ತುಮಕೂರು: ತಾಲೂಕಿನ ದೊಡ್ಡಗುಣಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ಎನ್ ಹೊಸಹಳ್ಳಿ ಗ್ರಾಮದಿಂದ ರೋಗಿಯೊಬ್ಬರನ್ನು ಓಮಿನಿ ವ್ಯಾನ್‌ನಲ್ಲಿ ನಿಟ್ಟೂರು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಈ ಸಮಯದಲ್ಲಿ ಓಮಿನಿ ವ್ಯಾನ್ ಸ್ಲೀಪರ್ ಬಸ್ ನಡುವೆ ಅಪಘಾತವಾಗಿದೆ. ಸ್ಲೀಪರ್ ಕೋಚ್ ಬಸ್‌ಗೆ ಹಾಗೂ ಓಮಿನಿ ವ್ಯಾನ್ ಎರಡಕ್ಕೂ ಬೆಂಕಿ ಹೊತ್ತಿಕೊಂಡು ಧಗಧಗ ಉರಿದಿವೆ. ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಗುಬ್ಬಿ ತಾಲೂಕಿನ ನಿಟ್ಟೂರಿನ ಮೂಲಕ ಹೋಗುವ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯಲ್ಲೇ ದೊಡ್ಡಗುಣಿ ಕೆರೆ ಏರಿ ಮೇಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಶ್ರೀಶ ಟ್ರಾವೆಲ್ಸ್ ಪ್ರೈವೇಟ್ ಬಸ್ ಹಾಗೂ ಎನ್ ಹೊಸಹಳ್ಳಿ ಗ್ರಾಮದ ನರಸಮ್ಮ ಇವರಿಗೆ ನಿಟ್ಟೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಮಾರುತಿ ಒಮ್ನಿ ಮಧ್ಯೆ ಅಪಘಾತವಾಗಿದೆ. ನಲ್ಲಿದ್ದ ವಸಂತ್ ಕುಮಾರ್, ರಾಮಯ್ಯ ನರಸಮ್ಮ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ನರಸಿಂಹ ಮೂರ್ತಿ, ರಾಧಾಮಣಿ, ರವಿ ಅವರಿಗೆ ಗಾಯಗಳಾಗಿವೆ. ಹೆದ್ದಾರಿ ಗಸ್ತು ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಬಸ್ ಹಾಗೂ ಮಾರುತಿ ಕಾರು ಸುಟ್ಟು ಹೋಗಿದೆ. ಬಸ್ ನಲ್ಲಿದ್ದವರಿಗೆ ಯಾವುದೇ ಸಮಸ್ಯೆ ಯಾಗಿಲ್ಲ.
from India & World News in Kannada | VK Polls https://ift.tt/2MQHZTV