ಕಣ್ಣಿಗೆ ಕಾಣದ ಶತ್ರುವಿನ ಸಂಹಾರ ಶತಸಿದ್ಧ: ಪ್ರಧಾನಿ ಮೋದಿ ಭರವಸೆಯ ನುಡಿಗಳು!

ನವದೆಹಲಿ: ಮಾರಕ ಕೊರೊನಾ ವೈರಸ್ ವಿರುದ್ಧದ ದೇಶದ ಹೋರಾಟ ಮುಂದುವರೆಯಲಿದೆ ಎಂದು ಹೇಳಿರುವ , ಕಣ್ಣಿಗೆ ಕಾಣದ ಈ ಶತ್ರುವನ್ನು ನಾವು ಸಂಹಾರ ಮಾಡಿಯೇ ಸಿದ್ಧ ಎಂದು ಭರವಸೆ ನೀಡಿದ್ದಾರೆ. ಕರ್ನಾಟಕದ ರಾಜೀವ್ ಗಾಂದಿ ಆರೋಗ್ಯ ವಿವಿಯ ಬೆಳ್ಳಿ ಮಹೋತ್ಸವ ಆಚರಣೆ ಸಮಾರಂಭವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯಕೀಯ ಕ್ಷೇತ್ರದ ಕೊಡುಗೆಯನ್ನು ಸ್ಮರಿಸಿದರು. ಕಣ್ಣಿಗೆ ಕಾಣದ ಮಾರಕ ಜೀವಿಯೊಂದಿಗೆ ನಮ್ಮ ಕೊರೊನಾ ಧೀರರು ಹೋರಾಡುತ್ತಿದ್ದು, ಈ ಯುದ್ಧದಲ್ಲಿ ನಾವು ಜಯಗಳಿಸುವುದು ಶತಸಿದ್ಧ ಎಂದು ಮೋದಿ ಈ ವೇಳೆ ಭರವಸೆ ವ್ಯಕ್ತಪಡಿಸಿದರು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದೂ ಪ್ರಧಾನಿ ಹೇಳಿದರು. ಆಯುಷ್ಮಾನ್ ಭಾರತ್ ಯೋಜನೆ ಇಡೀ ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ಯೋಜನೆಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ 1 ಕೋಟಿಗೂ ಅಧಿಕ ಜನ ಈ ಯೋಜನೆಯ ಲಾಭ ಪಡೆದಿರುವುದು ಅತ್ಯಂತ ಸಂತಸದ ಸಂಗತಿ ಎಂದು ಪ್ರಧಾನಿ ಮೋದಿ ಹೇಳಿದರು. ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ 22 ಹೊಸ AIMS ಆಸ್ಪತ್ರೆಗಳನ್ನು ನಿರ್ಮಿಸಲಾಗಿದ್ದು, MBBSನಲ್ಲಿ ಒಟ್ಟು 30,000 ಸೀಟುಗಳನ್ನು ಹೆಚ್ಚಿಸಲಾಗಿದೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು. ಯಾವುದೇ ಕಾರಣಕ್ಕೂ ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಯುವ ದಾಳಿಗಳನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ ಎಂದು ಇದೇ ವೇಳೆ ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು. ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.


from India & World News in Kannada | VK Polls https://ift.tt/3dnZbLN

ಬೇಹುಗಾರಿಕೆ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಾಕ್ ಹೈಕಮಿಷನ್ ಅಧಿಕಾರಿಗಳು

ಹೊಸದಿಲ್ಲಿ: ಬೇಹುಗಾರಿಕೆ ನಡೆಸುತ್ತಿದ್ದ ಹೈಕಮಿಷನ್‌ನ ಇಬ್ಬರು ವೀಸಾ ಸಹಾಯಕ ಅಧಿಕಾರಿಗಳನ್ನು ದಿಲ್ಲಿ ಪೊಲೀಸ್‌ನ ವಿಶೇಷ ಪಡೆ ರೆಡ್ ಹ್ಯಾಂಡ್ ಆಗಿ ಸೆರೆ ಹಡಿದಿದೆ. ಬಂಧಿತರನ್ನು ಪಾಕ್ ಹೈಕಮಿಷನ್‌ನಲ್ಲಿ ವೀಸಾ ಸಹಾಯಕರಾಗಿ ಕೆಲಸ ಮಾಡುತ್ತಿರುವ ಐಎಸ್‌‌ಐ ಬೇಹುಗಾರರಾದ ಅಬಿದ್ ಹುಸೇನ್ ಹಾಗೂ ತಾಹಿರ್ ಖಾನ್ ಎಂದು ಗುರುತಿಸಲಾಗಿದೆ. ಇದೀಗ ಬಂಧಿತಸ್ಥರನ್ನು 'ಪರ್ಸನಾ ನಾನ್ ಗ್ರಾಟಾ' ಎಂದು ಘೋಷಿಸಿದ್ದು, 24 ತಾಸಿನೊಳಗೆ ದೇಶವನ್ನು ತೊರೆಯುವಂತೆ ಆದೇಶಿಸಿದೆ. ಪಾಕಿಸ್ತಾನ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಬೇಹುಗಾರರಾದ ಇವರು ರಾಜತಾಂತ್ರಿಕರ ವೇಷದಲ್ಲಿ ಗೂಡಾಚಾರ ಕೆಲಸಗಳನ್ನು ನಡೆಸುತ್ತಿದ್ದರು. ದಿಲ್ಲಿ ಪೊಲೀಸರು ಇವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದೆ. ಆರಂಭದಲ್ಲಿ ತಾವು ಭಾರತೀಯರು ಎಂದು ಹೇಳಿಕೊಂಡಿರುವ ಆರೋಪಿಗಳು, ನಕಲಿ ಆಧಾರ್ ಕಾರ್ಡ್‌ಗಳನ್ನು ತೋರಿಸಿದ್ದರು. ಬಳಿಕ ವಿಚಾರಣೆ ವೇಳೆ ಅಧಿಕಾರಿಗಳೆಂದು ಒಪ್ಪಿಕೊಂಡರು. ಪಾಕ್ ಹೈ ಕಮಿಷನ್ ಸದಸ್ಯರಾಗಿ ತಮ್ಮ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರಿಂದ ಭಾರತವು 'ಪರ್ಸನಾ ನಾನ್ ಗ್ರಾಟಾ' ಎಂದು ಘೋಷಿಸಿದ್ದು, ದೇಶ ಬಿಟ್ಟು ತೆರಳುವಂತೆ ಆದೇಶಿಸಿದೆ. ಪಾಕಿಸ್ತಾನ ಹೈ ಕಮಿಷನ್ ಭಾರತ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಇದರಿಂದ ಸ್ಪಷ್ಟವಾಗಿದೆ. ಇದರ ವಿರುದ್ದ ಭಾರತ ರಾಜತಾತ್ರಿಕವಾಗಿ ಪಾಕ್ ವಿರುದ್ಧ ತೀವ್ರ ಪ್ರತಿಭಟನೆ ಮಾಡುವ ಸಾಧ್ಯತೆಯಿದೆ.


from India & World News in Kannada | VK Polls https://ift.tt/2Mh5BR1

ರಣಾಂಗಣವಾದ ವೈಟ್‌ಹೌಸ್: ಅಶ್ರುವಾಯು ಪ್ರಯೋಗಿಸಿದ ಪೊಲೀಸರು!

ಪೊಲೀಸ್ ಅಧಿಕಾರಿಯ ದರ್ಪದ ವರ್ತೆನೆಯಿಂದ ಸಂಭವಿಸಿರುವ ಕಪ್ಪು ವರ್ಣೀಯನ ಸಾವು, ಅಮೆರಿಕವನ್ನು ಅಕ್ಷರಶ: ನಲುಗಿಸಿದೆ. ಅಮೆರಿಕದಾದ್ಯಂತ ಆಕ್ರೋಶ ಕಟ್ಟೆ ಒಡೆದಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಭಾರೀ ಪ್ರಮಾಣದಲ್ಲಿ ಘರ್ಷಣೆ ಸಂಭವಿಸಿವೆ. ಅಧ್ಯಕ್ಷರ ಅಧಿಕೃತ ಕಚೇರಿ ಶ್ವೇತಭವನದ ಬಳಿಯೂ ಹಿಂಸಾತ್ಮಕ ಪ್ರತಿಭಟನೆ ನಡೆದಿರುವುದು ವಿಷಾದನೀಯ. ವೈಟ್‌ಹೌಸ್ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿರುವ ಪ್ರತಿಭಟನಾಕಾರರು, ಡೊನಾಲ್ಡ್ ಟ್ರಂಪ್ ವಿರುದ್ಧ ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ವೇಳೆ ಸಂಭವಿಸಿದ ಘರ್ಷಣೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದಾರೆ. ಶ್ವೇತಭವನದ ಮುಂದೆ ಪ್ರತಿಭಟನೆ ಅದೆಷ್ಟು ಜೋರಾಗಿದೆ ಎಂದರೆ ಮುಂಜಾಗ್ರತಾ ಕ್ರಮವಾಗಿ ಟ್ರಂಪ್ ಅವರನ್ನು ಭೂಗತ ಬಂಕರ್‌ನಲ್ಲಿ ಮುಚ್ಚಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕುರಿತು ನೋಡುವುದಾದರೆ...

ಕಪ್ಪು ವರ್ಣೀಯನ ಸಾವು ಅರಾಜಕತೆಯನ್ನೇ ಸೃಷ್ಟಿಸಿದೆ. ಜಾರ್ಜ್ ಫ್ಲಾಯ್ಡ್ ಸಾವು ಖಂಡಿಸಿ ಬೀದಿಗಿಳಿದಿರುವ ಲಕ್ಷಾಂತರ ಅಮೆರಿಕನ್ನರು, ಪೊಲೀಸರೊಂದಿಗೆ ನೇರ ಸಂಘರ್ಷಕ್ಕಿಳಿದಿದ್ದಾರೆ. ಇದುವರೆಗೂ ಮಿನ್ನಿಯಾಪೊಲೀಸ್‌ಗಷ್ಟೇ ಸೀಮಿತವಾಗಿದ್ದ ಪ್ರತಿಭಟನೆ ಇದೀಗ 15 ಕ್ಕೂ ಹೆಚ್ಚಿನ ರಾಜ್ಯಗಳಿಗೆ ವ್ಯಾಪಿಸಿದೆ.

ಲಾಸ್ ಎಂಜಲೀಸ್, ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಜನ ಹಿಂಸಾತ್ಮಕ ಪ್ರತಿಭಟನೆಯಲ್ಲಿ ನಿರತವಾಗಿದ್ದಾರೆ. ಕರ್ಫ್ಯೂ ಹೇರಲಾಗಿದ್ದರೂ, ಜನ ಬೀದಿಗಿಳಿದು ಬಂದಿರುವುದು ಪೊಲೀಸರನ್ನು ಹೈರಾಣಾಗಿಸಿದೆ.

ಜನಾಂಗೀಯ ದ್ವೇಷದಲ್ಲಿ ಹತ್ಯೆ ಆರೋಪ, ಅಮೆರಿಕಾದಲ್ಲಿ ಭುಗಿಲೆದ್ದ ಆಕ್ರೋಶ

ಶ್ವೇತಭವನದ ಮುಂದೆಯೇ ನಡೆದಿರುವ ಪ್ರತಿಭಟನೆ ಸಮಸ್ಯೆಯ ಗಂಭೀರತೆಯನ್ನು ಹೇಳುತ್ತಿದ್ದು, ಪ್ತತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ ಘಟನೆಯೂ ನಡೆದಿದೆ. ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಪ್ರತಿಭಟನೆಯ ಕಾವನ್ನು ಡೊನಾಲ್ಡ್ ಟ್ರಂಪ್ ಸರ್ಕಾರ ಈ ಕೂಡಲೇ ತಗ್ಗಿಸಬೇಕಿದೆ.

ಕಪ್ಪು ವರ್ಣೀಯನ ಸಾವು ಹಚ್ಚಿರುವ ಕಿಚ್ಚಿನ ಪರಿಣಾಮವಾಗಿ ಅಮೆರಿಕದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನೇರ ಸಂಘರ್ಷ ಏರ್ಪಟ್ಟಿದೆ. ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣನಾದ ಪೊಲೀಸ್ ಅಧಿಕಾರಿ ಡೆರಿಕ್ ಚೊವಿನ್‌ನನ್ನು ಬಂಧಿಸಲಾಗಿದ್ದರೂ, ಪ್ರತಿಭಟನಾಕಾರರ ಕೋಪ ತಣ್ಣಗಾಗಿಲ್ಲ.

ಅಮೆರಿಕದಲ್ಲಿ ಭುಗಿಲೆದ್ದ ಜನಾಂಗೀಯ ಪ್ರತಿಭಟನೆ: ಜಾರ್ಜ್ ಫ್ಲಾಯ್ಡ್ ಸಾವು ದುರಂತ ಎಂದ ಟ್ರಂಪ್!

ಪ್ರಮುಖ ನಗರಗಳಲ್ಲಿ ಪೊಲೀಸರೊಂದಿಗೆ ನೇರವಾಗಿ ಸಂಘರ್ಷಕ್ಕೆ ಇಳಿದಿರುವ ಪ್ರತಿಭಟನಾಕಾರರು, ಕಪ್ಪು ವರ್ಣೀಯರ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಪೊಲೀಸರು ಕೂಡ ಪ್ರತಿಭಟನೆಯನ್ನು ಹತ್ತಿಕ್ಕಲು ಹರಸಾಹಸ ಪಡುತ್ತಿದ್ದು, ಹಿಂಸೆಯಲ್ಲಿ ನಿರತರಾಗಿರುವ ಮೇಲೆ ಬಲಪ್ರಯೋಗ ಮಾಡುತ್ತಿದ್ದಾರೆ.

ಇನ್ನು ಅಮೆರಿಕದ ಅಧ್ಯಕ್ಷರ ಅಧಿಕೃತ ಕಚೇರಿ ಶ್ವೇತಭವನದ ಮುಂದೆಯೂ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮುಂಜಾಗ್ರತಾ ಕ್ರಮದ ಭಾಗವಾಗಿ ಶ್ವೇತಭವನದಲ್ಲಿರುವ ಭೂಗತ ಬಂಕರ್‌ನಲ್ಲಿ ಸುರಕ್ಷಿತವಾಗಿ ಇಡಲಾಗಿತ್ತು.

ಶ್ವೇತಭವನದ ಹೊರಗೆ ಪ್ರತಿಭಟನೆ ಜೋರಾಗುತ್ತಿದ್ದಂತೇ ಟ್ರಂಪ್ ಅವರನ್ನು ಭೂಗತ ಬಂಕರ್‌ಗೆ ಕರೆದೊಯ್ದ ಭದ್ರತಾ ಸಿಬ್ಬಂದಿ, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಬಂಕರ್‌ನಲ್ಲಿಯೇ ಸುರಕ್ಷಿತವಾಗಿ ಇರಿಸಿದ್ದರು.

ವೈಟ್‌ಹೌಸ್‌ ಮುಂದೆ ಭಾರೀ ಪ್ರತಿಭಟನೆ: ಗುಪ್ತ ಬಂಕರ್‌ನಲ್ಲಿ ಟ್ರಂಪ್‌ರನ್ನು ಮುಚ್ಚಿಟ್ಟ ಸಿಬ್ಬಂದಿ!

ವಿಪತ್ತಿನ ಪರಿಸ್ಥಿತಿಯಲ್ಲಿ ಬಳಕೆಗೆಂದೇ ನಿರ್ಮಿಸಲಾದ ಭೂಗತ್ ಬಂಕರ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಕೆಲಕಾಲ ಇಡಲಾಗಿತ್ತು ಎಂದು ಶ್ವೇತಭವನದ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದಾದ್ಯಂತ ಹಬ್ಬುತ್ತಿರುವ ಜನಾಂಗೀಯ ಪ್ರತಿಭಟನೆಯ ಕಿಚ್ಚನ್ನು ತಗ್ಗಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಪ್ರತಿಭಟನೆಯನ್ನು ಕೈಬಿಡುವಂತೆ ಖುದ್ದು ಡೊನಾಲ್ಡ್ ಟ್ರಂಪ್ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಮೊದಲೇ ಕೊರೊನಾ ವೈರಸ್ ಹಾವಳಿಯಿಂದ ಕಂಗೆಟ್ಟಿರುವ ಟ್ರಂಪ್ ಸರ್ಕಾರ, ಮಾರಕ ವೈರಾಣುವನ್ನು ನಿಯಂತ್ರಿಸಲು ಹೆಣಗುತ್ತಿದೆ. ಅಮೆರಿಕದಲ್ಲಿ ಲಕ್ಷಕ್ಕೂ ಅಧಿಕ ಸಾವು ಸಂಭವಿಸಿದ್ದು, ಕೊರೊನಾ ನಿರ್ಮೂಲನೆಗೆ ಟ್ರಂಪ್ ಸರ್ಕಾರ ಸತತ ಪ್ರಯತ್ನ ನಡೆಸುತ್ತಿದೆ.

ಈ ಮಧ್ಯೆ ಆರಂಭವಾಗಿರುವ ಜನಾಂಗೀಯ ಪ್ರತಿಭಟನೆ ಟ್ರಂಪ್ ಸರ್ಕಾರವನ್ನು ಮತ್ತಷ್ಟು ಹೈರಾಣು ಮಾಡಿರುವುದು ಸುಳ್ಳಲ್ಲ. ಹಿಂಸಾತ್ಮಕ ಪ್ರತಿಭಟನೆಗಳನ್ನು ತಗ್ಗಿಸುವುದು ಟ್ರಂಪ್ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಒಟ್ಟಿನಲ್ಲಿ ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸಿದ್ದ ಅಮೆರಿಕ ಇದೀಗ ಜನಾಂಗೀಯ ಪ್ರತಿಭಟನೆಯ ಬೆಂಕಿಯಲ್ಲಿ ಬೇಯುತ್ತಿರುವುದು ವಿಪರ್ಯಾಸವೇ ಸರಿ.



from India & World News in Kannada | VK Polls https://vijaykarnataka.com/news/world/tear-gas-fired-during-race-protest-clashes-outside-white-house/articleshow/76129620.cms

ಹೃದಯಾಘಾತದಿಂದ ಮೃತಪಟ್ಟ ಗದಗದ ಆಂಬ್ಯುಲೆನ್ಸ್ ಡ್ರೈವರ್, ಕರೆ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿದ ಬಿಎಸ್‌ವೈ

ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟ ಜಿಲ್ಲೆಯ ನರಗುಂದ ತಾಲೂಕಿನ 108 ಆಂಬ್ಯುಲೆನ್ಸ್‌ ಡ್ರೈವರ್ ಉಮೇಶ್ ‌ ಪತ್ನಿಗೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಫೋನ್ ಕರೆ ಮಾಡಿ ಸಾಂತ್ವನ ಹೇಳಿದರು. ಭಾನುವಾರ ಗದಗ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಉಮೇಶ್ ಫಕೀರಪ್ಪ ಎಂಬುವವರ ಹೃದಯಾಘಾತದಿಂದ ಮೃತಪಟ್ಟಿದ್ದರು. ಕೊರೊನಾ ವಾರಿಯರ್ಸ್‌ ಆಗಿದ್ದ ಉಮೇಶ್ ನಿಧನದಿಂದ ಅವರ ಕುಟುಂಬ ಕಂಗಾಲಾಗಿದೆ. ಈ ಹಿನ್ನೆಲೆಯಲ್ಲಿ ಮೃತ ಉಮೇಶ್ ಪತ್ನಿಗೆ ಸೋಮವಾರ ಸಿಎಂ ಬಿ.ಎಸ್‌ ಯಡಿಯೂರಪ್ಪ ಫೋನ್ ಕರೆ ಮಾಡಿ ಮಾತನಾಡಿದರು. ಅವರ ಕುಟುಂಬ ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡ ಸಿಎಂ ಕೂಡಲೇ ಪರಿಹಾರದ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆ ನೀಡಿದರು. ಸದ್ಯಕ್ಕೆ ಮೃತರ ಕುಟುಂಬಕ್ಕೆ ಅಂತ್ಯಸಂಸ್ಕಾರದ ಖರ್ಚಿಗೆ 10,000 ರೂಪಾಯಿ ತಕ್ಷಣದ ಪರಿಹಾರವನ್ನು ನೀಡಲಾಗಿದೆ. ಅಲ್ಲದೆ ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿ ಅಂಬ್ಯುಲೆನ್ಸ್ ವಿಮೆ ಹಾಗೂ ಕೊರೊನಾ ವಿಮೆಯ ಅಡಿಯಲ್ಲಿ ಪರಿಹಾರವನ್ನು ನೀಡುವುದಾಗಿ ಬಿಎಸ್‌ವೈ ಭರವಸೆಯನ್ನು ನೀಡಿದ್ದಾರೆ. ಈ ಹಿಂದೆಯೂ ಮುಖ್ಯಮಂತ್ರಿ ಕೊರೊನಾದಿಂದ ಮಗುವನ್ನು ನೋಡಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದ ಶುಶ್ರೂಷಕಿಗೆ ಫೋನ್ ಮಾಡಿ ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದರು. ಅಲ್ಲದೆ ಲಾಕ್‌ಡೌನ್ ಕಾರಣದಿಂದಾಗಿ ಈರುಳ್ಳಿ ಬೆಳೆ ಕೊಳೆತು ಹೋಗುತ್ತಿರುವ ಕುರಿತಾಗಿ ವಿಡಿಯೋ ಮಾಡಿದ್ದ ರೈತ ಮಹಿಳೆಗೂ ಖುದ್ದಾಗಿ ಫೋನ್ ಕರೆ ಮಾಡಿ ಮಾತನಾಡಿದ್ದರು.


from India & World News in Kannada | VK Polls https://ift.tt/36VpK8Y

ಮುಂಬಯಿನಲ್ಲಿ ಪೆಟ್ರೋಲ್‌ ದರ 2 ರೂ. ಹೆಚ್ಚಳ, ಬೆಂಗಳೂರಲ್ಲಿ ಎಷ್ಟಿದೆ? ಇಲ್ಲಿದೆ ವಿವರ

ಬೆಂಗಳೂರು: ಕೊರೊನಾ ವೈರಸ್‌ ವಿರುದ್ಧದ ಹೋರಾಟದ ಭಾಗವಾಗಿ ಕಳೆದ ಎರಡೂವರೆ ತಿಂಗಳಿನಿಂದ ಜಾರಿಯಲ್ಲಿದ್ದ ಲಾಕ್‌ಡೌನ್‌ ಇದೀಗ ಬಹುತೇಕ ತೆರವಾಗಿದೆ. ನಿಶ್ಚಲಗೊಂಡಿದ ಬಹುತೇಕ ವಾಹನಗಳು ರಸ್ತೆಗಿಳಿದಿವೆ. ಈ ಸಂದರ್ಭದಲ್ಲೇ ಮುಂಬಯಿನಲ್ಲಿ ಪೆಟ್ರೋಲ್‌ ಮತ್ತು 2 ರೂ. ಹೆಚ್ಚಳವಾಗಿದೆ. ಇತರ ಮೆಟ್ರೋ ನಗರಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಎಷ್ಟಿದೆ? ಇಲ್ಲಿದೆ ವಿವರ. ಬೆಂಗಳೂರಲ್ಲಿ ಕಳೆದ 10 ದಿನಗಳಿಂದ ಪೆಟ್ರೋಲ್‌ ದರದಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ. ಒಂದು ಲೀಟರ್‌ ಪೆಟ್ರೋಲ್‌ ಬೆಲೆ 73.55 ರೂ. ಇದೆ. ದಿಲ್ಲಿ, ಚೆನ್ನೈ ಮತ್ತು ಕೋಲ್ಕತಾದಲ್ಲೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕ್ರಮವಾಗಿ 71.26 ರೂ., 75.54 ರೂ. ಮತ್ತು 73.30 ರೂ. ಇದೆ. ಮುಂಬಯಿ ಹೊರತು ಪಡಿಸಿ ಉಳಿದ ನಗರಗಳಲ್ಲಿ ಡೀಸೆಲ್‌ ದರ ಯತಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರಿನಲ್ಲಿ ಒಂದು ಲೀಟರ್‌ ಡೀಸೆಲ್‌ ದರ 65.96 ರೂ. ಇದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 69.39 ರೂ. ಇದೆ. ಇನ್ನು ಚೆನ್ನೈ ಮತ್ತು ಕೋಲ್ಕತಾದಲ್ಲಿ ಕ್ರಮವಾಗಿ 68.22 ರೂ. ಮತ್ತು 64.62 ರೂ. ಇದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 2,667 ರೂ. ಇದೆ. ಸೂಚನೆ: ದೈನಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರೀಷ್ಕರಣೆಯು ವಿತರಣಾ ಕಂಪನಿಗಳು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ ಎಂಬುದನ್ನು ಗ್ರಾಹಕರು ಗಮನಿಸತಕ್ಕದ್ದು.


from India & World News in Kannada | VK Polls https://ift.tt/2TXVGnF

11 ಗಂಟೆಗೆ ಮೋದಿ ಕ್ಯಾಬಿನೆಟ್ ಸಭೆ: ಚೀನಾ, ಕೊರೊನಾ ಹಾವಳಿಗೆ ಪ್ರತಿತಂತ್ರ ಸಿದ್ಧ?

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ನೇತೃತ್ವದಲ್ಲಿ ಇಂದು ನಡೆಯಲಿದ್ದು, ವರ್ತಮಾನದ ಬೆಳವಣಿಗೆಗಳ ಕುರಿತು ಚರ್ಚೆ ನಡೆಯಲಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ವರ್ಷದ ಅವಧಿ ಪೂರೈಸಿರುವ ಬೆನ್ನಲ್ಲೇ, ಪ್ರಧಾನಿ ಮೋದಿ ಕ್ಯಾಬಿನಬೆಟ್ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ. ಮೋದಿ 2.0 ದ ಎರಡನೇ ವರ್ಷದ ಮೊದಲ ಕ್ಯಾಬಿನೆಟ್ ಸಭೆ ಇದಾಗಿದ್ದು, ಪ್ರಮುಖವಾಗಿ ಚೀನಾದ ಗಡಿ ತಕರಾರು ಹಾಗೂ ಕೊರೊನಾ ವೈರಸ್ ಹಾವಳಿಯ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎನ್ನಲಾಗಿದೆ. ಚೀನಾದೊಂದಿಗೆ ಮಿಲಿಟರಿ ಹಾಗೂ ರಾಜತಾಂತ್ರಿಕ ಮಾತುಕತೆಗಳು ಆರಂಭಗೊಂಡಿದ್ದು, ಗಡಿ ಸಮಸ್ಯೆ ಶಾಂತಿಯುತವಾಗಿ ಬಗೆಹರಿಯುವ ಭರವಸೆ ಇದೆ. ಆದರೆ ಗಡಿ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇನ್ನು ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಹೇರಲಾಗಿರುವ ಸರಣಿ ಲಾಕ್‌ಡೌನ್‌ಗಳ ಧನಾತ್ಮಕ ಹಾಗೂ ನಕಾರಾತ್ಮಕ ಅಂಶಗಳ ಕುರಿತು ಸಚಿವ ಸಂಪುಟ ಚರ್ಚೆ ನಡೆಸಲಿದೆ. ಕೊರೊನಾ ಬಳಿಕದ ಪರಿಸ್ಥಿತಿ ಮತ್ತು ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಚಿವ ಸಂಪುಟದಿಂದ ಮಹತ್ವ ತೀರ್ಮಾನ ಹೊರಬೀಳುವ ಸಾಧ್ಯತೆಯೂ ಉಂಟು.


from India & World News in Kannada | VK Polls https://ift.tt/2Ap51hu

ಕಮಲ ಬಂಡಾಯ: ಅತೃಪ್ತರ ತಂತ್ರಕ್ಕೆ ಬಿಎಸ್‌ವೈ ಪ್ರತಿತಂತ್ರ!

ಬೆಂಗಳೂರು: ಕಮಲದಲ್ಲಿ ಅತೃಪ್ತರ ಬಂಡಾಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಬಂಡಾಯಗಾರರ ತಂತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿತಂತ್ರ ಹೂಡುತ್ತಿದ್ದಾರೆ. ಕೊರೊನಾ ಸಂಕಷ್ಟದ ನಡುವೆ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಜೊತೆಗೆ ಗಟ್ಟಿಯಾಗಿ ನಿಲ್ಲಬೇಕಾಗಿದ್ದ ಆಪ್ತ ವಲಯದ ಶಾಸಕರೇ ಬಂಡಾಯದ ಬಾವುಟ ಹಾರಿಸಿರುವುದು ಯಡಿಯೂರಪ್ಪ ಪಾಲಿಗೆ ನುಂಗಲಾರದ ತುತ್ತಾಗಿದೆ. ಇದರಿಂದ ಆಕ್ರೋಶಗೊಂಡಿರುವ ಅವರು ಸಂಪುಟದ ಸಹೋದ್ಯೋಗಿಗಳ ಜೊತೆಗೂ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದು ಬಂಡಾಯಗಾರರ ತಂತ್ರಕ್ಕೆ ಪ್ರತಿತಂತ್ರವನ್ನು ಹೂಡುತ್ತಿದ್ದಾರೆ ಎನ್ನಲಾಗಿದೆ. ಉಮೇಶ್ ಕತ್ತಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಸುಮಾರು 20 ಕ್ಕೂ ಅಧಿಕ ಶಾಸಕರು ಭಿನ್ನಮತೀಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಇದವರಿಗೆ ದೆಹಲಿ ಮಟ್ಟದ ಬೆಂಬಲವೂ ಇದೆ ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಬಂಡಾಯವನ್ನು ಬಿ.ಎಸ್‌ ಯಡಿಯೂರಪ್ಪ ಗಂಭೀರವಾಗಿ ಪರಿಗಣಿಸಿದ್ದಾರೆ. ಇದನ್ನು ಮುಂದುವರಿಯಲು ಆಸ್ಪದ ಕೊಡದ ನಿಟ್ಟಿನಲ್ಲಿ ಏನು ಮಾಡಬಹುದು ಎಂಬ ಚರ್ಚೆಯನ್ನು ಆಪ್ತ ವಲಯದ ಜೊತೆಗೆ ನಡೆಸಿದ್ದಾರೆ ಎಂಬ ಮಾಹಿತಿಯೂ ಮೂಲಗಳಿಂದ ತಿಳಿದುಬಂದಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಸೋಂಕು ನಿರ್ವಹಣೆಯಲ್ಲಿ ಸರ್ಕಾರ ಎಡವಿದೆ ಎಂದು ವಿರೋಧ ಪಕ್ಷಗಳು ಬಿಎಸ್‌ವೈ ವಿರುದ್ಧ ಕತ್ತಿ ಮಸೆಯಲು ಸಜ್ಜಾಗಿದ್ದಾರೆ. ರೈತರು, ಕಾರ್ಮಿಕರ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ತಂತ್ರ ಹೂಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಸುಭದ್ರತೆ ಅತೀ ಮುಖ್ಯವಾಗಿದೆ. ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರ ಕೊಡಬೇಕಾಗಿರುವ ಶಾಸಕರು ಹಾಗೂ ಸಚಿವರು ಪಕ್ಷದ ಆಂತರಿಕ ಬಿಕ್ಕಟ್ಟಿಗೆ ಉತ್ತರ ನೀಡಬೇಕಾದ ಪರಿಸ್ಥಿತಿ ನಿರ್ಮಾನವಾದರೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತದೆ ಎಂಬ ಆತಂಕ ಬಿಎಸ್‌ವೈಗಿದೆ. ಈ ನಿಟ್ಟಿನಲ್ಲಿ ಭಿನ್ನಮತವನ್ನು ಬಗೆಹರಿಸಲು ಬಿಎಸ್‌ವೈ ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಬಂಡಾಯ ಬಹಿರಂಗವಾಗಿ ಚರ್ಚೆಯಾಗದಂತೆ ಸರಿಪಡಿಸುವ ಕುರಿತಾಗಿಯೂ ಆಪ್ತರ ಜೊತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಬಂಡಾಯಗಾರರು ಇದೇ ಪರಿಸ್ಥಿತಿಯನ್ನು ತಮ್ಮ ಪರವಾಗಿ ಪರಿವರ್ತನೆ ಮಾಡಲು ಮುಂದಾಗಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಎಸ್‌ವೈಯನ್ನು ಇಕ್ಕಟ್ಟಿಗೆ ಸಿಲುಕಿಸುವುದು ಇವರ ತಂತ್ರಗಾರಿಕೆ ಎನ್ನಲಾಗುತ್ತಿದೆ. ಅನುದಾನ ಬಿಡುಗಡೆ ಒಂದು ನೆಪವಾದರೂ ಇತರ ವಿಚಾರಗಳು ಇದರಲ್ಲಿ ಅಡಕವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ತಲೆಧೋರಿರುವ ಬಂಡಾಯವನ್ನು ಬಿಎಸ್‌ವೈ ಹೇಗೆ ನಿಭಾಯಿಸುತ್ತಾರೆ ಎಂಬುವುದು ಸದ್ಯದ ಕುತೂಹಲ.


from India & World News in Kannada | VK Polls https://ift.tt/3gAs6hX

ವೈಟ್‌ಹೌಸ್‌ ಮುಂದೆ ಭಾರೀ ಪ್ರತಿಭಟನೆ: ಗುಪ್ತ ಬಂಕರ್‌ನಲ್ಲಿ ಟ್ರಂಪ್‌ರನ್ನು ಮುಚ್ಚಿಟ್ಟ ಸಿಬ್ಬಂದಿ!

