ಉತ್ತರ ಪ್ರದೇಶ: ಕಳೆದ 10 ದಿನಗಳಲ್ಲಿ 'ನಿಗೂಢ ಜ್ವರ'ಕ್ಕೆ 45 ಮಕ್ಕಳು ಸೇರಿ 53 ಮಂದಿ ಸಾವು

ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಕಳೆದ 10 ದಿನಗಳಲ್ಲಿ 45 ಸೇರಿದಂತೆ 53 ಮಂದಿ ವಿಚಿತ್ರ ಅನಾರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಠಾತ್ ಸರಣಿ ಸಾವುಗಳಿಗೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆಗೆ ಸರ್ಕಾರ ಆದೇಶಿಸಿದೆ. ಫಿರೋಜಾಬಾದ್ ವೈದ್ಯಕೀಯ ಕಾಲೇಜಿನಲ್ಲಿ ಕಂಡುಬರುತ್ತಿರುವ ದೃಶ್ಯಗಳು ಭಯಾನಕವಾಗಿವೆ. ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ಸಾಲಾಗಿ ಮಲಗಿಸಲಾಗಿದ್ದು, ಆತಂಕಕ್ಕೆ ಒಳಗಾಗಿರುವ ಅವರ ಪೋಷಕರು ತಮ್ಮ ಮಕ್ಕಳ ಜೀವ ಉಳಿಯಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಪುಟ್ಟ ಕಂದಮ್ಮಗಳನ್ನು ಕಳೆದುಕೊಂಡ ತಂದೆ ತಾಯಿಯರ ಆಕ್ರಂದನ ಮುಗಿಲುಮುಟ್ಟಿದೆ. ಪ್ರಸ್ತುತ 186 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಕ್ಕಳ ಅನಾರೋಗ್ಯದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6ರವರೆಗೂ 1-8ನೇ ತರಗತಿ ಶಾಲೆಗಳನ್ನು ಮುಚ್ಚುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ವಿಜಯ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ , ಮಂಗಳವಾರ ಫಿರೋಜಾಬಾದ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಾವುಗಳಿಗೆ ನಿಖರ ಕಾರಣ ತಿಳಿದುಕೊಳ್ಳಲು ತಂಡವೊಂದನ್ನು ರಚಿಸುವುದಾಗಿ ತಿಳಿಸಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ ಸಾಕಷ್ಟು ಮಾನವ ಸಂಪನ್ಮೂಲ ಲಭ್ಯ ಇರುವಂತೆ ನಿರ್ದೇಶನ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ. ಫಿರೋಜಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳನ್ನು ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದ ಅವರು, ಮೃತಪಟ್ಟ ರೋಗಿಗಳ ಪೈಕಿ ಕೆಲವರ ಮನೆಗಳಿಗೆ ತೆರಳಿದ್ದರು. ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಆರು ವರ್ಷದ ಲಕ್ಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಪರಿಸ್ಥಿತಿ ಬಿಗಡಾಯಿಸುತ್ತಿದೆ ಎಂದು ವೈದ್ಯರು, ಆಗ್ರಾ ಆಸ್ಪತ್ರೆಗೆ ರವಾನಿಸುವಂತೆ ಸೂಚಿಸಿದ್ದರು. ಆದರೆ ಆಗ್ರಾ ತಲುಪುವ ಮುನ್ನವೇ ಆತ ಕೊನೆಯುಸಿರು ಎಳೆದಿದ್ದ ಎಂದು ಸಂಬಂಧಿಕರು ಕಣ್ಣೀರಿಟ್ಟರು. ಮೂರು ದಿನಗಳ ಹಿಂದಷ್ಟೇ ಮಗಳು ಅಂಜಲಿಯನ್ನು ಕಳೆದುಕೊಂಡಿದ್ದ ಸುನಿಲ್, ಮಗ ಅಭಿಜಿತ್‌ನನ್ನಾದರೂ ಉಳಿಸಿಕೊಳ್ಳುವ ಹತಾಶೆಯ ಪ್ರಯತ್ನದಲ್ಲಿದ್ದಾರೆ. ಆರು ದಿನಗಳ ಹಿಂದೆ ಎರಡೂ ಮಕ್ಕಳಿಗೆ ಜ್ವರ ಬಂದಿತ್ತು. ಮಗಳು ಸತ್ತೇ ಹೋದಳು. ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ಅವರು ಗದ್ಗದಿತರಾದರು. ಹೆಚ್ಚಿನ ಮಕ್ಕಳು ವೈರಲ್ ಜ್ವರದಿಂದ ಬಳಲುತ್ತಿದ್ದಾರೆ. ಇವರಲ್ಲಿ ಕೆಲವರು ಡೆಂಘಿ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ ಎಂದು ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞ ಡಾ. ಎಲ್‌ಕೆ ಗುಪ್ತಾ ತಿಳಿಸಿದ್ದಾರೆ.


from India & World News in Kannada | VK Polls https://ift.tt/2Wzm8J3

ಬಂಟ್ವಾಳ ಮಿನಿ ವಿಧಾನಸೌಧಕ್ಕೆ ರಮಾನಾಥ ರೈ ನೇತೃತ್ವದಲ್ಲಿ ದಿಢೀರ್‌ ಮುತ್ತಿಗೆ, ತಾರತಮ್ಯಕ್ಕೆ ಆಕ್ರೋಶ

ಬಂಟ್ವಾಳ: ಕೆಎಸ್ಸಾರ್ಟಿಸಿ ಐಸಿಯು ಬಸ್‌, ಕೋವಿಡ್‌ ಲಸಿಕೆ ಹಾಗೂ ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್‌ ವಿತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಮಂಗಳವಾರ ಬಿ.ಸಿ.ರೋಡ್‌ ಮಿನಿ ವಿಧಾನ ಸೌಧಕ್ಕೆ ದಿಢೀರ್‌ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಜಿಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಪದ್ಮಶೇಖರ ಜೈನ್‌, ಬ್ಲಾಕ್‌ ಅಧ್ಯಕ್ಷರಾದ ಬೇಬಿ ಕುಂದರ್‌, ಸುದೀಪ್‌ ಕುಮಾರ್‌ ಶೆಟ್ಟಿ, ಪುರಸಭಾಧ್ಯಕ್ಷ ಮಹಮ್ಮದ್‌ ಶರೀಫ್‌, ಸುದರ್ಶನ ಜೈನ್‌ ಸಹಿತ ವಿವಿಧ ಕಾಂಗ್ರೆಸ್‌ ಮುಖಂಡರೊಂದಿಗೆ ತಹಸೀಲ್ದಾರ್‌ ಕೊಠಡಿಯೊಳಗೆ ತೆರಳಿದ ರೈ ವಿವಿಧ ವಿಚಾರಗಳ ಕುರಿತು ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಹಸೀಲ್ದಾರ್‌ ರಶ್ಮಿ ಎಸ್‌.ಆರ್‌. ಅವರನ್ನು ಆಗ್ರಹಿಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಮಿನಿ ವಿಧಾನಸೌಧದೊಳಗೆ ಹೆಚ್ಚಿನ ಜನರು ಪ್ರವೇಶಿಸದಂತೆ ಬಾಗಿಲು ಹಾಕಲಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದ ಘಟನೆಯೂ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈ, ಪದೇ ಪದೇ ರಾಜಧರ್ಮವನ್ನು ಉಲ್ಲೇಖಿಸುವ ಬಿಜೆಪಿ ಆಡಳಿತ ಇಂದು ಕ್ಷೇತ್ರದಲ್ಲಿ ತಾರತಮ್ಯ ಎಸಗುತ್ತಿದ್ದು, ಇದು ಮುಂದುವರಿದರೆ ಬಿಜೆಪಿ ಇದ್ದ ಪಂಚಾಯಿತಿ ಕಚೇರಿಯೆದುರು ಮಾತ್ರ ಹೋಗುವ ಕೆಎಸ್ಸಾರ್ಟಿಸಿ ಐಸಿಯು ಬಸ್ಸಿನೆದುರು ಅಡ್ಡ ಮಲಗುತ್ತೇನೆ ಎಂದರು. ಬಸ್‌ ಕಾಂಗ್ರೆಸ್‌ ಮತ್ತಿತರ ಪಕ್ಷ ಬೆಂಬಲಿತರ ಆಡಳಿತವಿರುವ ಪಂಚಾಯಿತಿಗೆ ಪಂಚಾಯಿತಿ ಕಚೇರಿಗೆ ಬರುವುದಿಲ್ಲ, ಬಿಜೆಪಿ ಬೆಂಬಲಿತರ ಆಡಳಿತವಿದ್ದ ಪಂಚಾಯಿತಿಗೆ ಮಾತ್ರ ಬರುತ್ತದೆ. ಕಾರ್ಮಿಕರ ಕಿಟ್‌ ಅರ್ಹರ ಕೈ ಸೇರುತ್ತಿಲ್ಲ, ಯಾರ್ಯಾರೋ ಇದನ್ನು ವಿತರಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆ ಮೇಲೆ ಬೆದರಿಕೆ ಕುರಿತು ಆಡಳಿತ ಗಂಭೀರವಾಗಿ ಪರಿಗಣಿಸಿಲ್ಲ. 94 ಸಿ ಸವಲತ್ತು ಅರ್ಹರಿಗೆ ವಿತರಣೆ ಆಗಬೇಕು ಎಂಬ ಹಲವು ವಿಚಾರಗಳ ಕುರಿತು ಆಗ್ರಹ ಮಂಡಿಸಿದ್ದಾಗಿ ಅವರು ಹೇಳಿದರು. ನಾವು ಈ ಕುರಿತು ಬೇಡಿಕೆ ಕೊಟ್ಟರೂ ಬೆಲೆ ಸಿಗದಿದ್ದ ಕಾರಣ ಪ್ರತಿಭಟನೆ ಮಾಡಿದ್ದೇವೆ ಎಂದ , 94 ಸಿ ಕೊಡಬೇಕಾದರೆ ಶಕ್ತಿ ಕೇಂದ್ರಕ್ಕೆ ದೂರವಾಣಿ ಕರೆ ಮಾಡಬೇಕು ಇದೆಂಥ ವ್ಯವಸ್ಥೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಬ್ಬಾಸ್‌ ಅಲಿ, ಪುರಸಭೆ ಉಪಾಧ್ಯಕ್ಷೆ ಜೇಸಿಂತ ಡಿ'ಸೋಜ, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷರಾದ ಜಯಂತಿ ವಿ. ಪೂಜಾರಿ ಮತ್ತು ಲವೀನಾ ವಿಲ್ಮಾ ಮೋರಸ್‌, ಪುರಸಭಾ ಸದಸ್ಯರಾದ ಅಬೂಬಕ್ಕರ್‌ ಸಿದ್ದೀಕ್‌, ಗಂಗಾಧರ್‌, ಲೋಲಾಕ್ಷ ಶೆಟ್ಟಿ, ಜನಾರ್ದನ ಚೆಂಡ್ತಿಮಾರ್‌, ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ನವಾಝ್‌ ಬಡಕಬೈಲ್‌, ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್‌, ಮುಹಮ್ಮದ್‌ ನಂದಾವರ, ಯೂಸುಫ್‌ ಕರಂದ್ಲಾಡಿ, ಪ್ರಶಾಂತ್‌ ಕುಲಾಲ್‌, ಸೀತಾರಾಮ ಶೆಟ್ಟಿ, ಬೊಂಡಾಲ ಚಿತ್ತರಂಜನ್‌ ಶೆಟ್ಟಿ, ಚಂದ್ರಶೇಖರ ಪೂಜಾರಿ, ವೆಂಕಪ್ಪ ಪೂಜಾರಿ ಸಹಿತ ಹಲವು ಕಾಂಗ್ರೆಸ್‌ ಕಾರ್ಯಕರ್ತರು ಉಪಸ್ಥಿತರಿದ್ದರು.


from India & World News in Kannada | VK Polls https://ift.tt/3yybxuK

ರಹಾನೆ ಔಟ್‌, ಅಶ್ವಿನ್‌ ಇನ್‌? 4ನೇ ಟೆಸ್ಟ್‌ಗೆ ಭಾರತ ಪ್ಲೇಯಿಂಗ್‌ XIನಲ್ಲಿ 3 ಬದಲಾವಣೆ ಸಾಧ್ಯತೆ!

ಲಂಡನ್‌: ಕಳೆದ ಪಂದ್ಯದ ಹೀನಾಯ ಸೋಲಿನ ಆಘಾತಕ್ಕೆ ಒಳಗಾಗಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ನಾಳೆಯಿಂದ (ಗುರುವಾರ) ಇಂಗ್ಲೆಂಡ್‌ ವಿರುದ್ಧ ಆರಂಭವಾಗುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಉಭಯ ತಂಡಗಳ ನಡುವಿನ ಈ ಹೈ ವೋಲ್ಟೇಜ್‌ ಪಂದ್ಯಕ್ಕೆ ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ ಮೈದಾನಲ್ಲಿ ವೇದಿಕೆ ಸಿದ್ದವಾಗಿದೆ. ಐತಿಹಾಸಿಕ ಲಾರ್ಡ್ಸ್ ಟೆಸ್ಟ್‌ನಲ್ಲಿ 151 ರನ್‌ ಗಳ ಭರ್ಜರಿ ಗೆಲುವು ಪಡೆದಿದ್ದ ಭಾರತ, ಹೆಡಿಂಗ್ಲೇಯಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 76 ರನ್‌ಗಳ ಹೀನಾಯ ಸೋಲಿನ ಆಘಾತ ಅನುಭವಿಸಿತ್ತು. ಈ ಗೆಲುವಿನೊಂದಿಗೆ ಇಂಗ್ಲೆಂಡ್‌, ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಸಾಧಿಸಿತು. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 78 ರನ್‌ಗೆ ಆಲೌಟ್‌ ಆಗಿತ್ತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್‌, ಜೋ ರೂಟ್‌ ಶತಕದ ಬಲದಿಂದ 432 ರನ್‌ ಕಲೆ ಹಾಕಿತ್ತು ಹಾಗೂ 354 ರನ್ ಮುನ್ನಡೆ ಗಳಿಸಿತ್ತು. ನಂತರ ದ್ವಿತೀಯ ಇನಿಂಗ್ಸ್ ಮಾಡಿದ್ದ ಭಾರತ 278 ರನ್‌ಗಳಿಗೆ ಆಲೌಟ್‌ ಆಗಿತ್ತು.ಲಂಡನ್‌ನ ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ನಾಳೆಯಿಂದ(ಸೆ.2) ಆರಂಭವಾಗುವ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಇದೀಗ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್ ಬಗ್ಗೆ ನಾವು ಇಲ್ಲಿ ಚರ್ಚೆ ನಡೆಸೋಣ...

ಇಂಗ್ಲೆಂಡ್‌ ವಿರುದ್ಧ ನಾಳೆಯಿಂದ ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ಆರಂಭವಾಗುವ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್‌ ಈ ರೀತಿ ನೀಡಲಾಗಿದ್ದು, ಆರ್‌ ಅಶ್ವಿನ್‌ ಕಮ್‌ಬ್ಯಾಕ್‌ ಮಾಡುವ ಸಾಧ್ಯತೆ ಇದೆ.


ರಹಾನೆ ಔಟ್‌, ಅಶ್ವಿನ್‌ ಇನ್‌? 4ನೇ ಟೆಸ್ಟ್‌ಗೆ ಭಾರತ ಪ್ಲೇಯಿಂಗ್‌ XIನಲ್ಲಿ 3 ಬದಲಾವಣೆ ಸಾಧ್ಯತೆ!

ಲಂಡನ್‌:

ಕಳೆದ ಪಂದ್ಯದ ಹೀನಾಯ ಸೋಲಿನ ಆಘಾತಕ್ಕೆ ಒಳಗಾಗಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ನಾಳೆಯಿಂದ (ಗುರುವಾರ) ಇಂಗ್ಲೆಂಡ್‌ ವಿರುದ್ಧ ಆರಂಭವಾಗುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಉಭಯ ತಂಡಗಳ ನಡುವಿನ ಈ ಹೈ ವೋಲ್ಟೇಜ್‌ ಪಂದ್ಯಕ್ಕೆ ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ ಮೈದಾನಲ್ಲಿ ವೇದಿಕೆ ಸಿದ್ದವಾಗಿದೆ.

ಐತಿಹಾಸಿಕ ಲಾರ್ಡ್ಸ್ ಟೆಸ್ಟ್‌ನಲ್ಲಿ 151 ರನ್‌ ಗಳ ಭರ್ಜರಿ ಗೆಲುವು ಪಡೆದಿದ್ದ ಭಾರತ, ಹೆಡಿಂಗ್ಲೇಯಲ್ಲಿ ನಡೆದಿದ್ದ ಮೂರನೇ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 76 ರನ್‌ಗಳ ಹೀನಾಯ ಸೋಲಿನ ಆಘಾತ ಅನುಭವಿಸಿತ್ತು. ಈ ಗೆಲುವಿನೊಂದಿಗೆ ಇಂಗ್ಲೆಂಡ್‌, ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಸಾಧಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 78 ರನ್‌ಗೆ ಆಲೌಟ್‌ ಆಗಿತ್ತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್‌, ಜೋ ರೂಟ್‌ ಶತಕದ ಬಲದಿಂದ 432 ರನ್‌ ಕಲೆ ಹಾಕಿತ್ತು ಹಾಗೂ 354 ರನ್ ಮುನ್ನಡೆ ಗಳಿಸಿತ್ತು. ನಂತರ ದ್ವಿತೀಯ ಇನಿಂಗ್ಸ್ ಮಾಡಿದ್ದ ಭಾರತ 278 ರನ್‌ಗಳಿಗೆ ಆಲೌಟ್‌ ಆಗಿತ್ತು.

ಲಂಡನ್‌ನ ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ನಾಳೆಯಿಂದ(ಸೆ.2) ಆರಂಭವಾಗುವ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಇದೀಗ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ ಇಲೆವೆನ್ ಬಗ್ಗೆ ನಾವು ಇಲ್ಲಿ ಚರ್ಚೆ ನಡೆಸೋಣ...



​1. ರೋಹಿತ್‌ ಶರ್ಮಾ
​1. ರೋಹಿತ್‌ ಶರ್ಮಾ

ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಪ್ರಸಕ್ತ ಸರಣಿಯಲ್ಲಿ ಆಡಿರುವ ಆರು ಇನಿಂಗ್ಸ್‌ಗಳಿಂದ 46ರ ಸರಾಸರಿಯಲ್ಲಿ 230 ರನ್‌ ಗಳಿಸಿದ್ದಾರೆ. ಅಂದಹಾಗೆ, ಟೀಮ್‌ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಬಹುತೇಕ ಪಂದ್ಯಗಳಲ್ಲಿ ಹೊಸ ಚೆಂಡಿನಲ್ಲಿ ಅತ್ಯುತ್ತಮ ಬ್ಯಾಟ್‌ ಮಾಡುತ್ತಿದ್ದಾರೆ. ಅದರಂತೆ ಅವರು ಕೆಲ ಅದ್ಭುತ ಇನಿಂಗ್ಸ್‌ಗಳನ್ನು ಆಡಿದ್ದಾರೆ.

ಹೆಡಿಂಗ್ಲೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ರೋಹಿತ್‌ ಶರ್ಮಾ ಅತ್ಯಂತ ಕೆಟ್ಟದಾಗಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಚೇತೇಶ್ವರ್ ಪೂಜಾರ ಅವರೊಂದಿಗೆ ಅತ್ಯುತ್ತಮ ಜೊತೆಯಾಟವಾಡಿದ್ದರು. 156 ಎಸೆತಗಳನ್ನು ಎದುರಿಸಿದ್ದ ರೋಹಿತ್‌, 59 ರನ್‌ ಗಳಿಸಿದ್ದರು. ಅವರ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್‌ ಹಾಗೂ 7 ಬೌಂಡರಿಗಳು ಒಳಗೊಂಡಿದ್ದವು.

'ಇಂಗ್ಲೆಂಡ್‌ ವಿರುದ್ಧದ ಮುಂದಿನ ಪಂದ್ಯಕ್ಕೆ ಅಶ್ವಿನ್‌ಗೆ ಚಾನ್ಸ್ ಕೊಡಿ' : ವಾನ್‌!



​2. ಕೆ.ಎಲ್ ರಾಹುಲ್‌
​2. ಕೆ.ಎಲ್ ರಾಹುಲ್‌

ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕನ್ನಡಿಗ ಕೆ.ಎಲ್‌ ರಾಹುಲ್‌ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಒಟ್ಟು ಆರು ಇನಿಂಗ್ಸ್‌ಗಳಲ್ಲಿ ರಾಹುಲ್, 42ರ ಸರಾಸರಿಯಲ್ಲಿ 252 ರನ್‌ ಕಲೆ ಹಾಕಿದ್ದಾರೆ. ಆ ಮೂಲಕ ಪ್ರಸಕ್ತ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ ಕಲೆಹಾಕಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಐತಿಹಾಸಿಕ ಲಾರ್ಡ್ಸ್ ಟಸ್ಟ್‌ನಲ್ಲಿ ವೃತ್ತಿ ಬದುಕಿನ ಆರನೇ ಶತಕ ಸಿಡಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್‌, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಇದರ ಹೊರತಾಗಿಯೂ ಅವರು ಹೆಡಿಂಗ್ಲೇ ಟೆಸ್ಟ್‌ ಪಂದ್ಯದಲ್ಲಿ ಅತ್ಯಂತ ಹೀನಾಯವಾಗಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ಅವರು ಅತ್ಯುತ್ತಮ ಫಾರ್ಮ್‌ನಲ್ಲಿರುವುದರಿಂದ ಭಾರತಕ್ಕೆ ಇನ್ನುಳಿದ ಎರಡು ಪಂದ್ಯಗಳಿಗೆ ಲಾಭವಾಗಬಹುದು. ಅಂದಹಾಗೆ, ಲೀಡ್ಸ್‌ ಟೆಸ್ಟ್‌ ಮುಗಿದ ಕೆಲವೇ ನಿಮಿಷಗಳಲ್ಲಿ ರಾಹುಲ್‌ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಹಾಗಾಗಿ, ನಾಳಿನ ಪಂದ್ಯದಲ್ಲಿ ರಾಹುಲ್‌ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ.

ಮೈಕಲ್‌ ವಾನ್‌ಗೆ ಅತ್ಯಂತ ಬೆಲೆ ಬಾಳುವ ಉಡುಗೊರೆ ಕೊಟ್ಟ ಜಡೇಜಾ!



​3. ಚೇತೆಶ್ವರ್‌ ಪೂಜಾರ
​3. ಚೇತೆಶ್ವರ್‌ ಪೂಜಾರ

ಕಳೆದ ಒಂದು ವರ್ಷದಿಂದ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗುತ್ತಿದ್ದ ಚೇತೇಶ್ವರ್‌ ಪೂಜಾರ, ಮೂರನೇ ಟೆಸ್ಟ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಆದರೆ, ಕೇವಲ 9 ರನ್‌ಗಳ ಅಂತರದಲ್ಲಿ ಶತಕ ವಂಚಿತರಾಗಿದ್ದರು. ಕಳೆದ ಪಂದ್ಯದಲ್ಲಿ ಭರವಸೆ ಮೂಡಿಸಿರುವ ಪೂಜಾರ ಮೇಲೆ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್‌ ಮ್ಯಾನೇಜ್‌ಮೆಂಟ್‌ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಹೆಡಿಂಗ್ಲೇ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ ವಿಶ್ವಾಸ ಹೆಚ್ಚಿಸಿಕೊಂಡಿರುವ ಪೂಜಾರ, ಅದೇ ಫಾರ್ಮ್‌ನಲ್ಲಿ ನಾಲ್ಕನೇ ಟೆಸ್ಟ್‌ಗೆ ಕಣಕ್ಕೆ ಇಳಿಯಲಿದ್ದಾರೆ ಹಾಗೂ ಭಾರತ ತಂಡದ ಗೆಲುವಿಗಾಗಿ ಪ್ರಯತ್ನ ನಡೆಸಲಿದ್ದಾರೆ.

4ನೇ ಟೆಸ್ಟ್‌ನಲ್ಲಿ ಸೂರ್ಯಕುಮಾರ್‌ಗೆ ಅವಕಾಶ ಸಿಗೋದಿಲ್ಲ: ಚೋಪ್ರಾ!



​4. ವಿರಾಟ್‌ ಕೊಹ್ಲಿ
​4. ವಿರಾಟ್‌ ಕೊಹ್ಲಿ

ಲೀಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಯೋಗ್ಯ ಪ್ರದರ್ಶನ ತೋರಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ55 ರನ್‌ ಗಳಿಸಿದ್ದ ಕೊಹ್ಲಿ ಸ್ವಲ್ಪ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ, ಪ್ರಸಕ್ತ ಸರಣಿ ಕೊಹ್ಲಿ ಪಾಲಿಗೆ ಅತ್ಯಂತ ನಿರಾಶೆ ಮೂಡಿಸಿದೆ. ಆಡಿರುವ ಒಟ್ಟು ಐದು ಇನಿಂಗ್ಸ್‌ಗಳಲ್ಲಿ ವಿರಾಟ್‌ ಕೊಹ್ಲಿ 24.80ರ ಸರಾಸರಿಯಲ್ಲಿ ಕೇವಲ 124 ರನ್‌ ಮಾತ್ರ ಗಳಿಸಿದ್ದಾರೆ. ಕ್ಯಾಪ್ಟನ್‌ ಕೊಹ್ಲಿ ಬ್ಯಾಟಿಂಗ್‌ ಲಯಕ್ಕೆ ಮರಳಿದರೆ, ಖಂಡಿತಾ ಭಾರತ ತಂಡ ಪ್ರಸ್ತುತ ಟೆಸ್ಟ್‌ ಸರಣಿಯಲ್ಲಿ ಗೆಲುವು ದಾಖಲಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದೇ ಹೇಳಬಹುದು. ಆದರೆ, ಅವರು ಔಟ್‌ ಸೈಡ್‌ ದಿ ಆಫ್‌ ಸ್ಟಂಪ್‌ ಮೇಲಿನ ಎಸೆತಗಳನ್ನು ನಿರ್ವಹಿಸುವುದರ ಕಡೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ.

4ನೇ ಟೆಸ್ಟ್‌ಗೆ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಹುದಾದ 3 ಆಟಗಾರರು ಇವರೇ!



​5. ಹನುಮ ವಿಹಾರಿ
​5. ಹನುಮ ವಿಹಾರಿ

ಸತತ ವೈಫಲ್ಯ ಅನಭವಿಸುತ್ತಿರುವ ಉಪ ನಾಯಕ ಅಜಿಂಕ್ಯ ರಹಾನೆ ಅವರ ಬದಲು ನಾಳಿನ(ಗುರುವಾರ) ಪಂದ್ಯದಲ್ಲಿ ಹನುಮ ವಿಹಾರಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಬಳಿಕ ಅಜಿಂಕ್ಯ ರಹಾನೆ ರನ್‌ ಗಳಿಸುವಲ್ಲಿ ತಿಣುಕಾಡುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಅಂದಹಾಗೆ, ಹನುಮ ವಿಹಾರಿ ಕಳೆದ ಬಾರಿ ಇಂಗ್ಲೆಂಡ್‌ನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವಾಡಿದ್ದರು ಹಾಗೂ ಎರಡೂ ಇನಿಂಗ್ಸ್‌ಗಳಿಂದ 56 ರನ್‌ ಗಳಿಸಿದ್ದರು. ಇದರ ಹೊರತಾಗಿಯೂ ಅವರು ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದ್ದರು. ಅಷ್ಟೇ ಅಲ್ಲದೆ, ಇಂಗ್ಲೆಂಡ್‌ ಟೆಸ್ಟ್‌ ಸರಣಿಗೂ ಮುನ್ನ ಅವರು ಇಲ್ಲಿ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಆಡಿದ್ದರು. ಹಾಗಾಗಿ, ವಿಹಾರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

'ಅಡಿಲೇಡ್‌ ಟೆಸ್ಟ್‌ ಬಳಿಕ ಏನಾಯ್ತು ಎಂಬ ಬಗ್ಗೆ ನೆನಪಿರಲಿ' ಇಂಗ್ಲೆಂಡ್‌ಗೆ ಹುಸೇನ್‌ ಎಚ್ಚರಿಕೆ!



​6. ರಿಷಭ್ ಪಂತ್‌
​6. ರಿಷಭ್ ಪಂತ್‌

ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್‌ ಇನ್ನೂ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಲ್ಲ. ಆಡಿರುವ ಐದು ಇನಿಂಗ್ಸ್‌ಗಳಲ್ಲಿ ಅವರು ಗಳಿಸಿರುವುದು ಕೇವಲ 87 ರನ್‌ ಮಾತ್ರ . ಅದರಲ್ಲೂ ಇವರ ಸರಾಸರಿ ಕೇವಲ 17.40 ಮಾತ್ರ. ಆದರೆ, ಸ್ಟಂಪ್‌ಗಳ ಹಿಂದೆ ಪಂತ್‌ ಅದ್ಭುತ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಅಂದಹಾಗೆ, ಕೊನೆಯ ಬಾರಿ ಇದೇ ಅಂಗಳದಲ್ಲಿ ರಿಷಭ್‌ ಪಂತ್‌ 146 ಎಸೆತಗಳಲ್ಲಿ 114 ರನ್‌ ಸಿಡಿಸಿರುವುದು ತಂಡದ ಪಾಲಿಗೆ ಪ್ಲಸ್‌ ಪಾಯಿಂಟ್‌ ಆಗಲಿದೆ. ಇವರ ಅಂದಿನ ಶತಕದಲ್ಲಿ 4 ಸಿಕ್ಸರ್‌ ಹಾಗೂ 15 ಬೌಂಡರಿಗಳು ಒಳಗೊಂಡಿದ್ದವು. ನಾಳಿನ ಪಂದ್ಯದಲ್ಲಿಯೂ ಪಂತ್‌, ಅದೇ ಬ್ಯಾಟಿಂಗ್‌ ವೈಭವ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಒಂದು ವೇಳೆ ಪಂತ್‌ ಬ್ಯಾಟಿಂಗ್‌ನಲ್ಲಿ ಉತ್ತಮ ಲಯಕ್ಕೆ ಮರಳಿದ್ದೇ ಆದಲ್ಲಿ ಖಂಡಿತಾ ಭಾರತ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪಂತ್‌ ಮ್ಯಾಚ್‌ ವಿನ್ನರ್‌, ಖಂಡಿತಾ ಕಮ್‌ಬ್ಯಾಕ್‌ ಮಾಡಲಿದ್ದಾರೆಂದ ಕಾರ್ತಿಕ್‌!



​7. ಆರ್‌ ಅಶ್ವಿನ್‌
​7. ಆರ್‌ ಅಶ್ವಿನ್‌

ಹಿರಿಯ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ಪ್ರಸಕ್ತ ಸರಣಿಯಲ್ಲಿ ಇನ್ನೂ ಆಡುವ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಅಂದಹಾಗೆ ಆರಂಭಿಕ ಟೆಸ್ಟ್‌ನಲ್ಲಿ ಆರ್‌ ಅಶ್ವಿನ್ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಲಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಅವರನ್ನು ಕೈ ಬಿಡಲಾಗಿತ್ತು. ನಂತರ, ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿಯೂ ಅವರಿಗೆ ಸ್ಥಾನ ಕೊನೆಯ ಕ್ಷಣದಲ್ಲಿ ಮಿಸ್‌ ಆಗಿತ್ತು. ಆದರೆ, ಇಲ್ಲಿನ ಪರಿಸ್ಥಿತಿಗಳಿಗೆ ನಾಲ್ವರು ಸೀಮರ್‌ಗಳು ಹಾಗೂ ಒಬ್ಬ ಸ್ಪಿನ್ನರ್‌ ಕಣಕ್ಕೆ ಇಳಿಸುವ ಯೋಜನೆಯಿಂದಾಗಿ ಅಶ್ವಿನ್‌ಗೆ ಅವಕಾಶ ಲಭ್ಯವಾಗಿರಲಿಲ್ಲ.

ಅಂದಹಾಗೆ, ನಾಳಿನ ಪಂದ್ಯದಲ್ಲಿ ಆರ್‌ ಅಶ್ವಿನ್‌ ಕಣಕ್ಕೆ ಇಳಿಯುವುದು ಬಹುತೇಕ ಖಂಚಿತ ಎನ್ನಲಾಗುತ್ತಿದೆ. ಇಂಗ್ಲೆಂಡ್‌ನಲ್ಲಿ ಒಟ್ಟು7 ಪಂದ್ಯಗಳಾಡಿರುವ ಅಶ್ವಿನ್‌ 28.11ರ ಸರಾಸರಿಯಲ್ಲಿ 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇತ್ತೀಚೆಗೆ ಅವರು ಸರ್ರೆ ತಂಡದ ಪರ ಕೌಂಟಿ ಚಾಂಪಿಯನ್‌ಷಿಪ್‌ ಪಂದ್ಯವಾಡಿದ್ದರು ಹಾಗೂ ಐದು ವಿಕೆಟ್‌ ಸಾಧನೆ ಮಾಡಿದ್ದರು.

ಕೊಹ್ಲಿ, ರೂಟ್‌ ಅಲ್ಲವೇ ಅಲ್ಲ! ಈತನೇ ವಿಶ್ವದ ಅತ್ಯುತ್ತಮ ನಾಯಕ ಎಂದ ಕನೇರಿಯಾ!



8. ​ಶಾರ್ದುಲ್‌ ಠಾಕೂರ್‌
8. ​ಶಾರ್ದುಲ್‌ ಠಾಕೂರ್‌

ಶಾರ್ದುಲ್‌ ಠಾಕೂರ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ನಾಲ್ಕು ವಿಕೆಟ್‌ ಪಡೆದುಕೊಂಡಿದ್ದರು. ಆದರೆ, ಗಾಯದಿಂದಾಗಿ ಎರಡನೇ ಹಾಗೂ ಮೂರನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಇದೀಗ ಅವರು ಸಂಪೂರ್ಣ ಫಿಟ್‌ ಆಗಿದ್ದು, ಓವಲ್‌ ಟೆಸ್ಟ್‌ನ ಭಾರತ ತಂಡದ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದ ಇಶಾಂತ್‌ ಶರ್ಮಾ ಅವರ ಸ್ಥಾನಕ್ಕೆ ಶಾರ್ದುಲ್‌ ತಂಡಕ್ಕೆ ಮರಳುವ ಸಾಧ್ಯತೆ ಇದೆ.

ಶಾರ್ದುಲ್‌ ಠಾಕೂರ್‌ ತಮ್ಮ ಅಲ್ಪ ವೃತ್ತಿ ಜೀವನದಲ್ಲಿ ಆಡಿರುವ ಮೂರು ಟೆಸ್ಟ್‌ ಪಂದ್ಯಗಳಿಂದ 11 ವಿಕೆಟ್‌ ಕಬಳಿಸಿದ್ದಾರೆ. ಅಲ್ಲದೆ, ಕೆಳ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಶಾರ್ದುಲ್‌ ಬ್ಯಾಟಿಂಗ್‌ ಡೆಪ್ತ್‌ ತಂದುಕೊಡಲಿದ್ದಾರೆ.

ಭಾರತ ಟೆಸ್ಟ್‌ ತಂಡದಲ್ಲಿ ರಹಾನೆ ಸ್ಥಾನ ತುಂಬಬಲ್ಲ ಟಾಪ್‌ 3 ಬ್ಯಾಟ್ಸ್‌ಮನ್‌ಗಳು!



​9. ಮೊಹಮ್ಮದ್‌ ಶಮಿ
​9. ಮೊಹಮ್ಮದ್‌ ಶಮಿ

ಪ್ರಸಕ್ತ ಸರಣಿಯಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ತೋರುತ್ತಿರುವ ಮೊಹಮ್ಮದ್ ಶಮಿ ಇಲ್ಲಿಯವರೆಗೂ 27.54ರ ಸರಾಸರಿಯಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕಳೆದ ಪಂದ್ಯದಲ್ಲಿಯೂ ಶಮಿ ಪರಿಣಾಮಕಾರಿಯಾಗಿ ಬೌಲ್‌ ಮಾಡಿದ್ದರು. ಆದರೆ, ಬೇರೆ ಬೌಲರ್‌ಗಳಿಂದ ಸರಿಯಾಗಿ ಸಾಥ್‌ ಸಿಗದ ಕಾರಣ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಪ್ರಭಾವ ಬೀರಲು ಸಾಧ್ಯವಾಗಿರಲಿಲ್ಲ.

ಕಳೆದ ಪಂದ್ಯದಲ್ಲಿ ಶಮಿ 95 ರನ್‌ ನೀಡಿ ನಾಲ್ಕು ವಿಕೆಟ್‌ ಪಡೆದಿದ್ದರು. ಆರಂಭಿಕರಾದ ರೋರಿ ಬರ್ನ್ಸ್‌, ಜಾನಿ ಬೈರ್‌ಸ್ಟೋವ್‌, ಜೋಸ್‌ ಬಟ್ಲರ್‌ ಹಾಗೂ ಕ್ರೇಗ್‌ ಓವರ್ಟನ್‌ ಅವರ ವಿಕೆಟ್‌ಗಳನ್ನು ಶಮಿ ಪಡೆದಿದ್ದರು. ಮುಂದಿನ ಪಂದ್ಯದಲ್ಲಿ ಶಮಿ ಇದೇ ಬೌಲಿಂಗ್‌ ಪ್ರದರ್ಶನ ತೋರಲಿದ್ದಾರೆಂದು ನಿರೀಕ್ಷಿಸಲಾಗಿದೆ.

ಕೊಹ್ಲಿ ಸದ್ದಡಗಿಸಿದರಷ್ಟೇ ಸರಣಿ ಗೆಲ್ಲಲು ಸಾಧ್ಯ ಎಂದ ಜೋ ರೂಟ್!



​10. ಜಸ್‌ಪ್ರಿತ್‌ ಬುಮ್ರಾ
​10. ಜಸ್‌ಪ್ರಿತ್‌ ಬುಮ್ರಾ

ಇಂಗ್ಲೆಂಡ್‌ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಜಸ್‌ಪ್ರಿತ್‌ ಬುಮ್ರಾ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆಡಿದ ಮೂರು ಪಂದ್ಯಗಳಿಂದ ಬುಮ್ರಾ 14 ವಿಕೆಟ್‌ ಕಬಳಿಸಿದ್ದಾರೆ. ಆ ಮೂಲಕ ಭಾರತದ ಪರ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದಿರುವ ಬೌಲರ್‌ ಎನಿಸಿಕೊಂಡಿದ್ದಾರೆ.

ಅಂದಹಾಗೆ ಲೀಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ನಾಯಕ ಜೋ ರೂಟ್‌ ಹಾಗೂ ಓಲ್ಲೀ ರಾಬಿನ್ಸನ್‌ ಅವರನ್ನು ಬುಮ್ರಾ ಔಟ್‌ ಮಾಡಿದ್ದರು. ಆದರೂ, ಬುಮ್ರಾ ಅವರ ಮೇಲೆ ಓವಲ್‌ ಟೆಸ್ಟ್‌ನಲ್ಲಿ ಬಹಳಾ ನಿರೀಕ್ಷೆ ಇಡಲಾಗಿದೆ. ಇಲ್ಲಿನ ಓವಲ್‌ ಮೈದಾನದ ವಿಕೆಟ್ ಬುಮ್ರಾ ಬೌಲಿಂಗ್‌ ಶೈಲಿಗೆ ಹೊಂದಾಣಿಕೆಯಾಗಲಿದೆ. ಹಾಗಾಗಿ, ಎದುರಾಳಿ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳ ಮೇಲೆ ಭಾರತೀಯ ವೇಗಿ ಒತ್ತಡ ಹೇರುವ ಸಾಧ್ಯತೆ ಇದೆ.

ಆಕ್ರಮಣಕಾರಿ ಆಲೋಚನೆಯಿಂದಲೇ ಕೊಹ್ಲಿಗೆ ಸಮಸ್ಯೆ: ಇರ್ಫಾನ್ ಪಠಾಣ್!



​11. ಮೊಹಮ್ಮದ್‌ ಸಿರಾಜ್‌
​11. ಮೊಹಮ್ಮದ್‌ ಸಿರಾಜ್‌

ಇಂಗ್ಲೆಂಡ್ ವಿರುದ್ಧ ಪ್ರಸ್ತುತ ಸಾಗುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಮೊಹಮ್ಮದ್ ಸಿರಾಜ್‌ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ಇಂಗ್ಲೆಂಡ್‌ನ ತಮ್ಮ ಮೊದಲ ಪ್ರವಾಸದಲ್ಲಿಯೇ ಸಿರಾಜ್‌ 13 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. 226 ರನ್‌ಗಳಿಗೆ 8 ವಿಕೆಟ್‌ ಪಡೆದಿರುವುದು ಯುವ ವೇಗಿಯ ಅವರ ಉತ್ತಮ ಬೌಲಿಂಗ್‌ ಪ್ರದರ್ಶನವಾಗಿದೆ.

ಕಳೆದ ಪಂದ್ಯದಲ್ಲಿಯೂ ಮೊಹಮ್ಮದ್ ಸಿರಾಜ್‌ ಶಿಸ್ತುಬದ್ಧ ದಾಳಿ ನಡೆಸಿದ್ದರು. ಆದರೆ, ಡಾವಿಡ್‌ ಮಲಾನ್‌ ಹಾಗೂ ಸ್ಯಾಮ್‌ ಕರ್ರನ್‌ ಅವರ ಎರಡೇ ಎರಡು ವಿಕೆಟ್‌ ಮಾತ್ರ ಪಡೆಯಲು ಶಕ್ತರಾಗಿದ್ದರು. ಆದರೂ, ನಾಳಿನ ಪಂದ್ಯಕ್ಕೆ ಮೊಹಮ್ಮದ್ ಸಿರಾಜ್‌ ಅವರನ್ನು ಟೀಮ್‌ ಮ್ಯಾನೇಜ್‌ಮೆಂಟ್‌ ಬೆಂಬಲಿಸಲಿದೆ.

'ರಾತ್ರೋರಾತ್ರಿ ಟೆಕ್ನಿಕ್ ಬದಲಾಯಿಸುವ ಅಗತ್ಯವಿಲ್ಲ', ಕೊಹ್ಲಿಗೆ ನೆಹ್ರಾ ಸಲಹೆ!





from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3zAYdHd

'ನ್ಯಾನೋ ಯೂರಿಯಾ' ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಎಂದಿದ್ದ ಸದಾನಂದ ಗೌಡ; ಆದರೆ ಅಸಲಿಗೆ ಆಗಿದ್ದೇನು?

ಬೆಂಗಳೂರು: ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟು ಮಾಡಲಿದೆ ಎಂದು ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಅವರು ಹೇಳಿದ್ದ 'ನ್ಯಾನೋ ಯೂರಿಯಾ' ಬಳಕೆಗೆ ಇದೀಗ ರೈತರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಬಳಸಿದ್ದಕ್ಕೆ ಬೆಳೆ ಹಾಳಾಗಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ. ಚಿತ್ರದುರ್ಗದ ಸಿರಿಗೆರೆ ರೈತರಿಂದ ಈ ಆರೋಪ ಕೇಳಿಬಂದಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ರೈತರು ಭೇಟಿ ಮಾಡಿ ತಮ್ಮ ಆಕ್ಷೇಪವನ್ನು ಸಲ್ಲಿಸಿದ್ದಾರೆ. ಏನಿದು ನ್ಯಾನೋ ಯೂರಿಯಾ? ನ್ಯಾನೋ ಯೂರಿಯಾ ದ್ರಾವಣ ರೂಪದ ಯೂರಿಯಾವಾಗಿದೆ. ಇಫ್ಕೋ ಸಂಸ್ಥೆಯು ಈ ಮಾದರಿಯ ಯೂರಿಯಾವನ್ನು ಪರಿಚಯಿಸಿದೆ. ಸಹಕಾರಿ ವಲಯದ ಕಂಪನಿ ಇಫ್ಕೋ ಅಭಿವೃದ್ಧಿಪಡಿಸಿರುವ ನ್ಯಾನೋ-ಯೂರಿಯಾ ರಸಗೊಬ್ಬರವು ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಲಿದೆ ಎಂದು ಹೇಳಲಾಗಿತ್ತು. 500 ಎಂ.ಎಲ್ ನ್ಯಾನೋ ಯೂರಿಯಾ 45 ಕೆಜಿ ಮಾಮೂಲಿ ಯೂರಿಯಾಗೆ ಸಮನಾಗಿದೆ. ಇದರ ಬೆಲೆ ಒಂದು ಬಾಟಲಿಗೆ 240 ರೂಪಾಯಿ ಆಗಿದೆ. ದೇಶದಲ್ಲಿ ಮೂರು ಕಡೆ ನ್ಯಾನೋ ಯೂರಿಯಾ ಕಂಪನಿಯ ಘಟಕ ಸ್ಥಾಪಿಸಲಾಗಿದೆ. ಇನ್ನು ನಾಲ್ಕು ಕಡೆಗಳಲ್ಲಿ ಹೊಸ ಘಟಕಗಳನ್ನು ತೆರೆಯಲು ನಿರ್ಧಾರ ಮಾಡಲಾಗಿದೆ ಆದರೆ ನ್ಯಾನೋ ಯೂರಿಯಾ ಖರೀದಿ ಮಾಡಿದ್ದ ರೈತರ ಹತ್ತು ಎಕರೆ ಮೆಕ್ಕೆಜೋಳ ಒಣಗಿಹೋಗಿದೆ. ನ್ಯಾನೋ ಯೂರಿಯಾ ಬಳಸಿದ್ದಕ್ಕೆ ಮೆಕ್ಕೆಜೋಳ ಬೆಳೆ ಒಣಗಿ‌ಹೋಯ್ತು. ಇದರ ಸಿಂಪಡಣೆಯ 20 ದಿನಕ್ಕೆ ಮೆಕ್ಕೆಜೋಳದ ಬೆಳೆ ಒಣಗಿದೆ. ಇದರಿಂದ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಎದುರು ಸಿರಿಗೆರೆ ಸುತ್ತಮುತ್ತಲ ಗ್ರಾಮಗಳ ರೈತರು ಅಳಲು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಮಗೆ ಪರಿಹಾರ ಕೊಡಿ ಎಂದು ರೈತರು ಸಿಎಂಗೆ ಮನವಿ ಮಾಡಿದ್ದಾರೆ. ನ್ಯಾನೋ-ಯೂರಿಯಾ ಹೊಸ ಕ್ರಾಂತಿ ಎಂದಿದ್ದ ಸದಾನಂದ ಗೌಡ!ಸಹಕಾರಿ ವಲಯದ ರಸಗೊಬ್ಬರ ಕಂಪನಿ ಇಫ್ಕೋ ಅಭಿವೃದ್ದಿಪಡಿಸಿರುವ ನ್ಯಾನೋ- ಯೂರಿಯಾ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಲಿದೆ ಎಂದು ಮಾಜಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಹೇಳಿದ್ದರು. ನ್ಯಾನೋ-ಯುರಿಯಾ ಉಪಯೋಗದ ಬಗ್ಗೆ ಇಫ್ಕೋ ಸಂಸ್ಥೆ ಏರ್ಪಡಿಸಿದ್ದ ವೆಬಿನಾರ್ ಚರ್ಚೆಯನ್ನು ಉದ್ಘಾಟಿಸಿ ಮಾತನಾಡಿದ್ದ ಅವರು "ಇದು ಪರಿಸರ ಸ್ನೇಹಿಯಾಗಿದ್ದು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ" ಎಂಬ ಹೇಳಿಕೆ ಕೊಟ್ಟಿದ್ದರು. ನ್ಯಾನೋ ಯೂರಿಯಾ ಬಳಕೆಯಿಂದ ರೈತರಿಗೆ ಅನುಕೂಲವಾಗಲಿದೆ. ಇದರ ಬಳಕೆಯಿಂದ ಶೇಕಡಾ 8ರಿಂದ 15ರಷ್ಟು ಖರ್ಚು ಕಡಿಮೆಯಾಗಲಿದ್ದು ಮಾತ್ರವಲ್ಲದೆ, ಇಳುವರಿಯು 15ರಿಂದ 20 ಪ್ರತಿಶತ ಹೆಚ್ಚಾಗಲಿದೆ ಎಂದಿದ್ದರು. ಇದರಿಂದ ದೇಶದ ರೈತರಿಗೆ ಈ ಸಲ ಸುಮಾರು 28 ಸಾವಿರ ಕೋಟಿ ಹೆಚ್ಚುವರಿ ಆದಾಯ ದೊರೆಯುವುದು ಎಂದು ಅಂದಾಜಿಸಲಾಗಿದೆ ಎಂಬ ಹೇಳಿಕೆಯನ್ನು ಸದಾನಂದ ಗೌಡ ನೀಡಿದ್ದರು. ಆದರೆ ಇದೀಗ ರೈತರು ನ್ಯಾನೋ ಯೂರಿಯಾದ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಈ ಆರೋಪಕ್ಕೆ ಇಫ್ಕೋ ಸಂಸ್ಥೆ ಹಾಗೂ ಸಂಬಂಧಪಟ್ಟ ಇಲಾಖೆ ಉತ್ತರಿಸಬೇಕಿದೆ.


from India & World News in Kannada | VK Polls https://ift.tt/3yw7RJN

ಅಫ್ಘಾನಿಸ್ತಾನ ಅನಾಹುತ: ಮೂರ್ಖ ಅಮೆರಿಕ ಮತ್ತು ಹುಚ್ಚು ತಾಲಿಬಾನ್‌ಗಳು...

- ರಮೇಶ್‌ ಕುಮಾರ್‌ ನಾಯಕ್‌ 'ಮೂರ್ಖ ಮತ್ತು ಹುಚ್ಚು ತಾಲಿಬಾನ್‌ಗಳು...' ಆಗಸ್ಟ್‌ 31ರ ಗಡುವಿನ ಅಂತಿಮ ನಿಮಿಷದೊಳಗೆ ಅಮೆರಿಕದ ಕೊಟ್ಟ ಕೊನೆಯ ಸೈನಿಕ ಅಪ್ಘನ್ ನೆಲದಿಂದ ಕಾಲ್ತೆಗೆದು ಸಿಎಚ್‌ 17 ವಿಮಾನ ಏರಿ ಕುಳಿತ ಮರುಕ್ಷಣ ಅನೇಕ ಅಮೆರಿಕನ್ನರು ಮಾಡಿದ ಹತಾಶೆಯ ಟ್ವೀಟ್ ಇದು. 'ಅಫ್ಘನ್ ನೆಲದಲ್ಲಿ ಅಮೆರಿಕದ ಸೋಲು ಇತರರಿಗೂ ಪಾಠ’ ಎನ್ನುತ್ತ ತಾಲಿಬಾನ್‌ಗಳು ಗಾಳಿಯಲ್ಲಿ ಗುಂಡು ಹಾರಿಸುತ್ತ ವಿಜಯೋತ್ಸವದಲ್ಲಿ ತೊಡಗಿದ್ದಾರೆ. ಅಮೆರಿಕ ಬಿಟ್ಟು ಹೋದ ಬ್ಲ್ಯಾಕ್‌ ಹಾಕ್ ಹೆಲಿಕಾಪ್ಟರ್‌ಗೇ ಅಮಾಯಕನೊಬ್ಬನನ್ನು ನೇಣು ಹಾಕಿ ಹಾರಾಟ ನಡೆಸುತ್ತ ಕ್ರೌರ್ಯ ಮೆರೆದಿದ್ದಾರೆ. ಇದರ ನಡುವೆಯೇ ನೂರಾರು ಹೆಣ್ಣು ಮಕ್ಕಳು 'ನಾವು ತಾಲಿಬಾನ್‌ಗೆ ಹೆದರುವುದಿಲ್ಲ' ಎನ್ನುತ್ತ ಎಂದಿನಂತೆ ಶಾಲೆಗೆ ನಡೆದಿದ್ದಾರೆ. ಅತ್ತ ಪಂಜ್‌ಶೀರ್‌ನಲ್ಲಿಒಂದಿಷ್ಟು ಯುವಕರ ಪಡೆ, 'ತಾಲಿಬಾನ್‌ಗೆ ತಲೆಬಾಗುವ ಮಾತೇ ಇಲ್ಲ' ಎಂದು ಎದೆಯುಬ್ಬಿಸಿ ನಿಂತಿದ್ದಾರೆ. ಆದರೆ 'ಸೂಪರ್‌ ಪವರ್‌'(?) ಅಮೆರಿಕ ಮಾತ್ರ ರಣಹೇಡಿಯಂತೆ ತಲೆ ತಗ್ಗಿಸಿದೆ! ರಾತ್ರಿ ಬೆಳಗಾಗುವುದರೊಳಗೆ ಅಫ್ಘಾನಿಸ್ತಾನದ ಪ್ರಜಾಪ್ರಭುತ್ವ ಗೋಪುರ ಕುಸಿದು ಬಿದ್ದಿದ್ದು ಹೇಗೆ? ಬಗ್ರಾಂ ವಾಯುನೆಲೆಯಿಂದ ಅಮೆರಿಕ ಸೇನೆ ಜಾಗ ಖಾಲಿ ಮಾಡಿದ ಹತ್ತೇ ದಿನದೊಳಗೆ ಇಡೀ ತಾಲಿಬಾನ್‌ ಸೈತಾನರ ವಶ ಆಗಿದ್ದು ಹೇಗೆ? ಇದರ ಹಿಂದಿರುವುದು ಅಮೆರಿಕದ ಅಪ್ರಾಮಾಣಿಕತೆ, ಠಕ್ಕತನ ಮತ್ತು ಮೂರ್ಖತನ! ಜನಸಾಮಾನ್ಯರು ಅಂದುಕೊಂಡಿರುವುದು ಟ್ರಂಪ್ ಅಧಿಕಾರ ಕಳೆದುಕೊಂಡು ಬೈಡೆನ್ ಅಧ್ಯಕ್ಷರಾದ ಬಳಿಕ ಅಫ್ಘನ್‌ನಿಂದ ಸೇನೆ ಹಿಂತೆಗೆದುಕೊಂಡರು ಅಂತ. ಇನ್ನು ಕೆಲವರು, ಟ್ರಂಪ್ ಕಾಲದಲ್ಲೇ ಈ ನಿರ್ಧಾರಕ್ಕೆ ಬರಲಾಗಿತ್ತು ಎನ್ನುತ್ತಾರೆ. ವಾಸ್ತವ ಏನೆಂದರೆ, 2010ರಲ್ಲಿ ಪಾಕಿಸ್ತಾನದ ಅಬೊಟಾಬಾದ್‌ನಲ್ಲಿ ಅಲ್‌ ಕೈದಾ ಉಗ್ರ ನಾಯಕ ಒಸಾಮಾ ಬಿನ್ ಲಾಡೆನ್‌ನನ್ನು ಮುಗಿಸಿ ಹಾಕಿದ ಮರುದಿನವೇ, "ಇನ್ನು ಹಂತಹಂತವಾಗಿ ಸೇನೆ ವಾಪಸ್‌ ಪಡೆಯಬೇಕು," ಅಂದವರು ಅಂದಿನ ಅಧ್ಯಕ್ಷ ಬರಾಕ್ ಒಬಾಮಾ! ಭಾರತ ಪದೇ ಪದೇ ಭಯೋತ್ಪಾದನೆ ಕಿರುಕುಳದ ವಿಷಯ ಎತ್ತಿ ಪಾಕಿಸ್ತಾನದ ಕಡೆ ಬೆರಳು ತೋರಿಸಿದಾಗಲೆಲ್ಲ ಜಾಣ ಕುರುಡು ಪ್ರದರ್ಶಿಸುತ್ತಿದ್ದ ಅಮೆರಿಕ, ಯಾವಾಗ 2001ರ ಸೆ.11ರಂದು ತನ್ನ ಬುಡಕ್ಕೇ ಅಲ್‌ ಕೈದಾ ಉಗ್ರರ ವಿಮಾನ ಅಪ್ಪಳಿಸಿತೋ, ಮರುಕ್ಷಣವೇ ಅಫಘಾನಿಸ್ತಾನದ ತಾಲಿಬಾನ್‌ ಮೇಲೆ ಮುಗಿಬಿತ್ತು. ಮಿತ್ರ ಬ್ರಿಟನ್‌ ಮತ್ತು ನ್ಯಾಟೊ ಪಡೆಗಳ ಜತೆ ಅಮೆರಿಕ ಯಾವ ಪರಿಯಲ್ಲಿ ಬಾಂಬ್‌ಗಳ ಮಳೆ ಸುರಿಸಿತ್ತೆಂದರೆ, ಕೇವಲ ಮೂರೇ ಮೂರು ತಿಂಗಳೊಳಗೆ ತಾಲಿಬಾನ್‌ ಸಾಮ್ರಾಜ್ಯ ಧ್ವಂಸಗೊಂಡಿತ್ತು. ತಾಲಿಬಾನಿಗಳನ್ನು ಅಮೆರಿಕನ್‌ ಸೈನಿಕರು ಒಂದು ಬಿಲವನ್ನೂ ಬಿಡದಂತೆ ಎಳೆದೆಳೆದು ಹೊಸಕಿ ಹಾಕಿದರು. ಅಲ್‌ ಕೈದಾ ನಾಮಾವಶೇಷವಾಯಿತು. ಅಲ್ಲಿಂದ 2011ರವರೆಗೆ ಸುಮಾರು 10 ವರ್ಷ ಒಸಾಮಾ ಬಿಲ್‌ ಲಾಡೆನ್ ಅವಿತುಕೊಂಡಿದ್ದ. ತನ್ನ ಮೇಲೆ ದಾಳಿ ಮಾಡಿದ್ದ ಲಾಡೆನ್ ಪಾಕಿಸ್ತಾನದೊಳಗೆ ಆಸರೆ ಪಡೆದಿದ್ದು ಗೊತ್ತಾದಾಗಲೂ ಅಮೆರಿಕ ಏಕೆ ಅಂದು ಆ ದೇಶದ ಮೇಲೆ ಕ್ರಮ ತೋರಲಿಲ್ಲ? ಆಗಲೂ ಅದರ ಅಪ್ರಾಮಾಣಿಕತೆ ಬಯಲಾಗಿತ್ತು. ಪಾಕ್‌ನ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಅಮೆರಿಕ ರಹಸ್ಯ ಡೀಲ್‌ ಮಾಡಿಕೊಂಡಿತ್ತು. ಇಲ್ಲದಿದ್ದರೆ ಪಾಕ್‌ ನೆಲದೊಳಗೆ ಅಮೆರಿಕನ್‌ ಸೈನಿಕರು ನುಗ್ಗಿ ಲಾಡೆನ್‌ನನ್ನು ಬೇಟೆಯಾಡಲು ಹೇಗೆ ಸಾಧ್ಯ? ಒಂದು ಹಂತದಲ್ಲಿ ಆಫ್ಘನ್‌ನಲ್ಲಿ 1.25 ಲಕ್ಷ ಅಮೆರಿಕನ್‌ ಸೈನಿಕರಿದ್ದರು. ಒಸಾಮಾ ಹತ್ಯೆ ಬಳಿಕ ತಾಲಿಬಾನ್‌ ಮತ್ತು ಅಲ್‌ ಕೈದಾ ಉಗ್ರರ ಪುಂಗಿ ಪೂರ್ತಿ ನಿಂತಿತು. ಆಫ್ಘನ್‌ನಲ್ಲಿ ಬಹುತೇಕ ಶಾಂತ ವಾತಾವರಣ ನೆಲೆಸಿತು. ಹೆಣ್ಣುಮಕ್ಕಳು ಮೊದಲ ಬಾರಿ ಸ್ವಾತಂತ್ರ್ಯದ ಅನುಭವ ಪಡೆದರು. ಬರಾಕ್ ಒಬಾಮಾ ಆಡಳಿತ ಸಮರ ತಂತ್ರ ಬದಿಗಿಟ್ಟು ಅಭಿವೃದ್ಧಿಯ ಮಂತ್ರ ಹೇಳತೊಡಗಿತು. ಅಮೆರಿಕವನ್ನು ನಂಬಿ ಭಾರತವೂ ಸೇರಿದಂತೆ ಹಲವಾರು ದೇಶಗಳು ಆಫ್ಘನ್‌ನ ನಾನಾ ಯೋಜನೆಗಳಲ್ಲಿ ಅಪಾರ ಪ್ರಮಾಣದಲ್ಲಿ ಹಣ ಹೂಡತೊಡಗಿದವು. ತಾಲಿಬಾನ್‌ ಜತೆ ದೋಸ್ತಿಇನ್ನೆರಡು ವರ್ಷದೊಳಗೆ ನಾವು ಪೂರ್ಣ ನಿರ್ಗಮಿಸುತ್ತೇವೆ ಎಂದು ಒಬಾಮಾ 2014ರಲ್ಲಿ ಘೋಷಿದರು. ಡೊನಾಲ್ಡ್ ಟ್ರಂಪ್ 2019ರಲ್ಲಿ ತಾಲಿಬಾನಿಗಳ ದೋಸ್ತಿ ಶುರು ಮಾಡಿದರು. 2020ರ ಮೇ 1ರೊಳಗೆ ಸೇನೆ ವಾಪಸ್‌ ಗುರಿ ಹಾಕಿಕೊಂಡರು. ಆ ವರ್ಷದ ಫೆಬ್ರುವರಿಯಲ್ಲಿ ತಾಲಿಬಾನ್‌ ಮತ್ತು ಅಮೆರಿಕ ಗುಪ್ತಚರ ಅಧಿಕಾರಿಗಳ ಜತೆ ಮೊದಲ ಬಾರಿ ವಿಧ್ಯುಕ್ತ ಮಾತುಕತೆ ಕತಾರ್‌ ದೇಶದಲ್ಲಾಯಿತು. ನೀವು ಮತ್ತೆ ಅಧಿಕಾರ ಹಿಡಿಯುವುದಕ್ಕೆ ನಮ್ಮ ಅಡ್ಡಿ ಇಲ್ಲ, ಆದರೆ ಅಲ್‌ ಕೈದಾಗೆ ನೆಲೆ ಕೊಡಬಾರದು ಮತ್ತು ಅಮೆರಿಕದ ತಂಟೆಗೆ ಬರಕೂಡದು ಎಂಬುದಷ್ಟೇ ಅಮೆರಿಕದ ಷರತ್ತಾಗಿತ್ತು. ಜಗತ್ತಿನ ಯಾವ ಮೂಲೆಯಲ್ಲಿ ಉಗ್ರವಾದ ತಲೆ ಎತ್ತಿದರೂ ಹೊಸಕಿ ಸಾಕುವ ಸೂಪರ್‌ ಪವರ್‌ ತಾನು ಎಂದು ಬೀಗುವ ಅಮೆರಿಕ, ತಾಲಿಬಾನಿಗಳು ಎಂಥ ಮತಾಂಧರು-ಕ್ರೂರಿಗಳು ಎನ್ನುವುದು ಗೊತ್ತಿದ್ದೂ ಅದಕ್ಕೆ ಮತ್ತೆ ಅಫ್ಘನ್‌ ಒಪ್ಪಿಸಲು ಮುಂದಾಯಿತು! ಇಷ್ಟೇ ಅಲ್ಲ, 5 ಸಾವಿರ ತಾಲಿಬಾನ್‌ ಕಟ್ಟರ್ ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಅಫ್ಘನ್ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಘನಿ ಮೇಲೆ ಒತ್ತಡ ಹೇರಿತು. ಪಾಕ್‌ ಜೈಲಿನಲ್ಲಿದ್ದ ತಾಲಿಬಾನ್‌ ನಾಯಕ ಮುಲ್ಲಾಬರಾದಾರ್‌ನನ್ನು ಬಿಡುಗಡೆ ಮಾಡಿಸಿತು. ತಾಲಿಬಾನ್‌ ಉಗ್ರರನ್ನು ಬಿಡುಗಡೆ ಮಾಡಿದರೆ ಅಫ್ಘನ್‌ನಲ್ಲಿಮತ್ತೆ ಶಾಂತಿ ಕದಡಲಿದೆ ಎಂದು ಘನಿ ಮತ್ತು ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ ಪರಿಪರಿಯಾಗಿ ಹೇಳಿದರೂ ಅಮೆರಿಕ ಪಟ್ಟು ಸಡಿಲಿಸಲಿಲ್ಲ. ಅಮೆರಿಕದ ಒತ್ತಡಕ್ಕೆ ಮಣಿದ ಅಫ್ಘನ್ ಸರಕಾರ 2020ರ ಮಾರ್ಚ್‌ನಿಂದ ಹಂತಹಂತವಾಗಿ 5 ಸಾವಿರ ತಾಲಿಬಾನ್‌ ಉಗ್ರರನ್ನು ಬಿಡುಗಡೆ ಮಾಡಿತು. ಇಷ್ಟು ಹೊತ್ತಿಗಾಗಲೇ ಅಲ್ಲಿ ಅಮೆರಿಕ ಸೇನಾ ಪಡೆ ಕೇವಲ 4 ಸಾವಿರಕ್ಕಿಳಿದಿತ್ತು. ಬಿಡುಗಡೆಗೊಂಡ ಉಗ್ರರು ನಿರೀಕ್ಷೆಯಂತೆಯೇ ಮತ್ತೆ ಅಫ್ಘನ್ ಸೇನೆಯ ಮೇಲೆ ದಾಳಿಗಿಳಿದರು. 2020ರ ಸೆಪ್ಟೆಂಬರ್‌ನಲ್ಲಿ ಕತಾರ್‌ನ ದೋಹಾದಲ್ಲಿ ತನ್ನ ಬದ್ಧ ವೈರಿ ತಾಲಿಬಾನ್‌ ಜತೆ ಘನಿ ಸರಕಾರ ಮಾತುಕತೆಗೆ ಕೂರಬೇಕಾದ ದಯನೀಯ ಸ್ಥಿತಿಯನ್ನು ಅಮೆರಿಕವೇ ಸೃಷ್ಟಿಸಿತು. ಮಾತುಕತೆ ನಡೆಯುತ್ತಿದ್ದಾಗಲೇ ಉತ್ತರ ಆಫ್ಘನ್‌ನ ಮೂರು ಪ್ರಾಂತ್ಯಗಳಲ್ಲಿ ತೀವ್ರ ದಾಳಿ ನಡೆಸುವ ಮೂಲಕ ತಾಲಿಬಾನಿಗಳು ಸಂಧಾನದ ಒತ್ತಡ ಹೆಚ್ಚಿಸಿದರು. ಅಫ್ಘನ್ ಮತ್ತೆ ಅಶಾಂತಿಯತ್ತ ತಿರುಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದ್ದರೂ ಅಮೆರಿಕ ತನ್ನ ಸೇನಾ ವಾಪಸಾತಿಯನ್ನು ನಿಲ್ಲಿಸಲಿಲ್ಲ. 2021ರ ಜುಲೈನಲ್ಲಿ ಅತಿದೊಡ್ಡ ವಾಯುನೆಲೆಯಾದ ಬಗ್ರಾಂನಿಂದ ಅಮೆರಿಕ ವಾಯುಪಡೆ ಘನಿ ಸರಕಾರಕ್ಕೂ ತಿಳಿಸದೆ ಜಾಗ ಖಾಲಿ ಮಾಡಿತು. ತಾಲಿಬಾನ್‌ಗಳ ನಿಜವಾದ ಆಟ ಈಗ ಶುರುವಾಯಿತು. ಒಪ್ಪಂದ ಧಿಕ್ಕರಿಸಿ ಆಗಸ್ಟ್‌ 6ರಂದು ನಿಮ್ರೊಜ್‌ ಪ್ರಾಂತ್ಯವನ್ನು ತಾಲಿಬಾನ್‌ ವಶಪಡಿಸಿಕೊಂಡಿತು. ಮುಂದೆ ಕಂದಹಾರ್, ಮಝಾರ್ ಎ ಷರೀಫ್ ಮುಂತಾದ ಪ್ರಮುಖ ನಗರಗಳು ಸಲೀಸಾಗಿ ಅದರ ಕೈವಶವಾಯಿತು. ಕೊನೆಗೆ ಆ.15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಹಾಕಿತು. ಕಾಬೂಲ್‌ನಲ್ಲಿ ಹೇಗೂ ಕೆಲವು ಸಾವಿರ ಅಮೆರಿಕ ಸೈನಿಕರಿದ್ದಾರೆ, ಕನಿಷ್ಠ ಅರಮನೆ ಮತ್ತು ಸಂಸತ್ತು ಸುರಕ್ಷಿತ ಎಂದು ಅಧ್ಯಕ್ಷ ಘನಿ ಭಾವಿಸಿದ್ದರು. ಆದರೆ ಅಮೆರಿಕ ಸೈನಿಕರು ಏರ್‌ಪೋರ್ಟ್‌ನಲ್ಲಿ ಒಟ್ಟು ಸೇರಿದರೆ ಹೊರತು, ಕಾಬೂಲ್ ರಕ್ಷಣೆಯಲ್ಲಿ ನೆರವು ನೀಡದೆ ಹೋದರು. ಲೆಕ್ಕದಲ್ಲಿ ಸುಮಾರು ಮೂರು ಲಕ್ಷದಷ್ಟಿದ್ದ ಅಪ್ಘನ್ ಭದ್ರತಾ ಬಲವನ್ನು ಪುಡಿಗಟ್ಟಿ ಕೆಲವೇ ದಿನಗಳಲ್ಲಿ ತಾಲಿಬಾನ್‌ ಅಫ್ಘಾನಿಸ್ತಾನವನ್ನು ಕೈವಶ ಮಾಡಿಕೊಳ್ಳಲು ಸಾಧ್ಯವಾಗಿದ್ದು ಅಮೆರಿಕದ 'ಒಳ ಆಟ'ದಿಂದಾಗಿ. ತಾಲಿಬಾನ್‌ ಆಕ್ರಮಣದಲ್ಲಿ ಪಾಕಿಸ್ತಾನದ ಸಾವಿರಾರು ಸೈನಿಕರೂ ಸಾದಾ ದಿರಸಿನಲ್ಲಿ ಜತೆಗೂಡಿದ್ದು, ಶಸ್ತ್ರಾಸ್ತ್ರ ಪೂರೈಸಿದ್ದು ಅಮೆರಿಕಕ್ಕೆ ಗೊತ್ತಾಗದ ಸಂಗತಿ ಏನಾಗಿರಲಿಲ್ಲ! ಸೇನೆ ವಾಪಸ್‌ ಮೂರ್ಖ ನಿರ್ಧಾರ "ಈಗಾಗಲೇ ಅಫ್ಘನ್ ನೆಲದಲ್ಲಿ ನಮ್ಮ ಸೇನೆ 20 ವರ್ಷ ಕಳೆದಿದೆ. 2,300 ಯೋಧರು ಜೀವ ತೆತ್ತಿದ್ದಾರೆ. ಈವರೆಗೆ 2 ಟ್ರಿಲಿಯನ್‌ ಡಾಲರ್‌ (150 ಲಕ್ಷ ಕೋಟಿ ರೂ.) ವೆಚ್ಚ ಮಾಡಿದ್ದೇವೆ. ಇನ್ನೆಷ್ಟು ವರ್ಷ ನಾವು ಅಫ್ಘನ್ ಕಟ್ಟುತ್ತ ಇರಬೇಕು," ಎಂದು ಪ್ರಶ್ನಿಸಿದ್ದಾರೆ ಅಮೆರಿಕ ಅಧ್ಯಕ್ಷ . ಇಪ್ಪತ್ತು ವರ್ಷದಲ್ಲಿ ಇವರು ಎಷ್ಟು ಗಟ್ಟಿಯಾಗಿ ಆಫ್ಘನ್ ದೇಶವನ್ನು ಕಟ್ಟಿದ್ದಾರೆಂದರೆ, ತಾಲಿಬಾನ್‌ ಆಕ್ರಮಣಕ್ಕೆ ಹತ್ತೇ ದಿನದೊಳಗೆ ಅದು ಕುಸಿದು ಬಿದ್ದಿದೆ! 20 ವರ್ಷಗಳಲ್ಲಿ ಖರ್ಚಾಗಿರುವ 2 ಟ್ರಿಲಿಯನ್‌ ಡಾಲರ್‌ ಅಮೆರಿಕದ ವಾರ್ಷಿಕ ಬಜೆಟ್‌ಗೆ ಹೋಲಿಸಿದರೆ ದೊಡ್ಡ ಮೊತ್ತವೇನಲ್ಲ. ಇಷ್ಟಕ್ಕೂ ಆಫ್ಘನ್ ಕಾರ್ಯಾಚರಣೆ ಹೆಸರಿನಲ್ಲಿ ಇವರು ಪಾಕಿಸ್ತಾನದ ಬಾಯಿಗೆ ಗುಪ್ತವಾಗಿ ಸುರಿದ ಡಾಲರ್‌, ಅಸ್ತ್ರಶಸ್ತ್ರಗಳೆಲ್ಲವೂ ಈ ಟ್ರಿಲಿಯನ್‌ ಲೆಕ್ಕಕ್ಕೇ ಸೇರುತ್ತವೆಯಲ್ಲವೆ! ಈಗ ಆಗಿರುವ ‘ಆಫ್ಘನ್ ಅವಮಾನ’ದ ಮೌಲ್ಯ ಎಷ್ಟು?! ಇನ್ನು, ಸತ್ತಿರುವ ಯೋಧರ ಸಂಖ್ಯೆ. ಒಂದು ವೇಳೆ ಅಫ್ಘನ್ ಮೇಲೆ ನಿಯಂತ್ರಣ ಸಾಧಿಸಿ ಅಲ್‌ ಕೈದಾ ಉಗ್ರರನ್ನು ದಮನಿಸದೆ ಹೋಗಿದ್ದರೆ ಇದಕ್ಕಿಂತ ಹೆಚ್ಚಿನ ಸಂಖ್ಯೆಯ ಅಮೆರಿಕನ್ನರು ಜೀವ ತೆರುತ್ತಿದ್ದರಲ್ಲವೆ? ಕಟು ವಾಸ್ತವ ಏನೆಂದರೆ, ಅಮೆರಿಕ ಸೇನೆ ಅಫ್ಘನ್ ನೆಲದಲ್ಲಿ ಇರುವುದರಿಂದ ಆಗುವ ನಷ್ಟಕ್ಕಿಂತ ಅಲ್ಲಿಂದ ಕಾಲ್ತೆಗೆದಿರುವುದರಿಂದ ಆಗುವ ನಷ್ಟವೇ ಅಪಾರ. ತಾಲಿಬಾನ್‌ ಆಳ್ವಿಕೆಯ ನೆಲದಲ್ಲಿ ಅಲ್‌ ಕೈದಾ ಮತ್ತೆ ಬೇರೂರುವುದು ಖಚಿತ. ಮತ್ತದರ ಮೊದಲ ಗುರಿಯೇ ಅಮೆರಿಕ. 9/11 ಮಾದರಿಯ ಮತ್ತೊಂದು ದಾಳಿಯ ದುಃಸ್ವಪ್ನದಲ್ಲೇ ಅಮೆರಿಕ ಮುಂದಿನ ದಿನಗಳನ್ನು ಕಳೆಯಬೇಕಾಗುತ್ತದೆ. ಐಸಿಸ್‌ನ ನಾನಾ ಶಾಖೆಗಳು ಮತ್ತೆ ಚಿಗಿತುಕೊಳ್ಳಲಿವೆ. ಜೈಷೆ ಮೊಹಮ್ಮದ್, ಲಷ್ಕರೆ ತಯ್ಬಾ, ಬೋಕೊ ಹರಾಮ್‌ಗಳ ಜತೆ ಮತ್ತಷ್ಟು ಹೊಸ ಉಗ್ರ ಸಂಘಟನೆಗಳು ತಲೆ ಎತ್ತಲಿವೆ. ರಾಜತಾಂತ್ರಿಕ ಮಹಾ ಪ್ರಮಾದ ಸೇನೆ ವಾಪಸ್‌ ರಾಜತಾಂತ್ರಿಕವಾಗಿಯೂ ಅಮೆರಿಕದ ಮಹಾ ಪ್ರಮಾದ. ಚೀನಾವನ್ನು ಹದ್ದುಬಸ್ತಿನಲ್ಲಿಡಲು ಅಮೆರಿಕ ಕೋಟ್ಯಂತರ ಡಾಲರ್‌ ವ್ಯಯಿಸುತ್ತಿದೆ. ಆಯಕಟ್ಟಿನ ಜಾಗಗಳಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ಇಡುವುದರ ಮೂಲಕ ಚೀನಾಗೆ ಎಚ್ಚರಿಕೆ ಕೊಡುತ್ತಿದೆ. ಅದರ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟಿಗೆ ಲಗಾಮು ಹಾಕುತ್ತಿದೆ. ಆದರೆ ಈಗ ಆಗಿದ್ದೇನು? ಅಫ್ಘಾನಿಸ್ತಾನದಂಥ ಆಯಕಟ್ಟಿನ ದೇಶದಲ್ಲಿ ನಿರಾಯಾಸವಾಗಿ ಚೀನಾಗೆ ನೆಲೆ ಸಿಕ್ಕಂತಾಯಿತು. ಪಾಕಿಸ್ತಾನದ ಜತೆ ಚೀನಾ ಕೂಡ ತಾಲಿಬಾನ್‌ ಸರಕಾರ ಸ್ಥಾಪನೆಯಲ್ಲಿ ‘ಬೀಗರು’ಗಳಂತೆ ಸಡಗರದಿಂದ ಭಾಗಿಯಾಗುತ್ತಿದೆ. ಈ ಮೂಲಕ ಅಫ್ಘನ್ ಮೇಲಿನ ಹಿಡಿತ ಅಮೆರಿಕದ ಕೈಯಿಂದ ಪೂರ್ತಿ ತಪ್ಪಿ ಹೋದಂತಾಗಿದೆ. ಪಾಕ್‌-ತಾಲಿಬಾನ್‌-ಚೀನಾದ ಡೆಡ್ಲಿ ಕಾಂಬಿನೇಷನ್ ಭಾರತಕ್ಕಂತೂ ಮಾರಕವಾಗಲಿದೆ. ಅಮೆರಿಕವು ಅಫ್ಘನ್ ಸರಕಾರಕ್ಕೆ ಕೊಡುಗೆಯಾಗಿ ನೀಡಿದ್ದ ಸುಮಾರು 5 ಲಕ್ಷ ಎಂ 16 ಮತ್ತು ಎಂ 4 ರೈಫಲ್‌, ಲೈಟ್ ಮೆಷಿನ್ ಗನ್, 50 ಅತ್ಯಾಧುನಿಕ ಶಸ್ತ್ರಸಜ್ಜಿತ ವಾಹನ, ಹೆಲಿಕಾಪ್ಟರ್‌ಗಳು ಅನಾಯಾಸವಾಗಿ ತಾಲಿಬಾನ್‌ ಪಾಲಾಗಿವೆ. ಇವಿಷ್ಟು ಆಯುಧಗಳನ್ನು ಆ ಸೈತಾನರ ಕೈಗೆ ಸಿಗದಂತೆ ಅಮೆರಿಕಕ್ಕೆ ಸಾಗಿಸಬಹುದಿತ್ತು. ಆದರೆ ಅಮೆರಿಕ ಇದನ್ನೂ ಮಾಡದೇ ಹೋಗಿದೆ. ಆ ಶಸ್ತ್ರ ಈಗ ಪಾಕ್‌ ಮೂಲಕ ಕಾಶ್ಮೀರ ಉಗ್ರರನ್ನು ತಲುಪುವ ಅಪಾಯವಿದೆ. ಅಮೆರಿಕದ ಸೇನೆ ವಾಪಸ್‌ ಕ್ರಮಕ್ಕೆ ಆ ದೇಶದಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಅಮೆರಿಕದ ಪರಮಾಪ್ತ ರಾಷ್ಟ್ರಗಳಾದ ಬ್ರಿಟನ್‌, ಫ್ರಾನ್ಸ್‌ ಮತ್ತು ಜರ್ಮನಿ ಕೂಡ ಮುನಿಸಿಕೊಂಡಿವೆ. ಅಫ್ಘಾನಿಸ್ತಾನವನ್ನು ಹುಚ್ಚು ತಾಲಿಬಾನಿಗಳಿಗೆ ಒಪ್ಪಿಸಿ ಅಲ್ಲಿಂದ ಪಲಾಯನ ಮಾಡಿದ್ದು ಅಮೆರಿಕದ ಮೂರ್ಖ ನಿರ್ಧಾರ. ಇದರಿಂದಾಗಿ ಸ್ವತಃ ಅಮೆರಿಕ ಮಾತ್ರವಲ್ಲ, ಇಡೀ ವಿಶ್ವಕ್ಕೇ ಭಯೋತ್ಪಾದನೆಯ ಆಪತ್ತು ಎದುರಾಗಿದೆ.


