ಸುಗ್ಗಿ ಹಬ್ಬಕ್ಕೆ ಸಿದ್ಧತೆ ಜೋರು: ಸಂಕ್ರಾಂತಿಯಂದು ಅವರೆಕಾಯಿ ಪ್ರಿಯರಿಗೆ ತಟ್ಟಿದೆ ಬೆಲೆ ಏರಿಕೆ ಬಿಸಿ!

ನಿಟ್ಟೂರು: ವರ್ಷದ ಮೊದಲ ಹಬ್ಬವಾದ ಮಕರ ರೈತರ ವಿಶೇಷ ಹಬ್ಬವಾಗಿದ್ದು, ಸೂರ್ಯ ತನ್ನ ಪಥವನ್ನು ಬದಲಾಯಿಸುವ ಹಬ್ಬವೇ ಮಂಕರ ಸಂಕ್ರಮಣ. ಚಳಿಗಾಲ ಕಳೆದು ಬೇಸಿಗೆಯತ್ತ ಮುನ್ನುಗ್ಗುವ ವಿಶೇಷ ದಿನದ ಹಬ್ಬವೇ ಎಳ್ಳುಬೆಲ್ಲದ ಹಬ್ಬ ಸಂಕ್ರಾಂತಿ. ಅವರೆಕಾಯಿ, ಕಡಲೇಕಾಯಿ, ಗೆಣಸು, ಕಬ್ಬು, ಎಳ್ಳು, ಕೊಬ್ಬರಿಗೆ ಈ ಹಬ್ಬದಲ್ಲಿ ಸಾಕಷ್ಟು ಬೇಡಿಕೆ. ರೈತರು ಬೆಳೆದ ಬೆಳೆಗಳಿಗೆ ಪೂಜೆ ಮಾಡುವ ಮೂಲಕ ಈ ಹಬ್ಬ ಆಚರಿಸುವುದು ವಾಡಿಕೆ. ಮುಂದೆ ಬೇರೆಲ್ಲ ತರಕಾರಿ, ಸೊಪ್ಪುಗಳು ಒಂದಷ್ಟು ಕಾಣದಂತಾಗುತ್ತವೆ. ಬಹುತೇಕ ಡಿಸೆಂಬರ್‌ ಹಾಗೂ ಜನವರಿಯಲ್ಲಿ ಬರುವಂತಹ ಅವರೆಕಾಯಿಗೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾಗುತ್ತದೆ. ಕಳೆದ ತಿಂಗಳಿನಿಂದ 100 ರೂ.ಗಳಿಗೆ 3ರಿಂದ 4 ಕೆ.ಜಿ ಸಿಗುತ್ತಿದ್ದ ಅವರೆಕಾಯಿ, ಸಂಕ್ರಾಂತಿ ಹಬ್ಬಕ್ಕೆ ಕೆ.ಜಿ.ಗೆ 50ರಿಂದ 60 ರೂ.ಗೆ ಮಾರಾಟವಾಗುತ್ತಿದೆ. ತಾಲೂಕಿನಲ್ಲಿ ಕಡಲೆಕಾಯಿ ಬೆಳೆದಿಲ್ಲ ಹಾಗಾಗಿ ಇದರ ದರ ಕೆ.ಜಿ.ಗೆ 80ರಿಂದ 120 ದಾಟಿದರೆ, ಗೆಣಸು ಕೆ.ಜಿಗೆ 40ರ ಸಮೀಪದಲ್ಲಿತ್ತು. ಇದು ಚಳಿಗಾಲದಲ್ಲಿ ಮಾತ್ರ ಬರುವಂತಹ ಬೆಳೆಯಾಗಿದೆ. ಹಿಂದೆ ಅವರೆಕಾಯಿಯಲ್ಲಿ ಸಾಕಷ್ಟು ಸೊಗಡು ಇರುತ್ತಿತ್ತು. ಆದರೆ ಈಗ ಅಂತಹ ರುಚಿ ಬರುತ್ತಿಲ್ಲ. ಆದರೂ ಸಿಕ್ಕುವುದೇ ಅಪರೂಪವಾಗಿರುವುದರಿಂದ ಈ ಸಮಯದಲ್ಲಿ ಹೆಚ್ಚು ಅಡುಗೆಯಲ್ಲಿ ಬಳಕೆಯಾಗುತ್ತದೆ ಮತ್ತು ಈ ಹಬ್ಬದಲ್ಲಿ ಅವರೆಕಾಯಿ ಬಳಕೆ ಮಾಡುವ ಸಂಪ್ರದಾಯವಿದೆ. ಸುಮತಿ, ಗೃಹಿಣಿ


from India & World News in Kannada | VK Polls https://ift.tt/38EgHf1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...