'ಹಣ ಡ್ರಾ ಮಾಡಲು ಎಟಿಎಂಗೆ ಬಂದ ಹಾವು'...! ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌

ಘಾಸಿಯಾಬಾದ್‌: ಕಳೆದ ಕೆಲವು ದಿನಗಳ ಹಿಂದೆ ದಿಲ್ಲಿಯಲ್ಲಿ ಮಂಗವೊಂದು ಎಟಿಎಂ ಹೊಡೆದ ನಂತರ, ಇದೀಗ ಮತ್ತೊಂದು ಪ್ರಾಣಿಯೊಂದು ಎಟಿಎಂ ಒಳಗಡೆ ನುಗ್ಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಉದ್ದದ ಹಾವೊಂದು ಐಸಿಐಸಿಐ ಬ್ಯಾಂಕ್‌ನ ಎಟಿಎಂ ಮಶೀನ್‌ಗೆ ಒಳಗಡೆ ಹೋಗಿರುವ ದೃಶ್ಯವನ್ನು ಮೊಬೈಲ್‌ ಮೂಲಕ ಚಿತ್ರೀಕರಣ ಮಾಡಲಾಗಿದೆ. ಕಣ್ಣು ನಿಬ್ಬೆರಗಾಗಿ ನೋಡುವ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಉತ್ತರ ಪ್ರದೇಶದ ಘಾಸಿಯಾಬಾದ್‌ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಕೆಐಓಎಸ್‌ಕೆಯಲ್ಲಿ ವಿಡಿಯೋ ತೆಗೆಯಲಾಗಿದೆ. ಹಾವು ಎಟಿಎಂ ಒಳಗಡೆ ಆಕಸ್ಮಿಕವಾಗಿ ನುಗ್ಗಿದೆ. ಇದನ್ನು ನೋಡಿದ ಸೆಕ್ಯೂರಿಟಿಯು ಎಟಿಎಂ ಬಾಗಿಲನ್ನು ಮುಚ್ಚಿದ್ದಾರೆ. ಇದರಿಂದ ಹಾವು ಹೊರಗಡೆ ಬರಲಾಗದೆ ಎಟಿಎಂ ಮಶೀನ್‌ ಒಳಗಡೆ ಪ್ರವೇಶ ಮಾಡಿತು. ಘಾಸಿಯಾಬಾದ್‌ ನಗರದ ಗೋವಿಂದಪುರಿಯಲ್ಲಿ ಈ ಘಟನೆ ನಡೆದಿದೆ. ಎಟಿಎಂ ಒಳಗಡೆ ಹಾವಿನ ಚಿತ್ರೀಕರಣದ ವಿಡಿಯೋ ಸೋಶಿಯಲ್‌ ಮೀಡಿಯಾ ಫೇಸ್‌ಬುಕ್‌, ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಶೇರ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ವಿಡಿಯೋವನ್ನು ನೀವು ಕೆಳಗಿನ ಟ್ವಿಟರ್ ಲಿಂಕ್‌ ಮೂಲಕ ನೋಡಬಹುದಾಗಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ನೂರಾರು ಕಾಮೆಂಟ್‌ಗಳು ಬಂದಿವೆ. "ಇದು ಭಯಾನಕ" ಎಂದು ಟ್ವಿಟರ್‌ ಬಳಕೆದಾರರೊಬ್ಬರು ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. "ಹಾವು ಹಣವನ್ನು ಡ್ರಾ ಮಾಡಲು ಬಂದಿದೆ, ಜನರು ಆ ಮುಗ್ಧ ಪ್ರಾಣಿಯನ್ನು ಗಾಬರಿಗೊಳಿಸಿದರು,"ಮತ್ತೊಬ್ಬರು ಈ ವಿಡಿಯೋಗೆ ಹಾಸ್ಯಭರಿತ ಶೀರ್ಷಿಕೆ ನೀಡಿದ್ದಾರೆ. ಹಾವು ಇರುವ ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೆಲ ಸಮಯದವರೆಗೂ ಕಾರ್ಯಾಚರಣೆ ನಡೆಸಿ ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಅರಣ್ಯ ಅಧಿಕಾರಿ ದೀಕ್ಷಾ ಭಂಡಾರಿ, ಈ ಹಾವು ವಿಷಕಾರಿಯಲ್ಲ ಎಂದು ಹೇಳಿದರು.


from India & World News in Kannada | VK Polls https://ift.tt/2xYAsOU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...