ಹಾಂಕಾಂಗ್: ಚೀನಾದ ಕಿರಿಕ್ ಭಾರತದೊಂದಿಗೆ ಮಾತ್ರವಲ್ಲ ಅನ್ನೋದು ಎಲ್ಲರಿಗೂ ಗೊತ್ತೆ ಇದೆ. ಇದೇ ಕಾರಣಕ್ಕೆ ಭಾರತ ನೀಡಿದ ಡಿಜಿಟಲ್ ಸ್ಟ್ರೈಕ್‌ಗೆ ಅನೇಕ ಪ್ರಬಲ ದೇಶಗಳು ಭಾರತಕ್ಕೆ ಬೆಂಬಲ ಸೂಚಿಸಿರುವುದು. ಮನಸಲ್ಲೇ ಚೀನಾಗೆ ಹಂಗೇ ಆಗ್ಬೇಕು ಅಂದುಕೊಳ್ಳುವ ದೇಶವು ಅನೇಕ ಇದೆ. ಇದೀಗ ಹಾಕಾಂಗ್ ವಿಚಾರವಾಗಿ ಚೀನಾ ಬ್ರಿಟನ್‌ನೊಂದಿಗೆ ಮುಸುಕಿನ ಗುದ್ದಾಟ ನಡೆಸುತ್ತಿದೆ. ಚೀನಾಗೆ ಹಾಂಕಾಂಗನ್ನ ಕೊಟ್ಟ ಬ್ರಿಟನ್ ವಿರುದ್ಧವೇ ಡ್ರ್ಯಾಗನ್ ದೇಶ ಇದೀಗ ತಿರುಗಿ ಬಿದ್ದಿದೆ. ಅಲ್ಲದೇ ಬೇರೆ ದೇಶಗಳು ಕೂಡ ಹಾಕಾಂಗ್‌ನಲ್ಲಿ ಚೀನಾ ನಡೆಸಿರುವ ನರಮೇಧದ ವಿರುದ್ಧ ತಿರುಗಿ ಬಿದ್ದಿವೆ. ಹಾಗಾದರೆ ಹಾಂಕಾಂಗ್‌ನಲ್ಲಿ ನಡೆಯುತ್ತಿರುವುದೇನು? ಚೀನಾ ಹಾಗೂ ಬ್ರಿಟನ್ ನಡುವೆ ನಡೆಯುತ್ತಿರುವ ಶೀತಲ ಸಮರಕ್ಕೆ ಕಾರಣವೇನು? ಇದರ ಸಂಪೂರ್ಣ ಚಿತ್ರಣ ಇಲ್ಲಿದೆ.ಬ್ರಿಟಿಷರ ಆಳ್ವಿಕೆಯಲ್ಲಿದ್ದ ಹಾಂಕಾಂಗ್‌ಗೆ 1997ರ ಜು.1ರಂದು ವಿವಿಧ ಒಪ್ಪಂದಗಳ ಜೊತೆಗೆ ಹಾಂಕಾಂಗಿಗಳ ಹಕ್ಕುಗಳ ರಕ್ಷಣೆ ಮೂಲಕ ಚೀನಾಗೆ ಹಸ್ತಾಂತರವಾಯಿತು. ಆರಂಭದಲ್ಲಿ ಹಾಂಕಾಂಗ್‌ನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಚೀನಾ ನಂತರ ಊಸರವಳ್ಳಿಯಂತೆ ಬಣ್ಣ ಬದಲಿಸೋಕೆ ಆರಂಭಿಸಿತು. ಆ ಪುಟ್ಟ ದೇಶವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯತ್ನ ನಡೆಸುತ್ತಲೇ ಬಂತು. ಯಾವಾಗ ಚೀನಾದ ದರ್ಪಕ್ಕೆ ಒಳಪಡಲು ಹಾಂಕಾಂಗ್ ಜನರಿಗೆ ಇಷ್ಟವಿಲ್ಲದೆ ಆಯಿತೋ, ಆ ಸಂದರ್ಭದಿಂದ ಪ್ರತಿಭಟನೆ ನಡೆಸಲು ಆರಂಭಿಸಿದರು. ಇದು ಚೀನಾಗೆ ಇನ್ನಷ್ಟು ಕೆರಳಿಸಿತು. ಅದರು ಪಟ್ಟು ಬಿಡದ ಚೀನಾ ಹೇಗಾದರೂ ಅಲ್ಲಿ ತನ್ನ ಅಧಿಪತ್ಯ ಸ್ಥಾಪಿಸಲು ಎಲ್ಲಾ ರೀತಿಯ ಬಲ ಪ್ರಯೋಗಿಸುತ್ತ ಬಂದಿದೆ. ಇದೀಗ ಹಾಂಕಾಂಗ್ ಪ್ರಾಂತ್ಯ ಚೀನಾದ ಸುಪರ್ದಿಗೆ ಒಪ್ಪಿಸಿ 23 ವರ್ಷಗಳಾಗುತ್ತ ಬಂದಿರುವ ಹಿನ್ನೆಲೆ ಅಲ್ಲಿ ವಾರ್ಷಿಕೋತ್ಸವ ನಡೆಸುತ್ತಿದೆ. ಇದೆ ವೇಳೆಗೆ ಚೀನಾ ತನ್ನ ವಿವಾದಾತ್ಮಕ 