ವಾಷಿಂಗ್ಟನ್: ಅಮೆರಿಕದಲ್ಲಿ ವ್ಯಾಪಕವಾಗುತ್ತಿದ್ದು, ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಅಮೆರಿಕದ ಅಧ್ಯಕ್ಷರ ಅಧಿಕೃತ ಕಚೇರಿ ಶ್ವೇತಭವನದ ಮುಂದೆಯೂ ಭಾರೀ ಪ್ರತಿಭಟನೆ ನಡೆದಿದ್ದು, ಈ ವೇಳೆ ಶ್ವೇತಭವನದ ಮುಂದೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಭಾರೀ ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರ ಗುಂಪು, ವಿರುದ್ಧ ಘೋಷಣೆ ಕೂಗಿದರಲ್ಲದೇ ಶ್ವೇತಭವನದ ಸಮೀಪ ಧಾವಿಸಿ ಆತಂಕ ಸೃಷ್ಟಿಸಿತ್ತು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದ ಸಿಬ್ಬಂದಿ ಭೂಗತ ಬಂಕರ್‌ನಲ್ಲಿ ಕೆಲಕಾಲ ಸುರಕ್ಷಿತವಾಗಿ ಇಟ್ಟಿದ್ದರು ಎನ್ನಲಾಗಿದೆ. ಒಂದು ಗಂಟೆಗೂ ಹೆಚ್ಚುಕಾಲ ಟ್ರಂಪ್ ಈ ಬಂಕರ್‌ನಲ್ಲೇ ಉಳಿದಿದ್ದರು ಎಂದು ಅಂದಾಜಿಸಲಾಗಿದೆ. ವಿಪತ್ತಿನ ಪರಿಸ್ಥಿತಿಯಲ್ಲಿ ಬಳಕೆಗೆಂದೇ ನಿರ್ಮಿಸಲಾದ ಭೂಗತ್ ಬಂಕರ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಕೆಲಕಾಲ ಇಡಲಾಗಿತ್ತು ಎಂದು ಶ್ವೇತಭವನದ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ. ಶ್ವೇತಭವನದ ಮುಂದೆ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದ ವೇಳೆ, ಅಧ್ಯಕ್ಷರ ಸುರಕ್ಷತೆ ದೃಷ್ಟಿಯಿಂದ ಟ್ರಂಪ್ ಅವರನ್ನು ಗುಪ್ತ ಬಂಕರ್‌ನಲ್ಲಿ ಮುಚ್ಚಿಡಲಾಗಿತ್ತು ಎಂದು ಹೇಳಲಾಗಿದೆ. ಇನ್ನು ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣದಿಂದಾಗಿ ಅಮೆರಿಕದಲ್ಲಿ ಜನಾಂಗೀಯ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, 15 ಕ್ಕೂ ಹೆಚ್ಚಿನ ರಾಜ್ಯಗಳಿಗೆ ಪ್ರತಿಭಟನೆ ವಿಸ್ತರಿಸಿದೆ. ಬಹುತೇಕ ಕಡೆಗಳಲ್ಲಿ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ದು, ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.


from India & World News in Kannada | VK Polls https://ift.tt/3dmHcFM

200 ವಿಶೇಷ ರೈಲುಗಳ ಓಡಾಟ; 1.5 ಲಕ್ಷ ಜನರ ಪ್ರಯಾಣ

ಹೊಸದಿಲ್ಲಿ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ನಿಶ್ಚಲಗೊಂಡಿರುವ ಆರ್ಥಿಕತೆಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೊಸತಾದ ಅಲ್‌ಲಾಕ್ ಮಾರ್ಗಸೂಚಿಯನ್ನು ಸೂಚಿಸಿದೆ. ಲಾಕ್‌ಡೌನ್ ನಿಯಮಗಳನ್ನು ಈಗಾಗಲೇ ಸಡಿಲಗೊಳಿಸಲಾಗಿದೆ. ಈ ಮಧ್ಯೆ ಸೋಮವಾರದಿಂದಲೇ 200ರಷ್ಟು ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಜೂನ್ 1ರಂದೇ 200 ವಿಶೇಷ ಎಕ್ಸ್‌ಪ್ರೆಸ್ ಹಾಗೂ ಮೇಲ್ ರೈಲುಗಳು ಓಡಾಟ ನಡೆಸಲಿದ್ದು, 1.45 ಲಕ್ಷ ಜನರು ತಮ್ಮ ಊರಿಗೆ ಪ್ರಯಾಣಿಸಲಿದ್ದಾರೆ. ಭಾನುವಾರ ಮಾಹಿತಿ ನೀಡಿರುವ ರೈಲ್ವೆ, ಜೂನ್ 30ರ ವರೆಗೆ ವಿಶೇಷ ರೈಲಿನಲ್ಲಿ ತೆರಳಲು 26 ಲಕ್ಷ ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. ಈಗಾಗಲೇ ಓಡಾಡುತ್ತಿರುವ ಹಾಗೂ ರಾಜಧಾನಿ ರೈಲುಗಳ ಹೊರತಾದ ರೈಲು ಸೇವೆ ಇದಾಗಿದೆ. ಇನ್ನೊಂದೆಡೆ ವಲಸೆ ಕಾರ್ಮಿಕರಿಗೆ ಏರ್ಪಡಿಸಲಾಗಿದ್ದ ಶ್ರಮಿಕ ರೈಲುಗಳಿಗೆ ಬೇಡಿಕೆ ಕುಸಿಯುತ್ತಿದೆ. ಎರಡನೇ ಹಂತದಲ್ಲಿ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ರೈಲುಗಳ ಓಡಾಟವನ್ನು ನಡೆಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಬೇಡಿಕೆಗೆ ಅನುಸಾರವಾಗಿ ದುರಂತೊ, ಶತಾಬ್ದಿ ಹಾೂಗ ಗರಿಬ್ ರಥ್ ರೈಲುಗಳ ಓಡಾಟ ನಡೆಸಲಿದೆ. ಅಂದ ಹಾಗೆ ಜೂನ್ 30ರ ವರೆಗೆ ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿರಲ್ಲಿರಲಿದೆ. ಉಳಿದಂತೆ ಜೂನ್ 8ರಿಂದ ಉಳಿದೆಲ್ಲ ಪ್ರದೇಶಗಳು ಸಹಜ ಸ್ಥಿತಿಗೆ ಮರಳಲಿದೆ. ಈ ಮಧ್ಯೆ ಮೂರು ಹಂತಗಳಲ್ಲಾಗಿ ಲಾಕ್‌ಡೌನ್ ತೆರವುಗೊಳಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಅನ್‌ಲಾಕ್ 1 ಜೂನ್ 30ರ ವರೆಗೆ ಮುಂದುವರಿಯಲಿದ್ದು, ಅನೇಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತದೆ.


from India & World News in Kannada | VK Polls https://ift.tt/2XRvOLm

ಕೊರೊನಾ ಲೈವ್ ಅಪ್‌ಡೇಟ್ಸ್: ವಿಶ್ವ ಸೋಂಕಿತರ ಪಟ್ಟಿಯಲ್ಲಿ 7ನೇ ಸ್ಥಾನ ತಲುಪಿದ ಭಾರತ!

ಚೀನಾದ ವುಹಾನ್ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 3ಲಕ್ಷದ 62 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಭಾರತದಲ್ಲಿ ಪಾಸಿಟಿವ್ ಪ್ರಕರಣ 1 ಲಕ್ಷದ 73ಸಾವಿರ ದಾಟಿದೆ. ಜೂನ್ 1ರ ಕ್ಷಣಕ್ಷಣದ ಮಾಹಿತಿ ಇಲ್ಲಿದೆ:- -ಕರ್ನಾಟಕದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 2,781ಕ್ಕೆ ಏರಿಕೆಯಾಗಿದೆ. 48ಮಂದಿಯ ಸಾವಾಗಿದ್ದು, 894ಮಂದಿ ಗುಣಮುಖರಾಗಿದ್ದಾರೆ. ಸೋಂಕಿತ ಪ್ರಕರಣಗಳ ಪಟ್ಟಿಯಲ್ಲಿ ರಾಜ್ಯ 12ನೇ ಸ್ಥಾನದಲ್ಲಿದೆ.

-ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಸೋಂಕಿತರ ಸಂಖ್ಯೆ 1,90,622ಕ್ಕೆ ಏರಿಕೆಯಾಗಿದೆ. 91,855ಮಂದಿ ಗುಣಮುಖರಾಗಿದ್ದು, 5,408 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿತ ಪ್ರಕರಣದ ದೇಶಗಳ ಪಟ್ಟಿಯಲ್ಲಿ ಭಾರತ 7ನೇ ಸ್ಥಾನದಲ್ಲಿದೆ.

-ವಿಶ್ವದಾದ್ಯಂತ 3 ಲಕ್ಷದ 73ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. 62 ಲಕ್ಷದ 63 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. ಇದರಲ್ಲಿ 28ಲಕ್ಷದ 46 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. -ಅಮೆರಿಕದಲ್ಲಿ ಅತೀ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದು. ಸೋಂಕಿತ ಪ್ರಕರಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ 18 ಲಕ್ಷದ 37ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರಿದ್ದು, 1 ಲಕ್ಷದ 06ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಪಟ್ಟಿಯಲ್ಲಿ ಕೂಡ ಮೊದಲನೇ ಸ್ಠಾನದಲ್ಲಿದೆ. -ಬ್ರೆಜಿಲ್ ಸೋಂಕಿತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದ್ದು, ಇಲ್ಲಿ 5 ಲಕ್ಷದ 14 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣ ಬೆಳಕಿಗೆ ಬಂದಿದೆ. 29,300 ಕ್ಕೂ ಹೆಚ್ಚು ಮಂದಿ ಇಲ್ಲಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಚಾರ್ಟ್ ನಲ್ಲಿ 4ನೇ ಸ್ಥಾನದಲ್ಲಿದೆ. -ರಷ್ಯ ಸೋಂಕಿತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ. 4 ಲಕ್ಷದ 05 ಸಾವಿರ ಮಂದಿ ಇಲ್ಲಿ ಸೋಂಕಿತರಿದ್ದಾರೆ. 4,600ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

-ಸೋಂಕಿತ ಪ್ರಕರಣಗಳಲ್ಲಿ 4ನೇ ಸ್ಥಾನದಲ್ಲಿರುವ ಸ್ಪೇನ್ ನಲ್ಲಿ 2 ಲಕ್ಷದ 86ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. 27,100ಕ್ಕೂ ಹೆಚ್ಚು ಮಂದಿ ಕೊರೊನಾಗೆ ಇಲ್ಲಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಚಾರ್ಟ್ ನಲ್ಲಿ 6ನೇ ಸ್ಥಾನದಲ್ಲಿದೆ. - ಯುಕೆ ಸೋಂಕಿತರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಇಳಿದಿದೆ. ಇಲ್ಲಿ 2ಲಕ್ಷದ 74ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. 38,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿ ತಿಳಿಸಿದೆ. ಮೃತಪಟ್ಟವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. -ಸೋಂಕಿತರ ಪಟ್ಟಿಯಲ್ಲಿ ಇಟಲಿ 6ನೇ ಸ್ಥಾನದಲ್ಲಿದ್ದು, ಮೃತಪಟ್ಟವರ ಚಾರ್ಟ್ ನಲ್ಲಿ 3ನೇ ಸ್ಥಾನದಲ್ಲಿದೆ. ಇಲ್ಲಿ 2ಲಕ್ಷದ 32ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. 33,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿ ತಿಳಿಸಿದೆ. -ಭಾರತವ ಸೋಂಕಿತ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದರೆ. ಫ್ರಾನ್ಸ್ ಸೋಂಕಿತರ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಇಳಿದಿದೆ, ಇಲ್ಲಿ 1 ಲಕ್ಷದ 88 ಸಾವಿರ ಸೋಂಕಿತ ಪ್ರಕರಣ ಬೆಳಕಿಗೆ ಬಂದಿದೆ. 28,800ಕ್ಕೂ ಹೆಚ್ಚು ಮಂದಿ ಇಲ್ಲಿ ಸಾವನ್ನಪ್ಪಿ, ಮೃತಪಟ್ಟವರ ಚಾರ್ಟ್ ನಲ್ಲಿ 5ನೇ ಸ್ಥಾನದಲ್ಲಿದೆ.


from India & World News in Kannada | VK Polls https://ift.tt/2zPf3sb

ವಿಕ ಅಭಿಯಾನ: ಕರುನಾಡ ಕಟ್ಟೋಣ... ಜೊತೆಯಾಗಿ ಮುನ್ನಡೆಯೋಣ ಬನ್ನಿ

ಕೊರೊನಾ ಇಡೀ ಜಗತ್ತನ್ನೇ ಕಾಡಿದ ಸಂಕಷ್ಟ. ಇದರ ಹೊಡೆತಕ್ಕೆ ವಿಶ್ವದ ಬಲಾಢ್ಯ ದೇಶಗಳೇ ನಲುಗಿವೆ. ಆರ್ಥಿಕ ಪ್ರಬಲ ರಾಷ್ಟ್ರಗಳೇ ಭವಿಷ್ಯದ ಆತಂಕಕ್ಕೆ ಸಿಲುಕಿವೆ. ಅದೇ ವೇಳೆ ಭಾರತ ಕೊರೊನಾ ಸವಾಲನ್ನು ಎದುರಿಸಿದ ರೀತಿಗೆ ಜಗತ್ತಿನ ಮೆಚ್ಚುಗೆ ಸಿಕ್ಕಿದೆ. ಭಾರತದೊಳಗಿನ ರಾಜ್ಯಗಳಿಗೆ ಸಂಬಂಧಿಸಿ ಹೇಳುವುದಾದರೆ ಕರ್ನಾಟಕವು ಕೊರೊನಾ ವಿರುದ್ಧ ಯಶಸ್ವಿಯಾಗಿ ಸೆಣಸಿದ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಕೊರೊನಾವನ್ನು ನಾವು ಸಂಘಟಿತವಾಗಿ, ಸಮರ್ಥವಾಗಿ ಎದುರಿಸಿದ್ದನ್ನು ಎಲ್ಲರೂ ಮನಗಾಣಬೇಕಿರುವ ಸತ್ಯ. ಈ ವಿಚಾರದಲ್ಲಿ ದೇಶ ಮತ್ತು ರಾಜ್ಯದ ಯಶಸ್ವಿ ನಾಯಕತ್ವಕ್ಕೆ, ಕೇಂದ್ರ-ರಾಜ್ಯಗಳ ನಾಯಕತ್ವ ಬೆಂಬಲಿಸಿ ಕೊರೊನಾ ವ್ಯೂಹ ಭೇದಿಸಲು ಸಹಕರಿಸಿದ ಕೋಟಿ ಕೋಟಿ ದೇಶವಾಸಿಗಳಿಗೆ ಶಹಬ್ಬಾಸ್‌ ಎನ್ನಲೇಬೇಕಿದೆ. ಇದು ಕೊರೊನಾ ಕಾಲದ ಸ್ಥಿತಿಗತಿ. ಕೊರೊನಾ ನಂತರ ಜನಜೀವವನ್ನು ನಾವು ಹೇಗೆ ಮರಳಿ ಹಳಿಗೆ ತರುತ್ತೇವೆ ಎಂಬುದು ಅದಕ್ಕಿಂತಲೂ ಮುಖ್ಯ ಪ್ರಶ್ನೆ. ಮೂರೂವರೆ ತಿಂಗಳ ಕಾಲ ಸ್ತಬ್ಧಗೊಂಡ ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ಹೇಗೆ ಮತ್ತು ಎಷ್ಟು ತ್ವರಿತವಾಗಿ ನಾವು ಮರು ರೂಪಿಸುತ್ತೇವೆಂಬುದನ್ನು ಈಗ ಗಂಭೀರ ಸವಾಲಾಗಿ ನಾವು ಸ್ವೀಕರಿಸಬೇಕಿದೆ. ಕೊರೊನೋತ್ತರ ಬದುಕನ್ನು ಮರು ರೂಪಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಸ್ವಾವಲಂಬನೆ(ಆತ್ಮ ನಿರ್ಭರತೆ) ಮಾರ್ಗದ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಸಮಾಲೋಚನೆ, ಸಹಕಾರ, ಸಬಲೀಕರಣ ಈ ಮೂರು ಸ್ವಾವಲಂಬನೆಯ ಮೂಲಾಧಾರಗಳು. ಕೃಷಿಯಿಂದ ಹಿಡಿದು ಕೈಗಾರಿಕೆಯವರೆಗೆ ಎಲ್ಲ ಕ್ಷೇತ್ರಗಳನ್ನು ಚರ್ಚೆ ಮತ್ತು ಸಮರ್ಥ ನೇತೃತ್ವದ ಮೂಲಕವೇ ಮರುರಚನೆ ಮಾಡಬೇಕಿದೆ. ಆಯಾ ಕ್ಷೇತ್ರದ ಪರಿಣಿತರು ಹಾಗೂ ಸಮಾಜದ ನಾನಾ ಸ್ತರದ ಜನರನ್ನೊಳಗೊಂಡು ಚಿಂತನೆ, ಸಮಾಲೋಚನೆಗಳಿಗೆ ಚಾಲನೆ ಕೊಡಬೇಕಿದೆ. ಕನ್ನಡದ ಅತಿಹೆಚ್ಚು ಓದುಗರನ್ನು ಹೊಂದಿರುವ 'ವಿಜಯ ಕರ್ನಾಟಕ' ಪತ್ರಿಕೆಯು 'ಕರುನಾಡ ಕಟ್ಟೋಣ ಬನ್ನಿ' (ರೀ ಬಿಲ್ಡಿಂಗ್‌ ಕರ್ನಾಟಕ) ಎಂಬ ಘೋಷವಾಕ್ಯದಡಿಯಲ್ಲಿ ಜನರಿಂದ ಜನರಿಗಾಗಿ ಪುನರುತ್ಥಾನದ ಅಭಿಯಾನ ಶುರುಮಾಡುತ್ತಿದೆ. ಇದು ಮುಂಚೂಣಿ ಪತ್ರಿಕೆಯಾಗಿ ನಮ್ಮ ಹೊಣೆಗಾರಿಕೆ ಮತ್ತು ಕರ್ತವ್ಯ ಎಂದು ಭಾವಿಸಿದ್ದೇವೆ. ಕೃಷಿ, ಕೈಗಾರಿಕೆ, ಉದ್ಯೋಗ, ಆರ್ಥಿಕತೆ, ಆರೋಗ್ಯ, ಶಿಕ್ಷಣ, ಸಂಸ್ಕೃತಿ, ಪ್ರವಾಸೋದ್ಯಮ ಹೀಗೆ ಜನಜೀವನದ ಎಲ್ಲಸ್ತರಗಳನ್ನು ಒಳಗೊಂಡು ಚರ್ಚೆ ಮತ್ತು ಆ ಮೂಲಕ ಕಾರ್ಯಸಾಧ್ಯ ನೀಲನಕ್ಷೆಯ ಪ್ರಸ್ತಾವನೆ ತಯಾರಿಸಿ ಸರಕಾರಕ್ಕೆ ಸಾಥ್‌ ನೀಡುವ ಪ್ರಕ್ರಿಯೆ ಇದಾಗಿರಲಿದೆ. ಈ ಅಭಿಯಾನದಲ್ಲಿ ನಾಗರಿಕರು, ಸಮುದಾಯಗಳ ಪ್ರಮುಖರು, ಸಾಮಾಜಿಕ-ರಾಜಕೀಯ ಕಾರ್ಯಕರ್ತರು, ನಾಯಕರು, ಸರಕಾರದ ನಾನಾ ಸ್ತರಗಳಲ್ಲಿ ಹೊಣೆ ಹೊತ್ತವರು ಸಕ್ರಿಯವಾಗಿ ಭಾಗವಹಿಸಬೇಕೆಂಬುದು ನಮ್ಮ ವಿನಮ್ರ ಪ್ರಾರ್ಥನೆ. ಸವಾಲು, ಸಂಕಷ್ಟಗಳು ಬರುವುದು ನಮ್ಮ ಶಕ್ತಿ ಸಾಮರ್ಥ್ಯ ಹಾಗೂ ಗಟ್ಟಿತನ ಪರೀಕ್ಷಿಸಲು ಎಂಬುದು ಪಾಸಿಟಿವ್‌ ಆಲೋಚನೆಯ ರೀತಿ. ಈ ಸತ್ವ ಪರೀಕ್ಷೆಯಲ್ಲಿ ನಾವು ಪಾಸಾಗೋಣ. ಕರುನಾಡ ಕಟ್ಟೋಣ ಬನ್ನಿ ಜೊತೆಯಾಗಿ ಸಾಗೋಣ ಬನ್ನಿ ಜೂ.3ಕ್ಕೆ ಚಾಲನೆಕೊರೊನೋತ್ತರ ಕರ್ನಾಟಕ - ಕರುನಾಡ ಕಟ್ಟೋಣ ಬನ್ನಿ ಈ ಅಭಿಯಾನಕ್ಕೆ ಜೂನ್‌ 3ರಂದು ರಾಜ್ಯ ಸರಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದ ಸಿ ಟಿ ರವಿ ಅವರು ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆ ಮರು ಉತ್ತೇಜನ ಹೇಗೆ ಎಂಬ ಕುರಿತು ಚಿಂತನ-ಮಂಥನವನ್ನೂ ಆಯೋಜಿಸಲಾಗಿದೆ. ನಾನಾ ವಲಯಗಳ ಪ್ರಮುಖರು ಭಾಗವಹಿಸಲಿದ್ದಾರೆ. ಆರೋಗ್ಯ, ಶಿಕ್ಷಣ, ಕೈಗಾರಿಕೆ, ಕೃಷಿ, ಉದ್ಯೋಗ ಇತ್ಯಾದಿ ಸಂಗತಿಗಳ ಕುರಿತ ಚಿಂತನ ಸರಣಿ ಮುಂದುವರಿಯಲಿದೆ.


from India & World News in Kannada | VK Polls https://ift.tt/2ZUhnc9

ರೈತರಿಗೆ ಮತ್ತೆ ಬರೆ: ಅಗ್ಗದ ಮತ್ತು ಕಡಿಮೆ ಅಪಾಯದ ಕೀಟನಾಶಕಗಳ ನಿಷೇಧ?

ಹಲವು ದಶಕಗಳಿಂದ ಜನಪ್ರಿಯವಾಗಿರುವ ಹಾಗೂ ಪರಿಣಾಮಕಾರಿ ಫಲಿತಾಂಶ ನೀಡುತ್ತಿರುವ 27 ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ಕರಡು ಪ್ರಸ್ತಾವನೆ ಸಿದ್ಧಪಡಿಸಿದೆ. ಇವುಗಳಲ್ಲಿ ಹೆಚ್ಚಿನವು ಕಡಿಮೆ ಅಪಾಯಕಾರಿಯಾಗಿರುವ ಅಗ್ಗದ ಜನರಿಕ್‌ ಕೀಟನಾಶಕಗಳೇ ಆಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.ಈಗಾಗಲೇ ಅಧಿಕ ನಿರ್ವಹಣಾ ವೆಚ್ಚ ಹಾಗೂ ಬೆಳೆದ ಉತ್ಪನ್ನಗಳಿಗೆ ದರ ಕುಸಿತದಿಂದ ಹೈರಾಣಾಗಿರುವ ರೈತರು, ದುಬಾರಿ ದರ ತೆತ್ತು ಹೊಸ ಕೀಟನಾಶಕ ಖರೀದಿಸಬೇಕಾದ ಅನಿವಾರ‍್ಯತೆ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಸರಕಾರದ ನಡೆಯ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.'ಮಾನವ ಹಾಗೂ ಪ್ರಾಣಿಗಳಿಗೆ ಅಪಾಯಕಾರಿಯಾಗಿರುವ 27 ಮಾದರಿಯ ಕೀಟನಾಶಕಗಳ ಆಮದು, ಉತ್ಪಾದನೆ, ಮಾರಾಟ, ಸಾಗಾಟ, ವಿತರಣೆ ಹಾಗೂ ಬಳಕೆ ನಿಷೇಧಿಸಲು ನಿರ್ಧರಿಸಲಾಗಿದೆ. ಇವುಗಳ ಬದಲಿಗೆ ಹೊಸ ಕೀಟನಾಶಕಗಳ ಬಳಕೆಗೆ ಅವಕಾಶವಿರುತ್ತದೆ. ನಿಷೇಧ ಕುರಿತು ಆಕ್ಷೇಪಣೆ ಸಲ್ಲಿಸುವವರಿಗೆ 45 ದಿನಗಳ ಅವಕಾಶವಿದೆ' ಎಂದು ಮೇ 14ರಂದು ಸರಕಾರ ತಿಳಿಸಿದೆ. ಈ ಬಗ್ಗೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ರವಾನಿಸಿ ಸಲಹೆ ನೀಡುವಂತೆ ಸೂಚಿಸಿದೆ. ತರಕಾರಿ, ಹೂವುಗಳಿಂದ ಆರಂಭವಾಗಿ, ಭತ್ತ, ರಾಗಿ, ಗೋಧಿ, ಜೋಳ, ದವಸ ಧಾನ್ಯಗಳು, ಕಬ್ಬು, ಹತ್ತಿ, ಕಾಫಿ, ಕಾಳುಮೆಣಸು, ಅಡಕೆ, ಏಲಕ್ಕಿ, ಮಾವು, ದ್ರಾಕ್ಷಿ, ಸೇಬು, ದಾಳಿಂಬೆ ಹೀಗೆ ದೇಶದಲ್ಲಿ ಬೆಳೆಯಲ್ಪಡುವ ಎಲ್ಲ ಮಾದರಿಯ ಕೃಷಿಗೂ ಈ ಕೀಟನಾಶಕ, ಕಳೆನಾಶಕ ಹಾಗೂ ಶಿಲೀಂದ್ರ ನಾಶಕಗಳೇ ಸದ್ಯ ಹೆಚ್ಚಾಗಿ ಬಳಕೆಯಾಗುತ್ತಿವೆ.ವಿಕ ವಿಶೇಷ ವರದಿ: ಕಿರಣ್‌ ಕುಮಾರ್‌ ಡಿ. ಕೆ ಬೆಂಗಳೂರುತಾಜಾ ತರಕಾರಿ ಸಂಗ್ರಹಕ್ಕೆ ಬರಲಿದೆ ವೆಂಡಿಂಗ್‌ ವ್ಯಾನ್‌, ತೋಟಗಾರಿಕಾ ಸಂಸ್ಥೆಯಿಂದ ವ್ಯವಸ್ಥೆ

ಕೀಟನಾಶಕಗಳನ್ನು ಸಾಮಾನ್ಯವಾಗಿ ಅತಿಹೆಚ್ಚು ಅಪಾಯಕಾರಿ (ಕೆಂಪು), ಹೆಚ್ಚಿನ ಅಪಾಯಕಾರಿ(ಹಳದಿ), ಮಧ್ಯಮ ಅಪಾಯಕಾರಿ(ನೀಲಿ) ಹಾಗೂ ಅಲ್ಪ ಪ್ರಮಾಣದ ಅಪಾಯಕಾರಿ (ಹಸಿರು)ಗಳೆಂದು 4 ವಿಭಾಗಗಳಲ್ಲಿ ಗುರುತಿಸಲಾಗುತ್ತದೆ. ಇದೀಗ ನಿಷೇಧಕ್ಕೆ ಮುಂದಾಗಿರುವ ಕೀಟನಾಶಕಗಳಲ್ಲಿ ಕೆಂಪು ವಿಭಾಗದವು ಕಡಿಮೆ. ಇದು ಸರಕಾರದ ಪರಾಮರ್ಶೆ ವಿಧಾನದ ಕುರಿತು ಅನುಮಾನ ಮೂಡಿಸಿದೆ.

ಕಾಲಕಾಲಕ್ಕೆ ಕೀಟನಾಶಕಗಳ ನಿಷೇಧ ಮಾಡಲಾಗುತ್ತದೆಯಾದರೂ ಈ ಬಾರಿ ಪಟ್ಟಿಯಲ್ಲಿರುವ ಹೆಚ್ಚಿನ ಕೀಟನಾಶಕಗಳು ಅಗ್ಗದ ದರದವು ಮತ್ತು ಹಲವು ದಶಕಗಳಿಂದ ರೈತರು ಬಳಸುತ್ತ ಪ್ರಮಾಣಿತ ಫಲಿತಾಂಶ ಹೊಂದಿರುವ ಕೀಟನಾಶಕಗಳು. ಹೀಗಿರುವಾಗ ಜಾಗೃತಿಯನ್ನೂ ಮೂಡಿಸದೆ ಏಕಾಏಕಿ ನಿಷೇಧಕ್ಕೆ ಮುಂದಾದರೆ ಹೊಸ ಮಾಲಿಕ್ಯೂಲ್‌ ಉತ್ಪಾದಿಸುವ ಸಂಸ್ಥೆಗಳು ಇದರ ಲಾಭ ಪಡೆದು ರೈತರ ಮೇಲೆ ಸವಾರಿ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಅಸಿಫೇಟ್‌, ಅಟ್ರಾಝೈನ್‌, ಮೆಲಾಥಿಯನ್‌, ಮ್ಯಾಂಕೋಝೆಬ್‌, ಮೋನೋಕ್ರೊಟೊಪಾಸ್‌, ಕ್ವಿನಲ್‌ಫಾಸ್‌, ಕ್ಯಾಪ್ಟೈನ್‌, ಕಾರ್ಬೆಂಡೇಝಿಮ್‌, ಬುಟಾಕ್ಲೋರ್‌, ಕಾರ್ಬೋಫರಾನ್‌, ಕ್ಲೋರೋಫೆರಿಫಾಸ್‌, ಟು 4 ಡಿ, ಡೆಲ್ಟಾಮೆಥ್ರಿನ್‌, ಡಿಕೋಫೊಲ್‌, ಡೈಮಿಥೇಟ್‌, ಬೆನ್‌ಫರಾಕರ್ಬ್‌, ಡಿನೋಕ್ಯಾಪ್‌, ಡ್ಯುರಾನ್‌, ಮೆಥಾಮಿಲ್‌, ಆಕ್ಷಿಫ್ಲೋರ್ಫೆನ್‌, ಪೆಂಡಿಮೆಥಾಲಿನ್‌, ಸಲ್ಫೋಸಲ್ಫರಾನ್‌, ಥಿಯೋಡಿಕಾರ್ಬ್‌, ಥಿಯೋಫಾನಟ್‌ ಎಮಿಥಿಲ್‌, ಥಿರಮ್‌, ಝೈನೆಬ್‌, ಝಿರಮ್‌.

ಮಾವು ಮಾಗಿಸಲು ಬಂದಿದೆ ಪರಿಣಾಮಕಾರಿ ಸಾವಯವ ವಿಧಾನ!

ದೇಶಾದ್ಯಂತ ಆತಂಕ ಸೃಷ್ಟಿಸಿರುವ ಮಿಡತೆಗಳ ನಾಶಕ್ಕೆ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚಿಸಿರುವ ಕೀಟನಾಶಕಗಳಲ್ಲಿ ಇದೀಗ ನಿಷೇಧದ ಪಟ್ಟಿಯಲ್ಲಿರುವ ಕ್ರಿಮಿನಾಶಕಗಳೇ ಅಗ್ರ ಸ್ಥಾನದಲ್ಲಿವೆ. ಮೆಲಾಥಿಯನ್‌, ಡೆಲ್ಟಾಮೆಥ್ರಿನ್‌, ಕ್ಲೋರೋಫೆರಿಫಾಸ್‌, ಲಾಂಬ್ಡಾ ಸೈಹಾಲೋಥ್ರಿನ್‌, ಫಿಪ್ರೋನಿಲ್‌, ಬ್ಯಾಂಡಿಯೋಕಾರ್ಬ್‌ ಎಂಬ 6 ವಿಧದ ಕೀಟನಾಶಕಗಳ ಬಳಕೆಗೆ ಸೂಚಿಸಲಾಗಿದ್ದು, ಇದರಲ್ಲಿ ಮೊದಲ ಮೂರು ನಿಷೇಧದ ಪ್ರಸ್ತಾವನೆಯಲ್ಲಿದೆ.

ಎಲ್ಲ ಕೀಟನಾಶಕಗಳು ಸಕಲ ಜೀವಿಗಳಿಗೂ ಅಪಾಯಕಾರಿ. ಹಾಗಾಗಿ ಕೀಟನಾಶಕಕ್ಕೆ ರಾಸಾಯನಿಕ ಬಳಕೆ ಕಡಿಮೆ ಜೈವಿಕ ಉತ್ಪನ್ನ ಬಳಕೆ ಹೆಚ್ಚಿಸುವ ಉದ್ದೇಶ ನಿಷೇಧದ ಹಿಂದಿದೆ. ಆದರೆ ಅಗ್ಗದ ದರದ ಈ ದೇಸಿ ರಾಸಾಯನಿಕ ನಿಷೇಧಿಸಿ ವಿದೇಶಿ ಕಂಪನಿಗಳಿಗೆ ಮಣೆ ಹಾಕಿದರೆ ದುಬಾರಿ ಸಾಧ್ಯತೆ ಹೆಚ್ಚಿದೆ. ದೇಸಿ ಉತ್ಪಾದನೆಗೆ ಹೊಡೆತ ಬೀಳಲಿದೆ. ವಿದೇಶಿ ಕಂಪನಿಗಳ ಪಾರಮ್ಯ ಸಾಧಿಸುತ್ತವೆ. ಪರ್ಯಾಯವಾಗಿ ರೈತರು ಅನಿವಾರ್ಯವಾದ ಕೀಟನಾಶಕಗಳಿಗೆ ದುಬಾರಿ ಬೆಲೆಯ ಔಷಧಿಗಳಿಗೆ ಮೊರೆ ಹೋಗಬೇಕಾಗುತ್ತದೆ.

ಕೋಲಾರದ ರೈತನಿಂದ ಹೈಟೆಕ್‌ ಕೃಷಿ: ಮಾರುಕಟ್ಟೆ, ವಹಿವಾಟು ಇಲ್ಲದೆ ಸಂಕಷ್ಟ

ಒಂದೆಡೆ ಈಗ ಕಂಡುಬಂದಿರುವ ಮಿಡತೆಗಳ ಹತ್ಯೆಗೆ ಈ ಕೀಟನಾಶಕಗಳನ್ನೇ ಬಳಸುವಂತೆ ಸೂಚಿಸುತ್ತ, ಇನ್ನೊಂದೆಡೆ ಇವುಗಳ ನಿಷೇಧಕ್ಕೆ ಪ್ರಸ್ತಾವನೆ ಸಲ್ಲಿಸುತ್ತ ಕೇಂದ್ರ ಸರಕಾರ ದ್ವಂದ್ವ ನಿಲುವು ವ್ಯಕ್ತಪಡಿಸುತ್ತಿದೆ. ನಿಷೇಧ ಪ್ರಸ್ತಾವನೆಗೆ ನಾವು ಆಕ್ಷೇಪಣೆ ಸಲ್ಲಿಸಲಿದ್ದೇವೆ.

- ಸಿದ್ದಪ್ಪ ರೆಡ್ಡಿ, ಅಧ್ಯಕ್ಷರು, ಕರ್ನಾಟಕ ಕೀಟನಾಶಕ ಉತ್ಪಾದಕರ ಸಂಘ(ಕೆಪಿಎಂಎ)

ಜನರಿಕ್‌ ಕೀಟನಾಶಕಗಳ ನಿಷೇಧ ಮಾಡಿದರೆ ಹೊಸ ಉತ್ಪನ್ನಗಳಿಗೆ ಒಗ್ಗಿಕೊಳ್ಳಲು ರೈತರಿಗೆ ಒಂದಷ್ಟು ಕಾಲಾವಕಾಶ ಬೇಕಾಗಬಹುದು. ಆದರೆ ಭವಿಷ್ಯದ ದೃಷ್ಟಿಯಿಂದ ಗಮನಿಸಿದರೆ ಕೀಟನಾಶಕಗಳ ನಿಷೇಧ ಉತ್ತಮ ನಿರ್ಧಾರ.