from India & World News in Kannada | VK Polls https://ift.tt/2WK3q1l

ಕೇರಳಕ್ಕೆ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟವಾಗ್ತಿದ್ರೂ ದ.ಕ ಜಿಲ್ಲಾಡಳಿತದ ಮೌನ ಯಾಕೆ?; ಯು.ಟಿ ಖಾದರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಎಸ್ಒಪಿ ಮುಖೇನ ಕೇರಳದ ಗಡಿ ಕಾನೂನು ಜಾರಿಗೊಳಿಸಿದೆ. ಆದರೆ ಈ ಕಾನೂನು ಮರಳು ಸಾಗಾಟಕ್ಕೆ ಅನ್ವಯವಾಗುತ್ತಿಲ್ಲ. ನಿತ್ಯವೂ ಕೇರಳಕ್ಕೆ ಎಗ್ಗಿಲ್ಲದೆ ಅಕ್ರಮ ಮರಳು ಸಾಗಾಟ ನಡೆಸಲಾಗುತ್ತಿದೆ. ಹಾಗಾದರೆ ಇದಕ್ಕೆ ಕೋವಿಡ್ ನಿಯಮಗಳು ಅನ್ವಯವಾಗುತ್ತಿಲ್ಲವೇ, ಈ ಬಗ್ಗೆ ಜಿಲ್ಲಾಡಳಿತ ಮೌನ ವಹಿಸಿರುವುದು ಯಾಕೆ ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಪ್ರಶ್ನಿಸಿದರು. ಮಂಗಳೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಯುಟಿ ಖಾದರ್ ಅವರು, ಮರಳು ಸಾಗಾಟ ಪರವಾನಿಗೆ ಇಲ್ಲದಿದ್ದರೂ ನಿತ್ಯವೂ ಕೇರಳಕ್ಕೆ ಮರಳು ಹೇಗೆ ಸಾಗಾಟ ಮಾಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಮರಳು ದೊರೆಯ ಬೇಕಾದಲ್ಲಿ 12-15 ಸಾವಿರ ರೂ. ನೀಡಬೇಕು. ಆದರೆ ಜಿಲ್ಲೆಯ ಗಡಿ ದಾಟಿ ಕೇರಳಕ್ಕೆ ಎಷ್ಟು ಲೋಡು ಮರಳು ಸಾಗಾಟ ಆಗುತ್ತದೆ. ಹಾಗಾದರೆ ಲಾರಿ ಚಾಲಕರಿಗೆ ಕೋವಿಡ್ ನಿಯಮಗಳಿಲ್ಲವೇ ಅಥವಾ ಲಾರಿ ಚಾಲಕರಿಗೆ ವಿಶೇಷ ಪರವಾನಿಗೆ ಜಾರಿಯಲ್ಲಿವೆಯೇ ಎಂದು ಪ್ರಶ್ನಿಸಿದರು. ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ದ.ಕ. ಜಿಲ್ಲೆಯಲ್ಲಿ‌ ನಡೆಸಿರುವ ಜಿಲ್ಲಾ ಮಟ್ಟದ ಕೋವಿಡ್ ಸಭೆಯಲ್ಲಿ ಜಿಲ್ಲೆಯ ಆಸ್ಪತ್ರೆಗಳಿಗೆ ತುರ್ತು ಅಗತ್ಯತೆ ಎಂದು ಮಾಸ್ಕ್, ಗ್ಲೌಸ್, ಔಷಧ ವೆಚ್ಚವೆಂದು ಎಲ್ಲಾ ಆಸ್ಪತ್ರೆಗಳಿಗೂ ತಲಾ 2 ಲಕ್ಷ ರೂ. ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಈವರೆಗೆ ಎಸ್ ಸಿಆರ್ ಎಫ್ ಫಂಡ್ ನಿಂದ ಯಾವ ಹಣವೂ ಬಿಡುಗಡೆಯಾಗಿಲ್ಲ. ಹಾಗಾದರೆ ಈ ಹಣ ಎಲ್ಲಿದೆ. ಕೋವಿಡ್ ಸಮಯದಲ್ಲಿ ಗುತ್ತಿಗೆ ಆಧಾರದಲ್ಲಿ ನೀಡಿರುವ ವಾಹನಗಳನ್ನು ನೀಡಿದವರಿಗೆ ಇನ್ನೂ ಹಣ ಬಿಡುಗಡೆ ಆಗಿಲ್ಲ. ಈಗ ಅವರು ವಾಹನಗಳಿಗೆ ಡೀಸೆಲ್‌ ತುಂಬಿಸಲು ಪಾಡು ಪಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರೂ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಆದರೆ ಈ ಬಗ್ಗೆ ಸರಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗಿನಿಂದ ಸರ್ಕಾರದ ತಪ್ಪುಗಳನ್ನು ಪದೇಪದೇ ಟೀಕಿಸುತ್ತಲೇ ಬಂದಿದ್ದ ಮಾಜಿ ಸಚಿವ, ಶಾಸಕ ಅವರು ಜಿಲ್ಲೆಯಲ್ಲೂ ಬಿಜೆಪಿ ಶಾಸಕರ ಮೌನದ ಕುರಿತು ಪ್ರಶ್ನಿಸಿದ್ದರು. ಬಗ್ಗೆ ಆಗಾಗ ಮಾತನಾಡುತ್ತಿದ್ದ ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಅವರು ಇದೀಗ ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ನಡೆಯನ್ನು ಟೀಕಿಸಿದ್ದಾರೆ.


from India & World News in Kannada | VK Polls https://ift.tt/38tYPCH

ಎಸ್‌ಸಿ, ಎಸ್‌ಟಿ ದೌರ್ಜನ್ಯ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸಿಎಂ ಅವರು ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989 (ತಿದ್ದುಪಡಿ ಕಾಯಿದೆ 2015) ಮತ್ತು ನಿಯಮಗಳು 1995(ತಿದ್ದುಪಡಿ ನಿಯಮಗಳು 2016)ರಡಿ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸಭೆ ನಡೆಸಿದ ಅವರು ‘ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಗೃಹ ಮತ್ತು ಕಾನೂನು ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು. ತನಿಖೆಯ ಹಂತದಿಂದ ಹಿಡಿದು ಚಾರ್ಜ್‌ ಶೀಟ್‌ ಸಲ್ಲಿಸುವಾಗ ಹಾಗೂ ಪ್ರಾಸಿಕ್ಯೂಷನ್‌ ಸಂದರ್ಭದಲ್ಲಿಯೂ ವಿಳಂಬವಾಗದಂತೆ ಕ್ರಮ ವಹಿಸಬೇಕು. ಅಪರಾಧ ಸಾಬೀತು ಪ್ರಮಾಣ ಹೆಚ್ಚಿಸಬೇಕು’ ಎಂದು ನಿರ್ದೇಶನ ನೀಡಿದರು. ಸಭೆಯ ತೀರ್ಮಾನದ ಕುರಿತು ಪ್ರತಿ ತಿಂಗಳೂ ಸಮಾಜ ಕಲ್ಯಾಣ ಇಲಾಖೆ ಪರಿಶೀಲಿಸಬೇಕು. ರಾಜ್ಯಮಟ್ಟದ ಸಮಿತಿಯು ತುರ್ತು ವಿಷಯಗಳಿದ್ದಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಮೂರು ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳ ಹಂತದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು. ದೌರ್ಜನ್ಯ ಪ್ರಕರಣಗಳ ದೂರುದಾರರು ಮತ್ತು ಸಾಕ್ಷಿದಾರರ ರಕ್ಷಣೆಗೆ ಒತ್ತು ನೀಡಬೇಕು. ಸೂಕ್ಷ್ಮ ಪ್ರಕರಣಗಳಲ್ಲಿ ದೂರುದಾರರು ಮತ್ತು ಸಾಕ್ಷಿದಾರರನ್ನು ಪೊಲೀಸರೇ ಕರೆದೊಯ್ಯುಬೇಕು ಎಂದು ಸೂಚಿಸಿದರು. ಈ ಪ್ರಕರಣಗಳ ಸಂಪೂರ್ಣ ಮೇಲುಸ್ತುವಾರಿಗೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರನ್ನು ನೇಮಿಸಲು ಸೂಚಿಸಲಾಯಿತು. ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಈ ಸಮುದಾಯಗಳ ಹಕ್ಕು ಕಸಿದುಕೊಳ್ಳುವವರ ವಿರುದ್ಧ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ, ಪಂಗಡದವರ ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಬೇಕು. ಈ ಸಮುದಾಯಗಳ ಕಲ್ಯಾಣ ಕಾರ್ಯಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲು ಎಸ್ಕಾಂಗಳು ಎಸ್‌ಸಿಪಿ, ಟಿ ಎಸ್‌ಪಿ ಅನುದಾನ ಬಳಕೆ ಮಾಡುವಂತೆ ಸೂಚಿಸಲಾಗಿದೆ ಎಂದರು. ಈ ವೇಳೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬಿ. ಶ್ರೀರಾಮುಲು, ಜೆ.ಸಿ. ಮಾಧುಸ್ವಾಮಿ ಸಮಿತಿಯ ಸದಸ್ಯರಾದ ಸಂಸದರು, ಶಾಸಕರು, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.


from India & World News in Kannada | VK Polls https://ift.tt/3BvVoI0

ಬಾಕಿ ಶುಲ್ಕ ಪಾವತಿಸದ ಮಕ್ಕಳಿಗೆ ಟಿಸಿ ಕೊಡದೆ ಕಾಟ; ಬಡ ಮಕ್ಕಳ ನೆರವಿಗೆ ಬಾರದೆ ಮೈ ಮರೆತ ಶಿಕ್ಷಣಾಧಿಕಾರಿಗಳು!

ಆರ್‌.ಶ್ರೀಧರ್‌ ರಾಮನಗರ: ಕೊರೊನಾ ಸಂಕಷ್ಟದಿಂದ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿರುವ ಬಡ ಪೋಷಕರು ಹಾಗೂ ವಿದ್ಯಾರ್ಥಿಗಳ ಗೋಳನ್ನು ಕೇಳುವವರೇ ಇಲ್ಲವಾಗಿದೆ. ಉತ್ತಮ ಶಿಕ್ಷಣದ ಆಸೆಯಿಂದ ರಾಜ್ಯದ ವಿವಿಧೆಡೆ ಖಾಸಗಿ ಶಾಲೆಗಳಿಗೆ ಸೇರಿದ್ದ ಬಹಳಷ್ಟು ವಿದ್ಯಾರ್ಥಿಗಳು, ಈಗ ಈ ಶಾಲೆಗಳು ಹೆಣೆದಿರುವ ಬಾಕಿ ಶುಲ್ಕ ವಸೂಲಿ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಬಾಕಿ ಶುಲ್ಕ ನೀಡಿದರೆ ಮಾತ್ರ ಟಿಸಿ:ದುಬಾರಿ ಶುಲ್ಕ ಪಾವತಿಸಲು ಸಾಧ್ಯವಾಗದೆ ಸರಕಾರಿ ಶಾಲೆಗಳಿಗೆ ಸೇರಲು ಬಯಸುವ ಮಕ್ಕಳಿಗೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಧನದಾಸೆಯಿಂದ ಅದೂ ಕೈಗೆಟುಕದಂತಾಗಿದೆ. ಸರಕಾರಿ ಶಾಲೆಗಳಿಗೆ ಸೇರಲು ವರ್ಗಾವಣೆ ಪತ್ರ ಬೇಕು. ಆದರೆ, ಇದನ್ನು ನೀಡಲು ಶಿಕ್ಷಣ ಸಂಸ್ಥೆಗಳು ಸತಾಯಿಸುತ್ತಿವೆ. ಟಿಸಿ ನೀಡಬೇಕಾದರೆ ಬಾಕಿ ಶುಲ್ಕ ಪಾವತಿಸಬೇಕು. ಅದಿಲ್ಲದಿದ್ದರೆ ಟಿಸಿ ಕೊಡುವುದಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಿವೆ. ಹಣ ತೆರುವುದು ಅನಿವಾರ‍್ಯ:ಮಕ್ಕಳ ಶಾಲೆ ಬಿಟ್ಟು ಹೋಗದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಚಾಣಾಕ್ಷ ಬಲೆಯನ್ನೇ ಹೆಣೆದಿವೆ. ಟಿಸಿ ಪಡೆದು ಬೇರೆ ಶಾಲೆಗಳಿಗೆ ಹೋಗುವ ಮಕ್ಕಳು ಬಾಕಿ ಶುಲ್ಕವನ್ನು ಪೂರ್ತಿಯಾಗಿ ಪಾವತಿಸುವುದು ಕಡ್ಡಾಯ. ಒಂದೊಮ್ಮೆ ಅದೇ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರೆ ಕೇವಲ ಐದು ಸಾವಿರ ರೂ. ಪಾವತಿಸಿದರೆ ಸಾಕು ಎಂಬ ಆಮಿಷವನ್ನು ಒಡ್ಡಲಾಗುತ್ತಿದೆ. ಐದು ಸಾವಿರ ನೀಡಿ ಅದೇ ಶಾಲೆಯಲ್ಲಿ ಮುಂದುವರಿದರೆ, ಹೊಸ ಶುಲ್ಕ ಪಾವತಿಸುವುದು ಅನಿವಾರ‍್ಯ. ಒಟ್ಟಿನಲ್ಲಿ ಓದು ಮುಂದುವರಿಸಬೇಕಾದರೆ ಕನಿಷ್ಠ 50 ಸಾವಿರ ರೂ. ತೆರುವುದು ಅನಿವಾರ‍್ಯ ಎನ್ನುವಂತಹ ಸ್ಥಿತಿ ನಿರ್ಮಿಸಲಾಗಿದೆ. ಸುಮ್ಮನೆ ಕುಳಿತ ಅಧಿಕಾರಿಗಳು:ಇಂತಹ ಸಮಯದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ನೆರವಿಗೆ ಬರಬೇಕಾದವರು ಶಿಕ್ಷಣಾಧಿಕಾರಿಗಳು. ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಧ್ಯ ಪ್ರವೇಶಿಸಿ ಬಡ ಮಕ್ಕಳ ರಕ್ಷಣೆಗೆ ನಿಲ್ಲಬೇಕು. ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಆದರೆ, ರಾಮನಗರದಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಿದೆ. ಮಕ್ಕಳ ಸಮಸ್ಯೆಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಶಿಕ್ಷಣಾಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ. ಸರಕಾರದ ಆದೇಶಕ್ಕಿಲ್ಲ ಬೆಲೆ!ವಿದ್ಯಾರ್ಥಿಗಳಿಗೆ ಖಾಸಗಿ ಆಡಳಿತ ಮಂಡಳಿ ಯಾವುದಾದರೂ ತೊಂದರೆ ನೀಡುವ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದರೆ, ಅವುಗಳನ್ನು ಬಗೆಹರಿಸಿಕೊಡುವ ಸಲುವಾಗಿಯೇ ಆಯಾ ಕ್ಷೇತ್ರ ಬಿಇಒಗಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ, ಸರಕಾರ ನೀಡಿದ ಅಧಿಕಾರವನ್ನು ಬಡ ಮಕ್ಕಳ ಕಲ್ಯಾಣಕ್ಕೆ ವಿನಿಯೋಗಿಸದೆ ಬಿಇಒಗಳು ಹೊಣೆ ಮರೆತಿದಿದ್ದಾರೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳು ಟಿಸಿ ಕೊಡಲು ನಿರಾಕರಿಸಿದರೆ ಅಂತಹ ಮಕ್ಕಳಿಗೆ ಟಿಸಿ ಔಟ್‌ ಮಾಡಿಸಲು ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳದೇ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಭವಿಷ್ಯ ಮಸುಕಾಗುತ್ತಿದೆ:ಈಗಾಗಲೇ ಅರ್ಧ ಶೈಕ್ಷಣಿಕ ವರ್ಷ ಮುಗಿದು ಹೋಗಿದೆ. ಎಲ್ಲಾ ಶಾಲೆಗಳಲ್ಲೂ ಆನ್‌ಲೈನ್‌ ಕ್ಲಾಸ್‌ಗಳು ನಡೆಯುತ್ತಿವೆ. ಆದರೆ, ದುಬಾರಿ ಶುಲ್ಕ ತೆರಲಾಗದೇ ಅತಂತ್ರಗೊಂಡಿರುವ ಮಕ್ಕಳಿಗೆ ಅತ್ತ ಆನ್‌ಲೈನ್‌ ಪಾಠವೂ ಇಲ್ಲ, ಇತ್ತ ಆಪ್‌ಲೈನ್‌ ತರಗತಿಯೂ ಇಲ್ಲ ಎಂಬ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಒಟ್ಟಾರೆ ಒಂದು ವರ್ಷದ ಶಿಕ್ಷಣದಿಂದ ವಂಚಿತರಾಗುವ ಭೀತಿ ಎದುರಿಸುತ್ತಿದ್ದಾರೆ. ಲಾಟರಿ ಎತ್ತಿ ಆಯ್ಕೆಖಾಸಗಿ ಶಾಲೆಗಳ ದುಬಾರಿ ಶುಲ್ಕ ಭರಿಸಲಾಗದೇ ಸರಕಾರಿ ಶಾಲೆಗಳನ್ನು ಹುಡುಕಿ ಬರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಬೇಡಿಕೆ ಹೆಚ್ಚಿದ್ದು, ಈ ಶಾಲೆಗಳ ಬಹುತೇಕ ಸೀಟುಗಳು ಭರ್ತಿಯಾಗಿವೆ. ಬೇಡಿಕೆ ಹೆಚ್ಚಿರುವುದರಿಂದ ಚೀಟಿ ಎತ್ತಿ, ಅದರಲ್ಲಿ ಹೆಸರು ಬರುವ ಮಕ್ಕಳಿಗೆ ಪ್ರವೇಶ ಕೊಡುವ ವಿಧಾನ ಅನುಸರಿಸಲಾಗುತ್ತಿದೆ. ಹೀಗಾಗಿ ಸರಕಾರಿ ಶಾಲೆಗಳಲ್ಲಿ ಸೀಟು ಸಿಗದ ಮಕ್ಕಳ ಗೋಳು ಹೇಳಿ ತೀರದಾಗಿದೆ. ಅಧಿಕಾರಿಗಳ ಬಳಿ ಮಾಹಿತಿಯೇ ಇಲ್ಲದುಬಾರಿ ಶುಲ್ಕ ತೆರಲಾಗದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ದಬ್ಬಾಳಿಕೆ ಅನುಭವಿಸುತ್ತಿರುವ ಮಕ್ಕಳ ಸಂಖ್ಯೆ ಕನಕಪುರ ಮತ್ತು ಚನ್ನಪಟ್ಟಣ ತಾಲೂಕುಗಳಲ್ಲಿ ಹೆಚ್ಚಿದೆ. ಈ ರೀತಿ ತೊಂದರೆ ಅನುಭವಿಸುತ್ತಿರುವ ಮಕ್ಕಳ ಸಂಖ್ಯೆ ಎಷ್ಟು, ಎಷ್ಟು ಮಕ್ಕಳ ಸಮಸ್ಯೆ ಬಗೆಹರಿಸಲಾಗಿದೆ ಎಂಬ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿಯೇ ಇಲ್ಲ. ಇದೊಂದು ಅಂಶವೇ ಈ ಅಧಿಕಾರಿಗಳು ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದಾರೆ ಎಂಬುದಕ್ಕೆ ನಿದರ್ಶನ. ಕರೆ ಸ್ವೀಕರಿಸದ ಅಧಿಕಾರಿಗಳು:ಇನ್ನು ಜಿಲ್ಲೆಯಲ್ಲಿ ಅಧಿಕಾರಿಗಳ ಕಳ್ಳಾಟ ಕುರಿತು ಸ್ಪಷ್ಟಣೆ ಪಡೆಯಲು ಡಿಡಿಪಿಐ ಸೋಮಶೇಖರ್‌ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕರೆ ಮಾಡಿದರೆ, ಒಬ್ಬ ಅಧಿಕಾರಿಗಳು ಕರೆ ಸ್ವೀಕರಿಸುವಷ್ಟು ಸೌಜನ್ಯ ತೋರಿಸಿಲ್ಲ. ಇದು ಶುಲ್ಕ ವಸೂಲಿ ದಂಧೆಗೆ ಅಧಿಕಾರಿಗಳ ಶ್ರೀರಕ್ಷೆ ಇದೆ ಎಂಬ ಪೋಷಕರು ಆರೋಪಕ್ಕೆ ಪುಷ್ಠಿ ನೀಡಿದೆ.


from India & World News in Kannada | VK Polls https://ift.tt/2WHg2Wp

ಕೋಳಿಗೆ ಟಿಕೆಟ್‌ ನೀಡಿದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌; ಸಿಟ್ಟಿನಿಂದ ಸೀಟ್‌ ಮೇಲೆ ಕೂರಿಸಿದ ಪ್ರಯಾಣಿಕ!

ಗುಡಿಬಂಡೆ: ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ನಲ್ಲಿ ಸಾಗಿಸುತ್ತಿದ್ದ ಕೋಳಿಗೆ ಪ್ರಯಾಣಿಕರ ದರ ವಿಧಿಸಿ ಟಿಕೆಟ್‌ ನೀಡಿದ ಕಂಡಕ್ಟರ್‌ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಚಿಕ್ಕಬಳ್ಳಾಪುರ ಘಟಕದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪೆರೇಸಂದ್ರದಿಂದ ತಾಲೂಕಿನ ಸೋಮೇಶ್ವರಕ್ಕೆ ಹೋಗುತ್ತಿದ್ದ ಪ್ರಯಾಣಿಕ ತನ್ನ ಜತೆ ಕೋಳಿ ಕೊಂಡೊಯ್ಯುತ್ತಿದ್ದ. ಈ ವೇಳೆ ನಿರ್ವಾಹಕ ಕೋಳಿಗೂ 5 ರೂ. ಟಿಕೆಟ್‌ ನೀಡಿದ. ಟಿಕೆಟ್‌ ಪಡೆದ ಮಾಲೀಕ ಕೋಳಿಯನ್ನು ಸೀಟ್‌ ಮೇಲೆ ಕೂರಿಸಿ ಪ್ರಯಾಣ ಬೆಳೆಸಿದ. ಪ್ರಯಾಣಿಕರು ಕೋಳಿ ತೆಗೆದು ಸೀಟ್‌ ಬಿಟ್ಟು ಕೊಡಿ ಎಂದು ಕೇಳಿದಾಗ, ನಾನು ಟಿಕೆಟ್‌ ಪಡೆದಿದ್ದೇನೆ. ಹಾಗಾಗಿ ಕೋಳಿಯನ್ನು ನನ್ನ ಜತೆ ಸೀಟ್‌ನಲ್ಲಿ ಕೂರಿಸಿದ್ದೇನೆ ಎಂದು ಪ್ರಯಾಣಿಕ ಉತ್ತರ ನೀಡಿದ್ದಾನೆ. ಸದ್ಯ ಬಸ್‌ ಕಂಡಕ್ಟರ್ ನೀಡಿದ ಈ ಸುದ್ದಿಯ ಜತೆಗೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಠಾಣೆ ವ್ಯಾಪ್ತಿಯ ಪೆರೇಸಂದ್ರದ ವ್ಯಕ್ತಿ ನಾಟಿ ಕೋಳಿ ಹುಂಜ ಖರೀದಿಸಿ, ಸೋಮೇಶ್ವರಕ್ಕೆ ಹೋಗಲು ಚಿಕ್ಕಬಳ್ಳಾಪುರ ಘಟಕದ ಕೆಎಸ್ಸಾರ್ಟಿಸಿ ಬಸ್‌ ಹತ್ತಿದಾಗ ಇಷ್ಟೆಲ್ಲಾ ಬೆಳವಣಿಗೆ ನಡೆದಿದೆ. ಪೆರೇಸಂದ್ರದ ವ್ಯಕ್ತಿಗೆ ಕಂಡಕ್ಟರ್‌ 10 ರೂ. ಟಿಕೆಟ್‌ ನೀಡಿದರೆ, ಕೋಳಿ ಹುಂಜಕ್ಕೆ 5 ರೂ. ಟಿಕೆಟ್‌ ನೀಡಿದ್ದಾನೆ. ಬಸ್ ಕಂಡಕ್ಟರ್‌ ಕೋಳಿಗೂ ಟಿಕೆಟ್‌ ನೀಡಿದ ಕೂಡಲೇ ಚುರುಕಾದ ಪ್ರಯಾಣಿಕ ತನ್ನ ಕೋಳಿಯನ್ನು ಸೀಟ್‌ ಮೇಲೆ ಕೂರಿಸಿದ್ದಾರೆ. ಈ ಪೋಟೊಗಳು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರಾಲ್‌ ಆಗಿ ಭಾರೀ ಸುದ್ದಿಯಾಗಿದೆ. ಕೆಲವರು ಇದನ್ನು ಹಾಸ್ಯವಾಗಿ ಪರಿಗಣಿಸಿದರೆ ಇನ್ನೂ ಕೆಲವರು ಒಂದು ಕೇವಲ ಕೋಳಿಗೆ ಟಿಕೆಟ್‌ ವಿಧಿಸಿದ್ದ ಕಂಡಕ್ಟರ್ ವರ್ತನೆಯನ್ನು ಖಂಡಿಸಿದ್ದಾರೆ. ಹಾಗೆ ನೋಡಿದರೆ ಕೋಳಿಗೆ ಅರ್ಧ ಟಿಕೆಟ್‌ ಹಾಕೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಕಡೆ ಸಾರಿಗೆ ಬಸ್ ನಿರ್ವಾಹಕರು ಕೋಳಿಗೆ ಅರ್ಧ ಟಿಕೆಟ್‌ ಹಾಕಿರೋದು ಸುದ್ದಿಯಾಗಿತ್ತು. ಸಾಮಾನ್ಯವಾಗಿ ನಿರ್ದಿಷ್ಟ ಕೆಜಿ ಅಥವಾ ಪ್ರಮಾಣಕ್ಕಿಂತ ಹೆಚ್ಚು ವಸ್ತುಗಳು ಅಥವಾ ಜೀವಿಗಳನ್ನು ಬಸ್‌ನಲ್ಲಿ ಪ್ರಯಾಣಿಕರ ಜೊತೆಗೆ ಕರೆದುಕೊಳ್ಳುವುದಾದರೆ ಬಸ್‌ ಕಂಡಕ್ಟರ್‌ಗಳು ಅರ್ಧ ಟಿಕೆಟ್‌ ವಿಧಿಸುತ್ತಾರೆ. ಅದರಂತೆ ಚಿಕ್ಕಬಳ್ಳಾಪುರ ಘಟಕದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪೆರೇಸಂದ್ರದಿಂದ ಗುಡಿಬಂಡೆ ತಾಲೂಕಿನ ಸೋಮೇಶ್ವರಕ್ಕೆ ಹೋಗುತ್ತಿದ್ದ ಪ್ರಯಾಣಿಕನಿಗೂ ಕೂಡ ಕಂಡಕ್ಟರ್ ಟಿಕೆಟ್ ಕೊಟ್ಟಿದ್ದಾರೆ.


from India & World News in Kannada | VK Polls https://ift.tt/3jDJpSV

ಪ್ರವಾಸಿಗರ ಸೋಗಿನಲ್ಲಿ ಕುಕ್ಕೆಯಲ್ಲಿ ಭಕ್ತರ ಚಿನ್ನಾಭರಣ ಕದ್ದಿದ್ದ ಮಹಿಳೆ ಸೆರೆ; ₹20 ಲಕ್ಷ ಮೌಲ್ಯದ ಚಿನ್ನ ಜಪ್ತಿ

ಬೆಂಗಳೂರು: ಪ್ರವಾಸಿಗರ ಸೋಗಿನಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ದೇವರ ದರ್ಶನಕ್ಕೆ ಬರುವ ಭಕ್ತರ ಬಳಿಯಿರುವ ಚಿನ್ನಾಭರಣ ಕಳವು ಮಾಡುತ್ತಿದ್ದವಳನ್ನು ಬಂಧಿಸಿರುವ ಯಶವಂತಪುರ ಠಾಣೆ ಪೊಲೀಸರು, ಆಕೆಯಿಂದ 20.2 ಲಕ್ಷ ರೂ. ಮೌಲ್ಯದ 439.32 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಮಮತಾ (38) ಬಂಧಿತ ಆರೋಪಿಯಾಗಿದ್ದು, ಮತ್ತೊಬ್ಬ ಆರೋಪಿಯಾಗಿರುವ ಆಕೆಯ ಪತಿ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಯಶವಂತಪುರ ಪೊಲೀಸರು ತಿಳಿಸಿದರು. ಆರೋಪಿ ಮಮತಾಳ ಮೊದಲ ಪತಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ, ಹತ್ತಿರದ ಸಂಬಂಧಿ ಜತೆ ಇತ್ತೀಚೆಗೆ ಮಮತಾಳ ಎರಡನೇ ಮದುವೆಯಾಗಿತ್ತು. ವಿವಾಹದ ಬಳಿಕ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಮಾಡಿ ನಂತರ ಬೆಂಗಳೂರಿಗೆ ಬಂದು ಜೀವನ ನಡೆಸಲು ನಿರ್ಧರಿಸಿದ್ದರು. ಅದರಂತೆ ಆಗಸ್ಟ್‌ 19ರಂದು ಇಬ್ಬರೂ ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿ ಮರುದಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿದ್ದರು. ಧರ್ಮಸ್ಥಳದ ಹೋಟೆಲ್‌ನಲ್ಲಿ ಉಪಾಹಾರ ಸೇವಿಸುವಾಗ ಪಕ್ಕದ ಟೇಬಲ್‌ನಲ್ಲಿ ಊಟ ಮಾಡುತ್ತಿದ್ದ ಪ್ರವಾಸಿಗರು ಬ್ಯಾಗ್‌ ಇಟ್ಟು ಕೈ ತೊಳೆಯಲು ಹೋಗಿದ್ದರು. ಇತ್ತ ಹಣದ ಅವಶ್ಯಕತೆ ಇದ್ದ ಕಾರಣ ಆರೋಪಿಗಳು ಬ್ಯಾಗ್‌ ಕಳವು ಮಾಡಿ ಅಲ್ಲಿಂದ ಪರಾರಿಯಾಗಿದ್ದರು. ನಿರ್ಜನ ಪ್ರದೇಶದಲ್ಲಿ ಬ್ಯಾಗ್‌ ತೆಗೆದು ನೋಡಿದಾಗ ಬೆಲೆ ಬಾಳುವ ಚಿನ್ನಾಭರಣ ಇರುವುದು ಗೊತ್ತಾಗಿ ಖುಷಿಯಿಂದ ಬೆಂಗಳೂರಿಗೆ ಬಂದು ಲಗ್ಗೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಕಳವು ಮಾಡಿದ್ದ ಚಿನ್ನಾಭರಣದಲ್ಲಿ ಸ್ವಲ್ಪ ಅಡವಿಟ್ಟು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಆ. 25ರ ಬೆಳಗ್ಗೆ 10.20 ರಲ್ಲಿ ಯಶವಂತಪುರ 1ನೇ ಮುಖ್ಯರಸ್ತೆಯ ಎಸ್‌.ಕೆ. ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ಮಾರಾಟ ಮಾಡಲು ಬಂದ ಮಮತಾ ಹಾಗೂ ಪತಿ ಅಂಗಡಿಯ ಸುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಗಸ್ತು ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ಪತಿ ತಪ್ಪಿಸಿಕೊಂಡಿದ್ದಾನೆ. ಮಮತಾಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಚಿನ್ನದ ಅಂಗಡಿಗಳಲ್ಲಿ ಅಡವಿಟ್ಟ 10 ರಸೀದಿಗಳು ಮತ್ತು 4 ಗ್ರಾಂನ 2 ಉಂಗುರಗಳು ಪತ್ತೆಯಾಗಿವೆ. ಚಿನ್ನವನ್ನು ಕುಕ್ಕೆಯಲ್ಲಿ ಕಳವು ಮಾಡಿರುವ ವಿಷಯ ಬಾಯ್ಬಿಟ್ಟಿದ್ದಾಳೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ಬಲೆ ಬೀಸಲಾಗಿದೆ. ಆತನ ಪತ್ತೆ ಬಳಿಕ ಆರೋಪಿಗಳು ಬೇರೆ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದರಾ ಎಂಬುದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3Bu1bhs

