ನಾನ್‌ಕಾನ ಗುರುದ್ವಾರ ಮೇಲೆ ದಾಳಿ: ಸಮಿತಿ ಕಳುಹಿಸಲು ಎಸ್‌ಜಿಪಿಸಿ ನಿರ್ಧಾರ

ಹೊಸದಿಲ್ಲಿ: ನಾನ್‌ಕಾನ ಸಾಹೀಬ್ ಗುರುದ್ವಾರ ವಿಚಾರದಲ್ಲಿ ಪಾಕಿಸ್ತಾನದ ವಿಧ್ವಂಸಕತೆಯನ್ನು ಭಾರತ ಬಲವಾಗಿ ಖಂಡಿಸಿದೆ. ಅಲ್ಲದೇ, ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಸಮಿತಿ (), ನಾಲ್ವರು ಸದಸ್ಯರ ಸಮಿತಿಯನ್ನು ನಾನ್‌ಕಾನಗೆ ಕಳುಹಿಸಿಕೊಡಲು ನಿರ್ಧರಿಸಿದೆ. ಸಿಖ್ ಸಮುದಾಯದ ಸುರಕ್ಷತೆ, ಕಲ್ಯಾಣ ಮತ್ತು ಭದ್ರತೆಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸಿದೆ. ಹೊಸದಿಲ್ಲಿಯಲ್ಲಿ ಈ ಕುರಿತು ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಗುರುನಾನಕ್ ದೇವ್‌ಜಿ ಅವರ ಜನ್ಮಸ್ಥಳ ಪವಿತ್ರ ನಗರವಾದ ನಾನ್‌ಕಾನ ಸಾಹೀಬ್‌ನಲ್ಲಿ ನಡೆದಿರುವ ಹಿಂಸಾಚಾರ ಖಂಡನೀಯ ಎಂದು ತಿಳಿಸಿದೆ. ದುಷ್ಕರ್ಮಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು; ಧಾರ್ಮಿಕ ಅಲ್ಪಸಂಖ್ಯಾತರಾಗಿರುವ ಸಿಖ್ ಸಮುದಾಯಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು; ನಾನ್‌ಕಾನ ಸಾಹೀಬ್ ಗುರುದ್ವಾರ ಮತ್ತು ಆಸುಪಾಸಿನ ಸ್ಥಳಗಳ ಘನತೆ ಮತ್ತು ಗೌರವ ಕಾಪಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಭಾರತ ಖಡಕ್ಕಾಗಿ ಎಚ್ಚರಿಕೆ ಮಾಡಿದೆ.


from India & World News in Kannada | VK Polls https://ift.tt/35owqd2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...