ಸುಮದ್ರದೊಳಗಿಂದ ಎದ್ದ ವಿಸ್ಮಯಕಾರಿ ನೀರಸುಳಿ; ಸುಂಟರಗಾಳಿಗಿಂತಲೂ ಭೀಕರ..! ಏನಿದರ ಮರ್ಮ?

ಆಂಧ್ರಪ್ರದೇಶ: ಈ ಭೂಮಂಡಲವೇ ಒಂದು ವಿಸ್ಮಯಗಳ ಆಗರ. ಪ್ರಕೃತಿ ತನ್ನ ಒಡಲಲ್ಲಿ ಅದ್ಯಾವ ಕೌತುಕಗಳನ್ನು ಹಿಡಿದಿಟ್ಟುಕೊಂಡಿದೆ ಅನ್ನೋದನ್ನು ಊಹಿಸೋಕೆ ಕೂಡ ಸಾಧ್ಯವಿಲ್ಲ. ಸಂಶೋಧಕರು ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದರೂ ಕೂಡ ಅದೆಷ್ಟೋ ಲೆಕ್ಕವಿಲ್ಲದಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳೋಕೆ ಅವರಿಗೆ ಇನ್ನೂ ಸಾಧ್ಯವಾಗಿಲ್ಲ. ಒಂದೊಂದು ಬಾರಿ ಒಂದೊಂದು ರೀತಿಯ ಹೊಸತನಗಳನ್ನು ಮನುಷ್ಯರಿಗೆ ತೋರಿಸೋ ಪ್ರಕೃತಿ ಈಗ ಮತ್ತೊಂದು ಅಪರೂಪದ ವಿಸ್ಮಯವನ್ನು ತೋರಿಸಿದೆ. ದಿಢೀರನೇ ಬೀಸೋ ಗಾಳಿಯ ರಭಸಕ್ಕೆ ಸುಳಿ ಏಳೋದನ್ನು ನೀವು ನೋಡಿರಬಹುದು. ಆ ವೇಳೆ ಸುಂಯ್ಯನೆ ಬೀಸೋ ಗಾಳಿ ತನ್ನ ಮುಷ್ಟಿಯೊಳಗೆ ಸಿಗೋದನ್ನೆಲ್ಲಾ ಫ್ಯಾನ್‌ ತಿರುಗಿದಂತೆ ತಿರುಗಿಸಿಬಿಡುತ್ತದೆ. ಧೂಳು ಕಸಕಡ್ಡಿಯನ್ನು ತನ್ನ ತೆಕ್ಕೆಯೊಳಗೆ ಸಿಲುಕಿಸಿ ಪಟಕ್ಕನೆ ರುಬ್ಬಿದರೆ ಕೆಲವೊಮ್ಮೆ ಹೆಚ್ಚು ಗಾತ್ರದ ವಸ್ತುಗಳನ್ನೂ ಸ್ಥಾನಪಲ್ಲಟ ಮಾಡಿಸುತ್ತದೆ. ಇಂತಹ ಸನ್ನಿವೇಶಗಳು ಸಾಮಾನ್ಯವಾಗಿ ಆಗಾಗ ನಡೆಯುತ್ತಿರುತ್ತದೆ. ಬಹುತೇಕರು ಇಂತಹುದನ್ನು ನೋಡಿರುವ ಸಾಧ್ಯತೆಯೂ ಇರುತ್ತದೆ. ಆದರೆ ಸುಂಟರಗಾಳಿ ಏಳೋ ಹಾಗೆಯೇ ನೀರಿನಲ್ಲೂ ಇದೇ ತರಹದ ವಿಸ್ಮಯಕಾರಿ ಸುಳಿ ಏಳುತ್ತದೆ ಅನ್ನೋದನ್ನು ನಂಬುತ್ತೀರಾ?. ಇಲ್ಲವೆಂದಾದರೆ ನಂಬಲೇಬೇಕು. ಆದರೆ ನೀರಿನಲ್ಲಿ ಏಳೋ ಸುಳಿಯನ್ನು ನೋಡಿರುವವರು ತುಂಬಾನೇ ವಿರಳ. ಇಂತಹ ಅಪರೂಪದ ಘಟನೆಗೆ ಆಂಧ್ರಪ್ರದೇಶದ ಊರೊಂದು