ವಾಷಿಂಗ್ಟನ್: ಗಡಿ ಘರ್ಷಣೆ ಬಳಿಕ ಚೀನಾದ ವಿರುದ್ಧ ತೊಡೆ ತಟ್ಟಿ ನಿಂತಿರುವ ಭಾರತ, ಚೀನಾ ಮೂಲಕ 59 ಆ್ಯಪ್‌ಗಳ ಬಳಕೆಗೆ ನಿಷೇಧ ಹೇರಿ ಆದೇಶ ಜಾರಿ ಮಾಡಿದೆ. ಚೀನಾ ಮೂಲದ 59 ಆ್ಯಪ್‌ಗಳಿಗೆ ನಿಷೇಧ ಹೇರಿದ ಭಾರತದ ಕ್ರಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಇದೇ ಮೊದಲ ಬಾರಿಗೆ ಈ ವಿಷಯದಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಬೆಂಬಲವೂ ದೊರೆತಿದೆ. ಹೌದು, ಚೀನಿ ಆ್ಯಪ್ ನಿಷೇದಿಸುವ ಭಾರತದ ಕ್ರಮವನ್ನು ಶ್ಲಾಘಿಸಿರುವ , ಈ ನಡೆ ಭಾರತದ ಸಾರ್ವಭೌಮತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಾಯಕಾರಿ ಎಂದು ಅಭಿಪ್ರಾಯಪಟ್ಟಿದೆ. ಈ ಕುರಿತು ಮಾತನಾಡಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಯ್ಲಿ ಮೆಕ್‌ಎನಾನಿ, ಚೀನಾ ಆ್ಯಪ್‌ಗಳನ್ನು ನಿಷೇಧಿಸುವ ಭಾರತದ ಕ್ರಮವನ್ನು ಅಮೆರಿಕ ಅಧ್ಯಕ್ಷ ಬೆಂಬಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಭಾರತ-ಚೀನಾ ನಡುವೆ ಶಾಂತಿಯುತ ಮಾತುಕತೆಗಳು ನಡೆದು ಸಮಸ್ಯೆ ಇತ್ಯರ್ಥವಾಗಲಿ ಎಂದೂ ಟ್ರಂಪ್ ಹಾರೈಸಿದ್ದಾರೆ ಎಂದು ಕೇಯ್ಲಿ ತಿಳಿಸಿದ್ದಾರೆ. ಭಾರತದ ಸಾರ್ವಭೌಮತ್ವದ ಮೇಲೆ ಸವಾರಿ ಮಾಡಲು ಪ್ರಯತ್ನಿಸಿದ್ದ ಚೀನಾಗೆ ಸೂಕ್ತ ಪಾಠವನ್ನೇ ಕಲಿಸಲಾಗಿದ್ದು, ಭಾರತದ ಈ ದಿಟ್ಟ ನಿರ್ಧಾರವನ್ನು ಅಮೆರಿಕ ಬೆಂಬಲಿಸಲಿದೆ ಎಂದು ಟ್ರಂಪ್ ಹೇಳಿದ್ದಾಗಿ ಕೇಯ್ಲಿ ಹೇಳಿದ್ದಾರೆ. ಇನ್ನು ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸಿರುವ ಅಮೆರಿಕ ಕಾರ್ಯದರ್ಶಿ ಮೈಕ್ ಪಾಂಪಿಯೋ, ಚೀನಾ ಆ್ಯಪ್ ನಿಷೇಧಿಸುವ ಮೂಲಕ ಭಾರತ ಅತ್ಯಂತ ದಿಟ್ಟ ಪ್ರತಿಕ್ರಿಯೆ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
from India & World News in Kannada | VK Polls https://ift.tt/2ZxtiL6