ಮ್ಯಾನ್ಮಾರ್‌ನ ಗಣಿ ಪ್ರದೇಶದಲ್ಲಿ ಭೂ ಕುಸಿತ, 50ಕ್ಕೂ ಅಧಿಕ ಮಂದಿ ಸಾವು!

ಮ್ಯಾನ್ಮಾರ್: ಖನಿಜ(ಜೇಡ್‌) ಗಣಿ ಪ್ರದೇಶದಲ್ಲಿ ಭಾರಿ ಸಂಭವಿಸಿದೆ. ಭೂ ಕುಸಿತದಿಂದಾಗಿ ಸುಮಾರು 50 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಮ್ಯಾನ್ಮಾರ್‌ನ ಕಾಚಿನ್ ರಾಜ್ಯದಲ್ಲಿರುವ ಗಣಿಯಲ್ಲಿ ಈ ದುರಂತ ಸಂಭವಿಸಿದ್ದು, 50ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ ಎಂದು ಅಲ್ಲಿನ ಸಚಿವಾಲಯ ತಿಳಿಸಿದೆ. ಏಕಾಏಕಿ ಸಂಭವಿಸದ ದರಂತದಲ್ಲಿ ಹಲವು ಜನರು ಮಣ್ಣಾಗಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಧೂಳಿನ ಬಿರುಗಾಳಿ, ಭಾರಿ ಮಳೆ ಸುರಿದ ಹಿನ್ನೆಲೆ ಪ್ರದೇಶದಲ್ಲಿ ಕುಸಿತ ಉಂಟಾಗಿದೆ ಎಂದು ಸ್ಥಳೀಯ ಅಗ್ನಿ ಶಾಮಕ ದಳ ತನ್ನ ಫೇಸ್‌ಬುಕ್‌ನಲ್ಲಿ ತಿಳಿಸಿದೆ. ಅಲ್ಲದೇ ಸದ್ಯ 50 ಶವಗಳನ್ನು ಗುರುತಿಸಲಾಗಿದ್ದು, ಮಣ್ಣಿನಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಮುಂದುವರಿಸಿರುವುದಾಗಿ ತಿಳಿಸಿದೆ. ಕಾಚಿನ್ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಆಲ್‌ಮೋಸ್ಟ್‌ ಎಲ್ಲಾ ಗಡಿಗಳಲ್ಲೂ ಇದೆ ಸಮಸ್ಯೆಯಂತೆ. ಅನೇಕ ಬಾರಿ ಅವಘಡ ಸಂಭವಿಸಿರುವ ನಿದರ್ಶನವು ಇದೆಯಂತೆ. ಸದ್ಯ ಈ ಘಟನೆ ನಡೆಯುವ ವೇಳೆ ಇನ್ನೂರಕ್ಕೂ ಹೆಚ್ಚು ಮಂದಿ ಗಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/2CTST9o

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...