'ರಾಷ್ಟ್ರೀಯ ಭದ್ರತೆ ಕಾನೂನು' ಜಾರಿಗೆ ತಂದಿದೆ. ಇದು ಹಾಂಕಾಂಗ್ ಜನರ ಕೋಪಕ್ಕೆ ಕಾರಣವಾಗಿದೆ. ಇದನ್ನ ವಿರೋಧಿಸಿ ಹಾಂಕಾಂಗ್ ನಿವಾಸಿಗಳು ಬೀದಿಗಿಳಿದು ಭಾರೀ ಪ್ರತಿಭಟನೆ ನಡೆಸಿದ್ದಾರೆ. ವಾರ್ಷಿಕೋತ್ಸವದ ಸಂಭ್ರಮಾಚರಣೆ ಬದಲಿಗೆ ಎಲ್ಲೆಡೆ ಗಲಭೆ ಭುಗಿಲೆದ್ದಿದೆ. ಆದರೆ ತನ್ನ ಹಠ ಬಿಡದ ಚೀನಾ ಸರಕಾರ, ಹಾಂಕಾಂಗ್ ಪೊಲೀಸರ ಮೇಲೆ ಒತ್ತಡ ಹೇರಿ 200 ಪ್ರತಿಭಟನಾಕಾರರನ್ನು ಬಂಧಿಸಿದೆ. ಮಕ್ಕಳು, ಮಹಿಳೆಯರು ಸೇರಿ ಎಲ್ಲರ ಮೇಲೆ ಹಲ್ಲೆ ನಡೆಸುತ್ತಿದೆ. ಪ್ರತಿಭಟನಾ ಸ್ಥಳಗಳಲ್ಲಿ ಪೊಲೀಸರು ಜಲ ಫಿರಂಗಿ ಮತ್ತು ಅಶ್ರುವಾಯು ಸಿಡಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ.
ಚೀನಾ ಜಾರಿ ಮಾಡಿರುವ ಹೊಸ ಕಾನೂನು ಪ್ರಕಾರ ಹಾಂಕಾಂಗ್‌ನಲ್ಲಿ ಸ್ಥಾಪನೆಯಾಗುವ ರಾಷ್ಟ್ರೀಯ ಭದ್ರತಾ ಏಜೆನ್ಸಿ ಸ್ಥಳೀಯ ಆಡಳಿತದ ಸುಪರ್ದಿಗೆ ಒಳಪಡಲ್ಲ. ಇದು ನೇರವಾಗಿ ಚೀನಾದಿಂದಲೇ ಆಪರೇಟ್ ಆಗುತ್ತೆ. ಇದರ ಸಿಬ್ಬಂದಿ ಯಾವುದೇ ಕ್ಷಣದಲ್ಲಿ ಪ್ರತಿಭಟನಾಕಾರರು, ಉಗ್ರರು, ಬಂಡಾಯ ಏಳುವವರನ್ನು ಬಂಧಿಸುವ ಅಧಿಕಾರ ಹೊಂದಿದ್ದಾರೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಕೂಡ ವಿಧಿಸಬಹುದಾಗಿದೆ. ಇದರಿಂದಾಗಿ ಹಾಂಕಾಂಗ್ ಸಂಪೂರ್ಣವಾಗಿ ಚೀನಾದ ಹಿಡಿತಕ್ಕೆ ಬಂದಂತಾಗಲಿದೆ. ಹೀಗಾಗಿ ಇದನ್ನ ಹಾಂಕಾಂಗ್ ಜನರು ಬಹಿಷ್ಕರಿಸುತ್ತಿದ್ದಾರೆ. ಚೀನಾದ ದಬ್ಬಾಳಿಕೆ ವಿರುದ್ಧ ಯಾವಾಗಲೂ ಹಾಂಕಾಂಗ್ ಜನರು ಪ್ರತಿಭಟಿಸುತ್ತಲೇ ಇರುತ್ತಾರೆ. ಆದರೆ ಚೀನಾ ಈ ಕಾನೂನಿನ ಮೂಲಕ ಅವರನ್ನ ಕಟ್ಟಿ ಹಾಕುತ್ತೆ ಅನ್ನುವುದು ಅಲ್ಲಿನ ಜನರ ಭಾವನೆ. ಇನ್ನು ಈ ಕಾನೂನಿನಿಂದ ಮುಂದಿನ ದಿನಗಳಲ್ಲಿ ಇಲ್ಲಿ ಪ್ರತಿಭಟನೆ ಮಾಡದಂತೆಯೇ ತಡೆಯಲು ಚೀನಾ ಹೆಣೆದ ಬಲೆ ಅನ್ನುವುದು ರಾಜಕೀಯ ಪಂಡಿತರ ವಿಶ್ಲೇಷಣೆ. ಈ ಎಲ್ಲಾ ಕಾರಣಗಳಿಂದ ಸಾವಿರ ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಸ್ವತಂತ್ರ್ಯ ಹಾಂಕಾಂಗ್ ಎನ್ನುವ ಘೋಷ ಮೊಳಗಿಸುತ್ತಿದ್ದಾರೆ.