ಅಣೆಕಟ್ಟೆಗಳ ಅಭಿವೃದ್ಧಿಗೆ ವಿಶ್ವಬ್ಯಾಂಕ್‌ನಿಂದ ₹1,500 ಕೋಟಿ ನೆರವು

ಶಿವಾನಂದ ಹಿರೇಮಠ ಬೆಂಗಳೂರು ರಾಜ್ಯದ 58 ಅಣೆಕಟ್ಟೆಗಳ ಪುನರುಜ್ಜೀವನ ಮತ್ತು ಅಭಿವೃದ್ಧಿಗೆ (ಡಿಆರ್‌ಐಪಿ) 2 ಮತ್ತು 3ನೇ ಹಂತದಲ್ಲಿ 1,500 ಕೋಟಿ ರೂ. ಸಾಲದ ನೆರವು ನೀಡಿದೆ. ಮೊದಲನೇ ಹಂತದಲ್ಲಿ ಬಾಕಿ ಇದ್ದ ಕಾಮಗಾರಿಗಳನ್ನು ಪೂರ್ಣಗೊಳಿಸುವುದೂ ಸೇರಿದಂತೆ ಅಣೆಕಟ್ಟೆಗಳ ಭೌತಿಕ ಅಭಿವೃದ್ಧಿಗೆ ಹಣಕಾಸಿನ ನೆರವು ಕೋರಿ ನೀರಾವರಿ ನಿಗಮಗಳು ಸರಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಬಜೆಟ್‌ನಲ್ಲಿ ನೀಡಿದ ಭರವಸೆಯಂತೆ ರಾಜ್ಯ ಸರಕಾರವು ವಿಶ್ವಬ್ಯಾಂಕ್‌ಗೆ ಡಿಆರ್‌ಐಪಿ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆಗೆ ಕಳೆದ ವಾರ ಅನುಮೋದನೆ ದೊರೆತಿದೆ. ನೀರಿನ ಸಮರ್ಪಕ ಸಂಗ್ರಹ ಮತ್ತು ಬಳಕೆ ಜತೆಗೆ ಬಾಳಿಕೆಯನ್ನು ಉತ್ಕೃಷ್ಟಗೊಳಿಸುವುದು ಯೋಜನೆಯ ಉದ್ದೇಶ. ಕೇಂದ್ರ ಸರಕಾರ ಶೇ.70 ಮತ್ತು ರಾಜ್ಯ ಸರಕಾರ ಶೇ.30ರಷ್ಟು ಸಾಲದ ನೆರವನ್ನು ವಂತಿಕೆ ರೂಪದಲ್ಲಿ ಮರುಪಾವತಿಸಲಿವೆ. ಪ್ರಸಕ್ತ ಸಾಲಿನಲ್ಲಿ ನೀಡಿದ ಅನುಮೋದನೆಯು 2 ಮತ್ತು 3ನೇ ಹಂತದ ಹಣಕಾಸಿನ ನೆರವಾಗಿದೆ. ಮೊದಲ ಹಂತದಲ್ಲಿ 750 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 35 ಅಣೆಕಟ್ಟೆಗಳ ಅಭಿವೃದ್ಧಿಗೆ 362.45 ಕೋಟಿ, ಮೊದಲ ಹಂತದಲ್ಲಿ ಪೂರ್ಣಗೊಳ್ಳದ ಬೃಹತ್‌ ಅಣೆಕಟ್ಟೆಗಳಿಗೆ ಅಗತ್ಯವಿರುವ 723.33 ಕೋಟಿ ನೀಡಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ 214.22 ಕೋಟಿ ಹಾಗೂ ಎಸ್‌ಆರ್‌ ಬೆಲೆ ಏರಿಕೆ, ಟೆಂಡರ್‌, ಜಿಎಸ್‌ಟಿ ಹಾಗೂ ನಿರ್ಮಾಣಕ್ಕೆ ಬೇಕಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಹೆಚ್ಚುವರಿ 200 ಕೋಟಿ ಸೇರಿ 1,500 ಕೋಟಿ ರೂ. ನೆರವನ್ನು ವಿಶ್ವಬ್ಯಾಂಕ್‌ ನೀಡಿದೆ. ಕೆಆರ್‌ಎಸ್‌ ಡ್ಯಾಂಗೆ ಹೊಸ ಗೇಟ್‌ ಕೆಆರ್‌ಎಸ್‌ ಗೇಟ್‌ಗಳನ್ನು ಬದಲಿಸಿ ಮತ್ತು ಪ್ರತಿಯೊಂದು ಗೇಟ್‌ಗಳಿಂದ ನೀರಿನ ಹೊರ ಹರಿವಿನ ದತ್ತಾಂಶ ಸಂಗ್ರಹಣೆಗೆ ಹೈಡ್ರೋ ಮೆಕ್ಯಾನಿಸಮ್‌ ಅಳವಡಿಸಲು ಯೋಜಿಸಲಾಗಿದೆ. 60.90 ಕೋಟಿ ರೂ. ಅನುಮೋದನೆಯೂ ದೊರೆತಿದೆ. ಕೇಂದ್ರ ಜಲಶಕ್ತಿ ಯೋಜನಾ ನಿರ್ವಹಣೆ ಘಟಕದಿಂದ ನೀಲನಕ್ಷೆಗೆ ಅನುಮತಿ ದೊರೆಯುವುದು ಮಾತ್ರ ಬಾಕಿ ಇದೆ. ಮುಂಬರುವ ಮಾರ್ಚ್ ಒಳಗಾಗಿ ಕಾಮಗಾರಿ ಮುಗಿಸುವ ಗಡುವು ವಿಧಿಸಲಾಗಿದೆ. ತುಂಗಭದ್ರ: ಪ್ರಸ್ತಾವನೆ ಸಲ್ಲಿಸಿದ್ದ 104 ಕೋಟಿಯಲ್ಲಿ 39 ಕೋಟಿ ರೂ.ಗೆ ಅನುಮತಿ ದೊರೆತಿದೆ. ಡ್ಯಾಂ ಕೆಳಗಿನಿಂದ ಮೇಲ್ಭಾದವರೆಗೆ ಎಂ60 ಉತ್ಕೃಷ್ಟದ ಕಾಂಕ್ರಿಟ್‌ ಗೋಡೆ ಅಳವಡಿಸುವುದನ್ನು ಪ್ರಮುಖ ಕೆಲಸವನ್ನಾಗಿ ಕೈಗೆತ್ತಿಕೊಳ್ಳಲಾಗಿದೆ. ಗ್ರಿಡ್‌ ವಾಲ್‌ ಮತ್ತು ಎಲೆಕ್ಟ್ರಿಕ್‌ ಕೆಲಸಗಳನ್ನು ನಡೆಸಲಾಗುತ್ತದೆ. ತಜ್ಞರಿಂದ ಸಲಕರಣೆ ಅಳವಡಿಕೆ ಕುರಿತು ಇತ್ತೀಚೆಗೆ ಪರಿಶೀಲನೆ ಜರುಗಿದೆ. ಆಲಮಟ್ಟಿ: ಹೈಡ್ರೋ ಮೆಕ್ಯಾನಿಸಮ್‌ ಹೊಂದಿರುವ ರಾಜ್ಯದ ಏಕಮಾತ್ರ ಜಲಾಶಯ ಇದು. ಹೈಡ್ರೋ ಮೆಕ್ಯಾನಿಸಮ್‌ ಉನ್ನತೀಕರಣ ಸೇರಿದಂತೆ ಇತರ ಕೆಲಸಗಳಿಗೆ 170 ಕೋಟಿ ರೂ. ನೀಡಲಾಗಿದೆ. ಉದ್ಯಾನವನ ನಿರ್ಮಾಣ: ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಆರು ಅಣೆಕಟ್ಟೆಗಳಲ್ಲಿ ಉದ್ಯಾನವನ ನಿರ್ಮಿಸಲಾಗುವುದು. ರಾಮನಹಳ್ಳಿ, ಜಂಬದಹಳ್ಳ, ಕರಿಮುದ್ದೇನಹಳ್ಳಿ, ಕನಕನಾಲಾ ಡ್ಯಾಂ ಹಾಗು ಚಿಕ್ಲಿಹೊಳೆ ಜಲಾಶಯಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಉತ್ಕೃಷ್ಟ ಶೈಲಿಯ ಉದ್ಯಾನವನ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಇದಕ್ಕಾಗಿ ರೂ. 214.22 ಕೋಟಿ ರೂ. ಮೊತ್ತವನ್ನು ವಿನಿಯೋಗಿಸಲಾಗುವುದು. ಯಾವ ಡ್ಯಾಮ್‌ಗಳಿಗೆ ಎಷ್ಟು ಹಣ?
  • ಅಣೆಕಟ್ಟು: ಕೋಟಿ ರೂ.ಗಳಲ್ಲಿ
  • ಆಲಮಟ್ಟಿ: 170 ಕೋಟಿ ರೂ.
  • ನಾರಾಯಣಪುರ: 100 ಕೋಟಿ ರೂ.
  • ಹಿಡ್ಕಲ್‌ :112.50 ಕೋಟಿ ರೂ.
  • ಭದ್ರಾ: 92 ಕೋಟಿ ರೂ.
  • ಕಬಿನಿ: 64.85 ಕೋಟಿ ರೂ.
  • ಕೆಆರ್‌ಎಸ್‌: 60.90 ಕೋಟಿ ರೂ.
ಆಲಮಟ್ಟಿ, ನಾರಾಯಣ, ತುಂಗಭದ್ರ ಮತ್ತು ಮುನಿರಾಬಾದ್‌ ಜಲಾಶಯಗಳ ಅಭಿವೃದ್ಧಿಗೆ ಕೇಂದ್ರ ಜಲಶಕ್ತಿ ಯೋಜನಾ ನಿರ್ವಹಣಾ ಘಟಕದಿಂದ ಅನುಮತಿ ದೊರೆಯಬೇಕಿದೆ. ಇನ್ನೂಳಿದ ಡಿಪಿಆರ್‌ಗಳಿಗೆ ಕೇಂದ್ರ ಜಲಶಕ್ತಿಯಿಂದ ಸದ್ಯದರಲ್ಲಿಯೇ ಅನುಮತಿ ದೊರೆಯಲಿದೆ. ಮುಂಬರುವ ಮಾರ್ಚ್ ಒಳಗಾಗಿ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ. - ಲಕ್ಷ್ಮಣರಾವ್‌ ಪೇಶ್ವೆ,ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ


from India & World News in Kannada | VK Polls https://ift.tt/2WHPRPN

ಕೊಡಗಿನಲ್ಲಿ ಸದ್ಯ ಪ್ರವಾಸೋದ್ಯಮಕ್ಕೆ ಅವಕಾಶ ಬೇಡ; ಪ್ರವಾಸೋದ್ಯಮ ವಿರೋಧಿ ಒಕ್ಕೂಟ ಒತ್ತಾಯ

ವಿರಾಜಪೇಟೆ: ಕೇರಳದಲ್ಲಿ ಸೋಂಕು ಕಡಿಮೆಯಾಗುವವರೆಗೆ ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ಕೊಡದಂತೆ ಒತ್ತಾಯಿಸಿದೆ. ಪೊನ್ನಂಪೇಟೆ ಖಾಸಗಿ ಸ್ಥಳದಲ್ಲಿ ವಿರೋಧಿ ಒಕ್ಕೂಟದಿಂದ ನಡೆದ ಸಭೆಯಲ್ಲಿ ಕೇರಳದಲ್ಲಿ ಸೋಂಕು ಕಡಿಮೆಯಾಗುವವರೆಗೆ ಕೊಡಗಿನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸಂಪೂರ್ಣ ಬಂದ್‌ ಮಾಡಿ, ಸ್ಥಳೀಯ ಅಂಗಡಿ ಮುಗ್ಗಟ್ಟುಗಳು ಮತ್ತು ಶಾಲಾ ಕಾಲೇಜುಗಳನ್ನು ತೆರೆಯಲು ಅವಕಾಶ ಮಾಡಿಕೊಡಲು ಒತ್ತಾಯಿ ಸಿದರು. ವಾರಾಂತ್ಯದ ಕರ್ಫ್ಯೂ ಹೆಸರಿನಲ್ಲಿ ಕೇವಲ ಸ್ಥಳೀಯರನ್ನು ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರನ್ನು ಮನೆಯೊಳಗೆ ಕೂಡಿ ಹಾಕುವುದಲ್ಲ, ಪ್ರವಾಸೋದ್ಯಮ ಚಟುವಟಿಕೆಗಳನ್ನು, ಹೋಂ ಸ್ಟೇ ರೆಸಾರ್ಟ್‌ಗಳನ್ನು ಸಂಪೂರ್ಣ ಬಂದ್‌ ಮಾಡುವಂತೆ ಶೇ.10 ಪ್ರವಾಸೋದ್ಯಮ ಅವಲಂಬಿತರಿಂದ ಶೇ.90ರಷ್ಟು ಕೃಷಿ ಅವಲಂಬಿತರ ಬದುಕು ಅತಂತ್ರವಾಗಿದೆ. ಕೃಷಿ ಪ್ರಧಾನ ಜಿಲ್ಲೆಯೇ ಹೊರತು, ಪ್ರವಾಸೋದ್ಯಮ ಅವಲಂಬಿತ ಜಿಲ್ಲೆಯಲ್ಲ. ಕೊಡಗಿನ ಶ್ರೀಮಂತ ಸಂಸ್ಕೃತಿಯನ್ನು ಪ್ರವಾಸೋದ್ಯಮ ನೆಪದಲ್ಲಿಅತ್ಯಾಚಾರ ಮಾಡಲಾಗುತ್ತಿದೆ. ಇಲ್ಲಿನ ಶ್ರೀಮಂತ ಸಂಸ್ಕೃತಿ, ಉಡುಗೆ-ತೊಡುಗೆಯನ್ನು ದುಡ್ಡಿಗೋಸ್ಕರ ಮಾರಾಟ ಮಾಡಬೇಡಿ. ಜಿಲ್ಲೆಯ ವಿವಿಧ ಗಡಿಗಳಲ್ಲಿ ಯಾವುದೇ ತಪಾಸಣೆ ಇಲ್ಲದೆ ಕೋವಿಡ್‌ ನಿಯಮವನ್ನು ಪಾಲಿಸದೆ ಯಾವುದೇ ದಾಖಲೆಗಳಿಲ್ಲದೆ ಕೊಡಗಿಗೆ ಬರುತ್ತಿರುವ ಅಸ್ಸಾಮಿ ಕಾರ್ಮಿಕರು ಎಂದು ಹೇಳಲಾಗುವ ಹೊರ ರಾಜ್ಯದ ವಲಸಿಗರ ಬಗ್ಗೆ ಕಟ್ಟೆಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು. ಒಕ್ಕೂಟದ ಬೇಡಿಕೆಗಳನ್ನು ಮುಂದಿನ 15 ದಿನಗಳೊಳಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟವರು ಸರಿಪಡಿಸದಿದ್ದರೆ ಸೆ.16ರಂದು ನಡೆಯುವ ಸಭೆಯಲ್ಲಿ ಹೋರಾಟ ಬಗ್ಗೆ ಚರ್ಚಿಸಿ, ಮುಂದಿನ ದಿನಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಮುದಾಯದವರು ಹಾಗೂ ಕೃಷಿಕರನ್ನು ಸೇರಿಸಿಕೊಂಡು ಪ್ರವಾಸೋದ್ಯಮ ಹಾಗೂ ಜಿಲ್ಲಾಡಳಿತ ವಿರುದ್ಧವೇ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಮಡಿಕೇರಿ, ಸೋಮವಾರಪೇಟೆ, ಕುಶಾಲನಗರ, ಸಿದ್ದಾಪುರ, ಮರಗೋಡು, ವಿರಾಜಪೇಟೆ, ಬಾಳಲೆ, ಬಿ.ಶೆಟ್ಟಿಗೇರಿ, ಕುಂದಾ, ಪೊನ್ನಂಪೇಟೆ, ಗೋಣಿಕೊಪ್ಪ, ಬಾಡಗರಕೇರಿ, ಕಾನೂರು, ಕುಟ್ಟಾ, ಹುದಿಕೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸಾರ್ವಜನಿಕರು ಹಾಜರಿದ್ದರು.


from India & World News in Kannada | VK Polls https://ift.tt/3mJhG54

ತಮಿಳುನಾಡಿಗೆ ಸದ್ಯ ನೀರಿಲ್ಲವೆಂದ ರಾಜ್ಯ, ಪ್ರಾಧಿಕಾರದ ಸೂಚನೆ ನಿರಾಕರಿಸಿದ ಸರಕಾರ

ಹೊಸದಿಲ್ಲಿ: ತಮಿಳುನಾಡಿಗೆ 30 ಟಿಎಂಸಿ ಬಾಕಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಸದ್ಯಕ್ಕೆ ನೀರು ಹರಿಸಲಾಗದು ಎಂದು ಕರ್ನಾಟಕ ಸ್ಪಷ್ಟವಾಗಿ ಹೇಳಿದೆ. ದಿಲ್ಲಿಯಲ್ಲಿ ಮಂಗಳವಾರ ಪ್ರಾಧಿಕಾರದ ಅಧ್ಯಕ್ಷ ಎಸ್‌.ಕೆ. ಹಲ್ದರ್‌ ನೇತೃತ್ವದಲ್ಲಿ ನಡೆದ 13ನೇ ಸಾಮಾನ್ಯ ಸಭೆಯ ವೇಳೆ ಕರ್ನಾಟಕದಿಂದ ಬಾಕಿ ನೀರು ಬಿಡುಗಡೆಗೆ ಆಗ್ರಹಿಸಿತು. ಆ. 30ರವರೆಗಿನ ಬಾಕಿ ನೀರಿನ ಜೊತೆಗೆ ಸೆಪ್ಟೆಂಬರ್‌ ತಿಂಗಳ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕವನ್ನು ಒತ್ತಾಯಿಸಿತು. ''ಮೂರು ತಿಂಗಳ ಅವಧಿಯಲ್ಲಿ ಕರ್ನಾಟಕ 86.38 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಈವರೆಗೂ 57.04 ಟಿಎಂಸಿ ನೀರು ಬಿಡುಗಡೆ ಮಾಡಿದೆ. ಬಾಕಿ 29.34 ಟಿಎಂಸಿ ನೀರು ಹರಿಸಲು ಆದೇಶಿಸಬೇಕು," ಎಂದು ಪ್ರಾಧಿಕಾರದ ಮುಂದೆ ತಮಿಳುನಾಡು ಮನವಿ ಮಾಡಿತು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸರಕಾರ ''ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕಳೆದ ತಿಂಗಳು ಉತ್ತಮ ಮಳೆಯಾಗಿರುವ ಕಾರಣ 14,000 ಕ್ಯೂಸೆಕ್‌ ನೀರು ಹರಿಸಲಾಗಿದೆ. ಆದರೆ ತಮಿಳುನಾಡು ಇದನ್ನು ಪರಿಗಣಿಸಲಿಲ್ಲ. ಉತ್ತಮ ಮಳೆಯಾದರೆ ಬಾಕಿ ನೀರು ಹರಿಸಲಾಗುವುದು,'' ಎಂದು ಹೇಳಿತು. ಬಳಿಕ ಅಧ್ಯಕ್ಷ ಎಸ್‌.ಕೆ. ಹಲ್ದರ್‌ ಅವರು ಮಳೆಯ ಪ್ರಮಾಣ, ಕೊರತೆ ಎಲ್ಲವನ್ನೂ ತಾಳೆ ಹಾಕಿ ತಮಿಳುನಾಡಿಗೆ ಸೆಪ್ಟೆಂಬರ್‌ನಲ್ಲಿ ಬಾಕಿ ನೀರು ಹರಿಸಬೇಕು. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಉತ್ತಮ ಮಳೆಯಾಗಲಿದ್ದು, ಮುಂದೆ ತಮಿಳುನಾಡು ಪಾಲಿನ ಎಲ್ಲ ನೀರನ್ನು ನೀಡಬೇಕು ಎಂದು ಸೂಚಿಸಿದರು. ಸಭೆಯ ಬಳಿಕ ಹಲ್ದರ್‌ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಪಾತ್ರದ ವ್ಯಾಪ್ತಿಯುಳ್ಳ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿ ಸರಕಾರದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯದ ಖಡಕ್‌ ವಾದ ''ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಈ ವೇಳೆಗೆ ರಾಜ್ಯದ ಜಲಾಶಯಗಳಲ್ಲಿ 209 ಟಿಎಂಸಿ ನೀರು ಇರಬೇಕಿತ್ತು. ಆದರೆ ಪ್ರಸ್ತುತ 156 ಟಿಎಂಸಿ ಮಾತ್ರ ನೀರಿದ್ದು, 25% ಕೊರತೆಯಿದೆ. ಇಂತಹ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವೇ ಇಲ್ಲ," ಎಂದು ರಾಜ್ಯ ಸರಕಾರ ಸಭೆಯಲ್ಲಿ ಖಡಕ್‌ ವಾದ ಮಂಡಿಸಿತು. ಮೇಕೆದಾಟು ಚರ್ಚೆ ಮುಂದೂಡಿಕೆ ಸಭೆಯಲ್ಲಿ ಮೇಕೆದಾಟು ಯೋಜನೆಯ ಕುರಿತು ಚರ್ಚೆಗೆ ಅಜೆಂಡಾ ನಿಗದಿಯಾಗಿದ್ದರೂ, ತಮಿಳುನಾಡಿನ ಆಕ್ಷೇಪದ ಕಾರಣ ಅದನ್ನು ಮುಂದೂಡಲಾಯಿತು. ಮೇಕೆದಾಟು ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳದಲ್ಲಿರುವ ಕಾರಣ ಚರ್ಚೆಗೆ ಅವಕಾಶ ನೀಡಬಾರದು. ಕರ್ನಾಟಕ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿಯನ್ನು ತಿರಸ್ಕರಿಸಬೇಕೆಂದು ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸರಕಾರ ಮನವಿ ಸಲ್ಲಿಸಿದೆ. ಅದರ ವಿಚಾರಣೆ ಸದ್ಯದಲ್ಲೇ ಶುರುವಾಗಲಿದೆ. ಹೀಗಾಗಿ ಈ ಯೋಜನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಬಾರದು. ಅಲ್ಲದೆ, ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿ ನಾಲ್ಕೂ ರಾಜ್ಯಗಳು ಸಮ್ಮತಿಸಿದರೆ ಮಾತ್ರ ಮೇಕೆದಾಟು ಕುರಿತು ಚರ್ಚಿಸಬೇಕು ಎಂದು ತಮಿಳುನಾಡು ಸರಕಾರದ ಪ್ರತಿನಿಧಿಗಳು ವಾದಿಸಿದರು. ಹೀಗಾಗಿ ಈ ಬಗ್ಗೆ ಚರ್ಚೆಯನ್ನು ಪ್ರಾಧಿಕಾರ ಮುಂದೂಡಿತು. ನದಿ ಜೋಡನೆಗೆ ರಾಜ್ಯ ವಿರೋಧ ತಮಿಳುನಾಡು ಸರಕಾರದ ಉದ್ದೇಶಿತ ವೆಲ್ಲಾರು - ಗುಂಡಾರು ನದಿ ಜೋಡಣೆಗೆ ಕರ್ನಾಟಕ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿತು. ಯೋಜನೆಗೆ ಅನುಮತಿ ನೀಡದಂತೆ ಮನವಿ ಮಾಡಿತು. ಇದಕ್ಕೆ ತಮಿಳುನಾಡು ವಿರೋಧ, ವಾಗ್ವಾದದ ಹಿನ್ನಲೆಯಲ್ಲಿ ಈ ಕುರಿತ ಚರ್ಚೆಯನ್ನೂ ಮುಂದೂಡಲಾಯಿತು.


from India & World News in Kannada | VK Polls https://ift.tt/3zzWDW2

ಭಾರತ ಟೆಸ್ಟ್‌ ತಂಡದಲ್ಲಿ ರಹಾನೆ ಸ್ಥಾನ ತುಂಬಬಲ್ಲ ಟಾಪ್‌ 3 ಬ್ಯಾಟ್ಸ್‌ಮನ್‌ಗಳು!

ಬೆಂಗಳೂರು: ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಉಪನಾಯಕ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದು, ಈವರೆಗೆ 5 ಇನಿಂಗ್ಸ್‌ಗಳಿಂದ 19ರ ಸರಾಸರಿಯಲ್ಲಿ ಕೇವಲ 95 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಈ ವರ್ಷ ಆಡಿದ ಒಟ್ಟು 10 ಟೆಸ್ಟ್‌ ಪಂದ್ಯಗಳಲ್ಲಿ ರಹಾನೆ ಬ್ಯಾಟ್‌ನಿಂದ ಹೊರಬಂದಿರುವುದು ಕೇವಲ 358 ರನ್‌ಗಳು ಮಾತ್ರ. ಈ ಅವಧಿಯಲ್ಲಿ ಅವರು ಕೇವಲ 2 ಅರ್ಧಶತಕಗಳನ್ನು ಗಳಿಸಲಷ್ಟೇ ಶಕ್ತರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಹಾನೆ ಬ್ಯಾಟಿಂಗ್‌ ವೈಫಲ್ಯ ಟೀಮ್ ಇಂಡಿಯಾಗೆ ನುಂಗಲಾರದ ತುತ್ತಾಗಿದೆ. ಅಜಿಂಕ್ಯ ಬ್ಯಾಟಿಂಗ್‌ ವೈಫಲ್ಯ, ಭಾರತ ತಂಡ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 76 ರನ್‌ಗಳ ಹೀನಾಯ ಸೋಲನುಭವಿಸಲು ಪ್ರಮುಖ ಕಾರಣಗಳಲ್ಲಿ ಒಂದು. ಹೀಗಾಗಿ ಮುಂದಿನ ಪಂದ್ಯದಲ್ಲಿ ರಹಾನೆ ಕೈ ಬಿಡಬೇಕು ಎಂಬ ಕೂಗು ಜೋರಾಗುತ್ತದೆ. ಸರಣಿಯ ನಾಲ್ಕನೇ ಪಂದ್ಯ ದಿ ಓವಲ್‌ ಕ್ರೀಡಾಂಗಣದಲ್ಲಿ ಸೆ.2ರಂದು ಶುರುವಾಗಲಿದ್ದು, ಟೀಮ್ ಇಂಡಿಯಾ ಬದಲಾವಣೆ ಬಯಸಿದ್ದೇ ಆದರೆ ರಹಾನೆ ಸ್ಥಾನ ತುಂಬುವ ಸಾಮರ್ಥ್ಯ ಇರುವ ಆಟಗಾರರು ತಂಡದಲ್ಲಿ ಇದ್ದಾರೆ. ಯಾರೆಲ್ಲಾ ರಹಾನೆ ಸ್ಥಾನಕ್ಕೆ ನ್ಯಾಯ ಒದಗಿಸಬಲ್ಲರು ಎಂಬ ವಿವರ ಇಲ್ಲಿ ನೀಡಲಾಗಿದೆ. 1. ಹೈದರಾಬಾದ್‌ ಮೂಲದವರಾದ ಅನುಭವಿ ಬಲಗೈ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ಈ ಸ್ಥಾನಕ್ಕೆ ಮುಂಚೂಣಿಯಲ್ಲಿ ಇರುವ ಬ್ಯಾಟ್ಸ್‌ಮನ್‌. ರಕ್ಷಣಾತ್ಮಕ ರೀತಿಯಲ್ಲಿ ಅಗತ್ಯಕ್ಕೆ ತಕ್ಕ ಆಟವಾಡುವ ಸಾಮರ್ಥ್ಯ ಹೊಂದಿರುವ ವಿಹಾರಿ, ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭರ್ಜರಿ ಆಟವನ್ನೇ ಆಡಿದ್ದರು. ಆದರೆ ಗಾಯದ ಸಮಸ್ಯೆ ಕಾರಣ ಅವರು ತಂಡದಿಂದ ಹೊರಗುಳಿಯುವಂತ್ತಾಯಿತು. ಈಗ ಅವಕಾಶ ಸಿಕ್ಕರೆ ಮರಳಿ ಸಾಮರ್ಥ್ಯ ಸಾಬೀತು ಪಡಿಸುವ ತುಡಿತದಲ್ಲಿದ್ದಾರೆ. ಈವರೆಗೆ 12 ಪಂದ್ಯಗಳಲ್ಲಿ 624 ರನ್‌ ಗಳಿಸಿರುವ ವಿಹಾರಿ, ಕೆಳ ಕ್ರಮಾಂಕದಲ್ಲಿ ಹೆಚ್ಚು ರನ್‌ ಹೆಕ್ಕಿದ್ದಾರೆ ಎಂಬುದು ಗಮನಾರ್ಹ. ಇಂಗ್ಲೆಂಡ್‌ ನೆಲದಲ್ಲಿ ತಮ್ಮ ಚೊಚ್ಚಲ ಟೆಸ್ಟ್‌ ಅರ್ಧಶತಕ ಬಾರಿಸಿದ ಅನುಭವವೂ ಅವರಲ್ಲಿದೆ. 2. ಈಗಾಗಲೇ ಒಡಿಐ ಮತ್ತು ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿ ಸೈ ಎನಿಸಿಕೊಂಡಿರುವ ಸೂರ್ಯಕುಮಾರ್‌ ಯಾದವ್‌, ಈಗ ಟೆಸ್ಟ್‌ ಕ್ರಿಕೆಟ್‌ನಲ್ಲೂ ಅವಕಾಶ ಸಿಕ್ಕರೆ ತಮ್ಮ ಭರ್ಜರಿ ಬ್ಯಾಟಿಂಗ್‌ ಅಬಾವರಣ ಪಡಿಸಲು ಎದುರು ನೋಡುತ್ತಿದ್ದಾರೆ. ಸೂರ್ಯಕುಮಾರ್ ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ ಬಳಿಕ ಮತ್ತೊಬ್ಬ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ ರೀತಿ ಕಾಣಿಸಿಕೊಳ್ಳುವುದಂತೂ ಸಹಜ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5326 ರನ್‌ಗಳನ್ನು ಗಳಿಸಿರುವ 30 ವರ್ಷದ ಬಲಗೈ ಬ್ಯಾಟ್ಸ್‌ಮನ್‌, 14 ಶತಕ ಮತ್ತು 26 ಅರ್ಧಶತಕಗಳನ್ನು ಬಾರಿಸಿದ ಅನುಭವ ಹೊಂದಿದ್ದಾರೆ. 3. ಮಯಾಂಕ್ ಅಗರ್ವಾಲ್‌ಯುವ ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್ ಅಗರ್ವಾಲ್‌ ಅವರಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಈವರೆಗೆ ಅವಕಾಶ ಸಿಕ್ಕಿಲ್ಲ. ಕಳೆದ ಬಾರಿಯ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ಮಯಾಂಕ್ ನಾಲ್ಕನೇ ಸ್ಥಾನದಲ್ಲಿದ್ದರು. 12 ಪಂದ್ಯಗಳಲ್ಲಿ 857 ರನ್‌ಗಳಿಸಿದ್ದ ಮಯಾಂಕ್‌, ಬಳಿಕ ಆಸೀಸ್‌ ಪ್ರವಾಸದಲ್ಲಿನ ಕಳಪೆ ಪ್ರದರ್ಶನ ಕಾರಣ ಸ್ಥಾನ ಕಳೆದುಕೊಂಡರು. ಕೇವಲ ಒಂದು ಸರಣಿಯ ವೈಫಲ್ಯ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಬೀಳುವಂತೆ ಮಾಡಿದ್ದು ದುರದೃಷ್ಟವೇ ಸರಿ. ಈಗ ರಹಾನೆ ವೈಫಲ್ಯತೆ ಹಿನ್ನೆಲೆಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ತಂದರೆ ಮಯಾಂಕ್‌ಗೆ ಆರಂಭಿಕನ ಸ್ಥಾನ ನೀಡಿ ಕೆಎಲ್‌ ರಾಹುಲ್‌ಗೆ 4ನೇ ಕ್ರಮಾಂಕ ಕೊಡಬಹುದಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3BjbqFc

ರಣಜಿ ಟ್ರೋಫಿ: ಈ ಬಾರಿ ಕರ್ನಾಟಕಕ್ಕೆ ಎದುರಾಗಲಿದೆ ದೊಡ್ಡ ಸವಾಲು!

