ಪೋಷಕರಿಂದ ಶುಲ್ಕ ವಸೂಲಿ; ಕೊಡಿಗೆಹಳ್ಳಿಯ ಜ್ಞಾನಗಂಗಾ ವಿದ್ಯಾಸಂಸ್ಥೆಗೆ ನೋಟಿಸ್‌!

ದೊಡ್ಡಬಳ್ಳಾಪುರ: ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಕೂರಿಸಿ ಪೋಷಕರಿಂದ ಶುಲ್ಕ ವಸೂಲಿಗೆ ಮಕ್ಕಳನ್ನು ತರಗತಿಯಿಂದ ಹೊರಗೆ ಕೂರಿಸಿ ಶುಲ್ಕ ವಸೂಲಿ ಮಾಡಲು ಮುಂದಾಗಿತ್ತು. ಈ ಕುರಿತು ವಿಜಯ ಕರ್ನಾಟಕ ವರದಿ ಪ್ರಕಟಿಸಿ ಬೆಳಕು ಚೆಲ್ಲಿದ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ಪರಿಶೀಲನೆ ನಡೆಸಿದ್ದು, ಶಾಲೆಗೆ ನೀಡಿರುವ ಅನುಮತಿಯನ್ನು ಏಕೆ ಹಿಂತೆಗೆದುಕೊಳ್ಳಬಾರದು ಎಂಬುದರ ಬಗ್ಗೆ ಕಾರಣ ಕೇಳಿ ನೀಡಿದ್ದಾರೆ. ತಾಲೂಕಿನ ಕೊಡಿಗೆಹಳ್ಳಿಯ ಜ್ಞಾನಗಂಗಾ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಪ್ರೌಢಶಾಲೆಯ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎರಡು ವರ್ಷದಿಂದ ಶಾಲಾ ಶುಲ್ಕ ಪಾವತಿ ಮಾಡಿರಲಿಲ್ಲ, ಪೋಷಕರಿಗೆ ಸಾಕಷ್ಟು ಬಾರಿ ಪೋನ್‌ ಮಾಡಿ ಮನವಿ ಮಾಡಿದರು ಶುಲ್ಕ ಪಾವತಿಸದ ಹಿನ್ನಲೆ ಶಾಲಾ ಆಡಳಿತ ಮಂಡಳಿ 80 ವಿದ್ಯಾರ್ಥಿಗಳನ್ನ ತರಗತಿಯಿಂದ ಹೊರಗೆ ಕೂರಿಸಿ ಅಲ್ಲಿಯೇ ಶಿಕ್ಷಕರಿಂದ ಬೋಧನೆ ಮಾಡಿಸುತ್ತಿತ್ತು. ಈ ಕುರಿತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸೆಪ್ಟೆಂಬರ್‌ 24 ರಂದು ಶುಲ್ಕ ಕಟ್ಟದ ವಿದ್ಯಾರ್ಥಿಗಳು ತರಗತಿಯಿಂದ ಹೊರಗೆ ಕೂರಿಸಿದ ವಿದ್ಯಾಸಂಸ್ಥೆ ಅಡಿ ಬರಹದಲ್ಲಿ ಸುದ್ದಿ ಪ್ರಕಟ ಮಾಡಿತ್ತು. ಸುದ್ದಿ ಪ್ರಸಾರದಿಂದ ಎಚ್ಚೆತ್ತ ದೊಡ್ಡಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದ ಸಮಯದಲ್ಲಿ ಮಕ್ಕಳಿಗೆ ಶಾಲಾ ಅವರಣದಲ್ಲಿ ದೈಹಿಕ ಮತ್ತು ಮಾನಸಿಕ ಶಿಕ್ಷೆಯನ್ನು ವಿಧಿಸಿರುವುದು ಸ್ಪಷ್ಟವಾಗಿದೆ. ದಾಖಲೆಗಳ ಪರಿಶೀಲನೆ ನಡೆಸಿದ್ದಾಗ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಮತ್ತು ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯದಿರುವುದು ಗಮನಕ್ಕೆ ಬಂದಿದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕರ್ನಾಟಕ ಶಿಕ್ಷಣ ಸಂಸ್ಥೆಗಳು ( ಪ್ರಾಥಮಿಕ/ಪ್ರೌಢಶಿಕ್ಷಣ) ಮ್ಯಾನತೆ ನಿಯಮಗಳು 1999ರ ನಿಯಮ -3(1) ರಂತೆ ಶಾಲೆ ನಡೆಸಲು ನೀಡಿರುವ ನಿಯಮಗಳ ಉಲ್ಲಂಘನೆ ಮತ್ತು ಭಾರತ ಸರಕಾರದ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009ರ ಅಧ್ಯಾಯ-4 ರ ಸೆಕ್ಷನ್‌ -17 (1) ಅನ್ನು ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ನಿಯಮಗಳ ಉಲ್ಲಂಘನೆ ಕಾರಣದಿಂದ ತಮಗೆ ಶಾಲೆ ನಡೆಸಲು ನೀಡಲಾಗಿರುವ ಅನುಮತಿಯನ್ನು ಏಕೆ ಹಿಂತೆಗೆದುಕೊಳ್ಳಬಾರದು ಎಂಬುದರ ಬಗ್ಗೆ ಕಾರಣ ಕೇಳಿ ಶಾಲಾ ಆಡಳಿತ ಮಂಡಳಿಗೆ ನೋಟಿಸ್‌ ನೀಡಿದ್ದಾರೆ. ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನ ತರಗತಿಯಿಂದ ಕೂರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌, ಈಗಾಗಲೇ ಡಿಡಿಪಿಐಗೆ ಸೂಚನೆ ನೀಡಲಾಗಿದ್ದು, ಸೂಕ್ತ ಕ್ರಮ ತೆಗೆದು ಕೊಂಡು ವರದಿ ನೀಡುವಂತೆ ಹೇಳಲಾಗಿದೆ, ಶುಲ್ಕವನ್ನು ಬಲವಂತವಾಗಿ ತೆಗೆದು ಕೊಳ್ಳಬಾರದು ಒಂದು ವೇಳೆ ಬಲವಂತ ಮಾಡಿದ್ದಲ್ದಿ ಶಾಲೆಯ ಅನುಮತಿ ರದ್ದು ಮಾಡುವಂತೆ ಶಿಫಾರಸು ಮಾಡುವಂತೆ ಹೇಳಲಾಗಿದೆ ಎಂದರು.


from India & World News in Kannada | VK Polls https://ift.tt/3AIIQgr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...