ಹನೋಯಿ: ಅಪಾರ್ಟ್‌ಮೆಂಟ್‌ನ 12ನೇ ಅಂತಸ್ತಿನಿಂದ ಕೆಳಗೆ ಬೀಳುತ್ತಿದ್ದ ಎರಡು ವರ್ಷದ ಹೆಣ್ಣುಮಗುವನ್ನು, ವಿತರಣಾ ಚಾಲಕನೋರ್ವ ರಕ್ಷಿಸಿದ ಘಟನೆ ರಾಜಧಾನಿ ಹನೋಯಿಯಲ್ಲಿ ನಡೆದಿದೆ. ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರ 112ನೇ ಅಂತಸ್ತಿನಲ್ಲಿ ವಾಸವಿದ್ದ ಕುಟುಂಬವೊಂದರ ಎರಡು ವರ್ಷದ ಹೆಣ್ಣುಮಗು, ಪೋಷಕರ ಅಚಾತುರ್ಯದಿಂದ ಕಿಟಕಿ ದಾಟಿ ಬಾಲ್ಕನಿ ಪ್ರವೇಶಿಸಿದೆ. ಅಲ್ಲದೇ ಆಡುತ್ತಲೇ ಬಾಲ್ಕನಿಯಿಂದ ಕೆಳಗೆ ಜಾರಿ ಬಿದ್ದಿದೆ. ಈ ವೇಳೆ ಅದೇ ಅಪಾರ್ಟ್‌ಮೆಂಟ್‌ಗೆ ವಸ್ತುಗಳನ್ನು ವಿತರಿಸಲು ತನ್ನ ಮಿನಿ ಟ್ರಕ್ ಜೊತೆ ಬಂದಿದ್ದ ಚಾಲಕ ನ್ಗುಯೆನ್ ನ್ಗೋಕ್ ಮನ್ಹ್, 12ನೇ ಅಂತಸ್ತಿನಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಿ ಗಮನ ಸೆಳೆದಿದ್ದಾನೆ. ಮಗು ಬಾಲ್ಕನಿ ದಾಟಿ ಬಂದಾಗಲೇ ಎದುರಿಗಿನ ಅಪಾರ್ಟ್‌ಮೆಂಟ್‌ನ ಮಹಿಳೆಯೋರ್ವಳು ಜೋರಾಗಿ ಕೂಗಿ ಎಚ್ಚರಿಸಿದ್ದಾಳೆ. ಅಲ್ಲದೇ ಮಗು ಬೀಳುತ್ತಿರುವ ದೃಶ್ಯವನ್ನು ವಿಡಿಯೋ ಕೂಡ ಮಾಡಿದ್ದಾಳೆ. ಮಹಿಳೆಯ ಕೂಗಾಟ ಕೇಳಿದ ಚಾಲಕ 31 ವರ್ಷದ ಚಾಲಕ ಮನ್ಹ್, ಕೂಡಲೇ ತನ್ನ ಎದುರಿಗನ ಆರು ಅಡಿ ಎತ್ತರದ ಗೋಡೆಯನ್ನು ದಾಟಿ ಮಗು ಬೀಳುತ್ತಿದ್ದ ಸ್ಥಳಕ್ಕೆ ಓಡಿ ಹೋಗಿ ಮಗುವನ್ನು ರಕ್ಷಿಸಿದ್ದಾನೆ. ಮಗು ಹೀಗೆ ಬಾಲ್ಕನಿಯಿಂದ ಕೆಳಗೆ ಬೀಳುತ್ತಿರುವ ವೇಳೆ ಅದರ ಪೋಷಕರು ಮನೆಗೆ ಬಂದ ಅತಿಥಿಯನ್ನು ಬೀಳ್ಕೊಡಲು ಕೆಳಗೆ ಬಂದಿದ್ದರು ಎನ್ನಲಾಗಿದೆ. ಮಗುವನ್ನು ಮನೆಯಲ್ಲೇ ಬಿಟ್ಟು ಹೋದ ಅವರ ನಡೆಗೆ ಇದೀಗ ತೀವ್ರ ಆಕ್ರೋಶ ವ್ಯಕ್ತವವಾಗಿದೆ. ಸದ್ಯ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಗೋಡೆ ಹಾರಿದ ಸಂದರ್ಭದಲ್ಲಿ ಚಾಲಕ ಮನ್ಹ್ ಭುಜಕ್ಕೂ ಪೆಟ್ಟು ಬಿದ್ದಿದ್ದು, ಆತನಿಗೂ ಚಿಕಿತ್ಸೆ ನೀಡಲಾಗಿದೆ.
from India & World News in Kannada | VK Polls https://ift.tt/3qhe0FL