ಬೆಂಗಳೂರು: ಮೆಟ್ರೊ ಪ್ರಯಾಣಿಕರ ಸಮಯ ಉಳಿತಾಯ ಮತ್ತು ಶೀಘ್ರ ಓಡಾಟಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 'ಸ್ಮಾರ್ಟ್ ಕಾರ್ಡ್' ಬಳಕೆದಾರರಿಗೆ ನೀಡಲಾಗುತ್ತಿದ್ದ ಡಿಸ್ಕೌಂಟ್ ಅನ್ನು ಬಿಎಂಆರ್‌ಸಿಎಲ್ ಶೇ.15ರಿಂದ ಶೇ.5ಕ್ಕೆ ಇಳಿಸಿದೆ. ಜ.20ರಿಂದ ಸ್ಮಾರ್ಟ್‌ಕಾರ್ಡ್‌ಗಳ ಬಳಕೆ ಮೇಲಿನ ನೂತನ ದರ ಜಾರಿಗೆ ಬರಲಿದೆ. ನಿಲ್ದಾಣದ ಕೌಂಟರ್‌ನಲ್ಲಿ ಟೋಕನ್ ಖರೀದಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ಒಟ್ಟಾರೆ ಪ್ರಯಾಣಿಕರ ಪೈಕಿ ಶೇ. 62ರಷ್ಟು ಜನ ಸ್ಮಾರ್ಟ್ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಪ್ರತಿನಿತ್ಯ ಸರಾಸರಿ ನಾಲ್ಕುವರೆ ಲಕ್ಷ ಜನ ಮೆಟ್ರೊ ಬಳಸುತ್ತಿದ್ದಾರೆ. ''2019-20ನೇ ಸಾಲಿನಲ್ಲೇ 60 ಕೋಟಿ ರೂ. ನಗದು ನಷ್ಟ ಹಾಗೂ 6 ಕೋಚ್‌ಗಳ ರೈಲು ಬಿಡುಗಡೆಯಿಂದ ಉಂಟಾಗಿರುವ ಹೆಚ್ಚುವರಿ ನಿರ್ವಹಣಾ ವೆಚ್ಚ ಸರಿದೂಗಿಸುವ ಉದ್ದೇಶದಿಂದ ಡಿಸ್ಕೌಂಟ್ ಪ್ರಮಾಣವನ್ನು ಶೇ.10ರಷ್ಟು ಕಡಿತಗೊಳಿಸಲಾಗಿದೆ. 2017ರಿಂದ ಟಿಕೆಟ್ ದರ ಪರಿಷ್ಕರಣೆ ಮಾಡಿಲ್ಲ'' ಎಂದು ಬಿಎಂಆರ್‌ಸಿಎಲ್ ಸಮರ್ಥನೆ ನೀಡಿದೆ. 2011ರಲ್ಲೇ ಮೆಟ್ರೊ ಸೇವೆ ಆರಂಭವಾಗಿದ್ದು, ಕಳೆದ ಎಂಟು ವರ್ಷಗಳಿಂದ ರೈಲುಗಳ ಸಮಯಪಾಲನೆ ಪ್ರಮಾಣ ಶೇ.99ರಷ್ಟು ಇದೆ. ದಟ್ಟಣೆ ಅವಧಿಯಲ್ಲಿ ಪ್ರತಿ 4 ನಿಮಿಷಗಳಿಗೊಮ್ಮೆ ರೈಲು ಪ್ರಯಾಣಿಸುತ್ತಿವೆ. ದಟ್ಟಣೆ ಹೆಚ್ಚಾದ ಕಾರಣ ಪ್ರಯಾಣಿಕರ ಅನುಕೂಲಕ್ಕಾಗಿ ನೇರಳೆ ಮಾರ್ಗದಲ್ಲಿನ ಎಲ್ಲ ರೈಲುಗಳನ್ನು 6 ಕೋಚ್ ರೈಲುಗಳಾಗಿ ಪರಿವರ್ತಿಸಲಾಗಿದೆ. ಹಸಿರು ಮಾರ್ಗದಲ್ಲಿನ ಬಹುತೇಕ ರೈಲುಗಳು ಈಗಾಗಲೇ 6 ಕೋಚ್‌ಗಳಿಗೆ ಬದಲಿಸಲಾಗಿದ್ದು, 