ಹೊಸದಿಲ್ಲಿ: ಕೊರೊನಾ ವೈರಸ್‌ ವ್ಯಾಪಕವಾಗಿ ಹರಡಿದ್ದರಿಂದ 2020ರ ರಣಜಿ ಟ್ರೋಫಿ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು. ಆದರೆ, 2022ರ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿಯು ಜನವರಿ 5 ರಿಂದ ಆರಂಭವಾಗಲಿದೆ. ಅಂದಹಾಗೆ, ಈ ಬಾರಿ , ಹಾಗೂ ಬಲಿಷ್ಠ ತಂಡಗಳ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ದೇಶಿ ಮಟ್ಟದಲ್ಲಿ ಈ ಮೂರು ಅತ್ಯಂತ ಬಲಿಷ್ಠ ತಂಡಗಳಾಗಿವೆ. ಈ ತಂಡಗಳ ಜೊತೆಗೆ ಹೈದರಾಬಾದ್‌, ಉತ್ತರಾಖಂಡ್‌ ಹಾಗೂ ಮಹರಾಷ್ಟ್ರ ತಂಡಗಳು ಎಲೈಟ್‌ ಗ್ರೂಪ್‌ 'ಸಿ'ಯಲ್ಲಿ ಸ್ಥಾನ ಪಡೆದಿವೆ. ಇನ್ನು ಹಾಲಿ ಚಾಂಪಿಯನ್ಸ್ ಸೌರಾಷ್ಟ್ರ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ರೈಲ್ವೇಸ್‌ ಹಾಗೂ ಗೋವಾ ತಂಡಗಳು ಎಲೈಟ್‌ 'ಡಿ' ಗುಂಪಿನಲ್ಲಿ ಸ್ಥಾನ ಪಡೆದಿವೆ. ಕಳೆದ 2019/20ರ ಆವೃತ್ತಿಯ ರಣಜಿ ಟ್ರೋಫಿ ರನ್ನರ್‌ ಅಪ್‌ ಬೆಂಗಾಲ್‌ ತಂಡ, ಈ ಬಾರಿ ರಾಜಸ್ಥಾನ್‌, ಕೇರಳ, ಹರಿಯಾಣ, ವಿದರ್ಭ ಹಾಗೂ ತ್ರಿಪುರ ಒಳಗೊಂಡ ಎಲೈಟ್‌ 'ಬಿ' ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಎಲೈಟ್‌ 'ಎ' ಗುಂಪಿನಲ್ಲಿ ಗುಜರಾಜ್‌, ಪಂಜಾಬ್‌, ಹಿಮಾಚಲ ಪ್ರದೇಶ, ಸರ್ವೀಸಸ್‌, ಮಧ್ಯಪ್ರದೇಶ, ಅಸ್ಸಾಂ ತಂಡಗಳ ಸ್ಥಾನ ಪಡೆದಿವೆ ಹಾಗೂ ಎಲೈಟ್‌ 'ಇ' ಗುಂಪಿನಲ್ಲಿ ಆಂಧ್ರ, ಉತ್ತರ ಪ್ರದೇಶ, ಬರೋಡ, ಒಡಿಶಾ, ಚತ್ತೀಸ್‌ಗಢ ಹಾಗೂ ಪಾಂಡಿಚೇರಿ ತಂಡಗಳಿವೆ. ಇನ್ನು ಪ್ಲೇಟ್‌ ಗುಂಪಿನಲ್ಲಿ ಬಿಹಾರ್‌, ಮೇಘಾಲಯಾ, ಚಂಡೀಗಢ, ನಾಗಾಲ್ಯಾಂಡ್‌, ಮಿಜೋರಾಂ, ಸಿಕ್ಕಿಂ, ಮಣಿಪುರ ಹಾಗೂ ಅರುಣಾಚಲ ಪ್ರದೇಶ ಸೇರಿದಂತೆ ಒಟ್ಟು 8 ತಂಡಗಳು ಸ್ಥಾನ ಪಡೆದಿವೆ. 2022ರ ರಣಜಿ ಟ್ರೋಫಿ ಟೂರ್ನಿಯ ಪಂದ್ಯಗಳನ್ನು ದೇಶದ ಐದು ನಗರಗಳಲ್ಲಿ ಆಯೋಜಿಸಲಾಗುತ್ತಿದೆ. ಮುಂಬೈ (ಎಲೈಟ್‌ 'ಎ'), ಬೆಂಗಳೂರು (ಎಲೈಟ್‌ 'ಬಿ'), ಬೆಂಗಳೂರು (ಎಲೈಟ್‌ 'ಸಿ'), ಅಹ್ಮದಾಬಾದ್‌ (ಎಲೈಟ್‌ 'ಡಿ'), ತ್ರಿವಂಡ್ರಮ್‌ (ಎಲೈಟ್‌ 'ಇ') ಹಾಗೂ ಚೆನ್ನೈ (ಪ್ಲೇಟ್‌) ಈ ನಗರಗಳಲ್ಲಿ ಕೋವಿಡ್-19 ಮಾರ್ಗಸೂಚಿಗಳ ಅನ್ವಯ ಪಂದ್ಯಗಳು ಜರುಗಲಿವೆ. ಅಂದಹಾಗೆ ಒಂದು ಪಂದ್ಯಕ್ಕೆ ಕನಿಷ್ಠ ಐದು ದಿನ ಅಂತರ ನೀಡಲಾಗಿದೆ. 2019/20 ರ ಆವೃತ್ತಿಯ ರಣಜಿ ಟ್ರೋಫಿ ಫೈನಲ್‌ ಪಂದ್ಯವನ್ನು ರಾಜ್‌ಕೋಟ್‌ನಲ್ಲಿ ನಡೆಸಲಾಗಿತ್ತು. ಆದರೆ, ಈ ಬಾರಿ ಫೈನಲ್‌ ಪಂದ್ಯವನ್ನು 2022ರ ಮಾರ್ಚ್‌ 16 ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲದೆ, ಈ ಮೈದಾನದಲ್ಲಿಯೇ ನಾಕೌಟ್‌ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಇದೇ ವರ್ಷ ನವೆಂಬರ್‌ 4 ರಿಂದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಚಾಂಪಿಯನ್‌ಷಿಪ್‌ ಟೂರ್ನಿಯೊಂದಿಗೆ ಭಾರತದ ಪುರುಷರ ದೇಶಿ ಕ್ರಿಕೆಟ್‌ ಟೂರ್ನಿ ಆರಂಭವಾಗಲಿದೆ. ಇದಾದ ಬಳಿಕ ಡಿಸೆಂಬರ್‌ 8 ರಿಂದ ವಿಜಯ್‌ ಹಝಾರೆ ಟ್ರೋಫಿ ಏಕದಿನ ಚಾಂಪಿಯನ್‌ಷಿಪ್‌ ಶುರುವಾಗಲಿದೆ. ರಣಜಿ ಟ್ರೋಫಿ-2022 ಗುಂಪುಗಳು ಎಲೈಟ್‌ 'ಎ' : ಗುಜರಾಜ್‌, ಪಂಜಾಬ್‌, ಹಿಮಾಚಲ ಪ್ರದೇಶ, ಸರ್ವೀಸಸ್‌, ಮಧ್ಯಪ್ರದೇಶ, ಅಸ್ಸಾಮ್‌ ಎಲೈಟ್‌ 'ಬಿ': ಬೆಂಗಾಲ್‌, ರಾಜಸ್ಥಾನ್‌, ಕೇರಳ, ಹರಿಯಾಣ, ವಿದರ್ಭ ಹಾಗೂ ತ್ರಿಪುರ ಎಲೈಟ್‌ 'ಸಿ': ಕರ್ನಾಟಕ, ಮುಂಬೈ, ದಿಲ್ಲಿ, ಹೈದರಾಬಾದ್‌, ಉತ್ತರಾಖಂಡ್‌ ಹಾಗೂ ಮಹರಾಷ್ಟ್ರಗಳು ಎಲೈಟ್‌ 'ಡಿ': ಸೌರಾಷ್ಟ್ರ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ರೈಲ್ವೇಸ್‌ ಹಾಗೂ ಗೋವಾ ಎಲೈಟ್‌ 'ಇ': ಆಂಧ್ರ, ಉತ್ತರ ಪ್ರದೇಶ, ಬರೋಡ, ಒಡಿಶಾ, ಚತ್ತೀಸ್‌ಗಢ ಹಾಗೂ ಪಾಂಡಿಚೇರಿ ಪ್ಲೇಟ್‌: ಬಿಹಾರ್‌, ಮೇಘಾಲಯಾ, ಚಂಡೀಗಢ, ನಾಗಾಲ್ಯಾಂಡ್‌, ಮಿಜೋರಾಂ, ಸಿಕ್ಕಿಂ, ಮಣಿಪುರ ಹಾಗೂ ಅರುಣಾಚಲ ಪ್ರದೇಶ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gMtAYe

ಕನಕಪುರದ ಹುಣಸನಹಳ್ಳಿ ಬಾರ್‌ ಮುಂದೆ ಬರ್ಬರ ಹತ್ಯೆ: ಎಲ್ಲಾ 6 ಆರೋಪಿಗಳ ಬಂಧನ

(): ರಾಜ್ಯದ ಗಡಿ ಭಾಗವಾದ ಹುಣಸನಹಳ್ಳಿ ಬಾರ್‌ ಮುಂದೆ ನಡೆದಿದ್ದ ಪ್ರಕರಣದ ಎಲ್ಲಾ ಆರು ಆರೋಪಿಗಳನ್ನು ಬಂಧಿಸುವಲ್ಲಿ ಕನಕಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಆನೇಕಲ್‌ ತಾಲೂಕಿನ ಲೋಕೇಶ್‌ (21) ಅಲಿಯಾಸ್‌ ಲೋಕಿ, ಶಿವಕುಮಾರ್‌ (22) , ಕಾರ್ತಿಕ್‌ (25) , ವೇಣು (29), ದಿಲೀಪ (30), ಗುರಪ್ಪ (40) ಎಂದು ಗುರುತಿಸಲಾಗಿದೆ. ತಮಿಳುನಾಡಿನ ಹುಲಿಬಂಡೆ ಗ್ರಾಮದಲ್ಲಿ ನಾಲ್ಕು ಎಕರೆ ಆಸ್ತಿ ಸಂಬಂಧ ಚಿನ್ನಸ್ವಾಮಿ ಎಂಬುವರ ಇಬ್ಬರು ಹೆಂಡತಿಯರ ಮಕ್ಕಳ ನಡುವೆ ವಿವಾದ ಉಂಟಾಗಿತ್ತು. ಚಿನ್ನಸ್ವಾಮಿ ಅವರ ಮೊದಲ ಹೆಂಡತಿ ಗುರಮ್ಮ ಅವರು ಎರಡನೇ ಹೆಂಡತಿ ಪುಟ್ಟಮ್ಮಳ ಮಗಳಾದ ನೀಲಮ್ಮನಿಗೆ 4 ಎಕರೆ ಆಸ್ತಿ ಬರೆದಿದ್ದರು. ಇದರಿಂದ ಕೆರಳಿದ್ದ ಗುರಮ್ಮನ ಮಗ ಓಬೇಗೌಡ, ನೀಲಮ್ಮನ ಮಗನಾದ ಚನ್ನಕೃಷ್ಣನ ಕೊಲೆಗೆ ಯತ್ನಿಸಿದ್ದ. ಇದರಿಂದ ಕುಪಿತಗೊಂಡ ಚನ್ನಕೃಷ್ಣ ತನಗೆ ಆಪ್ತರ ಜತೆ ಸೇರಿಕೊಂಡು ಓಬೇಗೌಡನನ್ನು ಕೊಲೆ ಮಾಡಿದ್ದರು. ಇದರಿಂದ ಕೋಪಗೊಂಡ ಓಬೇಗೌಡನ ಮಕ್ಕಳು ಚನ್ನಕೃಷ್ಣನನ್ನು ಕೊಲೆ ಮಾಡಿದ್ದರು. ಚನ್ನಕೃಷ್ಣನ ಕೊಲೆಯ ಪ್ರಮುಖ ಶಂಕರ್‌ನನ್ನು ಆಗಸ್ಟ್ 27ರಂದು ಹುಣಸನ ಹಳ್ಳಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮಿಂಚಿನ ಕಾರ್ಯಾಚರಣೆ: ಕೋಡಿಹಳ್ಳಿ ಹೋಬಳಿಯ ಹುಣಸನಹಳ್ಳಿ ಕಿಟ್ಟು ಬಾರ್‌ ಮುಂದೆ ಶಂಕರ್‌ನನ್ನು ಲಾಂಗ್‌ಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳ ಮಾಹಿತಿ ಪಡೆದ ಪೊಲೀಸರು, ಆರೋಪಿಗಳು ಪರಾರಿಯಾಗುತ್ತಿದ್ದ ವಾಹನದ ನೋಂದಣಿ ಸಂಖ್ಯೆಯನ್ನು ಸಂಗ್ರಹಿಸಿ ಎಲ್ಲಾ ಕಡೆ ನಾಕಾಬಂದಿ ಏರ್ಪಡಿಸಿದ್ದರು. ಆರೋಪಿಗಳು ಪ್ರಯಾಣಿಸುತ್ತಿದ್ದ ವಾಹನವನ್ನು ತಡೆದರು. ವಾಹನದಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಮಾರಕಾಯುಧಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇನ್ನುಳಿದ ನಾಲ್ವರು ತಲೆಮರೆಸಿಕೊಂಡಿದ್ದರು. ತನಿಖೆ ಮುಂದುವರಿಸಿದ ಪೊಲೀಸರು ಇನ್ನುಳಿದ ನಾಲ್ವರು ಆರೋಪಿಗಳನ್ನು ಎಲೆಕ್ಟ್ರಾನಿಕ್ಸ್‌ ಸಿಟಿ ಬಳಿಯಲ್ಲಿ ವಶಕ್ಕೆ ಪಡೆದರು. ಆರೋಪಿಗಳ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ರಮೇಶ್‌, ಸಿಪಿಐ ಕೃಷ್ಣ, ಕೋಡಿಹಳ್ಳಿ ಎಸ್‌ಐ ಅನಂತ್‌ರಾಮ್‌, ಗ್ರಾಮಾಂತರ ಎಸ್‌ಐ ಹೇಮಂತ್‌ಕುಮಾರ್‌ ಹಾಗು ಇನ್ನಿತರ ಸಿಬ್ಬಂದಿ ಭಾಗವಹಿಸಿದ್ದರು.


from India & World News in Kannada | VK Polls https://ift.tt/2V3ZEz2

ಕೊಹ್ಲಿ, ರೂಟ್‌ ಅಲ್ಲವೇ ಅಲ್ಲ! ಈತನೇ ವಿಶ್ವದ ಅತ್ಯುತ್ತಮ ನಾಯಕ ಎಂದ ಕನೇರಿಯಾ!

ಹೊಸದಿಲ್ಲಿ: ಪ್ರಸ್ತುತ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ನಾಯಕ ಯಾರೆಂಬ ಬಗ್ಗೆ ಈಗಾಗಲೇ ಹಲವು ಕ್ರಿಕೆಟ್‌ ಪಂಡಿತರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಪಾಕಿಸ್ತಾನದ ಮಾಜಿ ಸ್ಪಿನ್ನರ್‌ ಅವರು ಈ ಪ್ರಶ್ನೆಗೆ ತಮ್ಮದೇ ಆದ ಉತ್ತರವನ್ನು ನೀಡಿದ್ದಾರೆ. ಕಳೆದ ಜೂನ್‌ ಅಂತ್ಯದಲ್ಲಿ ನಾಯಕತ್ವದ ನ್ಯೂಜಿಲೆಂಡ್‌ ತಂಡ ಉದ್ಘಾಟನ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿತ್ತು. ಆ ಮೂಲಕ ಮೊಟ್ಟ ಮೊದಲ ಬಾರಿ ಟೆಸ್ಟ್ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಈ ಪಂದ್ಯದಲ್ಲಿ ಕೇನ್‌ ವಿಲಿಯಮ್ಸನ್‌ ಅವರ ನಾಯಕತ್ವ ಎಲ್ಲರ ಗಮನ ಸೆಳೆದಿತ್ತು. ಕ್ರಿಕ್‌ಟ್ರ್ಯಾಕರ್‌ ಜೊತೆ ಸಂಭಾಷಣೆಯಲ್ಲಿ ಪಾಕ್‌ ಸ್ಪಿನ್‌ ದಿಗ್ಗಜ ದನೀಶ್‌ ಕನೇರಿಯಾ ಅವರು ಕ್ರಿಕೆಟ್‌ನ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಪ್ರಸ್ತುತ ಯಾರೆಂಬ ಪ್ರಶ್ನೆಯನ್ನು ಅವರ ಮುಂದೆ ಇಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪಾಕ್‌ ಮಾಜಿ ಸ್ಪಿನ್ನರ್‌, ಟೀಮ್‌ ಇಂಡಿಯಾ ನಾಯಕ ಬದಲು, ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಅವರನ್ನು ಆಯ್ಕೆ ಮಾಡಿಕೊಂಡರು. ಪ್ರಸ್ತುತ ಆಧುನಿಕ ಕ್ರಿಕೆಟ್‌ನ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ವಿರಾಟ್‌ ಕೊಹ್ಲಿ ಕೂಡ ಇದ್ದಾರೆ. ಆದರೆ, ಟೀಮ್‌ ಇಂಡಿಯಾ ನಾಯಕನಾಗಿ ಅವರು ಇದುವರೆಗೂ ಐಸಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿಲ್ಲ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲು ಅನುಭವಿಸಿತ್ತು. ನಂತರ, 2019ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತಿತ್ತು. ಇನ್ನ ಕಳೆದ ಜೂನ್‌ ತಿಂಗಳ ಅಂತ್ಯದಲ್ಲಿ ನ್ಯೂಜೆಲೆಂಡ್‌ ವಿರುದ್ಧವೇ ಭಾರತ ತಂಡ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಪರಾಭವಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕೊಹ್ಲಿ ನಾಯಕತ್ವದ ಬಗ್ಗೆ ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ವಿರಾಟ್‌ ಕೊಹ್ಲಿ ಬಗ್ಗೆ ಕೇಳಿದ ಪ್ರಶ್ನೆಗೆ ಕನೇರಿಯಾ, "ಆಕ್ರಮಣಕಾರಿ ಹಾಗೂ ಸೋಲಿನ ಬಗ್ಗೆ ಭಯವೇ ಇಲ್ಲ," ಎಂದು ಹೇಳಿದರು. ವಿರಾಟ್‌ ಕೊಹ್ಲಿ ಏಷ್ಯಾದ ವಿಶಿಷ್ಠ ಆಟಗಾರ: ಆಕಿಬ್‌ ಜಾವೇದ್‌ ಇಂಗ್ಲೆಂಡ್‌ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿಯ ವೈಫಲ್ಯದ ಬಗ್ಗೆ ಇದೀಗ ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆಡಿರುವ ಮೂರು ಪಂದ್ಯಗಳಿಂದ ವಿರಾಟ್‌ ಗಳಿಸಿರುವುದು ಒಂದೇ ಒಂದು ಅರ್ಧಶತಕ ಮಾತ್ರ. ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಆಕಿಬ್‌ ಜಾವೇದ್‌, ವಿರಾಟ್‌ ಕೊಹ್ಲಿಯ ಬ್ಯಾಟಿಂಗ್‌ ತಂತ್ರವನ್ನು ಚಲಿಸುವ ಚೆಂಡು ಹೇಗೆ ದುರ್ಬಲಗೊಳಿಸುತ್ತಿದೆ ಎಂಬ ಅಂಶದ ಮೇಲೆ ಬೆಳಕು ಚೆಲ್ಲಿದ್ದಾರೆ. "ಏಷ್ಯಾದ ಅತ್ಯಂತ ವಿಶಿಷ್ಠ ಆಟಗಾರ ವಿರಾಟ್‌ ಕೊಹ್ಲಿ ಹಾಗೂ ಅವರು ಆಸ್ಟ್ರೇಲಿಯಾ ನೆಲದಲ್ಲಿಯೂ ಯಶಸ್ವಿಯಾಗಬಲ್ಲರು. ಆದರೆ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಅಥವಾ ಸ್ವಿಂಗ್‌ ಆಗುವ ಯಾವುದೇ ಪರಿಸ್ಥಿತಿಗಳಲ್ಲಿ ಕೊಹ್ಲಿ ಸಮಸ್ಯೆ ಎದುರಿಸುತ್ತಾರೆ. ಔಟ್‌ ಸ್ವಿಂಗ್‌ ಎಸೆತಗಳನ್ನು ಅವರು ಚೇಸ್‌ ಮಾಡಲು ಪ್ರಯತ್ನಿಸುತ್ತಾರೆ. ಈ ಕಾರಣದಿಂದಲೇ ಅವರು ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ," ಎಂದು ಜಾವೇದ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿರುವ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು, ಸೆ.2 ರಿಂದ ಲಂಡನ್‌ನ ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ನಾಲ್ಕನೇ ಟೆಸ್ಟ್‌ನಲ್ಲಿ ಕಾದಾಟ ನಡೆಸಲಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/38u0AQq

ಕೆಂಗೇರಿ-ಉತ್ತರಹಳ್ಳಿ ಮುಖ್ಯರಸ್ತೆಗೆ ನಾಲ್ಕು ಪಥದ ಮೆರುಗು: ಟ್ರಾಫಿಕ್ ಸಮಸ್ಯೆಗೆ ಪರಿಹಾರ..!

(): ಒಂದೂವರೆ ದಶಕದಿಂದ ನನೆಗುದಿಗೆ ಬಿದ್ದಿದ್ದ ಕೆಂಗೇರಿ-ಉತ್ತರಹಳ್ಳಿ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಗೆ ಕೊನೆಗೂ ಚಾಲನೆ ಸಿಕ್ಕಿದೆ. ವಿಸ್ತರಣೆ ಬಳಿಕ ಟ್ರಾಫಿಕ್‌ ಜಾಮ್‌ಗೆ ಪರಿಹಾರ ಸಿಗುವ ನಿರೀಕ್ಷೆ ಮೂಡಿದೆ. ಹಲವೆಡೆಗೆ ಸಂಪರ್ಕ ಸುಲಭವಾಗಲಿದೆ. ಬಿಬಿಎಂಪಿ ಬೃಹತ್‌ ರಸ್ತೆ ಕಾಮಗಾರಿ ವಿಭಾಗದ ವತಿಯಿಂದ 51 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕೆಂಗೇರಿ ರಸ್ತೆಯ ಕೃಷ್ಣಪ್ರಿಯ ಕನ್ವೆನ್ಷನ್‌ ಹಾಲ್‌ನಿಂದ ಆದಿತ್ಯ ಬೇಕರಿವರೆಗಿನ 3.5 ಕಿ.ಲೋ ಮೀಟರ್‌ ಉದ್ದ ರಸ್ತೆ ವಿಸ್ತರಣೆಯಾಗಲಿದೆ. 4 ಪಥದ ರಸ್ತೆ ನಿರ್ಮಾಣ: ಪ್ರಸ್ತುತ ರಸ್ತೆ 7 ಮೀಟರ್‌ನಿಂದ 15 ಮೀಟರ್‌ ಅಗಲವಿದೆ. ಇದನ್ನು 24 ಮೀಟರ್‌ ಅಗಲಗೊಳಿಸಲು ಉದ್ದೇಶಿಸಲಾಗಿದೆ. 4 ಪಥದ ರಸ್ತೆ ನಿರ್ಮಿಸುತ್ತಿದ್ದು, ಎರಡೂ ಬದಿ 3 ಮೀಟರ್‌ನ ಫುಟ್‌ಪಾತ್‌ ನಿರ್ಮಾಣವಾಗಲಿದೆ. ರಸ್ತೆ ವಿಸ್ತರಣೆಗೆ ಒಟ್ಟು 23,412.55 ಚದರ ಮೀಟರ್‌ ಭೂಮಿ ಅಗತ್ಯವಿದೆ. ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಕೆಲ ಆಸ್ತಿಗಳಿಗೆ ಪರಿಹಾರ ಕೊಡುವುದು ಬಾಕಿ ಇದೆ. ಒಂದು ವರ್ಷ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ವಾಹನ ದಟ್ಟಣೆ ಏಕೆ ?: ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಬಿಡದಿ, ಕುಂಬಳಗೋಡು, ರಾಮೋಹಳ್ಳಿ ಕಡೆಯಿಂದ ಬನಶಂಕರಿ, ಹೊಸಕೆರೆಹಳ್ಳಿ, ಹನುಮಂತನಗರ, ರಾಜರಾಜೇಶ್ವರಿ ನಗರಕ್ಕೆ ತೆರಳಲು ಈ ರಸ್ತೆ ಬಳಕೆಯಾಗುತ್ತದೆ. ಕೆಂಗೇರಿ, ಕೆಂಗೇರಿ ಉಪನಗರ, ನಾಗದೇವನಹಳ್ಳಿ, ದುಬಾಸಿ ಪಾಳ್ಯ ನಾಗರಿಕರು ಇದೇ ರಸ್ತೆಯನ್ನು ಬಳಸುತ್ತಾರೆ. ಜೆಎಸ್‌ಎಸ್‌ ತಾಂತ್ರಿಕ ಮಹಾವಿದ್ಯಾಲಯ, ಬಿಜಿಎಸ್‌ ಶಿಕ್ಷಣ ಸಮೂಹ ಸಂಸ್ಥೆಯ ಶಿಕ್ಷಣ ಸಂಸ್ಥೆಗಳು, ಅಭಿಮಾನ್‌ ಸ್ಟುಡಿಯೋ, ಓಂಕಾರ್‌ ಧಾರ್ಮಿಕ ಕೇಂದ್ರ, ಗ್ಲೋಬಲ್‌ ಸಿಟಿ ಟೆಕ್‌ ಪಾರ್ಕ್ ಈ ರಸ್ತೆಗೆ ಹೊಂದಿಕೊಂಡೇ ಇವೆ. ಇದರಿಂದಾಗಿ ಸದಾ ದಟ್ಟಣೆ ಇರುತ್ತದೆ. 'ಕೆಂಗೇರಿ ಉತ್ತರಹಳ್ಳಿ ಮುಖ್ಯರಸ್ತೆಯ ಅಲ್ಲಲ್ಲಿ ಹೊಂಡ ಬಿದ್ದಿದೆ. ಜತೆಗೆ ಟ್ರಾಪಿಕ್‌ ಜಾಮ್‌ ಕಿರಿಕಿರಿ ಮಾಮೂಲಾಗಿದೆ. ರಸ್ತೆ ವಿಸ್ತರಣೆ ಜತೆಗೆ ಅಭಿವೃದ್ಧಿಯಾದರೆ ವಾಹನ ಸವಾರರಿಗೆ ಅನುಕೂಲವಾಗಲಿದೆ' ಎನ್ನುತ್ತಾರೆ, ಆಟೋ ಚಾಲಕ ಆಂಜನಪ್ಪ. 'ಈ ರಸ್ತೆಯಲ್ಲಿ ಹಲವು ಶಾಲಾ-ಕಾಲೇಜುಗಳಿವೆ. ಬೆಳಗ್ಗೆ ಪೀಕ್‌ ಅವರ್‌ನಲ್ಲಂತೂ ಕಾಲೇಜು ತಲುಪುವುದೇ ಕಷ್ಟ ಎಂಬಂತಾಗುತ್ತದೆ. ಕಿರಿದಾದ ರಸ್ತೆಯಿಂದಾಗಿ ಟ್ರಾಫಿಕ್‌ ಜಾಮ್‌ ಮಾಮೂಲಿಯಂತಾಗಿದೆ' ಎನ್ನುತ್ತಾರೆ, ಜೆಎಸ್‌ಎಸ್‌ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿ ಗೌತಮ್‌. ಪರಿಹಾರ ನಿರೀಕ್ಷೆ: ಕೆಂಗೇರಿ - ಉತ್ತರಹಳ್ಳಿ ರಸ್ತೆ ವಿಸ್ತರಣೆಗೆ 2007ರಲ್ಲಿಯೇ ಯೋಜನೆ ಸಿದ್ದಪಡಿಸಲಾಗಿತ್ತು. ರಸ್ತೆಗೆ ಹೊಂದಿಕೊಂಡಿರುವ ನಿವೇಶನ ಮಾಲೀಕರಿಗೆ 18 ಅಡಿಗಳಷ್ಟು ಜಾಗವನ್ನು ರಸ್ತೆ ವಿಸ್ತರಣೆಗೆ ಬಿಟ್ಟು ಕಟ್ಟಡ ನಿರ್ಮಿಸಿಕೊಳ್ಳುವಂತೆ ಬಿಬಿಎಂಪಿ ನೋಟೀಸ್‌ ನೀಡಿತ್ತು. ಕಾನೂನು ಸಮಸ್ಯೆ ಮತ್ತು ಕೆಲವು ತಾಂತ್ರಿಕ ಅಡಚಣೆಯಿಂದ ಕಾಮಗಾರಿಗೆ ಗ್ರಹಣ ಹಿಡಿದಿತ್ತು. ರಸ್ತೆ ವಿಸ್ತರಣೆ ಸಂಬಂಧ ನೋಟಿಸ್‌ ಪಡೆದಿದ್ದ ಮಾಲೀಕರು, ಇತ್ತ ಕಟ್ಟಡ ನಿರ್ಮಿಸಲೂ ಆಗದೆ, ಮಾರಾಟ ಮಾಡಲೂ ಆಗದೆ ಗೊಂದಲಕ್ಕೆ ಸಿಲುಕಿದ್ದರು. ಪರಿಹಾರ ವಿತರಣೆ ಕಾರ್ಯವೂ ವಿಳಂಬವಾಗಿತ್ತು. ಇದೀಗ ಕಾಮಗಾರಿಗೆ ಚಾಲನೆ ಸಿಕ್ಕಿರುವುದರಿಂದ ಗೊಂದಲಕ್ಕೆ ತೆರೆ ಬಿದ್ದಿದೆ. ಆ ಮೂಲಕ ಜಾಗದ ಮಾಲೀಕರು ನಿರಾಳರಾಗುವಂತಾಗಿದೆ. 'ರಸ್ತೆಗೆ ಹೊಂದಿಕೊಂಡಂತೆ ನಮ್ಮ ನಿವೇಶನವಿದೆ. ಕಟ್ಟಡ ನಿರ್ಮಿಸಲೂ ಆಗದೆ, ಮಾರಾಟ ಮಾಡಲೂ ಆಗದೆ ಗೊಂದಲಕ್ಕೆ ಸಿಲುಕಿದ್ದೆವು. ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದೇವೆ. ಇದೀಗ ಕಾಮಗಾರಿಗೆ ಚಾಲನೆ ಸಿಕ್ಕಿರುವುದರಿಂದ ಶೀಘ್ರ ಪರಿಹಾರ ಸಿಗುವ ನಿರೀಕ್ಷೆ ಇದೆ' ಎಂದು ನಿವೇಶನದ ಮಾಲೀಕ ಮುರುಗೇಶ್‌ ಹೇಳಿದರು. ಕಾಮಗಾರಿಗೆ ಶಂಕುಸ್ಥಾಪನೆ: ಕೆಂಗೇರಿ-ಉತ್ತರಹಳ್ಳಿ ಮುಖ್ಯರಸ್ತೆ ವಿಸ್ತರಣೆ, ಡಾಂಬರೀಕರಣ ಮತ್ತು ಅಗತ್ಯ ಅಭಿವೃದ್ಧಿ ಕಾಮಗಾರಿಗೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಸಹಕಾರ ಸಚಿವ ಎಸ್‌ .ಟಿ.ಸೋಮಶೇಖರ್‌ ಮಾತನಾಡಿ, 'ಕೇತ್ರ ವ್ಯಾಪ್ತಿಯ 110 ಹಳ್ಳಿಗಳ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ ಬಿಡುಗಡೆಯಾಗಿರುವುದರಿಂದ ಅಭಿವೃದ್ಧಿ ಕಾಮಗಾರಿ ವೇಗ ಸಿಗಲಿದೆ. ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ' ಎಂದರು. ಬಿಬಿಎಂಪಿ ಹೆಮ್ಮಿಗೆಪುರ ವಾರ್ಡ್‌ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್‌ ಮಾತನಾಡಿ, 'ರಸ್ತೆ ವಿಸ್ತರಣೆಯಿಂದ ಸಂಚಾರ ದಟ್ಟಣೆ ಪರಿಹಾರ ಸಿಗಲಿದೆ' ಎಂದರು.


from India & World News in Kannada | VK Polls https://ift.tt/3DznrIo

ಹುಬ್ಬಳ್ಳಿ, ಧಾರವಾಡದ ಅಭಿವೃದ್ಧಿ ಕಾಮಗಾರಿಗಳಿಗೆ ಮುನ್ನುಡಿ ಬರೆದಿದ್ದೇ ಬಿಜೆಪಿ; ನಳಿನ್ ಕಟೀಲ್

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಸಕ್ತ ವರ್ಷ 60 ರಿಂದ 62 ಸೀಟುಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್‌ಕುಮಾರ ಕಟೀಲ್ ಹೇಳಿದರು. ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ, ಕಲಬುರ್ಗಿ ಹಾಗೂ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ. ಮೂರೂ ಜಿಲ್ಲೆಗಳಲ್ಲಿ ನಾನು ಪ್ರವಾಸ ಮಾಡಿದ್ದೇನೆ. ಬೆಳಗಾವಿಯಲ್ಲಿ ಪ್ರಸಕ್ತ ವರ್ಷ ಪಾರ್ಟಿ ಚಿನ್ಹೆ ಆಧಾರದ ಮೇಲೆ ಮತದಾನ ನಡೆಯಲಿದೆ ಎಂದರು. ಅಲ್ಲದೇ ಹುಬ್ಬಳ್ಳಿ, ಧಾರವಾಡ ಪಾಲಿಕೆಯಲ್ಲಿ ಹತ್ತು ವರ್ಷ ಬಿಜೆಪಿ ಅಧಿಕಾರ ನಡೆಸಿದೆ. ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಮುನ್ನುಡಿ ಬರೆದಿದ್ದೇ ಬಿಜೆಪಿ. ಸ್ಮಾರ್ಟ್ ಸಿಟಿ ಯೋಜನೆ, ಅಮೃತ ಯೋಜನೆ, ಮನೆ ಮನೆಗೆ ಗಂಗೆ, ಮನೆ ಮನೆಗೆ ಗ್ಯಾಸ್ ಯೋಜನೆ ಸೇರಿದಂತೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಅವಳಿ ನಗರಕ್ಕೆ ಸಾಕಷ್ಟು ಅನುದಾನ ತಂದು ಕೆಲಸ ಮಾಡಲಾಗಿದೆ. ಮನೆ, ಮನೆಗೆ ಮಹಾನಗರ ಪಾಲಿಕೆ ಎಂಬ ಧ್ಯೆಯೋದ್ದೇಶ ಇಟ್ಟುಕೊಂಡು ನಾವು ಚುನಾವಣೆಗೆ ಇಳಿದಿದ್ದೇವೆ ಎಂದರು. ಇಲ್ಲಿನ ಸ್ಥಳೀಯ ಮಾಜಿ ಮುಖ್ಯಮಂತ್ರಿಗಳಾದಂತಹ ಜಗದೀಶ ಶೆಟ್ಟರ್, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ ಅವರು, ಸಾಕಷ್ಟು ಅನುದಾನ ತಂದು ವಾರ್ಡ್‌ಗಳ ಅಭಿವೃದ್ಧಿ, ನಗರ ಸೌಂದರ್ಯೀಕರಣ ಮಾಡಿದ್ದಾರೆ. ಹೀಗಾಗಿ ಪ್ರಸಕ್ತ ವರ್ಷ ಕೂಡ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮುಂದಿನ ಐದು ವರ್ಷಗಳ ಕಾಲ ಅವಳಿ ನಗರ ಸ್ಮಾರ್ಟ್‌ ನಗರಗಳಾಗಿ ಬೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ನೆನೆಗುದಿಗೆ ಬಿದ್ದ ಎಲ್ಲಾ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಪೂರ್ಣಗೊಳ್ಳಲಿವೆ ಎಂದರು. ಜೊತೆಗೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂಬುದು ಜನರ ಕೂಗು ನಮ್ಮ ಕೂಗಲ್ಲ. ಅವಳಿ ಮಕ್ಕಳನ್ನು ನಾವು ಬೇರೆ ಮಾಡಿದಂತಾಗುತ್ತದೆ. ಜನರ ಅಭಿಪ್ರಾಯದ ಮೇರೆಗೆ ಪ್ರತ್ಯೇಕ ಮಹಾನಗರ ಪಾಲಿಕೆ ಬಗ್ಗೆ ನಾವು ಮುಂದುವರೆಯುತ್ತೇವೆ ಎಂದರು. ಈ ವೇಳೆ ಶಾಸಕ ಅಮೃತ ದೇಸಾಯಿ, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ತವನಪ್ಪ ಅಷ್ಟಗಿ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿದ್ದರು. ರಾಜ್ಯದಲ್ಲಿ ರಂಗೇರಿದ್ದು, ಹುಬ್ಬಳ್ಳಿ - ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಈಗಾಗಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ ಆದಿಯಾಗಿ ಎಲ್ಲರೂ ಮಹಾನಗರ ಪಾಲಿಕೆಯಲ್ಲಿ ಅಧಿಕಾರಕ್ಕೆ ಏರಲು ಇನ್ನಿಲ್ಲದ ಪ್ರಯತ್ನ ನಡೆಸಿದದ್ದು, ಮತದಾರರನ್ನು ಮನವೊಲಿಸಲು ಪಕ್ಷಗಳು ಮತ್ತು ಅಭ್ಯರ್ಥಿಗಳು ಮುಂದಾಗಿದ್ದಾರೆ.


from India & World News in Kannada | VK Polls https://ift.tt/3DvobOJ

ಈ ಬಾರಿ ಮೈಸೂರಿನಲ್ಲಿ ಅದ್ದೂರಿ ಜಂಬೂ ಸವಾರಿ..? ಶುಕ್ರವಾರದ ಸಭೆಯಲ್ಲಿ ನಿರ್ಧಾರ ಅಂದ್ರು ಎಸ್‌. ಟಿ. ಸೋಮಶೇಖರ್

: ಮಹಾಮಾರಿ ಕೊರೊನಾ ಆರ್ಭಟ ಕಡಿಮೆಯಾಗಿರುವ ಬೆನ್ನಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಹಬ್ಬದ ಆಚರಣೆಗೆ ಸಿದ್ಧತೆ ನಡೆಯುತ್ತಿದ್ದು, ಈ ಸಂಬಂಧ ಸೆಪ್ಟೆಂಬರ್ 3ರಂದು ಉನ್ನತ ಮಟ್ಟದ ಸಮಿತಿ‌ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ತಿಳಿಸಿದರು. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿಮಿತ್ತ ಮೈಸೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2021ರ ಮೈಸೂರು ದಸರಾ ಹಿನ್ನಲೆಯಲ್ಲಿ ಸೆಪ್ಟೆಂಬರ್ 3ರಂದು ಬೆಂಗಳೂರಿನಲ್ಲಿ ಹೈ ಪವರ್ ಕಮಿಟಿಯ ಮೊದಲ ಸಭೆ ನಡೆಯಲಿದೆ. ಇದಾದ ಬಳಿಕ ಸೆಪ್ಟೆಂಬರ್ 8ರಂದು ಮೈಸೂರಿನಲ್ಲಿ ಅದರ ಮುಂದುವರಿದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ದಸರಾದ ಪ್ರಮುಖ ರೂಪುರೇಷಗಳನ್ನು ಸಿದ್ದ ಮಾಡುತ್ತೇವೆ ಎಂದು ಸಚಿವ ಸೋಮಶೇಖರ್ ಹೇಳಿದರು. ಕಠಿಣ ಕ್ರಮಗಳು ಅನಿವಾರ್ಯ: ಇದೇ ವೇಳೆ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ತಮಿಳುನಾಡು ಮೂಲದ ಆರೋಪಿಗಳಿಗೆ ಗ್ಯಾಂಗ್‌ ರೇಪ್ ಅಂತಹ ಕೃತ್ಯವೆಸಗಲು ಮೈಸೂರು ಕೇಂದ್ರ ಸ್ಥಾನ ಎಂಬ ಮಾಹಿತಿ ಲಭಿಸಿರುವುದು ನಿಜಕ್ಕೂ ಆತಂಕದ ಸಂಗತಿ. ‌ಹೀಗಾಗಿ ಇದನ್ನ ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಎಂದರು. ತಮಿಳುನಾಡಿನ ಪುಂಡ‌ ಪೋಕರಿಗಳು ಇಷ್ಟು ಸುಲಭವಾಗಿ ಮೈಸೂರಿಗೆ ಬಂದು ಕ್ರೈಂ ಮಾಡಿ ಹೋಗ್ತಾರೆ ಏನರ್ಥ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಕಠಿಣ ಕ್ರಮಗಳು ಅನಿವಾರ್ಯವಾಗಿದ್ದು, ಇವೆಲ್ಲದರ ಬಗ್ಗೆ ಪೊಲೀಸರ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ, ಅಪರಾಧ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು. ತಲೆದಂಡದಿಂದ ಪೊಲೀಸರು ಬಚಾವ್?: ಇನ್ನು ಗ್ಯಾಂಗ್ ರೇಪ್ ಸೇರಿದಂತೆ ಮೈಸೂರಿನಲ್ಲಿ ಇನ್ನಿತರ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆದ ಹಿನ್ನೆಲೆಯಲ್ಲಿ ಮೈಸೂರಿನ ಹಿರಿಯ ಪೊಲೀಸ್ ಅಧಿಕಾರಿಗಳ ತಲೆದಂಡವಾಗಲಿದೆಯೇ ಎಂಬ ಪ್ರಶ್ನೆ ಮೂಡಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್, ಸದ್ಯಕ್ಕೆ ಯಾರ ತಲೆದಂಡವೂ ಇಲ್ಲ ಎಂದಿದ್ದಾರೆ. ಮೈಸೂರು ಪೋಲಿಸರು ಗ್ಯಾಂಗ್ ರೇಪ್ ಪ್ರಕರಣವನ್ನು ಬಹುಬೇಗ ಭೇದಿಸಿದ್ದಾರೆ. ಹೀಗಾಗಿ ತಲೆದಂಡದ ಅವಶ್ಯಕತೆ ಇಲ್ಲ. ಆದರೆ ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಕಠಿಣ ಕ್ರಮ ವಹಿಸಲು ಸೂಚಿಸುತ್ತೇನೆ ಎಂದ ಅವರು, ಮುಂದಿನ ದಿನಗಳಲ್ಲೂ ಇಂತಹ ಪ್ರಕರಣ ನಡೆದರೆ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.


from India & World News in Kannada | VK Polls https://ift.tt/38qtsc7

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನಾಗರತ್ನ ಅವರ ಕುರಿತಾದ ಒಂದಿಷ್ಟು ಇಂಟರೆಸ್ಟಿಂಗ್ ಸಂಗತಿಗಳು..!

: ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ ಮುಖ್ಯ ಆಗಲಿರುವ ನ್ಯಾಯಮೂರ್ತಿ ಬಿ. ವಿ. ಅವರು, ತಮ್ಮ ಜೀವನವನ್ನು ಕಳೆದಿದ್ದು, ದಿಲ್ಲಿಯಲ್ಲಿ. ಅವರ ತಂದೆ ಇ. ಎಸ್. ವೆಂಕಟರಾಮಯ್ಯ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿದ್ದ ಕಾಲದಲ್ಲಿ ನಾಗರತ್ನ ಅವರು ತಮ್ಮ ಬಾಲ್ಯ ಜೀವನವನ್ನು ದಿಲ್ಲಿಯಲ್ಲೇ ಕಳೆದಿದ್ದರು. ವಿಶೇಷ ಎಂದರೆ, ನಾಗರತ್ನ ಅವರನ್ನು ಅಂದು ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದ ವ್ಯಕ್ತಿ, ಇಂದು ಸುಪ್ರೀಂ ಕೋರ್ಟ್‌ನ ಹಿರಿಯ ಅಧಿಕಾರಿ..! ಕಳೆದ ವಾರ ಕರ್ನಾಟಕ ಹೈಕೋರ್ಟ್‌ನಿಂದ ಬೀಳ್ಕೊಡುಗೆ ಸ್ವೀಕರಿಸಿದ ಬಳಿಕ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದ ನಾಗರತ್ನ ಅವರು, ದಿಲ್ಲಿಯಲ್ಲಿ ತಾವು ಕಳೆದ ಬಾಲ್ಯದ ನೆನಪು ಮಾಡಿಕೊಂಡಿದ್ದರು. ಕರ್ನಾಟಕದ ಮೂಲದ ಮೊದಲ ನ್ಯಾಯಮೂರ್ತಿಗಳಾಗಿರುವ ನಾಗರತ್ನ ಅವರು, ಕರ್ನಾಟಕ ಹೈಕೋರ್ಟ್‌ನಲ್ಲಿ ಬಹುಕಾಲ ಸೇವೆ ಸಲ್ಲಿಸಿದ ನ್ಯಾಯಾಧೀಶರಾಗಿಯೂ ಗುರ್ತಿಸಿಕೊಂಡಿದ್ದಾರೆ. ಕರ್ನಾಟಕ ಹೈಕೋರ್ಟ್‌ಗೆ ವಿದಾಯ ಹೇಳುವಾಗ ನಾಗರತ್ನ ಅವರು ಭಾವುಕರಾಗಿ ತಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡಿದ್ದರು. ಸೋಫಿಯಾ ಹೈಸ್ಕೂಲ್‌ನ ಶಿಕ್ಷಕರು ತಮಗೆ ಹೇಳಿಕೊಟ್ಟ ಶಿಸ್ತಿನ ಪಾಠಗಳನ್ನು ನ್ಯಾಯಮೂರ್ತಿ ನಾಗರತ್ನ ಅವರು ನೆನಪು ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ದಿಲ್ಲಿಯ ಭಾರತೀಯ ವಿದ್ಯಾ ಭವನದಲ್ಲಿ ತಾವು ದೇಶದ ಸಾಂಸ್ಕೃತಿಕ ವಿವಿಧತೆಯನ್ನು ಕಂಡ ಬಗೆಯನ್ನು ವಿವರಿಸಿದರು. ದೇಶದ ಕಲೆ, ಸಂಸ್ಕೃತಿ, ಇತಿಹಾಸ ಹಾಗೂ ಭವ್ಯತೆ ವಿವರಿಸಿದ್ದ ನಾಗರತ್ನ ಅವರು, ತಾವು ಈ ದೇಶದ ಜನರಿಗೆ ಚಿರಋಣಿ ಎಂದಿದ್ದರು. ಅಚ್ಚರಿಯ ವಿಷಯವೆಂದರೆ, ದಿಲ್ಲಿಯ ಭಾರತೀಯ ವಿದ್ಯಾಭವನಕ್ಕೆ ನ್ಯಾಯಮೂರ್ತಿ ನಾಗರತ್ನ ಅವರನ್ನು ನೋಂದಣಿ ಮಾಡುವಲ್ಲಿ ಸುಪ್ರೀಂ ಕೋರ್ಟ್‌ನ ನೌಕರರೊಬ್ಬರು ಮುಖ್ಯ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ, ನಾಗರತ್ನ ಅವರನ್ನು ಪ್ರತಿದಿನ ಅವರೇ ಶಾಲೆಗೆ ಕರೆದೊಯ್ದು, ಸಂಜೆ ವಾಪಸ್ ಕರೆತರುತ್ತಿದ್ದರಂತೆ. ಇದೀಗ ಅದೇ ವ್ಯಕ್ತಿ ಸುಪ್ರೀಂ ಕೋರ್ಟ್‌ನ ಹಿರಿಯ ರಿಜಿಸ್ಟ್ರಾರ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಾವು ಶಾಲೆಗೆ ಕರೆದೊಯ್ಯುತ್ತಿದ್ದ ಬಾಲಕಿಯೇ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ..! ಅವರ ಕೈಕೆಳಗೆ ಕೆಲಸ ಮಾಡುವ ಸಾರ್ಥಕ ಭಾವ ಅವರ ಮನದಲ್ಲಿ ಇರಬಹುದೇ..! ಇದೀಗ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿರುವ ನಾಗರತ್ನ ಅವರು, ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. 2027ರಲ್ಲಿ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆಯಲಿದ್ದಾರೆ. ನ್ಯಾಯಮೂರ್ತಿ ನಾಗರತ್ನ ಅವರ ತಂದೆ ನ್ಯಾ. ವೆಂಕಟರಾಮಯ್ಯ ಅವರೂ 1989ರಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗಿದ್ದರು. ನ್ಯಾಯಮೂರ್ತಿ ನಾಗರತ್ನ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗುವುದರೊಂದಿಗೆ ತಂದೆ-ಮಗಳು ಇಬ್ಬರೂ ಮುಖ್ಯ ನ್ಯಾಯಮೂರ್ತಿ ಆದ ದಾಖಲೆ ನಿರ್ಮಾಣವಾಗಲಿದೆ. ಜೊತೆಯಲ್ಲೇ ಈಗಾಗಲೇ ತಂದೆ-ಮಗಳು ಇಬ್ಬರೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ ದಾಖಲೆ ಸೃಷ್ಟಿಯಾಗಿ ಹೋಗಿದೆ..!


from India & World News in Kannada | VK Polls https://ift.tt/2WDlASl

Tokyo Paralympics: ಭಾರತದ ಸಿಂಗರಾಜ್‌ಗೆ ಕಂಚಿನ ಪದಕ!

ಟೋಕಿಯೋ: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಪಿ1 ಪುರುಷರ 10ಮೀಟರ್‌ ಏರ್‌ ಪಿಸ್ತೂಲ್‌ ಎಸ್‌ಎಚ್‌1 ವಿಭಾಗದ ಫೈನಲ್‌ನಲ್ಲಿ ಭಾರತದ ಶೂಟರ್‌ ಸಿಂಗ್‌ರಾಜ್‌ ಅದಾನ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಮಂಗಳವಾರ ಅಸಾಕ ಶೂಟಿಂಗ್‌ ರೇಂಜ್‌ನಲ್ಲಿ ನಡೆದಿದ್ದ ಅಂತಿಮ ಸುತ್ತಿನಲ್ಲಿ 216 .8 ಅಂಕಗಳನ್ನು ಕಲೆ ಹಾಕುವ ಮೂಲಕ ಸಿಂಗರಾಜ್‌ ಕಂಚಿನ ಪದಕವನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಆ ಮೂಲಕ ಭಾರತದ ಪದಕಗಳ ಪಟ್ಟಿಯಲ್ಲಿ ಒಟ್ಟು ಎಂಟು ಪದಕ ಸೇರಿದಂತಾಗಿದೆ. ಇದರೊಂದಿಗೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲಿಯೇ ಭಾರತ ಗೆದ್ದ ಅತಿ ಹೆಚ್ಚು ಪದಕಗಳು ಇವಾಗಿವೆ. ಚೀನಾದ ಹಾಲಿ ಚಾಂಪಿಯನ್‌ ಚಾವೊ ಯಂಗ್‌ ಅವರು 237.9 ಪಾಯಿಂಟ್ಸ್‌ಗಳೊಂದಿಗೆ ಅಗ್ರ ಸ್ಥಾನ ಪಡೆದರು. ಆ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಅಂತಿಮ ಸುತ್ತಿನಲ್ಲಿ ಎರಡನೇ ಶ್ರೇಷ್ಠ ಪ್ರದರ್ಶನ ತೋರಿದ ಚೀನಾದ ಮತ್ತೊಬ್ಬ ಶೂಟರ್‌ ಹುವಾಂಗ್ ಕ್ಸಿಂಗ್ 237.5 ಅಂಕಗಳೊಂದಿಗೆ ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ಸಿಂಗರಾಜ್‌ ಜೊತೆ ಫೈನಲ್‌ ಸುತ್ತಿನಲ್ಲಿ ಕಾಣಿಸಿಕೊಂಡಿದ್ದ ಮನೀಶ್‌ ನರ್ವಾಲ್‌ ಅವರು 7ನೇ ಸ್ಥಾನ ಪಡೆಯುವ ಮೂಲಕ ಪದಕ ವಂಚಿತರಾದರು. ಪ್ರಸಕ್ತ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಶೂಟಿಂಗ್‌ ವಿಭಾಗದಲ್ಲಿ ಭಾರತಕ್ಕೆ ಒಟ್ಟು ಎರಡು ಪದಕಗಳು ಬಂದಂತಾಗಿವೆ. ಇದಕ್ಕೂ ಮುನ್ನ ಸೋಮವಾರ ಭಾರತದ 19ರ ಪ್ರಾಯದ ಅವನಿ ಲೆಖಾರಾ ಅವರು ಮಹಿಳೆಯರ 10 ಮೀಟರ್‌ ಏರ್‌ ರೈಫಲ್‌ ಸ್ಟ್ಯಾಂಡಿಂಗ್‌ ಎಸ್‌ಎಚ್‌1 ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ದಾಖಲೆಗೆ ಅವನಿ ಭಾಜನರಾಗಿದ್ದಾರೆ. ಸೋಮವಾರ ಸಂಜೆ ಭಾರತದ ಸುಮಿತ್‌ ಅಂತಿಲ್‌ ನಿರೀಕ್ಷೆಗೂ ಮೀರಿದ ಪ್ರದರ್ಶನ ಹೊರತಂದು ಪುರುಷರ ಎಫ್‌ 64 ವಿಭಾಗದಲ್ಲಿ ನೂತನ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಇದೇ ಮೊದಲ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಸುಮಿತ್‌ ಮೊದಲ ಪ್ರಯತ್ನದಲ್ಲೇ ಬಂಗಾರಕ್ಕೆ ಗುರಿಯಿಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹರಿಯಾಣದ ಸೋನೆಪತ್‌ ಮೂಲದವರಾದ 23 ವರ್ಷದ ಸುಮಿತ್‌, 2015ರಲ್ಲಿ ಸಂಭವಿಸಿದ ಮೋಟಾರ್‌ಬೈಕ್‌ ಅಪಘಾತ ಒಂದರಲ್ಲಿ ಎಡಗಾಲಿನ ಮಂಡಿಯಿಂದ ಕೆಳಗಿನ ಭಾಗವನ್ನು ಕಳೆದುಕೊಂಡಿದ್ದರು. ಆದರೂ ಕ್ರೀಡೆಯಲ್ಲಿ ಸಾಧನೆಯ ಶಿಖರವನ್ನೇರಿರುವ ಒಂಟಿ ಕಾಲಿನ ಯೋಧ ಇಂದು ಟೋಕಿಯೋ ಪ್ಯಾರಾ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಬರ್ಜಿಯನ್ನು ವಿಶ್ವ ದಾಖಲೆಯ 68.55 ಮೀ. ದೂರಕ್ಕೆ ಎಸೆದಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ ಅವರು ಈ ದಾಖಲೆ ಬರೆದದ್ದು ವಿಶೇಷ. ಒಟ್ಟಾರೆ ಇಲ್ಲಿಯವರೆಗೂ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ 8 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಎರಡು ಚಿನ್ನದ ಪದಕಗಳು, ನಾಲ್ಕು ಬೆಳ್ಳಿ ಪದಕಗಳು ಹಾಗೂ ಎರಡು ಕಂಚಿನ ಪದಕಗಳು ಒಳಗೊಂಡಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2WEJWKV

ಪಂತ್‌ ಮ್ಯಾಚ್‌ ವಿನ್ನರ್‌, ಖಂಡಿತಾ ಕಮ್‌ಬ್ಯಾಕ್‌ ಮಾಡಲಿದ್ದಾರೆಂದ ಕಾರ್ತಿಕ್‌!

ಹೊಸದಿಲ್ಲಿ: ವಿರುದ್ಧ ಟೆಸ್ಟ್ ಸರಣಿಯ ಆರಂಭಿಕ ಮೂರು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಕೊನೆಯ ಎರಡು ಹಣಾಹಣಿಗಳಲ್ಲಿ ಅತ್ಯುತ್ತಮವಾಗಿ ಕಮ್‌ಬ್ಯಾಕ್‌ ಮಾಡಲಿದ್ದಾರೆಂದು ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಐದು ಇನಿಂಗ್ಸ್‌ಗಳಲ್ಲಿ ರಿಷಭ್‌ ಪಂತ್‌ ಅವರ ವೈಯಕ್ತಿಕ ಗರಿಷ್ಠ ಮೊತ್ತ ಕೇವಲ 37 ರನ್‌ ಮಾತ್ರ. ಇದರ ಹೊರತಾಗಿಯೂ ಎಡಗೈ ಬ್ಯಾಟ್ಸ್‌ಮನ್‌ ಕೊನೆಯ ಎರಡು ಪಂದ್ಯಗಳಿಗೆ ತಮ್ಮ ಬ್ಯಾಟಿಂಗ್‌ ತಂತ್ರದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಬಾರದು ಎಂದು ಅವರು ಸಲಹೆ ನೀಡಿದ್ದಾರೆ. ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ರಿಷಭ್‌ ಪಂತ್‌ ಅದ್ಭುತ ಫಾರ್ಮ್‌ನಲ್ಲಿದ್ದರು. ಕಳೆದ ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದ್ದರು. ಇದಾದ ಬಳಿಕ ಇಂಗ್ಲೆಂಡ್‌ ವಿರುದ್ಧ ತವರು ಟೆಸ್ಟ್‌ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಆ ಮೂಲಕ ತವರು ಮಣ್ಣಿನಲ್ಲಿ ತಮ್ಮ ಮೊದಲ ಟೆಸ್ಟ್ ಶತಕ ಸಿಡಿಸಿದ್ದರು. ಆದರೆ, ಇಂಗ್ಲೆಂಡ್‌ನಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಎಡಗೈ ಆಟಗಾರ ಎಲ್ಲರಿಗೂ ನಿರಾಶೆ ಮೂಡಿಸಿದ್ದಾರೆ. ಇಂಗ್ಲೆಂಡ್‌ ಪರಿಸ್ಥಿತಿಗಳಲ್ಲಿ ಕ್ರೀಸ್‌ ಹೊರಗಡೆ ಆಡುವ ಪಂತ್‌ ಅವರ ಪ್ರಯತ್ನ ಸಕಾರವಾಗುತ್ತಿಲ್ಲ ಹಾಗೂ ಎಡಗೈ ಆಟಗಾರನಿಗೆ ಜೇಮ್ಸ್ ಆಂಡರ್ಸನ್‌ ಹಾಗೂ ಓಲ್ಲೀ ರಾಬಿನ್ಸನ್ ಅತ್ಯುತ್ತಮ ಕೌಂಟರ್‌ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ ದಿನೇಶ್‌ ಕಾರ್ತಿಕ್‌, ಎಡಗೈ ಆಟಗಾರ ಹೊಂದಿಕೊಳ್ಳುವವರೆಗೂ ಕ್ರೀಸ್‌ನಲ್ಲಿ ಕೆಲಕಾಲ ತಾಳ್ಮೆಯಿಂದ ಆಡಬೇಕು ಎಂದಿದ್ದಾರೆ. "ಪಂತ್‌ ಗಳಿಸಿರುವ ಬಹುತೇಕ ರನ್‌ ಇದೇ ಹಾದಿಯಲ್ಲಿಯೇ(ಕ್ರೀಸ್‌ನಿಂದ ಮುಂದೆ ಬಂದು). ಆಸ್ಟ್ರೇಲಿಯಾದಲ್ಲಿ ಶತಕ ಸಿಡಿಸಿದ್ದ ಪಂತ್‌ಗೆ ಅವರದೇ ಆದ ಸಮಯವನ್ನು ನೀವು ನೀಡಬೇಕಾಗುತ್ತದೆ, ಆಗ ಅವರು ಸಿಡಿಯಲಿದ್ದಾರೆ. ಆದರೆ, ಸರಣಿಯ ಮಧ್ಯದಲ್ಲಿ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಇಂತಹ ಪರಿಸ್ಥಿತಿಗಳಲ್ಲಿ ಹೇಗೆ ಆಡಬೇಕೆಂಬುದು ಪಂತ್‌ಗೆ ಗೊತ್ತಿದೆ. ಅವರು ಮ್ಯಾಚ್ ವಿನ್ನರ್‌ ಹಾಗೂ ಅವರು ಕಮ್‌ಬ್ಯಾಕ್ ಮಾಡಲಿದ್ದಾರೆಂಬ ಬಗ್ಗೆ ವಿಶ್ವಾಸವಿದೆ," ಎಂದು ಕಾರ್ತಿಕ್ ಯುವ ಆಟಗಾರನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾಟ್‌ ಸೆಲೆಕ್ಷನ್‌ ಬಗ್ಗೆ ಪಂತ್‌ ತುಸು ಗಮನಹರಿಸಬೇಕು: ದೀಪ್‌ ದಾಸ್‌ಗುಪ್ತಾ ಪ್ರಸ್ತುತ ಅನುಭವಿಸುತ್ತಿರುವ ವೈಫಲ್ಯವನ್ನು ಮೆಟ್ಟಿ ನಿಲ್ಲಲು ರಿಷಭ್‌ ಪಂತ್‌ಗೆ ಕೆಲ ಸಲಹೆಗಳನ್ನು ನೀಡಿದ ಮಾಜಿ ವಿಕೆಟ್‌ ಕೀಪರ್‌ ದೀಪ್‌ ದಾಸ್‌ಗುಪ್ತಾ, ಎಡಗೈ ಆಟಗಾರ ಮ್ಯಾಚ್‌ ವಿನ್ನರ್ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಅವರು ತಮ್ಮ ಶಾಟ್‌ ಸೆಲೆಕ್ಷನ್‌ ಬಗ್ಗೆ ತುಸು ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ. "ಪಂತ್ ಅವರ ಚಿಂತನೆಯ ಪ್ರಕ್ರಿಯೆಯು ಗೊಂದಲಕ್ಕೀಡಾಗದಿರುವುದು ಇಲ್ಲಿ ಮುಖ್ಯವಾಗುತ್ತದೆ. ಅವರು ಇನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೆ, ಖಂಡಿತಾ ಭಾರತ ಟೆಸ್ಟ್‌ ಪಂದ್ಯದಲ್ಲಿ ಜಯಿಸಲಿದೆ. ಆದ್ದರಿಂದ ನೀವು ಸ್ವಲ್ಪ ಮಟ್ಟಿಗೆ ಅವರಿಂದ ಅವಕಾಶವನ್ನು ಪಡೆದುಕೊಳ್ಳಬೇಕಾಗಿದೆ. ಇದರ ಹೊರತಾಗಿಯೂ ರಿಷಭ್‌ ಪಂತ್‌ ತಮ್ಮ ಶಾಟ್‌ ಸೆಲೆಕ್ಷನ್‌ ಬಗ್ಗೆ ತುಸು ಎಚ್ಚರ ವಹಿಸಬೇಕಾಗಿದೆ," ಎಂದು ತಿಳಿಸಿದ್ದಾರೆ. ನಾಲ್ಕನೇ ಸ್ಟಂಪ್‌ ಮೇಲಿನ ಎಸೆತಗಳು ಸೇರಿದಂತೆ ಚೆಂಡಿನ ವೇಗಕ್ಕೆ ಪಂತ್‌ ಒಮ್ಮೆ ಹೊಂದಿಕೊಂಡರೆ, ಖಂಡಿತಾ ಅವರು ತಮ್ಮ ಸ್ವಾಭವಿಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಲಿದ್ದಾರೆಂದು ದೀಪ್‌ ದಾಸ್‌ಗುಪ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಇಲ್ಲಿನ ಪರಿಸ್ಥಿತಿಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಬಗ್ಗೆ ಜೇಮ್ಸ್ ಆಂಡರ್ಸನ್‌ ಹಾಗೂ ಓಲ್ಲೀ ರಾಬಿನ್ಸನ್‌ಗೆ ಚೆನ್ನಾಗಿ ಗೊತ್ತಿದೆ. ಅದರಲ್ಲೂ ಓವರ್‌ ದಿ ವಿಕೆಟ್‌ ನಾಲ್ಕನೇ ಸ್ಟಂಪ್‌ ಮೇಲೆ ಬೌಲ್‌ ಮಾಡಿ ಎಡಗೈ ಆಟಗಾರರನ್ನು ಬೀಳಿಸುವ ತಂತ್ರ ಈ ಇಬ್ಬರಿಗೂ ತಿಳಿದಿದೆ. ಆದರೆ, ಒಮ್ಮೆ ಪಂತ್‌ ಇದನ್ನು ಮೆಟ್ಟಿ ನಿಂತರೆ, ತಮ್ಮ ಸ್ವಾಭವಿಕ ಶೈಲಿಯಲ್ಲಿ ಬೌಲರ್‌ಗಳಿಗೆ ಬೆವರಿಳಿಸಲಿದ್ದಾರೆ," ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ. ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿರುವ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು, ಸೆ.2 ರಿಂದ ಲಂಡನ್‌ನ ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ನಾಲ್ಕನೇ ಟೆಸ್ಟ್‌ನಲ್ಲಿ ಕಾದಾಟ ನಡೆಸಲಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gMKDJx

ಸುರಕ್ಷತೆಯ ದೃಷ್ಟಿಯಿಂದ ರಾತ್ರಿ ವೇಳೆ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು; ಸಿಎಂ ಮನವಿ

ಬೆಂಗಳೂರು: ರಾತ್ರಿ ಸಮಯದಲ್ಲಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ವಾಹನದಲ್ಲಿ ಇರುವವರ ಸುರಕ್ಷತೆಯ ಜೊತೆಗೆ ಬೇರೆಯವರ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು ಎಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ. ನಗರದ ಕೋರಮಂಗಲದಲ್ಲಿ ನಡೆದ ಭೀಕರ ಅಪಘಾತದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಅಘಾತಕಾರಿ ಅಪಘಾತ. ಘಟನೆಯ ಕುರಿತಾಗಿ ಪೊಲೀಸರು‌ ತನಿಖೆ ನಡೆಸುತ್ತಿದ್ದಾರೆ. ಆದರೆ ವಾಹನ ಚಲಾಯಿಸುವಾಗ ಸುರಕ್ಷತಾ ನಿಯಮಗಳನ್ನು ವಾಹನ ಚಾಲಕರು ಪಾಲನೆ ಮಾಡಬೇಕು ಎಂದು ಸಿಎಂ ಮನವಿ ಮಾಡಿಕೊಂಡರು. ಐಷಾರಾಮಿ ಕಾರೊಂದು ಫುಟ್ಪಾತ್ ಮೇಲಿನ ಕಂಬಕ್ಕೆ ಡಿಕ್ಕಿಯಾಗಿ 7 ಜನರು ದುರ್ಮರಣಕ್ಕೀಡಾಗಿರುವ ಭೀಕರ ಅಪಘಾತ ಬೆಂಗಳೂರಿನ ಕೋರಮಂಗಲದಲ್ಲಿ ತಡರಾತ್ರಿ ನಡೆದಿದೆ. ನಗರದ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಈ ಭೀಕರ ದುರಂತ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಐಷಾರಾಮಿ ಆಡಿ ಕ್ಯೂ3 ಕಾರು ಡಿಕ್ಕಿ ಹೊಡೆದಿದೆ. ಘಟನೆ ವೇಳೆ ಕಾರಿನಲ್ಲಿದ್ದ ಮೂವರು ಮಹಿಳೆಯರು ನಾಲ್ಕು ಪುರುಷರು ಸೇರಿ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ KA 03 MY 6666 ನಂಬರಿನ ಐಷಾರಾಮಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ಏನು ಕಾರಣ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೇಗದ ಚಾಲನೆ ಅಪಘಾತಕ್ಕೆ ಕಾರಣ ಆಗಿರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮೃತರೆಲ್ಲರೂ 25ರಿಂದ 30 ವರ್ಷ ಆಸುಪಾಸಿನ ವಯಸ್ಸಿನವರು. ಮೃತರ ಪೈಕಿ ಓರ್ವ ಯುವಕ ಹೊಸೂರು ಕ್ಷೇತ್ರದ ಶಾಸಕರ ಮಗ ಎಂದು ತಿಳಿದುಬಂದಿದೆ. ಘಟನೆಯ ಕುರಿತಾಗಿ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಣೇಶೋತ್ಸವದ ಬಗ್ಗೆ ಭಾನುವಾರ ನಿರ್ಧಾರ:ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವವಕ್ಕೆ ಅನುಮತಿ ನೀಡಬೇಕಾ ಬೇಡವೋ ಎಂಬ ವಿಚಾರವಾಗಿ ಭಾನುವಾರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರಿಯಾದ ನಿರ್ಧಾರ ಸರಿಯಾದ‌ ಟೈಂಗೆ ಕೈಗೊಳ್ಳುತ್ತೇವೆ. ಸೋಮವಾರ ನಡೆದ ಸಭೆಯ ಸಂದರ್ಭದಲ್ಲಿ ಎಲ್ಲ ಮಾಹಿತಿ ಇರಲಿಲ್ಲ. ಈ ನಿಟ್ಟಿನಲ್ಲಿ ಮಾಹಿತಿ ತರಿಸಿಕೊಂಡು ಅದನ್ನು ಯಾವ ರೀತಿ ನಿರ್ಣಯ ಮಾಡಬೇಕು ಅದರ ಆಧಾರದಲ್ಲಿ ಏನು ಕ್ರಮ ಕೈಗೊಳ್ಳಬೇಕು ಎಂಬ ನಿಟ್ಟಿನಲ್ಲಿ ನಾಲ್ಕೈದು ದಿನ ಸಮಯ ಬೇಕು.‌ ಸೆಪ್ಟೆಂಬರ್ ಐದನೇ ತಾರೀಕು ಸಭೆ ನಡೆಸಿ ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.


from India & World News in Kannada | VK Polls https://ift.tt/3zweHR9

'ಅಡಿಲೇಡ್‌ ಟೆಸ್ಟ್‌ ಬಳಿಕ ಏನಾಯ್ತು ಎಂಬ ಬಗ್ಗೆ ನೆನಪಿರಲಿ' ಇಂಗ್ಲೆಂಡ್‌ಗೆ ಹುಸೇನ್‌ ಎಚ್ಚರಿಕೆ!

ಹೊಸದಿಲ್ಲಿ: ಭಾರತದ ವಿರುದ್ಧ ಐತಿಹಾಸಿಕ ಲಾರ್ಡ್ಸ್ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಿದ್ದ ನಾಯಕತ್ವದ , ಹೆಡಿಂಗ್ಲೇ ಟೆಸ್ಟ್‌ನಲ್ಲಿ ಇನಿಂಗ್ಸ್ ಹಾಗೂ 76 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತ್ತು. ಆ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಮ್‌ಬ್ಯಾಕ್‌ ಮಾಡಿತ್ತು. ಇದೀಗ ಆತಿಥೇಯರ ಗಮನ ಸೆ.2 ರಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ ಪಂದ್ಯದ ಮೇಲಿದೆ. ಕಳೆದ ಪಂದ್ಯದ ಗೆಲುವಿನ ಹೊರತಾಗಿಯೂ ನಾಲ್ಕನೇ ಟೆಸ್ಟ್‌ ನಿಮಿತ್ತ ಇಂಗ್ಲೆಂಡ್‌ ತಂಡಕ್ಕೆ ಮಾಜಿ ನಾಯಕ ನಾಸೀರ್‌ ಹುಸೇನ್‌ ದಿ ಟೆಲಿಗ್ರಾಫ್‌ನಲ್ಲಿ ಬರೆದಿರುವ ತಮ್ಮ ಅಂಕಣದಲ್ಲಿ ಎಚ್ಚರಿಕೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿ ಗೆದ್ದಿದ್ದ ಭಾರತ ತಂಡವನ್ನು ಹುಸೇನ್ ಗುಣಗಾನ ಮಾಡಿದ್ದಾರೆ. "ಹೆಡಿಂಗ್ಲೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಬೌಲರ್‌ಗಳು ಅದ್ಭುತವಾಗಿ ಬೆಂಡನ್ನು ಸ್ವಿಂಗ್‌ ಮಾಡಿ ಭಾರತ ತಂಡದ ಮೇಲೆ ಭಾರಿ ಒತ್ತಡವನ್ನು ಹೇರಿಸಿದ್ದರು. ಆದರೆ, ಬೌಲರ್‌ಗಳು ಅದೇ ರೀತಿ ಸ್ವಿಂಗ್‌ ಮಾಡುವಲ್ಲಿ ವಿಫಲರಾಗಿದ್ದರು," ಎಂದು ಹುಸೇನ್‌ ಹೇಳಿದ್ದಾರೆ. "ಆದರೆ, ಗುರುವಾರ ಆರಂಭವಾಗುವ ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡ ಕಠಿಣ ಪರಿಶ್ರಮದೊಂದಿಗೆ ಅಂಗಳಕ್ಕೆ ಇಳಿಯಲಿದೆ ಎಂಬುದನ್ನು ಇಂಗ್ಲೆಂಡ್‌ ಅರಿತುಕೊಳ್ಳಬೇಕು. ಕೆನ್ನಿಂಗ್ಟನ್‌ ಓವಲ್‌ ಹಾಗೂ ಓಲ್ಡ್‌ ಟ್ರಾಫರ್ಡ್‌ ಎರಡೂ ಮೈದಾನಗಳು ಅವರ ಆಕ್ರಮಣಕಾರಿ ದಾಳಿಗೆ ಹೊಂದಾಣಿಕೆಯಾಗಲಿದೆ," ಎಂದು ಜೋ ರೂಟ್‌ ಬಳಗಕ್ಕೆ ಎಚ್ಚರಿಕೆ ನೀಡಿದ್ದಾರೆ. "ಕಳೆದ ವರ್ಷದ ಕೊನೆಯಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ಕೇವಲ 36 ರನ್‌ಗೆ ಆಲ್‌ಔಟ್‌ ಆಗಿತ್ತು. ಆದರೆ, ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿ ಬಾರ್ಡರ್-ಗವಾಸ್ಕರ್‌ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿತ್ತು ಎಂಬುದು ನಿಮಗೆ ನೆನಪಿರಲಿ," ಎಂದು ಹುಸೇನ್‌ ತಮ್ಮ ಅಂಕಣದಲ್ಲಿ ಬರೆದಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ ಫಾರ್ಮ್‌ನಲ್ಲಿ ಇಲ್ಲದ ಹೊರತಾಗಿಯೂ ಟೀಮ್‌ ಇಂಡಿಯಾ ಅತ್ಯಂತ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡುವ ಸಾಧ್ಯತೆ ಇದೆ ಎಂದು ಇದೇ ವೇಳೆ ಆತಿಥೇಯರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. "ನಾಯಕ ವಿರಾಟ್‌ ಕೊಹ್ಲಿ 2018ರ ಪ್ರವಾಸದ ರೀತಿ ಈ ಬಾರಿ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿಲ್ಲ. ಅಂದಹಾಗೆ, 2014ರ ರೀತಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ಆದರೆ, ಇದರ ಹೊರತಾಗಿಯೂ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಬಲ್ಲ ಸಾಮರ್ಥ್ಯವುಳ್ಳ ಆಟಗಾರು ಭಾರತ ತಂಡದಲ್ಲಿ ಇದ್ದಾರೆ. ಹಾಗಾಗಿ, ಇಂಗ್ಲೆಂಡ್‌ ತಂಡ ಬಹಳಾ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ," ಎಂದು ನಾಸಿರ್‌ ಹುಸೇನ್‌ ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gJtyAk

ಪ್ರಕೃತಿ ಚಿಕಿತ್ಸೆಯಿಂದ ಫಿಟ್ ಆದ ಸಿದ್ದರಾಮಯ್ಯ; ಹೊಸ ಹುಮ್ಮಸ್ಸಿನೊಂದಿಗೆ ರಾಜಕೀಯ ಅಖಾಡಕ್ಕೆ ಎಂಟ್ರಿ!