- ವೆಂಕಟರಾಮ ರೆಡ್ಡಿ ಪಾಟೀಲ್‌, ಅಪರ ಕೃಷಿ ನಿರ್ದೇಶಕರು

ಆಯ್ದ ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ನಿರ್ಧಾರ ಮಾಡಿದೆ. ಸದ್ಯ ಈ ಕುರಿತ ಪ್ರಸ್ತಾವನೆ ಸಾರ್ವಜನಿಕ ಡೊಮೈನ್‌ನಲ್ಲಿದ್ದು, ಅಭಿಪ್ರಾಯ ಹಾಗೂ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ.

- ಡಿ.ವಿ. ಸದಾನಂದಗೌಡ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು



from India & World News in Kannada | VK Polls https://ift.tt/3chNaGF

ಸಚಿವರನ್ನು ಮೆಚ್ಚಿಸುವ ಭರದಲ್ಲಿ ಬಡ ಮಹಿಳೆ ಕಾಲಿಗೆ ಬಿದ್ದರೂ ಚಿಕಿತ್ಸೆ ನೀಡದ ವೈದ್ಯರು..!

ಅಲಿಗಢ (): ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಾರಥ್ಯದ ಉತ್ತರ ಪ್ರದೇಶ ಸರ್ಕಾರದ ವೈದ್ಯಕೀಯ ಸಚಿವ ಅತುಲ್‌ ಗಾರ್ಗ್‌, ಅಲಿಗಢದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ, ಮಹಿಳೆಯೊಬ್ಬರು ಸಚಿವರ ಕಾಲಿಗೆ ಬಿದ್ದ ವಿಡಿಯೋ, ಇದೀಗ ಭಾರೀ ವೈರಲ್ ಆಗಿದೆ. ಸಚಿವರ ಕಾಲಿಗೆ ಬಿದ್ದ ಮಹಿಳೆಯ ತಾಯಿ ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎನ್ನಲಾಗಿದೆ. ಆದ್ರೆ, ಆಕೆಗೆ ಚಿಕಿತ್ಸೆ ನೀಡಿರಲಿಲ್ಲ. ಹೀಗಾಗಿ, ಚಿಕಿತ್ಸೆ ನೀಡುವಂತೆ ವೈದ್ಯರಿಗೆ ತಾಕೀತು ಮಾಡಿ ಎಂದು ಆ ಬಡ ಸಚಿವರ ಕಾಲಿಗೆ ಬಿದ್ದಿದ್ದಾಳೆ. ತುರ್ತು ಚಿಕಿತ್ಸೆಗಾಗಿ ವೃದ್ಧ ಮಹಿಳೆಯನ್ನು ಕರೆತರಲಾಗಿತ್ತು. ಆದ್ರೆ, ಸಚಿವರು ಬರುವ ಕಾರಣದಿಂದಾಗಿ ಆಂಬುಲೆನ್ಸ್‌ನಲ್ಲೇ ವೃದ್ಧೆಯನ್ನು ನರಳಲು ಬಿಟ್ಟಿದ್ದ ವೈದ್ಯರು ಹಾಗೂ ಸಿಬ್ಬಂದಿ, ಸಚಿವರ ಹಿಂದೆ ಮುಂದೆ ಓಡಾಡುತ್ತಾ, ಅವರನ್ನು ಸ್ವಾಗತಿಸಿ, ಸತ್ಕರಿಸುವುದರಲ್ಲೇ ಬ್ಯುಸಿ ಆಗಿದ್ದರು. ಇದರಿಂದ ಆತಂಕಗೊಂಡ ಮಹಿಳೆ, ತಮ್ಮ ತಾಯಿಗೆ ಏನಾದ್ರೂ ಆಗಬಹುದು ಎಂಬ ಭಯದಿಂದ ಸಚಿವರ ಕಾಲಿಗೆ ಬಿದ್ದು, ತುರ್ತು ಚಿಕಿತ್ಸೆಗೆ ಆದೇಶ ನೀಡುವಂತೆ ಮನವಿ ಮಾಡಿದ್ದರು. ತೀವ್ರವಾಗಿ ಗಾಯಗೊಂಡು ರಕ್ತಸ್ರಾವಕ್ಕೆ ತುತ್ತಾಗಿದ್ದ ವೃದ್ಧೆ, ಆಂಬುಲೆನ್ಸ್‌ನಲ್ಲೇ ಗಂಟೆಗಟ್ಟಲೆ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳೋದಾಗಿ ಸಚಿವರು ಭರವಸೆ ನೀಡಿದ್ದ ಬೆನ್ನಲ್ಲೇ, ಪಂಡಿತ್ ದೀನ್ ದಯಾಳ್ ಉಪಾಧ್ಯ ಆಸ್ಪತ್ರೆಯ ಆಡಳಿತ ಮಂಡಳಿ, ಅಲ್ಲಿನ ವೈದ್ಯಾಧಿಕಾರ ಡಾ. ಮೊಹಮ್ಮದ್ ಇಸ್ಲಾಂ ವಿರುದ್ಧ ತುರ್ತು ಕ್ರಮ ಕೈಗೊಂಡಿದೆ. ಸಚಿವರು ಬರುವ ವೇಳೆಯಲ್ಲೂ ಅಲ್ಲಿನ ವೈದ್ಯರು ಏಕೆ ಇಷ್ಟೊಂದು ನಿರ್ಲಕ್ಷ್ಯ ವಹಿಸಿದರು ಅನ್ನೋದೇ ಅರಿವಿಗೆ ಬರುತ್ತಿಲ್ಲ ಎಂದು ಹೇಳಿದ್ದಾರೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಬಿ.ಕೆ. ಗುಪ್ತಾ. ಈ ಎಡವಟ್ಟಿನ ಸರಣಿ ಇಷ್ಟಕ್ಕೇ ಮುಗಿದಿಲ್ಲ. ರೋಗಿಯ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುವಲ್ಲೂ ಅಧ್ವಾನ ನಡೆದಿದೆ. ಪ್ಲಾಸ್ಟರ್ ಕೂಡಾ ಸರಿಯಾಗಿ ಹಾಕದ ಕಾರಣ, ಅಲ್ಲಿನ ಮತ್ತೊಬ್ಬ ವೈದ್ಯ ಡಾ. ಧರ್ಮೇಂದ್ರ ತೋಮರ್ ಎಂಬುವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗಿದೆ.


from India & World News in Kannada | VK Polls https://ift.tt/2XOIHWH

ಭಾರೀ ಸಿಡಿಲು ಬಡಿದು ವಿಶ್ವ ಪ್ರಸಿದ್ಧ ಪ್ರೇಮ ಸ್ಮಾರಕ ತಾಜ್‌ಮಹಲ್‌ಗೆ ಹಾನಿ

ಆಗ್ರಾ (ಉತ್ತರ ಪ್ರದೇಶ): ಶುಕ್ರವಾರ ರಾತ್ರಿ ಬೀಸಿದ ಭಾರೀ ಗಾಳಿ ಹಾಗೂ ಸಿಡಿಲಿನಿಂದ ವಿಶ್ವ ಪ್ರಸಿದ್ಧ ಸ್ಮಾರಕ ತಾಜ್‌ಮಹಲ್‌ಗೆ ಹಾನಿಯುಂಟಾಗಿದೆ. ಹಾಗೂ ಭಾರೀ ಗಾಳಿಗೆ ಕಬ್ಬಿಣದ ಪೈಪ್‌ಗಳು ಉರುಳಿ ಬಿದ್ದಿರುವುದರಿಂದ ಸಣ್ಣದಾಗಿ ಮಾರ್ಬಲ್‌ಗಳು ಕಿತ್ತುಬಂದಿದ್ದು ಮತ್ತು ಯಮುನಾ ನದಿ ತಟದಲ್ಲಿರುವ ಕೆಂಪು ಮರಳುಕಲ್ಲುಗಳು ಮುರಿದಿವೆ. ಇದನ್ನೆಲ್ಲಾ ಸರಿಪಡಿಸಲು ಸುಮಾರು 20 ಲಕ್ಷ ರೂ. ಖರ್ಚಾಗಲಿದೆ ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳ ಪ್ರಕಾರ, ಕಬ್ಬಿಣದ ಪೈಪ್‌ಗಳನ್ನು ಸ್ವಚ್ಛತೆಗಾಗಿ ಬಳಸಲಾಗುತ್ತಿತ್ತು. ಆದರೆ, ಲಾಕ್‌ಡೌನ್‌ ಕಾರಣದಿಂದ ಕೆಲಸ ನಡೆದಿದ್ದಲ್ಲ ಎಂದಿದ್ದಾರೆ. ಇನ್ನು, ಭಾರೀ ಗಾಳಿಯಿಂದ ಮೇಲೆ ಇಟ್ಟಿದ್ದ ಕಬ್ಬಿಣದ ಪೈಪುಗಳು ಬಿದ್ದಿದ್ದರಿಂದ 9 ಅಡಿ ಉದ್ದದ ಮಾರ್ಬಲ್‌ ಮತ್ತು 6 ಅಡಿ ಉದ್ದದ ಕೆಂಪು ಮರಳುಗಲ್ಲಿನ ಎರಡು ಪ್ಯಾನೆಲ್‌ಗಳಿಗೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪುರಾತತ್ವ ಇಲಾಖೆಯ ನೂತನ ನಿರ್ದೇಶಕಿ ವಿ ವಿದ್ಯಾವತಿ ಶನಿವಾರ ಸ್ಮಾರಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭಾರೀ ಗಾಳಿಗೆ ತಾಜ್‌ಮಹಲ್‌ ಸುತ್ತಲಿನ 12ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಪಶ್ಚಿಮದಲ್ಲಿರುವ ಕಟ್ಟಿಗೆಯ ಮುಖ್ಯದ್ವಾರಕ್ಕೂ ಕೂಡ ಭಾರೀ ಗಾಳಿಯಿಂದ ಹಾನಿಯುಂಟಾಗಿರುವುದು ತಿಳಿದುಬಂದಿದೆ. ಗಂಟೆಗೆ 124 ಕಿಮೀ ವೇಗದಲ್ಲಿ ಬೀಸುತ್ತಿದ್ದ ಭಾರೀ ಗಾಳಿಯಿಂದ ಟರ್ನ್ಸ್‌ಟೈಲ್‌ ಬಾಗಿಲು ಕೂಡ ಮುರಿದಿದೆ. ಪಶ್ಚಿಮ ದ್ವಾರದ ಪ್ರವೇಶದಲ್ಲಿದ್ದ ಲೋಹ ಶೋಧಕ ಯಂತ್ರಗಳು ಸಹ ಭಾರೀ ಗಾಳಿಗೆ ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಅಂದಾಜಿನಂತೆ ರೇಲಿಂಗ್‌ಗಳು, ಫಾಲ್ಸ್‌ ಸೀಲಿಂಗ್‌, ಮರದ ದ್ವಾರ ಮತ್ತಿತರ ಹಾನಿಗೀಡಾದ ಪ್ರದೇಶಗಳ ದುರಸ್ಥಿಗೆ 20 ಲಕ್ಷ ರೂ. ಖರ್ಚಾಗಬಹುದು ಎಂದು ಆಗ್ರಾ ವಿಭಾಗದ ಮುಖ್ಯ ಪುರಾತತ್ವಶಾಸ್ತ್ರಜ್ಞ ಹೇಳಿದ್ದಾರೆ. ಇನ್ನು, ಮಾರ್ಬಲ್‌ಗಳು ಹಾಗೂ ಕೆಂಪು ಮರಳುಗಲ್ಲುಗಳನ್ನು ರಾಜಸ್ಥಾನದಿಂದ ತರಿಸಬೇಕಾಗಿದ್ದು, ತಿಂಗಳೊಳಗೆ ದುರಸ್ಥಿ ಕಾರ್ಯ ಪೂರ್ಣಗೊಳ್ಳಲಿದೆ ಎಂದಿದ್ದಾರೆ. ಶುಕ್ರವಾರ ರಾತ್ರಿ ಬೀಸಿದ ಭಾರಿ ಗಾಳಿ ಹಾಗೂ ಸಿಡಿಲಿಗೆ ಆಗ್ರಾದಲ್ಲಿ ಕನಿಷ್ಠ ಮೂರು ಜನ ಸಾವನ್ನಪ್ಪಿದ್ದಾರೆ. ಮರಗಳು ಧರೆಗುರುಳಿದ್ದರಿಂದ ಅನೇಕ ವಾಹನಗಳು ಜಖಂ ಆಗಿವೆ. 20ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಇನ್ನು, ಆಗ್ರಾದ ಆಲ್‌ಬಾಟಿಯಾ ಪ್ರದೇಶದಲ್ಲಿ ಟೆಲಿಕಾಂ ಟವರ್‌ ನೆಲಕ್ಕಪ್ಪಳಿಸಿದ್ದರೆ, ಬಹಳಷ್ಟು ಮರಗಳು ಬಿದ್ದಿರುವುದರಿಂದ ಬಯಾನಾ ರೈಲು ಮಾರ್ಗ ಸ್ಥಗಿತವಾಗಿದೆ.


from India & World News in Kannada | VK Polls https://ift.tt/2zLn15L

ಚೀನಾದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ: ಕುತೂಹಲ ಮೂಡಿಸಿದ ರಾಜನಾಥ್ ಹೇಳಿಕೆ!

ಗಡಿ ಕ್ಯಾತೆ ತೆಗೆದು ಲಡಾಖ್‌ನಲ್ಲಿ ಸಮಸ್ಯೆ ಸೃಷ್ಟಿಸಿರುವ ಚೀನಾದೊಂದಿಗೆ ಭಾರತ ನಿರ್ದಿಷ್ಟ ಯೋಜನೆಗಳೊಂದಿಗೆ ವ್ಯವಹರಿಸುತ್ತಿದೆ. ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳಿಗೆ ಮಹತ್ವ ನೀಡಿರುವ ಭಾರತ, ಇವುಗಳ ಆಧಾರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ಇಟ್ಟುಕೊಂಡಿದೆ. ಚೀನಾದೊಂದಿಗೆ ಗಡಿ ಸಮಸ್ಯೆ ಆರಂಭವಾದಾಗಿನಿಂದಲೂ ಸಂಯಮದಿಂದಲೇ ವರ್ತಿಸುತ್ತಿರುವ ಭಾರತ, ಗಡಿ ಸುರಕ್ಷತೆಗೆ ಒತ್ತು ನೀಡುವುದರ ಜೊತೆಗೆ ಚೀನಾದೊಂದಿಗೆ ರಾಜತಾಂತ್ರಿಕ ಮಾತುಕತೆಗಳಿಗೆ ಹೆಚ್ಚಿನ ಮಹತ್ವ ನೀಡಿದೆ. ಗಡಿ ಸಮಸ್ಯೆಯನ್ನು ಶಾಂತಿಯುತವಾಗಿಯೇ ಬಗೆಹರಿಸುವ ಇರಾದೆ ಹೊಂದಿರುವ ಭಾರತ, ದ್ವಿಪಕ್ಷೀಯ ಮಾತುಕತೆಗಳ ಮೂಲಕವೇ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಮತ್ತೊಂದೆಡೆ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೈನ್ಯ ಜಮಾವಣೆಗೊಳಿಸಿರುವ ಚೀನಾ, ರಾಜತಾಂತ್ರಿಕ ಮಾತುಕತೆ ನಡೆಸುತ್ತಿದೆಯಾದರೂ, ಗಡಿಯಿಂದ ಸೇನೆಯನ್ನು ಹಿಂಪಡೆಯುವ ಕುರಿತು ಸ್ಪಷ್ಟನೆ ನೀಡಿಲ್ಲ. ಈ ಮಧ್ಯೆ ಚೀನಾದೊಂದಿಗೆ ಮಿಲಿಟರಿ ಹಾಗೂ ರಾಜತಾಂತ್ರಿಕ ಮತುಕತೆಗಳು ಮುಂದುವರೆದಿವೆ ಎಂದು ಹೇಳಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗಡಿ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಭಾರತ-ಚೀನಾ ನಡುವಿನ ಗಡಿ ಸಮಸ್ಯೆ ಕುರಿತಾದ ಇದುವರೆಗಿನ ಬೆಳವಣಿಗೆಗಳನ್ನು ಗಮನಿಸುವುದಾದರೆ..

ಭಾರತ-ಚೀನಾ ಗಡಿ ಸಮಸ್ಯೆ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗಡಿ ಸಮಸ್ಯೆ ಕುರಿತು ಚೀನಾದೊಂದಿಗೆ ಮಿಲಿಟರಿ ಹಾಗೂ ರಾಜತಾಂತ್ರಿಕ ಮಾತುಕತೆಗಳು ಮುಂದುವರೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಗಡಿಯಲ್ಲಿ ಉಭಯ ಸೇನೆಯ ಹಿರಿಯ ಸೇನಾಧಿಕಾರಿಗಳು ನಿರಂತರವಾಗಿ ಮಾತುಕತೆಯಲ್ಲಿ ತೊಡಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರವಹಿಸಿದ್ದಾರೆ. ಇತ್ತ ರಾಜತಾಂತ್ರಿಕ ಶಾಂತಿ ಮಾತುಕತೆಗಳೂ ವೇಗ ಪಡೆದುಕೊಂಡಿವೆ ಎಂದು ರಾಜನಾಥ್ ಹೇಳಿದ್ದಾರೆ.

ಚೀನಾದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ: ರಾಜನಾಥ್ ಸಿಂಗ್!

ಅಲ್ಲದೇ ಚೀನಾದೊಂದಿಗಿನ ಗಡಿ ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥವಾಗಲಿದ್ದು, ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಲಿದೆ ಎಂದು ರಾಜನಾಥ್ ಭರವಸೆ ವ್ಯಕ್ತಪಡಿಸಿದ್ದಾರೆ.

ಇನ್ನು ಭಾರತ-ಚೀನಾ ನಡುವೆ ಉದ್ಭವವಾಗಿರುವ ಗಡಿ ಬಿಕ್ಕಟ್ಟನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಟ್ರಂಪ್ ಮಧ್ಯಸ್ಥಿಕೆ ಆಹ್ವಾನವನ್ನು ಭಾರತ-ಚೀನಾ ಎರಡೂ ರಾಷ್ಟ್ರಗಳೂ ತಿರಸ್ಕರಿಸಿವೆ.

ನಮ್ಮಿಮ್ಮರ ನಡುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಾವಿಬ್ಬರೂ ಸಶಕ್ತರಾಗಿದ್ದೇವೆ ಎಂದು ಚೀನಾ ಖಡಾಖಂಡಿತವಾಗಿ ಟ್ರಂಪ್ ಮಧ್ಯಸ್ಥಿಕೆ ಆಫರ್‌ನ್ನು ತಿರಸ್ಕರಿಸಿದೆ.

ಸಮಸ್ಯೆ ನಮ್ಮ ನಡುವೆ ಇರುವಾಗ ನೀವೇಕೆ ಬಗೆಹರಿಸುವಿರಿ?: ಟ್ರಂಪ್ ಮಧ್ಯಸ್ಥಿಕೆ ಆಫರ್ ತಿರಸ್ಕರಿಸಿದ ಚೀನಾ!

ಈ ವಿಚಾರವಾಗಿ ತುಸು ನಯವಾಗಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದ್ವಿಪಕ್ಷೀಯ ಮಾತುಕತೆಗಳ ಮೂಲಕವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗುವುದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಸ್ಪಷ್ಟಪಡಿಸಿರುವುದಾಗಿ ಹೇಳಿದ್ದಾರೆ.

ಸದ್ಯ ಉದ್ಭವವಾಗಿರುವ ಗಡಿ ಸಮಸ್ಯೆಯನ್ನು ರಾಜತಾಂತ್ರಿಕ ಶಾಂತಿ ಮಾತುಕತೆಗಳ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂಬ ಸತ್ಯವನ್ನು ಎರಡೂ ರಾಷ್ಟ್ರಗಳು ಚೆನ್ನಾಗಿ ಬಲ್ಲವು. ಇದೇ ಕಾರಣಕ್ಕೆ ಭಾರತದ ಶಾಂತಿ ಮಾತುಕತೆಗಳಿಗೆ ಚೀನಾ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.

ಒಂಟಿಯಾಗುತ್ತಿದೆ ಚೀನಾ: ಸೈಲೆಂಟಾಗಿಯೇ ಅಮೆರಿಕ ಬೆಂಬಲ ಗಿಟ್ಟಿಸಿಕೊಂಡ ಮೋದಿ!

ಆದರೆ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿರುವ ಸೈನ್ಯವನ್ನು ವಾಪಸ್ ಪಡೆಯುವ ಕುರಿತು ಚೀನಾ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದೇ ಕಾರಣಕ್ಕೆ ಭಾರತ ಕೂಡ ಗಡಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ. ಆದರೆ ಮುಂದಿನ ಮಾತುಕತೆಗಳಲ್ಲಿ ಸೈನ್ಯವನ್ನು ವಾಪಸ್ ಕರೆಸಿಕೊಳ್ಳುವ ಕುರಿತು ಮಾತುಕತೆಗಳು ನಡೆದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಭಾರತ-ಚೀನಾ ನಡುವಿನ ಗಡಿ ಸಮಸ್ಯೆ ಉಲ್ಬಣಗೊಂಡ ದಿನದಿಂದ, ಭಾರತ ಈ ಕುರಿತು ನೀಡುತ್ತಿರುವ ಎಚ್ಚರಿಕೆಯ ಹೇಳಿಕೆಗಳು ವಿಶ್ವದ ಗಮನ ಸೆಳೆದಿವೆ. ಪ್ರಮುಖವಾಗಿ ಗಡಿಯಲ್ಲಿ ಚೀನಿ ಸೈನಿಕರ ಉದ್ರೇಕಕಾರಿ ವರ್ತನೆಯ ಹೊರತಾಗಿಯೂ ಭಾರತೀಯ ಸೈನಿಕರು ತಮ್ಮ ಸಂಯಮವನ್ನು ಕಾಪಾಡಿಕೊಂಡಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

'ಗಡಿ'ಬಿಡಿ ಚೀನಾಗೆ ಬೇಡುವ ಪರಿಸ್ಥಿತಿ ಬರಲಿದೆ: ಮೋದಿ ಸಭೆಯಲ್ಲಿ ಫೈನಲ್ ಸ್ಟ್ಯಾಟರ್ಜಿ!

ಸೇನೆಯಂತೆ ಸರ್ಕಾರ ಕೂಡ ಸಂಯಮದ ವರ್ತನೆಯನ್ನೇ ತೋರುತ್ತಿದ್ದು, ರಾಜತಾಂತ್ರಿಕ ಶಾಂತಿ ಮಾತುಕತೆಗಳಿಗೆ ಮನ್ನಣೆ ನೀಡಿದೆ. ಆದರೆ ಯಾವುದೇ ಕಾರಣಕ್ಕೆ ಭಾರತದ ಸಾರ್ವಭೌಮತ್ವ ಮತ್ತು ಗಡಿ ಸುರಕ್ಷತೆಗೆ ಕಿಂಚಿತ್ತೂ ಧಕ್ಕೆ ಬಾರದಂತೆ ಸರ್ಕಾರ ಈ ನಿಟ್ಟಿನಲ್ಲಿ ಮುಂದುವರೆಯುತ್ತಿರುವುದು ಸ್ಪಷ್ಟ.



from India & World News in Kannada | VK Polls https://vijaykarnataka.com/news/india/defence-minister-rajnath-singh-assures-both-military-and-diplomatic-talks-with-china-will-be-fruitful/articleshow/76118200.cms

ದೇವಸ್ಥಾನ ತೆರೆಯುವುದರಲ್ಲಿ ಅರ್ಥವಿಲ್ಲ ಎಂದ ಆಕಾಶ್‌ ಛೋಪ್ರಗೆ ಚಾಡಿಸಿದ ಅಭಿಮಾನಿಗಳು!

ಹೊಸದಿಲ್ಲಿ: ಕಳೆದ ಮಾರ್ಚ್‌ನಲ್ಲಿ ಬರ ಸಿಡಿಲಿನಂತೆ ಭಾರತಕ್ಕೆ ಕೊರೊನಾ ವೈರಸ್‌ ಅಪ್ಪಳಿಸಿದ್ದು, ಕೋವಿಡ್‌-19 ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಭಾರತ ಸರಕಾರ ವಿವಿಧ ಹಂತಗಳಲ್ಲಿ ಲಾಕ್‌ಡೌನ್‌ ಜಾರಿಗೆ ತಂದಿತ್ತು. ಇದೀಗ ವೈರಸ್‌ನಿಂದಾಗಿ ದೇಶದ ಆರ್ಥಿಕತೆಗೆ ಇನ್ನಿಲ್ಲದ ಹೊಡೆತ ಕೂಡ ಬಿದ್ದಿರುವ ಕಾರಣ, ಹಂತ ಹಂತವಾಗಿ ಜನಜೀವನವನ್ನು ಯಥಾಸ್ಥಿತಿಗೆ ತರಲು ಕಠಿಣ ನಿಯಮಗಳೊಂದಿಗೆ 'ಅನ್‌ಲಾಕ್‌' ಅಸ್ತ್ರ ಬಳಕೆ ಮಾಡಲು ಮುಂದಾಗಿದೆ. ಮೇ 31ಕ್ಕೆ ಲಾಕ್‌ಡೌನ್‌ 4.0 ಅಂತ್ಯಗೊಳ್ಳಲಿದ್ದು, ಜೂನ್‌ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ಕೇಂದ್ರ ಗೃಹಸಚಿವಾಲಯ ಘೋಷಿಸಿದೆ. ಇದರ ಪ್ರಕಾರ ಇನ್ನು ಮುಂದೆ ಲಾಕ್‌ಡೌನಮ್‌ ನಿಯಮಗಳು ಕೇವಲ ಕಂಟೈನ್ಮೆಂಟ್ ವಯಲಗಳಲ್ಲಿ ಮಾತ್ರ ಜೂನ್‌ 30ರವರೆಗೆ ಮುಂದುವರಿಯಲಿದೆ. ಕಂಟೈನ್ಮೆಂಟ್‌ ಅಲ್ಲದೇ ಇರುವ ವಲಯಗಳಲ್ಲಿ ಜೂನ್‌ 8ರ ಬಳಿಕ ಜನಜೀವನ ಹಂತ ಹಂತವಾಗಿ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಯಥಾಸ್ಥಿತಿಗೆ ಮರಳಲಿದೆ ಎಂದು ಗೃಹಸಚಿವಾಲಯ ಹೇಳಿದೆ.ಟ್ವಿಟರ್‌ ಖಾತೆಗೆ ಕನ್ನ, ಸೋಷಿಯಲ್‌ ಮೀಡಿಯಾಗೆ ಗುಡ್ ‌ಬೈ ಹೇಳಿದ ಪಾಕ್‌ನ ಮಾಜಿ ನಾಯಕ!"ಧಾರ್ಮಿಕ ಸ್ಥಳಗಳು, ಪ್ರಾರ್ಥನಾ ಮಂದಿರಗಳಿಗೆ ಸಾರ್ವಜನಿಕರು ಪ್ರವೇಶಿಸಬಹುದು. ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳು ಮರಳಿ ಕಾರ್ಯಾಚರಣೆ ಆರಂಭಿಸಲಿವೆ. ಜೂನ್‌ 8ರ ಬಳಿಕ ಮಾಲ್‌ಗಳು ಕೂಡ ತೆರೆಯಲಾಗುತ್ತವೆ. ಇಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸರಕಾರ ಶೀಘ್ರವೇ ಸರಕಾರ ಬಿಡುಗಡೆ ಮಾಡಲಿದೆ," ಎಂದು ಗೃಹಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ದೇವರು ಎಲ್ಲೆಡೆ ಇದ್ದಾನೆ ಅಲ್ಲವೆ: ಆಕಾಶ್‌ ಛೋಪ್ರ: ಟ್ವಿಟರ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಟೀಮ್‌ ಇಂಡಿಯಾ ಮಾಜಿ ಆಟಗಾರ ಆಕಾಶ್‌ ಛೋಪ್ರ, ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ತೆರೆಯುವುದರಿಂದ ಹೆಚ್ಚಿನ ಜನರು ಒಟ್ಟಾಗಿ ಸೇರಿ ಸೋಂಕು ಹರಡುವ ಸಾಧ್ಯತೆ ಇದೆ. ಈ ನಿರ್ಧಾರ ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದರು. ಇದೇ ವೇಳೆ ಮಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯುವುದರಲ್ಲಿ ಅರ್ಥವಿದೆ. ಇದರಿಂದ ಆರ್ಥಿಕತೆ ಸುಧಾರಣೆಗೆ ನೆರವಾಗುತ್ತದೆ. ಆದರೆ ಧಾರ್ಮಿಕ ಸ್ಥಳಗಳನ್ನು ಮರಳಿ ಆರಂಭಿಸುವುದರಿಂದ ಆಗುವ ಪ್ರಯೋಜನವಾದರೂ ಏನು? ಎಂದು ಪ್ರಶ್ನಿಸಿ ಟ್ವೀಟ್‌ ಮಾಡಿದ್ದರು."ಮಾಲ್‌ಗಳು, ರೆಸ್ಟೋರೆಂಟ್‌ ಮತ್ತು ಮೊದಲಾದುವುಗಳಿಂದ ಹಣಕಾಸಿನ ವ್ಯವಹಾರ ಸುಧಾರಣೆ ಆಗಲಿದೆ. ಆದ್ದರಿಂದಲೇ ಅವುಗಳನ್ನು ಶಾಶ್ವತವಾಗಿ ಮುಚ್ಚಲು ಸಾಧ್ಯವಿಲ್ಲ. ಆದರೆ ಪ್ರಾರ್ಥನಾ ಸ್ಥಳಗಳನ್ನು ಸಾರ್ವಜನಿಕರಿಗೆ ಮುಕ್ತವನ್ನಾಗಿಸಿರುವುದು ಏಕೆ? ದೇವರು ಎಲ್ಲೆಡೆ ಇದ್ದಾನೆ ಅಲ್ಲವೆ??," ಎಂದು ಛೋಪ್ರ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.ಕೆ.ಎಲ್‌ ರಾಹುಲ್‌ ಅವರಿಂದ ಕೊರೊನಾ ವಾರಿಯರ್ಸ್‌ಗೆ 'ಪೂಮಾ ಶೂ' ಕೊಡುಗೆಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಹಾಗೂ ಜನಪ್ರಿಯ ಕಾಮೆಂಟೇಟರ್‌ ಆಗಿರುವ ಆಕಾಶ್‌ ಛೋಪ್ರಾ ಅವರ ಈ ಟ್ವೀಟ್‌ ಅಭಿಮಾನಿಗಳಿಗೆ ಬೇಸರ ತಂದಿದ್ದು, ಟ್ವಿಟರ್‌ನಲ್ಲಿ ಹಿಗ್ಗಾಮಗ್ಗ ಜಾಡಿಸಿ ದೇಶದ ಆರ್ಥಿಕತೆಗೆ ಧಾರ್ಮಿಕ ಸ್ಥಳ ಮತ್ತು ಪ್ರಾರ್ಥನಾ ಮಂದಿರಗಳಿಂದಲೂ ಸಾಕಷ್ಟು ನೆರವು ಲಭ್ಯವಾಗುತ್ತಿದೆ ಎಂಬುದರ ಸತ್ಯಾಂಶದ ಅರಿವು ಮೂಡಿಸಿದ್ದಾರೆ.ಧಾರ್ಮಿಕ ಸ್ಥಳಗಳು ಯಾವುದೇ ಕೈಗಾರಿಕೆಗಳಿಗೇನು ಕಡಿಮೆಯಿಲ್ಲ: ಆಕಾಶ್‌ ಅವರ ಟ್ವೀಟ್‌ಗೆ ಉತ್ತರಿಸಿರುವ ಅಭಿಮಾನಿಯೊಬ್ಬ ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರಾರ್ಥನಾ ಮಂದಿರಗಳು ಯಾವುದೇ ಕೈಗಾರಿಕೆಗಳಿಗೆ ಏನೂ ಕಡಿಮೆ ಇಲ್ಲ ಎಂದಿದ್ದಾನೆ. "ಸರ್‌, ಎಲ್ಲ ರೀತಿಯ ಗೌರವದೊಂದಿಗೆ ಹೇಳುವುದೇನೆಂದರೆ ಧಾರ್ಮವು ಯಾವುದೇ ಕೈಗಾರಿಕೆಗಿಂತ ಕಡಿಮೆಯೇನಿಲ್ಲ. ಇಲ್ಲಿ ಎಲ್ಲ ರೀತಿಯ ಕೆಲಸಗಾರರಿದ್ದಾರೆ, ವ್ಯಾಪಾರಿಗಳಿದ್ದಾರೆ ಮತ್ತು ಸರಕು ಸಾಗಣಿಕೆಯ ಕೆಲಸಗಾರರಿದ್ದಾರೆ. ಬಹುತೇಕ ಧಾರ್ಮಿಕ ಸ್ಥಳಗಳು ಉಳಿದಿರುವಿದೇ ಇವುಗಳಿಂದ. ಅವರು ಕೂಡ ಧಾರ್ಮಿಕ ಸ್ಥಳಗಳನ್ನೇ ಅವಲಂಬಿಸಿದ್ದಾರೆ ಕೂಡ. ಈ ಬಗ್ಗೆಯೂ ನಾವು ಆಲೋಚಿಸಬೇಕಾಗುತ್ತದೆ ಅಲ್ಲವೆ," ಎಂದು ಆಕಾಶ್‌ ಛೋಪ್ರಾ ಅವರನ್ನು ಟ್ಯಾಗ್‌ ಮಾಡಿದ್ದಾರೆ.ಇಂಗ್ಲೆಂಡ್‌ ಪ್ರವಾಸಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ ಕ್ರಿಕೆಟ್‌ ವೆಸ್ಟ್‌ ಇಂಡೀಸ್ಎಲ್ಲರಿಂದಲೂ ಆರ್ಥಿಕತೆಗೆ ಕೊಡುಗೆ ಲಭ್ಯವಾಗುತ್ತಿದೆ!: ಛೋಪ್ರಾ ಅವರ ಟ್ವೀಟ್‌ನಿಂದ ಅಭಿಮಾನಿಗಳ ಧಾರ್ಮಿಕ ಭಾವನೆಗೆ ಪೆಟ್ಟಾದಂತಿದ್ದು, ಒಬ್ಬಾತ ಆಕಾಶ್ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. "ಆಕಾಶ್‌ ನಿಮ್ಮಿಂದ ಈ ರೀತಿಯ ಏಕಮುಖವಾದ ಹೇಳಿಕೆಯನ್ನು ನಿರೀಕ್ಷಿಸರಲಿಲ್ಲ. ಮಂದಿರಗಳು ಆಫೀಸ್‌ ಮಾದರಿಯಲ್ಲಿ ಇಲ್ಲದೇ ಇರಬಹುದು. ಆದರೆ ಹಲವು ಕುಟುಂಬಗಳು ತಮ್ಮ ಜೀವನ ಸಲುವಾಗಿ ಮಂದಿರಗಳನ್ನೇ ಆಧಾರಿಸಿವೆ. ಹೂವು ಮಾರುವವರು, ಪ್ರಸಾದದ ಅಂಗಡಿಯವರು, ಪಂಡಿತರು ಹೀಗೆ ಎಲ್ಲರ ಜೀವನ ಇದ್ನನೇ ಆಧರಿಸಿದೆ. ಜೀವಿಸುತ್ತಿರುವ ಪ್ರತಿಯೊಬ್ಬರು ಕೂಡ ಭಾರತದ ಆರ್ಥಿಕತೆಗೆ ಕೊಡುಗೆ ಸಲ್ಲಿಸುತ್ತಿದ್ದಾನೆ," ಎಂದು ಜಾಡಿಸಿದ್ದಾರೆ.ಮಾಲ್‌ಗಳಿಂದ ಸೋಂಕು ಹರಡುವುದಿಲ್ಲವೆ?: ಮತ್ತೊಬ್ಬ ಅಭಿಮಾನಿ ಆಕಾಶ್‌ಗೆ ಹಲವು ಪ್ರಶ್ನೆಗಳ ಬೌನ್ಸರ್‌ಗಳನ್ನೇ ಎಸೆದಿದ್ದಾನೆ. "ಆಯ್ತು ಸರ್, ಹಾಗಿದ್ದರೆ ಮಾಲ್‌ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯುವುದೇಕೆ? ಎಲ್ಲವನ್ನೂ ಈಗ ಆನ್‌ ಲೈನ್‌ ಮೂಲಕ ಖರೀದಿಸಬಹುದಲ್ಲವೆ. ಹಾಗೆಯೆ ಬೇಕ್ಕಾದ ಆಹರ ಪದಾರ್ಥಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ಪಡೆಯಬಹುದು. ಸಿನಿಮಾ ಎಲ್ಲವೂ ಇಂದು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿವೆ. ಇನ್ನು ಧಾರ್ಮಿಕ ಸ್ಥಳಗಳನ್ನು ತೆರೆಯಬೇಕು ಏಕೆಂದರೆ ಅದು ನಮ್ಮ ಸಂಕೃತಿ. ಮಾಲ್‌ಗಳು ನಮ್ಮ ಸಂಸ್ಕೃತಿಯಲ್ಲ," ಎಂದು ಆಕಾಶ್‌ಗೆ ತಿಳಿಸಿಕೊಟ್ಟಿದ್ದಾರೆ.



