ಮೈಸೂರು: ಬೆಂಗಳೂರಿಗೆ ಹೊರಟಿದ್ದ ಟ್ರ್ಯಾಕ್ಟರ್‌ ಮತ್ತು ರೈತರನ್ನು ಅರ್ಧದಲ್ಲೇ ತಡೆದ ಪೊಲೀಸರು..!

ಹುಣಸೂರು: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆಯುವ ಟ್ರ್ಯಾಕ್ಟರ್‌ ಪರೇಡ್‌ಗೆ ಹೊರಟಿದ್ದ ಹುಣಸೂರು ತಾಲೂಕು ರೈತ ಸಂಘದ ಕಾರ್ಯಕರ್ತರನ್ನು ಮೈಸೂರು-ಹುಣಸೂರು ಹೆದ್ದಾರಿಯ ಮೂಕನಹಳ್ಳಿ ಹಾಗೂ ಬಿಳಿಕೆರೆ ಬಳಿ ಪೋಲೀಸರು ಟ್ರ್ಯಾಕ್ಟರ್‌ ಸಮೇತ ತಡೆಯೊಡ್ಡಿದ್ದನ್ನು ವಿರೋಧಿಸಿ ಎರಡೂ ಕಡೆಯೂ ಕೆಲಹೊತ್ತು ರಸ್ತೆ ತಡೆ ನಡೆಸಿದರು. ಹುಣಸೂರಿನ ಮುನೇಶ್ವರಕಾವಲ್‌ ಮೈದಾನದಿಂದ ಟ್ರ್ಯಾಕ್ಟರ್‌ಗಳು ಹೊರಡದಂತೆ ಪೊಲೀಸರು ಸೂಚಿಸಿದ್ದರೂ ಜಗ್ಗದ ರೈತರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನದ ವೇಳೆಗೆ ಮೈಸೂರಿನತ್ತ ಪ್ರಯಾಣ ಬೆಳೆಸಿದ್ದರು. ಟ್ರ್ಯಾಕ್ಟರ್‌ ಹೋಗಲು ಅವಕಾಶವಿಲ್ಲವೆಂದು ಇವರನ್ನು ಮೂಕನಹಳ್ಳಿ ಗೇಟಿನಲ್ಲಿ ಪೊಲೀಸರು ತಡೆದರು. ರೈತರು ದಿಢೀರ್‌ ರಸ್ತೆ ತಡೆ ನಡೆಸಿ, ಬಿಜೆಪಿ ಸರಕಾರದ ವಿರುದ್ಧ ಧಿಕ್ಕಾರ ಮೊಳಗಿಸಿದರು. ಇದರಿಂದ ಕೆಲ ಹೊತ್ತು ಎರಡೂ ಕಡೆ ವಾಹನಗಳು ಜಮಾಯಿಸಿದ್ದವು. ನಂತರ ಹೊರಡಲು ಅನುವು ಮಾಡಿಕೊಟ್ಟರಾದರೂ ಮತ್ತೆ ಬಿಳಿಕೆರೆಯಲ್ಲಿ ಪೊಲೀಸರು ಬೆಂಗಳೂರಿನತ್ತ ತೆರಳುತ್ತಿದ್ದ ಟ್ರ್ಯಾಕ್ಟರ್‌ ಹಾಗೂ ರೈತರನ್ನು ತಡೆದು ನಿಲ್ಲಿಸಿದರು. ಸ್ಥಳಕ್ಕಾಗಮಿಸಿದ ಅಡಿಷನಲ್‌ ಎಸ್‌.ಪಿ. ಶಿವಕುಮಾರ್‌, ಡಿವೈಎಸ್‌ಪಿ ರವಿಪ್ರಸಾದ್‌ರವರು ಟ್ರ್ಯಾಕ್ಟರ್‌ಗಳಲ್ಲಿ ಹೋಗಲು ಅವಕಾಶವಿಲ್ಲ. ನಮ್ಮ ಮೊದಲ ಪುಟದಿಂದ ನಾವೇ ವಾಹನ ವ್ಯವಸ್ಥೆ ಮಾಡುತ್ತೇವೆಂದು ಮನವಿ ಮಾಡಿದರೂ ಪಟ್ಟು ಬಿಡದ ರೈತ ಮುಖಂಡರು ರಸ್ತೆಯಲ್ಲೇ ಸಂಜೆವರೆಗೆ ಪ್ರತಿಭಟನೆ ನಡೆಸಿದರು. ವಾಹನದಲ್ಲಿ ತೆರಳಲು ಒಪ್ಪಿಗೆ: ಕೊನೆಗೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ಮತ್ತಿತರ ಮುಖಂಡರೊಂದಿಗೆ ಚರ್ಚಿಸಿ, ಪ್ರತ್ಯೇಕ ವಾಹನದಲ್ಲಿ ತೆರಳುವಂತೆ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಬೆಂಗಳೂರಿಗೆ ತೆರಳಲು ವಾಹನ ವ್ಯವಸ್ಥೆ ಮಾಡಿ, ಟ್ರ್ಯಾಕ್ಟರ್‌ಗಳನ್ನು ವಾಪಸ್‌ ಕಳುಹಿಸಿದರು. ರೈತ ಸಂಘದ ಮುಖಂಡರಾದ ಲೋಕೇಶ ರಾಜೇಅರಸ್‌, ಧನಂಜಯ್‌, ರಾಜು, ಅತ್ತಿಗುಪ್ಪೆರಾಮಕೃಷ್ಣ, ಕಿರುಜಾಜಿ ಗಜೇಂದ್ರ ಇತರರು ಪ್ರತಿಭಟನೆಯಲ್ಲಿದ್ದರು. ಚಳವಳಿ ಹತ್ತಿಕ್ಕುತ್ತಿರುವ ಸರಕಾರ: ರೈತರ ಪ್ರತಿಭಟನೆಯಿಂದ ಹೆದರಿರುವ ಬಿಜೆಪಿ ಸರಕಾರ ಪೊಲೀಸರನ್ನು ಬಳಸಿಕೊಂಡು ಟ್ರ್ಯಾಕ್ಟರ್‌ಗಳನ್ನು ತಡೆ ಹಿಡಿದಿರುವುದು ಖಂಡನೀಯ. ರೈತ ಚಳುವಳಿಯನ್ನು ಹತ್ತಿಕ್ಕುತ್ತಿರುವ ಸರಕಾರಕ್ಕೆ ಜನ ಬುದ್ಧಿ ಕಲಿಸಲಿದ್ದಾರೆ. ರೈತರ ಹೆಸರೇಳಿ, ಹೆಗಲ ಮೇಲೆ ಹಸಿರು ಟವಲ್‌ ಹಾಕಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ರೈತ ವಿರೋಧಿ ಎಂದು ಹೊಸೂರು ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/3a5308d

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...