ಬ್ಯಾಂಕ್‌ಗಳಿಗೆ 200 ಕೋಟಿ ರೂ. ವಂಚನೆ: ಬೆಂಗಳೂರು ಮೂಲದ ಕಂಪನಿ ವಿರುದ್ಧ ಸಿಬಿಐ ಕೇಸ್‌!

ಬೆಂಗಳೂರು: ಉದ್ಯಮಕ್ಕಾಗಿ ಸಾಲ ಪಡೆದು ಸುಮಾರು 200 ಕೋಟಿ ರೂ. ಮಾಡಿದ ಆರೋಪದ ಮೇರೆಗೆ ಮೂಲದ ಕಂಪನಿ ವಿರುದ್ಧ ದಾಖಲಿಸಿಕೊಂಡಿರುವ , ಕಂಪನಿ ನಿರ್ದೇಶಕರ ಮನೆಗಳ ಮೇಲೆ ದಾಳಿ ನಡೆಸಿದೆ. ಸ್ಟೀಲ್‌ ಹೈಪರ್‌ ಮಾರ್ಕೆಟ್‌ ಇಂಡಿಯಾ ಪ್ರೈ. ಲಿ ಕಂಪನಿಯ ನಿರ್ದೇಶಕ ಮಹೇಂದ್ರಕುಮಾರ್‌ ಸಿಂಘಿ, ಸುಮನ್‌ ಮಹೇಂದ್ರ ಕುಮಾರ್‌ ಸಿಂಘಿ, ಚಾರ್ಟರ್ಡ್‌ ಅಕೌಂಟೆಂಟ್‌ ಮುಖೇಶ್‌ ಸುರಾನಾ ಹಾಗೂ ಇನ್ನಿತರರ ವಿರುದ್ಧ ಕೇಸ್‌ ದಾಖಲಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ತಮಿಳುನಾಡಿನ ಶೂಲಗಿರಿಯಲ್ಲಿರುವ ಆರೋಪಿಗಳ ಮನೆಗಳಲ್ಲಿ ಶೋಧ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ. 2017ರಿಂದ 2019ರ ನಡುವೆ ವಿಜಯಾ ಮತ್ತು ಇಂಡಿಯನ್‌ ಬ್ಯಾಂಕ್‌ನಿಂದ ಸ್ಟೀಲ್‌ ಹೈಪರ್‌ ಮಾರ್ಟ್‌ ಇಂಡಿಯಾ ಸಾಲ ಸೌಲಭ್ಯ ಪಡೆದಿತ್ತು. ಆದರೆ, ಇಂಡಿಯನ್‌ ಬ್ಯಾಂಕ್‌ನಿಂದ ಪಡೆದ ಸಾಲ ಮರಳಿಸದೆ 168.39 ಕೋಟಿ ರೂ. ಮತ್ತು ವಿಜಯಾ ಬ್ಯಾಂಕ್‌ಗೆ ಸಾಲ ಮರಳಿಸದೆ 31.99 ಕೋಟಿ ರೂ. ಸೇರಿಸಿ ಒಟ್ಟು 200.38 ಕೋಟಿ ರೂ. ನಷ್ಟ ಉಂಟು ಮಾಡಲಾಗಿದೆ. 2019ರ ಏಪ್ರಿಲ್‌ 30ರಂದು ಸಾಲದ ಖಾತೆಗಳು ಎನ್‌ಪಿಎ ಎಂದು ಘೋಷಿಸಿ, 2019ರ ನವೆಂಬರ್‌ 7ರಂದು ಮೋಸ ಎಂದು ವರದಿ ಮಾಡಲಾಗಿತ್ತು. ಬ್ಯಾಂಕ್‌ಗಳಿಂದ ಹೆಚ್ಚಿನ ಸಾಲದ ಮೊತ್ತ ಬಿಡುಗಡೆ ಮಾಡಿಸಿಕೊಳ್ಳಲು ಆರೋಪಿತ ಕಂಪನಿಯ ನಿರ್ದೇಶಕರು ಮತ್ತು ಸಿ.ಎ. ಸೇರಿ ದೊಡ್ಡ ಪ್ರಮಾಣದ ವಹಿವಾಟು ನಡೆದಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂದು ಆರೋಪಿಸಲಾಗಿದೆ.


from India & World News in Kannada | VK Polls https://ift.tt/3ihPi5J

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...