ರಾಜ್ಯದಲ್ಲಿ ಮತ್ತೆರಡು ದಿನ ವರುಣನ ಆರ್ಭಟ; ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಶನಿವಾರ ಸುರಿದಿದೆ. ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಇದರಿಂದ ಮಳೆ ಹೆಚ್ಚಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸೆಪ್ಟೆಂಬರ್‌ 5 ಮತ್ತು 6 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. ದೇಶದ ಬಹುತೇಕ ಭಾಗಗಳಲ್ಲಿ ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. "ಜೂನ್‌ನಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತಲೂ ಶೇ. 7ರಷ್ಟು ಕಡಿಮೆಯಾಗಿತ್ತು. ಆಗಸ್ಟ್‌ನಲ್ಲಿ ಶೇ. 24ರಷ್ಟು ಕಡಿಮೆಯಾಗಿದೆ. ಹೀಗಾಗಿ ದೇಶದ ಒಟ್ಟಾರೆ ಮುಂಗಾರು ಮಳೆ ಪ್ರಮಾಣ ಶೇ. 9ರಷ್ಟು ಕುಂಠಿತವಾಗಿದೆ. ಆದರೆ ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯ ಕಾರಣದಿಂದಾಗಿ ಕೊರತೆ ಪ್ರಮಾಣ ನೀಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕರು ತಿಳಿಸಿದ್ದಾರೆ. ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಜಲಾಶಯ ಗರಿಷ್ಠ ಮಟ್ಟ ಗರಿಷ್ಠ ಸಾಮರ್ಥ್ಯ ಇಂದಿನ ನೀರು ಇಂದಿನ ಒಳಹರಿವು ಇಂದಿನ ಹೊರ ಹರಿವು
ಲಿಂಗನಮಕ್ಕಿ ಜಲಾಶಯ 1819ಅಡಿ 156.62 ಟಿಎಂಸಿ 131.75 ಟಿಎಂಸಿ 6544 ಕ್ಯೂಸೆಕ್ಸ್ 6402 ಕ್ಯೂಸೆಕ್ಸ್
ಹಾರಂಗಿ ಜಲಾಶಯ 2859 ಅಡಿ 8.50 ಟಿಎಂಸಿ 8.08 ಟಿಎಂಸಿ 2133 ಕ್ಯೂಸೆಕ್ಸ್ 3350 ಕ್ಯೂಸೆಕ್ಸ್
ವರಾಹಿ ಜಲಾಶಯ 594.36 ಮೀಟರ್ 31.10 ಟಿಎಂಸಿ 17.45 ಟಿಎಂಸಿ 1978 ಕ್ಯೂಸೆಕ್ಸ್ 0 ಕ್ಯೂಸೆಕ್ಸ್
ತುಂಗಾ ಜಲಾಶಯ 588.24 ಮೀಟರ್ 3.24 ಟಿಎಂಸಿ 100.86 ಟಿಎಂಸಿ 14,502 ಕ್ಯೂಸೆಕ್ಸ್ 10,941 ಕ್ಯೂಸೆಕ್ಸ್
ಕಬಿನಿ ಜಲಾಶಯ 2284 ಅಡಿ 19.52 ಟಿಎಂಸಿ 16.65 ಟಿಎಂಸಿ 3826 ಕ್ಯೂಸೆಕ್ಸ್ 6750 ಕ್ಯೂಸೆಕ್ಸ್
ಕೆಆರ್ ಎಸ್ ಜಲಾಶಯ 124.80ಅಡಿ 49.45 ಟಿಎಂಸಿ 38.67 ಟಿಎಂಸಿ 8127 ಕ್ಯೂಸೆಕ್ಸ್ 9577 ಕ್ಯೂಸೆಕ್ಸ್
ಭದ್ರಾ ಜಲಾಶಯ 186 ಅಡಿ 71.535 ಟಿಎಂಸಿ 70.78 ಟಿಎಂಸಿ 3450 ಕ್ಯೂಸೆಕ್ಸ್ 3751 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ 662.94 ಮೀಟರ್ 51 ಟಿಎಂಸಿ 51.00 ಟಿಎಂಸಿ 386 ಕ್ಯೂಸೆಕ್ಸ್ 386 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ 633.83 ಅಡಿ 37.73 ಟಿಎಂಸಿ 36.62 ಟಿಎಂಸಿ 1348 ಕ್ಯೂಸೆಕ್ಸ್ 1348 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ 519.60 ಮೀಟರ್ 123.081 ಟಿಎಂಸಿ 123.08 ಟಿಎಂಸಿ 3117 ಕ್ಯೂಸೆಕ್ಸ್ 3117 ಕ್ಯೂಸೆಕ್ಸ್


from India & World News in Kannada | VK Polls https://ift.tt/3jL86Ne

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...