ಸೆಪ್ಟೆಂಬರ್‌ 27ರಂದು ನಡೆಯಲಿರುವ ಭಾರತ್ ಬಂದ್‌ಗೆ ಕರ್ನಾಟಕ ರಣಧೀರ ಪಡೆ ಸಂಪೂರ್ಣ ಬೆಂಬಲ

ಬೆಂಗಳೂರು: ಸೆಪ್ಟೆಂಬರ್ 27ರಂದು ನಡೆಯಲಿರುವ ಕರೆಗೆ ಮತ್ತು ಕರ್ನಾಟಕ ಜನಾಧಿಕಾರ ಪಕ್ಷ ಬೆಂಬಲ ಘೋಷಿಸಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಣಧೀರ ಪಡೆ ರಾಜ್ಯಾಧ್ಯಕ್ಷ , ಈಗಾಗಲೇ ಬ್ಯಾಂಕುಗಳಿಗೆ ಕನ್ನಡಿಗ ರೈತರ ಪ್ರವೇಶವನ್ನು ತಡೆದಿರುವ ಒಕ್ಕೂಟ ಸರ್ಕಾರವು ಕೃಷಿ ಕಾಯ್ದೆಗಳ ಮೂಲಕ ಕನ್ನಡಿಗ ರೈತರನ್ನು ಮಾರುಕಟ್ಟೆಯಿಂದಲೂ ಹೊರದಬ್ಬುವ ಪ್ರಯತ್ನ ಮಾಡುತ್ತಿದೆ. ಒಕ್ಕೂಟ ಸರ್ಕಾರದ ಕೃಷಿ ಕಾಯ್ದೆಗಳು ಪ್ರಾದೇಶಿಕತೆಯ ವಿರೋಧಿಯಾಗಿದ್ದು ಕನ್ನಡಿಗರೆಲ್ಲರೂ ಸೆಪ್ಟೆಂಬರ್ 27 ರ ಭಾರತ್ ಬಂದ್ ಅನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಗಳು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಧಾರೆ ಎರೆಯುತ್ತಿದೆ ಎಂದು ಆರೋಪಿಸಿರುವ ಹರೀಶ್ ಕುಮಾರ್, ರೈತರ ಜೀವನಾಡಿಯಾಗಿರುವ ಎಪಿಎಂಸಿಯಲ್ಲಿ ಬಂಡವಾಳಶಾಹಿ ಬೃಹತ್ ಸಂಸ್ಥೆಗಳು ಕಾಲಿಟ್ಟ ದಿನದಿಂದ ರೈತರು ಎಪಿಎಂಸಿಯಿಂದ ಹೊರ ದಬ್ಬಿದಂತಿರುತ್ತದೆ. ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ವ್ಯವಹರಿಸಬೇಕಾದ ರೈತರು ಹಿಂದಿವಾಲಾ ಸಂಸ್ಥೆಗಳ ಜೊತೆ ಮಾತನಾಡುವಂತೆಯೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ರಾಜ್ಯದ ಬ್ಯಾಂಕುಗಳಿಗೆ ಉತ್ತರ ಭಾರತದ ಅಧಿಕಾರಿಗಳನ್ನು ನೇಮಕ ಮಾಡಿರುವುದರಿಂದ ಗ್ರಾಮೀಣ ಭಾಗದ ಜನ ಹಿಂದಿ ಭಾಷಿಕ ಅಧಿಕಾರಿಗಳ ಜೊತೆ ಮಾತನಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ರೈತರನ್ನು ಎಪಿಎಂಸಿಯಲ್ಲಿ ಪರಕೀಯರನ್ನಾಗಿಸುವ ಹುನ್ನಾರ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ, ರಾಜ್ಯದ ಕೃಷಿ ಭೂಮಿಯಲ್ಲಿ ಯಾವ ಕೃಷಿಯನ್ನು ಮಾಡಬೇಕು ಎನ್ನುವುದನ್ನೂ ಈ ಕಾರ್ಪೋರೇಟ್ ಸಂಸ್ಥೆಗಳು ನಿರ್ಧರಿಸಲಿವೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಒಟ್ಟಾರೆಯಲ್ಲಿ ಕರ್ನಾಟಕದ ರೈತ ತನ್ನದೇ ನೆಲದಲ್ಲಿ ಪರಕೀಯನಂತೆ ಬದುಕಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಆ ಕಾರಣಕ್ಕಾಗಿ ನಮ್ಮ ಅನ್ನದಾತ ರೈತರ ಜೊತೆ ನಾವೆಲ್ಲರೂ ನಿಲ್ಲಬೇಕಿದೆ. ಅಲ್ಲದೆ ಈ ಭಾರತ್ ಬಂದ್ ಕೇವಲ ರೈತರಿಗಷ್ಟೇ ಸೀಮಿತವಲ್ಲ. ಜನಸಾಮಾನ್ಯರ ವಿಷಯಗಳನ್ನೂ ಒಳಗೊಂಡಿದೆ. ಕೊರೊನಾ ಸಂಕಷ್ಟದಿಂದ ಜನರು ಉದ್ಯೋಗಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿ ಇರುವಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಅಡುಗೆ ಅನಿಲ, ಪೆಟ್ರೋಲ್, ಎಣ್ಣೆ, ದಿನಸಿ ಬೆಲೆಗಳು ಮಧ್ಯಮ ವರ್ಗವನ್ನೂ ಬಡವರನ್ನಾಗಿಸಿದೆ. ಬಡವರು ಅತೀ ಬಡವರಾದ ಸ್ಥಿತಿಯಲ್ಲಿದ್ದಾರೆ. ಭಾರತ್ ಬಂದ್ ನಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಎಂಬ ಒತ್ತಡವನ್ನೂ ಹಾಕಲಾಗುವುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ರಾಜ್ಯದ ಎಲ್ಲ ರೈತಪರ ಸಂಘಟನೆಗಳು, ಜನಪರ, ದಲಿತಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ಸರ್ಕಾರಿ, ಬ್ಯಾಂಕ್‌ ನೌಕರರು ಬೆಂಬಲ ಸೂಚಿಸಿರುವ ಸೆಪ್ಟೆಂಬರ್ 27 ರ ಭಾರತ್ ಬಂದ್‌ಗೆ ಕನ್ನಡ ಸಂಘಟನೆಯಾಗಿ, ಪ್ರಾದೇಶಿಕ ಪಕ್ಷವಾಗಿ ಕರ್ನಾಟಕ ರಣಧೀರ ಪಡೆ ಮತ್ತು ಕರ್ನಾಟಕ ಜನಾಧಿಕಾರ ಪಕ್ಷ ಬೆಂಬಲಿಸಿ ಬೀದಿಗಿಳಿಯುತ್ತದೆ ಎಂದು ಹರೀಶ್ ಕುಮಾರ್ ಬಿ ಹೇಳಿದ್ದಾರೆ.


from India & World News in Kannada | VK Polls https://ift.tt/3i6PqGd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...