ಲಂಡನ್: ಕೊರೊನಾ ವೈರಸ್ ಹಾವಳಿಯ ಪರಿಣಾಮವಾಗಿ ಹೇರಲಾಗಿರುವ ಜಾಗತಿಕ ಲಾಕ್‌ಡೌನ್, ಮಾಧ್ಯಮ ಕ್ಷೇತ್ರದ ಕಾರ್ಯನಿರ್ವಹಣೆ ಮೇಲೂ ಪರಿಣಾಮ ಬೀರಿದೆ. ಗ್ರೌಂಡ್ ರಿಪೋರ್ಟರ್ಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಿಬ್ಬಂದಿ ಮನೆಯಿಂದಲೇ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗೆ ವರ್ಕ್ ಫ್ರಾಂ ಹೋಮ್‌ನಲ್ಲಿರುವ ಪತ್ರಕರ್ತರು ಜಾಗತಿಕವಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಸುದ್ದಿ ಬಿತ್ತರಿಸುವ ಒತ್ತಡಕ್ಕೆ ಸಿಲುಕಿರುವ ಮಾಧ್ಯಮ ಮಿತ್ರರು, ಕೆಲವೊಮ್ಮೆ ಮನೆಯಿಂದಲೇ ಲೈವ್ ನೀಡುವ ಮೂಲಕ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಕುಟುಂಬಸ್ಥರ ತರಲೆ ವರ್ತನೆಗಳು ಪತ್ರಕರ್ತರನ್ನು ಪೇಚಿಗೆ ಸಿಲುಕಿಸುತ್ತಿವೆ. ಇತ್ತಿಚಿಗೆ ವರದಿಗಾರ್ತಿಯೋರ್ವಳು ಲೈವ್‌ನಲ್ಲಿದ್ದಾಗ, ಆಕೆಯ ತಂದೆ ಮನೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದರಂತೆ ವರದಿಗಾರನೋರ್ವ ಪ್ಯಾಂಟ್ ಧರಿಸದೇ ಲೈವ್ ನೀಡಿದ ಘಟನೆಯೂ ನಡೆದಿತ್ತು. ಇದೀಗ ಬಿಬಿಸಿ ವರದಿಗಾರ್ತಿಯೋರ್ವಳು ಮನೆಯಿಂದ ಲೈವ್ ಕೊಡುತ್ತಿದ್ದಾಗ ಆಕೆಯ ಮಗಳು ಲೈವ್‌ಗೆ ಅಡ್ಡಿಪಡಿಸಿದ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಪ್ರತಿಷ್ಠಿತ ಬಿಬಿಸಿ ಚಾನೆಲ್‌ನ ವರದಿಗಾರ್ತಿಯೋರ್ವಳು ಲಂಡನ್ ನಗರದ ಲಾಕ್‌ಡೌನ್ ಕುರಿತು ಮಾಹಿತಿ ನೀಡುತ್ತಿದ್ದಳು. ಈ ವೇಳೆ ಆಕೆಯ ಪುಟ್ಟ ಮಗಳು ಆಟವಾಡುತ್ತಾ ಲೈವ್‌ಗೆ ಅಡ್ಡಿಪಡಿಸುತ್ತಿದ್ದಳು. ಇದನ್ನು ಗಮನಿಸಿದ ಆ್ಯಂಕರ್ ಹಾಸ್ಯ ಚಟಾಕಿ ಹಾರಿಸುತ್ತಾ ಆಕೆಯ ಮಗಳನ್ನು ಲೈವ್‌ನಲ್ಲೇ ಮುದ್ದು ಮಾಡಿದ್ದಾನೆ. ಸದ್‌ಗಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, 95 ಸಾವಿರಕ್ಕೂ ಅಧಿಕ ಜನ ಈ ವಿಡಿಯೋ ನೋಡಿದ್ದಾರೆ. ಅಲ್ಲದೇ 27 ಸಾವಿರಕ್ಕೂ ಅಧಿಕ ರಿಟ್ವೀಟ್‌ಗಳು ಬಂದಿವೆ.
from India & World News in Kannada | VK Polls https://ift.tt/3dT6Ils