ಸಾಕ್ಷಿಯಾಗಿದೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಭೈರವಪಲೆಂ ಊರಿನಲ್ಲಿರೋ ಸಮುದ್ರದಲ್ಲಿ ಸುಂಟರಗಾಳಿಯ ತರಹದೇ ನೀರಸುಳಿ ಎದ್ದಿದೆ. ತೀರದಿಂದ ಸುಮಾರು 40 ನಾಟಿಕಲ್‌ ಮೈಲು ದೂರದಲ್ಲಿ ಇಂತಹ ಅಪರೂಪದ ಸನ್ನಿವೇಶ ನಡೆದಿದ್ದು, ಇದನ್ನು ಮೀನುಗಾರರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ನೋಡು ನೋಡುತ್ತಿದ್ದಂತೆ ಸಮುದ್ರದಾಳದಿಂದ ಏಳೋ ಗಜಗಾತ್ರದ ನೀರಿನ ರೂಪವೊಂದು ಆಕಾಶದೆತ್ತರಕ್ಕೆ ಚಿಮ್ಮುತ್ತದೆ. ಕಡಲ ಮಧ್ಯದಲ್ಲಿ ಏಳೋ ನೀರಿನ ಬೃಹತ್‌ ರೂಪವೊಂದು ಆಕಾಶವನ್ನೇ ತನ್ನ ಕಬಂಧಬಾಹುವೊಳಗೆ ಎಳೆದುಬಿಡುತ್ತೇನೋ ಅನ್ನುವಂತೆ ಭಾಸವಾಗುತ್ತೆ. ಒಂದು ಕ್ಷಣ ಈ ದೃಶ್ಯವನ್ನು ನೋಡುತ್ತಿದ್ದ ಮೀನುಗಾರರು ಕೂಡ ಬೆರಗಾಗಿ ಹೋಗುತ್ತಾರೆ. ಸದ್ಯ ಮೀನುಗಾರರು ಚಿತ್ರಿಸಿರೋ ಈ ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ. ಆದ್ರೆ ನಾವು ಗಮನಸಿಬೇಕಾದುದು, ಆಂಧ್ರ ಪ್ರದೇಶದ ಕಡಲ ನಗರಿ ಕಾರ್ಖಾನೆಗಳಿಗೆ ಹೆಸರುವಾಸಿ. ಮೀನುಗಾರರು ಚಿತ್ರಿಸಿರೋ ಈ ದೃಶ್ಯ ನಿಜಕ್ಕೂ ಕಡಲ ಆಳದಿಂದಲೇ ಎದ್ದಿರೋ ನೀರಸುಳಿಯೋ ಅನ್ನೋದಕ್ಕೆ ಇನ್ನೂ ಪುರಾವೆ ದೊರೆತಿಲ್ಲ. ಅಥವಾ ಯಾವುದಾದರೂ ತೈಲ ಕಂಪನಿಯ ಬೃಹತ್ ಪೈಪ್ ಒಡೆದು ಹೋಗಿ ಈ ಘಟನೆ ನಡೆದಿದೆಯೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಈ ವಿಡಿಯೋದ ಹಿಂದಿರೋ ಸತ್ಯಾಸತ್ಯತೆಯನ್ನು ಆಂಧ್ರ ಪ್ರದೇಶದ ಸರ್ಕಾರ ತಿಳಿಸಿದ ನಂತರವಷ್ಟೇ ನಿಜಾಂಶ ತಿಳಿದು ಬರಬೇಕಿದೆ.


from India & World News in Kannada | VK Polls https://ift.tt/3dSZJIY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...