ಈ ಮೊದಲು ಬ್ರಿಟನ್ ಹಾಗೂ ಚೀನಾದ ನಡುವೆ ಉತ್ತಮ ಬಾಂಧವ್ಯ ಇತ್ತು. ಇದೀಗ ಇದು ಸಂಪೂರ್ಣವಾಗಿ ಹಳಸಿದೆ. ಅದಕ್ಕೆ ಕಾರಣ ಹಾಂಕಾಂಗ್ ಮೇಲೆ ಚೀನಾದ ದಬ್ಬಾಳಿಕೆ. 1997ರ ಜು.1ರಂದು ಬ್ರಿಟನ್ ಚೀನಾಗೆ ಹಾಂಕಾಂಗನ್ನ ಹಸ್ತಾಂತರಿಸುವಾಗ ಹಲವು ಷರತ್ತುಗಳನ್ನ ವಿಧಿಸಿತ್ತು. ಐವತ್ತು ವರ್ಷಗಳ ಕಾಲ ಹಾಂಕಾಂಗ್ ಜನರ ಸಾರ್ವಭೌಮತೆಯನ್ನ ಕಾಪಾಡುವ ಜವಾಬ್ದಾರಿಯು ಪ್ರಮುಖವಾಗಿತ್ತು. ಆದರೆ ಈಗ ಚೀನಾ ಹಾಂಕಾಂಗ್‌ನಲ್ಲಿ ದಂಗೆ ನಡೆಸುತ್ತಿದೆ. ಅಮಾಯಕ ಪ್ರತಿಭಟನಕಾರರನ್ನ ಕೊಲ್ಲುತ್ತಿದೆ. ಅಲ್ಲದೇ ಇನ್ನೂರಕ್ಕೂ ಹೆಚ್ಚು ಪ್ರತಿಭಟನಕಾರರನ್ನುಈಗಾಗಲೇ ಚೀನಾ ತನ್ನ ನೂತನ ಕಾನೂನ ಮೂಲಕ ಬಂಧಿಸಿದೆ. ಇದು ಬ್ರಿಟನನ್ನ ಕೆರಳಿಸಿದೆ. ಇದರಿಂದ ಕೋಪಗೊಂಡಿರುವ ಬ್ರಿಟನ್ ಮೂವತ್ತು ಲಕ್ಷಕ್ಕೂ ಅಧಿಕ ಹಾಂಕಾಂಗರಿಗೆ ತನ್ನ ದೇಶದಲ್ಲಿ ನೆಲೆ ನೀಡುವುದಾಗಿ ಹೇಳಿದೆ. ಇದು ಚೀನಾವನ್ನ ಕೆರಳಿಸಿದೆ. ಅಲ್ಲದೇ ಪ್ರತಿಭಟನಾಕಾರರ ಪೈಕಿ ಪೊಲೀಸ್ ಮೇಲೆ ಚಾಕುವಿನಿಂದ ಇರಿದ ವ್ಯಕ್ತಿ ಬ್ರಿಟನ್‌ಗೆ ತೆರಳುವಾಗ ಪೊಲೀಸರ ಬಲೆಗೆ ಬಿದ್ದಿದ್ದು ಬ್ರಿಟನ್ ಕುಮ್ಮಕ್ಕಿನಿಂದ ಈ ರೀತಿ ನಡೆಯುತ್ತಿದೆ ಅನ್ನುವ ಕೋಪವು ಚೀನಾಗೆ ಇದೆ. ಇದು ಉಭಯ ದೇಶಗಳ ನಡುವಿನ ಶೀತಲ ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಬ್ರಿಟನ್ ಮಾತ್ರವಲ್ಲದೇ ಅಮೆರಿಕಾ, ಆಸ್ಟ್ರೇಲಿಯಾ ಸೇರಿ ಹಲವು ದೇಶಗಳು ಡ್ರ್ಯಾಗನ್ ದೇಶದ ವಿರುದ್ಧ ತಿರುಗಿ ಬಿದ್ದಿದ್ದು, ಪ್ರತಿಭಟನಾಕಾರರ ಭಾವನೆ ಗೌರವಿಸುವಂತೆ ಜಿನ್‌ಪಿಂಗ್ ಸರಕಾರಕ್ಕೆ ಖಾರವಾಗಿಯೇ ಎಚ್ಚರಿಸಿದೆ.
from India & World News in Kannada | VK Polls https://ift.tt/38rLAl5