from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XhSB3P

ಪರಿವಾರ,ತಳವಾರ, ಸಿದ್ದಿ ಸಮುದಾಯಗಳು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ, ರಾಜ್ಯ ಸರ್ಕಾರದ ಆದೇಶಕ್ಕೆ ಸಿದ್ದರಾಮಯ್ಯ ಮೆಚ್ಚುಗೆ

ಬೆಂಗಳೂರು: ಪರಿವಾರ,ತಳವಾರ, ಸಿದ್ದಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗೆಜೆಟ್‌ ನೋಟಿಫಿಕೇಷನ್ ಹೊರಡಿಸಿದೆ. ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ವಿರೋಧ ಪಕ್ಷದ ನಾಯಕ ಸರ್ಕಾರಕ್ಕೆ ವಿನಂತಿ ಮಾಡಿದ್ದರು. ಇನ್ನೇನು ಶಾಲೆ-ಕಾಲೇಜುಗಳು ಪ್ರಾರಂಭವಾಗಲಿವೆ, ಕೆಪಿಎಸ್‌ಸಿ ಮತ್ತಿತರ ಪ್ರಾಧಿಕಾರಗಳು ಉದ್ಯೋಗ ನೇಮಕಾತಿಗೆ ಅಧಿಸೂಚನೆ ಹೊರಡಿಸಿವೆ. ಪರಿವಾರ,ತಳವಾರ ಸಮುದಾಯಗಳು ಪರಿಶಿಷ್ಟ ಪಂಗಡದ ಮೀಸಲು ಸೌಲಭ್ಯ ಪಡೆಯಬೇಕಾದರೆ ಕೇಂದ್ರ ಸರ್ಕಾರದ ತೀರ್ಮಾನವನ್ನು ತಕ್ಷಣ ರಾಜ್ಯಪತ್ರದಲ್ಲಿ ಹೊರಡಿಸುವುದು ಅಗತ್ಯ ಎಂದು ಬಿಎಸ್‌ವೈಗೆ ಪತ್ರವನ್ನು ಬರೆದಿದ್ದರು. ಈ ಸಮುದಾಯಗಳು ಅತ್ಯಂತ ಹಿಂದುಳಿದ ಸ್ವರೂಪದವಾಗಿದ್ದು ಮೈಸೂರು, ಚಾಮರಾಜನಗರ, ಮಂಡ್ಯ ತುಮಕೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸ ಮಾಡುತ್ತಿದೆ. ಕೂಲಿ ಕೆಲಸ, ಸೌದೆ ಮಾರಾಟ, ಪಶುಸಂಗೊಪನೆ, ಗುಡಿ ಕೈಗಾರಿಕೆ ಮುಂತಾದವುಗಳ ಮೂಲಕ ಜೀವನ ನಡೆಸುತ್ತಿದೆ ಇವುಗಳ ಸ್ಪಷ್ಟವಾಗಿ ಬುಡಕಟ್ಟು ಸ್ವಭಾವವನ್ನು ಹೊಂದಿರುವುದು ಅಧ್ಯಯನಗಳಿಂದಲೂ ಸಾಬೀತಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಮಾನವ ಶಾಸ್ತ್ರ ವಿಭಾಗವು ಮಾಡಿದ ಜನಾಂಗೀಯ ಅಧ್ಯಯನವನ್ನು ಆಧರಿಸಿ ಪರಿವಾರ ಮತ್ತು ತಳವಾರ ಎಂಬ ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ ಹಂಗಡಗಳೆಂದು ಅಂಗೀಕರಿಸಿ ರಾಜಪತ್ರ ಹೊರಡಿಸಿದೆ. ಈ ಕುರಿತಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಎರಡು ತಿಂಗಳಾದರು ರಾಜ್ಯ ಸರ್ಕಾರ ತನ್ನ ರಾಜಪತ್ರದಲ್ಲಿ ಇದುವರೆಗೂ ಈ ವಿಷಯದ ಕುರಿತಾಗಿ ಆದೇಶ ಹೊರಡಿಸಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಇದೀಗ ರಾಜ್ಯ ಸರ್ಕಾರವೂ ಆದೇಶ ಹೊರಡಿಸಿದೆ. ಪರಿವಾರ,ತಳವಾರ, ಸಿದ್ದಿ ಸಮುದಾಯಗಳನ್ನು ವಿಳಂಬವಾಗಿಯಾದರೂ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ಆದೇಶ ಹೊರಡಿಸಿರುವ ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಗೆ ಧನ್ಯವಾದಗಳು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.


from India & World News in Kannada | VK Polls https://ift.tt/3diQDGh

ಗ್ರಾಪಂ ಎಲೆಕ್ಷನ್‌ ಮುಂದೂಡಿಕೆ: ಆಯೋಗದ ವಿರುದ್ಧ ಕೋರ್ಟ್‌ ಮೆಟ್ಟಿಲೇರಲು ನಿರ್ಧಾರ: ಎಚ್‌.ಕೆ.ಪಾಟೀಲ್‌

ಬೆಂಗಳೂರು: ಚುನಾವಣೆ ಮುಂದೂಡಿರುವ ಚುನಾವಣಾ ಆಯೋಗದ ನಡೆಗೆ ಅಸಮಾಧಾನ ವ್ಯಪ್ತಪಡಿಸಿದೆ. ಕೊರೊನಾ ವೈರಸ್‌ ಕಾರಣ ಹೇಳಿ ಚುನಾವಣೆ ಮುಂದೂಡಿಕೆ ಸರಿಯಲ್ಲ. ಎಲ್ಲದಕ್ಕೂ ಬಿಟ್ಟು ಎಲೆಕ್ಷನ್‌ಗೆ ಲಾಕ್‌ಡೌನ್‌ ನೆಪ ಹೇಳುವುದು ಸರಿಯೇ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಭಾನುವಾರ ಮಾತನಾಡಿದ ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಶಾಸಕ ಎಚ್‌.ಕೆ.ಪಾಟೀಲ್, ಕೋವಿಡ್-19 ನೆಪ ಇಟ್ಟುಕೊಂಡು ಚುನಾವಣೆ ಮುಂದೂಡುವುದು ಸರಿಯಲ್ಲ. ಬಸ್, ಕಾರು ಎಲ್ಲ ಓಡಾಡುತ್ತಿಲ್ಲವೇ..? ಲಾಕ್‌ಡೌನ್ ಎಂದು ಏನಾದ್ರೂ ಕಟ್ಟು ನಿಟ್ಟು ಇದೆಯೆ..? ಎಲ್ಲದಕ್ಕೂ ಬಿಟ್ಟು ಚುನಾವಣೆಗೆ ಲಾಕ್‌ಡೌನ್ ನೆಪ ಹೇಳುವುದು ಸರಿಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್‌ ಸದಸ್ಯ ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಬರುವುದಿಲ್ಲ. ಸಂವಿಧಾನದಲ್ಲಿ ಇದಕ್ಕೆಲ್ಲಾ ಅವಕಾಶವಿಲ್ಲ. ಅದಲ್ಲದೇ ಪಂಚಾಯತ್‌ ರಾಜ್‌ ಅಧಿನಿಯಮದಲ್ಲೂ ನಾಮ ನಿರ್ದೇಶನಕ್ಕೆ ಅವಕಾಶವಿಲ್ಲ. ಹೀಗಿದ್ರೂ ಚುನಾವಣೆಯನ್ನು ಮುಂದೂಡಲಾಗಿದೆ. ಇದು ಸಂವಿಧಾನ ಮತ್ತು ಕಾನೂನು ಬಾಹಿರ ಎಂದು ಕಿಡಿಕಾರಿದರು. ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಶೀಘ್ರದಲ್ಲೇ ಕೋರ್ಟ್ ಮೆಟ್ಟಿಲೇರುತ್ತೇವೆ. ಈ ಬಗ್ಗೆ ಈಗಾಗಲೇ ನಮ್ಮ ಪಕ್ಷದ ಮಟ್ಟದಲ್ಲಿ ತೀರ್ಮಾನ ಮಾಡಿದ್ದೇವೆ. ಕಾನೂನು ಹೋರಾಟ ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಮೇ 28ರಂದು ಆದೇಶ ಹೊರಡಿಸಿದ್ದ ಕೊರೊನಾ ಪರಿಸ್ಥಿತಿ ಹಿನ್ನೆಲೆ ಗ್ರಾಪಂ ಚುನಾವಣೆಯನ್ನು ಮುಂದೂಡುವುದಾಗಿ ತಿಳಿಸಿತ್ತು. ರಾಜ್ಯದಲ್ಲಿನ 6,025 ಗ್ರಾಮ ಪಂಚಾಯಿತಿಗಳ ಪೈಕಿ 2020ರ ಜೂನ್‌ನಿಂದ ಆಗಸ್ಟ್ವರೆಗೆ 5,800 ಗ್ರಾಪಂಗಳ ಅವಧಿ ಮುಗಿಯಲಿದ್ದು, ಚುನಾವಣೆ ನಡೆಸಬೇಕಿತ್ತು.


from India & World News in Kannada | VK Polls https://ift.tt/2TYiGmK

ರಾಜ್ಯದಲ್ಲಿರುವ ನಿಮ್ಮವರ ಕಾಳಜಿಗೆ ನಾವಿದ್ದೇವೆ: ಅಮೆರಿಕ ಕನ್ನಡಿಗರಿಗೆ ಅಶ್ವತ್ಥನಾರಾಯಣ ಅಭಯ

ಬೆಂಗಳೂರು: ಕೊರೊನಾ ಸಂಕಷ್ಟದಲ್ಲಿ ನಿಮ್ಮವರ ಕಾಳಜಿ ರಕ್ಷಣೆಗೆ ನಮ್ಮ ಸರ್ಕಾರ ಇದೆ. ಈ ಬಗ್ಗೆ ಯಾವುದೇ ಆತಂಕ ಬೇಡ. ಉತ್ತಮ ಆರೋಗ್ಯ ಸೇವೆ ನಮ್ಮಲ್ಲಿದೆ ಎಂದು ಅಮೆರಿಕದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ. 'ನಾವು ವಿಶ್ವ ಕನ್ನಡಿಗರು' ಅಮೆರಿಕದ ಕನ್ನಡ ಒಕ್ಕೂಟ ಆಯೋಜಿಸಿದ್ದ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಅಶ್ವತ್ಥನಾರಾಯಣ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಾವಿಕದ ಬಂಧುಗಳು ನೀಡಿರುವ 10 ಲಕ್ಷ ರೂ. ದೇಣಿಗೆಗೆ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. "ಕೊರೊನಾ ಲಾಕ್‌ಡೌನ್‌, ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಅಮೆರಿಕದಲ್ಲಿರುವ ನಮ್ಮವರಿಗೆ ಧೈರ್ಯ ಹೇಳಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವ ನಾವಿಕ ಬಳಗಕ್ಕೆ ಅಭಿನಂದನೆ. ವೀಡಿಯೋ ಕಾನ್ಫರೆನ್ಸ್ ಮೂಲಕ 'ನಾವಿಕ', ಅಮೆರಿಕನ್ನಡಿಗರ ಕೈ ಹಿಡಿಯುತ್ತಿದೆ. ಪರಿಣಿತರಿಂದ ಕೊರೊನಾ ಮಾಹಿತಿ, ಮುನ್ನೆಚ್ಚರಿಕಾ ಸಲಹೆಗಳನ್ನು ನೀಡುತ್ತಿರುವುದು ಒಳ್ಳೆಯ ಕೆಲಸ. ಕೊರೊನಾ ದೀರ್ಘಕಾಲ ನಮ್ಮೊಂದಿಗೆ ಇರುವುದರಿಂದ ಆರೋಗ್ಯ, ಆರ್ಥಿಕ ಸಮಸ್ಯೆ ಎದುರಿಸಲು ಪರಸ್ಪರ ಸಹಕಾರ ಬಹಳ ಮುಖ್ಯ. ಇಂಥ ಸನ್ನಿವೇಶದಲ್ಲಿ ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ. ಇಲ್ಲಿರುವ ನಿಮ್ಮ ಆಪ್ತರ ರಕ್ಷಣೆ ನಮ್ಮ ಜವಾಬ್ದಾರಿ,"ಎಂದು ಭರವಸೆಯ ಮಾತುಗಳನ್ನು ಆಡಿದರು. "ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೊರೊನಾ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಮೂಲಸೌಕರ್ಯದ ಕೊರತೆಯನ್ನು ಹಿಮ್ಮೆಟ್ಟಿ ಇಡೀ ವಿಶ್ವದ ಗಮನ ಸೆಳೆದಿರುವ ಭಾರತ, ಇಂದು ಇತರ ರಾಷ್ಟ್ರಗಳಿಗೆ ಪ್ರೇರಣೆ ನೀಡುವಂತಾಗಿದೆ. ನಿಮ್ಮ ಜನ್ಮಭೂಮಿ ಬಗ್ಗೆ ಹೆಮ್ಮೆ ಪಡುವಂತ ಕೆಲಸ ಆಗುತ್ತಿದೆ,"ಎಂದು ಹೇಳಿದರು. ಮೂಲಸೌಕರ್ಯ ಸುಧಾರಣೆ "ಲಾಕ್‌ಡೌನ್‌ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. ವೈರಾಣು ಪತ್ತೆ ಪ್ರಯೋಗಾಲಯದ ಸಂಖ್ಯೆ 3 ತಿಂಗಳ ಅವಧಿಯಲ್ಲಿ 2ರಿಂದ 60ಕ್ಕೆ ಹೆಚ್ಚಿಸಲಾಗಿದೆ. ಪಿಪಿಇ ಕಿಟ್‌, ಎನ್‌ 95 ಮಾಸ್ಕ್‌, ವೆಂಟಿಲೇಟರ್‌ಗಳ ತಯಾರಿಕೆಯಲ್ಲಿ ಸ್ವಾಲಂಬನೆ ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ. ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಸಿಬ್ಬಂದಿ ಕೊರತೆ ನೀಗಿಸಲಾಗಿದೆ. ಟೆಲಿಮೆಡಿಸನ್‌, ಟೆಲಿಕನ್ಸಲ್ಟೇಷನ್‌ ಮೂಲಕ ವೈದ್ಯಕೀಯ ಸಲಹೆ ನೀಡಲಾಗುತ್ತಿದೆ. ರಿಮೋಟ್‌ ಐಸಿಯು ವ್ಯವಸ್ಥೆ ಇದೆ. ಜತೆಗೆ ಹೊಸ ಟೆಸ್ಟಿಂಗ್ ವಿಧಾನ, ಹೊಸ ಉಪಕರಣಗಳ ಸಂಶೋಧನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ,"ಎಂದು ಮಾಹಿತಿ ನೀಡಿದರು. "ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಮುಂದೆಯೂ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲೂ ಆರೋಗ್ಯ ಸಮೀಕ್ಷೆ ನಡೆಸಿ ಆ ಮಾಹಿತಿಯನ್ನು ಡಿಜಿಟಲೈಸ್‌ ಮಾಡಲಾಗಿದೆ. ಜತೆಗೆ ಆಸ್ಪತ್ರೆಯಲ್ಲಿರುವ ಮೂಲಸೌಕರ್ಯ, ಸಿಬ್ಬಂದಿ, ಔಷಧ, ವೈದ್ಯಕೀಯ ಪರಿಕಗಳ ದತ್ತಾಂಶದ ಡ್ಯಾಶ್‌ಬೋರ್ಡ್‌ ಇದ್ದು, ರಿಯಲ್‌ ಟೈಮ್‌ ಮಾಹಿತಿ ಲಭ್ಯವಾಗುತ್ತಿದೆ. ಮನೆ ಹಾಗೂ ಸಾಂಸ್ಥಿಕ ಕ್ವಾರಂಟೈನ್‌ ಬಗ್ಗೆ ಮಾಹಿತಿ ಇರುತ್ತದೆ. ಈ ಎಲ್ಲ ವಿಷಯಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿ ಯಾವುದೇ ಕೊರತೆ, ಸಮಸ್ಯೆ ಉಂಟಾಗದಂತೆ ಶ್ರಮಿಸುತ್ತಿದ್ದಾರೆ,"ಎಂದು ಹೇಳಿದರು. ವೈದ್ಯರ ಬಗ್ಗೆ ಹೆಮ್ಮೆ "ವಿಶ್ವದ ಯಾವುದೇ ಭಾಗದಲ್ಲಿದ್ದರೂ ನಮ್ಮವರ ಕಷ್ಟಕ್ಕೆ ಸ್ಪಂದಿಸುವ ಔದಾರ್ಯ ನಮ್ಮ ಕನ್ನಡಿಗರಿಗಿದೆ ಕೊರೊನಾ ಸಂದರ್ಭದಲ್ಲಿ ಇಡಿ ವಿಶ್ವ ತತ್ತರಿಸಿಹೋಗಿದೆ. ಇಂಥ ಸಂದರ್ಭದಲ್ಲಿ ಅಮೆರಿಕದಲ್ಲಿರುವ ನಮ್ಮ ದೇಶ ಅದರಲ್ಲೂ ವಿಶೇಷವಾಗಿ ಕರ್ನಾಟಕ ಮೂಲದ ವೈದ್ಯರು ಅಪ್ರತಿಮ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಜತೆ ಮಾತನಾಡಿ ಅವರಿಂದ ಸಾಕಷ್ಟು ಮಾಹಿತಿ ಪಡೆದಿದ್ದೇನೆ. ನಮ್ಮ ದೇಶದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ವೈದ್ಯರಿಗೆ ಅಮೆರಿಕದಲ್ಲಿ ಅಪಾರ ಗೌರವ, ಮನ್ನಣೆ ದೊರೆತಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆ ವಿಷಯ,"ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/3diKYjv

ಆನ್‌ಲೈನ್ ಶಿಕ್ಷಣಕ್ಕೆ ಒತ್ತು: ರಾಜ್ಯ ಸರ್ಕಾರದ ನಡೆಗೆ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಕೊರೊನಾ ಕಾರಣದಿಂದ ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದು ಆನ್‌ಲೈನ್ ಶಿಕ್ಷಣಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಈಗಾಗಲೇ ಆನ್‌ಲೈನ್‌ ಮೂಲಕ ಪದವಿ ತರಗತಿಗಳು ನಡೆಯುತ್ತಿವೆ. ಆದರೆ ಆನ್‌ಲೈನ್ ಶಿಕ್ಷಣಕ್ಕೆ ವಿರೋಧ ಪಕ್ಷದ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ರಾಜ್ಯ ಸರ್ಕಾರದ ನಡೆಯನ್ನು ಸಿದ್ದರಾಮಯ್ಯ ವಿರೋಧಿಸಿದ್ದಾರೆ. ಭಾರತದ ಅಸ್ತಿತ್ವ ಇರುವುದು ಹಳ್ಳಿಗಳಲ್ಲಿ. ಅಲ್ಲೆಲ್ಲ ಕಂಪ್ಯೂಟರ್, ಲ್ಯಾಪ್ ಟಾಪ್ ಸ್ಮಾರ್ಟ್ ಪೋನ್‌ಗಳೆಲ್ಲಿಂದ ಬರಬೇಕು? ಎಂದು ಪ್ರಶ್ನಿಸಿದ್ದಾರೆ. ಪೋನ್ ಇದ್ದರೂ ನೆಟ್‌ವರ್ಕ್ ಎಲ್ಲಿದೆ? ಆನ್ ಲೈನ್ ಶಿಕ್ಷಣದಲ್ಲಿ ಹಳ್ಳಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಹೇಗೆ? ದೇಶ ಆಳುವ ನಾಯಕರಿಗೆ ಈ ಪ್ರಾಥಮಿಕ ಜ್ಞಾನ ಬೇಡವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಆನ್‌ಲೈನ್ ತರಗತಿಗಳ ಮೂಲಕ ನೀಡುವ ಪ್ರಸ್ತಾವವನ್ನು ಪ್ರಧಾನಿ ನರೇಂದ್ರ ಮೋದಿ ದೇಶದ ಸಾಮಾಜಿಕ ವಾಸ್ತವದ ಅರಿವಿಲ್ಲದವರ ಕುರುಡುತನದ ಆಲೋಚನೆ! ಇದರಿಂದ ಸಮಾಜದ ದೊಡ್ಡ ವರ್ಗ ಶಿಕ್ಷಣದಿಂದ ವಂಚಿತವಾಗಲಿದೆ ಎಂಬ ಆತಂಕವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ಆನ್‌ಲೈನ್ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ. ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಕೂಡ ಆನ್‌ಲೈನ್ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.


from India & World News in Kannada | VK Polls https://ift.tt/2AtsVbu

ಅಮೆರಿಕದಲ್ಲಿ ಭುಗಿಲೆದ್ದ ಜನಾಂಗೀಯ ಪ್ರತಿಭಟನೆ: ಜಾರ್ಜ್ ಫ್ಲಾಯ್ಡ್ ಸಾವು ದುರಂತ ಎಂದ ಟ್ರಂಪ್!

ಅಮೆರಿಕದಲ್ಲಿ ಕಪ್ಪು ವರ್ಣೀಯರ ಮೇಲೆ ಜನಾಂಗೀಯ ದಾಳಿಗಳು ಹೆಚ್ಚುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಭುಗಿಲೆದ್ದಿದೆ. ಪೊಲೀಸ್ ಅಧಿಕಾರಿಯ ದರ್ಪದ ವರ್ತನೆ ಪರಿಣಾಮವಾಗಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೃತಪಟ್ಟ ಬಳಿಕ, ಪ್ರಮುಖ ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಲಾಸ್ ಎಂಜಲೀಸ್, ಚಿಕಾಗೋ, ಮಿನ್ನಿಯಾಪೊಲೀಸ್ ಸೇರಿದಂತೆ ಅಮೆರಿಕದ ಪ್ರಮುಖ ನಗರಗಳಲ್ಲಿ ಕರ್ಫ್ಯೂ ಹೇರಲಾಗಿದ್ದು, ಎಲ್ಲೆಡೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವನ್ನು ದುರಂತ ಎಂದು ಬಣ್ಣಿಸಿರುವ ಟ್ರಂಪ್, ಇದೇ ಘಟನೆಯನ್ನು ನೆಪ ಮಾಡಿಕೊಂಡು ಪ್ರತಿಭಟನೆ ಹೆಸರಲ್ಲಿ ಲೂಟಿಕೋರರು ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಕಿಡಿಕಾರಿದ್ದಾರೆ. ಸದ್ಯ ಜಾರ್ಜ್ ಪ್ಲಾಯ್ಡ್ ಸಾವಿಗೆ ಕಾರಣವಾಗಿರುವ ಪೊಲೀಸ್ ಅಧಿಕಾರಿ ಡೆರಿಕ್ ಚೌವಿನ್‌ನನ್ನು ಕೊಲೆ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ಕುರಿತಾದ ಬೆಳವಣಿಗೆಗಳತ್ತ ಗಮನಹರಿಸುವುದಾದರೆ...

ಅಮೆರಿಕದ ಮಿನ್ನಿಯಾಪೊಲೀಸ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್‌ ಎಂಬಾತನನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಡೆರಿಕ್ ಚೌವಿನ್, ವಿನಾಕಾರಣ ಜಾರ್ಜ್‌ಗೆ ಹಿಂಸೆ ನೀಡಿ ಆತನ ಸಾವಿಗೆ ಕಾರಣವಾಗಿದ್ದ. ಕಪ್ಪು ವರ್ಣೀಯರ ವಿರುದ್ಧ ಡೆರಿಕ್‌ಗಿದ್ದ ಜನಾಂಗೀಯ ದ್ವೇಷವೇ ಜಾರ್ಜ್ ಸಾವಿಗೆ ಕಾರಣ ಎಂದು ಅಂದಾಜಿಸಲಾಗಿದೆ.

ಜನಾಂಗೀಯ ದ್ವೇಷದಲ್ಲಿ ಹತ್ಯೆ ಆರೋಪ, ಅಮೆರಿಕಾದಲ್ಲಿ ಭುಗಿಲೆದ್ದ ಆಕ್ರೋಶ

ಪ್ರಕರಣ ಬೆಳಕಿಗೆ ಬರುತ್ತಿದ್ದಂತೇ ಮಿನ್ನಿಯಾಪೊಲೀಸ್‌ನಲ್ಲಿ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದರು. ಇದೀಗ ಅಮೆರಿಕದ ಇತರೆಡೆಯೂ ಈ ಪ್ರತಿಭಟನೆ ಭುಗಿಲೆದ್ದಿದ್ದು, ತೀವ್ರ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ.

ಇನ್ನು ಮಿನ್ನಿಯಾಪೊಲೀಸ್‌ನಲ್ಲಿ ಆರಂಭವಾದ ಜನಾಂಗೀಯ ಪ್ರತಿಭಟನೆ ಅಮೆರಿಕದ ಪ್ರಮುಖ ನಗರಗಳಿಗೂ ಹಬ್ಬಿದೆ. ಲಾಸ್ ಎಂಜಲೀಸ್, ಚಿಕಾಗೋ ಮುಂತಾದ ಪ್ರಮುಖ ನಗರಗಳಲ್ಲಿ ಭಾರೀ ಪ್ರಮಾಣದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಪೊಲೀಸರೊಂದಿಗೆ ಘರ್ಷಣೆಯೂ ಸಂಭವಿಸಿದೆ.

ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೇ ಈ ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಯಾರೂ ಮನೆಯಿಂದ ಹೊರಬರದಂತೆ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ. ಆದರೂ ಕರ್ಫ್ಯೂ ಉಲ್ಲಂಘಿಸಿ ಜನ ರಸ್ತೆಗಿಳಿದು ಹಿಂಸಾತ್ಮಕ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.

ಸದ್ಯ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾಗಿರುವ ಪೊಲೀಸ್ ಅಧಿಕಾರಿ ಡೆರಿಕ್ ಚೌವಿನ್‌ನನ್ನು ಬಂಧಿಸಿರುವ ಪೊಲೀಸರು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇನ್ನು ಕಪ್ಪಿ ವರರ್ಣೀಯ ಜಾರ್ಜ್ ಫ್ಲಾಯ್ಡ್ ಸಾವನ್ನು ದುರಂತ ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಅಲ್ಲದೇ ಹಿಂಸಾತ್ಮಕ ಪ್ರತಿಭಟನೆಯನ್ನು ಕೈಬಿಟ್ಟು ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಇದೇ ವೇಳೆ ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿರುವವರನ್ನು ಲೂಟಿಕೋರರು ಎಂದು ಕರೆದಿರುವ ಟ್ರಂಪ್, ಘಟನೆಯನ್ನೇ ನೆಪ ಮಾಡಿಕೊಂಡು ಅರಾಜಕತೆ ಸೃಷ್ಟಿಸಲು ಕೆಲವರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವ ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದೂ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದಲ್ಲಿ ಕಪ್ಪು ವರ್ಣಿಯ ವಿರುದ್ಧದ ತಾರತಮ್ಯ ನೀತಿ ಮತ್ತು ದೌರ್ಜನ್ಯಕ್ಕೆ ಶತಮಾನಗಳ ಇತಿಹಾಸವಿದೆ. ಗುಲಾಮರಾಗಿ ದೇಶಕ್ಕೆ ಬಂದ ಕಪ್ಪು ವರ್ಣೀಯರನ್ನು ತಮ್ಮ ಸಮಾನ ಎಂದು ಒಪ್ಪಿಕೊಳ್ಳಲು ಅಮೆರಿಕದ ಕೆಲವು ಶ್ವೇತ ವರ್ಣಪರ ಜನ ಒಪ್ಪಿಕೊಳ್ಳಲು ಸಿದ್ಧರಿಲ್ಲ.

ಇದೇ ಕಾರಣಕ್ಕೆ ಆಗಾಗ ಕಪ್ಪು ಹಾಗೂ ಶ್ವೇತ ವರ್ಣಿಯರ ನಡುವೆ ಹಿಂಸಾತ್ಮಕ ಘರ್ಷಣೆಗಳು ಸಂಭವಿಸುವುದುಂಟು. ಅಮೆರಿಕದಲ್ಲಿ ಕಪ್ಪು ವರ್ಣೀಯರ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯ ಖಂಡಿಸಿ ಮಾರ್ಟಿನ್ ಲೂಥರ್ ಕಿಂಗ್ ನೇತೃತ್ವದಲ್ಲಿ ಬೃಹತ್ ಚಳುವಳಿಯೇ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ಸದ್ಯ ಅಮೆರಿಕದಲ್ಲಿ ಕಪ್ಪು ವರ್ಣೀಯರೂ ಸಮಾನ ಅಧಿಕಾರವನ್ನು ಪಡೆದಿರುವುದು ನಿಜವಾದರೂ ಆಗಾಗ ಈ ಎರಡೂ ಸಮದಾಯಗಳ ನಡುವೆ ಘರ್ಷಣೆ ಸಂಭವಿಸುವುದುಂಟು. ಟ್ರಂಪ್ ಆಡಳಿತಾವಧಿಯಲ್ಲಿ ದೇಶದ ಹಲವು ಭಾಗಗಳಲ್ಲಿ ಕಪ್ಪು ವರ್ಣಿಯರ ಮೇಲೆ ದಾಳಿಗಳು ನಡೆದಿವೆ.



from India & World News in Kannada | VK Polls https://vijaykarnataka.com/news/world/race-protest-escalates-across-united-states-curfew-announced-in-major-cities/articleshow/76117415.cms

ಜನಾಂಗೀಯ ದ್ವೇಷದಲ್ಲಿ ಹತ್ಯೆ ಆರೋಪ, ಅಮೆರಿಕಾದಲ್ಲಿ ಭುಗಿಲೆದ್ದ ಆಕ್ರೋಶ

ಮಿನ್ನಿಯಾಪೊಲೀಸ್: ಕೊರೊನಾ ಅಟ್ಟಹಾಸದ ನಡುವೆ ಅಮೆರಿಕಾದಲ್ಲಿ ಕಪ್ಪು ವರ್ಣೀಯ ಸಾವು ಪ್ರಕರಣ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸಾವಿಗೆ ಕಾರಣವಾದ ಪೊಲೀಸರ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಹಿಂಸಾಚಾರಕ್ಕೆ ತಿರುಗಿದೆ. ಮಿನ್ನಿಯಾಪೊಲೀಸ್ ನಗರದಲ್ಲಿ ಕರ್ಪ್ಯೂ ಜಾರಿಗೊಳಿಸಲಾಗಿದ್ದು ಇದನ್ನು ಮೀರಿ ಪ್ರತಿಭಟನಾಕಾರರು ರಸ್ತೆಗಿಳಿದಿದ್ದಾರೆ. ಪೊಲೀಸರ ವರ್ತನೆಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಮಿನ್ನಿಯಾನಗರವನ್ನು ದಾಟಿ ಬೇರೆ ಕಡೆಗಳಲ್ಲೂ ಆರಂಭಗೊಳ್ಳುತ್ತಿದೆ. ಕೊರೊನಾ ಅಟ್ಟಹಾಸ ನಡುವೆಯೂ ಜನಾಂಗೀಯ ದ್ವೇಷದ ವಿರುದ್ಧ ಅಮೆರಿಕನ್ನರು ರಸ್ತೆಗಿಳಿದಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುತ್ತಿದ್ದು ಈ ನಡುವೆ ಅಪರಿಚಿತ ವ್ಯಕ್ತಿಯೊಬ್ಬನ ಗುಂಡೇಟಿಗೆ ಓರ್ವ ಬಲಿಯಾಗಿದ್ದಾನೆ. ಕಪ್ಪು ವರ್ಣೀಯ ಜಾರ್ಜ್‌ ಫ್ಲಾಯ್ಡ್ ಎಂಬ ವ್ಯಕ್ತಿಯ ವಿರುದ್ಧ ಪೊಲೀಸ್ ಅಧಿಕಾರಿ ಡೆರಿಕ್‌ ಚೌವಿನ್‌ ಕ್ರೌರ್ಯ ಮೆರೆದಿದ್ದ. ಕುತ್ತಿಗೆಯ ಮೇಲೆ ಬಲವಾಗಿ ಮಂಡಿಯೂರಿದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪೊಲೀಸರ ಈ ನಡೆಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಪೊಲೀಸರು ಜನಾಂಗೀಯ ದ್ವೇಷವನ್ನು ಸಾಧಿಸಿದ್ದಾರೆ ಎಂದು ಆರೋಪಿಸಿ ಭಾರೀ ಸಂಖ್ಯೆಯ ಪ್ರತಿಭಟನಾಕಾರರು ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪ್ರತಿಭಟನೆ ಹಿಂಸೆಯ ಸ್ವರೂಪವನ್ನು ಪಡೆದುಕೊಂಡಿದೆ. ಹಲವು ಕಡೆಗಳಲ್ಲಿ ವಾಹನಗಳಿಗೆ ಬೆಂಕಿ ನೀಡಲಾಗಿದ್ದು, ಗಲಭೆಯನ್ನು ನಿಯಂತ್ರಣ ಮಾಡಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ವ್ಯಕ್ತಿಯ ವಿರುದ್ಧ ಕ್ರೌರ್ಯ ಮೆರೆದ ಪೊಲೀಸ್ ಅಧಿಕಾರಿ ಡೆರಿಕ್‌ ಚೌವಿನ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಬಂಧನಕ್ಕೆ ಒಳಪಡಿಸಲಾಗಿದೆ. ಆದರೆ ಆತನ ಜೊತೆಗಿದ್ದ ಇತರ ಅಧಿಕಾರಿಗಳನ್ನು ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಅಮೆರಿಕಾದಲ್ಲಿ ಕಪ್ಪು ವರ್ಣೀಯರ ಮೇಲಿನ ದೌರ್ಜನ್ಯ ಪ್ರಕರಣಗಳು ಸಾಕಷ್ಟು ನಡೆಯುತ್ತಿವೆ. ಇದರ ವಿರುದ್ಧ ಹೋರಾಟಗಳು ನಡೆಯುತ್ತಿದೆ. ಇದೀಗ ಕೊರೊನಾ ಅಟ್ಟಹಾಸದ ನಡುವೆಯೂ ಜನಾಂಗೀಯ ದ್ವೇಷ ಪ್ರಕರಣ ಮುನ್ನಲೆಗೆ ಬಂದಿದ್ದು ಹಿಂಸೆಯ ಸ್ವರೂಪ ಪಡೆದುಕೊಂಡು ಆತಂಕಕ್ಕೆ ಕಾರಣವಾಗಿದೆ.


from India & World News in Kannada | VK Polls https://ift.tt/36WFOY9

ಚೀನಾದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ: ರಾಜನಾಥ್ ಸಿಂಗ್!

