ವಾಷಿಂಗ್ಟನ್: ಮತ್ತು ಸೂರ್ಯನ ಸಂಬಂಧ ಅನೋನ್ಯವಾದುದು. ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಾ ಪೃಥ್ವಿಯ ಮೇಲೆ ಜೀವ ಸಂಕುಲ ಬಾಳಿ ಬುದಕಲು ಅನುವಾಗುವಂತಹ ವಾತಾವರಣ ನಿರ್ಮಿಸಿವೆ. ಸಮಸ್ತ ಸೌರಮಂಡಲದ ಅಧಿಪತಿಯಾಗಿರುವ ಸೂರ್ಯ, ಭೂಮಿಯನ್ನೂ ಆಳುತ್ತಾನೆ. ಭೂಮಿಯ ಎಲ್ಲಾ ಆಗುಹೋಗುಗಳಿಗೆ ಕೆಲವೊಮ್ಮೆ ಪ್ರತ್ಯಕ್ಷ ಹಾಗೂ ಮತ್ತೂ ಕೆಲವೊಮ್ಮೆ ಪರೋಕ್ಷವಾಗಿ ಕಾರಣೀಭೂತನಾಗಿರುವ ಸೂರ್ಯ, ಸಮಸ್ತ ಜೀವ ಸಂಕುಲದ ಭವಿಷ್ಯವನ್ನು ನಿರ್ಣಯಿಸುವ ದೊರೆ. ಅದರಂತೆ ಅರ್ಧ ಭೂಮಿಗೆ ಕತ್ತಲನ್ನೂ ಹಾಗೂ ಇನ್ನರ್ಧ ಭೂಮಿಗೆ ಬೆಳಕನ್ನೂ ನೀಡುವ ಸೂರ್ಯ, ತನ್ನ ಕಿರಣಗಳೊಂದಿಗೆ ಭೂಮಿಯ ಮೇಲ್ಮೈಯನ್ನು ಬೆಳಗುತ್ತಾನೆ. ಇದೀಗ ಭೂಮಿಯನ್ನು ಸುತ್ತುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಅಪರೂಪದ ಫೋಟೋವೊಂದನ್ನು ಕ್ಲಿಕ್ಕಿಸಿದ್ದಾರೆ. ಭೂಮಿಯ ಮೇಲಿನ ಹಗಲು ಮತ್ತು ಇರುಳಿನ ನಡುವಿನ ಗಡಿಯ ಫೋಟೋ ಇದೀಗ ಭಾರೀ ವೈರಲ್ ಆಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಗಗನಯಾತ್ರಿಗಳಾದ ರಾಬರ್ಟ್ ಎಲ್. ಬೆಂಹಕನ್ ಎಂಬುವವರು ಈ ಫೋಟೋವನ್ನು ಕ್ಲಿಕ್ಕಿಸಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಬರ್ಟ್ ಕ್ಲಿಕ್ಕಿಸಿರುವ ಈ ಫೋಟೋದಲ್ಲಿ ಭೂಮಿಯ ಅರ್ಧ ಭಾಗದಲ್ಲಿ ಹಗಲು ಮತ್ತು ಇನ್ನರ್ಧ ಭಾಗದಲ್ಲಿ ಕತ್ತಲು ಆವರಿಸಿದ್ದು, ಅದರ ನಡುವಿನ ಭಾಗದ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
from India & World News in Kannada | VK Polls https://ift.tt/2NJk5tL