ಉಡುಪಿ: ಸಮೀಪದ ತೊಟ್ಟಂ ಪರಿಸರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಕೈರಂಪಣಿ ಬಲೆಗೆ ಬೆಳಗ್ಗಿನ ಜಾವ ದುಬಾರಿ ಬೆಲೆಯ ರಾಶಿ ರಾಶಿ ಪಾಂಪ್ಲೆಟ್ ಬಲೆಗೆ ಬಿದ್ದಿವೆ. ಕೈರಂಪಣಿ ಬಲೆಗೆ ಲಕ್ಷಾಂತರ ರೂ. ಮೌಲ್ಯದ ರಾಶಿ ಮೀನುಗಳು ಬಿದ್ದಿದ್ದು, ಇದರಿಂದ ಕೈಪಂಣಿ ಮೀನುಗಾರರಿಗೆ ಜಾಕ್ಪಾಟ್ ಹೊಡೆದಿದೆ. ಮೀನುಗಾರರು ಫುಲ್ ಖುಷ್‌ಗೊಂಡಿದ್ದಾರೆ. ಸಮುದ್ರ ತೀರದಲ್ಲಿ ನಾಡದೋಣಿಗಳನ್ನು ಬಳಸಿ ಸುಮಾರು 40 ಮಂದಿ ಮೀನುಗಾರರು ಕೈರಂಪಣಿ ಮೀನುಗಾರಿಕೆಯನ್ನು ನಡೆಸುತ್ತಾರೆ. ಬಲೆಗೆ ಸಾಧಾರಣ ಸೈಜಿನ ಪಾಂಪ್ಲೆಟ್ ಮೀನುಗಳು ಸುಮಾರು 1300 ಕೆ.ಜಿ.ಯಷ್ಟು ಮೀನು ದೊರೆತಿದೆ. ಒಂದು ಕೆ.ಜಿ. ಮೀನಿಗೆ 320 ರೂ. ಮೌಲ್ಯವಿದ್ದು, ಕೈರಂಪಣ್ಣಿ ಬಲೆಗೆ ಇದೇ ಮೊದಲ ಬಾರಿಗೆ ದೊರೆತಿದೆ ಎಂದು ಕೈರಂಪಣಿ ಮೀನುಗಾರರು ತಿಳಿಸಿದ್ದಾರೆ.
from India & World News in Kannada | VK Polls https://ift.tt/3kMBXE0