ವಿಜಯಪುರ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ ಸಿಂದಗಿ ಉಪಸಮರದ ಫಲಿತಾಂಶ ಪ್ರಕಟಕ್ಕೆ ಕೌಂಟ್‌ಡೌನ್ ಆರಂಭವಾಗಿದ್ದು, ಕೆಲವೇ ಹೊತ್ತಿನಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲರ ಹಾರ್ಟ್‌ಬೀಟ್ ಜೋರಾಗಿದ್ದು, 6 ಅಭ್ಯರ್ಥಿಗಳ ಪೈಕಿ ಯಾರ ಪಾಲಿಗೆ ದೀಪಾವಳಿ ಬೆಳಕಾಗಲಿದೆ ಎಂಬ ಚರ್ಚೆ ನಡೆದಿದೆ. ವಿಜಯಪುರದ ಸೈನಿಕ ಶಾಲೆಯ ಒಡೆಯರ್ ಹೌಸ್‌ನಲ್ಲಿ ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ಶುರುವಾಗಿ ಮಧ್ಯಾಹ್ನದ ಒಳಗೆ ಫಲಿತಾಂಶ ಹೊರಬೀಳಲಿದೆ. ಕಣದಲ್ಲಿ 6 ಅಭ್ಯರ್ಥಿಗಳಿದ್ದರೂ ಬಿಜೆಪಿಯ ರಮೇಶ ಭೂಸನೂರ ಹಾಗೂ ಕಾಂಗ್ರೆಸ್‌ನ ಅಶೋಕ ಮನಗೂಳಿ ನಡುವೆ ನೇರ ಹಣಾಹಣೆ ನಡೆದಿದೆ. ಇಬ್ಬರ ನಡುವೆಯೇ ಗೆಲುವು-ಸೋಲು ನಿರ್ಧಾರವಾಗಲಿದೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಇಬ್ಬರಿಗೂ ಪೈಪೋಟಿ ಒಡ್ಡಿದರೂ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯನ್ನು ಹಿಂದಿಕ್ಕಿ ಗೆಲ್ಲಬೇಕೆಂದರೆ ಮತದಾನದ ವೇಳೆ ಮ್ಯಾಜಿಕ್ ನಡೆದಿರಲೇಬೇಕು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸಿಂದಗಿ ಕ್ಷೇತ್ರದ ಫಲಿತಾಂಶದ ಕ್ಷಣಕ್ಷಣದ ಅಪ್‌ಡೇಟ್ಸ್ ಇಲ್ಲಿದೆ. === 9.25 am : ಸಿಂದಗಿಯಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ, ಬಿಜೆಪಿಗೆ 819 ಮತಗಳ ಮುನ್ನಡೆ. ಬಿಜೆಪಿ-3436, ಕಾಂಗ್ರೆಸ್-2617 ಮತ್ತು ಜೆಡಿಎಸ್-141 ಮತಗಳು 9.15 am: ಸಿಂದಗಿಯಲ್ಲಿ 2ನೇ ಸುತ್ತಿನ ಮತ ಎಣಿಕೆ ಮುಕ್ತಾಯ, ಬಿಜೆಪಿ: 9645, ಕಾಂಗ್ರೆಸ್: 5614 ಮತ್ತು ಜೆಡಿಎಸ್: 282 ಮತಗಳು ಪಡೆದಿವೆ 9.00 am: ಎರಡನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ರಮೇಶ್ ಭುಸನೂರ್‌ಗೆ ಮುನ್ನಡೆ 8.46 am: ಅಂಚೆ ಮತ್ತ ಮತ್ತು ಇವಿಎಂ ಮೊದಲ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್‌ಗೆ ಮುನ್ನಡೆ 8.40 am: ಬಿಜೆಪಿ ಅಭ್ಯರ್ಥಿಗೆ ಮುನ್ನಡೆ, ತುಳಜಾಪುರ ಅಂಬಾಭವಾನಿ ದೇಗುಲಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 8.35 am: ಮುನ್ನಡೆ ಆಗ್ತಿದ್ದಂತೆ ಮತ ಎಣಿಕೆ ಕೇಂದ್ರದತ್ತ ಹೊರಟ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ 8.30 am: ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ. 8.25 am: ಸಿಂದಗಿಯಲ್ಲಿ ಅಂಚೆ ಮತ ಎಣಿಕೆ ಮುಕ್ತಾಯ, ಇವಿಎಂ ಮತ ಎಣಿಕೆ ಆರಂಭ 8.18 am: ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 8.13 am: ಸಿಂದಗಿಯಲ್ಲಿ ಒಟ್ಟು 1,296 ಅಂಚೆ ಮತ ಚಲಾವಣೆ 8.05 am: ಸಿಂದಗಿ ಕ್ಷೇತ್ರದ ಅಂಚೆ ಮತ ಎಣಿಕೆಯಲ್ಲಿ ಬಿಜೆಪಿಯ ರಮೇಶ ಭೂಸನೂರಗೆ ಆರಂಭಿಕ ಮುನ್ನಡೆ 8.00 am: ಸಿಂದಗಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಎಣಿಕೆ ಕಾರ್ಯ ಆರಂಭ 7.45 am: ವಿಜಯಪುರದಲ್ಲಿ ಸ್ಟ್ರಾಂಗ್‌ರೂಮ್ ಓಪನ್ ಮಾಡಿದ ಚುನಾವಣಾ ಸಿಬ್ಬಂದಿ, ಒಟ್ಟು 14 ಟೇಬಲ್‌ಗಳಲ್ಲಿ ಮತ ಎಣಿಕೆ ಪ್ರಕ್ರಿಯೆ
from India & World News in Kannada | VK Polls https://ift.tt/3mz7ADe