ನವದೆಹಲಿ: ಗಡಿ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿರುವ ಚೀನಾದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳು ಮುಂದುವರೆದಿವೆ ಎಂದು ರಕ್ಷಣಾ ಸಚಿವ ಹೇಳಿದ್ದಾರೆ. ಚೀನಾದೊಂದಿಗೆ ಶಾಂತಿ ಮಾತುಕತೆಗಳು ಮುಂದುವರೆದಿದ್ದು, ಈ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆದರೆ ಭಾರತೀಯರ ಮನೋಧರ್ಮ, ಗೌರವಕ್ಕೆ ಧಕ್ಕೆ ಬಂದರೆ ಸರ್ಕಾರ ಹಾಗೂ ಸೇನೆ ಖಂಡಿತ ಸುಮ್ಮನಿರುವುದಿಲ್ಲ ಎಂದೂ ರಾಜನಾಥ್ ಖಡಾಖಂಡಿತವಾಗಿ ಹೇಳಿದ್ದಾರೆ. ಗಡಿ ಸಮಸ್ಯೆ ಶಾಂತಿಯುತವಾಗಿ ಬಗೆಹರಿಯಬೇಕು ಎಂಬುದು ನಮ್ಮೆಲ್ಲರ ಇಚ್ಛೆಯಾಗಿದ್ದು, ಈ ನಿಟ್ಟಿನಲ್ಲಿ ರಾಜತಾಂತ್ರಿಕ ಹಾಗೂ ಮಿಲಿಟರಿ ಮಾತುಕತೆಗಳು ಫಲ ನೀಡಲಿವೆ ಎಂದು ರಾಜನಾಥ್ ಸಿಂಗ್ ಭರವಸೆ ವ್ಯಕ್ತಪಡಿಸಿದರು. ಇನ್ನು ಭಾರತ-ಚೀನಾ ನಡುವಿನ ಗಡಿ ತಕರಾರಿನಲ್ಲಿ ಮಧ್ಯಸ್ಥಿಕೆವಹಿಸಲು ಸಿದ್ಧ ಎಂಬ ಟ್ರಂಪ್ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ದ್ವಿಪಕ್ಷೀಯ ಮಾತುಕತೆಗಳ ಮೂಲಕವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗುವುದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಸ್ಪಷ್ಟಪಡಿಸಿರುವುದಾಗಿ ರಾಜನಾಥ್ ಸಿಂಗ್ ಹೇಳಿದರು.


from India & World News in Kannada | VK Polls https://ift.tt/2XNnE6K

ಪ್ರಧಾನಿ ಮೋದಿ ಮನ್ ಕಿ ಬಾತ್: ದೇಶಕ್ಕೆ ಭವಿಷ್ಯದ ಮಾರ್ಗ ತೋರಿಸಿದ ನಾಯಕ!

ನವದೆಹಲಿ: ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಲಾಕ್‌ಡೌನ್ ಸಡಿಲಿಕೆ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಪುನರಾರಂಭಗೊಳಿಸಿರುವ ನಡುವೆಯೇ ಮಾರಕ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ಈ ಹಿಂದಿನ ಸಂಕಲ್ಪವನ್ನು ಮರೆಯದಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ಪ್ರಮುಖ ಅಂಶಗಳು:
  • ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಜಾರಿಗೊಳಿಸಲಾಗಿದೆ.
  • ವಿಶೇಷ ರಿಯಾಯ್ತಿಗಳ ನಡುವೆ ಲಾಕ್‌ಡೌನ್ ಅವಧಿ ವಿಸ್ತರಿಸಿರುವುದು ಜನರಿಗೆ ಅನುಕೂಲ ಕಲ್ಪಿಸಲಾಗಿದೆ.
  • ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶ ಒಗ್ಗಟ್ಟಾಗಿರುವುದು ನಿಜ್ಜಕೂ ಹೆಮ್ಮೆಯ ಸಂಗತಿ.
  • ಜನ ಪರಸ್ಪರ ಸಹಾಯ ಮಾಡುತ್ತಿರುವ ಕುರಿತಾದ ವರದಿಗಳು ದೇಶದ ಮೂಲೆ ಮೂಲೆಗಳಿಂದ ಹೊರ ಬರುತ್ತಿವೆ.
  • ಕೊರೊನಾ ಸಮರ ಧೀರ ಕಾರ್ಯವನ್ನು ನಾವು ಎಂದಿಗೂ ಮರೆಯಬಾರದು.
  • ಕೊರೊನಾ ವೈರಸ್ ಸಂದರ್ಭದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆವಿಷ್ಕಾರಗಳು ನಡೆಯುತ್ತಿವೆ.
  • ವಲಸೆ ಕಾರ್ಮಿಕರ ಸಂಕಷ್ಟದ ಕುರಿತು ಸರ್ಕಾರಕ್ಕೆ ಮಾಹಿತಿ ಇದ್ದು, ಸಂಕಷ್ಟದಲ್ಲಿರುವವರ ಸುರಕ್ಷತೆಗಾಗಿ ಹಗಲಿರುಳೂ ದುಡಿಯುತ್ತಿದೆ.
  • ದೇಶದ ಆರ್ಥಿಕ ಸ್ಥಿತಿಗತಿ ಕುರಿತು ಸರ್ಕಾರ ಸತತ ನಿಗಾ ಇರಿಸಿದ್ದು, ದೇಶದ ಅರ್ಥ ವ್ಯವಸ್ಥೆಯನ್ನು ಸದೃಢವಾಗಿಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.
  • ಆತ್ಮ ನಿರ್ಭರ ಯೋಜನೆಯಡಿಯಲ್ಲಿ ಭಾರತವನ್ನುಆರ್ಥಿಕವಾಗಿ ಸಬಲಗೊಳಿಸುವ ಸರ್ಕಾರದ ಯೋಜನೆ ಫಲ ನೀಡಲಿದೆ.
  • ದೇಶೀಯ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ದೇಶವನ್ನು ಆತ್ಮ ನಿರ್ಭರವನ್ನಾಗಿ ಮಾಡಲು ಜನತೆ ಸಹಕರಿಸಬೇಕು.
  • ಪೂರ್ವ ಭಾರತದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದ್ದರೆ, ಉತ್ತರ ಭಾರತದಲ್ಲಿ ಬಿಸಿಲಿನ ತಾಪಮಾನ ಏರುತ್ತಿದೆ. ಈ ಕುರಿತು ಸರ್ಕಾರ ನಿಗಾ ಇರಿಸಿದೆ.
  • ಕೊರೊನಾ ವೈರಸ್ ವೈರಾಣುವಿನಿಂದ ದೂರ ಇರಲು ಯೋಗ ಮತ್ತು ಆಯುರ್ವೇದ ಅತ್ಯಂತ ಪರಿಣಾಮಕಾರಿಯಾಗಿದ್ದು, ಈ ಕುರಿತು ವಿಶ್ವ ನಾಯಕರೂ ತಮ್ಮಲ್ಲಿ ಹಲವು ಬಾರಿ ಚರ್ಚೆ ನಡೆಸಿದ್ದಾರೆ.
  • ನಾವು ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಖಂಡಿತ ಜಯ ಸಾಧಿಸಲಿದ್ದು, ಈ ಒಗ್ಗಟ್ಟನ್ನು ಭವಿಷ್ಯದಲ್ಲೂ ಮುಂದುವರೆಸಬೇಕಿದೆ ಎಂದು ಪ್ರಧಾನಿ ಮೋದಿ ದೇಶದ ಜನರಲ್ಲಿ ಮನವಿ ಮಾಡಿದರು.
ಒಟ್ಟಿನಲ್ಲಿ ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಲಾಕ್‌ಡೌನ್ ಮತ್ತು ಕೊರೊನಾ ವೈರಸ್ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದ್ದು, ಭವಿಷ್ಯದಲ್ಲಿ ಭಾರತ ಸಾಗಬೇಕಾದ ಮಾರ್ಗಗಳ ಕುರಿತು ಸ್ಪಷ್ಟ ಸಂದೇವನ್ನೂ ನೀಡಿದ್ದಾರೆ.


from India & World News in Kannada | VK Polls https://ift.tt/3exzRmS

ಕೊರೊನಾ ಮಾರಕ ರೋಗ ನಿಯಂತ್ರಣಕ್ಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಶ್ರೀರಾಮುಲು ಮನವಿ

ಬೆಂಗಳೂರು: ಕೊರೊನಾ ವೇಗವಾದಿ ಹರಡುತ್ತಿರುವ ಮಾರಕ ರೋಗವಾಗಿದ್ದು ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸೂಚಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಎಂದು ಆರೋಗ್ಯ ಸಚಿವ ಜನರಲ್ಲಿ ವಿನಂತಿ ಮಾಡಿದ್ದಾರೆ. ಟ್ವೀಟ್‌ ಮೂಲಕ ಮನವಿ ಮಾಡಿದರು ಅವರು “ಕೋವಿಡ್, ವೇಗವಾಗಿ ಹರಡುತ್ತಿರುವ ಮಾರಕ ರೋಗ ಎಂಬುದು ಈ ಅಂಕಿಅಂಶಗಳಿಂದ ತಿಳಿದುಬರುತ್ತದೆ. ಹಾಗಾಗಿ, ರೋಗ ಹರಡುವಿಕೆ ತಡೆಗಟ್ಟಲು ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಾಗತಿಕ ಮಾಹಾಮಾರಿಯಿಂದ ದೂರವಿರೋಣ” ಎಂದಿದ್ದಾರೆ. ಕೋವಿಡ್ ಮಹಾಮಾರಿ ಜಾಗತಿಕವಾಗಿ ಕೇವಲ ನಾಲ್ಕೂವರೆ ತಿಂಗಳಲ್ಲಿ ಸುಮಾರು ಮೂರು ಲಕ್ಷ ಇಪ್ಪತ್ತೈದು ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ.ದೀರ್ಘ ಕಾಲದಿಂದಲೂ ಪ್ರಪಂಚದಲ್ಲಿ ಮಲೇರಿಯಾ ಅತ್ಯಂತ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ರೋಗವಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಕೋವಿಡ್‌-19 ತೀವ್ರ ಸ್ವರೂಪದಲ್ಲಿ ಹರಡುತ್ತಿದೆ. ಸದ್ಯಕ್ಕೆ 3000 ಗಡಿಯನ್ನು ತಲುಪುತ್ತಿರುವುದು ಆತಂಕ ಸೃಷ್ಟಿಸಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಪ್ರಯತ್ನ ನಡೆಸುತ್ತಿದ್ದರೂ ಸೋಂಕು ವೇಗವಾಗಿ ಹರಡುತ್ತಿದೆ. ಈ ನಡುವೆ ಲಾಕ್‌ಡೌನ್ ಸಡಿಲಿಕೆಯಾಗಿದ್ದು ಜನರು ಸಾಮಾಜಿಕ ಅಂತರವನ್ನು ಪಾಲನೆ ಮಾಡುತ್ತಿಲ್ಲ.


from India & World News in Kannada | VK Polls https://ift.tt/3dkEdO7

ಮಾರ್ಗ ಮಧ್ಯೆಯೇ ಶ್ರಮಿಕ್ ರೈಲನ್ನು ತಡೆದ ಗ್ರಾಮಸ್ಥರು: ಪ್ರಯಾಣಿಕರಿಗೆ ಊಟ ಹಂಚಿದ ಪುಣ್ಯಾತ್ಮರು!

ಪಾಟ್ನಾ: ಸರಣಿ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗಾಗಿ ಭಾರತೀಯ ರೈಲ್ವೆ ಇಲಾಖೆ ವಿಶೇಷ ಸೇವೆ ಒದಗಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಶ್ರಮಿಕ್ ರೈಲುಗಳ ಮೂಲಕ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತಮ್ಮ ಸ್ವಂತ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಮನೆ ತಲುಪಿಸುತ್ತಿರುವ ಶ್ರಮಿಕ್ ರೈಲುಗಳ ಕುರಿತು ವಲಸೆ ಕಾರ್ಮಿಕರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ಮಧ್ಯೆ ಮಿಜೋರಾಂಗೆ ತೆರಳುತ್ತಿದ್ದ ಶ್ರಮಿಕ್ ರೈಲೊಂದನ್ನು ಮಾರ್ಗ ಮಧ್ಯೆಯೇ ತಡೆದ ಗ್ರಾಮಸ್ಥರು, ರೈಲಿನಲ್ಲಿದ್ದ ಎಲ್ಲ ಪ್ರಯಣಿಕರಿಗೂ ಊಟ ಹಂಚಿದ ಘಟನೆ ಬಿಹಾರದಲ್ಲಿ ನಡೆದಿದೆ. ಮಿಜೋರಾಂನತ್ತ ತೆರಳುತ್ತಿದ್ದ ಶ್ರಮಿಕ್ ರೈಲನ್ನು ತಡೆದ ಗ್ರಾಮಸ್ಥರು, ತಂಡೋಪತಂಡವಾಗಿ ಬಂದು ಎಲ್ಲಾ ಪ್ರಯಾಣಿಕರು ಊಟ ಹಂಚಿದ್ದಾರೆ. ಪ್ರಯಾಣಿಕನೋರ್ವ ಮಾಡಿದ ಇದರ ವಿಡಿಯೋವೊಂದನ್ನು ಖುದ್ದು ಮಿಜೋರಾಂ ಮುಖ್ಯಮಂತ್ರಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಹಾರದ ಬೇಗುಸರಾಯ್‌ ಜಿಲ್ಲೆಯಲ್ಲಿ ನಡೆದ ಈ ಘಟನೆ ತಮ್ಮ ಅಂತರಂಗವನ್ನು ಮುಟ್ಟಿದೆ ಎಂದು ಟ್ವೀಟ್ ಮಾಡಿರುವ ಮಿಜೋರಾಂ ಮುಖ್ಯಮಂತ್ರಿ ಜೊರಾಮ್‌ಥಾಂಗ್, ಭಾರತದ ಒಗ್ಗಟ್ಟು ಸದಾಕಾಲ ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದ್ದಾರೆ.


from India & World News in Kannada | VK Polls https://ift.tt/3djJVQh

ಬಿಜೆಪಿಯಲ್ಲಿ ಮುಂದುವರಿದ ಕಚ್ಚಾಟ, ಕಾದು ನೋಡುವ ತಂತ್ರಕ್ಕೆ ಮೊರೆ ಹೋದ ಕೈ ಪಾಳಯ!

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ತೀವ್ರಗೊಳ್ಳುತ್ತಿದ್ದು ಪರಿಸ್ಥಿತಿಯ ಲಾಭವನ್ನು ಸೂಕ್ತ ಸಂದರ್ಭದಲ್ಲಿ ಪಡೆಯಲು ಕಾದು ನೋಡುವ ತಂತ್ರದ ಮೊರೆ ಹೋಗಿದೆ. ಬಿಜೆಪಿ ಆಂತರಿಕ ಕಚ್ಚಾಟದ ಕುರಿತಾಗಿ ಸದ್ಯ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಕೈ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಕೋವಿಡ್‌-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಎಡವಿದ್ದು ಪಕ್ಷದ ಭಿನ್ನಮತದ ಕುರಿತಾಗಿ ಚರ್ಚೆಗಳು ಮುನ್ನಲೆಗೆ ಬಂದರೆ ಜನರ ಸಮಸ್ಯೆಗಳ ಕುರಿತಾದ ಚರ್ಚೆ ಹಿಂದೆ ಸರಿಯುತ್ತದೆ. ಈ ನಿಟ್ಟಿನಲ್ಲಿ ಕೊರೊನಾ ವಿಚಾರವನ್ನೇ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್ ಮುಂದಾಗಿದೆ. ಸದ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪಕ್ಷದ ನಾಯಕತ್ವದ ವಿರುದ್ಧವೇ ಶಾಸಕರು ಮಾತನಾಡುತ್ತಿದ್ದಾರೆ. ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೋವಿಡ್‌-19 ವಿಚಾರವನ್ನೇ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ದಾಳಿ ನಡೆಸಲು ಕಾಂಗ್ರೆಸ್ ಮುಂದಾಗಿದೆ. ರಾಜ್ಯದ ಸರ್ಕಾರದ ಕೊರೊನಾ ಪರಿಹಾರ, ರೈತರ ಸಮಸ್ಯೆಗಳು, ನಿರುದ್ಯೋಗ, ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ತಂತ್ರಗಾರಿಕೆ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಶಾಸಕರಿಗೆ ಹಾಗೂ ಮುಖಂಡರಿಗೆ ಕೊರೊನಾ ನಿರ್ವಹಣೆ ವಿಚಾರವಾಗಿಯೇ ಸರ್ಕಾರ ವಿರುದ್ಧ ಧ್ವನಿ ಎತ್ತುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.


from India & World News in Kannada | VK Polls https://ift.tt/2MdV3Cf

11 ಗಂಟೆಗೆ ಮೋದಿ ಮನ್ ಕಿ ಬಾತ್: ಪ್ರಧಾನಿ ಮಾತಿನತ್ತ ದೇಶದ ಚಿತ್ತ!

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಇಂದು ಬೆಳಗ್ಗೆ 11 ಗಂಟೆಗೆ , ತಮ್ಮ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಪ್ರಧಾನಿ ಮೋದಿ, 11 ಗಂಟೆಗೆ ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಸರಣಿ ಲಾಕ್‌ಡೌನ್‌ ಅವಧಿಯನ್ನು ವಿಸ್ತರಿಸಿರುವ ಕೇಂದ್ರ ಸರ್ಕಾರ, ನಿಯಮಾವಳಿಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಅಲ್ಲದೇ ಲಾಕ್‌ಡೌನ್ 5.0 ಕೊರೊನಾ ವೈರಸ್ ಹಾವಳಿಯನ್ನು ತಡೆಗಟ್ಟುವಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿದ್ದು, ಮೂರು ಹಂತಗಳಲ್ಲಿ ದೇಶವನ್ನು ಅನ್‌ಲಾಕ್ ಮಾಡುವ ಕುರಿತು ಈಗಾಗಲೇ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದೇ ವೇಳೆ ಮೋದಿ 2.0 ಸರ್ಕಾರಕ್ಕೆ ಭರ್ತಿ ಒಂದು ವರ್ಷ ತುಂಬಿದ್ದು, ಈ ಅವಧಿಯಲ್ಲಿ ಕೈಗೊಂಡ ಐತಿಹಾಸಿಕ ನಿರ್ಣಯಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಧಾನಿ ಮೋದಿ ಈಗಾಗಲೇ ದೇಶಕ್ಕೆ ಬರೆದ ಬಹಿರಂಗ ಪತ್ರದ ಮೂಲಕ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಇಂದಿನ ಮನ್ ಕಿ ಬಾತ್ ಕಾರ್ಯಕ್ರಮ ಅತ್ಯಂತ ಮಹತ್ವ ಪಡೆದುಕೊಂಡಿದ್ದು, 11 ಗಂಟೆಗೆ ಪ್ರಸಾರವಾಗಲಿರುವ ಕಾರ್ಯಕ್ರಮದತ್ತ ದೇಶ ಚಿತ್ತ ಹರಿಸಿದೆ.


from India & World News in Kannada | VK Polls https://ift.tt/3cilvVS

G7 ಶೃಂಗಸಭೆಗೆ ಭಾರತವನ್ನು ಆಹ್ವಾನಿಸಲಿರುವ ಟ್ರಂಪ್: ಸದ್ಯದ ಜಗತ್ತು ಪ್ರತಿನಿಧಿಸಲಿ ಎಂದ ಅಧ್ಯಕ್ಷ!

ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಇದೇ ಜೂನ್‌ನಲ್ಲಿ ನಡೆಯಬೇಕಿದ್ದ G7 ಶೃಂಗಸಭೆಯನ್ನು ಅಧ್ಯಕ್ಷ ಮುಂದೂಡಿದ್ದಾರೆ. ಅಮೆರಿಕವೂ ಸೇರಿದಂತೆ ವಿಶ್ವದಲ್ಲೆಡೆ ಕೊರೊನಾ ವೈರಸ್ ಹಾವಳಿ ಇನ್ನೂ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ, G7 ರಾಷ್ಟ್ರಗಳ ಶೇಂಗಸಭೆಯನ್ನು ಮುಂದೂಡುವುದೇ ಒಳಿತು ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ಸೆಪ್ಟೆಂಬರ್‌ನಲ್ಲಿ ಆಥವಾ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಬಳಿಕವೇ G7 ಶೃಂಗಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ. ಆದರೆ ಈ ಬಾರಿಯ G7 ಶೃಂಗಸಭೆಗೆ ಸದಸ್ಯರಲ್ಲದ ರಾಷ್ಟ್ರಗಳಾದ , ರಷ್ಯಾ, ಆಸ್ಟ್ರೆಲೀಯಾ ಹಾಗೂ ದಕ್ಷಿಣ ಕೊರಿಯಾ ರಾಷ್ಟ್ರಗಳನ್ನೂ ಆಹ್ವಾನಿಸಲಿರುವುದಾಗಿ ಹೇಳಿ ಟ್ರಂಪ್ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಟ್ರಂಪ್, G7 ಸದ್ಯದ ಜಗತ್ತನ್ನು ಪ್ರತಿನಿಧಿಸುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. G7 ಸದಸ್ಯ ರಾಷ್ಟ್ರಗಳನ್ನೂ ಹೊರತುಪಡಿಸಿ ಉಳಿದ ರಾಷ್ಟ್ರಗಳನ್ನು ಈ ಪಟ್ಟಿಯಲ್ಲಿ ಸೇರಿಸಬೇಕು ಎಂದು ಟ್ರಂಪ್ ಇಂಗಿತ ವ್ಯಕ್ತಪಡಿಸಿರುವುದು ವಿಶೇಷ. G7 ರಾಷ್ಟ್ರಗಳ ಪಟ್ಟಿ:
  • ಬ್ರಿಟನ್
  • ಕೆನಡಾ
  • ಫ್ರಾನ್ಸ್
  • ಜರ್ಮನಿ
  • ಇಟಲಿ
  • ಜಪಾನ್
  • ಅಮೆರಿಕ
ಅಂತಾರಾಷ್ಟ್ರೀಯ ಆರ್ಥಿಕ ಸಮನ್ವಯಕ್ಕಾಗಿ ಪ್ರತಿವರ್ಷವೂ G7 ಸದಸ್ಯ ರಾಷ್ಟ್ರಗಳು ಸಭೆ ನಡೆಸುತ್ತವೆ.


from India & World News in Kannada | VK Polls https://ift.tt/2XJ9FyN

ಭಾನುವಾರದ ಕರ್ಫ್ಯೂ ವಾಪಸ್‌: ರಸ್ತೆಗಿಳಿದ ಬಿಎಂಟಿಸಿ, ಮಾರ್ಕೆಟ್‌ಗಳಲ್ಲಿ ಜನಸಂದಣಿ

ಬೆಂಗಳೂರು: ಕೊರೊನಾ ನಿಯಂತ್ರಣ ಮಾಡಲು ಜಾರಿಯಲ್ಲಿದ್ದ ಭಾನುವಾರದ ಕರ್ಫ್ಯೂವನ್ನು ಸರ್ಕಾರ ವಾಪಸ್‌ ಪಡೆದುಕೊಂಡಿದ್ದು ನಗರದಲ್ಲಿ ಎಂದಿನಂತೆ ಜನಜೀವನವಿದೆ. ಕಳೆದ ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿತ್ತು. ಆದರೆ ಜನರ ಬೇಡಿಕೆ ಹಿನ್ನೆಲೆಯಲ್ಲಿ ಸರ್ಕಾರ ಸಂಡೇ ಕರ್ಪ್ಯೂವನ್ನು ತೆರವುಗೊಳಿಸಿದೆ. ಪರಿಣಾಮ ನಗರದ ಮಾರ್ಕೆಟ್‌ಗಳಲ್ಲಿ ಜನಸಂದಣಿ ಕಾಣಿಸುತ್ತಿದೆ. ಭಾನುವಾರ ನಗರದ ರಸ್ತೆಗಳಲ್ಲಿ ಬಿಎಂಟಿಸಿ ಬಸ್‌ಗಳು ಓಡಾಡುತ್ತಿದೆ. ಸುಮಾರು 3000 ಬಸ್‌ಗಳು ರಸ್ತೆಗಿಳಿದಿವೆ. ಆದರೆ ಭಾನುವಾರ ಹೆಚ್ಚಿನ ಸಂಖ್ಯೆಯ ಜನರು ಓಡಾಡುತ್ತಿಲ್ಲ. ಈ ನಿಟ್ಟಿನಲ್ಲಿ ಬಿಎಂಟಿಸಿ ಬಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸಿದೆ. ಮಾರ್ಕೆಟ್‌ಗಳಲ್ಲಿ ಜನಸಂದಣಿ ಭಾನುವಾರ ಕರ್ಫ್ಯೂ ಸಡಿಲಗೊಂಡ ಕಾರಣ ಬೆಂಗಳೂರಿನ ಪ್ರಮುಖ ಮಾರ್ಕೆಟ್‌ಗಳಲ್ಲಿ ಜನಸಂದಣಿ ಕಾಣಿಸಿಕೊಳ್ಳುತ್ತಿದೆ. ನಗರದ ಯಶವಂತಪುರ ಮಾರ್ಕೆಟ್‌, ಕೆ.ಆರ್‌ ಮಾರ್ಕೆಟ್‌ಗಳಲ್ಲಿ ಮಾಂಸ, ಹಣ್ಣು, ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಕೆಲವು ಕಡೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡರೆ ಮತ್ತೆ ಕೆಲವು ಕಡೆಗಳಲ್ಲಿ ಇದು ಪಾಲನೆಯಾಗುತ್ತಿಲ್ಲ. ಖರೀದಿಯ ಭರಾಟೆಯಲ್ಲಿ ಜನರು ಕೊರೊನಾ ಭಯವನ್ನೂ ಮರೆತು ಬಿಟ್ಟಂತೆ ವರ್ತನೆ ಮಾಡುತ್ತಿದ್ದಾರೆ. ಇನ್ನು ಭಾನುವಾರದ ಮೂಡ್‌ನ್ನು ಎಂಜಾಯ್‌ ಮಾಡಲು ಬೆಳ್ಳಂಬೆಳಗ್ಗೆ ವೈನ್ ಶಾಪ್‌ಗಳ ಮುಂದೆಯೂ ಜನರು ಕಾಣಿಸಿಕೊಳ್ಳುತ್ತಿದ್ದಾರೆ. ಮದ್ಯ ಖರೀದಿಗೆ ಸಾಕಷ್ಟು ಜನರು ಅಂಗಡಿ ಮುಂದೆ ನಿಂತಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಈ ನಡುವೆ ಹಂತ ಹಂತವಾಗಿ ಲಾಕ್‌ಡೌನ್‌ನ್ನು ಮತ್ತಷ್ಟುಸಡಿಲಿಕೆ ಮಾಡಲು ಸರ್ಕಾರ ಮುಂದಾಗುತ್ತಿದೆ.


from India & World News in Kannada | VK Polls https://ift.tt/3etOg3o

ಗಡಿ ತಂಟೆಗೆ ಬಂದ ಡ್ರ್ಯಾಗನ್ ವಿರುದ್ಧ ಅಭಿಯಾನ: ಚೀನಾ ವಸ್ತು ಕೊಳ್ಳದಿರುವ ಭೀಷ್ಮ ಪ್ರತಿಜ್ಞೆ!

ನವದೆಹಲಿ: ಭಾರತದೊಂದಿಗೆ ಗಡಿ ತಕರಾರು ತೆಗೆದಿರುವ ಚೀನಾ ವಿರುದ್ಧ ಭಾರತೀಯರು ತಿರುಗಿ ಬಿದ್ದಿದ್ದಾರೆ. ಲಡಾಖ್ ಗಡಿಯಲ್ಲಿ ಬಂದು ಹೂಂಕರಿಸುತ್ತಿರುವ ಚೀನಿ ಡ್ರ್ಯಾಗನ್ ಇದೀಗ ಭಾರತೀಯರೆಂಬ ಹುಲಿಗಳ ಘರ್ಜನೆಗೆ ಅಕ್ಷರಶಃ ನಲುಗಿದೆ. ಗಡಿ ತಂಟೆಗೆ ಬಂದಿರುವ ಚೀನಾಗೆ ಅದರದ್ದೇ ಆದ ಭಾಷೆಯಲ್ಲಿ ಪ್ರತ್ಯುತ್ತರ ನೀಡಲು ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಇದಕ್ಕೆ ಕೈಜೋಡಿಸಿರುವ ಸಾಮಾನ್ಯ ಭಾರತೀಯ, ಚೀನಾ ವಸ್ತುಗಳನ್ನು ಕೊಳ್ಳದಿರುವ ಪ್ರತಿಜ್ಞೆ ಮಾಡುತ್ತಿದ್ದಾನೆ. ಹೌದು, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ #BoycottChineseProducts ಎಂಬ ಅಭಿಉಯಾನ ಶುರುವಾಗಿದ್ದು, ಕ್ಷಣಕ್ಷಣಕ್ಕೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ಇನ್ನು ಮುಂದೆ ಮೊಬೈಲ್ ಸೇರಿದಂತೆ ಚೀನಾದ ಯಾವುದೇ ವಸ್ತುಗಳನ್ನು ಕೊಳ್ಳುವುದಿಲ್ಲ ಎಂದು ಜನ ಸ್ವಯಂಪ್ರೇರಿತವಾಗಿ ಪ್ರತಿಜ್ಞೆ ಮಾಡುತ್ತಿದ್ದು, ತಮ್ಮ ಮೊಬೈಲ್‌ಗಳಲ್ಲಿರುವ ಚೀನಾ ಮೂಲದ ಆಪ್‌ಗಳನ್ನೂ ಕೂಡ ಡಿಲೀಟ್ ಮಾಡುತ್ತಿದ್ದಾರೆ. ತಮ್ಮ ವಸ್ತುಗಳನ್ನು ಭಾರತೀಯರಿಗೆ ಮಾರುವ ಚೀನಾ ಅದರಿಂದ ಬಂದ ಹಣವನ್ನು ಪಾಕಿಸ್ತಾನಕ್ಕೆ ನೀಡುತ್ತದೆ. ಪಾಕಿಸ್ತಾನ ಈ ಹಣವನ್ನು ಭಾರತದ ವಿರುದ್ಧ ಜಿಹಾದ್ ಸಾರಿರುವ ಭಯೋತ್ಪಾದಕರಿಗೆ ನೀಡುತ್ತದೆ. ಈ ಉಗ್ರರು ನಮ್ಮ ಧೀರ ಭಾರತೀಯ ಸೈನಿಕರ ಮೇಲೆ ದಾಳಿ ಮಾಡುತ್ತಾರೆ. ಇದಕ್ಕೆಲ್ಲಾ ಪರೋಕ್ಷವಾಗಿ ನಾವೇ ಕಾರಣರಾಗುತ್ತಿದ್ದು, ಇನ್ನು ಮುಂದೆ ಚೀನಾದ ವಸ್ತುಗಳನ್ನು ಕೊಳ್ಳುವುದಿಲ್ಲ ಎಂದು ಸಾವಿರಾರು ಜನ ಸ್ವಯಂಪ್ರೇರಿತವಾಗಿ ಪ್ರತಿಜ್ಞೆ ಮಾಡುತ್ತಿದ್ದಾರೆ. #BoycottChineseProducts ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಬಾಲಿವುಡ್ ಸೇರಿದಂತೆ ದೇಶದ ಚಿತ್ರರಂಗದ ಗಣ್ಯರೂ ಈ ಅಭಿಯಾನಕ್ಕೆ ಸಾಥ್ ನೀಡಿರುವುದು ವಿಶೇಷ. ಇದರಲ್ಲಿ ನಟ ಅರ್ಷದ್ ವಾರ್ಸಿ, ರಣ್‌ವೀರ್ ಶೌರಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಬಾಲಿವುಡ್‌ನ ಜನಪ್ರಿಯ ಚಿತ್ರ 3 ಈಡಿಯಟ್ಸ್‌ಗೆ ಪ್ರೇರಣೆಯಾಗಿದ್ದ ಸೋನಮ್ ವಾಂಗ್ಚುಕ್ ಟ್ವಿಟ್ಟರ್‌ನಲ್ಲಿ ಈ ಅಭಿಯಾನವನ್ನು ಆರಂಭಿಸಿದ್ದು, ಈ ಅಭಿಯಾನದಲ್ಲಿ ಲಕ್ಷಾಂತರ ಜನ ಭಾಗಿಯಾಗುತ್ತಿದ್ದಾರೆ. ಚೀನಾದ ಎಲ್ಲಾ ವಸ್ತುಗಳನ್ನು ತಿರಸ್ಕರಿಸಿ ಎಂದು ಸೋನಮ್ ವಾಂಗ್ಚುಕ್ ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಭಾರತದೊಂದಿಗೆ ಗಡಿ ತಕರಾರು ತೆಗೆದ ಚೀನಾ ಇದೀಗ ಸಮಸ್ತ ಭಾರತೀಯರನ್ನು ಎದುರಿಸಬೇಕಾಗಿದ್ದು, ತನ್ನ ಅತಿದೊಡ್ಡ ಮಾರುಕಟ್ಟೆಯನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.


from India & World News in Kannada | VK Polls https://ift.tt/36L6z1h

ಮೋದಿ 2.0: ದೇಶದ ಮುಂದೆ ವಿಕಾಸ ಯಾತ್ರೆಯ ವರದಿ ಮುಂದಿಟ್ಟ ಪ್ರಧಾನಿ ಮೋದಿ!

