
ಬೆಂಗಳೂರು: ವಿಸ್ತರಣೆ ಬೆನ್ನಿಗೇ ಸಚಿವರುಗಳಿಗೆ ಬಿಜೆಪಿ ಹೈಕಮಾಂಡ್ 6 ತಿಂಗಳ ಟಾಸ್ಕ್ ನೀಡಿದೆ. ಅಂದರೆ ಮುಂದಿನ 6 ತಿಂಗಳಲ್ಲಿ ದಕ್ಷ ಕಾರ್ಯ ನಿರ್ವಹಣೆ ತೋರಿದವರು ಮಾತ್ರ ಮಂತ್ರಿಗಳಾಗಿ ಮುಂದುವರಿಯಲಿದ್ದಾರೆ. ಈ ಸರಕಾರ ರಚನೆ ಬಳಿಕ ಪ್ರಾರಂಭದಲ್ಲಿ ಭಾರೀ ಪ್ರವಾಹ ಬಂದಿತ್ತು. ನಂತರ ಕೊರೊನಾದಿಂದಾಗಿ ಸಚಿವರುಗಳ ಕಾರ್ಯವೈಖರಿ ಮೌಲ್ಯಮಾಪನ ಸಾಧ್ಯವಾಗಿಲ್ಲ. ಈಗ ಆರ್ಥಿಕ ಸ್ಥಿತಿ ಚೇತರಿಕೆ ಕಾಣುತ್ತಿದೆ. ಹೊಸ ಬಜೆಟ್ ಮಂಡನೆಯೂ ಹಣಕಾಸು ಖಾತೆ ಹೊಂದಿರುವ ಸಿಎಂ ಯಡಿಯೂರಪ್ಪ ಸಿದ್ಧತೆ ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರುಗಳು ಯಾವುದೇ ನೆಪ ಹೇಳದೆ ಕೆಲಸ ಮಾಡಬೇಕಾಗುತ್ತದೆ. ತಾವು ನಿರ್ವಹಿಸುವ ಇಲಾಖೆಯ ಯೋಜನೆಗಳ ಕ್ಷಿಪ್ರ ಅನುಷ್ಠಾನಕ್ಕೆ ಮುತುವರ್ಜಿ ವಹಿಸಬೇಕಾಗುತ್ತದೆ. ಈ ಮಾನದಂಡದ ಆಧಾರದಲ್ಲೆ ಸಚಿವರ ಕಾರ್ಯವೈಖರಿ ಮೌಲ್ಯಮಾಪನವಾಗಲಿದೆ. ಸಚಿವರ ಕಾರ್ಯಕ್ಷಮತೆ ಬಗ್ಗೆ ರಾಜ್ಯ ಉಸ್ತುವಾರಿ ಸಿಂಗ್ ಖುದ್ದು ನಿಗಾ ವಹಿಸಲಿದ್ದಾರೆ. ಹಾಗಾಗಿ 6 ತಿಂಗಳ ಬಳಿಕ ಮಂತ್ರಿಮಂಡಲದಲ್ಲಿ ಮೇಜರ್ ಸರ್ಜರಿ ನಿರೀಕ್ಷಿತ ಎಂದು ಹೇಳಲಾಗುತ್ತಿದೆ.
from India & World News in Kannada | VK Polls https://ift.tt/2LwFSXZ