ಅಮೆರಿಕದ ಕ್ರಿಸ್‌ಮಸ್ ಪರೇಡ್‌ನತ್ತ ನುಗ್ಗಿದ ಕಾರು: ಸಾವಿನ ಸಂಖ್ಯೆ 6ಕ್ಕೇರಿಕೆ, 13 ಮಂದಿ ಸ್ಥಿತಿ ಗಂಭೀರ

ವುಕೆಸಾ: ವಿಸ್ಕಾನ್ಸಿನ್‌ನ ವುಕೆಸಾದಲ್ಲಿ ನಡೆಯುತ್ತಿದ್ದ ಮೆರವಣಿಗೆಯತ್ತ ಎಸ್‌ಯುವಿ ಕಾರೊಂದು ನುಗ್ಗಿದ ಘಟನೆಗೆ ಸಂಬಂಧಿಸಿದಂತೆ ಇದೀಗ ಅವಘಡದಲ್ಲಿ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ತೀವ್ರಗಾಯಗೊಂಡಿದ್ದ ಎಂಟು ವರ್ಷದ ಜಾಕ್ಸನ್‌ ಸ್ಪಾರ್ಕ್‌ ಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ಜಾಕ್ಸನ್‌ ಸ್ಪಾರ್ಕ್‌ ತೀವ್ರಗಾಯೊಂಡಿದ್ದ, ಈ ಹಿನ್ನೆಲೆ ಆತನನ್ನು ಆಸ್ಪತ್ರಗೆ ದಾಖಲು ಮಾಡಲಾಗಿತ್ತು. ಮಿದುಳಿಗೆ ತೀವ್ರ ಗಾಯಗೊಂಡಿದ್ದ ಹಿನ್ನೆಲೆ ಶಸ್ತ್ರಚಿಕಿತ್ಸ ನಡೆಸಲಾಗಿತ್ತು. ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಸಾವೀಗಿಡಾಗಿದ್ದಾನೆ. ಇನ್ನು ಘಟನಯಲ್ಲಿ ಆತನ ಹತ್ತು ವರ್ಷದ ಸಹೋದರ ಕೂಡ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾನ. ಏನಿದು ಘಟನೆ.? ನವಂಬರ್‌ 21ರಂದು ಅಮೆರಿಕದ ವಿಸ್ಕಾನ್ಸಿನ್‌ನ ವುಕೆಸಾದಲ್ಲಿ ಕ್ರಿಸ್‌ಮಸ್‌ ಮೆರವಣಿಗೆ ನಡಯುತ್ತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೇ ಸೇರಿದ್ದ ಕಾರ್ಯಕ್ರಮ ಇದಾಗಿತ್ತು. ರಸ್ತಯಲ್ಲಿ ಮರವಣಿಗ ನಡೆಯುತ್ತಿದ್ದಾಗ, ಅನಾಮಿಕ ವ್ಯಕ್ತಿಯೊಬ್ಬ ತನ್ನ ಎಸ್‌ಯುವಿ ಕಾರಿನೊಂದಿಗ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರ ಮೇಲೆ ಹರಿಸಿದ್ದಾನೆ. ವಾಹನವು ಬ್ಯಾರಿಕೇಡ್ ಅನ್ನು ಮುರಿದು ಒಳಗೆ ಬಂದಿದೆ. ಈ ವೇಳೆ ಪೊಲೀಸರು ಆತನ ಮೇಲೆ ಶೂಟ್‌ ಮಾಡಿದರು ಕೂಡ ಆತನ ನೇರವಾಗಿ ಮೆರವಣಿಗೆಯಲ್ಲಿದ್ದ ಜನರ ಮೇಲೆ ಕಾರು ಹರಿಸಿದ್ದಾನೆ. ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನಪ್ಪಿದ್ದರು, ಅಲ್ಲದೇ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಪೈಕಿ ಹದಿಮೂರು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದ. ಘಟನೆ ಬಗ್ಗೆ ಅಧ್ಯಕ್ಷ ಜೋ ಬೈಡನ್ ಸೇರಿ ಅನೇಕರು ತೀವ್ರ ಸಂತಾಪ ಸೂಚಿಸಿದ್ದಾರೆ. ಕಾರಣ ಏನು ಎಂದು ತಿಳಿದುಬಂದಿಲ್ಲ! ಇನ್ನು ಅಮಾಯಕ ಜನರ ಮೇಲೆ ಕಾರು ಹರಿಸಿದ್ದ ಬ್ರೂಕ್ಸ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಯಾಕಾಗಿ ಈ ಕೃತ್ಯ ಎಸಗಿದ ಎನ್ನುವ ಕಾರಣ ಇನ್ನು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಘಟನೆಯಲ್ಲಿ ಸಾವನಪ್ಪಿದವರ ಪೈಕಿ ಹೆಚ್ಚಿನವರು ಮಕ್ಕಳಾಗಿದ್ದು, ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿದೆ.


from India & World News in Kannada | VK Polls https://ift.tt/2ZiKgkt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...