ಬೆಂಗಳೂರು: ಸದಾ ರಾಜಕೀಯ ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದ ಮಾಜಿ ಸಿಎಂ ಹತ್ತು ದಿನಗಳ ಕಾಲ ವಿಶ್ರಾಂತಿಯಲ್ಲಿದ್ದರು. ನಗರದ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದ ಅವರು ಮಂಗಳವಾರ ಡಿಸ್ಚಾರ್ಜ್ ಅಗಲಿದ್ದಾರೆ. ಇದೀಗ ಮತ್ತೆ ಲವಲವಿಕೆಯಿಂದ ಇರುವ ಸಿದ್ದರಾಮಯ್ಯ ರಾಜಕೀಯ ಅಖಾಡದಲ್ಲಿ ಸಕ್ರಿಯರಾಗಲು ಸಜ್ಜಾಗಿದ್ದಾರೆ. ಆಗಸ್ಟ್ 21 ರಂದು ಸಿದ್ದರಾಮಯ್ಯ ಅವರು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದರು. ಹತ್ತು ದಿನಗಳ ಕಾಲ ಸಿದ್ದರಾಮಯ್ಯ ಅವರು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿದ್ದು ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ. ಪ್ರತಿನಿತ್ಯ ವಾಕಿಂಗ್, ಜಿಮ್‌ನಲ್ಲಿ ವ್ಯಾಯಾಮ ಹಾಗೂ ಮಿತ ಆಹಾರ ಸೇವನೆಯಿಂದ ದೇಹವನ್ನು ಫಿಟ್‌ನಲ್ಲಿ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ದಾಖಲಾಗಿದ್ದರು.‌ ಹತ್ತು ದಿನಗಳ ಕಾಲ ಅಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಸಮ್ಮಿಶ್ರ ಸರ್ಕಾರದ ಅವಧಿಯ ಸಂದರ್ಭದಲ್ಲಿ ಪಕ್ಷದ ಹಲವು ಮುಖಂಡರು ಭೇಟಿ ನೀಡಿದ್ದರು. ಪ್ರಕೃತಿ ಚಿಕಿತ್ಸಾಲದಲ್ಲಿ ಇದ್ದುಕೊಂಡೇ ರಾಜಕೀಯ ದಾಳವನ್ನು ಸಿದ್ದರಾಮಯ್ಯ ಉರುಳಿಸಿದ್ದರು. ಆದರೆ ಈ ಬಾರಿ ಜಿಂದಾಲ್‌ನಲ್ಲಿ ಜಮೀರ್ ಅಹ್ಮದ್ ಖಾನ್ ಹೊರತುಪಡಿಸಿ ಇತರ ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲ್ಲ. ನಿತ್ಯ ವ್ಯಾಯಾಮ ಹಾಗೂ ಮಿತ ಆಹಾರದಿಂದ ಸಂಪೂರ್ಣ ಫಿಟ್ ಆಗಿರುವ ಸಿದ್ದರಾಮಯ್ಯ ಸಂಪೂರ್ಣ ಲವಲವಿಕೆಯಿಂದಿದ್ದು, ರಾಜಕೀಯ ಅಖಾಡಕ್ಕೆ ಕಮ್‌ ಬ್ಯಾಕ್ ಆಗಲು ಸಜ್ಜಾಗಿ ನಿಂತಿದ್ದಾರೆ. ಚಿಕಿತ್ಸಾ ಕೇಂದ್ರದಿಂದ ವಾಪಸ್ ಆದ ಬಳಿಕ ರಾಜಕೀಯದಲ್ಲೂ ಸಕ್ರಿಯರಾಗಲಿದ್ದಾರೆ. ಮಹಾನಗರ ಪಾಲಿಕೆ ಹಾಗೂ ಪರಿಷತ್ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರವಾಸ ಹಾಗೂ ಸರಣಿ ಸಭೆಗಳನ್ನು ಸಿದ್ದರಾಮಯ್ಯ ನಡೆಸಲಿದ್ದಾರೆ. ಸೆಪ್ಟೆಂಬರ್ 4 ಹಾಗೂ 5 ರಂದು ಕೆಪಿಸಿಸಿ ಕಚೇರಿಯಲ್ಲಿ ಸರಣಿ ಸಭೆಗಳು ನಡೆಯಲಿದೆ. 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗಳ ಹಿನ್ನೆಲೆಯಲ್ಲಿ ಸಭೆಗಳು ನಡೆಯಲಿವೆ. ಜಿಲ್ಲಾವಾರು ಸಭೆಗಳು ನಡೆಯಲಿದ್ದು ಅಭ್ಯರ್ಥಿ ಆಯ್ಕೆ ಹಾಗೂ ಚುನಾವಣಾ ತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಮತ್ತೊಂದು ಕಡೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸ ನಡೆಸಲು ಮುಂದಾಗಿದ್ದಾರೆ. ಅದರಂತೆ ಸಿದ್ದರಾಮಯ್ಯ ಕೂಡಾ ಪ್ರವಾಸ ಹಮ್ಮಿಕೊಳ್ಳುತ್ತಾರಾ ಎಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಸದ್ಯ ಕೋವಿಡ್ ಕಾರಣಕ್ಕಾಗಿ ರಾಜ್ಯ ಪ್ರವಾಸ ಹಮ್ಮಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಒಟ್ನಲ್ಲಿ ಪ್ರಕೃತಿ ಚಿಕಿತ್ಸೆಯಿಂದ ಫಿಟ್ ಆಗಿರುವ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೊಡೆತಟ್ಟಲು ಸಜ್ಜಾಗಿದ್ದಾರೆ.


from India & World News in Kannada | VK Polls https://ift.tt/2Y5WY4V

ಬಿಜೆಪಿ ಜತೆ ರಾಜಿಯಾದರೆ ಭವಿಷ್ಯದಲ್ಲಿ ಜೆಡಿಎಸ್‌ಗೆ ಅಪಾಯ ಕಟ್ಟಿಟ್ಟ ಬುತ್ತಿ; ವೈಎಸ್‌ವಿ ದತ್ತಾ ಎಚ್ಚರಿಕೆ

ಹೊಸದುರ್ಗ: ವರಿಷ್ಟರು ಮತ್ತು ಮುಖಂಡರಲ್ಲಿ ಸ್ಪಷ್ಟವಾದ ನಿಲುವಿರಬೇಕು. ಇಲ್ಲದಿದ್ದಲ್ಲಿ ರಾಜ್ಯದ ಜನರು ನಮ್ಮನ್ನು ಸಂಶಯದಿಂದ ನೋಡಲು ಪ್ರಾರಂಭಿಸುತ್ತಾರೆ ಎಂದು ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಹೇಳಿದರು. ಪಟ್ಟಣದ ಶ್ರೀ ಬನಶಂಕರಿ ಸಮುದಾಯ ಭವನದಲ್ಲಿ ಜೆಡಿಎಸ್‌ ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ಹೊಸದುರ್ಗ ತಾಲೂಕು ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳಿಂದ ಜನ ಬೇಸತ್ತಿದ್ದಾರೆ. ಪ್ರತಿನಿತ್ಯ ಪೆಟ್ರೋಲ್‌, ಡಿಸೇಲ್‌, ಗ್ಯಾಸ್‌, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಆಕ್ರೋಶಗೊಂಡಿದ್ದು, ಜನರ ಆಶೋತ್ತರ ಈಡೇರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರ ಪರವಾಗಿ ನಾವುಗಳು ಹೋರಾಟ ಮಾಡಬೇಕೇ ವಿನಃ ಬಿಜೆಪಿಯೊಂದಿಗೆ ರಾಜಕೀಯವಾಗಿ ರಾಜಿಯಾದರೆ ಜೆಡಿಎಸ್‌ ಪಕ್ಷಕ್ಕೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು. ಹೈಕಮಾಂಡ್‌ ಸಂಸ್ಕೃತಿ ಹೊಂದಿರುವ ಕಾಂಗ್ರೆಸ್‌ ಮತ್ತು ರಾಷ್ಟ್ರೀಯ ಪಕ್ಷಗಳೆರೆಡು ದೆಹಲಿ ನಾಯಕರ ಕೈಗೊಂಬೆಯಂತೆ ರಾಜ್ಯದ ವಿಷಯದಲ್ಲಿ ನಡೆದುಕೊಳ್ಳುತ್ತಿದ್ದಾರೆ. ರಾಜ್ಯದ ವಿಷಯ ಬಂದಾಗ ಇವರ್ಯಾರು ಗಟ್ಟಿ ಧ್ವನಿಯಲ್ಲಿ ಮಾತನಾಡಲಾರರು. ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ರಾಜ್ಯದ ಜನರು ಜೆಡಿಎಸ್‌ ಪಕ್ಷಕ್ಕೆ ಆಶೀರ್ವಾದ ಮಾಡಬೇಕು. ಪ್ರಾದೇಶಿಕ ಅಸ್ಮಿತೆ, ಕನ್ನಡ ಭಾಷೆ, ನೀರಾವರಿ ಯೋಜನೆಗಳು ಸಾಕಾರಗೊಳ್ಳಲು ಹಾಗೂ ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲು ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಯಶೋಧರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹರಿಹರ ಮಾಜಿ ಶಾಸಕ ಎಚ್‌.ಎಸ್‌.ಶಿವಶಂಕರ್‌, ಜಿಲ್ಲಾಹಿರಿಯ ಉಪಾಧ್ಯಕ್ಷ ರಾಗಿ ಶಿವಮೂರ್ತಿ, ಕಾನೂನು ಘಟಕ ಜಿಲ್ಲಾಧ್ಯಕ್ಷ ಪಿ.ಶಿವಕುಮಾರ್‌ ಯಾದವ್‌, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಅಧ್ಯಕ್ಷ ಪರಮೇಶ್ವರಯ್ಯ, ಹೊಸದುರ್ಗ ವಿಭಾಗದ ಅಧ್ಯಕ್ಷ ಹನುಮಂತಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ, ಹೊಸದುರ್ಗ ಯುವ ಘಟಕದ ಅಧ್ಯಕ್ಷ ಕಿರಣ್‌ ಕುಮಾರ್‌, ನಗರ ಘಟಕದ ಅಧ್ಯಕ್ಷ ಅರ್ಪತ್‌ ಖಾನ್‌ ಮತ್ತಿತರರಿದ್ದರು. ಪ್ರಾಮಾಣಿಕವಾಗಿ ಕೆಲಸ ಮಾಡುವೆತಾಲೂಕು ಜೆಡಿಎಸ್‌ ಘಟಕದ ಅಧ್ಯಕ್ಷ ಜಿ.ಗಣೇಶ್‌ ಮೂರ್ತಿ ಮಾತನಾಡಿ, ಜೆಡಿಎಸ್‌ ವರಿಷ್ಟ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನನ್ನ ಮೇಲೆ ನಂಬಿಕೆಯಿಟ್ಟು ಎರಡನೇ ಬಾರಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುವೆ ಎಂದು ಹೇಳಿದರು.


from India & World News in Kannada | VK Polls https://ift.tt/3gMP5b3

ಸಾವಯವ ಕೊತ್ತಂಬರಿ ಬೆಳೆದು ಮೂರು ಪಟ್ಟು ಲಾಭ ಕಂಡುಕೊಂಡ ನೆಲಮಂಗಲದ ರೈತ! ಹೇಗೆ ಗೊತ್ತಾ?

ನೆಲಮಂಗಲ ಗ್ರಾ: ಅಲ್ಪಾವಧಿಯ ಕೃಷಿಯಲ್ಲಿ ಲಾಭ ಬರುವುದಿಲ್ಲ ಎನ್ನುವವರ ಸಂಖ್ಯೆಯೇ ಹೆಚ್ಚಿದ್ದು, ಆದರೆ ಇಲ್ಲೊಬ್ಬ ಕೃಷಿಕ ಕೇವಲ 32 ದಿನದಲ್ಲಿ ಕೊತ್ತಂಬರಿ ಸೊಪ್ಪನ್ನು ಬೆಳೆದು 13 ಸಾವಿರ ಗಳಿಸಿದ್ದಾರೆ. ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಗಾಪಂ ವ್ಯಾಪ್ತಿಯ ಬಿಲ್ಲಿನಕೋಟೆ ಗ್ರಾಮದ ರೈತ ರಂಗಸ್ವಾಮಿ ತನ್ನ 2 ಗುಂಟೆ ಜಮೀನಿನಲ್ಲಿ ಕಳೆದ ಇಪ್ಪತ್ತು ದಿನಗಳ ಹಿಂದೆ ಎರಡು ಸಾವಿರ ಕೊತ್ತಂಬರಿ ಬೀಜ ಚೆಲ್ಲಿ ಲಾಭ ಗಳಿಸಿದ್ದಾರೆ. ಕೃಷಿಯಲ್ಲಿ ಸದಾ ಆಸಕ್ತಿ ಹೊಂದಿರುವ ರಂಗಸ್ವಾಮಿ ಅವರು, ತಾವು ಹೊಂದಿರುವ 2 ಎಕರೆ 30 ಗುಂಟೆ ಜಮೀನಿನಲ್ಲಿ ಎರಡು ಗುಂಟೆ ಜಮೀನಿನಲ್ಲಿ ಮಾತ್ರ ಕೊತ್ತಂಬರಿ ಬೀಜ ಚೆಲ್ಲಿದ್ದು, ಮೂರು ಸಾವಿರ ಬಂಡವಾಳ ಹೂಡಿ 16 ಸಾವಿರ ಕೊತ್ತಂಬರಿ ಸೊಪ್ಪನ್ನು ಮಾರಾಟ ಮಾಡಿದ್ದಾರೆ. ಖರ್ಚು 3 ಸಾವಿರ ತೆಗೆದು 13 ಸಾವಿರ ಲಾಭ ಗಳಿಸಿಕೊಂಡಿದ್ದಾರೆ. ಕುಟುಂಬದ ಸದಸ್ಯರಾದ ಅಣ್ಣ ಗೋವಿಂದರಾಜು, ಅತ್ತಿಗೆ ತಾಯಮ್ಮ ಹೆಂಡತಿ ಶಾರಾದಮ್ಮರ ಸಹಕಾರ ಪಡೆದು ಸಮಗ್ರ ಕೃಷಿಯಲ್ಲಿ ತೊಡಗಿದ್ದು, ಉಳಿದ ಜಮೀನಿನಲ್ಲಿ ಕೋಸು, ಮೆಣಸಿನಕಾಯಿ, ಜೋಳ ಕೂಡ ಬೆಳೆದಿದ್ದಾರೆ. ಹೈಬ್ರೀಡ್‌ ಸೋಲಾರ್‌ ಸೀಡ್ಸ್‌: ಕೊತ್ತಂಬರಿಯ ಹೊಸ ತಳಿಯ ಬೀಜವನ್ನು ತಂದು ಉಳುಮೆ ಮಾಡಿ, ಬಿತ್ತನೆ ಮಾಡಲಾಗಿದ್ದು, ಕಡಿಮೆ ಬೇಸಾಯ ಕ್ರಮಗಳಿಂದ ಅಧಿಕ ಇಳುವರಿ ಸಾಧಿಸಿದ್ದಾರೆ. ಜೊತೆಗೆ ರಾಸಾಯನಿಕ ಗೊಬ್ಬರ ಹಾಕದೆ ದನದ ಕೊಟ್ಟಿಗೆ ಗೊಬ್ಬರ ಹಾಕಿ ಸಂಪೂರ್ಣ ಸಾವಯವದಿಂದಲೇ ಕೊತ್ತಂಬರಿ ಬೆಳೆದಿರುವುದು ವಿಶೇಷ. ವಿಶೇಷ ಅಂದರೆ ರೈತ ರಂಗಸ್ವಾಮಿ ಅವರು 400 ಅಡಿ ನೀರಿನ ಕೊಳವೆ ಬಾವಿ ಕೊರೆದಿದ್ದು, ಕಡಿಮೆ ಅಂರ್ತಜಲ ಮಟ್ಟದಲ್ಲಿ 3 ಇಂಚು ನೀರು ದೊರೆತಿರುವುದು ಕೃಷಿಗೆ ಅನುಕೂಲವಾಗಿದೆ. ಕೊತ್ತಂಬರಿ ಸೊಪ್ಪು ಬೆಳೆದಿದ್ದೇನೆ ಇದೇನು ಸಾಧನೆಯಲ್ಲ. ಕಡಿಮೆ ಅವಧಿಯಲ್ಲಿ ಲಾಭ ಗಳಿಸಲು ಈ ಬೆಳೆ ಸಹಕಾರಿಯಾಗಿದೆ. ತಿಂಗಳು ಬೆಳೆಗಳಿಂದ ಅದರಲ್ಲೂ ಕೊತ್ತಂಬರಿ ಈ ರೀತಿ ಸೊಪ್ಪಿನ ಬೆಳೆಗಳು ರೈತರಿಗೆ ಅನುಕೂಲಕರ. ಮತ್ತೊಂದು ಬೆಳೆಗೆ ಬಂಡವಾಳ ಹಾಕಲು ಈ ರೀತಿ ಬೆಳೆ ಸಹಕಾರಿ. ಅಧಿಕಾರಿಗಳ ಸಲಹೆ ತೆಗೆದುಕೊಂಡು ಇನ್ನೂ ಕೃಷಿಯಲ್ಲಿ ಹೊಸ ಬೆಳೆ ಪ್ರಯತ್ನ ಮಾಡಲಿದ್ದೇನೆ ಎನ್ನುತ್ತಾರೆ ಕೊತ್ತಂಬರಿ ಬೆಳೆದ ರೈತ ರಂಗಸ್ವಾಮಿ ಅವರು. ರೈತ ರಂಗಸ್ವಾಮಿ ಸಮಗ್ರ ಕೃಷಿ ಜತೆ, ತಿಂಗಳು ಸೊಪ್ಪಿನ ಬೆಳೆಗಳನ್ನು ಬೆಳೆದು ಸಾಧನೆ ಮಾಡಿರುವುದು ಶ್ಲಾಘನಾರ್ಹ, ಸೋಂಪುರ ರೈತ ಸಂಪರ್ಕ ಕೇಂದ್ರದ ಅಡಿಯಲ್ಲಿ ಈ ರೈತ ಬರುವುದರಿಂದ, ಇಲಾಖೆಯಿಂದ ಸಲಹೆ ಮತ್ತು ಮಾರ್ಗದರ್ಶನ ನೀಡಿ, ಇನ್ನೂ ಹೆಚ್ಚು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರ ನೀಡುತ್ತೇವೆ ಎಂದು ಕೃಷಿ ಅಧಿಕಾರಿ ಕುಮಾರ್‌ ಹೇಳಿದ್ದಾರೆ.


from India & World News in Kannada | VK Polls https://ift.tt/3kFr8nq

ಹಾಸ್ಯಾಸ್ಪದವಾದ ಬೆಳಗಾವಿ ಪಾಲಿಕೆ ಚುನಾವಣೆ ಪ್ರಣಾಳಿಕೆ; ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಬಿಜೆಪಿ

ಪ್ರಮೋದ ಹರಿಕಾಂತ ಬೆಳಗಾವಿ: ಪಾಲಿಕೆ ಚುನಾವಣೆಗೆ ಬಿಡುಗಡೆ ಮಾಡಿದ ಪ್ರಣಾಳಿಕೆ ಮತ್ತು ಭರವಸೆಗಳು ವಿವಾದಕ್ಕೆ ಒಳಗಾಗಿದ್ದು, ಪಕ್ಷದ ಮುಖಂಡರು ಡ್ಯಾಮೇಜ್‌ ಕಂಟ್ರೋಲ್‌ಗೆ ಇಳಿದಿದ್ದಾರೆ. 'ಯಾರಾದರೂ ಮೃತಪಟ್ಟರೆ ಬೆಳಗಾವಿ ಮಹಾನಗರ ಪಾಲಿಕೆಯಿಂದ ಉಚಿತ ಶವ ಸಂಸ್ಕಾರ ಮಾಡಲಾಗುವುದು; 100 ರೂ. ಬಾಂಡ್‌ ಆಧಾರದ ಮೇಲೆ ಮನೆ ನಿರ್ಮಿಸಿಕೊಂಡವರನ್ನು ಸಕ್ರಮ ಮಾಡಲಾಗುವುದು' ಎನ್ನುವುದು ಸೇರಿದಂತೆ ಹಲವು ಭರವಸೆಗಳನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿತ್ತು. ಅದರಲ್ಲಿ ಉಚಿತ ಶವ ಸಂಸ್ಕಾರ ಭರವಸೆ ಬಿಜೆಪಿಗೇ ತಿರುಗುಬಾಣವಾಗಿ ಪರಿಣಮಿಸಿದೆ. ಈಗಾಗಲೇ ಬೆಳಗಾವಿ ಪಾಲಿಕೆಯಲ್ಲಿ ಬಡವರ ಶವ ಸಂಸ್ಕಾರಕ್ಕೆ ಐದು ಸಾವಿರ ರೂ. ಸಹಾಯಧನ ಕೊಡುವ ವ್ಯವಸ್ಥೆ ಇದೆ. ರಾಜ್ಯ ಸರಕಾರದಿಂದಲೂ ಶವ ಸಂಸ್ಕಾರ ಸಹಾಯಧನ ಕೊಡಲಾಗುತ್ತದೆ. ಕೊರೊನಾದಿಂದ ಸರಣಿ ಸಾವು ಸಂಭವಿಸಿದ್ದು ಪುನರಾವರ್ತನೆ ಆಗದಂತೆ ತಡೆಯುವ ಭರವಸೆ ಬದಲು ಶವ ಸುಡುವ ಭರವಸೆ ಕೊಟ್ಟಿದ್ದರಿಂದ ನಾಯಕರು ಮುಜುಗರಕ್ಕೆ ಒಳಗಾಗುವ ಪ್ರಸಂಗ ಎದುರಾಗಿದೆ. ಕಾಂಗ್ರೆಸ್‌, ಆಮ್‌ ಆದ್ಮಿ ಪಾರ್ಟಿಗಳು ಈ ವಿಚಾರವನ್ನೇ ದೊಡ್ಡದು ಮಾಡಲು ಹೊರಟಿವೆ. ‘ಇದೊಂದು ಅಚಾತುರ್ಯದ ನಿರ್ಧಾರ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್‌ ಕಾರಜೋಳ ಅವರು ಕೈಮುಗಿದು ಕೇಳುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಇಂಥ ನಿರ್ಧಾರ ಕೈಗೊಂಡಿದ್ದಕ್ಕೆ ಉಸ್ತುವಾರಿ ಸಚಿವರು ವಿಷಾದ ವ್ಯಕ್ತಪಡಿಸಿದ್ದಾರೆ. ಅನ್ಯ ಭರವಸೆ: ಈ ಲೋಪ ಸರಿ ಮಾಡಿಕೊಳ್ಳಲು ಬೇರೆ ಭರವಸೆಗಳನ್ನು ಘೋಷಣೆ ಮಾಡಿದ್ದಾರೆ. ಪಾಲಿಕೆಯಿಂದ ಫುಡ್‌ ಪ್ರೊಸೆಸಿಂಗ್‌ ಯುನಿಟ್‌, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕಟ್ಟಡ ಕಾಮಗಾರಿ ಆರಂಭ, 24/7 ಕುಡಿಯುವ ನೀರು, ರಿಂಗ್‌ ರೋಡ್‌ ಕಾಮಗಾರಿ, ಸ್ಮಾರ್ಟ್‌ಸಿಟಿ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ. ಇನ್ನೊಂದೆಡೆ, ಸ್ವತಃ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕೂಡ ಬೆಳಗಾವಿಗೆ ದಿಢೀರ್‌ ಭೇಟಿ ನೀಡಿದ್ದಾರೆ. ಐದಾರು ಸಚಿವರು ಬೆಳಗಾವಿಯಲ್ಲೇ ಬೀಡು ಬಿಟ್ಟು ಪ್ರಚಾರ ಆರಂಭಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಚುನಾವಣೆ ಹೊಸ್ತಿಲಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ರಾಜ್ಯದ ಜಿಲ್ಲಾಪಂಚಾಯಿತಿ ಸಿಇಒಗಳ ಎರಡು ದಿನದ ಸಮಾವೇಶ ಆಯೋಜಿಸಿದ್ದಾರೆ. ಸ್ಮಾರ್ಟ್‌ಸಿಟಿ ವೈಫಲ್ಯಕ್ಕೆ ಅಧಿಕಾರಿಗಳು ಹೊಣೆ!ಲೋಪಗಳನ್ನು ಸರಿಪಡಿಸಿಕೊಳ್ಳುವ ಭರದಲ್ಲಿ ಬಿಜೆಪಿ ನಾಯಕರು ಈಗ ಸ್ಮಾರ್ಟ್‌ಸಿಟಿ ವೈಫಲ್ಯದ ಕೆಸರನ್ನು ಅಧಿಕಾರಿಗಳ ಮೇಲೆ ಎರಚಿದ್ದಾರೆ! ‘ಬೆಳಗಾವಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ವೈಫಲ್ಯ ಉಂಟಾಗಲು, ಕಾಮಗಾರಿ ಹಾಳಾಗಲು ಅಧಿಕಾರಿಗಳೇ ಕಾರಣ. ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಹಾಗೆ ಆಗಿದೆ. ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಉಸ್ತುವಾರಿ ಸಚಿವ ಗೋವಿಂದ್‌ ಕಾರಜೋಳ ಸೋಮವಾರ ಹೇಳಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆ ಪಾಲಿಕೆ ಅಧಿಕಾರ ವ್ಯಾಪ್ತಿಯಲ್ಲಿ ಇಲ್ಲ ಎನ್ನುವುದನ್ನು ಬೆಳಗಾವಿ ನಗರದ ಪ್ರತಿಯೊಬ್ಬ ಜನರು ಅರಿತಿದ್ದರೂ, ಕ್ಷೇತ್ರದಲ್ಲಿ ಬಿಜೆಪಿಯದ್ದೇ ಶಾಸಕ-ಸಂಸದರು ಇದ್ದರೂ, ಅದೇ ಹೇಳಿಕೆ ನೀಡಿ ಚರ್ಚೆಗೆ ಅವಕಾಶ ಮಾಡಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸರಕಾರಿ ಸಿಬ್ಬಂದಿ ಮತದಾರರಿದ್ದಾರೆ. ಅಕ್ರಮ-ಸಕ್ರಮ ಸಮಸ್ಯೆನಗರ ವ್ಯವಸ್ಥೆಯನ್ನು ಹಾಳು ಮಾಡಿ ಮಾಫಿಯಾ ರೀತಿಯಲ್ಲಿ ಬೆಳೆಯುತ್ತಿರುವ 100 ರೂ. ಬಾಂಡ್‌ ಆಧಾರದ ನಿವೇಶನ ಖರೀದಿಯನ್ನು ಸಕ್ರಮ ಮಾಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದೆ. 100 ರೂ. ಬಾಂಡ್‌ ಆಧಾರದ ಮೇಲೆ ಮನೆ ನಿರ್ಮಿಸುವುದು ಎಲ್ಲ ನಗರಗಳನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ರಾಜ್ಯ ಸರಕಾರದ ತೀರ್ಮಾನವಾಗದೆ ಕೇವಲ ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಗಷ್ಟೇ ಹೇಗೆ ಅವಕಾಶ ಕೊಡುತ್ತಾರೆ ಎನ್ನುವುದು ಕೂಡ ವ್ಯಾಪಕ ಚರ್ಚೆಗೆ ಒಳಗಾದ ಸಂಗತಿಯಾಗಿದೆ.


from India & World News in Kannada | VK Polls https://ift.tt/3kCNlT9

ಮದುವೆಯಾಗಲು ನಿರಾಕರಿಸಿದ್ದ ಪ್ರೇಯಸಿಯನ್ನು ಹಾಡಹಗಲೇ ಕತ್ತು ಸೀಳಿ ಕೊಂದ ಭಗ್ನ ಪ್ರೇಮಿ!

ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಭಗ್ನ ಪ್ರೇಮಿಯೊಬ್ಬ ಹಾಡಹಗಲೇ ನಡುರಸ್ತೆಯಲ್ಲೇ ಚಾಕುವಿನಿಂದ ಕತ್ತು ಸೀಳಿ ಕೊಲೆಗೈದಿರುವ ಭೀಕರ ಘಟನೆ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಆಂಧ್ರ ಮೂಲದ ಅನಿತಾ (23) ಕೊಲೆಯಾದ ನತದೃಷ್ಟ ಯುವತಿ. ಕೊಲೆಗೈದ ವೆಂಕಟೇಶ್‌ (27)ನನ್ನು ಕೆಂಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ದೊಡ್ಡಬೆಲೆ ಮುಖ್ಯರಸ್ತೆಯ ಬೃಂದಾವನ ಲೇಔಟ್‌ ಬಳಿ ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ವೆಂಕಟೇಶ್‌ ಎಂಬಾತ ಚಾಕುವಿನಿಂದ ಯುವತಿಯ ಕತ್ತು ಸೀಳಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಹಿನ್ನೆಲೆಆಂಧ್ರ ಮೂಲದ ವೆಂಕಟೇಶ್‌ ಹಾಗೂ ಅನಿತಾ ಕಳೆದ ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಇಬ್ಬರಿಗೆ ಪರಿಚಯವಾಗಿತ್ತು. ಕಳೆದ ಎರಡು ವರ್ಷಗಳಿಂದ ಇವರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ನಡುವೆ ದೈಹಿಕ ಸಂಬಂಧವಿತ್ತು ಎಂದು ಹೇಳಲಾಗುತ್ತಿದೆ. ವೆಂಕಟೇಶ್‌ನೊಂದಿಗೆ ಹೆಚ್ಚು ಓಡಾಡುತ್ತಿರುವುದನ್ನು ಅರಿತ ಮೃತಳ ತಂದೆ ಆಕ್ಷೇಪ ವ್ಯಕ್ತಪಡಿಸಿ, ಬೇರೆ ಮದುವೆಯಾಗುವಂತೆ ಅನಿತಾಳಿಗೆ ಸೂಚಿಸಿದ್ದರು ಎನ್ನಲಾಗಿದೆ. ಇದರಂತೆ ಸಂಬಂಧ ಮೊಟಕುಗೊಳಿಸಿ ಅನಿತಾ ಸ್ನೇಹಿತನಿಂದ ಅಂತರ ಕಾಯ್ದುಕೊಂಡಿದ್ದಳು. ಶನಿವಾರ ವೆಂಕಟೇಶ್‌ನನ್ನು ಭೇಟಿಯಾದ ಅನಿತಾ ತಾನು ಬೇರೆ ಮದುವೆಯಾಗುವುದಾಗಿ ಹೇಳಿದ್ದಳು. ಇದಕ್ಕೆ ಆತ ಆಕ್ರೋಶ ವ್ಯಕ್ತಪಡಿಸಿ ಬೇರೆ ಮದುವೆಯಾಗದಂತೆ ತಾಕೀತು ಮಾಡಿದ್ದ. ಆದರೆ, ಆತನ ಮಾತನ್ನು ಅನಿತಾ ನಿರಾಕರಿಸಿದ್ದಳು. ಕೊಲೆ ಮಾಡಲೆಂದೇ ಚಾಕು ಖರೀದಿ:ಯುವತಿ ತನ್ನ ತನ್ನ ಮಾತು ಕೇಳದ್ದಕ್ಕೆ ಸಿಟ್ಟಾದ ವೆಂಕಟೇಶ್‌, ಅನಿತಾಳನ್ನು ಕೊಲೆ ಮಾಡಲೆಂದು ಸೂಪರ್‌ ಮಾರ್ಕೆಟ್‌ನಲ್ಲಿ 80 ರೂ. ನೀಡಿ ಚಾಕು ಖರೀದಿ ಮಾಡಿದ್ದ. ಎಂದಿನಂತೆ ಸೋಮವಾರ ಅನಿತಾ ಸ್ನೇಹಿತರ ಜತೆ ಕೆಲಸಕ್ಕೆ ತೆರಳುತ್ತಿದ್ದಳು. ಈ ವೇಳೆ ಬೃಂದಾವನ ಲೇಔಟ್‌ನಲ್ಲಿ ಅನಿತಾಳನ್ನು ಅಡ್ಡ ಹಾಕಿ ಕತ್ತು ಸೀಳಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿತಾಳನ್ನು ಸ್ನೇಹಿತರು ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಮೃತಳಿಗೆ ಐದು ವರ್ಷದ ಹಿಂದೆ ಮದುವೆ:ಅನಿತಾಳಿಗೆ ಐದು ವರ್ಷದ ಹಿಂದೆ ಆಂಧ್ರದಲ್ಲಿ ಮದುವೆಯಾಗಿತ್ತು. ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರೂ, ಬಳಿಕ ವಿವಿಧ ಕಾರಣಗಳಿಂದಾಗಿ ದಂಪತಿ ದೂರವಾಗಿದ್ದರು. ಜೀವನ ನಿರ್ವಹಣೆಗಾಗಿ ಮೂರು ವರ್ಷಗಳ ಹಿಂದೆ ಅನಿತಾ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಘಟನೆ ಸಂಬಂಧ ಆಕೆಯ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಅನಿತಾ ಹಾಗೂ ವೆಂಕಟೇಶ್‌ ದೊಡ್ಡಬೆಲೆ ರಸ್ತೆಯ ಕಟ್ಟಡವೊಂದರಲ್ಲಿ ವಾಸಿಸುತ್ತಿದ್ದರು. ಕಟ್ಟಡದ 1ನೇ ಮಹಡಿಯಲ್ಲಿ ಅನಿತಾ ತನ್ನ ಸ್ನೇಹಿತರ ಜತೆ ವಾಸವಿದ್ದಳು. 2ನೇ ಮಹಡಿಯಲ್ಲಿ ವೆಂಕಟೇಶ್‌ ಕೂಡ ಸ್ನೇಹಿತರ ಜತೆ ವಾಸವಿದ್ದ. ಇಬ್ಬರೂ ಒಂದೇ ಕಟ್ಟಡದಲ್ಲಿ ಇದ್ದುದ್ದರಿಂದ ಆಗಾಗ್ಗೆ ಭೇಟಿಯಾಗುತ್ತಿದ್ದರು. ಈ ಬಗ್ಗೆ ಅನಿತಾ ಸ್ನೇಹಿತರಿಗೂ ತಿಳಿದಿತ್ತು. ಹೀಗಾಗಿ, ಅನಿತಾ ಸ್ನೇಹಿತರು ಮತ್ತು ವೆಂಕಟೇಶ್‌ ಸ್ನೇಹಿತರ ಹೇಳಿಕೆಗಳನ್ನು ಪಡೆದುಕೊಳ್ಳಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.


from India & World News in Kannada | VK Polls https://ift.tt/3mJGOIL

ಆಕಸ್ಮಿಕವಾಗಿ 60 ಅಡಿ ಆಳದ ಬಾವಿಗೆ ಬಿದ್ದ ಪತಿ-ಪತ್ನಿಯನ್ನು ರಕ್ಷಿಸಿದ ಪುತ್ತೂರು ಅಗ್ನಿಶಾಮಕ ದಳ

ಕುಂಬ್ರ: ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆ ಮತ್ತು ಅವರ ರಕ್ಷಣೆಗೆಂದು ಬಾವಿಗಿಳಿದ ಪತಿ, ಇಬ್ಬರೂ 60 ಅಡಿ ಆಳದಲ್ಲಿ ಬಾಕಿಯಾಗಿದ್ದು ಕೊನೆಗೆ ಅಗ್ನಿಶಾಮಕ ದಳದವರು ಬಂದು ಸುರಕ್ಷಿತವಾಗಿ ಮೇಲೆತ್ತಿದ ಘಟನೆ ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಮಾಡಾವು ಸಮೀಪದ ಸದಾಶಿವ ರೈ ಮತ್ತು ಅವರ ಪತ್ನಿ ಸುನಂದಾ ಅವರನ್ನು ಅಗ್ನಿಶಾಮಕ ದಳ ಮೇಲೆತ್ತಿ ಕಾಪಾಡಿದೆ. ಸುನಂದ (48) ಅವರು ಬೆಳಗ್ಗೆದ್ದು ಬಾವಿಯಿಂದ ನೀರು ಸೇದಲೆಂದು ಹೋಗಿದ್ದಾಗ ಆಕಸ್ಮಿಕವಾಗಿ ಆಯತಪ್ಪಿ ಬಾವಿಗೆ ಬಿದ್ದರು. ಶಬ್ದ ಕೇಳಿದ ಸದಾಶಿವ ರೈ ಅವರು ಹೋಗಿ ಇಣುಕಿದಾಗ ಪತ್ನಿ ಬಾವಿಯಲ್ಲಿರುವುದು ಕಂಡು ಬಂತು. ತಕ್ಷಣ ಸದಾಶಿವ ರೈ ಅವರು ಬಾವಿಗೆ ಇಳಿದು ಪತ್ನಿಯನ್ನು ಅಪಾಯದಿಂದ ರಕ್ಷಿಸಿದರೂ, ಅವರನ್ನು ಬಾವಿಯಿಂದ ಮೇಲೆ ತರಲು ಆಗಲಿಲ್ಲ. ಹೀಗಾಗಿ ಇಬ್ಬರೂ ಬಾವಿಯೊಳಗಿನ ಕಲ್ಲೊಂದರ ಆಸರೆ ಪಡೆದುಕೊಂಡು ನಿಂತರು. ವಿಷಯ ತಿಳಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ಠಾಣಾಧಿಕಾರಿ ವಿ. ಸುಂದರ್‌ ಅವರ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿತು. ನೀರಿನಲ್ಲಿ ಮುಳುಗದಂತೆ ಆಸರೆ ಪಡೆದುಕೊಂಡಿದ್ದ ದಂಪತಿ ಆಗಲೇ ಸುಸ್ತಾಗಿದ್ದರು. ಫೈರ್‌ ಸರ್ವಿಸ್‌ ತಂಡದ ರುಕ್ಮಯ ಗೌಡ, ಮಂಜುನಾಥ್‌, ಮೋಹನ್‌, ಚಂದ್ರಕುಮಾರ್‌ ಮತ್ತಿತರರು ಬಾವಿಗಿಳಿದು ದಂಪತಿಗಳನ್ನು ಜಾಗರೂಕತೆಯಿಂದ ಮೇಲೆತ್ತಿ ಕಾಪಾಡಿದ್ದಾರೆ. ತಂಡದ ಕಾರ್ಯಕ್ಷಮತೆ, ಅಪಾರ ಧೈರ್ಯ ಸ್ಥಳೀಯರ ಶ್ಲಾಘನೆಗೆ ಪಾತ್ರವಾಗಿದೆ. ಬಾವಿಗೆ ಬಿದ್ದರೂ ಪವಾಡ ಸದೃಶವೆಂಬಂತೆ ಸುನಂದ ಮತ್ತವರ ಪತಿ ಜೀವಾಪಾಯದಿಂದ ಪಾರಾಗಿ ಪುನರ್ಜನ್ಮ ಪಡೆದಿದ್ದಾರೆ. ಮುಂಜಾನೆ ಕಾರ್ಯಾಚರಣೆಮುಂಜಾನೆ ಸುನಂದಾ ಅವರು ಬಾವಿಗೆ ಬಿದ್ದಿದ್ದು, ಪಂಪ್‌ಸೆಟ್‌ನ ಪೈಪ್‌ ಮತ್ತು ಕೇಬಲ್‌ ಹಿಡಿದುಕೊಂಡು ನೀರಿಗೆ ಬೀಳದಂತೆ ರಕ್ಷಿಸಿಕೊಂಡಿದ್ದರು. ಬೆನ್ನಲ್ಲೇ ಸದಾಶಿವ ರೈ ಪ್ರತ್ಯೇಕ ಹಗ್ಗದಲ್ಲಿ ಇಳಿದರು. ಕುರ್ಚಿಯಲ್ಲಿ ಕುಳ್ಳಿರಿಸಿ ಹಗ್ಗ ಕಟ್ಟಿ ಮೇಲೆಳೆಯುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳದ ರುಕ್ಮಯ ಗೌಡರು ಮಾಹಿತಿ ನೀಡಿ, ಮುಂಜಾನೆ 5.05 ಗಂಟೆಗೆ ನಮಗೆ ಕರೆ ಬಂದಿದೆ. ನಮ್ಮ ಅಧಿಕಾರಿಯವರ ನೇತೃತ್ವದಲ್ಲಿ ನಮ್ಮ ತಂಡ ಕ್ಷಿಪ್ರವಾಗಿ ಸ್ಥಳಕ್ಕೆ ತೆರಳಿದೆ. ನಸುಕಿನ ಕತ್ತಲಲ್ಲೇ ನಾವು ಕಾರ್ಯಾಚರಣೆ ಮಾಡಿ ಮೊದಲು ಸುನಂದಾ ಅವರನ್ನು ಮೇಲೆತ್ತಿದೆವು. ನಂತರ ಸದಾಶಿವ ರೈ ಅವರನ್ನು ಮೇಲೆತ್ತಿದೆವು. ಸದಾಶಿವ ಅವರು ತಾವೂ ನೀರಿಗೆ ಬೀಳದಂತೆ, ಪತ್ನಿಯೂ ಬೀಳದಂತೆ ಅಪಾರ ಶ್ರಮದಿಂದ ರಕ್ಷಿಸಿಕೊಂಡಿದ್ದರು. ಅವರಿಬ್ಬರ ಧೈರ್ಯ ಅಪಾರವಾದುದು. ದೈಹಿಕವಾಗಿ ಇಬ್ಬರೂ ಬಳಲಿದ್ದರು ಎಂದರು.