ನವದೆಹಲಿ: ನೇತೃತ್ವದ ಎರಡನೇಯ ಅವಧಿಯ ಕೇಂದ್ರ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡಿದ್ದು, ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಧಾನಿ ಮೋದಿ ದೇಶಕ್ಕೆ ವಿಸ್ತೃತ ಮಾಹಿತಿ ನೀಡಿದ್ದಾರೆ. ಮೋದಿ 2.0 ಸಧನೆಗಳ ಕುರಿತು ದೇಶದ ಜನತೆಗೆ ಬಹಿರಂಗ ಪತ್ರ ಬರೆದಿರುವ ಪ್ರಧಾನಿ ಮೋದಿ, ಈ ಅವಧಿಯಲ್ಲಿಯಾದ ಅಭಿವೃದ್ಧಿ ಕಾರ್ಯಗಳು, ಸರ್ಕಾರ ಕೈಗೊಂಡ ದಿಟ್ಟ ನಿರ್ಧಾರಗಳು ಹಾಗೂ ಜಾಗತಿಕ ಬದಲಾವಣೆಗಳ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ. ಅದರಂತೆ ಮೋದಿ 2.0 ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳತ್ತ ಹೆಚ್ಚಿನ ಗಮನ ಹರಿಸಿರುವ ಪ್ರಧಾನಿ ಮೋದಿ, ಒಂದು ವರ್ಷದ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಆಧುನಿಕ ಭಾರತದ ನಿರ್ಮಾಣಕ್ಕ ಅಗತ್ಯವಾದ ಎಲ್ಲಾ ಕ್ರಮಗಳನ್ನು ತಮ್ಮ ಸರ್ಕಾರ ಕೈಗೊಂಡಿದ್ದು, ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಮೋದಿ 2.0 ಸರ್ಕಾರದ ವಿಕಾಸ ಯಾತ್ರೆಯ ಸಂಪೂರ್ಣ ವಿವರಗಳನ್ನು ಖುದ್ದು ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಈ ಒದು ವರ್ಷದ ಅವಧಿಯಲ್ಲಿ ಕೈಗೊಳ್ಳಲಾದ ಐತಿಹಾಸಿಕ ದಿಟ್ಟ ನಿರ್ಧಾರಗಳ ಕುರಿತೂ ಪ್ರಧಾನಿ ಮೋದಿ ದೇಶದ ಜನತೆಗೆ ಬರೆದ ಬಹಿರಂಗ ಪತ್ರದಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದಿದ್ದು, ತ್ರಿವಳಿ ತಲಾಖ್ ನಿಷಧ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಂತಹ ಐತಿಹಾಸಿಕ ನಿರ್ಣಯಗಳ ಕುರಿತು ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.


from India & World News in Kannada | VK Polls https://ift.tt/2zCchqr

ಇತಿಹಾಸ ಬರೆದ ಸ್ಪೇಸ್ ಎಕ್ಸ್: ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ಖಾಸಗಿ ರಾಕೆಟ್!

ವಾಷಿಂಗ್ಟನ್: ಬಾಹ್ಯಾಕಾಶ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ಮಹತ್ತರವಾದ ಸಾಧನೆ ಮಾಡಿದ್ದು, ಸ್ಪೇಸ್‌ ಎಕ್ಸ್‌ನ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ನಾಸಾದ ಇಬ್ಬರು ಗಗನಯಾತ್ರಿಗಳಾದ ರಾಬರ್ಟ್ ಬೆಹ್ನ್ಕೆನ್ ಹಾಗೂ ಡೌಗ್ಲಾಸ್ ಹರ್ಲಿ ಅವರನ್ನು ಹೊತ್ತ ಫಾಲ್ಕನ್ 9 ರಾಕೆಟ್, ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಬೆಳೆಸಿತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಪೇಸ್ ಎಕ್ಸ್ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್, ಕಂಪನಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ಬರೆದಿದ್ದು, ನಮ್ಮೆಲ್ಲರ ಕನಸು ನನಸಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಹೊತ್ತ ರಾಕೆಟ್‌ನ್ನು ಉಡಾಯಿಸಿದ್ದು, ಸ್ಪೇಸ್ ಎಕ್ಸ್ ಈ ಸಾಧನೆ ಮಾಡಿದ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉಡಾವಣೆಗೆ ಸಾಕ್ಷಿಯಾದ ಟ್ರಂಪ್: ಇನ್ನು ಸ್ಪೇಸ್ ಎಕ್ಸ್ ರಾಕೆಟ್ ಉಡಾವಣೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖುದ್ದು ಸಾಕ್ಷಿಯಾಗಿದ್ದು ವಿಶೇಷವಾಗಿತ್ತು. ಕೆನಡಿ ಬಾಹ್ಯಾಕಾಶ ನಿಲ್ದಾಣದಲ್ಲಿ ಹಾಜರಿದ್ದ ಟ್ರಂಪ್, ಫಾಲ್ಕನ್ 9 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಚಿಮ್ಮುವುದನ್ನು ಕಣ್ತುಂಬಿಕೊಂಡರು.


from India & World News in Kannada | VK Polls https://ift.tt/36WjC0h

ಜಲಾಶಯಗಳಿಂದ ಹೆಚ್ಚುವರಿ ನೀರು ಬಿಡುಗಡೆಗೂ ಮುನ್ನ ಮಾಹಿತಿ ವಿನಿಮಯ: ಹೈಕೋರ್ಟ್‌ನಲ್ಲಿ ಅರ್ಜಿ

ಲಾಕ್‌ಡೌನ್ 5.0: ಜೂನ್ 8, ಜೂನ್ 30 ಭಾರತೀಯರ ಪಾಲಿಗೇಕೆ ಮಹತ್ವದ ದಿನಗಳಾಗಲಿವೆ?

ನವದೆಹಲಿ:ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಸರಣಿ ಲಾಕ್‌ಡೌನ್‌ನ್ನು ಮುಂದುವರೆಸಿರುವ ಕೇಂದ್ರ ಸರ್ಕಾರ, ಜೂನ್ 30ರವೆರೆಗೆ ಜಾರಿಗೊಳಿಸಿದೆ. ಆದರೆ ಈ ಲಾಕ್‌ಡೌನ್ ಕೇವಲ ಕೆಂಪು ವಲಯಕ್ಕೆ ಮಾತ್ರ ಸೀಮಿತವಾಗಿದ್ದು, ಉಳಿದ ಕಡೆಗಳಲ್ಲಿ ಜೂನ್ 8ರಿಂದ ಜನಜೀವನ ಸಹಜ ಸ್ಥಿತಿಗೆ ಮರಳಲಿರುವುದು ವಿಶೇಷ. ಈ ಕುರಿತು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ಗೃಹ ಸಚಿವಾಲಯ ಭಾರೀ ಸಡಿಲಿಕೆಗಳನ್ನು ಘೋಷಿಸಿದೆ. ಒಟ್ಟು ಮೂರು ಹಂತಗಳಲ್ಲಿ ದೇಶವನ್ನು 'ಅನ್‌ಲಾಕ್' ಮಾಡುವ ನಿಯಮಗಳ ಕುರಿತು ಮಾರ್ಗಸೂಚಿಗಳಲ್ಲಿ ಸ್ಪಷ್ಟಪಡಿಸಲಾಗಿದೆ. ಅದರಂತೆ ಜೂನ್ 8 ರಿಂದ ದೇಶದ ಬಹುತೇಕ ಭಾಗಗಳು ಅನ್‌ಲಾಕ್‌ ಆಗಲಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುವುದು ಖಚಿತವಾಗಿದೆ. ಹಸಿರುವ ಮತ್ತು ಕಿತ್ತಳೆ ವಲಯಗಳಲ್ಲಿ ಎಲ್ಲಾ ಚಟುವಟಿಕೆಗಳೂ ಪುನರಾರಂಭವಾಗಲಿವೆ. ಆದರೆ ಮೂರು ಹಂತಗಳಲ್ಲಿ ಅನಲಾಕ್‌ ನಿಯಮಾವಳಿಗಳನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಪ್ರಮುಖವಾಗಿ ಧಾರ್ಮಿಕ ಸ್ಥಳಗಳು, ಹೋಟೆಲ್, ಮಾಲ್‌ಗಳು ಆತಿಥ್ಯ ಸೇವೆಗಳನ್ನು ಪುನರಾರಂಭಿಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಇವುಗಳ ಪುನರಾರಂಭಕ್ಕೆ ದೇಶದಾದ್ಯಂತ ಸಿದ್ಧತೆ ಆರಂಭವಾಗಿದೆ. ಆದರೆ ಕೆಂಪು ವಲಯಗಳಲ್ಲಿ ಜೂನ್ 30ರವರೆಗೂ ಈ ಹಿಂದಿನ ಕಠಿಣ ಲಾಕ್‌ಡೌನ್ ನಿಯಮಾವಳಿಗಳೇ ಮುಂದುವರೆಯಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಅಂತಾರಾಜ್ಯ ಓಡಾಕ್ಕೂ ಅನುಮತಿ ನೀಡಲಾಗಿದೆ. ಇದೇ ಕಾರಣಕ್ಕೆ ಜೂನ್ 8 ಸಮಸ್ತ ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಲಿದ್ದು, ಇಷ್ಟು ದಿನಗಳ ಕಾಲ ಲಾಕ್‌ಡೌನ್ ನಿಯಮಾವಳಿಗಳನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿರುವ ಜನತೆ, ಜೂನ್ 8ರವರೆಗೂ ಈ ನಿಯಮಾವಳಿಗಳನ್ನು ಪಾಲಿಸುವುದು ಅನಿವಾರ್ಯವಾಗಲಿದೆ. ಜೂನ್ 8 ರ ಬಳಿಕ ಜನಜೀವನ ಸಹಜ ಸ್ಥಿತಿಗೆ ಬರಲಿದ್ದು, ಈ ಸಾಮಾನ್ಯ ಸ್ಥಿತಿಗೆ ಹೊಂದಿಕೊಳ್ಳುವುದಕ್ಕೂ ತುಸು ಸಮಯ ಹಿಡಿಯುತ್ತದೆ ಎಂಬುದನ್ನು ಮರೆಯಬಾರದು. ಇಷ್ಟು ದಿನಗಳ ಕಾಲ ಲಾಕ್‌ಡೌನ್ ಸ್ಥಿತಿಗೆ ಹೊಂದಿಕೊಂಡಿದ್ದ ಜನತೆ ಇದೀಗ ಅನ್‌ಲಾಕ್ ಸ್ಥಿತಿಗೆ ಮರಳಿ ಬರುವದಕ್ಕೆ ಜೂನ್ ಮೊದಲ ವಾರ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂಬುದು ಸತ್ಯ. ಅದೇ ರೀತಿ ಕೆಂಪು ವಲಯಗಳಲ್ಲಿ ಜೂನ್ 30 ರವರೆಗೆ ಲಾಕ್‌ಡೌನ್ ಮುಂದುವರೆಯಲಿದೆ. ಇದು ಕೂಡ ಅತ್ಯಂತ ಮಹತ್ವದ ನಿರ್ಣಯವಾಗಿದ್ದು, ಕೊರೊನಾ ವೈರಸ್ ಹಾವಳಿಯನ್ನು ತಪ್ಪಿಸುವ ಮತ್ತೊಂದು ಅವಕಾಶವನ್ನು ಈ ವಲಯಕ್ಕೆ ನೀಡಲಾಗಿದೆ. ಮಾರಕ ವೈರಾಣುವನ್ನು ಹೋಗಲಾಡಿಸಿ ಜನಜೀವನವನ್ನು ಸಹಜ ಸ್ಥಿತಿಗೆ ತರುವುದು ಈ ವಲಯಗಳ ಜನತೆಯ ಜವಾಬ್ದಾರಿಯಾಗಿದೆ. ಒಟ್ಟಿನಲ್ಲಿ ಲಾಕ್‌ಡೌನ್ 5.0 ಈ ಹಿಂದಿನ ಲಾಕ್‌ಡೌನ್‌ಗಳಿಗಿಂತ ಅತ್ಯಂತ ಭಿನ್ನವಾಗಿರಲಿದ್ದು, ಮಾರಕ ಕೊರೊನಾ ವೈರಸ್‌ನಿಂದ ಮುಕ್ತಿ ಪಡೆಯುವಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ.


from India & World News in Kannada | VK Polls https://ift.tt/2TRwqzG

ವಿದೇಶಿ ಸ್ಟಾರ್‌ಗಳಿಲ್ಲದೆ ಐಪಿಎಲ್‌ ಆಯೋಜಿಸುವುದರಲ್ಲಿ ಅರ್ಥವಿಲ್ಲ: ನೆಸ್‌ ವಾಡಿಯಾ

ಹೊಸದಿಲ್ಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಜಾಗತಿಕ ಆಕರ್ಷಣೆಯನ್ನು ಹೊಂದಿರುವ ಟೂರ್ನಿಯಾಗಿದ್ದು, ವಿದೇಶಿ ಆಟಗಾರರಿಲ್ಲದೆ ಆತಿಥ್ಯ ವಹಿಸುವುದರಲ್ಲಿ ಅರ್ಥವಿಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ಸಹ-ಮಾಲೀಕ ನೆಸ್ ವಾಡಿಯಾ ಅಭಿಪ್ರಾಯ ಪಟ್ಟಿದ್ದಾರೆ. ಮಾರ್ಚ್‌ 29ರಂದು ಆರಂಭವಾಗಬೇಕಿದ್ದ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌, ಕೊರೊನಾ ವೈರಸ್‌ ಮಾರಣಾಂತಿಕ ಸೋಂಕಿನಿಂದ ಮುಂದೂಡಲಾಗಿದೆ. ಇದೀಗ ಮುಂದಿನ ಸೆಪ್ಟಂಬರ್‌ ಮತ್ತು ಅಕ್ಟೋಬರ್‌ ಅವಧಿಯಲ್ಲಿ ಐಪಿಎಲ್‌ `13ನೇ ಆವೃತ್ತಿಯನ್ನು ಆಯೋಜಿಸಲು ಬಿಸಿಸಿಐ ಎದುರು ನೋಡುತ್ತಿದೆ. ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಐಸಿಸಿ ಟಿ20 ವಿಶ್ವಕಪ್‌ ನಡೆಯದೇ ಇದ್ದರೆ ಮಾತ್ರ ಐಪಿಎಲ್‌ ನಡೆಸಲು ಸಾಧ್ಯ ಇಲ್ಲದೇ ಹೋದಲ್ಲಿ ಅಸಾಧ್ಯ. ಐಪಿಎಲ್‌ ಆಯೋಜಿಸುವ ಬಗ್ಗೆ ಫ್ರಾಂಚೈಸಿಗಳು ಮಿಶ್ರ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಪ್ರಯಾಣದ ನಿಯಮಗಳೊಂದಿಗೆ ಐಪಿಎಲ್‌ ಟೂರ್ನಿಯನ್ನು ಭಾರತೀಯ ಆಟಗಾರರೊಂದಿಗೆ ಮಾತ್ರ ನಡೆಸಬೇಕು ಎಂದು ರಾಜಸ್ಥಾನ ರಾಯಲ್ಸ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ ಯೋಜನೆಯನ್ನು ಮೂರು ಬಾರಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಳ್ಳಿ ಹಾಕಿದೆ. ಇದೀಗ ಕಿಂಗ್ಸ್ ಇಲೆವೆನ್‌ ಪಂಜಾಬ್‌ ಕೂಡ ಅದೇ ಭಾವನೆಯನ್ನು ಪ್ರತಿಧ್ವನಿಸುತ್ತಿದೆ. "ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಭಾರತೀಯ ಆಟಗಾರರಿಂದ ನಡೆಯುವ ಅಂತಾರಾಷ್ಟ್ರೀಯ ಟೂರ್ನಿಯಾಗಿದೆ. ವಿಶ್ವದಲ್ಲಿಯೇ ಪ್ರೀಮಿಯರ್‌ ಕ್ರಿಕೆಟಿಂಗ್‌ ಈವೆಂಟ್‌ ಇದಾಗಿದೆ. ಈ ಟೂರ್ನಿಗೆ ಅಂತಾರಾಷ್ಟ್ರೀಯ ವೇದಿಕೆ ಬೇಕು ಹಾಗೂ ಇಂಟರ್‌ನ್ಯಾಷನಲ್‌ ಸ್ಟಾರ್‌ಗಳು ಬೇಕು," ಎಂದು ಪಿಟಿಐಗೆ ವಾಡಿಯಾ ತಿಳಿಸಿದ್ದಾರೆ. "ಆದರೆ, ಆ ಸಮಯದಲ್ಲಿ ಯಾವ ವಿದೇಶಿ ಆಟಗಾರರಿಗೆ ಪ್ರಯಾಣಿಸಲು ಅವಕಾಶವಿದೆ ಎಂಬುದನ್ನು ನೋಡಬೇಕಾಗಿದೆ (ನಿರ್ಬಂಧಗಳನ್ನು ಪರಿಗಣಿಸಿ). ಬಿಸಿಸಿಐಗೆ ಯಾವಾಗ ಟೂರ್ನಿ ನಡೆಯಬಹುದು ಎಂಬುದರ ಬಗ್ಗೆ ಲೆಕ್ಕಾಚಾರ ಮಾಡಲು ಹಲವಾರು ಅಸ್ಥಿರಗಳಿವೆ ಎಂದು ನಾನು ಭಾವಿಸುತ್ತೇನೆ. ನಾಳೆ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಆಗ ಏನಾಗುತ್ತದೆ? ಈ ಕ್ಷಣಕ್ಕೆ ಕೋವಿಡ್ -19 ಹೊರತುಪಡಿಸಿ ಬೇರೆ ಯಾವುದನ್ನೂ ಯೋಚಿಸುವುದು ಅವಿವೇಕದ ಸಂಗತಿಯಾಗಿದೆ," ಎಂದು ಹೇಳಿದರು. ಜುಲೈ-ಆಗಸ್ಟ್‌ನಲ್ಲಿ ಭಾರತದಲ್ಲಿ ಸಾಂಕ್ರಾಮಿಕ ರೋಗವು ಉತ್ತುಂಗಕ್ಕೇರಲಿದೆ ಎಂದು ಕೆಲವು ತಜ್ಞರು ಸೂಚಿಸುವುದರೊಂದಿಗೆ, ವಾಡಿಯಾ ಐಪಿಎಲ್ ಬಗ್ಗೆ ಮಾತನಾಡುವುದು ಅಕಾಲಿಕವೆಂದು ನಂಬಿದ್ದಾರೆ. "ನಮ್ಮೆಲ್ಲರಿಗೂ ಮುಖ್ಯವಾದ ವಿಷಯವೆಂದರೆ ಪ್ರಸ್ತುತ ಪರಿಸ್ಥಿತಿಯನ್ನು ನಿಭಾಯಿಸುವುದು. ಇದು ಇನ್ನೊಂದು ಅಥವಾ ಎರಡು ತಿಂಗಳವರೆಗೆ ಇರಬಹುದು ಅಥವಾ ಹೆಚ್ಚು ಇರಬಹುದು. ಒಮ್ಮೆ ವೈರಸ್ ಕಡಿಮೆಯಾದ ನಂತರ, ಐಪಿಎಲ್ ಅನ್ನು ಯಾವಾಗ ನಡೆಸಬಹುದು ಮತ್ತು ಅದನ್ನು ಎಲ್ಲಿ ನಡೆಸಬಹುದು ಎಂಬುದರ ಕುರಿತು ನಾವು ಹೆಚ್ಚು ಸ್ಪಷ್ಟತೆಯನ್ನು ಹೊಂದಬಹುದು," ಎಂದು ವಾಡಿಯಾ ಹೇಳಿದರು. "ನನ್ನ ಅನುಭವದ ಪ್ರಕಾರ ಐಪಿಎಲ್ ಅನ್ನು ನೋಡಲು ಭಾರತೀಯ ಪ್ರೇಕ್ಷಕರು ಸಂತೋಷಪಡುತ್ತಾರೆ ಎಂದು ಖಾತ್ರಿಯಿದೆ. ಜರ್ಮನಿಯಲ್ಲಿ ಫುಟ್ಬಾಲ್ ಈಗಾಗಲೇ ಪ್ರಾರಂಭವಾಗಿದೆ ಮತ್ತು ಇಪಿಎಲ್ ಶೀಘ್ರದಲ್ಲೇ ಪ್ರಾರಂಭವಾಗುತ್ತಿದೆ. ಐಪಿಎಲ್ ನಡೆಯುವ ಸಾಧ್ಯತೆಯನ್ನು ನಾನು ನೋಡುತ್ತಿದ್ದೇನೆ. ಆದರೆ ಮುಂದಿನ ಎರಡು ತಿಂಗಳಾದರೂ ವೈರಸ್ ಅನ್ನು ಎದುರಿಸುವ ಅಗತ್ಯತೆ ಇದೆ." ಎಂದು ವಾಡಿಯಾ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dkJJ39

ಲಾಕ್‌ಡೌನ್‌ 5.0: ಜೂನ್‌ 8 ರಿಂದ ದೇವಾಲಯ, ಮಾಲ್‌, ಹೋಟೆಲ್‌ ಆರಂಭ

ಹೊಸದಿಲ್ಲಿ: ಲಾಕ್‌ಡೌನ್‌ 5.0 ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಇಲಾಖೆ ಶನಿವಾರ ಬಿಡುಗಡೆ ಮಾಡಿದ್ದು, ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಜೂನ್‌ 30ರವರೆಗೆ ಲಾಕ್‌ಡೌನ್‌ ವಿಸ್ತರಣೆ ಮಾಡಲಾಗಿದೆ. ಉಳಿದ ಕಡೆಗಳಲ್ಲಿ ಹಂತ ಹಂತವಾಗಿ ಚಟುವಟಿಕೆಗಳನ್ನು ಆರಂಭಿಸುವಂತೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.ಲಾಕ್‌ಡೌನ್‌ ಮುಖ್ಯಾಂಶಗಳೆಂದರೆ ಜೂನ್‌ 8ರಿಂದ ಹೋಟೆಲ್‌, ಮಾಲ್‌, ಧಾರ್ಮಿಕ ಸ್ಥಳಗಳು ಸಾರ್ವಜನಿಕರಿಗೆ ತೆರೆಯಲಿವೆ. ಶಾಲಾ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಜುಲೈನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಂತಾರಾಷ್ಟ್ರೀಯ ವಿಮಾನ, ಥಿಯೇಟರ್‌, ಜಿಮ್‌ ಸದ್ಯಕ್ಕೆ ಆರಂಭವಾಗಲ್ಲ. ಅಂತಾರಾಜ್ಯ ಪ್ರಯಾಣಿಕರಿಗೆ ಯಾವುದೇ ಇನ್ನು ಮುಂದೆ ಯಾವುದೇ ಪಾಸ್‌ಗಳ ಅಗತ್ಯವಿರುವುದಿಲ್ಲ. ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ 'ಅನ್‌ಲಾಕ್ 1‌'ರ ಮಾರ್ಗಸೂಚಿಗಳು ಈ ಕೆಳಗಿನಂತಿವೆ.

ಮೊದಲ ಹಂತದಲ್ಲಿ ಜೂನ್‌ 8ರಿಂದ ಧಾರ್ಮಿಕ ಸ್ಥಳಗಳು, ಶಾಪಿಂಗ್‌ ಮಾಲ್‌, ಹೋಟೆಲ್‌ - ರೆಸ್ಟೋರೆಂಟ್‌ ಮತ್ತು ಆತಿಥ್ಯ ಸೇವೆಗಳನ್ನು (ಲಾಡ್ಜ್‌, ರೆಸಾರ್ಟ್‌) ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರತ್ಯೇಕವಾಗಿ ಬಿಡುಗಡೆ ಮಾಡಲಿದೆ ಎಂದು ಗೃಹ ಇಲಾಖೆ ಹೇಳಿದೆ.

ಶಾಲೆ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳು, ಕೋಚಿಂಗ್‌ ಸೆಂಟರ್‌ಗಳನ್ನು ತೆರೆಯುವ ಬಗ್ಗೆ ಜುಲೈನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆ ಹೇಳಿದೆ. ರಾಜ್ಯಗಳು ಮತ್ತು ಕೇಂದ್ರಾಡಾಳಿತ ಪ್ರದೇಶಗಳ ಜೊತೆ ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಈ ತೀರ್ಮಾನ ತೆಗೆದುಕೊಳ್ಳುವ ಮೊದಲು ಶಾಲೆ-ಕಾಲೇಜುಗಳನ್ನು ತೆರೆಯುವ ಸಂಬಂಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರಕಾರಗಳು ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಜೊತೆ ಸಮಾಲೋಚನೆ ನಡೆಸಬಹುದು ಎಂದು ಸೂಚಿಸಲಾಗಿದೆ.

ಪರಿಸ್ಥಿತಿಯನ್ನು ಅವಲೋಕಿಸಿ ಅಂತಾರಾಷ್ಟ್ರೀಯ ವಿಮಾನ, ಮೆಟ್ರೋ ರೈಲು, ಸಿನಿಮಾ ಮಂದಿರಗಳು, ಜಿಮ್‌, ಈಜುಕೊಳಗಳನ್ನು ತೆರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸರಕಾರ ಹೇಳಿದೆ. ಇದರ ಜೊತೆಗೆ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಹಾಗೂ ಮನರಂಜನಾ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.

ಜೂನ್‌ 30ರ ವರೆಗೆ ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಲಾಕ್‌ಡೌನ್ ಎಂದಿನಂತೆ‌ ಮುಂದುವರಿಯಲಿದೆ. ಈ ಪ್ರದೇಶದಿಂದ ಹೊರಗೆ ಮತ್ತು ಒಳಗೆ ಜನ ಓಡಾಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿರ್ಬಂಧಿತ ಪ್ರದೇಶದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಸಚಿವಾಲಯ ಕಟ್ಟಪ್ಪಣೆ ಹೊರಡಿಸಿದೆ. ಈ ಪ್ರದೇಶಗಳಲ್ಲಿ ಮನೆ ಮನೆ ಸಮೀಕ್ಷೆ, ಸಂಪರ್ಕಿತರ ತೀವ್ರ ಶೋಧ ನಡೆಸುವಂತೆಯೂ ಹೇಳಲಾಗಿದೆ.

ಕಂಟೈನ್‌ಮೆಂಟ್‌ ಝೋನ್‌ ಹೊರಗೆ ಬೇಕಿದ್ದರೆ ರಾಜ್ಯ ಸರಕಾರಗಳು ಬಫರ್‌ ಜೋನ್‌ ಗುರುತು ಮಾಡಬಹುದು. ಇದಲ್ಲದೆ ಕಂಟೈನ್‌ಮೆಂಟ್‌ ಝೋನ್ ಹೊರತಾಗಿಯೂ ರಾಜ್ಯ ಸರಕಾರಗಳು ಅಗತ್ಯಬಿದ್ದರೆ ಇತರ ಚಟುವಟಿಕೆಗಳಿಗೂ ಕಡಿವಾಣ ಹಾಕಲು ಅವಕಾಶ ನೀಡಲಾಗಿದೆ.

ಅಂತಾರಾಜ್ಯ ಪ್ರಯಾಣಕ್ಕೆ ವ್ಯಕ್ತಿಗಳು ಮತ್ತು ಸರಕು ವಾಹನಗಳಿಗೆ ಯಾವುದೇ ಪಾಸ್‌ ಅಗತ್ಯವಿರುವುದಿಲ್ಲ. ಆದರೆ ರಾಜ್ಯ ಸರಕಾರಗಳು ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಜನರು ಮತ್ತು ವಾಹನಗಳ ಓಡಾಟದ ಮೇಲೆ ನಿಯಂತ್ರಣ ಹೇರಬಹುದು. ಆದರೆ ಹಾಗೆ ಮಾಡುವ ಮೊದಲು ಈ ಸಂಬಂಧ ಜನರಿಗೆ ಮೊದಲೇ ತಿಳಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

ಇನ್ನು ಶ್ರಮಿಕ ರೈಲು, ಪ್ರಯಾಣಿಕ ರೈಲು ಮತ್ತು ದೇಶದೊಳಗಿನ ವಿಮಾನಗಳ ನಿಯಂತ್ರಿತ ಸಂಚಾರ ಇರಲಿದೆ. ಯಾವುದೇ ರಾಜ್ಯ ಸರಕಾರಗಳು ಅಕ್ಕ ಪಕ್ಕದ ರಾಷ್ಟ್ರಗಳಿಂದ ಬರುವ ಅಥವಾ ತೆರಳುವ ಸರಕು ವಾಹನಗಳ ಸಂಚಾರವನ್ನು ತಡೆಯುವಂತಿಲ್ಲ ಎಂದು ಆದೇಶಿಸಲಾಗಿದೆ.

ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಜನರ ಸಂಚಾರವನ್ನು ಕಟ್ಟು ನಿಟ್ಟಾಗಿ ನಿರ್ಬಂಧಿಸಲಾಗಿದೆ. ಈ ಸಂಬಂಧ ಸಿಆರ್‌ಪಿಸಿ ಸೆಕ್ಷನ್‌ 144ರ ಅಡಿ ಸ್ಥಳೀಯ ಅಧಿಕಾರಿಗಳು ಅಥವಾ ಸಂಸ್ಥೆಗಳು ನಿಷೇಧಾಜ್ಞೆಯನ್ನೂ ಹೇರಬಹುದು ಎಂದು ಹೇಳಲಾಗಿದೆ.

65 ವರ್ಷ ಮೇಲ್ಪಟ್ಟ ಹಿರಿಯರು, ಗರ್ಭಿಣಿಯರು, 10 ವರ್ಷ ಕೆಳಗಿನ ಮಕ್ಕಳಿಗೆ ತುರ್ತು ಅಗತ್ಯಗಳನ್ನು ಹೊರತುಪಡಿಸಿ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.

ಆರೋಗ್ಯ ಸೇತು ಆಪ್‌ನ್ನು ಉದ್ಯೋಗಿಗಳೆಲ್ಲರೂ ಇನ್‌ಸ್ಟಾಲ್‌ ಮಾಡಲೇಬೇಕು. ರಾಜ್ಯ ಸರಕಾರಗಳು ಕೇಂದ್ರ ಸರಕಾರ ಹೊರಡಿಸಿರುವ ನಿಯಮಾವಳಿಗಳನ್ನು ಯಾವುದೇ ಕಾರಣಕ್ಕೂ ಸಡಿಲಗೊಳಿಸುವಂತಿಲ್ಲ. ಗೃಹ ಇಲಾಖೆ ಹೊರಡಿಸಿರುವ ನಿಯಮಾವಳಿಗಳನ್ನು ಮೀರುವ ವ್ಯಕ್ತಿಗಳು ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇನ್ನು ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಮದುವೆಗೆ ಗರಿಷ್ಠ 50 ಜನ, ಅಂತ್ಯ ಸಂಸ್ಕಾರಕ್ಕೆ 20 ಜನ ಮಿತಿಯನ್ನು ಮುಂದುವರಿಸಲಾಗಿದೆ. ಜನಸೇರುವ ದೊಡ್ಡ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಗುಟ್ಕಾ ಪಾನ್‌ ಮಸಾಲ ಸೇವನೆ, ಮದ್ಯ ಸೇವನೆಗೆ ನಿಷೇಧ ಮುಂದುವರಿದಿದೆ.

