‌ ತುಳುವಿನಲ್ಲಿ ಗಣರಾಜ್ಯೋತ್ಸವ ಸಂದೇಶದ ವಿಡಿಯೋ ಮಾಡಿ ಮಂಗಳೂರು ಪೊಲೀಸ್‌ ಕಮಿಷನರ್ ಟ್ವೀಟ್‌!

ಮಂಗಳೂರು: ನಗರ ಪೊಲೀಸ್‌ ಕಮಿಷನರ್‌ ಆಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಎನ್‌. ಶಶಿಕುಮಾರ್‌ ಅವರು ತುಳು ಮತ್ತು ಕನ್ನಡದಲ್ಲಿ ಗಣರಾಜ್ಯೋತ್ಸವ ಶುಭ ಸಂದೇಶ ಟ್ವೀಟ್‌ ಮಾಡಿದ್ದಾರೆ. ತುಳುವಿನಲ್ಲೇ ವಿಡಿಯೋ ಮತ್ತು ಸಂದೇಶ ಹಾಕಿದ ಕಮಿಷನರ್‌ 'ಪ್ರತಿ ವರ್ಷ ಜನವರಿ ಇರ್‌ವತ್ತ ಆಜೆಕ್ (26) ಲೋಕೊಡು ನಮ್ಮ ಭಾರತ ದೇಶದ ಗಣರಾಜ್ಯೋತ್ಸವನ್‌ ಬಾರೀ ಗೌಜಿಡ್‌ ಆಚರಣೆ ಮಲ್ಪುವೆರ್‌. ಕುಡ್ಲದ ಮಾತಾ ಜನಕ್ಲೆಗ್‌ಲಾ ಗಣರಾಜ್ಯೋತ್ಸವದ ಉಡಲ್‌ ದಿಂಜಿನ ಸೋಲ್ಮೆಲು (ಪ್ರತಿ ವರ್ಷ ಜನವರಿ 26 ರಂದು ವಿಶ್ವದೆಲ್ಲೆಡೆ ನಮ್ಮ ದೇಶದ ಗಣರಾಜ್ಯೋತ್ಸವವನ್ನು ಬಾರೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಂಗಳೂರು ನಗರದ ಸಮಸ್ತ ನಾಗರೀಕರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು) ಎಂದು ತುಳು ಮತ್ತು ಕನ್ನಡದಲ್ಲಿ ವಿಡಿಯೋ ಮತ್ತು ಸಂದೇಶ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಭಾರೀ ಹರ್ಷ ವ್ಯಕ್ತಪಡಿಸಿದ್ದಾರೆ. ತುಳುವಿನಲ್ಲೇ ಅನೇಕರು ಪೊಲೀಸ್‌ ಕಮೀಷನರ್‌ಗೆ ಪ್ರತಿಕ್ರಿಯಿಸಿದ್ದಾರೆ. ತುಳು ಪ್ರೇಮ ಎಂದು ಇರಲಿ ಎಂದಿದ್ದಾರೆ. ಒಂದಲ್ಲೊಂದು ವಿಚಾರಗಳಿಂದ ಸುದ್ದಿ ಆಗುತ್ತಲೇ ಇದ್ದಾರೆ. ಇತ್ತೀಚೆಗೆ ಹಾಡು ಹಾಡಿ ಸುದ್ದಿಯಾಗಿದ್ದರು, ನಂತರ ಮಾಸ್ಕ್‌ ಹಾಕಿ ಎಂದು ಹೇಳುತ್ತಿದ್ದ ವೃದ್ದರೊಬ್ಬರಿಗೆ ಎಳನೀರು ಕುಡಿಸಿ ಹಿರೋ ಆಗಿದ್ದರು.


from India & World News in Kannada | VK Polls https://ift.tt/2YbufZv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...