ಬೆಂಗಳೂರು:ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ವಿಧಿಸಿದ್ದರೂ ನಿಯಮ ಉಲ್ಲಂಘಿಘಿಸಿ ಹೊರಗೆ ಓಡಾಡಿದ ಮೂವರ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಬಿಬಿಎಂಪಿ ಎಚ್‌ಎಸ್‌ಆರ್‌ಉಪ ವಿಭಾಗದ ವ್ಯಾಪ್ತಿಗೆ ಬರುವ ಗಾರ್ವೇಬಾವಿ ಪಾಳ್ಯ ಶಂಕರನಾರಾಯಣ ರೆಸಿಡೆನ್ಸಿಯಲ್ಲಿವಾಸವಿದ್ದ ಎಸ್.ಎಂ ಕೃಷ್ಣ ಎಂಬುವರಿಗೆ ಜೂ.25ರಿಂದ ಜು.2ರವರೆಗೆ ಗೃಹ ಕ್ವಾರಂಟೈನ್ ವಿಧಿಸಲಾಗಿತ್ತು. ಆದರೆ, ನಿಯಮ ಉಲ್ಲಂಘಿಘಿಸಿ ಈ ವ್ಯಕ್ತಿ ಹೊರಗೆ ಓಡಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು ವಾಟ್ಸ್‌ಆ್ಯಪ್ ಮೂಲಕ ದೂರು ನೀಡಿದ್ದರು. ಹೀಗಾಗಿ, ಪರಿಶೀಲನೆ ನಡೆಸಲು ಬಿಬಿಎಂಪಿ ಅಧಿಕಾರಿ ಕೃಷ್ಣ ಅವರ ಮನೆಗೆ ತೆರಳಿದಾಗ ಅವರು ಮನೆಯಲ್ಲಿಇರಲಿಲ್ಲ. ಈ ಸಂಬಂಧ ಬೇಗೂರು ಠಾಣೆಗೆ ತೆರಳಿ ದೂರು ನೀಡಿದ್ದರು. ಅದೇ ರೀತಿ ಗೃಹ ಕ್ವಾರಂಟೈನ್ ನಿಯಮ ಉಲ್ಲಂಘಿಘಿಸಿದ ಹೊಸಪಾಳ್ಯದ ನಿವಾಸಿ ಚಕ್ರಧರ ಮತ್ತು ಕೂಡ್ಲುಗೇಟ್ ನೋವೆಲ್ ಪಾರ್ಕ್ ನಿವಾಸಿ ಗೌತಮ್ ವಿರುದ್ಧ ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಹೋಂ ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದೆ. ಮಾಸ್ಕ್ ಧರಿಸದೆ ಹೊರಗಡೆ ಬಂದರೆ ಅಂತವರ ವಿರುದ್ಧವೂ ದೂರು ದಾಖಲಿಸಿಕೊಳ್ಳುತ್ತಿದ್ದಾರೆ ಪೊಲೀಸರು.
from India & World News in Kannada | VK Polls https://ift.tt/2NQLPMU