
ಮೈಸೂರು: ''ಕೊಬ್ಬಿದ ದನದ ಮಾಂಸ ತಿನ್ನಬೇಕು ಎನ್ನುವ ಶ್ಲೋಕ ಇದೆ. ಶ್ಲೋಕ ಬರೆದಿದ್ದು ನಾನಾ? ಸಂಸ್ಕೃತ ಗೊತ್ತಿದ್ದವರು ತಾನೆ ಬರೆದಿರುವುದು? ಚೆನ್ನಾಗಿ ಕೊಬ್ಬಿದ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಈ ಶ್ಲೋಕ ಮರೆತು ಬಿಟ್ಟಿದ್ದೇನೆ. ಅದನ್ನು ಹೇಳಿದರೆ ವಿವಾದ ಮಾಡಿ ಹಾಕಿಬಿಡುತ್ತೀರಿ,'' ಎಂದು ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿದರು. ''ನಾನು ಗೋಮಾಂಸ ತಿಂದಿದ್ದೇನೆ ಎಂದು ಎಲ್ಲಿಯೂ ಹೇಳಲಿಲ್ಲ. ನಾನು ಕೋಳಿ, ಕುರಿ, ಮೇಕೆ ತಿಂದಿದ್ದೇನೆ. ನನಗೆ ತಿನ್ನಬೇಕು ಎಂದು ಅನಿಸಿದರೆ ತಿನ್ನುತ್ತೇನೆ. ಅದನ್ನು ಕೇಳಲು ಇವರು ಯಾರು ಎಂದು ಕೇಳಿದ್ದೇನೆ. ಯಾವ ಆಹಾರ ತಿನ್ನಬೇಕು ಎಂದು ನಿರ್ಧರಿಸುವುದು ನನ್ನ ಹಕ್ಕು,'' ಎಂದು ಖಾರವಾಗಿ ಪ್ರಶ್ನಿಸಿದರು. ನಾನು ದನದ ಮಾಂಸವನ್ನು ತಿನ್ನುತ್ತೇನೆ. ಆಹಾರ ಪದ್ಧತಿ ನನ್ನ ಹಕ್ಕು ಎಂದು ಇತ್ತೀಚೆಗೆ ಹೇಳಿದ್ದರು. ಇದು ವಿವಾದ ಪಡೆಯುತ್ತಿದ್ದಂತೆ ನಾನು ತಿನ್ನುವುದಿಲ್ಲ, ಹಂದಿ ಮಾಂಸವು ತಿನ್ನುವುದಿಲ್ಲ ಎಲ್ಲವನ್ನು ನೀವು ವಿವಾದ ಮಾಡುತ್ತೀರಿ ಎಂದು ಕಿಡಿಕಾರಿದ್ದರು. ಇತ್ತೀಚೆಗೆ ಗೋ ಮಾಂಸಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಸಾಕಷ್ಟು ಹೇಳಿಕೆಗಳನ್ನು ನೀಡುತ್ತಿರುವುದು ಗಮನಿಸಬಹುದು.
from India & World News in Kannada | VK Polls https://ift.tt/3oGv8Vm