ಸಾಧ್ಯವಾದಷ್ಟು ವರ್ಕ್‌ ಫ್ರಂ ಹೋಮ್‌ ಮುಂದುವರಿಸುವುದು. ಕಚೇರಿಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ಬಳಸುವುದು, ಸ್ವಚ್ಛತೆ ಕಾಪಾಡುವುದು, ಆಗಾಗಾ ಕಚೇರಿಗಳನ್ನು ಸ್ಯಾನಿಟೈಸೇಷನ್‌ ಮಾಡುವಂತೆ ಸೂಚಿಸಲಾಗಿದೆ.



from India & World News in Kannada | VK Polls https://ift.tt/2ZSwMda

Lockdown 5.0: ಸದ್ಯ ಅಂತಾರಾಷ್ಟ್ರೀಯ ವಿಮಾನ ಹಾರಾಟ ಇಲ್ಲ, ಜೂನ್‌ 20ರ ನಂತರ ನಿರ್ಧಾರ ಸಾಧ್ಯತೆ

ಹೊಸದಿಲ್ಲಿ: ಕೊರೊನಾ ವೈರಸ್‌ನಿಂದಾಗಿ ಲಾಕ್‌ಡೌನ್‌ ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ. ಆದರೆ ಸಂಚಾರಕ್ಕೆ ಯಾವಾಗ ಅನುಮತಿ ಸಿಗುತ್ತದೆ ಎಂಬ ಪ್ರಶ್ನೆಗೆ ಜೂನ್‌ 20ರ ನಂತರ ಉತ್ತರ ದೊರೆಯುವ ಸಾಧ್ಯತೆ ಇದೆ. ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರನ್ವಯ ಎರಡನೇ ಹಂತದಲ್ಲಿ ಅಂದರೆ 15 ದಿನಗಳಾದ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ, ಎಲ್ಲ ರಾಜ್ಯಗಳಿಂದ ಅಭಿಪ್ರಾಯಗಳ್ನು ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಂತಾರಾಷ್ಟ್ರೀಯ ವಿಮಾನ ಸಂಚಾರದ ಕುರಿತು ಈಗಲೇ ನಿರ್ಧಾರ ಸಾಧ್ಯವಿಲ್ಲ. ಆದರೆ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಸೂಕ್ತ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಸಂಗ್ರಹಿಸಿ ಮೂರನೇ ಹಂತದಲ್ಲಿ ಅಂದರೆ ಜೂನ್‌ 20ರ ನಂತರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಚಿತ್ರಮಂದಿರ, ಜಿಮ್‌, ಈಜುಕೊಳ, ಅಮ್ಯೂಸ್‌ಮೆಂಟ್‌ ಪಾರ್ಕ್‌, ಬಾರ್‌, ಅಸೆಂಬ್ಲಿ ಹಾಲ್‌, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು, ಬೃಹತ್ ಸಭೆ, ಸಮಾರಂಭಗಳ ಆರಂಭದ ಬಗ್ಗೆಯೂ ಜೂನ್‌ ತಿಂಗಳ ಮೂರನೇ ವಾರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.


from India & World News in Kannada | VK Polls https://ift.tt/3eC0My6

'ಖೇಲ್‌ ರತ್ನ ಪ್ರಶಸ್ತಿ'ಗೆ ರೋಹಿತ್‌ ಶರ್ಮಾ, 'ಅರ್ಜುನ ಪ್ರಶಸ್ತಿ'ಗೆ ಧವನ್‌ ನಾಮ ನಿರ್ದೇಶನ

ಹೊಸದಿಲ್ಲಿ: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ()ಯು ಸ್ಟಾರ್‌ ಓಪನರ್‌ ರೋಹಿತ್ ಶರ್ಮಾ ಅವರನ್ನು ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ-2020ಕ್ಕೆ ಆಯ್ಕೆ ಮಾಡಿದ್ದರೆ, ಇಶಾಂತ್ ಶರ್ಮಾ, ಶಿಖರ್ ಧವನ್ ಮತ್ತು ದೀಪ್ತಿ ಶರ್ಮಾ ಅರ್ಜುನ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯವು 2016ರ ಜನವರಿ 1 ರಿಂದ 2019ರ ಡಿಸೆಂಬರ್ 31 ರವರೆಗೆ ಪರಿಗಣನೆಯ ಅವಧಿಯೊಂದಿಗೆ ಆಯಾ ಪ್ರಶಸ್ತಿಗಳಿಗೆ ಆಹ್ವಾನಗಳನ್ನು ಕೋರಿತ್ತು. ಭಾರತ ತಂಡದ ಉಪ ನಾಯಕ ಸೀಮಿತ ಓವರ್‌ಗಳ ಮಾದರಿಯಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಇವರು 2019ರ ವರ್ಷದ ಐಸಿಸಿ ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು. ಅಲ್ಲದೆ, 2019ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಐದು ಶತಕಗಳನ್ನು ಸಿಡಿಸಿ ದಾಖಲೆ ಮಾಡಿದ್ದರು. ಒಂದೇ ಟೂರ್ನಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಗೂ ರೋಹಿತ್‌ ಭಾಜನರಾಗಿದ್ದರು. 4 ಟಿ20 ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕೆ ಇಳಿದು 2 ಶತಕಗಳನ್ನು ರೋಹಿತ್‌ ಸಿಡಿಸಿದ್ದಾರೆ. ಪದಾರ್ಪಣೆ ಟೆಸ್ಟ್‌ ಪಂದ್ಯದಲ್ಲಿ ಅತಿ ವೇಗದ ಶತಕ ಸಿಡಿಸಿದ ದಾಖಲೆಯನ್ನು ಎಡಗೈ ಬ್ಯಾಟ್ಸ್‌ಮನ್‌ ಮಾಡಿದ್ದಾರೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಎರಡು ಬಾರಿ ಗೋಲ್ಡನ್‌ ಬ್ಯಾಟ್‌ಗಳನ್ನು ಪಡೆದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ಖ್ಯಾತಿಯೂ ಧವನ್‌ ಹೆಸರಿನಲ್ಲಿದೆ. ಓಡಿಐನಲ್ಲಿ ಅತಿ ವೇಗವಾಗಿ 2000 ಮತ್ತು 3000 ರನ್‌ಗಳಿಸಿದ ಭಾರತೀಯ ಮೊದಲ ಬ್ಯಾಟ್ಸ್‌ಮನ್‌ ಹಾಗೂ ಓಡಿಐನಲ್ಲಿ ಅತಿ ವೇಗವಾಗಿ 4000 ಮತ್ತು 5000 ರನ್‌ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಕೂಡ ಶಿಖರ್ ಧವನ್‌ ಹೆಸರಿನಲ್ಲಿದೆ. ಮೂರು ಮಾದರಿಯ ಕ್ರಿಕೆಟ್‌ ಆಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರ ಎಂಬ ದಾಖಲೆ ಹೊಂದಿರುವ ಇಶಾಂತ್‌ ಶರ್ಮಾ, ಬೌಲಿಂಗ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಏಷ್ಯಾ ಹೊರಗಡೆ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ದಾಖಲೆಯನ್ನು ಮಾಡಿದ್ದಾರೆ. ಇದನ್ನು ಪರಿಗಣಿಸಿರುವ ಬಿಸಿಸಿಐ ಇಶಾಂತ್‌ ಶರ್ಮಾ ಅವರನ್ನು ಅರ್ಜುನ ಪ್ರಶಸ್ತಿಗೆ ಪರಿಗಣಿಸಿದೆ. ಭಾರತ ಮಹಿಳಾ ಕ್ರಿಕೆಟ್‌ ತಂಡದ ಸ್ಟಾರ್ ಆಲ್‌ರೌಂಡರ್‌ ದೀಪ್ತಿ ಶರ್ಮಾ ಅವರು ವುಮೆನ್ಸ್‌ ಓಡಿಐನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿದ ಭಾರತೀಯ ಮಹಿಳಾ ಆಟಗಾರ್ತಿಯಾಗಿದ್ದಾರೆ. ಅಲ್ಲದೆ, ಮಹಿಳಾ ಓಡಿಐನಲ್ಲಿ 6 ವಿಕೆಟ್‌ಗಳನ್ನು ಪಡೆದು ಮೊದಲ ಭಾರತೀಯ ಮಹಿಳಾ ಸ್ಪಿನ್ನರ್‌ ಎಂಬ ದಾಖಲೆ ಕೂಡ ದೀಪ್ತಿ ಶರ್ಮಾ ಅವರ ಹೆಸರಿನಲ್ಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZQcReI

ರಾಜ್ಯದಲ್ಲಿ ಒಂದೇ ದಿನ ದಾಖಲೆಯ 103 ಕೊರೊನಾ ರೋಗಿಗಳ ಗುಣಮುಖ

ಬೆಂಗಳೂರು: ಶನಿವಾರ ರಾಜ್ಯದಲ್ಲಿ ಹೊಸದಾಗಿ 141 ಪ್ರಕರಣಗಳು ದೃಢಪಟ್ಟಿವೆ. ಆದರೆ ಇದೇ ವೇಳೆ 103 ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇದು ರಾಜ್ಯದ ಮಟ್ಟಿಗೆ ಹೊಸ ದಾಖಲೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್‌-19ನಿಂದ ಚೇತರಿಸಿಕೊಂಡವರ ಸಂಖ್ಯೆ 1 ಸಾವಿರದ ಅಂಚಿಗೆ ತಲುಪಿದ್ದು 977ಕ್ಕೆ ಏರಿಕೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಶನಿವಾರ 43 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 21 ಮಂದಿ ಹಾಗೂ ದಾವಣಗೆರೆಯ 20 ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದವರಲ್ಲಿ ಸೇರಿದ್ದಾರೆ. ಇವರ ಜೊತೆಗೆ ಕೋಲಾರದಲ್ಲಿ 5, ಬೀದರ್‌ ಮತ್ತು ಬಾಗಲಕೋಟೆಯಲ್ಲಿ ತಲಾ 3, ದಕ್ಷಿಣ ಕನ್ನಡ ಹಾಗೂ ರಾಯಚೂರಿನಲ್ಲಿ ತಲಾ 2, ಗದಗ, ಉಡುಪಿ, ಚಿಕ್ಕಬಳ್ಳಾಪುರ ಮತ್ತು ವಿಜಯಪುರದಲ್ಲಿ ತಲಾ ಓರ್ವ ರೋಗಿಗಳು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಉಡುಪಿಯಲ್ಲಿ 18 ಮಕ್ಕಳು ಸೇರಿ 15 ಜನರನ್ನು ಇಂದು ಬೆಳಿಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಆದರೆ ಆರೋಗ್ಯ ಇಲಾಖೆ ಬುಲೆಟಿನ್‌ನಲ್ಲಿ ಉಡುಪಿಯ ಕೇವಲ ಒಬ್ಬರು ರೋಗಿಯನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ. ಇವರ ಸಂಖ್ಯೆಯೂ ಸೇರಿದರೆ ಒಂದೇ ದಿನ 147 ರೋಗಿಗಳು ಗುಣಮುಖರಾದಂತೆ ಆಗುತ್ತದೆ. ಇನ್ನು ಶನಿವಾರದ ಬುಲೆಟಿನ್‌ ನಂತರ ರಾಜ್ಯದಲ್ಲಿ ಒಟ್ಟು ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ 2922ಕ್ಕೆ ಏರಿಕೆಯಾಗಿದೆ. ಇವರಲ್ಲಿ 997 ರೋಗಿಗಳು ಗುಣಮುಖರಾಗಿದ್ದು, 49 ಸೋಂಕಿತರು ಅಸುನೀಗಿದ್ದಾರೆ. ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಸದ್ಯ ರಾಜ್ಯದಲ್ಲಿ 1,874 ಸಕ್ರಿಯ ಪ್ರಕರಣಗಳು ಇವೆ.


from India & World News in Kannada | VK Polls https://ift.tt/3gAT5tC

ಆಂತರಿಕ ಕಚ್ಚಾಟದಿಂದ ಬಿಜೆಪಿ ಸರಕಾರ ಪತನವಾಗಲಿದೆ: ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಯಾವ ಶಾಸಕರೂ ರಾಜಿನಾಮೆ ನೀಡುವುದಿಲ್ಲ. ಆಂತರಿಕ ಕಚ್ಚಾಟದಿಂದಲೇ ರಾಜ್ಯದಲ್ಲಿನ ಪತನವಾಗಲಿದೆ ಎಂದು ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇದು ಅತ್ಯಂತ ಭ್ರಷ್ಟ ಸರಕಾರ. ರಾಜ್ಯ ಮತ್ತು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ಸರಕಾರ ಆದಷ್ಟು ಬೇಗ ಹೋಗುವುದು ಒಳ್ಳೆಯದು ಎಂದರು. ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಲಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ತಮ್ಮ ಪಕ್ಷದಲ್ಲಿ ನಡೆಯುತ್ತಿರುವ ಜಗಳವನ್ನು ಮುಚ್ಚಿಕೊಳ್ಳಲು ಅವರು ಈ ರೀತಿ ಸುಳ್ಳಿನ ಮಾತುಗಳನ್ನು ಹೇಳುತ್ತಿದ್ದಾರೆ. ಜಾರಕಿಹೊಳಿಯವರು ನಮ್ಮ ಪಕ್ಷ ಬಿಟ್ಟು ಹೋದಾಗ ಮಹೇಶ್ ಕುಮುಟಳ್ಳಿ ಬಿಟ್ಟರೆ ಬೇರೆ ಶಾಸಕರು ಅವರ ಜೊತೆ ಇರಲಿಲ್ಲ ಎಂದರು. ಜೆಡಿಎಸ್‍ನ ಮೂವರು, ನಮ್ಮ ಪಕ್ಷದ 14 ಮಂದಿ ಆಪರೇಷನ್ ಕಮಲದಿಂದ ಬಿಜೆಪಿಗೆ ಹೋದರು. ಅಧಿಕಾರ ಮತ್ತು ಹಣಕ್ಕಾಗಿ ಅವರು ಪಕ್ಷಾಂತರ ಮಾಡಿದರು. ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ನಾಯಕರು ರಹಸ್ಯ ಸಭೆ ನಡೆಸಿರುವುದನ್ನು ಮುಚ್ಚಿಡಲು ಈ ರೀತಿ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು. ಬಿಜೆಪಿಯಲ್ಲಿ ಬೆಂಕಿ ಬಿದ್ದಿದೆ. ಯಡಿಯೂರಪ್ಪ ನಮ್ಮ ನಾಯಕರಲ್ಲ. ಅವರು ಬರೇ ಮುಖ್ಯಮಂತ್ರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಇದರಿಂದ ರವಾನೆಯಾಗುವ ಸಂದೇಶ ಏನು? ಬಿಜೆಪಿಯ ಆಂತರಿಕ ಭಿನ್ನಮತದಲ್ಲಿ ಕಾಂಗ್ರೆಸ್ ಕೈ ಹಾಕುವುದಿಲ್ಲ. ಅವರ ಕಚ್ಚಾಟದಿಂದ ಸರಕಾರ ಹೋದರೆ ನಾವು ಜವಾಬ್ದಾರರಲ್ಲ ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದರು. ಇಂಥ ಕೆಟ್ಟ ಸರಕಾರ ಎಂದೂ ಬಂದಿರಲಿಲ್ಲ. ಈ ಸರಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಅಧಿಕಾರ ಚಲಾಯಿಸುವ ಮುಖ್ಯಮಂತ್ರಿ ಒಬ್ಬರು, ಮುಖ್ಯಮಂತ್ರಿ ಇನ್ನೊಬ್ಬರು ಎಂದು ಸಿದ್ದರಾಮಯ್ಯ ಟೀಕಿಸಿದರು. ಬಾದಾಮಿ ವಿಧಾನಸಭೆ ಕ್ಷೇತ್ರಕ್ಕೆ 600 ಕೋಟಿ ರೂ. ಅನುದಾನ ನೀಡಲಾಗಿದೆ ಎಂಬುದು ಸುಳ್ಳು. ಕೊಟ್ಟಿದ್ದರೆ ಆದೇಶದ ಪ್ರತಿ ತೋರಿಸಲಿ ಎಂದು ಸಿದ್ದರಾಮಯ್ಯ ಅವರು ಸವಾಲು ಹಾಕಿದರು. ಉಮೇಶ್ ಕತ್ತಿಯವರು ನನ್ನನ್ನು ಭೇಟಿಯಾಗಲು ಪ್ರಯತ್ನ ಮಾಡಿದರು ಎಂಬುದು ಊಹಾಪೋಹ. ಅವರು ನನ್ನ ಸ್ನೇಹಿತರು. ಅವರು ನನ್ನೊಂದಿಗೆ ಜನತಾ ಪರಿವಾರದಲ್ಲಿದ್ದರು. ನನ್ನ ಮತ್ತು ಅವರ ಮಧ್ಯೆ ಗೆಳೆತನ, ವಿಶ್ವಾಸ ಇದೆ. ಆದರೆ ಅವರು ನನ್ನನ್ನು ಭೇಟಿಯಾಗುವ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಸರಕಾರ ಹತ್ತು ಪರ್ಸೆಂಟ್ ಸರ್ಕಾರ ಎಂದು ಮೋದಿಯವರು ಹೇಳಿದ್ದರು. ಈಗಿನ ಸರಕಾರ ಎಷ್ಟು ಪರ್ಸೆಂಟ್ ಸರಕಾರ ಎಂಬುದನ್ನು ಬಿಜೆಪಿಯವರೇ ಹೇಳುತ್ತಿದ್ದಾರೆ. ವರ್ಗಾವಣೆ ಸೇರಿದಂತೆ ಎಲ್ಲದಕ್ಕೂ ಸರಕಾರದಲ್ಲಿ ಹಣ ನೀಡಬೇಕು. ಕತ್ತಿಯವರ ಮನೆಯಲ್ಲಿ ಊಟಕ್ಕೆ ಸೇರಿದ್ದ ಶಾಸಕರೇ ಈ ಮಾತು ಹೇಳಿದ್ದಾರೆ ಎಂದರು ಸಿದ್ದರಾಮಯ್ಯ ಗುಡುಗಿದರು.


from India & World News in Kannada | VK Polls https://ift.tt/2TNKeuX

ವಿರೇಂದ್ರ ಸೆಹ್ವಾಗ್‌ರ ಐಪಿಎಲ್‌ ಶ್ರೇಷ್ಠ ಇನಿಂಗ್ಸ್‌ಗೆ ಇದೀಗ 6 ವರ್ಷಗಳು..!

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌() ಟೂರ್ನಿಯಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಗಳಿಸಿ ಇಂದಿಗೆ 6 ವರ್ಷಗಳು ಪೂರ್ಣಗೊಂಡಿವೆ. 2014ರಲ್ಲಿ ಇದೇ ದಿನದಂದು ಅಂದು ವಿರೇಂದ್ರ ಸೆಹ್ವಾಗ್‌ ಅವರು ಮುಂಬೈ ವಾಂಖೇಡೆ ಕ್ರೀಡಾಂಗಣದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಪರ ಐಪಿಎಲ್‌ ಟೂರ್ನಿಯಲ್ಲಿ ಎದುರು ಕೇವಲ 58 ಎಸೆತಗಳಲ್ಲಿ 122 ರನ್‌ ಚಚ್ಚಿದ್ದರು. ಪ್ಲೇ ಆಫ್‌ ಹಂತದ ಎರೆಡನೇ ಕ್ವಾಲಿಫಯರ್‌ ಪಂದ್ಯ ಇದಾಗಿತ್ತು. ಈ ಪಂದ್ಯದಲ್ಲಿ ತಂಡ, ಸೆಹ್ವಾಗ್‌ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 226 ರನ್‌ ಗಳಿಸಿತ್ತು. ವಾಂಖೇಡೆ ಕ್ರೀಡಾಂಗಣದಲ್ಲಿ ಅಭಿಮಾನಿಗಳಿಗೆ ವೀರು ಭರ್ಜರಿ ರಸದೌತಣ ಉಣಬಡಿಸಿದ್ದರು. ಬಲಗೈ ಬ್ಯಾಟ್ಸ್‌ಮನ್‌ 210.34 ಸ್ಟ್ರೈಕ್‌ ರೇಟ್‌ನೊಂದಿಗೆ 12 ಬೌಂಡರಿಗಳು ಹಾಗೂ 6 ಸಿಕ್ಸರ್‌ಗಳನ್ನು ಬಾರಿಸಿದ್ದರು. ಸೆಹ್ವಾಗ್‌ ಅವರ ಐಪಿಎಲ್‌ ವೃತ್ತಿ ಜೀವನದ ಎರಡನೇ ಶತಕ ಇದಾಗಿತ್ತು. ಮೊದಲನೇ ಶತಕ 2011ರಲ್ಲಿ ಡೆಕ್ಕಾನ್‌ ಚಾಜರ್ಸ್‌ ವಿರುದ್ಧ ಗಳಿಸಿದ್ದರು. ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ನಿಡಿದ್ದ 226 ರನ್‌ ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕೇವಲ 24 ರನ್‌ಗಳಿಂದ ಸೋಲು ಒಪ್ಪಿಕೊಂಡಿತ್ತು. ಚೆನ್ನೈ ತಂಡವನ್ನು 202/7 ರನ್‌ಗಳಿಗೆ ಪಂಜಾಬ್‌ ನಿಯಂತ್ರಿಸಿತ್ತು. ಅತ್ಯುತ್ತಮ ಬ್ಯಾಟಿಂಗ್‌ ಮಾಡಿದ್ದ ಸುರೇಶ್‌ ರೈನಾ ಕೇವಲ 25 ಎಸೆತಗಳಲ್ಲಿ 87 ರನ್‌ ಗಳಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿಯಲು ಪಂಜಾಬ್‌ ಅವಕಾಶ ಕಲ್ಪಿಸಲಿಲ್ಲ. 24 ರನ್‌ಗಳಿಂದ ಗೆಲುವು ಸಾಧಿಸಿದ ಕಿಂಗ್ಸ್‌ ಇಲೆವೆನ್ ಪಂಜಾಬ್‌ ತಂಡ ಮೊಟ್ಟ ಮೊದಲ ಬಾರಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಫೈನಲ್‌ ಹಣಾಹಣಿಯಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ಎದುರು ಸೋಲುವ ಮೂಲಕ ರನ್ನರ್‌ ಅಪ್‌ಗೆ ತೃಪ್ತಿಪಟ್ಟಿತ್ತು. ವಿರೇಂದ್ರ ಸೆಹ್ವಾಗ್‌ ಐಪಿಎಲ್‌ ವೃತ್ತಿ ಜೀವನದಲ್ಲಿ ಒಟ್ಟು 104 ಪಂದ್ಯಗಳಿಂದ 27.66 ಸರಾಸರಿಯಲ್ಲಿ 2,728 ರನ್‌ ಗಳಿಸಿದ್ದಾರೆ. 2015ರ ಆವೃತ್ತಿಯಲ್ಲಿ ಕಣಕ್ಕೆ ಇಳಿದಿದ್ದರು. ಈ ಆವೃತ್ತಿಯಲ್ಲಿ ಅವರು 8 ಪಂದ್ಯಗಳಿಂದ ಕೇವಲ 99 ರನ್‌ ಮಾತ್ರ ಗಳಿಸಿದ್ದರು. ಇದೇ ಆವೃತ್ತಿ ಸೆಹ್ವಾಗ್‌ ಅವರ ಐಪಿಎಲ್‌ ವೃತ್ತಿ ಜೀವನ ಕೊನೆಯದಾಗಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2TViIvo

ಭಾರತೀಯ ಕ್ರಿಕೆಟ್‌ನಲ್ಲಿ ಎಂ.ಎಸ್‌ ಧೋನಿಗೆ ಇನ್ನೂ ಅವಕಾಶಗಳಿವೆ: ಬಿಸಿಸಿಐ ಮಾಜಿ ಖಜಾಂಚಿ

ಹೊಸದಿಲ್ಲಿ: ಬುದ್ದಿವಂತ ಕ್ರಿಕೆಟಿಗ ಎಂದು ಗುರುತಿಸಿಕೊಂಡಿರುವ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಇನ್ನೂ ಅವಕಾಶಗಳಿವೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಮಾಜಿ ಖಜಾಂಚಿ ಅನಿರುದ್ದ್‌ ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಧೋನಿ ಇನ್ನೂ ಫಿಟ್ ಆಗಿ ಇದ್ದು, ಭಾರತದಲ್ಲಿಯೇ ಅತ್ಯಂತ ಶ್ರೇಷ್ಠ ವಿಕೆಟ್‌ ಕೀಪರ್‌ ಆಗಿದ್ದಾರೆ ಹಾಗೂ ಕ್ರಿಕೆಟ್‌ನ ಅತ್ಯಂತ ಬುದ್ದಿವಂತ ಆಟಗಾರರಾಗಿದ್ದಾರೆ," ಎಂದು ಅವರು ನೀರಜ್‌ ಮೋದಿ ಶಾಲೆಯ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. "ಪಂದ್ಯದ ಸಂದರ್ಭದಲ್ಲಿ ನೀವು ಗಮನಿಸಬಹುದು, ಆಟಗಾರರನ್ನು ಬಲಕ್ಕೆ ಹಾಗೂ ಎಡಗೈ ಚಲಿಸುವಂತೆ ಅವರು ಮಾಡುತ್ತಿರುತ್ತಾರೆ. ಆಟಗಾರರು ತಾನು ನಿಂತಿದ್ದ ಸ್ಥಳದಲ್ಲೇ ಇನಿಂಗ್ಸ್‌ ಅನ್ನು ಮುಗಿಸಿರುತ್ತಾರೆ. ಅಷ್ಟರ ಮಟ್ಟಿಗೆ ಧೋನಿ ಅಂಗಳದಲ್ಲಿ ಕಾರ್ಯಪ್ರವೃತ್ತರಾಗಿರುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಅವರು ತೀರ್ಮಾನ ತೆಗೆದುಕೊಳ್ಳುವುದರಲ್ಲಿ ಅತ್ಯುತ್ತಮರಾಗಿದ್ದಾರೆ," ಎಂದು ವಿವರಿಸಿದರು. ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿಆರ್‌ಪಿ ಅಲ್ಲದಿದ್ದರೂ ದೇಶಿ ಕ್ರಿಕೆಟಿಗರಿಗೋಸ್ಕರವಾದರೂ ನಡೆಯಬೇಕು ಎಂದು ಅನಿರುದ್ದ್‌ ಚೌಧರಿ ಹೇಳಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮಾರ್ಚ್‌ 29 ರಂದೇ ಆರಂಭವಾಗಬೇಕಿತ್ತು. ಕೊರೊನಾ ವೈರಸ್‌ ಇಡೀ ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿದ್ದರಿಂದ 13ನೇ ಆವೃತ್ತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದೇ ವರ್ಷ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಐಸಿಸಿ ಟಿ20 ವಿಶ್ವಕಪ್‌ ನಡೆಯಬೇಕಿದೆ. ಒಂದು ವೇಳೆ ಅಕ್ಟೋಬರ್‌ ವೇಳೆಗೆ ಕೊರೊನಾ ವೈರಸ್‌ ಒಂದು ಹಂತಕ್ಕೆ ನಿಯಂತ್ರಣವಾಗದ ಪಕ್ಷದಲ್ಲಿ ಜಾಗತಿಕ ಮಹತ್ವದ ಟೂರ್ನಿಯನ್ನು ಮುಂದೂಡುವುದು ಖಚಿತ. ವಿಶ್ವಕಪ್ ಮುಂದೂಡಿದ್ದೇ ಆದಲ್ಲಿ ಸೆಪ್ಟೆಂಬರ್‌ ಅಂತ್ಯದಿಂದ ನವೆಂಬರ್‌ ಆರಂಭದ ಒಳಗಾಗಿ ಐಪಿಎಲ್‌ 13ನೇ ಆವೃತ್ತಿಯನ್ನು ನಡೆಸುವ ಬಗ್ಗೆ ಬಿಸಿಸಿಐ ಅಂದುಕೊಂಡಿದೆ. ಐಪಿಎಲ್‌ ನಡೆಯುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಒಂದು ವೇಳೆ ಐಪಿಎಲ್‌ ಟೂರ್ನಿಯನ್ನು ಬೇರೆ ದೇಶಕ್ಕೆ ಸ್ಥಳಾಂತರಿಸಿದರೂ ಸಮಯದಲ್ಲಿ ಜಾಸ್ತಿ ವಿಭಿನ್ನವಾಗಿರುವ ರಾಷ್ಟ್ರಕ್ಕೆ ಬದಲಾಯಿಸುವುದಿಲ್ಲ. ಏಕೆಂದರೆ, ಟೂರ್ನಿ ಪ್ರಸಾರ ಮಾಡುವ ಬ್ರಾಡ್‌ಕಾಸ್ಟರ್‌ಗಳಿಗೆ 8 ಗಂಟೆ ಅಗತ್ಯವಾಗಿರುತ್ತದೆ. ಅವರಿಗೆ ಭಾರತೀಯ ಕಾಲಮಾನ ಅತ್ಯಂತ ಮುಖ್ಯವಾಗಿರುತ್ತದೆ," ಎಂದು ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dj5Y9A

ಸ್ವಾವಲಂಬಿ ಬದುಕಿಗೆ 'ಅಕ್ಷಯಕಲ್ಪ' ಸಂಸ್ಥೆಯಿಂದ ಮಹತ್ವದ ಹೆಜ್ಜೆ

ಕೊರೊನಾ ವೈರಸ್‌ ಸೋಂಕು ಹಾಗೂ ಲಾಕ್‌ಡೌನ್‌ ಕಾರಣದಿಂದ ನಗರದಲ್ಲಿ ಉದ್ಯೋಗ ಕಳೆದುಕೊಂಡ ಹಲವರು ಗ್ರಾಮಾಂತರ ಪ್ರದೇಶಕ್ಕೆ ತೆರಳಿ ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಅಂತಹವರ ಪಾಲಿಗೆ ಅಕ್ಷಯಕಲ್ಪ ಹೊಸ ಆಶಾಕಿರಣವಾಗಿದೆ. ಸಾವಯವ ಹಾಲಿನ ಪ್ರಯೋಜನಗಳನ್ನು ಅರಿತವರಿಂದ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಹೈನೋದ್ಯಮ ಅತ್ಯುತ್ತಮ ಆಯ್ಕೆಯಾಗಿದೆ. ಲಾಭದಾಯಕವಾಗಿಸಿಕೊಂಡು, ಉದ್ಯಮಿಯಾಗಿ ಬೆಳೆಯಬೇಕು ಎಂಬ ಗುರಿ ಹೊಂದಿರುವವರಿಗೆ ಅಕ್ಷಯಕಲ್ಪ ಸಂಸ್ಥೆ ಮಾರ್ಗದರ್ಶನ ನೀಡುವ ಮೂಲಕ ಕೃಷಿಗೆ ಒತ್ತು ನೀಡಿ ದಾರಿ ದೀಪವಾಗುತ್ತಿದೆ. ಬೆಂಗಳೂರಿನಲ್ಲಿ ಬೇಡಿಕೆಯಲ್ಲಿರುವ ಸಾವಯವ ಹಾಲಿನ ಶೇ.97ರಷ್ಟು ಮಾರುಕಟ್ಟೆಯನ್ನು ಹೊಂದಿರುವ ಮತ್ತು ಚೆನ್ನೈನಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿರುವ ಅಕ್ಷಯಕಲ್ಪ, ಬರುವ ದಿನಗಳಲ್ಲಿ ಗ್ರಾಹಕರಿಂದ ಮತ್ತಷ್ಟು ಉತ್ತಮ ಸ್ಪಂದನೆಯ ನಿರೀಕ್ಷೆಯಲ್ಲಿದೆ.ಆರ್ಗಾನಿಕ್‌ ವರ್ಲ್ಡ್, ಸಾರಾ ಆರ್ಗಾನಿಕ್‌, ಲೂಮಿಯಾ, ನೆಫ್ಲರ್‌ ಸೂಪರ್‌ ಮಾರ್ಕೆಟ್‌, ಫುಡ್‌ ಹಾಲ್‌ ಸೇರಿದಂತೆ ಬೆಂಗಳೂರಿನ 256 ಸ್ಟೋರ್‌ಗಳಲ್ಲಿ ಅಕ್ಷಯಕಲ್ಪ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯ ಇವೆ. ಹಾಲಿನ ಬೆಲೆ ಇತರೆ ಬ್ರಾಂಡ್‌ಗಳಿಗಿಂತ ಕಡಿಮೆ ಇದೆ. ಆದರೆ, ಗುಣಮಟ್ಟದಲ್ಲಿ ಮಾತ್ರ ರಾಜಿ ಇಲ್ಲ. ಶುದ್ಧ ಹಾಲು ಮತ್ತು ಸ್ಲಿಮ್‌ ಹಾಲು ಲಭ್ಯವಿದೆ. ಅದರ ಜೊತೆಗೆ ಮೊಸರು, ಪನೀರ್‌, ಚೀಸ್‌ ಕೂಡ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಗೆ ಖರೀದಿಗೆ ಅನುಕೂಲವಾಗುವಂತೆ ಕಂಪನಿ ಪ್ರತ್ಯೇಕ ಆ್ಯಪ್‌ ಕೂಡ ಹೊಂದಿದೆ.

ಅಕ್ಷಯಕಲ್ಪ ಸಂಸ್ಥೆ ಸ್ಥಾಪನೆ ಹಿಂದೆ ರೋಚಕ ಕಥೆ ಇದೆ. ಹೈನೋದ್ಯಮದ ಸ್ಥಾಪಕರಾದ ಶಶಿಕುಮಾರ್‌ ಬೆಂಗಳೂರು ನಗರ ಜಿಲ್ಲೆಅತ್ತಿಬೆಲೆ ಸಮೀಪದ ಗುಡ್ಡಹಟ್ಟಿ ಗ್ರಾಮದ ಬಡ ಕೃಷಿ ಕುಟುಂಬದಲ್ಲಿ ಹುಟ್ಟಿದರು. ಶಶಿಕುಮಾರ್‌ ಅವರು ಉನ್ನತ ವ್ಯಾಸಂಗದ ಇಚ್ಛೆ ಹೊಂದಿದ್ದರೂ ಪಾಲಕರು ಶಕ್ತರಾಗಿರಲಿಲ್ಲ. ಕೊನೆಗೆ ಸಂಬಂಧಿಕರ ನೆರವು ಪಡೆದು ಸತತ ಪರಿಶ್ರಮದಿಂದ ಉತ್ತಮ ವ್ಯಾಸಂಗ ಮಾಡಿ ಅಮೆರಿಕದ ಶಿಕಾಗೋದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು.

ವಿಪ್ರೊ ಕಂಪನಿಯಲ್ಲಿಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸಕ್ಕೆ ಸೇರಿ ದೇಶ-ವಿದೇಶದಲ್ಲಿ20 ವರ್ಷಗಳ ಕಾಲ ಅದೇ ಕ್ಷೇತ್ರದಲ್ಲಿ ದುಡಿದರು. ಆದರೆ ಕೃಷಿ ಕ್ಷೇತ್ರದ ಆಕರ್ಷಣೆ ಶಶಿಕುಮಾರ್‌ ಅವರನ್ನು ಸೆಳೆಯುತ್ತಲೇ ಇತ್ತು. ಕೃಷಿಯಲ್ಲಿಏನನ್ನಾದರೂ ಸಾಧಿಸಬೇಕು ಎಂಬ ಆಲೋಚನೆ ದೃಢವಾಯಿತು. ಎಂಜಿನಿಯರಿಂಗ್‌ ಕ್ಷೇತ್ರದ ರೀತಿ ಕೃಷಿ ಕ್ಷೇತ್ರದಲ್ಲೂ ರೋಲ್‌ ಮಾಡೆಲ್‌ಗಳನ್ನು ರೂಪಿಸಬೇಕೆಂದು ಯೋಚಿಸಿ ಉದ್ಯೋಗ ತೊರೆದು ಹೈನುಗಾರಿಕೆ ಬೆಳವಣಿಗೆ ಮತ್ತು ಸಂಶೋಧನೆಗೆ ಒತ್ತು ನೀಡಿದರು.

