ದುಬೈನ ಲಾಟರಿಯಲ್ಲಿ ಬರೋಬ್ಬರಿ 24 ಕೋಟಿ ಗೆದ್ದ ಶಿವಮೊಗ್ಗದ ವ್ಯಕ್ತಿ, 3 ವರ್ಷಗಳ ಕಾಯುವಿಕೆ ಸಿಕ್ತು ಫಲ!

ದುಬೈ/ಶಿವಮೊಗ್ಗ: ಅದೃಷ್ಟ ಯಾವಾಗ ಬೇಕಾದರೂ ಯಾರ ಪಾಲಾಗಬಹುದು. ಅಂತಹದೊಂದು ಅದೃಷ್ಟ ಇದೀಗ ಕಷ್ಟಪಟ್ಟು ದುಡಿಯುತ್ತಿದ್ದ ವ್ಯಕ್ತಿಯ ಪಾಲಾಗಿದೆ. ಹೌದು, ಕಳೆದ ಹದಿನೈದು ವರ್ಷಗಳಿಂದ ದುಬೈನಲ್ಲಿ ಕಷ್ಟಪಡುತ್ತ ಬಿಸಿಲು-ಧೂಳು ಎನ್ನದೆ ಕುಟುಂಬಕ್ಕಾಗಿ ಶ್ರಮಿಸುತ್ತಿದ್ದ ಮೂಲದ ವ್ಯಕ್ತಿಗೆ ಲಾಟರಿ ಮೂಲಕ ಅದೃಷ್ಟದ ಬಾಗಿಲು ತೆರೆದಿದೆ. ಶಿವಮೊಗ್ಗ ಜಿಲ್ಲೆಯ ಅವರಿಗೆ ದುಬೈನ ರಾಫೆಲ್ ಬಂಪರ್‌ ಲಾಟರಿಯಲ್ಲಿ ಬರೋಬ್ಬರಿ 24 ಕೋಟಿ ದೊರಕಿದೆ. ಶಿವಮೊಗ್ಗ ಮೂಲದವರಾಗಿರುವ ಕೃಷ್ಣಪ್ಪ, ಮೆಕ್ಯಾನಿಕಲ್‌ ಇಂಜಿನಿಯರ್‌ ಕಲಿತು ದುಬೈಗೆ ಕೆಲಸಕ್ಕೆಂದು ತೆರಳಿದ್ದರು. ಕಳೆದ ಹದಿನೈದು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಪ್ರತೀ ತಿಂಗಳು ದುಬೈನ ರಾಫೆಲ್‌ ಲಾಟರಿ ಖರೀದಿಸುತ್ತಿದ್ದರು. ಲಾಟರಿ ಮೂಲಕ ಹಣ ಬರದೆ ಇದ್ದಾಗ ಅನೇಕ ಬಾರಿ ಬೇಸರಿಸಿಕೊಂಡಿದ್ದರು. ಆದರೆ ಈ ಬಾರಿಯ ಲಾಟರಿ ಇವರ ಮುಖದಲ್ಲಿ ದೊಡ್ಡ ನಗು ಬೀರುವಂತೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಮೂರ್ತಿ ಕೃಷ್ಣಪ್ಪ, ಊರಿಗೆ ಬಂದ ತಕ್ಷಣ ಬಂದ ಹಣದಿಂದ ದೊಡ್ಡದಾಗಿ ಕನಸಿನ ಮನೆ ನಿರ್ಮಿಸುತ್ತೇನೆ. ನನಗೆ 10 ಹಾಗೂ 4 ವರ್ಷದ ಇಬ್ಬರು ಮಕ್ಕಳಿದ್ದು ಅವರ ಭವಿಷ್ಯಕ್ಕೆ ಕೊಂಚ ಹಣವನ್ನು ಜಮೆ ಮಾಡಿ ಇಡುತ್ತೇನೆ ಎಂದು ತಿಳಿಸಿದ್ದಾರೆ. ಟಿಕೆಟ್‌ ಡ್ರಾ ಲೈವ್‌ ವೀಕ್ಷಿಸುತ್ತಿದ್ದ ಕೃಷ್ಣಪ್ಪ!ಶಿವಮೂರ್ತಿ ಕೃಷ್ಣಪ್ಪ ಅವರ ತಾಳ್ಮೆಗೆ ಕೊನೆಗೂ ಫಲ ಸಿಕ್ಕಿದಂತೆ ಆಗಿದೆ. ಯಾಕೆಂದರೆ ಪ್ರತೀ ತಿಂಗಳು ಈ ಲಾಟರಿ ಟಿಕೆಟ್‌ ಮಾರಾಟ ಮಾಡಲಾಗುತ್ತದೆ. ಶಿವಮೂರ್ತಿ ಕೃಷ್ಣಪ್ಪ ಪ್ರತೀ ತಿಂಗಳು ಲಾಟರಿ ಖರೀದಿಸುತ್ತಿದ್ದರಂತೆ. ಕಳೆದ ಮೂರು ವರ್ಷಗಳಿಂದ ಪ್ರತೀ ತಿಂಗಳು ಲಾಟರಿ ಖರೀದಿಸುತ್ತಿದ್ದು, ಇದೀಗ ಕೊನೆಗೂ ಮೂರು ವರ್ಷಗಳ ಕಾಯುವಿಕೆಗೆ ಒಂದು ಅರ್ಥ ಸಿಕ್ಕಿದಂತೆ ಆಗಿದೆ. ಇನ್ನು ಟಿಕೆಟ್‌ನ ಫಲಿತಾಂಶವನ್ನು ಕೃಷ್ಣಪ್ಪ ಲೈವ್‌ ಆಗಿ ವೀಕ್ಷಿಸುತ್ತಿದ್ದರು. ತನ್ನ ಟಿಕೆಟ್‌ ನಂಬರ್‌ಗೆ 24 ಕೋಟಿ ಸಿಕ್ಕಿರುವುದು ಕಂಡ ಕೃಷ್ಣಪ್ಪ ಅವರ ಖುಷಿಗೆ ಪಾರವೇ ಇಲ್ಲದಂತೆ ಆಗಿತ್ತು. ಇನ್ನು ಘೋಷಣೆ ಬೆನ್ನಲ್ಲೆ ಆಯೋಜಕರಿಂದ ಕರೆ ಕೂಡ ಬಂದಿದ್ದು, ಲಾಟರಿಯ ಮೂಲಕ ಅದೃಷ್ಟ ತನ್ನದಾಗಿರುವುದು ತನಗೆ ನಂಬಲು ಸಾಧ್ಯವಾಗುತ್ತಿಲ್ಲ. ನನಗೆ ಇಷ್ಟು ಹಣ ಸಿಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಭಾವುಕಾರದರು ಎಂದು ತಿಳಿದುಬಂದಿದೆ.


from India & World News in Kannada | VK Polls https://ift.tt/38dGgmt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...