ಮಂಗಳವಾರ ಹಾನಗಲ್‌, ಸಿಂದಗಿ ಮತ ಎಣಿಕೆ: ಯಾರಿಗೆ ದೀಪಾವಳಿ ಬೆಳಕು?

ಹಾವೇರಿ/ಬಾಗಲಕೋಟೆ: ಭಾರಿ ಕುತೂಹಲ ಕೆರಳಿಸಿರುವ ಹಾನಗಲ್‌ ಮತ್ತು ಸಿಂದಗಿ ಕ್ಷೇತ್ರಗಳ ಉಪಸಮರದ ಮತ ಎಣಿಕೆ ಮಂಗಳವಾರ ನಡೆಯಲಿದ್ದು, ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ನಿರೀಕ್ಷಿಸಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಫೈಟ್‌ ನಡೆಯುವ ನಿರೀಕ್ಷೆ ಇರುವುದರಿಂದ, ಎರಡೂ ಪಕ್ಷಗಳಲ್ಲಿ ಭಾರಿ ಲೆಕ್ಕಾಚಾರ ನಡೆಯುತ್ತಿದೆ. ಹಾನಗಲ್‌ಹಾನಗಲ್‌ ಕ್ಷೇತ್ರದ ಮತಗಳ ಎಣಿಕೆ ಮಂಗಳವಾರ ಬೆಳಗ್ಗೆ 8ರಿಂದ ದೇವಗಿರಿಯ ಸರಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆರಂಭಗೊಳ್ಳಲಿದೆ. ಬೆಳಗ್ಗೆ 7.30 ಕ್ಕೆ ಸ್ಟ್ರಾಂಗ್‌ ರೂಂ ತೆರೆಯಲಾಗುವುದು. 7.45ಕ್ಕೆ ಅಭ್ಯರ್ಥಿಗಳ ಸಮ್ಮುಖದಲ್ಲೇ ಅಂಚೆ ಮತಗಳ ಎಣಿಕೆ ಕಾರ್ಯ ನಡೆಸಿ 8 ಗಂಟೆಗೆ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ ಆರಂಭಿಸಲಾಗುವುದು. ಅಂಚೆ ಮತದಾನ ಎಣಿಕೆಗೆ ಒಂದು ಕೊಠಡಿ ಹಾಗೂ ವಿದ್ಯುನ್ಮಾನ ಮತ ಯಂತ್ರಗಳಲ್ಲಿನ ಮತ ಎಣಿಕೆಗೆ ಎರಡು ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ ತಲಾ ಏಳು ಎಣಿಕೆ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇವಿ ಸ್ಲಿಪ್‌ ಎಣಿಕೆಇ.ವಿ.ಎಂ ಮತ ಯಂತ್ರಗಳ ಎಣಿಕೆ ಮುಕ್ತಾಯದ ನಂತರ ಐದು ವಿ.ವಿ. ಪ್ಯಾಟ್‌ ಮತ ಯಂತ್ರಗಳಲ್ಲಿನ ವಿ.ವಿ. ಪ್ಯಾಟ್‌ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗುವುದು. ಹಾಗಾಗಿ ಫಲಿತಾಂಶ ಪ್ರಕಟಣೆ ವಿಳಂಬವಾಗಲಿದೆ ಎಂದು ತಿಳಿಸಿದರು. ಪ್ರಧಾನ ಹುರಿಯಾಳುಗಳು ಬಿಜೆಪಿ: ಅಭ್ಯರ್ಥಿ ಶಿವರಾಜ ಸಜ್ಜನರ ಕಾಂಗ್ರೆಸ್‌: ಶ್ರೀನಿವಾಸ ಮಾನೆ ಜೆಡಿಎಸ್‌: ನಿಯಾಜ್‌ ಶೇಖ್‌ ಮತ್ತು ಕೆಲವು ಪಕ್ಷೇತರರು ಸಿಂದಗಿ ಕ್ಷೇತ್ರಸೈನಿಕ ಶಾಲೆಯಲ್ಲಿ ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕೊಠಡಿಗಳು 2, ಪ್ರತಿ ಕೊಠಡಿಯಲ್ಲಿ ತಲಾ 7 ಟೇಬಲ್‌ನಂತೆ ಒಟ್ಟು 14 ಟೇಬಲ್‌ಗಳು, ಪ್ರತಿ ಟೇಬಲ್‌ಗೆ ತಲಾ ಒಬ್ಬ ಮೈಕ್ರೋ ಅಬ್ಸರ್ವರ್‌ ಒಬ್ಬ ಮತ ಎಣಿಕೆ ಮೇಲ್ವಿಚಾರಕ, ಒಬ್ಬ ಮತ ಎಣಿಕೆ ಸಹಾಯಕರು ಹೀಗೆ ಒಟ್ಟು 60 ಸಿಬ್ಬಂದಿ ನಿಯೋಜಿಸಲಾಗಿದೆ. ಮತ ಎಣಿಕೆ ಕಾರ್ಯ 22 ಸುತ್ತುಗಳಲ್ಲಿ ನಡೆಯಲಿದೆ. ಅಂಚೆ ಮತಪತ್ರಗಳ ಎಣಿಕೆ ಕಾರ್ಯ ಚುನಾವಣಾಧಿಕಾರಿಗಳ ಸಮಕ್ಷಮ ನಡೆಯಲಿದೆ. ಇವಿಎಂಗಳ ಎಣಿಕೆ ಕೊನೆಯ ಸುತ್ತಿನ ನಂತರ 5 ವಿವಿಪ್ಯಾಟ್‌ ಮತಯಂತ್ರಗಳಲ್ಲಿನ ವಿವಿ ಪ್ಯಾಟ್‌ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗುತ್ತದೆ. ಚುನಾವಣಾ ನಿಯೋಜಿತ ನಿಗದಿತ ಅಧಿಕಾರಿಗಳ ಪ್ರವೇಶ ಅನುಮತಿ ಹೊಂದಿದ ವಾಹನಗಳಿಗೆ ಮಾತ್ರ ವಾಹನ ನಿಲುಗಡೆ ಪ್ರದೇಶದವರೆಗೆ ಮಾತ್ರ ಅವಕಾಶವಿರುತ್ತದೆ. ಹೊರಗೆ, ಒಳಗೂ ಭದ್ರತೆ3 ಪಾಳಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಮತ ಎಣಿಕೆ ಕೇಂದ್ರಕ್ಕೆ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರ ಒಳಗೆ ಮತ್ತು ಹೊರಗೆ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗೆ 4 ಡಿವೈಎಸ್ಪಿ, 5 ಸಿಪಿಐ, 23 ಪಿಎಸ್‌ಐ. 25 ಎಸ್‌ಐ, 282 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪ್ರಮುಖ ಅಭ್ಯರ್ಥಿಗಳು ಬಿಜೆಪಿ: ರಮೇಶ ಭೂಸನೂರ ಕಾಂಗ್ರೆಸ್‌: ಅಶೋಕ್‌ ಮನಗೂಳಿ ಜೆಡಿಎಸ್‌: ನಾಜಿಯಾ ಅಂಗಡಿ ವಿಜಯ ಕರ್ನಾಟಕದಲ್ಲಿ ಲೈವ್‌ ಫಲಿತಾಂಶ ಉಪಚುನಾವಣೆಯ ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿಗಳ ಲೈವ್‌ ಅಪ್ಡೇಟ್‌ಗಳನ್ನು ಓದುಗರು ವಿಜಯ ಕರ್ನಾಟಕ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಇದರ ಜತೆಗೆ ಉಪಚುನಾವಣೆಗೆ ಸಂಬಂಧಿಸಿದ ರಾಜಕೀಯ ನಾಯಕರ ಪ್ರತಿಕ್ರಿಯೆ, ವಿಶ್ಲೇಷಣೆಗಳೂ ಇಲ್ಲಿ ಸಿಗಲಿವೆ.


from India & World News in Kannada | VK Polls https://ift.tt/3w5vVDO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...