ವೈಬೊ ಆ್ಯಪ್ ಡಿಲೀಟ್ ಮಾಡಿದ ಪ್ರಧಾನಿ ಮೋದಿ: ಚೀನಾ ಒದ್ದೊಡಿಸಲು ಒಂದಾದ ಭಾರತ!

ನವದೆಹಲಿ: ಗಡಿ ಘರ್ಷಣೆಗೆ ಪ್ರತ್ಯುತ್ತರವಾಗಿ 59 ಚೀನಿ ಆ್ಯಪ್‌ಗಳ ಬಳಕೆಯ ಮೇಲೆ ನಿಷೇಧ ಹೇರಿರುವ ಭಾರತ, ಹಂತ ಹಂತವಾಗಿ ದೇಶದಿಂದ ಚೀನಾವನ್ನು ಕಾಲ್ಕಿಳುವಂತೆ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಅವರ ಅಧಿಕೃತ ವೈಬೊ ಆ್ಯಪ್‌ನ್ನೂ ಕೂಡ ಡಿಲೀಟ್ ಮಾಡಲಾಗಿದ್ದು, ಅದರಲ್ಲಿದ್ದ ಎಲ್ಲಾ ಪೋಸ್ಟ್‌ಗಳನ್ನೂ ಡಿಲೀಟ್ ಮಾಡಲಾಗಿದೆ. ಚೀನಾ ಮೂಲದ ಟ್ವಿಟ್ಟರ್ ರೀತಿ ಕೆಲಸ ಮಾಡುವ ವೈಬೋ ಆ್ಯಪ್‌ನಲ್ಲಿ ಪ್ರಧಾನಿ ಮೋದಿ ಅಕೌಂಟ್ ಹೊಂದಿದ್ದರು. ಆದರೆ ಚೀನಿ ಆ್ಯಪ್‌ಗಳ ಬಳಕೆ ಮೇಲೆ ನಿಷೇಧ ಹೇರುತ್ತಿದ್ದಂತೇ ಪ್ರಧಾನಿ ಮೋದಿ ಈ ಅಕೌಂಟ್‌ನ್ನು ಡಿಲೀಟ್ ಮಾಡಿದ್ದಾರೆ. ಕಳೆದ ಸೋಮವಾರ(ಜೂನ 29) ದಿಂದಲೇ ವೈಬೋದಲ್ಲಿನ ಪ್ರಧಾನಿ ಮೋದಿ ಅವರ ಪೋಸ್ಟ್‌ಗಳನ್ನು ಡಿಲೀಟ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಇದೀಗ ಅಕೌಂಟ್‌ನನ್ನು ಸಂಪೂರ್ಣವಾಗಿ ಡಿಲೀಟ್ ಮಾಡಲಾಗಿದೆ. ವೈಬೋ ಅಕೌಂಟ್‌ನನ್ನು ಬಳಕೆದಾರ ಡಿಲೀಟ್ ಮಾಡಲು ಬರುವುದಿಲ್ಲ. ಕೇವಲ ವೈಬೋ ಸಂಸ್ಥೆ ಮಾತ್ರ ಅಕೌಂಟ್ ಡಿಲೀಟ್ ಮಾಡಬಲ್ಲದು. ಈ ಹಿನ್ನೆಲೆಯಲ್ಲಿ ಅಧಿಕೃತ ಪ್ರಕ್ರಿಯೆಗಳನ್ನು ಅನುಸರಿಸಿ ಪ್ರಧಾನಿ ಮೋದಿ ಅವರ ಅಕೌಂಟ್‌ನನ್ನು ಡಿಲೀಟ್ ಮಾಡಲಾಯಿತು. ಕಳೆದ 2015ರಲ್ಲಿ ಚೀನಾ ಪ್ರವಾಸಕ್ಕೂ ಮುನ್ನ ವೈಬೋ ಬಳಕೆ ಆರಂಭಿಸಿದ್ದ ಪ್ರಧಾನಿ ಮೋದಿ , ಚೀನಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಮೊದಲ ಪೋಸ್ಟ್ ಮಾಡಿದ್ದರು. ಪ್ರಧಾನಿ ಮೋದಿ ಅವರಿಗೆ ವೈಬೋದಲ್ಲಿ ಸುಮಾರು 2,44,000 ಫಾಲೋವರ್ಸ್‌ಗಳಿದ್ದರು. ಇದೀಗ ಭಾರತ-ಚೀನಾ ಗಡಿ ಘರ್ಷಣೆ ಬಳಿಕ ಚೀನಾ ವಿರುದ್ಧ ಪ್ರತಿಕಾರಕ್ಕೆ ಸಜ್ಜಾಗಿರುವ ಭಾರತ, ಅದರ ಮೊದಲ ಹಂತದ ಭಾಗವಾಗಿ 59 ಚೀನಿ ಆ್ಯಪ್‌ಗಳನ್ನು ಡಿಲೀಟ್ ಮಾಡಿದೆ. ಇದಕ್ಕೆ ಪೂರಕವಾಗಿ ಪ್ರಧಾನಿ ಮೋದಿ ಅವರ ವೈಬೋ ಅಕೌಂಟ್‌ನ್ನೂ ಕೂಡ ಡಿಲೀಟ್ ಮಾಡಲಾಗಿದೆ.


from India & World News in Kannada | VK Polls https://ift.tt/3gj5UaY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...