ಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆ ; ಶಿವರಾಜ್ ಸಿಂಗ್ ಟೀಂ ಸೇರಿದ 28 ಮಂದಿ ಶಾಸಕರು

ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಸರ್ಕಾರ 28 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಂಪುಟವನ್ನು ವಿಸ್ತರಿಸಿಕೊಂಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ನೂತನ ಇಪ್ಪತ್ತೆಂಟು ಶಾಸಕರನ್ನು ತನ್ನ ಸಂಪುಟಕ್ಕೆ ಸೇರಿಸಿಕೊಂಡಿದ್ದು, ಆ ಪೈಕಿ ಕಾಂಗ್ರೆಸ್‌ನಿಂದ ಬಂಡಾಯವೆದ್ದವರಲ್ಲಿ ಪ್ರಮುಖರಾಗಿದ್ದ ಯಶೋಧರಾ ರಾಜೇ ಸಿಂಧ್ಯಾ ಮತ್ತು ಗೋಪಾಲ್ ಭಾರ್ಗವ ಪ್ರಮುಖರಾಗಿದ್ದಾರೆ. ಈ ಹಿಂದೆ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿತ್ತು. ಆದರೆ ಬಿಜೆಪಿ ಆಪರೇಷನ್ ಕಮಲ ಮಾಡುವ ಮೂಲಕ ಕಾಂಗ್ರೆಸ್‌ನ 22 ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡಿತ್ತು. ಕಳೆದ ಮಾರ್ಚ್‌ನಲ್ಲಿ ಇಪ್ಪತ್ತೆರಡು ಕಾಂಗ್ರೆಸ್‌ ಶಾಸಕರು ಪಕ್ಷ ತೊರೆಯುತ್ತಿದ್ದಂತೆ ಕಮಲ್‌ನಾಥ್ ಸರ್ಕಾರ ಪತನಗೊಂಡಿತ್ತು. ಕಳೆದ ಮಾರ್ಚ್‌ 23 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಶಿವರಾಜ್ ಸಿಂಗ್ ಚೌಹಾಣ್, ಏಪ್ರಿಲ್ 21ಕ್ಕೆ ಐವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಆ ವೇಳೆ ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಆಪ್ತರಾಗಿದ್ದ ತುಳಸಿ ಸಿಲಾವತ್ ಮತ್ತು ಗೋವಿಂದ್ ಸಿಂಗ್ ರಜಪೂತ್ ಸಂಪುಟಕ್ಕೆ ಸೇರಿದ್ದರು. ಇಂದು ಕೂಡ ಹೊಸದಾಗಿ ಸಂಪುಟ ಸೇರಿದವರ ಪೈಕಿ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಆಪ್ತರಾಗಿರುವ ಹನ್ನೆರಡು ಶಾಸಕರು ಇದ್ದಾರೆ. ನೂತನವಾಗಿ ಸಂಪುಟ ಸೇರಿದ ಸಚಿವರಿಗೆ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಪ್ರಮಾಣ ವಚನ ಬೋಧಿಸಿದ್ದಾರೆ. ನೂತನ ಸಚಿವರ ಪೈಕಿ ಇಪ್ಪತ್ತು ಮಂದಿ ಸಂಪುಟ ದರ್ಜೆಯ ಸಚಿವರಾದರೆ, ಎಂಟು ಮಂದಿ ರಾಜ್ಯ ಸಚಿವರಾಗಿದ್ದಾರೆ.


from India & World News in Kannada | VK Polls https://ift.tt/38jQWPn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...