ವಾಷಿಂಗ್ಟನ್: ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ವೇಳೆ ತಾವು ಅಧಿಕಾರಕ್ಕೆ ಬಂದರೆ ಟ್ರಂಪ್ ಆಡಳಿತ ಹೇರಿರುವ ಮೇಲಿನ ರದ್ದತಿ ಆದೇಶವನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. H-1B ವೀಸಾ ರದ್ದತಿ ಟ್ರಂಪ್ ಸರ್ಕಾರದ ತಪ್ಪು ನಿರ್ಧಾರ ಎಂದಿರುವ ಜೋ ಬಿಡೆನ್, ದಿನ್ನು ರದ್ದುಪಡಿಸಿ ಮತ್ತೆ H-1B ವೀಸಾ ಜಾರಿ ಮಾಡುವ ಕ್ರಮಗಳನ್ನು ಕೈಗೊಳ್ಳು ಸಿದ್ಧ ಎಂದು ಭರವಸೆ ನೀಡಿದ್ದಾರೆ. H-1B ವೀಸಾ ತಾತ್ಕಾಲಿಕ ರದ್ದತಿ ಅಮೆರಿಕಕ್ಕೆ ಹೊಡೆತ ನೀಡುವುದಲ್ಲದೇ ಭಾರತ ಸೇರಿದಂತೆ ವಿದೇಶಿ ಉದ್ಯೋಕಾಂಕ್ಷಿಗಳ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದು ಜೋ ಬಿಡೆನ್ ಅಭಿಪ್ರಾಯಪಟ್ಟಿದ್ದಾರೆ. ಏಷ್ಯನ್ ಅಮೆರಿಕನ್ ಮತ್ತು ಪೆಸಿಫಿಕ್ ದ್ವೀಪವಾಸಿ ಸಂಘಟನೆಯೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಜೋ ಬಿಡೆನ್, H-1B ವೀಸಾ ವಿಶ್ವ ಕಲ್ಯಾಣಕ್ಕಾಗಿ ಸರ್ಕಾರದ ಒಂದು ಐತಿಹಾಸಿಕ ನಿರ್ಣಯವಾಗಿದ್ದು, ಇದನ್ನು ಹಾಳು ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು. ಸದ್ಯ ಅಮೆರಿಕದಲ್ಲಿ ಕೊರೊನಾ ವೈರಸ್ ಹಾವಳಿಗಿಂತ ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯದ್ದೇ ಕಾವು ಜೋರಾಗಿದ್ದು, ಟ್ರಂಪ್ ಹಾಗೂ ಬಿಡೆನ್ ಅಬ್ಬರದ ಪ್ರಚಾರದಲ್ಲಿ ನಿರತರಾಗಿದ್ದಾರೆ.
from India & World News in Kannada | VK Polls https://ift.tt/3inbZFd