2010ರಲ್ಲಿ ಅಕ್ಷಯಕಲ್ಪ ಹೆಸರಿನ ಎನ್‌ಜಿಒ ಆರಂಭಿಸಿದರು. ನಂತರ ಬೆಳವಣಿಗೆಯನ್ನು ಗಮನಿಸಿ ಸಂಸ್ಥೆಯಾಗಿ ರೂಪಿಸಿದರು. ಮಹಿಳಾ ಸ್ವಸಹಾಯ ಕಲ್ಪನೆಯಲ್ಲಿ ಹೈನೋದ್ಯಮ ಆರಂಭಿಸಲು ಉತ್ತೇಜನ ನೀಡಲಾಯಿತು. ಆರಂಭದಲ್ಲಿಮಹಿಳೆಯರ ಉದ್ಯೋಗಕ್ಕೆ ಸಾಮಾಜಿಕ ಸಮಸ್ಯೆಗಳು ಎದುರಾದವು. ಎಲ್ಲವನ್ನೂ ಎದುರಿಸಿ ಕುಟುಂಬ ಸದಸ್ಯರನ್ನು ಕೌನ್ಸೆಲಿಂಗ್‌ ಮಾಡುವ ಮೂಲಕ ಹಾದಿಯನ್ನು ಸುಲಭಗೊಳಿಸಲಾಯಿತು. ಇದೀಗ ಅಕ್ಷಯಕಲ್ಪವು ನೂರಾರು ಉದ್ಯೋಗಿಗಳಿಗೆ, ಹೈನುಗಾರರಿಗೆ ದಾರಿದೀಪವಾಗುವ ಸಂಸ್ಥೆಯಾಗಿ ಬೆಳೆದಿದೆ.

'ಅಕ್ಷಯಕಲ್ಪವು ಹೈನೋದ್ಯಮ ಆರಂಭಿಸಲು ಸಾಲ ಸೌಲಭ್ಯ ಒದಗಿಸಿಕೊಡುವ ಜತೆಗೆ ಗೊಬ್ಬರ, ಮೇವಿನ ವ್ಯವಸ್ಥೆ ಮಾಡಲಿದೆ. ನೂರಾರು ಸಂಖ್ಯೆಯಲ್ಲಿಹಸುಗಳನ್ನು ಸಾಕಲು ಅವಕಾಶ ಇಲ್ಲ. ಬದಲಿಗೆ ಗರಿಷ್ಠ 20 ಹಸುಗಳನ್ನು ಮಾತ್ರ ಸಾಕಲು ಅವಕಾಶ ನೀಡಲಾಗುತ್ತದೆ'' ಎಂದು ಶಶಿಕುಮಾರ್ ‌ತಿಳಿಸಿದರು.

''ತಾವು ಖರೀದಿಸುವ ಹಾಲಿನ ಮೂಲ, ಅದರ ಸಂಸ್ಕರಣೆ, ಪ್ಯಾಕೇಜಿಂಗ್‌ ಮತ್ತು ಪೂರೈಕೆ ಹೀಗೆ ಪ್ರತಿ ಹಂತದ ಬಗ್ಗೆ ಗ್ರಾಹಕ ತಿಳಿದುಕೊಳ್ಳುವ ಹಕ್ಕು ಹೊಂದಿದ್ದಾನೆ. ರೈತನಿಗೆ ಇದರಿಂದ ಎಷ್ಟು ಲಾಭ ಸಿಗುತ್ತದೆ ಎನ್ನುವುದು ಕೂಡ ಗ್ರಾಹಕ ಅರಿಯಬೇಕು. ರೈತನಿಗೆ ಅನುಕೂಲವಾಗುತ್ತಿದೆ ಎಂದಾಗ ಆ ಹಾಲು, ಹೈನೋತ್ಪನ್ನಗಳ ಖರೀದಿ ಮತ್ತು ಬಳಕೆಯಿಂದ ಗ್ರಾಹಕರಿಗೂ ಸಂತೋಷವಾಗುತ್ತದೆ. ಹೀಗಾಗಿ, ಗ್ರಾಹಕರು ಹಾಲು ಖರೀದಿಗೆ ಮೊದಲು ಅವುಗಳನ್ನು ಎಲ್ಲಿಂದ ಖರೀದಿ ಮಾಡಲಾಗುತ್ತಿದೆ, ರೈತರಿಗೆ ಎಷ್ಟು ಲಾಭ ಆಗುತ್ತಿದೆ ಎಂದು ಯೋಚಿಸಿ ಖರೀದಿಸಬೇಕು,'' ಎಂದು ಶಶಿಕುಮಾರ್‌ ಹೇಳಿದರು.

ಭವಿಷ್ಯದ ಆಲೋಚನೆಗಳು :

''ಹೈನೋದ್ಯಮದ ಕುರಿತು ಅತ್ಯಾಧುನಿಕ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ ಆರಂಭಿಸಬೇಕು, ಫಾಡರ್‌ಫೀಡ್‌ ಟೆಸ್ಟ್‌ ಸೆಂಟರ್‌ಆರಂಭ ಮಾಡಬೇಕು, ಜಾಗತಿಕ ಮಟ್ಟದ ರೈತರನ್ನು ಬೆಳೆಸಬೇಕು, ಸಂಶೋಧನಾ ಕೇಂದ್ರದಲ್ಲಿಅವರನ್ನೇ ನೇಮಕ ಮಾಡಿಕೊಳ್ಳಬೇಕು ಎಂಬ ಗುರಿ ಹೊಂದಲಾಗಿದೆ. ಈ ಎಲ್ಲ ಕೆಲಸಗಳಿಗೆ ಇನ್ನೂ 2 ವರ್ಷ ಕಾಲ ಹಿಡಿಯಬಹುದು,'' ಎಂದು ಶಶಿಕುಮಾರ್‌ ತಿಳಿಸಿದರು.

''ಹಾಲಿ ಅಕ್ಷಯಕಲ್ಪ ಸಂಸ್ಥೆಯು ಒಟ್ಟು 50 ಸಾವಿರ ಲೀಟರ್‌ ಹಾಲು ಮತ್ತು ಹೈನೋತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಈ ತಿಂಗಳ ಅಂತ್ಯದಲ್ಲಿಇನ್ನೂ 20,000 ದಿಂದ 30,000 ಲೀಟರ್‌ ಹಾಲಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ,'' ಎಂದು ಶಶಿಕುಮಾರ್‌ ತಿಳಿಸಿದರು.

ಯೋಜನೆ ಸದುಪಯೋಗ ಅಗತ್ಯ

''ಕೃಷಿ ಮತ್ತು ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳುವವರಿಗೆ ಸರಕಾರದಿಂದ ಸಾಕಷ್ಟು ಯೋಜನೆಗಳಿವೆ. ಸಹಾಯಧನ ಸಿಗುತ್ತದೆ. ಹೀಗಾಗಿ, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಗುಣಮಟ್ಟ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿಕೆಲಸ ಮಾಡಬೇಕಾಗಿದೆ,'' ಎನ್ನುತ್ತಾರೆ ಶಶಿಕುಮಾರ್‌.

''ಅಮೆರಿಕದಲ್ಲಿ ನಾನು 14 ವರ್ಷ ಕೆಲಸ ಮಾಡಿದ್ದೇನೆ. ಸಾವಯವ ಕೃಷಿ ಉತ್ಪನ್ನಗಳು, ಹೈನೋತ್ಪನ್ನಗಳಿಗೆ ಬೇಡಿಕೆ ಇದೆ. ಅದು ಇತ್ತೀಚೆಗೆ ಇನ್ನಷ್ಟು ಹೆಚ್ಚಾಗುತ್ತಿದೆ. ಅಮೆರಿಕದಲ್ಲಿಪೂರೈಕೆಯಾಗುವ ಹಾಲಿನಲ್ಲಿಶೇ. 16ರಷ್ಟು ಸಾವಯವ ಹಾಲಿನ ಪಾಲಿದೆ. ಸಾವಯವ ಹಾಗೂ ಗುಣಮಟ್ಟದ ಹಾಲು ಪೂರೈಕೆಯಲ್ಲಿ ನ್ಯೂಜಿಲ್ಯಾಂಡ್‌ ಮುಂಚೂಣಿಯಲ್ಲಿದೆ. ನಂತರ ಆಸ್ಪ್ರೇಲಿಯಾ ಇದೆ. ಗುಣಮಟ್ಟದ ಕಾರಣ ಅಮೆರಿಕ ಸೇರಿದಂತೆ ಹಲವು ಮಾರುಕಟ್ಟೆಗಳನ್ನು ನ್ಯೂಜಿಲ್ಯಾಂಡ್‌ ನಿಭಾಯಿಸುತ್ತಿವೆ. ಆದರೆ, ನಮ್ಮ ದೇಶದ ಹಾಲಿನ ಉತ್ಪನ್ನಗಳು ಜಾಗತಿಕ ಮಟ್ಟದ ಗುಣಮಟ್ಟಕ್ಕೆ ದೊಡ್ಡ ಪ್ರಮಾಣದಲ್ಲಿ ತಲುಪಿಲ್ಲ. ಕಳೆದ 15 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ, ಗುಣಮಟ್ಟ ಸುಧಾರಣೆಯಾಗಿದೆ. ಆದರೆ, ಗುಣಮಟ್ಟ ಇನ್ನಷ್ಟು ಹೆಚ್ಚಳವಾಗಬೇಕು. ಆಗ ಅಮೆರಿಕ, ಯೂರೋಪ್‌ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಫ್ತು ಮಾಡಲು ವಿಫುಲ ಅವಕಾಶಗಳು ದೊರೆಯುತ್ತವೆ. ಇದರಿಂದ ರೈತರ ಆದಾಯದ ಜೊತೆಗೆ ದೇಶದ ಕರೆನ್ಸಿ ಮೌಲ್ಯ ಹೆಚ್ಚಳದಲ್ಲಿ ರೈತರು ಕೊಡುಗೆ ನೀಡಿದಂತಾಗುತ್ತದೆ'' ಎಂದು ಶಶಿಕುಮಾರ್‌ ಹೇಳಿದರು.

''ಕಳೆದ ವರ್ಷದಲ್ಲಿ(2019) ಅಕ್ಷಯಕಲ್ಪ ಬರೋಬ್ಬರಿ 65 ಕೋಟಿ ರೂ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಿದೆ. ಹಿಂದಿನ ವರ್ಷಗಳಲ್ಲಿ ಕ್ರಮವಾಗಿ 29 ಕೋಟಿ ರೂ., 19 ಕೋಟಿ ರೂ. ಮತ್ತು 14 ಕೋಟಿ ರೂ. ಮೌಲ್ಯದ ಉತ್ಪನ್ನಗಳು ಮಾರಾಟವಾಗಿವೆ. ಆದರೆ, ಸಂಸ್ಥೆಗೆ ಈವರೆಗೆ ಲಾಭವಾಗಿಲ್ಲ. ಹಾಲು ಮಾರಾಟ ಪ್ರಮಾಣ 1 ಲಕ್ಷ ಲೀಟರ್‌ಗೆ ಏರಿದರೆ ಸಂಸ್ಥೆಗೆ ಲಾಭ ಸಿಗಬಹುದು. ಈವರೆಗೆ ಕೇವಲ ಹೂಡಿಕೆ ಮಾತ್ರ ಮಾಡುತ್ತಿದ್ದೇವೆ. ಆದರೆ, ಬೆಳವಣಿಗೆ ಇದೆ. ಹಿಂದಿನ ಎರಡು ವರ್ಷಗಳಲ್ಲಿಅಕ್ಷಯ ಕಲ್ಪ ಹಾಲಿನ ಮಾರಾಟವೂ ದುಪ್ಪಟ್ಟಾಗಿದೆ. ಜನರಲ್ಲಿಸಾವಯವ ಹಾಲಿನ ಬಗ್ಗೆ ಹೆಚ್ಚಿನ ಅರಿವು ಮೂಡುತ್ತಿದೆ. ಹಾಲಿನ ಗುಣಮಟ್ಟ, ರುಚಿ ಸವಿದವರು ಮತ್ತೆ ಅದೇ ಹಾಲು ಖರೀದಿಸಲು ಬಯಸುವರು'' ಎಂದು ಶಶಿಕುಮಾರ್‌ ತಿಳಿಸಿದರು.

ಕೃಷಿಕರು ರೋಲ್‌ ಮಾಡೆಲ್‌ ಆಗಬೇಕು:

''ಎಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ಕೃಷಿಯೇತರ ವಲಯಗಳಲ್ಲಿರೋಲ್‌ಮಾಡೆಲ್‌ಗಳು ಇರುವಂತೆ ಹೈನೋದ್ಯಮ, ಕೃಷಿಯಲ್ಲೂಮಾದರಿ ಕೃಷಿಕರು ಬೆಳೆಯಬೇಕು. ವ್ಯವಸಾಯ, ಹೈನೋದ್ಯಮವನ್ನು ಉದ್ದಿಮೆಯಂತೆ ಅಭಿವೃದ್ಧಿಪಡಿಸಬೇಕು. ನಗರಕ್ಕೆ ಹೋಗಿ ಏನಾದರೂ ಕೆಲಸ ಮಾಡಿ ಬೆಳೆಯುತ್ತೇನೆ ಎನ್ನುವಂತೆ ವ್ಯವಸಾಯ ಮಾಡುತ್ತೇನೆ ಎನ್ನುವ ಧೈರ್ಯ ಬರಬೇಕು. ರೈತರಿಗೆ ಲಾಭ ಇರಬೇಕು. ಅದಕ್ಕೆ ತಕ್ಕಂತೆ ಗ್ರಾಹಕರು ಇರಬೇಕು. ರೈತರಿಗೆ ಅನುಕೂಲ ಆಗುತ್ತದೆ ಎಂಬ ಭಾವನೆಯೊಂದಿಗೆ ಗ್ರಾಹಕರು ರೈತರ ಬೆಳವಣಿಗೆಗೆ ಸಹಕರಿಸಬೇಕು,'' ಎಂದು ಶಶಿಕುಮಾರ್‌ ಹೇಳಿದರು.

ಅಕ್ಷಯ ಕಲ್ಪ ಸಂಸ್ಥೆಯು ಪ್ರತಿ ಲೀಟರ್‌ ಹಾಲಿಗೆ 47 ರೂ. ನೀಡುತ್ತದೆ. ಆರಂಭಿಕ ಹಂತದಲ್ಲಿಹೈನೋದ್ಯಮ ಆರಂಭಿಸುವವರು ಹೂಡಿಕೆ ಮಾಡಬೇಕಾಗುತ್ತದೆ. ನಂತರದಲ್ಲಿಉತ್ತಮ ಆದಾಯ ಇರುತ್ತದೆ.

ನಿರಂತರ ನೀರು, ಮೇವು ಪೂರೈಕೆ ಇರಲಿ:

ಗುಣಮಟ್ಟದ ಹಾಲು ಮತ್ತು ಉತ್ಪಾದನೆ ಹೆಚ್ಚಳ ಆಗಬೇಕೆಂದರೆ ಹಸುಗಳಿಗೆ ಮೇವು ಮತ್ತು ನೀರಿನ ಕೊರತೆಯಾಗಬಾರದು. ಸೂಕ್ತ ರೀತಿಯಲ್ಲಿಪೂರೈಸಿದರೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಲಾ 4 ಲೀಟರ್‌ನಂತೆ ಒಂದು ಹಸುವಿನಿಂದ 8 ಲೀಟರ್‌ ಹಾಲು ಕರೆಯಬಹುದು.

ಆಸಕ್ತರಿಗೆ ಅವಕಾಶ:

ಅಕ್ಷಯಕಲ್ಪ ಸಂಸ್ಥೆಯ ನೆರವಿನೊಂದಿಗೆ ಹೈನೋದ್ಯಮ ಮಾಡುತ್ತೇವೆ ಎನ್ನುವ ಎಲ್ಲರನ್ನೂ ಸೇರಿಸಿಕೊಳ್ಳುವ ಬದಲು ಕೆಲವರನ್ನು ಮಾತ್ರ ಅಥವಾ ಗ್ರಾಮದಲ್ಲಿಒಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೃಷಿಯಲ್ಲಿಆಸಕ್ತಿ ಹೊಂದಿದ್ದು ಸುಮಾರು 3ರಿಂದ 5 ಎಕರೆ ಜಮೀನು, ಸಾವಯವ ಕೃಷಿ ಕ್ರಮಗಳ ಅಳವಡಿಕೆ, ಸೆಗಣಿ ಗೊಬ್ಬರ ಉತ್ಪಾದನೆ, ಹಸುಗಳಿಗೆ ಮೇವು ಮತ್ತು ನೀರು ಪೂರೈಕೆ, ಹಾಲನ್ನು ನೇರವಾಗಿ ಯಂತ್ರದ ಮೂಲಕ ಕರೆದು ಸಂಸ್ಕರಣಾ ಘಟಕಕ್ಕೆ ತಲುಪಿಸುವ ಕುರಿತು ತರಬೇತಿ ಪಡೆದುಕೊಂಡು ಅದನ್ನು ಅಳವಡಿಸಿಕೊಳ್ಳುವವರಿಗೆ ಆದ್ಯತೆ ನೀಡಲಾಗುತ್ತದೆ.

ಅಕ್ಷಯಕಲ್ಪ ಸಂಸ್ಥೆಯಿಂದ ಸಾವಯವ ಕೃಷಿಯಲ್ಲಿತೊಡಗಿಸಿಕೊಂಡಿರುವ 200 ರೈತರು ಎಲ್ಲಖರ್ಚುಗಳನ್ನು ಕಳೆದು ತಿಂಗಳಿಗೆ ಸರಾಸರಿ 65 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. 200 ಜನರಲ್ಲಿ89 ಜನ ಮಹಿಳೆಯರಿದ್ದಾರೆ. ಕೃಷಿ ಭೂಮಿ ಇದ್ದರೂ ವಿವಿಧ ಕಾರಣಗಳಿಂದ ಕೃಷಿ ಮಾಡಲಾಗದೆ ಕ್ಯಾಬ್‌ ಚಾಲನೆ ಹಾಗೂ ಇನ್ನಿತರ ಕೆಲಸ ಅರಸಿ ನಗರದತ್ತ ತೆರಳಿ ವಾಪಸ್‌ ಬಂದು ಅಕ್ಷಯ ಕಲ್ಪ ಸಂಸ್ಥೆಯ ಮೂಲಕ ಹೈನೋದ್ಯಮದಲ್ಲಿತೊಡಗಿಸಿಕೊಂಡವರು 62 ಜನರಿದ್ದಾರೆ.

300 ಜನರಿಗೆ ಉದ್ಯೋಗ:

ಅಕ್ಷಯಕಲ್ಪ ಹೈನೋದ್ಯಮದಲ್ಲಿ200 ರೈತರು ಸೇರಿ 300 ಉದ್ಯೋಗಿಗಳಾಗಿದ್ದಾರೆ. ತಿಪಟೂರಿನಲ್ಲಿಹಾಲಿನ ಘಟಕ ಇದೆ. ತಿಪಟೂರಿನಿಂದ 50 ಕಿ.ಮೀ ಸುತ್ತಲಿನ ಪ್ರದೇಶಗಳಲ್ಲಿನ ಗ್ರಾಮಗಳ ರೈತರನ್ನು ಆಯ್ಕೆ ಮಾಡಿ ಹೈನೋದ್ಯಮದಲ್ಲಿತೊಡಗಿಸಿಕೊಳ್ಳಲಾಗಿದೆ. ತಿಪಟೂರಿನಿಂದ ಹಾಲು ಬೆಂಗಳೂರಿಗೆ ಬರುತ್ತದೆ. ಸಾವಯವ ಹಾಲಿನ ದರ 70 ರೂ. ಇದೆ. ಚೆನ್ನೈನಲ್ಲೂಅಕ್ಷಯ ಕಲ್ಪ ಹಾಲು ಮಾರಾಟ ಮತ್ತು ಹೈನೋದ್ಯಮ ಆರಂಭಿಸಲು ಯೋಜಿಸಲಾಗಿದೆ.

30 ಸಾವಿರ ಲೀಟರ್‌ಹಾಲು, 5000 ಲೀಟರ್‌ ಮೊಸರು, 2000 ಲೀಟರ್‌ ಪನ್ನೀರ್‌ ಮತ್ತು ಚೀಸ್‌ ಮತ್ತಿತರ ಉತ್ಪನ್ನಗಳ ರೂಪದಲ್ಲಿಮಾರಾಟವಾಗುತ್ತಿದೆ. ''ಸಾವಯವ ವಸ್ತುಗಳಿಗೆಂದೇ ಮಾರುಕಟ್ಟೆ ಇಲ್ಲ. ಆದರೆ, ನಾವು ಅದನ್ನು ಸೃಷ್ಟಿ ಮಾಡಬೇಕು. ಜನರಿಗೆ ಈ ಕುರಿತು ಅರಿವು, ಜ್ಞಾನ ಮೂಡಿದಾಗ ಮಾತ್ರ ಅವುಗಳನ್ನು ಖರೀದಿಸುತ್ತಾರೆ,'' ಎನ್ನುವುದು ಶಶಿಕುಮಾರ್‌ ಅವರ ಅಭಿಪ್ರಾಯ.

ಅಕ್ಷಯಕಲ್ಪ ಹಾಲು ಕರೆಯುವ ಕೇಂದ್ರದಲ್ಲಿ ಸ್ವಚ್ಛತೆಗೆ ಅತಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಯಂತ್ರದ ಮೂಲಕ ಹಾಲು ಕರೆದು ಅದೇ ಸ್ಥಳದಲ್ಲೇ ಪರೀಕ್ಷೆಗೆ ಒಳಪಡಿಸಿ ಆ್ಯಂಟಿ ಬಯೋಟಿಕ್‌ ಪರೀಕ್ಷೆಯನ್ನು ಕೂಡ ಅಲ್ಲೇ ಮಾಡಲಾಗುತ್ತದೆ. ಈ ಡೇಟಾವನ್ನು ಕ್ಲೌಡ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಪ್ರತಿ ಹೊಲದಲ್ಲೂ ಶೀತಲೀಕರಣ ಘಟಕ ಇರುತ್ತದೆ. ಹೀಗಾಗಿ, ಹಾಲನ್ನು ಅಲ್ಲೇ ಸಂಗ್ರಹಿಸಿಡಲಾಗುತ್ತದೆ. ಹೊಲದಿಂದ ಹಾಲು ಘಟಕ ತಲುಪುತ್ತದೆ. ಘಟಕದಲ್ಲಿವಿವಿಧ ಹೆಸರುಗಳು ಮತ್ತು ಗುಣಮಟ್ಟದ ಆಧಾರದ ಮೇಲೆ ಗ್ರಾಹಕರ ಬೇಡಿಕೆ ಮತ್ತು ಅಗತ್ಯಕ್ಕೆ ತಕ್ಕಂತೆ ಪ್ಯಾಕಿಂಗ್‌ ಮಾಡಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಸಾವಯವ ಹಾಲಿನಲ್ಲಿ ಕೊಬ್ಬಿನಂಶವನ್ನು ತೆಗೆಯುವುದಿಲ್ಲ.

ಸಾವಯವ ಗುಣಮಟ್ಟ ಪ್ರಮಾಣಪತ್ರ

ಕೇಂದ್ರ ಕೃಷಿ ಇಲಾಖೆಯಿಂದ ಮಾನ್ಯತೆ ಪಡೆದಿರುವ ಅಫಿಡಾ ಎಂಬ ಸಂಸ್ಥೆ ಹಾಲಿನ ಗುಣಮಟ್ಟವನ್ನು ಪ್ರಮಾಣೀಕರಿಸುತ್ತದೆ. ವರ್ಷಕ್ಕೊಮ್ಮೆ ಮತ್ತು ದಿಢೀರ್‌ ಆಗಿಯೂ ಆಡಿಟ್‌ ಮಾಡಬಹುದು. ಸಾವಯವ ಹಾಲಿಗೆ ಚಿಕ್ಕಮಗಳೂರಿನ ಕಡೂರಿನಿಂದ ಹಿಡಿದು ಚಿತ್ರದುರ್ಗವರೆಗಿನ ದೇಶಿಯ ಸೀಮೆ ಹಸುಗಳನ್ನು ಬಳಸಲಾಗುತ್ತದೆ. ಅದೇ ರೀತಿ ಕ್ರಾಸ್‌ ಬ್ರೀಡ್‌, ಹಳ್ಳಿ ಕಾಡು, ಅಮೃತ್‌ಮಹಲ್‌ ತಳಿ ಕೂಡ ಇವೆ.

ಕೊರೊನಾ ಭೀತಿಯ ಬಳಿಕ ಪ್ರತಿದಿನ 20 ಕ್ಕೂ ಹೆಚ್ಚು ಜನರು ಕರೆ ಮಾಡಿ ಅಕ್ಷಯ ಕಲ್ಪ ಹೈನೋದ್ಯಮ ಕಾರ್ಯಕ್ರಮದಲ್ಲಿಭಾಗವಹಿಸಬಹುದೇ ಎಂದು ಕೇಳುತ್ತಿದ್ದಾರೆ. ನೇರ ತರಬೇತಿ ಸಾಧ್ಯವಿಲ್ಲ. ಹೀಗಾಗಿ, ವರ್ಚುವಲ್‌ ತರಬೇತಿ ನೀಡುತ್ತಿದ್ದೇವೆ. ಮುಂದಿನ ವರ್ಷಗಳಲ್ಲಿನಮ್ಮ ಸಂಸ್ಥೆಯಲ್ಲಿಇನ್ನು 500 ಜನ ಕೆಲಸ ಮಾಡಬಹುದು. ಈ ನಿಟ್ಟಿನಲ್ಲಿಕೆಲಸ ಮಾಡುತ್ತಿದ್ದೇವೆ. ತಿಪಟೂರು ಸುತ್ತಮುತ್ತ ಹೆಚ್ಚಿನ ಗಮನ ಹರಿಸಿದ್ದೇವೆ ಎನ್ನುತ್ತಾರೆ ಶಶಿಕುಮಾರ್‌.

ಕೊರೊನಾ ವೇಳೆ ಪೂರೈಕೆ ವ್ಯತ್ಯಯವಿಲ್ಲ:

ಬೆಂಗಳೂರಿನಲ್ಲಿ 45 ಸಾವಿರ ಮನೆಗಳಿಗೆ 42 ಸಾವಿರ ಲೀಟರ್ ‌ಹಾಲು ಪೂರೈಕೆಯಾಗುತ್ತಿದೆ. ಕೊರೊನಾ ಭೀತಿಯ ಕಾರಣದಿಂದ ಹಾಲಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹಾಲಿನ ಪೂರೈಕೆ ನಿರಂತರವಾಗಿರುವಂತೆ ನೋಡಿಕೊಳ್ಳಲಾಗಿದೆ. ಸ್ವಚ್ಛತೆ ಹಾಗೂ ಸುರಕ್ಷತೆ ಕಾಪಾಡಿಕೊಂಡು, ಸ್ಯಾನಿಟೈಸೇಷನ್‌, ಮಾತ್ರ ಬಳಕೆ ಮಾಡಿಕೊಂಡು ಪೂರೈಕೆ ಮಾಡಲಾಗುತ್ತದೆ. ಅಕ್ಷಯ ಕಲ್ಪ ಹಾಲು ಉತ್ಪಾದಿಸುವ ರೈತನ ಹೊಲಕ್ಕೆ ಕಾಲಿಡುವ ಮೊದಲೇ ಸ್ಯಾನಿಟೈಸೇಷನ್‌ ಪ್ರಕ್ರಿಯೆ ಮಾಡಲಾಗುತ್ತದೆ.



from India & World News in Kannada | VK Polls https://ift.tt/2TQiHJq

141 ಮಂದಿಗೆ ಕೊರೊನಾ! ರಾಜ್ಯದಲ್ಲಿ 2922ಕ್ಕೇರಿದ ಸೋಂಕಿತರ ಸಂಖ್ಯೆ!

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಒಂದೇ ದಿನ ಒಟ್ಟು 141 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ದಿನೇದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಶನಿವಾರದಿಂದ ದಿನದಲ್ಲಿ ಒಂದು ಬಾರಿ ಮಾತ್ರ ಹೆಲ್ತ್ ಬುಲೆಟಿನ್‌ ಬಿಡುಗಡೆ ಮಾಡಲು ನಿರ್ಧರಿಸಿದೆ. ಶನಿವಾರ ಸಂಜೆಯ ಹೆಲ್ತ್‌ ಬುಲೆಟಿನ್‌ನಲ್ಲಿ ಒಟ್ಟು 141 ಪ್ರಕರಣಗಳು ಡೃಢಪಟ್ಟಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,922ಕ್ಕೆ ಏರಿಕೆಯಾಗಿದೆ. ಇದುವೆರೆಗೆ ರಾಜ್ಯದಲ್ಲಿ ಕೊರೊನಾ ವೈರಸ್‌ಗೆ ಒಟ್ಟು 49 ಮಂದಿ ಬಲಿಯಾಗಿದ್ದಾರೆ. ಇದುವರೆಗೆ 997ಮಂದಿ ಪೂರ್ಣವಾಗಿ ಗುಣವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. 1874 ಮಂದಿಯಲ್ಲಿ ಸಕ್ರಿಯವಾಗಿದೆ. ಶನಿವಾರ ಒಂದೇ ದಿನ 103 ಮಂದಿ ಸೋಂಕಿತರು ಗುಣವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಪ್ರಸ್ತುತ 15 ಮಂದಿ ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ದೃಢಪಟ್ಟಿರುವ 141ಪ್ರಕರಣಗಳ ಪೈಕಿ ಬಹುತೇಕರು ಅಂತಾರಾಜ್ಯ ಸಂಪರ್ಕ ಹೊಂದಿದ್ದಾರೆ. 90 ಜನ ಅಂತಾರಾಜ್ಯ ಪ್ರಯಾಣಿಕರಿದ್ದಾರೆ. ಇಂದು ಬೆಂಗಳೂರು ನಗರ ಜಿಲ್ಲೆಯಲ್ಲಿ ಗರಿಷ್ಠ 33 ಹೊಸ ಪ್ರಕರಣಗಳು ಖಚಿತವಾಗಿವೆ. ಯಾದಗಿರಿಯಲ್ಲಿ 18, ಕಲಬುರಗಿ 2, ಉಡುಪಿ 13, ಬೆಳಗಾವಿ 1, ದಾವಣಗೆರೆ 4, ಹಾಸನ 13, ಬೀದರ್ 10, ದಕ್ಷಿಣ ಕನ್ನಡ 14, ವಿಜಯಪುರ 11, ಮೈಸೂರು 2, ಉತ್ತರಕನ್ನಡ 2, ಧಾರವಾಡ 2, ಶಿವಮೊಗ್ಗ 6, ಚಿತ್ರದುರ್ಗದಲ್ಲಿ 1, ತುಮಕೂರು 1, ಕೋಲಾರ 3, ಬೆಂಗಳೂರು ಗ್ರಾಮೀಣ 1, ಹಾವೇರಿಯಲ್ಲಿ4 ಹೊಸ ಪ್ರಕರಣ ದೃಢಪಟ್ಟಿವೆ.


from India & World News in Kannada | VK Polls https://ift.tt/2XeL06j

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಎನ್‌ಆರ್‌ ಸಂತೋಷ್‌ ನೇಮಕ

ಬೆಂಗಳೂರು: ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ಅವರನ್ನು ನೇಮಿಸಲಾಗಿದೆ. ಈ ಕುರಿತು ಅಧಿಕೃತ ಆದೇಶ ಶನಿವಾರ ಹೊರಬಿದ್ದಿದೆ. ಈಗಾಗಲೇ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್, ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಮತ್ತು ಶಂಕರಗೌಡ ಪಾಟೀಲ್ ಅವರು ಬಿಎಸ್‌ವೈ ಅವರ ರಾಜಕೀಯ ಕಾರ್ಯದರ್ಶಿಗಳಿದ್ದಾರೆ. ಇದೀಗ ನಾಲ್ಕನೇ ರಾಜಕೀಯ ಕಾರ್ಯದರ್ಶಿಯಾಗಿ ಎನ್‌ಆರ್‌ ಸಂತೋಷ್‌ ನೇಮಕವಾಗಿದ್ದಾರೆ. ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದವರಾದ ಎನ್‌ಆರ್‌ ಸಂತೋಷ್‌ ಹಲವಾರು ವರ್ಷಗಳಿಂದ ಯಡಿಯೂರಪ್ಪ ಅವರ ಆಪ್ತ ಸಹಾಯಕರಾಗಿದ್ದರು. ಸಂಬಂಧದಲ್ಲಿ ಇವರು ಯಡಿಯೂರಪ್ಪ ಸಹೋದರಿಯ ಮೊಮ್ಮಗನೂ ಹೌದು. ಆಪರೇಷನ್‌ ಕಮಲದಲ್ಲಿ ಮುಂಚೂಣಿಯಲ್ಲಿಯೂ ಇವರು ಕಾಣಿಸಿಕೊಂಡಿದ್ದರು. ಆದರೆ ತಂದೆ ಯಡಿಯೂರಪ್ಪ ಸುತ್ತಮುತ್ತ ಯಾವಾಗ ಬಿವೈ ವಿಜಯೇಂದ್ರ ಕಾಣಿಸಿಕೊಳ್ಳಲು ಆರಂಭಿಸಿದರೋ ಅಲ್ಲಿಂದ ಸಂತೋಷ್‌ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು. ಅಷ್ಟೇ ಅಲ್ಲ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದರು.

ಇದೀಗ ಅಚ್ಚರಿಯ ರೀತಿಯಲ್ಲಿ ಸಂತೋಷ್‌ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ವಿರೋಧಿ ಬಣವನ್ನು ಒಡೆಯುವುದು ಮತ್ತು ಕುಟುಂಬವನ್ನು ಒಟ್ಟಾಗಿ ಇಡುವ ಉದ್ಧೇಶದಿಂದ ಈ ನೇಮಕ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಯಡಿಯೂರಪ್ಪ ಮತ್ತು ಕೆಎಸ್‌ ಈಶ್ವರಪ್ಪ ನಡುವೆ ಶೀತಲ ಸಮರ ನಡೆಯುವಾಗಲೂ ಇದೇ ಸಂತೋಷ್‌ ಹೆಸರು ಆಗಾಗ ಕೇಳಿ ಬರುತ್ತಿತ್ತು. ಸಂತೋಷ್ ಹಾಗೂ ಈಶ್ವರಪ್ಪ ಆಪ್ತ ಸಹಾಯಕ ವಿನಯ್ ನಡುವೆ ನಡೆದ ಗಲಾಟೆಯ ಸುತ್ತ ದೊಡ್ಡ ಹೈಡ್ರಾಮವೇ ನಡೆದಿತ್ತು.


from India & World News in Kannada | VK Polls https://ift.tt/36IKiRS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...