ಹೊಸದಿಲ್ಲಿ: ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಕಣಕ್ಕೆ ಇಳಿದಿದ್ದ ಸಾರಥ್ಯದ ಭಾರತ ತಂಡ ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸುವ ಮೂಲಕ ಸ್ಪರ್ಧೆಯಿಂದ ಹೊರಬೀಳುವ ಹೊಸ್ತಿಲಲ್ಲಿದೆ. ಟೂರ್ನಿಗೂ ಮುನ್ನ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ , ಸೂಪರ್ 12ರ ಹಂತದ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ನಂತರ, ಸೆಮಿಫೈನಲ್‌ಗೆ ಆರಾಮದಾಯಕವಾಗಿ ತಲುಪಲು ವಿರುದ್ಧ ಗೆಲುವು ಅಗತ್ಯವಿತ್ತು. ಆದರೆ, ಈ ಪಂದ್ಯದಲ್ಲಿಯೂ ಭಾರತ 8 ವಿಕೆಟ್‌ಗಳಿಂದ ಹೀನಾಯ ಪರಾಭವಗೊಂಡಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ನ್ಯೂಜಿಲೆಂಡ್ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಗಿತ್ತು. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದ ಕಿವೀಸ್ ಪಡೆಯ ಲೆಗ್ ಸ್ಪಿನ್ನರ್ ಇಶ್ ಸೋಧಿ(17ಕ್ಕೆ 2), ರೋಹಿತ್ ಶರ್ಮಾ(14) ಹಾಗೂ ವಿರಾಟ್ ಕೊಹ್ಲಿ(9) ದೊಡ್ಡ ವಿಕೆಟ್‌ಗಳನ್ನು ಕಬಳಿಸಿದ್ದರು. ಕಿವೀಸ್ ವಿರುದ್ಧದ ಸೋಲಿನಿಂದ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಅತ್ಯಂತ ಕಠಿಣವಾಗಿದೆ. ಮುಂದಿನ ಮೂರು ಪಂದ್ಯಗಳಲ್ಲಿ ಗೆದ್ದರೂ ಭಾರತದ ನಾಕೌಟ್ ಸ್ಥಾನ ಬೇರೆ ತಂಡಗಳ ಫಲಿತಾಂಶವನ್ನು ಅವಲಂಬಿಸಿದೆ. ಭಾರತ ಮೂರು ಪಂದ್ಯಗಳಲ್ಲಿ ಗೆಲುವು ಪಡೆದರೂ ನ್ಯೂಜಿಲೆಂಡ್ ಇನ್ನುಳಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಸೋಲಬೇಕಾದ ಅಗತ್ಯವಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ ತಂಡದ ಸೋಲಿನ ಬಗ್ಗೆ ವಿಶ್ಲೇಷಣೆ ಮಾಡಿದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಲೆಗ್ ಸ್ಪಿನ್ ಎದುರು ಕೊಹ್ಲಿ ಪಡೆಯ ಬ್ಯಾಟ್ಸ್‌ಮನ್‌ಗಳು ಇನ್ನಷ್ಟು ಪರಿಪಕ್ವತೆ ಸಾಧಿಸಬೇಕೆಂದು ಸಲಹೆ ನೀಡಿದ್ದಾರೆ. "ನಾನು