from India & World News in Kannada | VK Polls https://ift.tt/3ytcrsw

ನಗ್ನ ಫೋಟೋ ಕಳಿಸುವಂತೆ ಮಹಿಳೆಗೆ ಬ್ಲ್ಯಾಕ್‌ಮೇಲ್; ಮೂಡಬಿದ್ರೆಯ ವಿಜಯ್‌ ಗೌಡ ಬಂಧನ

ಮಂಗಳೂರು: ಮಹಿಳೆಯೊಬ್ಬರ ಖಾಸಗಿ ಚಿತ್ರಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಪುತ್ತಿಗೆ ಗ್ರಾಮದ ನಿವಾಸಿ ವಿಜಯ ಗೌಡ (33) ಬಂಧಿತ ಆರೋಪಿ. ಆರೋಪಿ ಮಹಿಳೆಯ ಮನೆಗೆ ಕೂಲಿ ಕೆಲಸಕ್ಕೆ ಬರುತ್ತಿದ್ದು, ಈ ಸಂದರ್ಭ ಮಹಿಳೆಯ ಮೊಬೈಲ್‌ ನಂಬರ್‌ ಪಡೆದಿದ್ದ. ಇದಾದ ನಂತರ ಮಹಿಳೆಯ ಜತೆ ಸಲುಗೆ ಬೆಳೆಸಿದ್ದ ಆರೋಪಿ ಮಹಿಳೆಯ ಬಳಿ ಆಕೆಯ ಖಾಸಗಿ ಪೋಟೋ ಕಳುಹಿಸುವಂತೆ ಒತ್ತಡ ಹೇರಿದ್ದಾನೆ. ಇದಕ್ಕೆ ಮಹಿಳೆ ನಿರಾಕರಣೆ ಮಾಡಿದಾಗ ‘ನಿನ್ನ ಜತೆ ಅಕ್ರಮ ಸಂಬಂಧವಿದೆ’ ಎಂದು ಸುದ್ದಿ ಹಬ್ಬಿಸುವುದಾಗಿ ಬೆದರಿಸಿದ್ದಾನೆ. ಇದಕ್ಕೆ ಬೆದರಿದ ಮಹಿಳೆ ಆತನಿಗೆ ನಗ್ನಚಿತ್ರಗಳನ್ನು ಕಳುಹಿಸಿದ್ದು ಅದೇ ಪೋಟೋಗಳನ್ನು ಮುಂದಿಟ್ಟು ಯುವಕ ಬ್ಲ್ಯಾಕ್‌ಮೇಲ್‌ ಆರಂಭಿಸಿದ್ದಾನೆ. ‘ನೀನು ನನ್ನ ಜತೆ ಲೈಂಗಿಕ ಕ್ರಿಯೆಗೆ ಸಹಕರಿಸಬೇಕು. ಇಲ್ಲದಿದ್ದರೆ ನಿನ್ನ ಕುಟುಂಬ ಸದಸ್ಯರಿಗೆ, ಊರಿನವರಿಗೆ ವಿಷಯ ತಿಳಿಸುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿಯಬಿಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೇ ತಾನು ಕೇಳಿದಷ್ಟು ಹಣವನ್ನೂ ಕೊಡಬೇಕು ಎಂದು ಬೆದರಿಸಿದ್ದಾನೆ. ಇದರಿಂದ ಆತಂಕಕ್ಕೊಳಗಾದ ಮಹಿಳೆ ಎರಡು ಬಾರಿ ಹಣವನ್ನು ನೀಡಿದ್ದಾರೆ. ಆದರೂ ಆರೋಪಿ ತನ್ನ ಚಾಳಿ ಬಿಡದೆ ಮತ್ತೆ ಮತ್ತೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದು, ಹೀಗಾಗಿ ಆರೋಪಿ ವಿಜಯ್‌ ಗೌಡನ ವಿಕೃತತೆಯಿಂದ ಮಹಿಳೆ ಬೇಸತ್ತು ಮೂಡುಬಿದಿರೆ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ. ಮೂಡುಬಿದಿರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ವಿಜಯ್ ಗೌಡ ಮತ್ತು ಸಂತ್ರಸ್ತ ಮಹಿಳೆ ಇಬ್ಬರಿಗೂ ಪ್ರತ್ಯೇಕ ಮದುವೆಯೂ ಆಗಿದೆ ಎಂದು ತಿಳಿದು ಬಂದಿದೆ. ಡಿಜಿಟಲ್‌ ತಂತ್ರಜ್ಞಾನ ಬಗ್ಗೆ ಎಚ್ಚರವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಯಾರೇ ಆದರೂ ಮೊಬೈಲ್‌ ಸೇರಿದಂತೆ ಡಿಜಿಟಲ್‌ ತಂತ್ರಜ್ಞಾನ, ಮಾಧ್ಯಮ ಬಳಕೆ ಮಾಡುವಾಗ ಎಚ್ಚರ ವಹಿಸಿ ಎಂದು ನಗರ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಕಿವಿಮಾತು ಹೇಳಿದ್ದಾರೆ. ಯಾವುದೇ ವ್ಯಕ್ತಿಯ ಜತೆ ನಿಮ್ಮ ಖಾಸಗಿ ಪೋಟೋ, ವಿಡಿಯೊ, ಆಡಿಯೊ ಹಂಚಬೇಡಿ. ಮೊಬೈಲ್‌ ರಿಚಾರ್ಜ್‌, ರಿಪೇರಿ ಕೊಡುವಾಗಲೂ ಎಚ್ಚರವಹಿಸಿ. ಈ ಹಿಂದೆಯೂ ಅನೇಕ ದೂರುಗಳು ಬಂದಿದೆ. ಯಾರೇ ಆದರೂ ಹಣ ಅಥವಾ ಯಾವುದೇ ವಿಚಾರದಲ್ಲಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರೆ ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3kJN54S

ಸೆ.3ರ ತನಕ ರಾಜ್ಯದಲ್ಲಿ ವ್ಯಾಪಕ ಮಳೆ, ಕರಾವಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ 3ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನಲ್ಲಿ ಸೆಪ್ಟೆಂಬರ್‌ 3ರವರೆಗೆ ಎಲ್ಲಾ ಕಡೆ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡಿನಲ್ಲಿ ಆಗಸ್ಟ್‌ 31ರಂದು ಎಲ್ಲಾ ಕಡೆ ಮಳೆಯಾಗಲಿದೆ ಎಂದು ಇಲಾಖೆಯು ವರದಿಯಲ್ಲಿ ತಿಳಿಸಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ನಿರೀಕ್ಷೆ ಹಿನ್ನೆಲೆಯಲ್ಲಿ ಆಗಸ್ಟ್‌ 31ರಂದು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಈ ಸಂದರ್ಭದಲ್ಲಿ ಕಲಬುರಗಿ, ಯಾದಗಿರಿ ಹಾಗೂ ಬೀದರ್‌ ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಹೆಚ್ಚಿನ ನಿರೀಕ್ಷೆಯಿದೆ. ನಗರದಲ್ಲಿ ಗರಿಷ್ಠ ಉಷ್ಣಾಂಶ 26 ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಇರಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದೆಲ್ಲೆಡೆ ಉತ್ತಮ ಮಳೆ: ಸೋಮವಾರ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ವಿಶೇಷವಾಗಿ ಉಡುಪಿ ಜಿಲ್ಲೆಯ ಬ್ರಹ್ಮಾವರ 35 ಮಿ.ಮೀ, ಕುಂದಾಪುರ 42 ಮಿ.ಮೀ, ಕಡಬಾ 26 ಮಿ.ಮೀ, ಕಾಪು 28 ಮಿ.ಮೀ, ಕಲಬುರಗಿ ಜಿಲ್ಲೆ ಗಣಕ್‌ಪುರ 80 ಮಿ.ಮೀ, ಚಿಂಚೋಳಿ 70 ಮಿ.ಮೀ, ಬೀದರ್‌ ಜಿಲ್ಲೆಬಾಲ್ಕಿಯಲ್ಲಿ 70 ಮಿ.ಮೀ ಮಳೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ, ಯೆಲ್ಲೊ ಅಲರ್ಟ್‌ ಮಂಗಳೂರು" ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಸೋಮವಾರ ಇಡೀ ದಿನ ನಿರಂತರ ಭಾರಿ ಮಳೆಯಾಗಿದೆ. ಸೆಪ್ಟೆಂಬರ್‌ 1ರ ತನಕ ಗಾಳಿಯೊಂದಿಗೆ ಮಳೆಯಾಗಲಿದ್ದು, ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಿಸಿದೆ. ಸೋಮವಾರ ಉಡುಪಿ ಜಿಲ್ಲೆಯ ಕೋಟದಲ್ಲಿ ಎಂಟು ಸೆಂ.ಮೀ., ಸುಬ್ರಹ್ಮಣ್ಯ, ಕುಂದಾಪುರದಲ್ಲಿ ತಲಾ ಐದು ಸೆಂ.ಮೀ., ಮಾಣಿ, ಮೂಲ್ಕಿ, ಉಡುಪಿ, ಕೊಲ್ಲೂರಿನಲ್ಲಿ ತಲಾ ನಾಲ್ಕು ಸೆಂ.ಮೀ., ಮಂಗಳೂರು, ಪಣಂಬೂರು, ಧರ್ಮಸ್ಥಳ, ಸಿದ್ಧಾಪುರ, ಕಾರ್ಕಳ, ಬ್ರಹ್ಮಾವರದಲ್ಲಿ ತಲಾ ಮೂರು ಸೆಂ.ಮೀ. ಮಳೆಯಾಗಿದೆ. ಮೀನುಗಾರರಿಗೆ ಎಚ್ಚರಿಕೆಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಜತೆಗೆ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ.


from India & World News in Kannada | VK Polls https://ift.tt/3kzPUp2

ಮುಂಜಾಗ್ರತಾ ವಹಿಸದೆ ಶಾಲೆ ಆರಂಭ ಬೇಡ: ಖಾಸಗಿ ಆಸ್ಪತ್ರೆ ಅಸೋಸಿಯೇಷನ್‌ ವರದಿ ಸಲ್ಲಿಕೆ

ಬೆಂಗಳೂರು: ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಆರಂಭಿಸುವುದು ಬೇಡ ಎಂದು ಮತ್ತು ನರ್ಸಿಂಗ್‌ ಹೋಮ್‌ ಅಸೋಸಿಯೇಷನ್‌(ಫನಾ) ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಸೋಮವಾರ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಸುಧಾಕರ್‌ ಅವರಿಗೆ ಫನಾ ಅಧ್ಯಕ್ಷರು, ಪದಾಧಿಕಾರಿಗಳು ವರದಿ ಸಲ್ಲಿಕೆ ಮಾಡಿದರು. ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸ್ತ್ರೀ ತಜ್ಞೆ ಹಾಗೂ ಮಕ್ಕಳ ತಜ್ಞೆ ಡಾ. ಹೇಮಾ ದಿವಾಕರ್‌ ನೇತೃತ್ವದಲ್ಲಿ ವರದಿ ಸಿದ್ದಪಡಿಸಲಾಗಿದೆ. ಇಸ್ರೇಲ್‌ನಲ್ಲಿ ಶಾಲೆ ಆರಂಭ ಮಾಡಿ ಒಂದೇ ವಾರದಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಅಮೆರಿಕದಲ್ಲಿ ಹಲವು ಬಾರಿ ಶಾಲೆಗಳನ್ನು ಆರಂಭಿಸುವುದು, ಮುಚ್ಚುವುದು ಮಾಡಲಾಗಿದೆ. ದಕ್ಷಿಣ ಕೊರಿಯಾ ಶಾಲೆ ಆರಂಭಿಸಬೇಕೆನ್ನುವ ನಿರ್ಣಯವನ್ನು ಐದು ಬಾರಿ ಮುಂದೂಡಿದೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಹಂತಹಂತವಾಗಿ ಶಾಲೆಗಳನ್ನು ಆರಂಭಿಸುವುದು ಸೂಕ್ತ ಎಂದು ಫನಾ ಸರಕಾರಕ್ಕೆ ಸಲಹೆ ನೀಡಿದೆ. ಟೆಲಿಮೆಡಿಷನ್‌ ವ್ಯವಸ್ಥೆ: ಹೋಮ್‌ ಐಸೋಲೇಷನ್‌ನಲ್ಲಿ ಇರುವವರ ಬಗ್ಗೆ ಎಚ್ಚರ ವಹಿಸಬೇಕು. ಅಂತವರನ್ನು ಕೋವಿಡ್‌ ಕೇರ್‌ ಸೇಂಟರ್‌ ಅಥವಾ ಹೆಲ್ತ್‌ ಕೇರ್‌ ಸೇಂಟರ್‌ ಅವರು ನೇರವಾಗಿ ಕಾಳಜಿ ವಹಿಸಿ, ಟೆಲಿ ಮೆಡಿಷನ್‌ನಲ್ಲಿ ಮಾಹಿತಿ ನೀಡಬೇಕು. ಮೈಕ್ರೋ ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಟಿ3 ಸೂತ್ರ (ಪರೀಕ್ಷೆ, ಪತ್ತೆ ಹಚ್ಚುವಿಕೆ, ಚಿಕಿತ್ಸೆ ) ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಅಗತ್ಯ ಔಷಧಗಳನ್ನು ಸಂಗ್ರಹಿಸಬೇಕು ಎಂದು ತಿಳಿಸಿದೆ. ಸಮಾರಂಭಕ್ಕೆ ವಿರೋಧ: ಗಣೇಶೋತ್ಸವಕ್ಕೆ ಅವಕಾಶ ಕೊಡಬಾರದು. ಮನೆಯಲ್ಲಿ ಮಾತ್ರ ಹಬ್ಬ ಆಚರಿಸಲು ಅವಕಾಶ ನೀಡಬೇಕು. ಸಾರ್ವಜನಿಕ ಸಮಾರಂಭಕ್ಕೆ ವಿರೋಧವಿದೆ ಎಂದರು. ಗಣೇಶ ಹಬ್ಬವನ್ನು ಮನೆಯಲ್ಲಿ ಮಾಡುವುದಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಸಾರ್ವಜನಿಕ ಸ್ಥಳದಲ್ಲಿ ಮಾಡುವುದು ಬೇಡ.. ಸಾರ್ವಜನಿಕ ಸ್ಥಳದಲ್ಲಿ ಹಬ್ಬ ಆಚರಣೆಯಿಂದ ಮತ್ತೆ ಕೋವಿಡ್‌ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಶಾಲೆಗಳು ಆರಂಭವಾಗಿ ಒಂದೆರಡು ವಾರದ ಬಳಿಕ ಕೋವಿಡ್‌ ಹೇಗಿದೆ ಎನ್ನುವ ಫಲಿತಾಂಶ ಗೊತ್ತಾಗಲಿದೆ. ಸೋಂಕು ಉಲ್ಬಣಗೊಂಡಿಲ್ಲವಾದರೆ ಮುಂದುವರಿಸಲು ಯಾವುದೇ ತೊಂದರೆ ಇಲ್ಲ. ಡಾ. ಎಚ್‌.ಎಂ.ಪ್ರಸನ್ನ, ಫನಾ ಅಧ್ಯಕ್ಷ ಶಾಲೆ ಆರಂಭಕ್ಕೆ ಸರಕಾರದ ಸಮ್ಮತಿ: ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಶಾಲೆ ಆರಂಭಿಸುವುದು ಬೇಡ ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಮ್‌ ಅಸೋಸಿಯೇಷನ್‌(ಫನಾ) ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಕೋವಿಡ್ 19 ಸೋಂಕಿನ ದೃಢ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ಅದೇ ರೀತಿ ಸೋಂಕಿನ ದೃಢ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ 9 ಮತ್ತು 10ನೇ ತರಗತಿ ಹಾಗೂ ಪಿಯು ಭೌತಿಕ ತರಗತಿಗಳನ್ನು ಕೂಡ ಆರಂಭಿಸಲಾಗುತ್ತದೆ ಎಂದು ಸಚಿವ ಬಿ.ಸಿ ನಾಗೇಶ್ ತಿಳಿಸಿದರು. ಶಾಲೆಗೆ ಆಗಮಿಸುವ ಮಕ್ಕಳಿಂದ ಪಾಲಕರು, ಪೋಷಕರ ಒಪ್ಪಿಗೆ ಪತ್ರ ತರಬೇಕು. ಮಧ್ಯಾಹ್ನದವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಮಕ್ಕಳು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಭೌತಿಕ ತರಗತಿಗಳ ಜೊತೆಗೆ ಆನ್‌ಲೈನ್ ತರಗತಿಗಳು ಕೂಡ ಮುಂದುವರೆಯುತ್ತವೆ. ಮಕ್ಕಳು ಆನ್‌ಲೈನ್ ತರಗತಿಗಳಲ್ಲಿ ಹಾಜರಾಗಬಹುದು ಎಂದು ಸಚಿವರು ತಿಳಿಸಿದರು.


from India & World News in Kannada | VK Polls https://ift.tt/3jurCgJ

ಆಫ್ಘಾನ್‌ನಿಂದ ಅಮೆರಿಕ ಸೇನೆ ನಿರ್ಗಮನಕ್ಕೆ ಆ. 31 ಕೊನೆ ದಿನ, ‘ಸಮಾನ ಗೆಳೆಯ’ ಕತಾರ್‌ನತ್ತ ಎಲ್ಲರ ಕಣ್ಣು

ಕಾಬೂಲ್‌: ಎರಡು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿದ ಸೇನೆಗೆ ನಿರ್ಗಮನದ ಕೊನೆಯ ಕ್ಷಣಗಳಲ್ಲೂ ಉಗ್ರ ಸಂಘಟನೆಗಳು ಉಪಟಳ ನೀಡುತ್ತಿವೆ. ಅಮೆರಿಕ ಸಹ ಪ್ರತ್ಯುತ್ತರ ನೀಡುತ್ತಿದ್ದು, ಸೋಮವಾರ ಬೆಳಗ್ಗೆ ವಿಮಾನ ನಿಲ್ದಾಣ ಗುರಿಯಾಗಿಸಿ ಉಗ್ರರು ಉಡಾಯಿಸಿದ ಹಲವು ರಾಕೆಟ್‌ಗಳನ್ನು ಹೊಡೆದುರುಳಿಸಿದೆ. ಅಫ್ಘಾನಿಸ್ತಾನದಲ್ಲಿರುವ ಸೇನೆ ಹಾಗೂ ನಾಗರಿಕರ ಸ್ಥಳಾಂತರಕ್ಕೆ ನೀಡಿದ ಗಡುವು ಮಂಗಳವಾರ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಕಾಬೂಲ್‌ ವಿಮಾನ ನಿಲ್ದಾಣದ ಮೂಲಕ ಅಮೆರಿಕವು ಕ್ಷಿಪ್ರವಾಗಿ ನಾಗರಿಕರನ್ನು ತೆರವುಗೊಳಿಸುತ್ತಿದೆ. ಆದರೆ, ಅಮೆರಿಕದ ಕಾರ್ಯಾಚರಣೆಗೆ ಸೋಮವಾರವೂ ಉಗ್ರರು ಅಡ್ಡಿಪಡಿಸಿದ್ದು ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ರಾಕೆಟ್‌ ದಾಳಿ ಮಾಡಿದ್ದಾರೆ. ಜನರನ್ನು ಹೊತ್ತೊಯ್ಯಲು ಸಜ್ಜಾಗಿ ನಿಂತಿದ್ದ ಸೇನಾ ವಿಮಾನದ ಸಮೀಪದಲ್ಲಿಯೇ ಲಘು ಸ್ಫೋಟ ಸಂಭವಿಸಿದೆಯಾದರೂ, ಯಾವುದೇ ಪ್ರಾಣಹಾನಿ ಕುರಿತು ವರದಿಯಾಗಿಲ್ಲ. ಇನ್ನೊಂದೆಡೆ, ವಿಮಾನ ನಿಲ್ದಾಣ ಗುರಿಯಾಗಿಸಿಕೊಂಡು ಐದು ರಾಕೆಟ್‌ಗಳನ್ನು ಹೊಡೆದುರುಳಿಸಿದ್ದೇವೆ ಎಂದು ಅಮೆರಿಕ ಸೇನೆ ಹೇಳಿದೆ. "ಸಿ ರ್ಯಾಮ್, ರಾಕೆಟ್‌, ಆರ್ಟಿಲ್ಲರಿ ಹಾಗೂ ಮೋರ್ಟರ್‌ ಸಿಸ್ಟಂ ಮೂಲಕ ಉಗ್ರರ ರಾಕೆಟ್‌ಗಳನ್ನು ಹೊಡೆದುರುಳಿಸಲಾಗಿದೆ. ದಾಳಿಯಲ್ಲಿ ಅಮೆರಿಕನ್ನರು ಮೃತಪಟ್ಟಿಲ್ಲ ಎಂಬುದು ದೃಢಪಟ್ಟಿದೆ. ಆದಾಗ್ಯೂ, ಜನರ ರಕ್ಷಣಾ ಕಾರ್ಯಾಚರಣೆಯನ್ನು ಯಾವುದೇ ಅಡೆ-ತಡೆ ಇಲ್ಲದೆ ಮುಂದುವರಿಸಲಾಗುತ್ತಿದೆ,'' ಎಂದು ಅಮೆರಿಕ ಸೇನೆಯ ಸೆಂಟ್ರಲ್‌ ಕಮಾಂಡ್‌ ವಕ್ತಾರ ಕ್ಯಾಪ್ಟನ್‌ ಬಿಲ್‌ ಅರ್ಬನ್‌ ತಿಳಿಸಿದ್ದಾರೆ. ಭಾನುವಾರವೂ ಕಾಬೂಲ್‌ ವಿಮಾನ ನಿಲ್ದಾಣದ ಮೇಲೆ ನಡೆದ ಆತ್ಮಾಹುತಿ ಬಾಂಬ್‌ ದಾಳಿ ಯತ್ನವನ್ನು ಅಮೆರಿಕ ವಿಫಲಗೊಳಿಸಿತ್ತು. ಸ್ಫೋಟಕ ತುಂಬಿಕೊಂಡು ವಿಮಾನ ನಿಲ್ದಾಣದತ್ತ ಹೊರಟ್ಟಿದ್ದ ಕಾರಿನ ಮೇಲೆ ಅಮೆರಿಕ ಸೇನೆ ರಾಕೆಟ್‌ ದಾಳಿ ಮಾಡಿತ್ತು. ದಾಳಿಯಲ್ಲಿ ಮಕ್ಕಳು ಸೇರಿ 10 ಜನ ಮೃತಪಟ್ಟಿದ್ದಾರೆ. ಕಳೆದ ಮಂಗಳವಾರ ಸಹ ಐಸಿಸ್‌-ಕೆ ಉಗ್ರರು ಮಾಡಿದ ದಾಳಿಯಲ್ಲಿ ಅಮೆರಿಕದ 13 ಯೋಧರು ಸೇರಿ 180ಕ್ಕೂ ಅಧಿಕ ಜನ ಸಾವಿಗೀಡಾಗಿದ್ದರು. ಇದರಿಂದಾಗಿಯೇ ಅಮೆರಿಕನ್ನರು ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಿದ್ದು, ಉಗ್ರರ ಪ್ರತಿಯೊಂದು ದಾಳಿಯನ್ನೂ ವಿಫಲಗೊಳಿಸುತ್ತಿದ್ದಾರೆ, ತಿರುಗೇಟು ನೀಡುತ್ತಿದ್ದಾರೆ. ಕಡೆಯ ದಿನದ ಕುತೂಹಲಸೇನೆ ಸ್ಥಳಾಂತರಕ್ಕೆ ಅಮೆರಿಕ ಹಾಗೂ ತಾಲಿಬಾನಿಗಳ ಮಧ್ಯೆ ಆಗಿರುವ ಒಪ್ಪಂದದ ಪ್ರಕಾರ ಆಗಸ್ಟ್‌ 31 ಡೆಡ್‌ಲೈನ್‌ ಆಗಿದ್ದು, ಮಂಗಳವಾರ ಗಡುವಿನ ಅಂತಿಮ ದಿನವಾಗಿರುವುದರಿಂದ ಕುತೂಹಲ ಹೆಚ್ಚಾಗಿದೆ. ಜನ ಹಾಗೂ ಸೇನೆ ತೆರವು ಕಾರ್ಯಾಚರಣೆಯಲ್ಲಿ ಅಮೆರಿಕ ಕೊನೆ ಹಂತಕ್ಕೆ ತಲುಪಿದ್ದು, ಮಂಗಳವಾರ ಎಲ್ಲರನ್ನೂ ಸ್ಥಳಾಂತರಿಸಲು ತೀರ್ಮಾನಿಸಿದೆ. ಆದರೆ, ಅಮೆರಿಕ ಸೇನೆ ಸಂಪೂರ್ಣವಾಗಿ ನಿರ್ಗಮಿಸುವ ಮುನ್ನ ಅವರಿಗೆ ಪೆಟ್ಟು ನೀಡುವ ಉಮೇದಿಯಲ್ಲಿರುವ ಐಸಿಸ್‌-ಕೆ ಉಗ್ರರು, ಅಂತಿಮ ದಿನ ದಾಳಿ ಮಾಡಿದರೂ ಅಚ್ಚರಿಯಿಲ್ಲ. ಇಂತಹ ಯಾವುದೇ ಸಂದರ್ಭ, ಪರಿಸ್ಥಿತಿ ಎದುರಿಸಲು ಅಮೆರಿಕ ಸಹ ಸನ್ನದ್ಧವಾಗಿರುವುದರಿಂದ ಮಂಗಳವಾರದ ಬೆಳವಣಿಗೆಗಳ ಮೇಲೆ ಜಗತ್ತೇ ಕಣ್ಣು ನೆಟ್ಟಿದೆ. ಮುಂದಿನ ನಡೆ ಏನು? ಅಮೆರಿಕ ಹಾಗೂ ತಾಲಿಬಾನಿಗಳ ಮಧ್ಯೆ ಸಂಧಾನವಾಗಲು ಮಹತ್ವದ ಪಾತ್ರ ನಿರ್ವಹಿಸಿದ, ಆಫ್ಘನ್‌ನಿಂದ ತನ್ನ ದೇಶದ ಸೈನಿಕರು ಹಾಗೂ ನಾಗರಿಕರ ಸ್ಥಳಾಂತರಕ್ಕಾಗಿ ಅಮೆರಿಕಕ್ಕೆ ನೆರವು ನೀಡಿದ ಕತಾರ್‌ ಮಧ್ಯಸ್ಥಿಕೆಗೆ ಈಗಲೂ ಹೆಚ್ಚಿನ ಬೇಡಿಕೆ ಇದೆ. ಅಮೆರಿಕನ್ನರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ, ಅತ್ತ ತಾಲಿಬಾನಿಗಳು ಸರಕಾರ ರಚನೆಯ ಸಿದ್ಧತೆಯಲ್ಲಿದ್ದಾರೆ. ಹೀಗಿರುವಾಗ ಅಮೆರಿಕ ಹಾಗೂ ತಾಲಿಬಾನ್‌ಗೆ ಅತ್ಯಾಪ್ತವಾಗಿರುವ ಕತಾರ್‌ ದೇಶದ ಮುಂದಿನ ನಡೆಯೇನು ಎಂಬುದು ಕುತೂಹಲ ಕೆರಳಿಸಿದೆ. ಕತಾರ್‌ ಪ್ರಾಮುಖ್ಯತೆ ಅರಿತ ಅಮೆರಿಕ ಕಾರ್ಯದರ್ಶಿ ಆ್ಯಂಟೋನಿ ಬ್ಲಿಂಕನ್‌ ಅವರು ಸೋಮವಾರ ಕತಾರ್‌ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಬ್ರಿಟನ್‌ ಸೇರಿ ಹಲವು ರಾಷ್ಟ್ರಗಳ ಜತೆ ಸಭೆ ನಡೆಸಿದ ಅಮೆರಿಕವು ಕತಾರ್‌ಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ. ಅತ್ತ, ಸರಕಾರ ರಚನೆಗೆ ಮುಂದಾಗಿರುವ ತಾಲಿಬಾನಿಗಳು ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂತ್ರಜ್ಞರ ನೆರವು ನೀಡಬೇಕು ಎಂಬುದಾಗಿ ಮನವಿ ಮಾಡಿದೆ ಎಂದು ತಿಳಿದುಬಂದಿದೆ. ಇದರ ಜತೆಗೆ ಅಂತಾರಾಷ್ಟ್ರೀಯ ಸಮುದಾಯ ಸಹ ಆಫ್ಘನ್‌ಗೆ ನೆರವು ನೀಡಿ ಎಂದು ಕತಾರ್‌ ಮನವಿ ಮಾಡುತ್ತಲೇ ಇದೆ. ಇದರಿಂದಾಗಿ ಕತಾರ್‌ ಮುಂದಿನ ನಡೆಯು ಅಮೆರಿಕ ಹಾಗೂ ತಾಲಿಬಾನ್‌ಗೆ ಪ್ರಮುಖವಾಗಿದೆ. ಆದರೆ, ಕತಾರ್‌ ಯಾರ ಪರ ನಿಲ್ಲುತ್ತದೆ ಎಂಬುದು ಕುತೂಹಲ ಹೆಚ್ಚಿಸಿದೆ. ಎಷ್ಟು ಜನರ ಸ್ಥಳಾಂತರ? ದೇಶ - ಜನ ಬ್ರಿಟನ್‌ - 13,700 ಯುಎಇ - 8,500 ಅಮೆರಿಕ - 5,500 ಜರ್ಮನಿ - 5,347 ಆಸ್ಪ್ರೇಲಿಯಾ - 4,100 ಕೆನಡಾ - 3,700 ಫ್ರಾನ್ಸ್‌ - 2,600 ಬೆಲ್ಜಿಯಂ - 1,400 ಟರ್ಕಿ - 1,400 ಸ್ವೀಡನ್‌ - 1,100 ಭಾರತ - 550 ಇನ್ನೆಷ್ಟು ಜನರ ತೆರವು ಬಾಕಿ? 300 - ಅಮೆರಿಕನ್ನರು 20 - ಭಾರತೀಯರು ನಿರಾಶ್ರಿತರಿಗಾಗಿ ಗಡಿ ಮುಕ್ತವಾಗಿಸಿ: ವಿಶ್ವಸಂಸ್ಥೆ ಉಗ್ರರ ಉಪಟಳಕ್ಕೆ ಸಿಲುಕಿ ನಲುಗುತ್ತಿರುವ ಅಫ್ಘಾನಿಸ್ತಾನದಲ್ಲಿ ನಿರಾಶ್ರಿತರಾದವರಿಗೆ ನೆರೆ ರಾಷ್ಟ್ರಗಳು ತಮ್ಮ ಗಡಿಯನ್ನು ಮುಕ್ತವಾಗಿರಿಸಬೇಕು ಎಂದು ವಿಶ್ವಸಂಸ್ಥೆ ಮನವಿ ಮಾಡಿದೆ. ''ಆಫ್ಘನ್ನರ ಸ್ಥಳಾಂತರಕ್ಕೆ ಹಲವು ರಾಷ್ಟ್ರಗಳು ನೆರವು ನೀಡಿರುವುದು, ತಮ್ಮ ದೇಶಕ್ಕೆ ಕರೆಸಿಕೊಂಡಿರುವುದು ಸ್ವಾಗತಾರ್ಹ. ಅದೇ ರೀತಿ, ಗಡಿಯಲ್ಲಿ ನಿರಾಶ್ರಿತರು ಬಂದರೆ, ಅವರಿಗಾಗಿ ಗಡಿಗಳು ಮುಕ್ತವಾಗಿರಲಿ. ಮಾನವೀಯತೆ ಆಧಾರದ ಮೇಲೆ ಅವರಿಗೆ ಆಶ್ರಯ ಕಲ್ಪಿಸಿ," ಎಂದು ವಿಶ್ವಸಂಸ್ಥೆ ನಿರಾಶ್ರಿತರ ಹೈ ಕಮಿಷನರ್‌ (ಯುಎನ್‌ಎಚ್‌ಸಿಆರ್‌) ವಕ್ತಾರೆ ಶಬಿಯಾ ಮಾಂಟೂ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಆಫ್ಘನ್‌ನಲ್ಲಿ ಸಿಲುಕಿರುವ ಬೇರೆ ದೇಶದವರು ಆಗಸ್ಟ್‌ 31ರ ಗಡುವು ಮುಗಿದ ಬಳಿಕವೂ ಅವರ ಬಳಿ ವೀಸಾ, ಪಾಸ್‌ಪೋರ್ಟ್‌ ಸೇರಿ ಎಲ್ಲ ದಾಖಲೆ ಇದ್ದರೆ, ಅವರು ತಮ್ಮ ದೇಶಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗುವುದು ಎಂದು ತಾಲಿಬಾನಿಗಳು ಹೇಳಿದ್ದಾರೆ. ತಾಲಿಬಾನ್‌ಗೆ ಹಣಕಾಸು ನೆರವು ನೀಡುವಂತೆ ವಿಶ್ವಕ್ಕೆ ಚೀನಾ ಕರೆ ತಾಲಿಬಾನಿಗಳು ಇಡೀ ದೇಶವನ್ನು ಆಕ್ರಮಿಸುತ್ತಲೇ ಆ ದೇಶದ ಪರವಾಗಿ ಮಾತನಾಡುತ್ತಿರುವ ಚೀನಾ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, "ಜಗತ್ತಿನ ಎಲ್ಲ ದೇಶಗಳು ಒಗ್ಗೂಡಿ ತಾಲಿಬಾನಿಗಳಿಗೆ ಮಾರ್ಗದರ್ಶನ ನೀಡುವ ಜತೆಗೆ ಹಣಕಾಸು ನೆರವು ಸಹ ಒದಗಿಸಬೇಕು,'' ಎಂದಿದೆ. ''ಮಾನವೀಯತೆ ನೆಲೆಯಲ್ಲಿ ಜಗತ್ತು ಯೋಚಿಸಬೇಕಿದೆ. ಸದ್ಯ ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟು ಉಂಟಾಗಿದ್ದು, ಹಣಕಾಸು ನೆರವಿನ ಅನಿವಾರ್ಯವಿದೆ. ಹಾಗಾಗಿ ಎಲ್ಲರೂ ಒಗ್ಗೂಡಿ ಧನ ಸಹಾಯ ಮಾಡಬೇಕು. ಹಾಗೆಯೇ ಅಮೆರಿಕವು ಉಗ್ರವಾದ ತಡೆಯುವ ದಿಸೆಯಲ್ಲಿ ಕ್ರಮ ಕೈಗೊಳ್ಳುವ ಮೂಲಕ ಇಬ್ಬಂದಿತನ ಪ್ರದರ್ಶನ ಬಿಡಬೇಕು,'' ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್‌ ಯಿ ಹೇಳಿದ್ದಾರೆ.


from India & World News in Kannada | VK Polls https://ift.tt/3DsOsxb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...