ಬೆಂಗಳೂರು ಕೇಂದ್ರೀಯ ವಿಹಾರದಲ್ಲಿ ಪ್ರವಾಹ: ಕಾಲುವೆ ಕಬಳಿಸಿ ಕಾಂಪೌಂಡ್‌ ನಿರ್ಮಿಸಿದ್ದರಿಂದ ಅನಾಹುತ

: ನೀರು ಕಾಲುವೆ ಕಬಳಿಸಿ ಕಾಂಪೌಂಡ್‌ ಕಟ್ಟಿಕೊಂಡಿರುವ ಜತೆಗೆ ಅದರ ಮೇಲೆ ಸ್ಪ್ಯಾಬ್‌ ನಿರ್ಮಿಸಿರುವುದು ಯಲಹಂಕ ಆವರಣದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಪ್ರಮುಖ ಕಾರಣವಾಗಿದೆ ಎಂಬುದು ಪಾಲಿಕೆ ಅಧಿಕಾರಿಗಳ ಪರಿಶೀಲನೆ ವೇಳೆ ಕಂಡು ಬಂದಿದೆ. ವೆಂಕಟಾಲ ಕಡೆಯ ಕೆರೆ ಕೋಡಿ ಹರಿಯಲು ಇರುವ ನೀರು ಕಾಲುವೆ ಸಾಕಷ್ಟು ಅಗಲವಿದೆ. ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಆವರಣದ ಒಳಗೆ ಹಾದುಹೋಗುವಾಗ ಕೇವಲ ಎರಡುವರೆ ಅಡಿ ಆಳ ಮತ್ತು ನಾಲ್ಕು ಅಡಿ ಅಗಲಕ್ಕೆ ಕುಸಿದಿದೆ. ಅಲ್ಲದೆ ಆವರಣದಲ್ಲಿ ಕಾಲುವೆ ಮೇಲೆ ಸ್ಪ್ಯಾಬ್‌ ಹಾಕಿರುವುದು ಕೂಡ ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿದೆ. ಇದರಿಂದ ಕೆರೆಯಿಂದ ಬಂದ ಅಪಾರ ಪ್ರಮಾಣದ ನೀರು ಆವರಣದಲ್ಲೇ ಶೇಖರವಾಗುವಂತಾಗಿದೆ. ಸ್ಪ್ಯಾಬ್‌ ತೆರವು! ''ನೀರು ಕಾಲುವೆಯನ್ನು ಕಾಂಪೌಂಡ್‌ ಒಳಗೆ ಸೇರಿಸಿಕೊಂಡಿರುವುದು, ಸ್ಪ್ಯಾಬ್‌ ಹಾಕಿರುವುದು ಕಾನೂನುಬಾಹಿರವಾಗಿದೆ. ಸ್ಪ್ಯಾಬ್‌ ಹಾಕಿರುವುದರಿಂದ ಹೂಳು, ತ್ಯಾಜ್ಯ ತೆರವು ಸಾಧ್ಯವಾಗದು. ಇದರಿಂದಲೇ ಅನಾಹುತ ಸಂಭವಿಸಿದೆ. ತಾತ್ಕಾಲಿಕ ಕ್ರಮವಾಗಿ ಸ್ಪ್ಯಾಬ್‌ಗಳನ್ನು ತೆಗೆದು ನೀರಿನ ಹರಿವಿಗೆ ಅನುವು ಮಾಡಿಕೊಡಲಾಗಿದೆ,'' ಎಂದು ಪಾಲಿಕೆ ಎಂಜಿನಿಯರ್‌ ತಿಳಿಸಿದರು. ''ಅಪಾರ್ಟ್‌ಮೆಂಟ್‌ ಆವರಣದಲ್ಲಿ ಹೆಚ್ಚುವರಿ ಜಾಗ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಕಾಲುವೆಯನ್ನು ಒಳ ಸೇರಿಸಿಕೊಂಡು ಕಾಂಪೌಂಡ್‌ ನಿರ್ಮಿಸಲಾಗಿದೆ. ಅನಾಹುತವಾಗುವ ಅಂದಾಜಿಲ್ಲದೆ ಮೂರ್ಖ ನಿರ್ಧಾರ ಕೈಗೊಂಡು ಇಂತಹ ದುಸ್ಸಾಹಸ ಮಾಡಲಾಗಿದೆ. ಇದರ ಪರಿಣಾಮವಾಗಿ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಯಿತು,'' ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಸ್ಪ್ಯಾಬ್‌ ಮೇಲೆ ಕಲ್ಲಿನ ಆಸನ ಅಪಾರ್ಟ್‌ಮೆಂಟ್‌ ಒಳಗಡೆ ಕಾಂಪೌಂಡ್‌ಗೆ ಹೊಂದಿಕೊಂಡಂತೆ ರಾಜಕಾಲುವೆ ಸಾಗಿದೆ. ಕಾಲುವೆ ಮೇಲೆ ಸ್ಪ್ಯಾಬ್‌ ಅಳವಡಿಸಿ ಅದರ ಮೇಲೆ ಕುಳಿತುಕೊಳ್ಳಲು ಆಸನಗಳನ್ನು ನಿರ್ಮಿಸಲಾಗಿದೆ. ಕಾಲುವೆಯಿಂದಾಗಿ ನೀರು ಹರಿದು ಬಂದಿದೆ. ಅಗಲ ಮಾಡಲು ಬಿಬಿಎಂಪಿಗೆ ಸಹಕರಿಸುತ್ತೇವೆ.- ಕೃಷ್ಣನ್‌, ಕಾರ್ಯದರ್ಶಿ, ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ಲಿಫ್ಟ್‌, ನೀರಿನ ಸಂಪರ್ಕ ಪುನರಾರಂಭ ಅಪಾರ್ಟ್‌ಮೆಂಟ್‌ ಆವರಣದಲ್ಲಿ ನಿಂತಿದ್ದ ನೀರು ಇದೀಗ ಸಂಪೂರ್ಣ ಖಾಲಿಯಾಗಿದೆ. ಅಪಾರ್ಟ್‌ಮೆಂಟ್‌ಗೆ ವಿದ್ಯುತ್‌ ಸಂಪರ್ಕ ಪುನಃ ಕೊಡಲಾಗಿದೆ. ಲಿಫ್ಟ್‌ ಸೇವೆ, ನೀರಿನ ವ್ಯವಸ್ಥೆ ಪುನರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬೇರೆಡೆಗೆ ತೆರಳಿದ್ದ ನಿವಾಸಿಗಳಲ್ಲಿ ಹಲವಾರು ಅಪಾರ್ಟ್‌ಮೆಂಟ್‌ಗೆ ವಾಪಸು ಬಂದಿದ್ದಾರೆ. ಯಲಹಂಕದಬಳಿಯಲ್ಲಿರುವ ಕೆರೆ ಹಾಗೂ ಭಾರೀ ಮಳೆಯಿಂದಾಗಿ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿದೆ ಎಂದು ಅಂದಾಜಿಸಲಾಗಿತ್ತು. ನೀರು ನುಗ್ಗಿದ ಪರಿಣಾಮ ಅಪಾರ್ಟ್‌ಮೆಂಟ್‌ ನಿವಾಸಿಗಳನ್ನು ಬೋಟ್‌ ಮೂಲಕ ಕರೆ ತರಲಾಗಿತ್ತು. ಅಲ್ಲದೇ ಅಲ್ಲಿಂದ ಸ್ಥಳಾಂತರಿಸಲಾಗಿತ್ತು. ಇದೀಗ ಅಪಾರ್ಟ್‌ಮೆಂಟ್‌ ಯಡವಟ್ಟಿನಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.


from India & World News in Kannada | VK Polls https://ift.tt/3nOxNOQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...