ಗಮನಿಸಿದ ಹಾಗೆ ಇತ್ತೀಚಿಗೆ ಲೆಗ್ ಸ್ಪಿನ್ ಬೌಲಿಂಗ್‌ನಲ್ಲಿ ಭಾರತ ಎಡವುತ್ತಿದೆ. ಲೆಗ್ ಸ್ಪಿನ್ನರ್‌ಗಳಿಂದ ಮಿಶ್ರ ಎಸೆತಗಳು, ಗೂಗ್ಲಿ, ಟಾಪ್ ಸ್ಪಿನ್, ಫ್ಲಿಪರ್ ಹಾಗೂ ಸಾಮಾನ್ಯ ಲೆಗ್ ಸ್ಪಿನ್ ಸೇರಿ ಈ ಎಲ್ಲಾ ಎಸೆತಗಳಲ್ಲಿ ಸಮರ್ಥವಾಗಿ ಆಡುವಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಇತ್ತೀಚೆಗೆ ವಿಫಲರಾಗುತ್ತಿದ್ದಾರೆ," ಎಂದು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ತಿಳಿಸಿದ್ದಾರೆ. "ಇಶ್ ಸೋಧಿ ತುಂಬಾ ಪರಿಣಾಮಕಾರಿಯಾಗಿದ್ದಾರೆ ಹಾಗೂ ಮತ್ತೊಂದು ತುದಿಯಲ್ಲಿ ಮಿಚೆಲ್ ಸ್ಯಾಂಟ್ನರ್ ಕೂಡ ಉತ್ತಮವಾಗಿ ಬೌಲ್ ಮಾಡಿದ್ದಾರೆ. ಈ ಇಬ್ಬರೂ ಸ್ಪಿನ್ನರ್‌ಗಳು 8 ಓವರ್‌ಗಳಿಂದ ನೀಡಿದ್ದು ಕೇವಲ 32 ರನ್ ಮಾತ್ರ. ಆ ಮೂಲಕ ಪ್ರಭಾವಿಶಾಲಿ ಪ್ರದರ್ಶನವನ್ನು ತೋರಿದ್ದರು. ಈ ಒಂದು ಜಾಗದಲ್ಲಿ ಭಾರತ ಸುಧಾರಣೆ ಕಂಡುಕೊಳ್ಳುವ ಅಗತ್ಯವಿದೆ," ಎಂದು ಅವರು ಸಲಹೆ ನೀಡಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಭಾರತ ತಂಡದ ಬೌಲಿಂಗ್ ಪರಿಣಾಮಕಾರಿಯಾಗಿ ಇರಲಿಲ್ಲ ಎಂಬ ಅಂಶವನ್ನೂ ಸಚಿನ್ ತೆಂಡೂಲ್ಕರ್ ಇದೇ ವೇಳೆ ಉಲ್ಲೇಖಿಸಿದರು. ಜೊತೆಗೆ ಕಡಿಮೆ ಮೊತ್ತದ ಪಂದ್ಯಗಳಲ್ಲಿ ಆರಂಭದಲ್ಲಿ ವಿಕೆಟ್‌ಗಳನ್ನು ಪಡೆಯುವ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರಬೇಕು ಎಂದು ಬೌಲರ್‌ಗಳಿಗೆ ಕಿವಿ ಮಾತು ಹೇಳಿದರು. "ಇಂಥಾ ಕಡಿಮೆ ಮೊತ್ತಗಳಿಗೆ ಎದುರಾಳಿ ತಂಡವನ್ನು ನಿಯಂತ್ರಿಸಬೇಕಾದರೆ, ಆರಂಭಿಕ 6 ಓವರ್‌ಗಳಲ್ಲಿ ಕನಿಷ್ಠ 3 ವಿಕೆಟ್‌ಗಳನ್ನು ಪಡೆಯಬೇಕು. ಇದರ ಜೊತೆಗೆ ರನ್‌ಗಳನ್ನು ನೀವು ಹೆಚ್ಚಾಗಿ ಬಿಟ್ಟುಕೊಡಬಾರದು. ಹೌದು, ಜಸ್‌ಪ್ರಿತ್ ಬುಮ್ರಾ ಒಂದು ವಿಕೆಟ್ ಪಡೆದರು. ಆದರೆ, ಕಿವೀಸ್ ವಿರುದ್ಧ ಇದು ಪ್ರಭಾವಶಾಲಿ ಆರಂಭ ಇದಲ್ಲ," ಎಂದು ಕ್ರಿಕೆಟ್ ದೇವರು ಬೇಸರ ವ್ಯಕ್ತಪಡಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3EFjqlI