ತಮಿಳುನಾಡಿನಲ್ಲಿ ತಂದೆ-ಮಗ ಸಾವು ಪ್ರಕರಣ ; ನಾಲ್ವರು ಪೊಲೀಸರ ಬಂಧನ

ತೂತ್ತುಕುಡಿ: ಇತ್ತೀಚೆಗೆ ತಮಿಳುನಾಡಿನ ತೂತ್ತುಕುಡಿಯಲ್ಲಿ ಕಸ್ಟಡಿಯಲ್ಲಿರುವಾಗಲೇ ತಂದೆ-ಮಗ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳಾದ ಪೊಲೀಸ್‌ ಠಾಣೆಯ ಎಸ್‌ಐ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಲಾಕ್‌ಡೌನ್‌ ಜಾರಿ ಇದ್ದಾಗ ಅಂಗಡಿ ತೆರೆದಿದ್ದಕ್ಕೆ ಕಳೆದ ಜೂನ್‌ 19ಕ್ಕೆ ಜಯರಾಜ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಮೊಬೈಲ್‌ ಫೋನ್‌ ಮಳಿಗೆ ಹೊಂದಿದ್ದ ಜಯರಾಜ್ ಅವರ ಮಗ ಬೆನಿಕ್ಸ್ ಠಾಣೆಗೆ ತೆರಳಿ ತಂದೆಯ ಬಿಡುಗಡೆಗೆ ಮನವಿ ಮಾಡಿದ್ದರು. ಈ ವೇಳೆ ಅವರನ್ನೂ ಬಂಧಿಸಿದ್ದ ಪೊಲೀಸರು ಇಬ್ಬರಿಗೂ ದೈಹಿಕ ಚಿತ್ರಹಿಂಸೆ ನೀಡಿದ್ದರು ಎನ್ನಲಾಗಿದ್ದು, ಬಂಧಿತರಿಗೆ ಜಾಮೀನು ಸಿಗಬಾರದು ಅನ್ನುವ ಉದ್ದೇಶದಿಂದ ಹಣಕ್ಕಾಗಿ ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದರು. ಬಳಿಕ ನ್ಯಾಯಾಂಗ ಬಂಧನಕ್ಕೆ ಅವರನ್ನು ಒಪ್ಪಿಸಿ ಕೋವಿಲಪಟ್ಟಿ ಉಪಕಾರಾಗೃಹದಲ್ಲಿದ್ದಾಗಲೇ ತೀವ್ರವಾಗಿ ಅಸ್ವಸ್ಥಗೊಂದು ತಂದೆ ಮಗ ಸಾವನ್ನಪ್ಪಿದ್ದರು. ಈ ಘಟನೆ ತಮಿಳುನಾಡಿನಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದು, ಪೊಲೀಸರೇ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಜನರು ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರತಿಭಟನೆ ಕೂಡ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನಟ ರಜನಿಕಾಂತ್ ಕೂಡ ಟ್ವೀಟ್ ಮಾಡಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಟುವಾಗಿ ಆಗ್ರಹಿಸಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕೂಲಂಕುಶ ತನಿಖೆಗೂ ಆದೇಶಿಸಿತ್ತು. ಈ ಸಂಬಂಧ ಬುಧವಾರ ರಾತ್ರಿ ಪ್ರಕರಣದ ಆರೋಪಿಗಳಾದ ಸತ್ತಾನ್‌ಕುಲಂ ಠಾಣೆಯ ಎಸ್‌ಐ ರಘು ಗಣೇಶ್, ಎಸ್‌ಐ ಬಾಲಕೃಷ್ಣನ್ ಮತ್ತು ಇಬ್ಬರು ಕಾನ್ಸ್‌ಟೇಬಲ್‌ಗಳಾದ ಮುತ್ತುರಾಜ್ ಮತ್ತು ಮುರುಗನ್‌ನನ್ನು ಸಿಐಡಿ ಅಧಿಕಾರಿಗಳು ಕೊಲೆ ಪ್ರಕರಣದಡಿ ಬಂಧಿಸಿದ್ದಾರೆ. ಆರೋಪಿ ಪೊಲೀಸರನ್ನು ಬಂಧಿಸಲಾಗಿದೆ ಎಂದು ತಿಳಿಯುತ್ತಿದ್ದಂತೆ ಸತ್ತಾನ್‌ಕುಲಂನ ನಿವಾಸಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಅವರು ಹರ್ಷವ್ಯಕ್ತಪಡಿಸೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.


from India & World News in Kannada | VK Polls https://ift.tt/2BY6MDf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...