ ಎಂಬ ಬಿಜೆಪಿಯೊಳಗಿನ ಕೆಲ ಅಪ್ರಬುದ್ಧರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ. ಇಂಥ ಹೇಳಿಕೆಯನ್ನು ಸಮರ್ಥಿಸಲಾಗದೇ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂಕಟ ಅನುಭವಿಸಿದ್ದನ್ನು ನಾನು ಮಾಧ್ಯಮದ ಮೂಲಕ ನೋಡಿದೆ. ಈ ಅಪ್ರಬುದ್ಧ ಹೇಳಿಕೆ ಬಿಜೆಪಿಯ ಹಿರಿಯರಿಗೆ ಮಾಡಿದ ಅಪಮಾನವೂ ಹೌದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಬೆಂಗಳೂರು ಕೇವಲ ಬಿಬಿಎಂಪಿ ಚುನಾವಣೆ ಮಾತ್ರವಲ್ಲ, ಬೆಂಗಳೂರು 28 ವಿಧಾನಸಭೆ ಕ್ಷೇತ್ರ ಮಾತ್ರವಲ್ಲ, ಬೆಂಗಳೂರು ನಾಲ್ಕು ಲೋಕಸಭೆ ಕ್ಷೇತ್ರ ಮಾತ್ರವಲ್ಲ. ಬೆಂಗಳೂರು ನಮ್ಮೆಲ್ಲರ ಹೆಮ್ಮೆ. ಮತ ಧ್ರುವೀಕರಣಕ್ಕಾಗಿ ಬೆಂಗಳೂರನ್ನೇ ಅಪಮಾನಿಸುವ ಈ ಕ್ಷುಲ್ಲಕ ಹೇಳಿಕೆ ಅಪರಾಧವೇ ಸರಿ. ಈ ಹೇಳಿಕೆ ಸಂಬಂಧ ಬಿಜೆಪಿ ಸಂಬಂಧಿಸಿದವರಿಂದ ಕ್ಷಮೆ ಕೇಳಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕೆಂಪೇಗೌಡರು ಬಲಿದಾನಗಳ ಮೂಲಕ ನಿರ್ಮಿಸಿದ ಬೆಂಗಳೂರು ಈಗಾಗಲೇ ಜಗದ್ವಿಖ್ಯಾತಿ ಗಳಿಸಿದೆ ಎಂದಿರುವ ಎಚ್‌ಡಿಕೆ, ದೇಶದ ಬೇರೆಲ್ಲ ನಗರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದ ಉತ್ತರ ಭಾರತೀಯ ರಾಜಕೀಯ ಲಾಬಿಯ ಷಡ್ಯಂತ್ರದ ಭಾಗವೇ ಈ ಹೇಳಿಕೆ ಎಂಬ ಅನುಮಾನಗಳೂ ಮೂಡುತ್ತಿವೆ. ಯಾಕೆಂದರೆ ಕೆಲ ಮಂದಿಗೆ ತಾಯ್ನಾಡಿನ ಗೌರವಕ್ಕಿಂತ ಉತ್ತರದ ವ್ಯಾಮೋಹ ಅಧಿಕ ಎಂದು ವ್ಯಂಗ್ಯವಾಡಿದ್ದಾರೆ.


from India & World News in Kannada | VK Polls https://ift.tt/347oq1x

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...