2020ರ ಜನವರಿ ಅಂತ್ಯದ ವೇಳೆಗೆ ಎಲ್ಲರೈಲುಗಳು 6 ಕೋಚ್‌ಗಳೊಂದಿಗೆ ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಜ.1ರಿಂದ ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಮೆಟ್ರೊ ರೈಲು ಸಂಚಾರವನ್ನು ಮಧ್ಯರಾತ್ರಿವರೆಗೂ ವಿಸ್ತರಿಸಲಾಗಿದೆ. ಮಹಿಳಾ ಕೋಚ್ ಹಾಗೂ ಹೆಚ್ಚುವರಿ ಭದ್ರತೆ, ಹೊಸ ವರ್ಷ, ಫಲ-ಪುಷ್ಪ ಪ್ರದರ್ಶನ ಮತ್ತು ಕ್ರಿಕೆಟ್ ಮ್ಯಾಚ್‌ನಂತಹ ವಿಶೇಷ ಸಂದರ್ಭದಲ್ಲಿ ಅವಧಿ ವಿಸ್ತರಣೆ ಮಾಡಲಾಗಿದೆ. 15 ನಿಲ್ದಾಣಗಳಲ್ಲಿ ಹೆಚ್ಚುವರಿಯಾಗಿ 18 ಎಸ್ಕ್‌ಲೇಟರ್ ಸ್ಥಾಪನೆ ಮಾಡಲಾಗಿದ್ದು, ಇನ್ನೂ ಆರು ನಿಲ್ದಾಣಗಳಲ್ಲಿ11 ಎಸ್ಕಲೇಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಎಲ್ಲನಿಲ್ದಾಣದಲ್ಲಿಎಲ್‌ಇಡಿ ಲ್ಯಾಂಪ್ ಅಳವಡಿಕೆ. ಭದ್ರತೆ ಹೆಚ್ಚಳ, ಪಾರ್ಕಿಂಗ್ ವ್ಯವಸ್ಥೆ, ಸ್ಮಾರ್ಟ್ ಕಾರ್ಡ್‌ಗಳಿಗೆ ಆನ್‌ಲೈನ್ ಮೂಲಕ ಟಾಪ್ ಅಪ್ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಹೈಲೈಟ್ಸ್
- - ಶೇ.62ರಷ್ಟು ಪ್ರಯಾಣಿಕರಿಂದ ಸ್ಮಾರ್ಟ್‌ಕಾರ್ಡ್ ಬಳಕೆ.
- - ಪ್ರತಿ ದಿನ ಸರಾಸರಿ 4.5 ಲಕ್ಷ ಪ್ರಯಾಣಿಕರು. ಪ್ರಯಾಣಿಕರ ಅಸಮಾಧಾನ
- - ಚೆನ್ನೈ ಮೆಟ್ರೊ ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ.10ರಷ್ಟು ಡಿಸ್ಕೌಂಟ್ ನೀಡುತ್ತಿದೆ.
- - ದಿಲ್ಲಿಮೆಟ್ರೊ ದಟ್ಟಣೆ ಇಲ್ಲದ ಅವಧಿಯಲ್ಲಿಶೇ.20ರಷ್ಟು ಡಿಸ್ಕೌಂಟ್ ನೀಡುತ್ತಿದೆ. ಬೆಳಗ್ಗೆ 5ರಿಂದ 8 ಮತ್ತು ಮಧ್ಯಾಹ್ನ 12ರಿಂದ 5ರವರೆಗೆ ಡಿಸ್ಕೌಂಟ್ ಲಭ್ಯವಿದೆ.
from India & World News in Kannada | VK Polls https://ift.tt/36BNnT5