ಕೊರೊನಾ ಸೋಂಕಿತರಿಗೆ ಪೌಷ್ಟಿಕ ಆಹಾರ ವಿತರಣೆಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯಾದ್ಯಂತ ಜಿಲ್ಲಾ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಕೋವಿಡ್‌ ಕೇರ್‌ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲು ರಾಜ್ಯ ಸರಕಾರ ಮುಂದಾಗಿದೆ. ಪ್ರತಿ ದಿವಸ ಆಹಾರ ವ್ಯವಸ್ಥೆಯನ್ನು ರೋಗಿಗಳಿಗೆ, ವೈದ್ಯರಿಗೆ, ಅಧಿಕಾರಿಗಳಿಗೆ ಮತ್ತು ಇತರರಿಗೆ ಒದಗಿಸಬೇಕು. ಬೆಳಗಿನ ಉಪಹಾರವನ್ನು 7 ಗಂಟೆಗೆ, ಮಧ್ಯಾಹ್ನದ ಊಟವನ್ನು 1 ಗಂಟೆಗೆ ಹಾಗೂ ರಾತ್ರಿ ಊಟವನ್ನು 7 ಗಂಟೆಗೆ ನಿಯಮಿತವಾಗಿ ನೀಡಬೇಕು. ಪ್ರತಿ ವ್ಯಕ್ತಿಯ ಆಹಾರ ವೆಚ್ಚ 250 ರೂ.ಗಳಿಗೆ ಮೀರದಂತೆ ಕ್ರಮ ವಹಿಸಬೇಕು. ಈ ಮೊತ್ತವನ್ನು ಎಆರ್‌ಎಸ್‌ ನಿಧಿ ಅಥವಾ ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ವಿಪತ್ತು ಪರಿಹಾರ ನಿಧಿಯಿಂದ ಪಡೆದುಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಆದೇಶದಲ್ಲಿ ತಿಳಿಸಿದ್ದಾರೆ.

ಸೋಮವಾರ ರವೆ ಇಡ್ಲಿ, ಕಲ್ಲಂಗಡಿ ಹಣ್ಣು ಹಾಗೂ ರಾಗಿ ಗಂಜಿ

ಮಂಗಳವಾರ ಪೊಂಗಲ್‌, ಪಪ್ಪಾಯಿ ಹಣ್ಣು ಮತ್ತು ಪಾಲಾಕ್‌ ಸೂಪ್‌

ಬುಧವಾರ ಸೆಟ್‌ ದೋಸೆ, ಕರಬೂಜ ಹಣ್ಣು ಹಾಗೂ ರವೆ ಗಂಜಿ

ಗುರುವಾರ ಅಕ್ಕಿ ಇಡ್ಲಿ, ಕಲ್ಲಂಗಡಿ ಹಣ್ಣು ಮತ್ತು ಕ್ಯಾರೆಟ್‌ ಸೂಪ್‌

ಶುಕ್ರವಾರ ಬಿಸಿಬೇಳೆ ಬಾತ್,‌ ಪಪ್ಪಾಯಿ ಹಣ್ಣು ಹಾಗೂ ರಾಗಿ ಗಂಜಿ

ಶನಿವಾರ ಚೌಚೌ ಬಾತ್,‌ ಕರಬೂಜ ಹಣ್ಣು ಮತ್ತು ಟೊಮೆಟೋ ಸೂಪ್‌

ಭಾನುವಾರ ಸೆಟ್‌ ದೋಸೆ ಪಪ್ಪಾಯಿ ಹಣ್ಣು ಮತ್ತು ರವೆ ಗಂಜಿ

ಪ್ರತಿ ದಿವಸ ಮಧ್ಯಾಹ್ನ 1 ಗಂಟೆಗೆ ರೊಟ್ಟಿ, ಎರಡು ಚಪಾತಿ, ಪಲ್ಯ, ಅನ್ನ, ಬೇಳೆ ಸಾರು, ಮೊಸರು ಮತ್ತು ಮೊಟ್ಟೆ ನೀಡಲಾಗುತ್ತದೆ.

ಸಂಜೆ 5.30ಕ್ಕೆ ಏಲಕ್ಕಿ ಬಾಳೆಹಣ್ಣು, ತಲಾ 3 ಮಾರಿ ಬಿಸ್ಕತ್ತು, ಅಥವಾ 2 ಪ್ರೋಟೀನ್‌ ಬಿಸ್ಕತ್‌ ಅಥವಾ 2 ಫ್ರೆಶ್‌ ಡೇಟ್ಸ್‌ ಹಾಗೂ ಮ್ಯಾಂಗೋ ಬಾರ್‌ (ವಿಟಮಿನ್‌-ಸಿ ಯುಕ್ತ).

ರಾತ್ರಿ 7 ಗಂಟೆಗೆ ರೊಟ್ಟಿ, 2 ಚಪಾತಿ, ಪಲ್ಯ, ಅನ್ನ, ಬೇಳೆಸಾರು, ಮೊಸರು ಹಾಗೂ ರಾತ್ರಿ 9ಕ್ಕೆ ಪ್ಲೇವರ್ಡ್‌ ಮಿಲ್ಕ್.



from India & World News in Kannada | VK Polls https://ift.tt/38kB4vT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...