ನವದೆಹಲಿ: ಚೀನಾ ಜಾರಿಗೆ ತಂದಿರುವ ರಾಷ್ಟ್ರೀಯ ಭದ್ರತಾ ಕಾನೂನು ವಿರೋಧಿಸಿ ಹಾಂಕಾಂಗ್‌ನಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಕಾನೂನು ವಿರೋಧಿಸಿದ ಪ್ರತಿಭಟನೆಗಿಳಿದ 200ಕ್ಕೂ ಹೆಚ್ಚು ಜನರನ್ನು ಈಗಾಗಲೇ ಬಂಧಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ , ಹಾಂಕಾಂಗ್ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದೆ. ಅಲ್ಲದೇ ಹಾಂಕಾಂಗ್‌ನಲ್ಲಿರುವ ಭಾರತೀಯ ಸಮುದಾಯದ ಭದ್ರತೆ ಕುರಿತು ಚಿಂತಾಕ್ರಾಂತವಾಗಿರುವುದಾಗಿಯೂ ಹೇಳಿದೆ. ಇದೇ ವೇಳೆ ಹಾಂಕಂಗ್ ಬೆಳವಣಿಗೆಗಳನ್ನು ತುರ್ತು ಆದ್ಯತೆ ಮೇಲೆ ಗಣನೆಗೆ ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿರುವ ಭಾರತ, ಪರಿಸ್ಥಿತಿಯನ್ನು ತಹಬದಿಗೆ ತರುವುದು ಅಂತಾರಾಷ್ಟ್ರೀಯ ಜವಾಬ್ದಾರಿಯಾಗಿ ಮಾರ್ಪಟ್ಟಿದೆ ಎಂದು ಹೇಳಿದೆ. ಈ ಕುರಿತು ವಿಶ್ವಸಂಸ್ಥೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ರಾಜೀವ್ ಕೆ, ಚಂದರ್, ಹಾಂಕಾಂಗ್‌ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಭಾರತ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು. ಹಾಂಕಾಂಗ್‌ನಲ್ಲಿ ಸುಮಾರು 38,000 ಅನಿವಾಸಿ ಭಾರತೀಯರು ನೆಲೆಸಿದ್ದು, ಚೀನಾದ ಕಾನೂನು ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆ ಮತ್ತು ಪೊಲೀಸ್ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ತನ್ನ ನಾಗರಿಕರ ಭದ್ರತೆ ಕುರಿತು ಭಾರತ ಕಳವಳ ವ್ಯಕ್ತಪಡಿಸಿದೆ. ನಿನ್ನೆ(ಬುಧವಾರ) ರಾಷ್ಟ್ರೀಯ ಭದ್ರತಾ ಕಾನಾನು ಜಾರಿ ವಿರೋಧಿಸಿದ ನಡೆದ ಪ್ರತಿಭಟನೆಯಲ್ಲಿ 200ಕ್ಕೂ ಹೆಚ್ಚು ಜನರನ್ನು ಬಂಧಿಸಿರುವ ಪೊಲೀಸರು, ಜಲ ಫಿರಂಗಿ ಬಳಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.
from India & World News in Kannada | VK Polls https://ift.tt/3ijAIdv