ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ; ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ!

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸೆಪ್ಟೆಂಬರ್‌ 5 ಮತ್ತು 6 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಹಾಗೂ ಉತ್ತರ ಜಿಲ್ಲೆಗಳಾದ ಬೀದರ್‌, ಕಲಬುರಗಿ ಮತ್ತು ವಿಜಯಪುರ ಹಾಗೂ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನ ಜಿಲ್ಲೆಗಳಿಗೆ ಸೆಪ್ಟೆಂಬರ್‌ 5ರಂದು ಯಲ್ಲೋ ಆಲರ್ಟ್‌ ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್‌ 6ರಂದು ಕರಾವಳಿ ಮತ್ತು ಮಲೆನಾಡಿನ ಎಲ್ಲ ಜಿಲ್ಲೆಗಳಿಗೆ ಹಾಗೂ ಬೀದರ್‌, ಬಾಗಲಕೋಟೆ, ಕಲಬುರಗಿ, ವಿಜಯಪುರ, ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳಿಗೆ ಯಲ್ಲೋ ಆಲರ್ಟ್‌ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತನ್ನ ಮುನ್ಸೂಚನೆಯಲ್ಲಿ ಹೇಳಿದೆ. ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಜಲಾಶಯ ಗರಿಷ್ಠ ಮಟ್ಟ ಗರಿಷ್ಠ ಸಾಮರ್ಥ್ಯ ಇಂದಿನ ನೀರು ಇಂದಿನ ಒಳಹರಿವು ಇಂದಿನ ಹೊರ ಹರಿವು
ಲಿಂಗನಮಕ್ಕಿ ಜಲಾಶಯ 1819ಅಡಿ 156.62 ಟಿಎಂಸಿ 131.75 ಟಿಎಂಸಿ 7745 ಕ್ಯೂಸೆಕ್ಸ್ 7571 ಕ್ಯೂಸೆಕ್ಸ್
ಹಾರಂಗಿ ಜಲಾಶಯ 2859 ಅಡಿ 8.50 ಟಿಎಂಸಿ 8.19 ಟಿಎಂಸಿ 2604 ಕ್ಯೂಸೆಕ್ಸ್ 2725 ಕ್ಯೂಸೆಕ್ಸ್
ವರಾಹಿ ಜಲಾಶಯ 594.36 ಮೀಟರ್ 31.10 ಟಿಎಂಸಿ 17.27 ಟಿಎಂಸಿ 1318 ಕ್ಯೂಸೆಕ್ಸ್ 0 ಕ್ಯೂಸೆಕ್ಸ್
ತುಂಗಾ ಜಲಾಶಯ 588.24 ಮೀಟರ್ 3.24 ಟಿಎಂಸಿ 100.55 ಟಿಎಂಸಿ 15195 ಕ್ಯೂಸೆಕ್ಸ್ 10742 ಕ್ಯೂಸೆಕ್ಸ್
ಕಬಿನಿ ಜಲಾಶಯ 2284 ಅಡಿ 19.52 ಟಿಎಂಸಿ 16.91 ಟಿಎಂಸಿ 4111 ಕ್ಯೂಸೆಕ್ಸ್ 6750 ಕ್ಯೂಸೆಕ್ಸ್
ಕೆಆರ್ ಎಸ್ ಜಲಾಶಯ 124.80ಅಡಿ 49.45 ಟಿಎಂಸಿ 38.81 ಟಿಎಂಸಿ 5721 ಕ್ಯೂಸೆಕ್ಸ್ 9606 ಕ್ಯೂಸೆಕ್ಸ್
ಭದ್ರಾ ಜಲಾಶಯ 186 ಅಡಿ 71.535 ಟಿಎಂಸಿ 70.80 ಟಿಎಂಸಿ 3751 ಕ್ಯೂಸೆಕ್ಸ್ 3751 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ 662.94 ಮೀಟರ್ 51 ಟಿಎಂಸಿ 51.00 ಟಿಎಂಸಿ 382 ಕ್ಯೂಸೆಕ್ಸ್ 382 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ 633.83 ಅಡಿ 37.73 ಟಿಎಂಸಿ 36.62 ಟಿಎಂಸಿ 1294 ಕ್ಯೂಸೆಕ್ಸ್ 1294 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ 519.60 ಮೀಟರ್ 123.081 ಟಿಎಂಸಿ 123.08 ಟಿಎಂಸಿ 4119 ಕ್ಯೂಸೆಕ್ಸ್ 4119 ಕ್ಯೂಸೆಕ್ಸ್


from India & World News in Kannada | VK Polls https://ift.tt/3BF0hyt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...