ಬೆಂಗಳೂರು: ಯುವಕನೊಬ್ಬ ಶನಿವಾರ ಮಧ್ಯರಾತ್ರಿ ಜೆಸಿ ನಗರದ ಎಸಿಬಿ ಕಚೇರಿಯಿಂದ ಪ್ಲಾಸ್ಟಿಕ್ ಕುರ್ಚಿಯೊಂದನ್ನು ಕದ್ದು ಅಪರಾಧ ಕೃತ್ಯದ ಸೆಲ್ಫಿ ತೆಗೆದು ಹಂಚಿಕೊಂಡಿದ್ದಾನೆ. ಈ ಸಂಬಂಧ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದು, ಇದರ ನೈಜ ಸತ್ಯಾಂಶ ಈಗ ಹೊರಬಂದಿದೆ. ಹೌದು, 31 ವರ್ಷದ ಕುರ್ಚಿ ಕದ್ದಿದ್ದು ಬೇರೆ ಯಾವುದೇ ಉದ್ದೇಶಕ್ಕೆ ಅಲ್ಲ, ಬದಲಾಗಿ ಬೆಂಗಳೂರಿನ ಪೊಲೀಸ್ ಠಾಣೆಯೊಂದರ ಭ್ರಷ್ಟ ಪೊಲೀಸ್ ಅಧಿಕಾರಿಗಳ ನೈಜ ಮುಖ ಬಟಬಯಲು ಮಾಡಲು. ಘಟನೆ ಹಿನ್ನೆಲೆ!ಇಂಗ್ಲೀಷ್ ಕಲಿಯಲೆಂದು ಜಪಾನಿನ ವಿದ್ಯಾರ್ಥಿ ಹಿರೋಟೊಶಿ ತನಕಾ 2019ರಲ್ಲಿ ಬೆಂಗಳೂರಿಗೆ ಬಂದಿದ್ದಾನೆ. ಹೀಗೆ ಇಂಗ್ಲೀಷ್ ಕಲಿಯುತ್ತ ಬೆಂಗಳೂರಿನಲ್ಲಿದ್ದ ತನಕಾನ ಜೀವನದಲ್ಲಿ ಒಂದು ಕೆಟ್ಟ ಘಟನೆ ನಡೆದಿದೆ. ರಸ್ತೆಯಲ್ಲಿ ತನಕಾ ತೆರಳುತ್ತಿರುವಾಗ, ವ್ಯಕ್ತಿಯೊಬ್ಬ ಈತನೊಂದಿಗೆ ಕಾಲೆಕೆರೆದು ಜಗಳ ನಡೆಸಿ ಹಲ್ಲೆ ನಡೆಸಿದ್ದಾನೆ. ಈ ಘಟನೆ ಸಂಬಂಧ ತನಕಾ ಪೊಲೀಸ್ ಮೆಟ್ಟಿಲೇರಿದ್ದಾನೆ. ಆದರೆ ಪೊಲೀಸರು ಯಾವುದೇ ರೀತಿಯ ನ್ಯಾಯ ತನಕಾಗೆ ಒದಗಿಸಿ ಕೊಟ್ಟಿಲ್ಲ. ಬದಲಾಗಿ ಹಣ ಕೊಡು ಕೇಸ್ ಇಲ್ಲೆ ಮುಗಿಸುವ ಎಂದು ತನಕಾನಿಗೆ ಆರ್‌ಟಿ ನಗರ ಪೊಲೀಸರು ಕೇಳಿದ್ದಾರೆ. ಆದರೆ ಇದಕ್ಕೆ ತನಕಾ ಒಪ್ಪಿರಲಿಲ್ಲ, ಅಲ್ಲದೆ ಇದರಿಂದ ಕೋಪಗೊಂಡು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾನೆ. ಈ ಹಿನ್ನೆಲೆ ಮರು ದಿನ ಜಪಾನಿನ ವಿದ್ಯಾರ್ಥಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಂತರ 10 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಟ್ಟಿದ್ದಾರೆ. ಇದರಿಂದ ತೀವ್ರ ನೋವು ಅನುಭವಿಸಿದ ತನಕಾ, ನೇರವಾಗಿ ಹೈ ಕೋರ್ಟ್ ಮೆಟ್ಟಿಲೇರಿದ್ದಾನೆ. ನವೆಂಬರ್ 2020ರಂದು ಕರ್ನಾಟಕ ಹೈಕೋರ್ಟ್ ತನಕಾ ಪರವಾಗಿ ತೀರ್ಪು ನೀಡಿದ್ದು, ಆತನದ್ದು ಯಾವುದೇ ತಪ್ಪಿಲ್ಲ ಎಂದು ಕೋರ್ಟ್ ಕ್ಲೀನ್‌ಚಿಟ್ ನೀಡಿ ಆದೇಶ ಹೊರಡಿಸಿತ್ತು. ಆದರೆ ಘಟನೆ ಬಳಿಕ ಭಾರತದಿಂದ ತೆರಳುವಂತೆ ಹಿರೋಟೊಶಿ ತನಕಾಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಸೂಚನೆ ನೀಡಿತ್ತು. ಇದಕ್ಕಾಗಿ ಫೆಬ್ರವರಿ 28 2021ರ ಡೆಡ್‌ಲೈನ್ ಕೂಡ ನೀಡಿತ್ತು. ತಾನು ತನ್ನ ದೇಶಕ್ಕೆ ಹೋದರೆ ಕಳಂಕಿತನಾಗುತ್ತೇನೆ. ಅಲ್ಲದೆ ತಪ್ಪು ಮಾಡಿದ ಪೊಲೀಸ್ ಅಧಿಕಾರಿಗಳು ಕೂಡ ಯಾವುದೇ ಘಟನೆ ನಡೆದಿಲ್ಲದಂತೆ ಇರುತ್ತಾರೆ. ಇವರಿಗೆ ಪಾಠ ಕಲಿಸಬೇಕೆಂದರೆ ತಾನು ಇಲ್ಲೇ ಇರುವುದು ಒಳಿತು ಎಂದು ಕೊಂಡು, ಗೆಳೆಯರ ಬಳಿ ಹಣ ಹೊಂದಿಸಿ ಬಿಟಿಎಂ ಲೇಔಟ್ ಬಳಿ ತನಕಾ ಹಾಸ್ಟೇಲ್‌ವೊಂದರಲ್ಲಿ ಉಳಿದುಕೊಂಡು ಬಿಟ್ಟಿದ್ದಾನೆ. ಈ ಕಾರಣಕ್ಕೆ ಚೇರ್ ಕದ್ದ! ಇನ್ನು ಹಾಸ್ಟೇಲ್‌ನಲ್ಲಿ ಉಳಿದಿದ್ದ ತನಕಾನಿಗೆ, ದಿನ ಕಳೆದಂತೆ ತಾನು ಈ ದೇಶದಿಂದ ಹೋಗುವ ಸಮಯ ಹತ್ತಿರ ಬಂದಿದೆ, ಅಲ್ಲದೆ ಹಣ ಕೂಡ ಖಾಲಿಯಾಗಿದೆ. ಇನ್ನು ಪೊಲೀಸರ ವಿರುದ್ಧವಾಗಿ ಮಾನವ ಹಕ್ಕುಗಳ ಆಯೋಗದಲ್ಲಿ ಕೇಸ್ ಕೂಡ ನೀಡಿದ್ದು ಇದರ ಪರಿಹಾರ ಕೂಡ ಸಿಕ್ಕಿರಲಿಲ್ಲ. ಹೀಗಾಗಿ ಸಮಸ್ಯೆಯ ಸುಳಿಯಲ್ಲಿ ತನಕಾ ಸಿಕ್ಕಿಬಿದ್ದಿದ್ದಾನೆ. ಹೀಗಾಗಿ ಜೆಸಿ ನಗರದಲ್ಲಿರುವ ಎಸಿಪಿ ಕಚೇರಿಯಿಂದ ಪ್ಲಾಸ್ಟಿಕ್ ಕುರ್ಚಿ ಕದ್ದಿದ್ದಾನೆ. ಇನ್ನು ಕಳವು ಪ್ರಕರಣದಲ್ಲಿ ತನ್ನನ್ನು ಜೈಲಿಗೆ ಹಾಕಬಹುದು ಆಗ ಆಹಾರ, ತನ್ನ ತಿಂಗಳಿನ ಔಷಧಗಳನ್ನು ಜೈಲಿನಲ್ಲಿಯೇ ನೀಡುತ್ತಾರೆ ಹಾಗೇ ತಾನು ಜೈಲಿನಲ್ಲಿದ್ದರೆ ದೇಶ ಬಿಡುವ ಸಂಭವವು ಬರುವುದಿಲ್ಲ ಎನ್ನುವುದನ್ನು ಮನಗಂಡು ಈ ರೀತಿಯ ಪ್ಲ್ಯಾನ್ ರೂಪಿಸಿ ಚೇರ್ ಕದ್ದಿದ್ದಾನೆ. ಸದ್ಯ ಯುವಕನ ಕಳವು ಪ್ರಕರಣಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದೆ. ಆರ್‌ಟಿ ನಗರದ ಪಿಎಸ್‌ಐ ಹನುಂತರಾಯಪ್ಪನ ವಿರುದ್ಧ ಸದ್ಯ ಆಯೋಗದಲ್ಲಿ ದೂರು ದಾಖಲಿಸಿದ್ದು, ತನು ಕಳಂಕಿತನಲ್ಲ ಎಂದು ಪ್ರೂವ್ ಆದ ಬಳಿಕ ಹಿರೋಟೊಶಿ ತನಕಾ ತನ್ನ ದೇಶಕ್ಕೆ ಹೋಗುವ ಯೋಚನೆ ಮಾಡಿದ್ದಾನೆಂತೆ. ಅಲ್ಲದೇ ಕೂಡಲೇ ಭ್ರಷ್ಟ ಪೊಲೀಸರಿಗೆ ಶಿಕ್ಷೆ ನೀಡಬೇಕು, ತನ್ನ ದೇಶಕ್ಕೆ ತೆರಳುವ ಪ್ರಯಾಣ ಹಣವನ್ನು ಪೊಲೀಸರೆ ನೀಡಬೇಕು ಎಂದು ಕೂಡ ಮನವಿ ಮಾಡಿದ್ದಾನೆ.
from India & World News in Kannada | VK Polls https://ift.tt/3b8AuEr