ನಮಗೆ ವ್ಯಕ್ತಿ ಪೂಜೆ ಬೇಡ, ಪಕ್ಷ ಪೂಜೆ ಮುಖ್ಯ, ಒಗ್ಗೂಡಿ ದುಡಿಯೋಣ: ಡಿಕೆ ಶಿವಕುಮಾರ್‌

ಬೆಂಗಳೂರು: ಅನೇಕ ಹುದ್ದೆಗಳನ್ನು ನೋಡಿದ್ದೇನೆ. ಆದರೆ ನಾನು ಈಗಲೂ ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಜವಾಬ್ದಾರಿ ನಿಭಾಯಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಭರವಸೆ ನೀಡಿದರು. ಅತ್ಯಂತ ವಿನೂತನ ರೀತಿಯಲ್ಲಿ, ಡಿಜಿಟಲ್‌ ತಂತ್ರಜ್ಞಾನದ ಮೂಲಕ ಆಯೋಜಿಸಲಾದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಭಾಷಣ ಮಾಡಿದರು. ಪಕ್ಷವೇ ನನಗೆ ಎಲ್ಲ. ಇಡೀ ಜೀವಮಾನದವರೆಗೂ ಪಕ್ಷಕ್ಕೆ ದುಡಿಯುತ್ತೇನೆ. ವಿದ್ಯಾರ್ಥಿ ದಿಸೆಯಿಂದಲೇ ಜನ ಸೇವೆಗೆ ಮುಡಿಪಾಗಿಟ್ಟೆದ್ದೇನೆ. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲೇ ದುಡಿಯುತ್ತೇನೆ. ಅಧ್ಯಕ್ಷ ಸ್ಥಾನ ಸಿಕ್ಕಿರಬಹುದು. ಆದರೆ ನಾನು ಕೇವಲ ಕಾರ್ಯಕರ್ತ ಎಂದರು. ಇದೊಂದು ಐತಿಹಾಸಿಕ ದಿನವಾಗಿದೆ. ಸ್ಥಾನದ ಹಂಬಲ ನನಗೆ ಇರಲಿಲ್ಲ, ಈ ಸವಾಲನ್ನು ಎದುರಿಸಲು ಉತ್ಸಾಹ ಇದೆ ಎಂದರು. ಜೈಲಿಗೆ ಹೋದಾಗ ರಾಜಕೀಯ ಮುಗಿದೋಯ್ತು ಅಂತಿದ್ರು ರಾಜಕಾರಣ ಮುಗಿದೇ ಹೋಯ್ತು ಎಂಬ ಸಂದರ್ಭದಲ್ಲಿ ಸೋನಿಯಾ ಗಾಂಧಿ‌ ಜೈಲಿಗೆ ಬಂದು ನಿನ್ನ ಜೊತೆಗೆ ಇದ್ದೇನೆ ಎಂದು ನನಗೆ ಧೈರ್ಯ ತುಂಬಿದರು. ಇದು ನನ್ನಲ್ಲಿ ಆತ್ಮವಿಶ್ವಾಸ ಇಮ್ಮಡಿಯಾಯಿತು ಎಂದು ನೆನಪಿಸಿಕೊಂಡು ಭಾಷಣದ ವೇಳೆ ಡಿಕೆಶಿ ಭಾವುಕರಾದರು. ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇದೆ. ಒಗ್ಗಟ್ಟಿನಿಂದ ಪಕ್ಷವನ್ನು ಮುನ್ನಡೆಸುತ್ತೇನೆ. ಯಾರಿಗೂ ನಾನು ರಾಜಕೀಯದಲ್ಲಿ ದ್ರೋಹ ಮಾಡಿಲ್ಲ, ಅನೇಕ ಕಷ್ಟಗಳನ್ನು ಅನುಭವಿಸಿದ್ದೇನೆ. ಅದೆಲ್ಲಾ ಪಕ್ಷಕ್ಕಾಗಿ ಕೆಲಸ ಮಾಡಿರುವುದಕ್ಕಾಗಿ ಅಧಿಕಾರ ಸಿಗದಿದ್ದಾಗಲೂ ಚಕಾರ ಎತ್ತಿಲ್ಲ ಪಕ್ಷದ ವಿವಿಧ ವಿಭಾಗಗಳು ಜೊತೆಗೂಡಿ ಕೆಲಸ ಮಾಡಬೇಕು ಎಂದು ಡಿಕೆಶಿ ತಿಳಿಸಿದರು. ಪಕ್ಷವನ್ನು ಮಾಸ್ ಬೇಸ್‌ನಿಂದ ಕೇಡರ್ ಬೇಸ್‌ಗೆ ಪರಿವರ್ತನೆ ಮಾಡಲಾಗುವುದು. ಕೇರಳ ಮಾದರಿಯಲ್ಲಿ ಪಕ್ಷ ಸಂಘಟನೆ, ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಕೆಲಸ ಪಕ್ಷದಲ್ಲಿ ವ್ಯಕ್ತಿ ಪೂಜೆ ಬೇಡವೇ ಬೇಡ, ಮಾಡಬೇಕಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ತಿಳಿಸಿದರು.


from India & World News in Kannada | VK Polls https://ift.tt/3dTOOyM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...