ಶ್ರೀನಗರ (): ಕಾಶ್ಮೀರ ಕಣಿವೆಯಿಂದ 60 ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ಕಾಶ್ಮೀರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಫ್ಘಾನಿಸ್ತಾನ ದೇಶವು ಕೈವಶ ಆದ ಬಳಿಕ, ಕಣಿವೆ ರಾಜ್ಯ ಕಾಶ್ಮೀರದಿಂದ 60 ಯುವಕರು ನಾಪತ್ತೆಯಾಗಿದ್ದಾರೆ. ಅವರು ಪಾಕಿಸ್ತಾನಕ್ಕೆ ಹೋಗಿರಬಹುದು. ಅಥವಾ ಅಫ್ಘಾನಿಸ್ತಾನಕ್ಕೆ ಹೋಗಿ ತಾಲಿಬಾನ್ ಸೇರ್ಪಡೆ ಆಗಿರಬಹುದು ಎಂಬೆಲ್ಲಾ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿರುವ ಕಾಶ್ಮೀರ ಪೊಲೀಸರು, ಇವೆಲ್ಲವೂ ಅಕ್ಷರಶಃ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ. ಕಾಶ್ಮೀರ ಝೋನ್ ಪೊಲೀಸ್ ಹೆಸರಿನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಕಾಶ್ಮೀರ ಐಜಿಪಿ ಅವರ ಹೇಳಿಕೆಯನ್ನು ಪ್ರಕಟಿಸಲಾಗಿದೆ. ಮೂಲಗಳ ಪ್ರಕಾರ ಅಫ್ಘಾನಿಸ್ತಾನ ತಾಲಿಬಾನ್ ಕೈವಶ ಆದ ಬಳಿಕ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಂಸಾಚಾರ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಕಳೆದ ಒಂದು ತಿಂಗಳಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಕಣಿವೆ ರಾಜ್ಯದಲ್ಲಿ ಸುಮಾರು 6 ಭಯೋತ್ಪಾದಕ ಗುಂಪುಗಳು ಹಿಂಸಾಚಾರ ಕೃತ್ಯದಲ್ಲಿ ತೊಡಗಿವೆ. ಕಾಶ್ಮೀರದಲ್ಲಿ ಅಭದ್ರತೆ ಸೃಷ್ಟಿಸೋದೇ ಈ ಗುಂಪುಗಳ ಉದ್ದೇಶವಾಗಿದ್ದು. ಪಾಕಿಸ್ತಾನದಿಂದ ಈ ಉಗ್ರರು ದೇಶದ ಒಳಗೆ ನುಸುಳಿದ್ದಾರೆ ಎನ್ನಲಾಗಿದೆ. ಹಾಗೆ ನೋಡಿದ್ರೆ ವಾರಗಳ ಹಿಂದೆ ಅಫ್ಘಾನಿಸ್ತಾನ ತಾಲಿಬಾನ್ ಕೈವಶ ಆದ ಬಳಿಕ ಕೆಲವು ಫೇಸ್ಬುಕ್ ಪುಟಗಳಲ್ಲಿ ತಾಲಿಬಾನ್ಗೆ ಶುಭಾಶಯ ಕೋರುವ ಸಂದೇಶಗಳೂ ಪ್ರಕಟವಾಗಿದ್ದವು. ಇದರ ಬೆನ್ನಲ್ಲೇ ಕಳೆದ ಒಂದು ತಿಂಗಳ ಅವಧಿಯಲ್ಲಿ 60 ಯುವಕರು ಕಾಶ್ಮೀರದಿಂದ ನಾಪತ್ತೆಯಾಗಿದ್ದಾರೆ ಎಂಬ ವದಂತಿಯೂ ಹರಡಿತ್ತು. ಈ ಎಲ್ಲಾ ಬೆಳವಣಿಗೆ ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆ ಕೂಡಾ, ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ಸ್ಪಷ್ಟನೆ ನೀಡಿದೆ. ಅಫ್ಘಾನಿಸ್ತಾನ ಬೆಳವಣಿಗೆಗಳು ಕಣಿವೆ ರಾಜ್ಯದ ಮೇಲೆ ಪರಿಣಾಮ ಬೀರೋದಿಲ್ಲ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸೇನೆ ಸ್ಪಷ್ಟನೆ ನೀಡಿದೆ.
from India & World News in Kannada | VK Polls https://ift.tt/3yvZyOd