ಈ ಬಾರಿ ಹಸಿರು ಪಟಾಕಿಗಳು ಬಲು ದುಬಾರಿ; ಪಟಾಕಿ ದರದಿಂದ ಗ್ರಾಹಕರ ಜೇಬಿಗೆ ಹೊರೆ

ನಾಗರಾಜು ಅಶ್ವತ್ಥ್‌ ಬೆಂಗಳೂರು: ರಾಜ್ಯದಲ್ಲಿ ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ಪಟಾಕಿ ದರ ಗ್ರಾಹಕರ ಜೇಬಿಗೆ ಹೊರೆಯಾಗಲಿದೆ. ಸಾಗಣೆ ವೆಚ್ಚ, ರಾಸಾಯನಿಕ ಕಚ್ಚಾ ಪದಾರ್ಥ ಬೆಲೆ ಏರಿಕೆಯಿಂದಾಗಿ ಬೆಲೆ ಶೇ.30ರಷ್ಟು ಏರಿಕೆಯಾಗಿದೆ. ತಮಿಳುನಾಡಿನ ಶಿವಕಾಶಿಯಲ್ಲಿ ಬಹುಪಾಲು ಹಸಿರು ಪಟಾಕಿ ಸಿದ್ಧವಾಗುತ್ತಿದ್ದು, ರಾಜ್ಯದ , ಮೈಸೂರು, ಮಂಗಳೂರು ಸೇರಿ ಪ್ರಮುಖ ನಗರಗಳಿಗೆ ಕೆಲವು ಡೀಲರ್‌ಗಳ ಮೂಲಕ ಹಂಚಿಕೆಯಾಗುತ್ತದೆ. ಹೋಲ್‌ ಸೇಲ್‌ ದರದಲ್ಲಿ ಸಿಗುವ ಪಟಾಕಿಗಳ ಸಾಗಣೆ ವೆಚ್ಚ ಹೊರೆಯಾಗುತ್ತಿದ್ದು, ಸ್ಟ್ರ್ಯಾಂಡರ್ಸ್‌ ಮತ್ತು ಕೃಷ್ಣ ಡೀಲರ್‌ ಶೇ.12, ಸೋನಿ, ಐಎನ್‌ ಶೇ.8.5ರಷ್ಟು ಬೆಲೆ ಏರಿಕೆ ಮಾಡಿದ್ದಾರೆ. ಜತೆಗೆ, ಪಟಾಕಿ ಸರಬರಾಜಿಗೆ ಅಗತ್ಯ ಬೀಳುವ ಪ್ರತಿ ಸ್ಕ್ರಾಪ್‌ ಬಾಕ್ಸ್‌ಗಳಿಗೆ ಈ ಹಿಂದೆ 4 ರೂ.ನಂತೆ ಪಡೆಯಲಾಗುತ್ತಿತ್ತು. ಆದರೀಗ ಇದರ ಬೆಲೆ 12ರಿಂದ 18 ರೂ.ವರೆಗೆ ಹೆಚ್ಚಳವಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿಕೊಂಡರೆ ಈ ಬಾರಿ ಉತ್ತಮ ಬೇಡಿಕೆ ಸೃಷ್ಟಿಯಾಗಿದ್ದು, ಅಗತ್ಯಕ್ಕೆ ತಕ್ಕಂತೆ ನಗರಗಳಿಗೆ ಈಗಾಗಲೇ ಹಸಿರು ಪಟಾಕಿಗಳ ರವಾನೆಯಾಗುತ್ತಿವೆ. ನಕಲಿ ಪಟಾಕಿಗಳಿವೆ ಎಚ್ಚರ ಹಸಿರು ಪಟಾಕಿಗಳು ಕಡ್ಡಾಯವಾಗಿದ್ದು, ಸಾಮಾನ್ಯ ಪಟಾಕಿಗೆ ನಿಷೇಧವಿರುವ ಹಿನ್ನೆಲೆ ಮಾರುಕಟ್ಟೆಯಲ್ಲಿ ಕೆಲ ನಕಲಿ ಕಂಪನಿಗಳ ಪಟಾಕಿಗಳು ಪ್ರವೇಶ ಪಡೆದಿವೆ. ಹೆಚ್ಚು ಸದ್ದು ಮಾಡಬಲ್ಲ, ಮಕ್ಕಳಿಗೆ ಹಾನಿಯುಂಟು ಮಾಡುವ ಹಳೆ ಪಟಾಕಿಗಳು ಮಾರುಕಟ್ಟೆಗೆ ಕಳ್ಳದಾರಿಗಳ ಮೂಲಕ ಲಗ್ಗೆಯಿಟ್ಟಿದ್ದು, ಪೋಷಕರು ಎಚ್ಚರಿಕೆ ವಹಿಸಬೇಕಿದೆ. ತಮಿಳುನಾಡಿನ ಮೂಲದಿಂದಲೇ ಸಾಮಾನ್ಯ ಪಟಾಕಿಗಳು ಗಿಫ್ಟ್‌ ಬಾಕ್ಸ್‌ ಸ್ವರೂಪದಲ್ಲಿ ಬರುತ್ತಿದ್ದು, 700ರೂ.ನಿಂದ 2700ರೂ.ವರೆಗೆ ದರ ನಿಗದಿಯಾಗಲಿದೆ. ಪತ್ತೆಗೆ ಹೀಗೆ ಮಾಡಿ : ಪಟಾಕಿ ಪ್ಯಾಕ್‌ ಮೇಲೆ ಭಾರತೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ಸಿಎಸ್‌ಐಆರ್‌-ನೀರಿ)ಗಳ ಹಸಿರು ಲೋಗೋ ಇರಲಿದೆ. ನೀರಿ ಮೊಬೈಲ್‌ ಅಪ್ಲಿಕೇಶನ್‌ಗಾಗಿ ಕ್ಯೂಆರ್‌ ಕೋಡ್‌ ಇರಲಿದ್ದು, ಪರಿಶೀಲನೆಗೆ ಸಹಕಾರಿಯಾಗಲಿದೆ.


from India & World News in Kannada | VK Polls https://ift.tt/3EFVfUb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...